2014ನೇ ಇಸವಿ ಬೆಂಗಳೂರು ನಗರದಲ್ಲಿ ಡನ್ ಎಂಬ ಒಂದು ಸ್ಟಾರ್ಟಪ್ ಕಂಪನಿ ಶುರುವಾಗಿತ್ತು ಈ ಒಂದು ಕಂಪನಿ ಎಷ್ಟರ ಮಟ್ಟಿಗೆ ಪ್ರಸಿದ್ಧಿಯನ್ನ ಪಡೆದುಕೊಂಡಿತ್ತು ಅಂದ್ರೆ ಸ್ವತಃ ಗೂಗಲ್ ಕಂಪನಿ ಈ ಒಂದು ಕಂಪನಿಯನ್ನ ಗುರುತಿಸಿ ಮೊದಲ ಬಾರಿಗೆ ಒಂದು ಇಂಡಿಯನ್ ಸ್ಟಾರ್ಟಪ್ ನಲ್ಲಿ ಇನ್ವೆಸ್ಟ್ಮೆಂಟ್ ಅನ್ನ ಮಾಡಿತ್ತು ನಂತರ ರಿಲಯನ್ಸ್ ಕೂಡ ಸಾವಿರಾರು ಕೋಟಿ ರೂಪಾಯಿಗಳನ್ನ ಈ ಒಂದು ಕಂಪೆನಿ ಮೇಲೆ ಹೂಡಿಕೆ ಮಾಡಿತ್ತು ಭಾರತದಲ್ಲಿ ಮುಂದಿನ ಬಿಲಿಯನ್ ಡಾಲರ್ ಸ್ಟಾರ್ಟಪ್ ಇದೆ ಅನ್ನುವಷ್ಟರ ಮಟ್ಟಿಗೆ ಈ ಒಂದು ಕಂಪನಿ ಮೇಲೆ ನಿರೀಕ್ಷೆಗಳು ಹುಟ್ಟುಕೊಂಡಿದ್ದವು. ಆದರೆ ಇವತ್ತು ಡನ್ಜೋ ಕಂಪನಿ ಸಂಪೂರ್ಣವಾಗಿ ಅಳಿದು ಹೋಗಿದೆ. ಈ ಕಂಪನಿಯ ಫೌಂಡರ್ಸ್ ಗಳು ಹೊರಗಡೆ ಬಂದಿದ್ದಾರೆ. ಇದರ ವೆಬ್ಸೈಟ್ ಕೂಡ ಆಫ್ಲೈನ್ ಆಗಿದೆ. ಇನ್ವೆಸ್ಟರ್ಗಳು ಕೂಡ ಕೈಬಿಟ್ಟಿದ್ದಾರೆ.
ಡನ್ ಕಂಪನಿ ಜುಲೈ 14ನೇ ತಾರೀಕು ಬೆಂಗಳೂರಲ್ಲಿ ಶುರುವಾಗಿತ್ತು ಕಬೀರ್ ಬಿಸ್ವಾಸ್ ಹಾಗೂ ಇನ್ನು ಮೂರು ಜನ ಸೇರಿ ಈ ಒಂದು ಕಂಪನಿಯನ್ನ ಶುರು ಮಾಡಿದ್ರು. ಈ ಒಂದು ಕಂಪನಿ ಕೆಲಸ ಏನು ಅಂದ್ರೆ ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಮನೆಗೆ ಯಾವುದಾದ್ರೂ ವಸ್ತುವನ್ನ ಕಳಿಸಬೇಕು ಅಂತ ಇದ್ರೆ ಡನ್ ಕಂಪನಿ ನಿಮ್ಮ ಪರವಾಗಿ ಅದನ್ನ ಅವರಿಗೆ ತಲುಪಿಸ್ತಾ ಇತ್ತು. ಅಥವಾ ನೀವು ಆಫೀಸ್ ಗೆ ಹೋದಾಗ ನಿಮ್ಮ ಮನೇಲಿ ನೀವೇನಾದ್ರೂ ಮರೆತು ಹೋಗಿದ್ರೆ ಅದನ್ನು ಕೂಡ ಅವರು ನಿಮ್ಮ ಕಂಪನಿಗೆ ಅಂದ್ರೆ ನೀವು ಇರುವಂತ ಸ್ಥಳಕ್ಕೆ ತಂದುಕೊಡ್ತಾ ಇದ್ರು. ಅಷ್ಟೇ ಅಲ್ಲದೆ ನಿಮಗೆ ಬೇಕಾದಂತ ದಿನಸಿ ಸಾಮಗ್ರಿಗಳು ಔಷಧಿಗಳು ದಿನಬಳಗೆ ವಸ್ತುಗಳು ಈ ರೀತಿ ಇನ್ನು ಕೂಡ ಮುಂತಾದ ವಸ್ತುಗಳನ್ನ ನಿಮ್ಮ ಮನೆ ಬಾಗಿಲಿಗೆ ತಂದು ಡೆಲಿವರಿ ಮಾಡುವಂತ ಕೆಲಸವನ್ನ ಮಾಡ್ತಿದ್ರು. ಹೀಗಾಗಿ ಇದು ಒಂದು ಹೈಪರ್ ಲೋಕೋ ಲಾಜಿಸ್ಟಿಕ್ ಸ್ಟಾರ್ಟ್ ಅಪ್ ಆಗಿ ಶುರುವಾಯಿತು. ಈ ಒಂದು ಕಂಪನಿಯನ್ನ ಶುರು ಮಾಡಿದಾಗ ಇದಕ್ಕಾಗಿ ಇವರು ಯಾವುದೇ ಒಂದು ಪ್ರತ್ಯೇಕ ವೆಬ್ಸೈಟ್ ಆಗ್ಲಿ ಅಥವಾ ಆಪ್ ಗಳಾಗಲಿ ಕ್ರಿಯೇಟ್ ಮಾಡಿರಲಿಲ್ಲ. ಈ ಒಂದು ಸ್ಟಾರ್ಟಪ್ ಸಂಪೂರ್ಣವಾಗಿ WhatsApp ಮೂಲಕನೇ ರನ್ ಆಗ್ತಿತ್ತು. ಯಾರಿಗಾದ್ರೂ ಯಾವುದೇ ವಸ್ತುಗಳು ಬೇಕು ಅಂದ್ರೆ ಇವರಿಗೆ WhatsApp ನ ಮೂಲಕನೇ ಸಂಪರ್ಕ ಮಾಡಬೇಕಿತ್ತು. ಅವರು ಅದನ್ನ ತಕ್ಷಣನೇ ಡೆಲಿವರಿ ಮಾಡ್ತಿದ್ರು. ಇದೇ ರೀತಿಯಾದಂತಹ ಡೆಲಿವರಿ ನೀಡುವಂತ ಕೆಲಸವನ್ನ ಈ ಡನ್ ಕಂಪನಿ ಮಾಡ್ತಿತ್ತು. ಮತ್ತೆ ತುಂಬಾ ವೇಗವಾಗಿ ಈ ಒಂದು ಸ್ಟಾರ್ಟಪ್ ಗೆ ಜನರಿಂದ ಮೆಚ್ಚಿಗೆ ಕೂಡ ಸಿಕ್ಕಿತ್ತು. ತನ್ನ ಗ್ರಾಹಕರಿಗೆ ಅಗತ್ಯ ಇರುವಂತ ಯಾವುದೇ ವಸ್ತುಗಳನ್ನಾದರೂ ಕೂಡ ಈ ಡನ್ ಕಂಪನಿ ಡೆಲಿವರಿ ಮಾಡುತ್ತೆ ಎಂಬ ವಿಶ್ವಾಸ ಎಲ್ಲರಲ್ಲೂ ಕೂಡ ಮೂಡಿತ್ತು. ಈ ಒಂದು ಕಂಪನಿ ಇಷ್ಟು ಬೇಗ ಪ್ರಸಿದ್ಧಿಯನ್ನ ಪಡೆಯೋದಕ್ಕೆ ಕಾರಣ ಏನು ಅಂದ್ರೆ ಈ ಡನ್ ಯಾವುದೇ ವಸ್ತುವನ್ನಾಗಲಿ ಡೆಲಿವರಿ ಮಾಡ್ತಿತ್ತು. ಇದನ್ನ ಬೇರೆ ಯಾವ ಕಂಪನಿಗಳು ಕೂಡ ಮಾಡ್ತಿರಲಿಲ್ಲ. ಫುಡ್ ಡೆಲಿವರಿಗಾಗಿ ಸ್ಟಾರ್ಟ್ ಅಪ್ ಕಂಪನಿಗಳು ಇದ್ವು ಉದಾಹರಣೆಗೆಜಮಾಟೋ ಆದರೆ ಇದು ಎಲ್ಲಾ ರೀತಿಯಾದಂತ ವಸ್ತುಗಳನ್ನ ಡೆಲಿವರಿ ಮಾಡ್ತಾ ಇರಲಿಲ್ಲ. ಈ ಒಂದು ಸರ್ವಿಸ್ ನ್ನ ಕೇವಲ ಡನ್ ಮಾತ್ರ ಕೊಡ್ತಾ ಇತ್ತು. ಹೀಗಾಗಿನೇ ಇದು ಅತ್ಯಂತ ವೇಗವಾಗಿ ಪ್ರಸಿದ್ಧಿಯಾಗಿತ್ತು.
ಜೂನ್ 2015ರ ವೇಳೆಗೆ ದಿನಕ್ಕೆ 70 ಡೆಲಿವರಿಗಳನ್ನ ಇದು ಪೂರ್ತಿ ಮಾಡ್ತಿತ್ತು. ಆದರೆ ಏನನ್ನ ಬೇಕಾದರೂ ಡೆಲಿವರಿ ಮಾಡ್ತೀವಿ ಎಂಬ ಈ ಒಂದು ಐಡಿಯಾನೇ ಡನ್ ಗೆ ಒಂದು ಸಮಸ್ಯೆಯಾಗಿ ಬದಲಾಗ ತೊಡಗಿತ್ತು. ಉದಾಹರಣೆಗೆ ಜೊಮಾಟೋ ಸ್ವಿಗಿ ಇವು ಕೇವಲ ಫುಡ್ ಮಾತ್ರ ಡೆಲಿವರಿ ಮಾಡ್ತಾವೆ. ಮತ್ತೆ ಇದು ತುಂಬಾ ಸುಲಭ ಕೂಡ ಒಂದೇ ರೀತಿಯ ಪ್ರಾಡಕ್ಟ್ ನ್ನ ಮಾತ್ರ ಡೆಲಿವರಿ ಮಾಡ್ತಾ ಹೋದ್ರೆ ಕಾಲಕ್ರಮೇಣ ಅದರಲ್ಲಿ ಎಫಿಷಿಯನ್ಸಿ ಹೆಚ್ಚಾಗ್ತಾ ಇತ್ತು. ಮತ್ತೆ ಒಂದು ಪ್ರಾಪರ್ ಸಿಸ್ಟಮ್ ಅನ್ನ ಬಿಲ್ಡ್ ಮಾಡಬಹುದಿತ್ತು. ಆದರೆ ಡಂzಗೆ ಈ ಒಂದು ಅವಕಾಶ ಇರಲಿಲ್ಲ. ಏನನ್ನಾದ್ರೂ ಡೆಲಿವರಿ ಮಾಡ್ತೀವಿ ಅಂತ ಹೇಳಿದಾಗ ಅದನ್ನ ಲಾಜಿಸ್ಟಿಕ್ ಆಗಿ ಅದನ್ನ ನಿಭಾಯಿಸೋದು ಸುಲಭ ಇರಲಿಲ್ಲ. ಮತ್ತೆ ಅದನ್ನ ಸರಿಯಾದ ಸಿಸ್ಟಮ್ಗೆ ಬದಲಾಯಿಸೋದು ಕೂಡ ತುಂಬಾ ಕಷ್ಟ ಹಾಗೂ ಸಮಯ ಕೂಡ ಬೇಕಾಗ್ತಿತ್ತು. ಅಷ್ಟರೊಳಗೆ ಸ್ಟಾರ್ಟ್ ಅಪ್ ರನ್ ಆಗ್ಬೇಕು ಅಂದ್ರೆ ಅದು ಲಾಸ್ ನಲ್ಲಿ ಇದ್ರೂ ಕೂಡ ಯಾರಾದ್ರೂ ಹೂಡಿಕೆದಾರರು ಆ ಒಂದು ಸ್ಟಾರ್ಟಪ್ ಗೆ ಹೂಡಿಕೆಯನ್ನ ಮಾಡ್ತಾನೆ ಇರಬೇಕು. ಆದ್ರೆ ಮತ್ತೊಂದು ಕಡೆ ಏನಾಯ್ತು ಅಂದ್ರೆ ಈ ಒಂದು ಸ್ಟಾರ್ಟಪ್ ಗೆ ಡಿಮ್ಯಾಂಡ್ ಹೆಚ್ಚಾಗ್ತಾನೆ ಇತ್ತು. ಕಸ್ಟಮರ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಯ್ತು. ಒಂದು ಕಡೆ ಈ ಒಂದು ಕಂಪನಿ ಅಭಿವೃದ್ಧಿ ಆಗ್ತಾ ಹೋಗ್ತಿದ್ದರೆ ಮತ್ತೊಂದು ಕಡೆ ಇವರ ಐಡಿಯಾನೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸ್ತು. ಗ್ರಾಹಕರ ಸಂಖ್ಯೆ ಹೆಚ್ಚಾಗ್ತಾ ಹೋದಂತೆ ಕೇವಲ WhatsApp ಗ್ರೂಪ್ ಮೂಲಕ ಆಪರೇಟ್ ಮಾಡೋದು ಈ ಡನ್ ಗೆ ಕಷ್ಟ ಆಗ್ತಾ ಇತ್ತು. ಹೀಗಾಗಿನೇ ಈ ಡನ್ 2016 ರಲ್ಲಿ ತಮ್ಮದೇ ಆದಂತ ಮೊಬೈಲ್ ಆಪ್ ಅನ್ನ ಕ್ರಿಯೇಟ್ ಮಾಡುತ್ತೆ. ಅದಾದ ನಂತರ ಡನ್ ಕಂಪನಿ ಇನ್ನೂ ವೇಗವಾಗಿ ಬೆಳೆಯೋದಕ್ಕೆ ಶುರುವಾಯ್ತು. ಇದರ ಪರಿಣಾಮವಾಗಿ 2016ರ ಮಾರ್ಚ್ನಲ್ಲಿ ಮೊದಲ ಬಾರಿಗೆ ಒಂದು ಮೇಜರ್ ಫಂಡಿಂಗ್ ರೌಂಡ್ ನಡೆಯುತ್ತೆ. ಸುಮಾರು 6,50,000 ಡಾಲರ್ ಗಳನ್ನ ಹಲವು ವೆಂಚರ್ ಕ್ಯಾಪಿಟಲ್ ಫರ್ಮ್ಸ್ ಸೇರಿ ಇನ್ವೆಸ್ಟ್ ಮಾಡ್ತಾರೆ. ಅದಾದಮೇಲೆ 2016ರ ಅಂತ್ಯದೊಳಗೆ ಡನ್ ತಿಂಗಳಿಗೆ ಒಂದು ಮಿಲಿಯನ್ ಆರ್ಡರ್ ಗಳನ್ನ ಡೆಲಿವರಿ ಮಾಡ್ತಾ ಇತ್ತು. ಈ ಒಂದು ಕಂಪನಿಯ ಅಭಿವೃದ್ಧಿಯನ್ನ ಗಮನಿಸಿದಂತ Google 2017ರ ಡಿಸೆಂಬರ್ ನಲ್ಲಿ ಡನ್ ನಲ್ಲಿ 12 ಮಿಲಿಯನ್ ಡಾಲರ್ ಗಳನ್ನ ಇನ್ವೆಸ್ಟ್ ಮಾಡುತ್ತೆ. ಇದು ಡನ್ ಕಂಪನಿಯ ಜರ್ನಿಯಲ್ಲಿ ದೊಡ್ಡ ಮೈಲಿಗಲಾಗಿತ್ತು. ಯಾಕೆಂದ್ರೆ ಗೂಗಲ್ ಮೊದಲ ಬಾರಿಗೆ ಒಂದು ಇಂಡಿಯನ್ ಸ್ಟಾರ್ಟಪ್ ನಲ್ಲಿ ಇನ್ವೆಸ್ಟ್ ಅನ್ನ ಮಾಡಿದ್ದು ಈ ಡನ್ ದಲ್ಲೇ. ಈ ಒಂದು ಇನ್ವೆಸ್ಟ್ಮೆಂಟ್ ನ ಮೂಲಕ ಡನ್ ಕೇವಲ ಹಣದ ನೆರವು ಮಾತ್ರ ಅಲ್ಲ, ಒಂದು ದೊಡ್ಡ ನಂಬಿಕೆ ಕೂಡ ಸಿಕ್ಕಿತ್ತು. ಇದರ ಜೊತೆಗೆ ಜನಪ್ರಿಯತೆ ಕೂಡ ಇನ್ನಷ್ಟು ಹೆಚ್ಚಾಯಿತು. ಆದರೆ ಇದರಲ್ಲಿ ಒಂದು ಸಮಸ್ಯೆ ಕೂಡ ಇತ್ತು. ಅದೇನಪ್ಪಾ ಅಂದ್ರೆ ಡನ್ ಕಂಪನಿಯ ಮೇಲೆ ಇದ್ದಂತ ನಿರೀಕ್ಷೆ ಮತ್ತಷ್ಟು ಹೆಚ್ಚಾಗೋದಕ್ಕೆ ಶುರುವಾಯ್ತು. ಅದರ ನಂತರ ಈ ಡನ್ ತಮ್ಮ ಸರ್ವಿಸ್ ಅನ್ನ ತುಂಬಾ ದೊಡ್ಡದಾಗಿ ವಿಸ್ತರಿಸುವದಕ್ಕೆ ಪ್ರಾರಂಭಿಸುತ್ತೆ. 2018 ರಲ್ಲಿ ಮೊದಲ ಬಾರಿಗೆ ಚೆನ್ನೈ, ಹೈದರಾಬಾದ್ ನಂತರ ಪುಣೆ, ಗುರಂಗಾವ್ ದೆಹಲಿ ಮತ್ತು ಮುಂಬೈನಲ್ಲೂ ಕೂಡ ತಮ್ಮ ಶಾಖೆಗಳನ್ನ ತೆರೆದು ಸರ್ವಿಸ್ನ್ನ ಕೊಡೋದಕ್ಕೆ ಶುರು ಮಾಡ್ತು. ನಂತರ ತಮ್ಮ ಡೆಲಿವರಿ ಸರ್ವಿಸ್ ಗಳನ್ನು ಕೂಡ ಫಾರ್ಮಲೈಸ್ ಮಾಡಿದರು. ದಿನಸಿ ಸಾಮಾನುಗಳು, ಫುಡ್ ಡೆಲಿವರಿ, ಮೆಡಿಸನ್ ಡೆಲಿವರಿ, ಪ್ಯಾಕೇಜ್ ಡೆಲಿವರಿ ಇವುಗಳ ಜೊತೆಗೆ ಬೈಕ್ ಟ್ಯಾಕ್ಸಿ ಸರ್ವಿಸ್ ಕೂಡ ಕೊರಗಾವನಲ್ಲಿ ಲಾಂಚ್ ಮಾಡ್ತಾರೆ. ಹಾಗೇನೇ ಡನ್ ಫಾರ್ ಬಿಸಿನೆಸ್ ಅನ್ನುವಂತ ಸೇವೆಯನ್ನು ಕೂಡ ಶುರು ಮಾಡಿದ್ರು ಅಂದ್ರೆ ಬಿ ಟುಬಿ ಸೆಗ್ಮೆಂಟ್ ಉದಾಹರಣೆಗೆ ನಿಮ್ಮ ಬಳಿ ಒಂದು ಅಂಗಡಿ ಇತ್ತು ಅಂತ ಊಹೆ ಮಾಡ್ಕೊಳ್ಳಿ. ನೀವು ಸ್ಟಾಕ್ ಅನ್ನ ರಿಸೀವ್ ಮಾಡ್ಕೊಳ್ಬೇಕು ಅಂದ್ರೆ ಅದನ್ನ ಈ ಡನ್ಜೋ ಮಾಡಿಕೊಡ್ತಿತ್ತು. ಡನ್ಜೋಗೆ ಎರಡು ರೀತಿಯ ಆದಾಯ ಬರ್ತಾ ಇತ್ತು. ಮೊದಲನೆದು ಕಸ್ಟಮರ್ ಗಳಿಂದ ಡೆಲಿವರಿ ಚಾರ್ಜ್ಗಳು ಎರಡನೇ ಆದಾಯ ಬಿಸಿನೆಸ್ ಗಳಿಂದ 10% ಇಂದ 30% ವರೆಗೂ ಕಮಿಷನ್ ಮೂಲಕ ಸಿಗತಿತ್ತು. ಇದಾದ ನಂತರ 2019ರ ಅಕ್ಟೋಬರ್ ನಲ್ಲಿ ಮತ್ತೊಂದು ದೊಡ್ಡ ಫಂಡಿಂಗ್ ರೌಂಡ್ ನಡೆಯುತ್ತೆ.
ಅದರಲ್ಲಿ ಸುಮಾರು 45 ಮಿಲಿಯನ್ ಡಾಲರ್ ಗಳನ್ನ ಮಲ್ಟಿಪಲ್ ವೆಂಚರ್ ಕ್ಯಾಪಿಟಲ್ ಫರ್ಮ್ಸ್ ನಿಂದ ರೈಸ್ ಮಾಡ್ತಾರೆ. ಹೀಗಾಗಿ ಒಂದು ಕಡೆ ಸ್ಟಾರ್ಟ್ ಅಪ್ ಬೆಳಿತಾ ಇತ್ತು. ಇನ್ನೊಂದು ಕಡೆ ಫಂಡಿಂಗ್ ಕೂಡ ಬರ್ತಾ ಇತ್ತು. ಆದರೆ ಸಮಸ್ಯೆ ಏನಪ್ಪಾ ಅಂದ್ರೆ ಆರ್ಥಿಕ ಪರಿಸ್ಥಿತಿ ಏಪ್ರಿಲ್ 1, 2018 ರಿಂದ ಮಾರ್ಚ್ 31, 2019 ವರೆಗೂ ಇರುವಂತ ಫೈನಾನ್ಸಿಯಲ್ ಇಯರ್ನಲ್ಲಿ ಡನ್ 76 ಲಕ್ಷ ಆದಾಯವನ್ನು ಗಳಿಸಿದರೆ 169 ಕೋಟಿ ನಷ್ಟ ಆಗಿತ್ತು 2020 ರಲ್ಲಿ ಡನ್ಗೆ 27.5 5 ಕೋಟಿ ಆದಾಯ ಬಂದಿತ್ತು ಈ ರೀತಿ ಆದಾಯಕ್ಕಿಂತ ನಷ್ಟನೇ ಹೆಚ್ಚಾಗ್ತಾ ಹೋಯ್ತು ಅಂದ್ರೆ ಇದರ ನಷ್ಟದ ಮೊತ್ತ ಸುಮಾರು 338 ಕೋಟಿಗೆ ಏರಿಕೆಯಾಗಿತ್ತು ಅಂದ್ರೆ ಲಾಭಕ್ಕಿಂತನೂ ಕೂಡ ನಷ್ಟದ ವ್ಯವಹಾರ ಇದರಲ್ಲಿ ವೇಗವಾಗಿ ಹೆಚ್ಚಾಗ್ತಾ ಇತ್ತು ಕಾರಣ ಏನು ಅಂದ್ರೆ 2018ರಲ್ಲಿ ಶುರು ಮಾಡಿದಂತ ಅಗ್ರೆಸಿವ್ ಎಕ್ಸ್ಪಾನ್ಶನ್ 2020ರವರೆಗೂ ಟನ್ ತನ್ನ ಶಾಖೆಗಳನ್ನ ಹಲವಾರು ದೊಡ್ಡ ದೊಡ್ಡ ನಗರಗಳಲ್ಲಿ ವಿಸ್ತಾರ ಮಾಡ್ತು ಅದಕ್ಕಾಗಿ ತುಂಬಾ ಖರ್ಚನ್ನು ಕೂಡ ಮಾಡ್ತು ಮೊದಲನೆದು ಟೆಕ್ನಾಲಜಿಕಲ್ ಇನ್ವೆಸ್ಟ್ಮೆಂಟ್ ಅನೇಕ ನಗರಗಳಲ್ಲಿ ಆಪರೇಟ್ ಮಾಡೋದಕ್ಕೆ ಬೇಕಾಗುವಂತಹ ಸಾಫ್ಟ್ವೇರ್ ವೆಚ್ಚಗಳು ಹೆಚ್ಚಾಗಿದ್ವು ಮತ್ತೊಂದು ಒಂದು ಡೆಲಿವರಿ ಪಾರ್ಟ್ನರ್ಸ್ ಗಳನ್ನ ನೇಮಿಸಿಕೊಳ್ಳೋದಕ್ಕೆ ಅವರಿಗೆ ಹೆಚ್ಚು ಸಂಬಳ ಮತ್ತು ರಿವಾರ್ಡ್ ಗಳನ್ನು ಕೂಡ ಕೊಟ್ಟು ಅವರನ್ನ ನೇಮಕ ಮಾಡಿಕೊಳ್ಳಾಗ್ತಿತ್ತು. ಜೊತೆಗೆ ಅಧಿಕ ಗ್ರಾಹಕರನ್ನು ಗಳಿಸುವದಕ್ಕೆ ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮತ್ತು ಜಾಹಿರಾತನ್ನು ಕೂಡ ಮಾಡಲಾಗ್ತಿತ್ತು. ಈ ಎಲ್ಲಾ ಕಾರಣದಿಂದ ಆ ಒಂದು ಕಂಪನಿಯ ಆರ್ಥಿಕ ಸ್ಥಿತಿ ಹದಿಗೆಟ್ಟಿತ್ತು. ಆದರೆ ಅವರ ಆಲೋಚನೆ ಏನು ಅಂದ್ರೆ ಮೊದಲು ವೇಗವಾಗಿ ಬೆಳೆಬೇಕು ನಂತರ ಆರ್ಥಿಕ ಸ್ಥಿತಿ ತಾನಾಗಿನೇ ಸುಧಾರಿಸುತ್ತೆ ಎಂಬುದು ಅವರ ಅಭಿಪ್ರಾಯ ಆಗಿತ್ತು. ಅವರ ಲೆಕ್ಕಾಚಾರಗಳ ಪ್ರಕಾರ ಮೊದಲು ರಾಷ್ಟ್ರ ಮಟ್ಟದ ಬಾಂಡಿಂಗ್ ಅನ್ನ ಮಾಡಿಕೊಳ್ಳಬೇಕು. ನಂತರ ಒಂದು ಲಾಯಲ್ ಕಸ್ಟಮರ್ ಬೇಸ್ ಅನ್ನ ಬಿಲ್ಡ್ ಮಾಡಿಕೊಂಡು ಅದಾದಮೇಲೆ ಸುಲಭವಾಗಿ ಆರ್ಥಿಕವಾಗಿ ಸುಧಾರಿಸಬಹುದು. ಇದನ್ನೇ ಅನೇಕ ಸ್ಟಾರ್ಟಪ್ ಕಂಪನಿಗಳು ಕೂಡ ಈ ರೀತಿ ಮಾಡ್ತಾವೆ. ಪ್ರಾರಂಭದಲ್ಲಿ ಲಾಭದಲ್ಲಿ ಅಲ್ಲದೆ ಬೆಳವಣಿಗೆ ಮೇಲೆ ಮಾತ್ರ ಗಮನವನ್ನ ವಹಿಸುತ್ತಾರೆ.
ನಿಮಗೆ ಗೊತ್ತಿರಬಹುದು 2020 ರಲ್ಲಿ ಕೊರೋನ ಎಂಬ ಮಹಾಮಾರಿ ಭಾರತಕ್ಕೆ ಕಾಲಿಡುತ್ತೆ. 2020ರ ಮಾರ್ಚ್ ಅಂತ್ಯದ ವೇಳೆ ಮೊದಲ ಬಾರಿಗೆ ಲಾಕ್ಡೌನ್ ಶುರುವಾಗಿತ್ತು. ಅದಾದನಂತರ ಭಾರತದಲ್ಲಿ ಕ್ವಿಕ್ ಕಾಮರ್ಸ್ ಅನ್ನುವಂತ ಒಂದು ಹೊಸ ಟ್ರೆಂಡ್ ಹೊಸ ಇಂಡಸ್ಟ್ರಿ ಶುರುವಾಯಿತು. ಆಗಸ್ಟ್ 2020 ರಲ್ಲಿ ಸ್ವಿಗಿ ಅವರು ಸ್ವಿಗಿ ಇನ್ಸ್ಟಾಮರ್ಟ್ ಅನ್ನುವಂತ ದಿನಸಿ ಸಾಮಗ್ರಿಗಳನ್ನ ವಿತರಿಸಲು ಲಾಂಚ್ ಮಾಡ್ತಾರೆ. ಕೊರೋನಾ ವೈರಸ್ ನಿಂದಾಗಿ ಅದಕ್ಕೆ ಡಿಮ್ಯಾಂಡ್ ಕೂಡ ಇನ್ನು ಹೆಚ್ಚಾಯ್ತು. ನಂತರ ಜುಲೈ 2021 ರಲ್ಲಿ ಜೆಪ್ಟೋ ಕೂಡ ಕ್ವಿಕ್ ಕಾಮರ್ಸ್ ರೇಸ್ ಗೆ ಪ್ರವೇಶ ಮಾಡ್ತು. ಆಗಸ್ಟ್ 2021 ರಲ್ಲಿ ಬ್ಲಿಂಕಿಟ್ ಕೂಡ ಪ್ರವೇಶ ಮಾಡ್ತು. ಆದರೆ ಬ್ಲಿಂಕಿಟ್ 2013 ರಿಂದನೇ ಅವರು ಗ್ರೋಸರಿ ಡೆಲಿವರಿಯನ್ನ ಮಾಡ್ತಿದ್ರು. ಆದರೆ 2021ನೇ ಆಗಸ್ಟ್ ತಿಂಗಳಲ್ಲಿ ಮಾತ್ರ ಕ್ವಿಕ್ ಕಾಮರ್ಸ್ ಗೆ ಪ್ರವೇಶ ಮಾಡ್ತಾರೆ. 2021ರ ಡಿಸೆಂಬರ್ ನಲ್ಲಿ ಗ್ರೋಫೇರ್ಸ್ ಎಂಬ ಒಂದು ಹೆಸರನ್ನ ಬದಲಿಸಿ ಬ್ಲಿಂಕಿಟ್ ಅಂತ ಬ್ರಾಂಡಿಂಗ್ ಅನ್ನ ಶುರು ಮಾಡ್ತಾರೆ ಹೀಗಾಗಿ ಅನೇಕ ಸ್ಟಾರ್ಟಪ್ ಗಳು ಕ್ವಿಕ್ ಕಾಮರ್ಸ್ ಇಂಡಸ್ಟ್ರಿಗೆ ಪ್ರವೇಶ ಮಾಡಿದ್ದರಿಂದ ಕ್ವಿಕ್ ಕಾಮರ್ಸ್ ಗೆ ಭಾರಿ ಕ್ರೇಜ್ ಹುಟ್ಟಕೊಳ್ತು ಮಾಧ್ಯಮ ಹೈಪ್ ಕೂಡ ಜಾಸ್ತಿ ಆಯ್ತು ಹಾಗೆ ಈ ಡನ್ಜೋ ಹತ್ರ ಈಗಾಗಲೇ ಡೆಲಿವರಿ ಪಾರ್ಟ್ನರ್ಸ್ ಇದ್ದ ಕಾರಣ ಅದನ್ನ ನೋಡಿ ಡನ್ ಕೂಡ ಆಗಸ್ಟ್ 2021 ರಲ್ಲಿ ಕ್ವಿಕ್ ಕಾಮರ್ಸ್ ಗೆ ಪ್ರವೇಶ ಮಾಡ್ತು ಇದು ಈ ಡನ್ಜೋ ಇತಿಹಾಸದಲ್ಲಿ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿತ್ತು ಇದರಿಂದಲೇ ಈ ಡನ್ಜೋದ ಪತನ ಕೂಡ ಶುರುವಾಯಿತು ಈ ಕ್ವಿಕ್ ಕಾಮರ್ಸ್ ಗೆ ಶಿಫ್ಟ್ ಆಗೋದರಲ್ಲಿ ಒಂದು ದೊಡ್ಡ ಸಮಸ್ಯೆ ಏನು ಅಂದ್ರೆ ಹೈಪರ್ ಲೋಕಲ್ ಡೆಲಿವರಿಸ್ ಮಾಡುವಲ್ಲಿ ಆಗುವಂತ ಮೊದಲ ಪ್ರಯೋಜನ ಡನ್ಸೋಗೆನೆ ಇತ್ತು. ಆದರೆ ಈಗ ಅದರ ಮೇಲೆ ಫೋಕಸ್ ಕಡಿಮೆ ಮಾಡಿ ತಡವಾಗಿ ಕ್ವಿಕ್ ಕಾಮರ್ಸ್ ರೇಸ್ ಗೆ ಪ್ರವೇಶ ಮಾಡಿದ್ರು. ಆದರೆ ಸ್ವಿಗಿ ಇನ್ಸ್ಟಾಮರ್ಟ್ ಮತ್ತು ಬ್ಲಿಂಕೆಟ್ ಇವೆರಡು ಕೂಡ ಈಗಾಗಲೇ ಕ್ವಿಕ್ ಕಾಮರ್ಸ್ ನಲ್ಲಿ ಬಲವಾಗಿ ನೆಲೆಯೂರಿದ್ವು ಜೊತೆಗೆ ಜೆಪ್ಟೋ ಕೂಡ ಡನ್ ಗಿಂತನೂ ಕೂಡ ಒಂದು ತಿಂಗಳು ಮುಂಚೆನೇ ಪ್ರವೇಶ ಮಾಡಿತ್ತು. ಡನ್ ಮೊದಲು ಹೈಪರ್ ಲೋಕಲ್ ಡೆಲಿವರಿಸ್ ಮೇಲೆ ಫೋಕಸ್ ಮಾಡ್ತಿತ್ತು.
ಆದರೆ ಈಗ ಕ್ವಿಕ್ ಕಾಮರ್ಸ್ ಗೆ ಕಾಲಿಟ್ಟಿದ್ದರಿಂದ ತನ್ನ ವ್ಯವಹಾರದ ಮಾದರಿಯನ್ನ ಬದಲಾಯಿಸಿ ಬೇರೆ ಮಾರ್ಗದಲ್ಲಿ ವ್ಯವಹಾರವನ್ನ ಮಾಡೋದಕ್ಕೆ ಪ್ರಾರಂಭಿಸಿತು. ಡನ್ ಈ ಒಂದು ಫೀಲ್ಡ್ಗೆ ತಡವಾಗಿ ಕಾಲಿಟ್ಟಿದೆ ಅದರ ಮೊದಲ ದೌರ್ಬಲ್ಯ ಕ್ವಿಕ್ ಕಾಮರ್ಸ್ ನಲ್ಲಿ ಇರುವಂತ ಸಮಸ್ಯೆ ಏನು ಅಂದ್ರೆ ಇದಕ್ಕಾಗಿನೇ ಪ್ರತ್ಯೇಕವಾದಂತ ಡಾರ್ಕ್ ಸ್ಟೋರ್ ಕಟ್ಟಬೇಕಾಗುತ್ತೆ. ಆ ಒಂದು ಡಾರ್ಕ್ ಸ್ಟೋರ್ ನಿಂದ ಗ್ರಾಹಕರು ಆರ್ಡರ್ ಮಾಡಿದಂತ ವಸ್ತುಗಳನ್ನ ತಕ್ಷಣ ತಲುಪಿಸಬೇಕು ಅಂದ್ರೆ ಇಲ್ಲಿ ಕ್ವಿಕ್ ಕಾಮರ್ಸ್ ಕಂಪನಿಗಳೇ ತಮ್ಮದೇ ಸ್ವಂತ ಸ್ಟಾಕ್ ಅನ್ನ ನಿರ್ವಹಿಸಬೇಕಾಗುತ್ತೆ ಆಗ ಮಾತ್ರ ವೇಗವಾಗಿ ಡೆಲಿವರಿ ಕೊಡೋದಕ್ಕೆ ಸಾಧ್ಯ ಆಗುತ್ತೆ ಡೆಲಿವರಿ ಮಾಡಬೇಕು ಅಂದ್ರೆ ಅದಕ್ಕಾಗಿನೇ ಸ್ಟಾಕ್ಸ್ ಅನ್ನ ತರಬೇಕಾಗುತ್ತೆ ಅದೇ ರೀತಿ ಕೆಲಸ ಮಾಡೋದಕ್ಕೆ ಕೆಲಸಗಾರರು ಕೂಡ ಬೇಕಾಗ್ತಾರೆ ಹೀಗಾಗಿ ಡನ್ಜೋ ಮಿಲಿಯನ್ ಡಾಲರ್ಗಳು ಹೊಡಿಕೆ ಮಾಡಿ ದೇಶಾದಿಯಂತ 130ಕ್ಕೂ ಅಧಿಕ ಡಾರ್ಕ್ ಸ್ಟೋರ್ಗಳನ್ನ ತೆರೆಯುತ್ತೆ ಇದಕ್ಕೆ ಜಾಸ್ತಿ ಖರ್ಚಾಗುತ್ತೆ ಬಲ್ಕ್ ಸ್ಟಾಕ್ ಅನ್ನ ಡಾರ್ಕ್ ಸ್ಟೋರ್ ಗಳಿಗೆ ತರುವಂತ ಲಾಜಿಕಲ್ ವೆಚ್ಚ ಡಾರ್ಕ್ ಸ್ಟೋರ್ ನಲ್ಲಿ ಕೆಲಸ ಮಾಡುವಂತ ಸಿಬ್ಬಂದಿಗೆ ಸಂಬಳ ಈ ಡಾರ್ಕ್ ಸ್ಟೋರ್ಗಳನ್ನ ಕಾರ್ಯಕ್ಷಮವಾಗಿ ನಿರ್ವಹಿಸುವದಕ್ಕೆ ನಿರ್ಮಿಸುವಂತ ವೆಚ್ಚ ಇವೆಲ್ಲವನ್ನು ಕೂಡ ನಿರ್ವಹಣೆ ಮಾಡೋದಕ್ಕೆ ಅಧಿಕ ಹಣ ಬೇಕಾಗುತ್ತೆ ಒಂದು ಕಡೆ ದೊಡ್ಡ ಕಾಂಪಿಟೇಷನ್ ಮತ್ತೊಂದು ಕಡೆ ಹೆಚ್ಚಾದಂತ ವೆಚ್ಚ ಈ ಎರಡು ಸಮಸ್ಯೆಗಳನ್ನ ಡನ್ ಎದುರಿಸಬೇಕಾಯಿತು ಆದರೂ ಕೂಡ ಅವರು ತಮ್ಮ ಹತ್ತಿರ ಇರುವಂತ ಹಣದ ಮೊತ್ತವನ್ನ ಧೈರ್ಯವಾಗಿ ಖರ್ಚು ಮಾಡ್ತಾ ಮುಂದುವರೆದರು 2021 ರಲ್ಲಿ ಡನ್ದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಣೆ ಕಾಣ್ತು ಈ ಡನ್ದ ಆದಾಯ 27.5 ಕೋಟಿಯಿಂದ 45.8 8 ಕೋಟಿಗೆ ಏರಿಕೆಯಾಗಿತ್ತು ಮತ್ತೆ 338 ಕೋಟಿ ಇದ್ದಂತ ನಷ್ಟ 229 ಕೋಟಿಗೆ ಇಳಿಕೆಯಾಗಿತ್ತು ಇದು ಡನ್ಗೆ ಬಹಳ ಸಂತೋಷದ ವಿಚಾರವಾಗಿತ್ತು ಇನ್ನು 2022 ರಲ್ಲಿ ಡನ್ ನ ಈ ಒಂದು ಜರ್ನಿಯಲ್ಲಿ ಒಂದು ಮಹತ್ವದ ಘಟನೆ ನಡೆದು ಹೋಗುತ್ತೆ ಅದೇನಪ್ಪಾ ಅಂದ್ರೆ ಜನವರಿ 2022 ರಲ್ಲಿ ಡನ್ 240 ಮಿಲಿಯನ್ ಡಾಲರ್ ಫಂಡಿಂಗ್ ಅನ್ನ ಪಡೆಯುತ್ತೆ ಅದರಲ್ಲಿ 200 ಮಿಲಿಯನ್ ಡಾಲರ್ ಅನ್ನ ಈ ರಿಲಯನ್ಸ್ ಹೂಡಿಕೆ ಮಾಡಿತ್ತು ಇದರಿಂದ ಈ ರಿಲಯನ್ಸ್ ಅವರು ಲಾರ್ಜೆಸ್ಟ್ ಓನರ್ ಆಫ್ ದಿ ಡನ್ ಆದ್ರು ಇದರಿಂದ 25.8% 8% ಸ್ಟೇಕ್ ಅನ್ನ ಈ ರಿಲಯನ್ಸ್ ಅವರು ತಗೊಂಡ್ರು ಇನ್ನು ಈ ಡನ್ ಫೋನರ್ಗಳು ಇಂತ ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡ್ತಿರೋದ್ರಿಂದ ಬಹಳ ಸಂತೋಷಗೊಂಡಿದ್ರು ಆದರೆ ಹೂಡಿಕೆಯ ಪರಿಣಾಮದಿಂದ ಡನ್ ಫೋನರ್ಗಳ ನಿಯಂತ್ರಣ ಕ್ರಮೇಣ ಕಡಿಮೆ ಆಗ್ತಾ ಹೋಯ್ತು ಮುಂಬರುವಂತ ಹಂತದಲ್ಲಿ ಡನ್ ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮತ್ತು ಜಾಹಿರಾತ್ ಮಾಡೋದಕ್ಕೆ ವೆಚ್ಚವನ್ನ ಏರಿಸಬೇಕಾಗಿತ್ತು ಇದರ ಜೊತೆಗೆ ಗ್ರಾಹಕರಿಗೆ ಅನೇಕ ಡಿಸ್ಕೌಂಟ್ ಮತ್ತು ಆಫರ್ಸ್ ಗಳನ್ನು ಕೂಡ ಕೊಡೋದಕ್ಕೆ ಶುರು ಮಾಡ್ತಾರೆ ಆದರೆ ಅವು ಯಾವುದು ಕೂಡ ದೊಡ್ಡ ಪರಿಣಾಮವನ್ನ ಬೀರಲಿಲ್ಲ 2022 ರಲ್ಲಿ ಡನ್ದ ಆದಾಯ 45 ಕೋಟಿಯಿಂದ 55 ಕೋಟಿಗೆ ಏರಿಕೆಯಾಗಿದ್ರೆ ನಷ್ಟ 229 ಕೋಟಿಯಿಂದ 464 ಕೋಟಿಗೆ ಏರಿಕೆಯಾಗಿತ್ತು.
ಇವರು ಇಷ್ಟೆಲ್ಲಾ ಜಾಹಿರಾತು ಮತ್ತು ಮಾರ್ಕೆಟಿಂಗ್ ಮಾಡಿದ್ರು ಕೂಡ ಲಾಭ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದ್ರು ನಷ್ಟ ಮಾತ್ರ ಅಧಿಕವಾಗಿತ್ತು. ಹೀಗಾಗಿ 2023 ರಲ್ಲಿ ಮತ್ತೊಂದು ಫಂಡಿಂಗ್ ರೌಂಡ್ ನಡೆಯುತ್ತೆ. ಆ ಒಂದು ಹಣ ಲಭ್ಯ ಇದ್ದರೂ ಕೂಡ ಫಂಡಿಂಗ್ ಹೆಚ್ಚಿಸೋದಕ್ಕೆ ರಿಲಯನ್ಸ್ ಒಪ್ಪಿಕೊಳ್ಳಿಲ್ಲ. ಮತ್ತೆ ಅವರ ಕಾಂಟ್ರಾಕ್ಟ್ ಶರತುಗಳು ಮತ್ತು ನಿಯಮದಂತೆ ಕಂಪನಿಯ ಮಹತ್ವದ ನಿರ್ಣಯಗಳಲ್ಲಿ ರಿಲಯನ್ಸ್ ಗೆ ಹೆಚ್ಚು ಹಕ್ಕು ಇದೆ ಅಂತ ಹೇಳಿ ತನ್ನ ಅಧಿಕಾರವನ್ನ ಚಲಾಯಿಸಿತು. ಫಂಡಿಂಗ್ ಅನ್ನ ಮಾಡೋದಕ್ಕೆ ಡನ್ ಗೆ ಇದ್ದಂತ ಆ ಒಂದು ಅಧಿಕಾರವನ್ನ ರಿಲಯನ್ಸ್ ಬಳಸಿಕೊಂಡು ಡನ್ ಗೆ ಹೊಸ ಫಂಡಿಂಗ್ ಅನ್ನ ಮಾಡೋದಕ್ಕೆ ಅವಕಾಶವನ್ನ ಕೊಡಲಿಲ್ಲ ರಿಲಯನ್ಸ್ ಹೀಗೆ ಮಾಡೋದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ವು ಮೊದಲನೆಯದು ಇಷ್ಟೆಲ್ಲಾ ನಷ್ಟವನ್ನ ನೋಡಿದಮೇಲೆ ಡನ್ ಮೇಲೆ ಈ ರಿಲಯನ್ಸ್ ಗೆ ನಂಬಿಕೆ ಉಳಿದಿರಲಿಲ್ಲ ಎರಡನೆಯದುರಿಲಯನ್ಸ್ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ನಂತರ ಡನ್ ದ ಮೌಲ್ಯ 800 ಮಿಲಿಯನ್ ಡಾಲರ್ ಆಗುತ್ತೆ ಅಕಸ್ಮಾತ್ ಡನ್ ಗೆ ಮತ್ತಷ್ಟು ಹಣವನ್ನ ಹೂಡಿಕೆ ಮಾಡಿದರೆ ಮೌಲ್ಯಕ್ಕಿಂತ ಹೆಚ್ಚಾಗಿ ಸ್ವತಹ ಶೇರ್ ಕಡಿಮೆಯಾಗುತ್ತೆ ಅಧಿಕ ನಷ್ಟವಾಗಿದಂತ ಕಾರಣ ಡನ್ ಹೊಸ ಹೂಡಿಕೆದಾರಿಂದ ಹಣ ಪಡೆಯೋದಕ್ಕೆ ಡನ್ ವ್ಯಾಲ್ಯುವೇಷನ್ ಕಡಿಮೆ ಮಾಡಬೇಕಾಗುತ್ತೆ. ಆ ಒಂದು ಮೌಲ್ಯದಲ್ಲಿ ಹೂಡಿಕೆದಾರರು ಶೇರ್ಸ್ ಅನ್ನ ಖರೀದಿ ಮಾಡೋದಿಲ್ಲ. ಯಾಕೆಂದ್ರೆ ಡನ್ ಈಗಾಗಲೇ ನಷ್ಟದಲ್ಲಿದೆ. ಮೌಲ್ಯ ಕಡಿಮೆ ಮಾಡಿದ್ರೆ ಶೇರ್ ಪ್ರೈಸ್ ಕೂಡ ಕಡಿಮೆಯಾಗುತ್ತೆ. ಆಗ ಹೊಸ ಹೂಡಿಕೆದಾರರು ಹೂಡಿಕೆ ಮಾಡ್ತಾರೆ. ಯಾಕೆಂದ್ರೆ ಶೇರ್ನ ಪ್ರೈಸ್ ಹೆಚ್ಚಾದ್ರೆ ಹೂಡಿಕೆ ಮಾಡಿದ್ರು ಕೂಡ ಹೂಡಿಕೆದಾರಿಗೆ ಕಂಪನಿಯಲ್ಲಿ ಕಡಿಮೆ ಮಾಲಿಕತ್ವ ಸಿಗುತ್ತೆ. ಹೀಗಾಗಿ ಶೇರ್ ಪ್ರೈಸ್ ಅನ್ನ ಕಡಿಮೆ ಮಾಡಬೇಕಾಗುತ್ತೆ.
ಹಾಗೆ ಮಾಡಿದ್ರೆ ಮೌಲ್ಯ ಕೂಡ ಕಡಿಮೆಯಾಗುತ್ತೆ ಮತ್ತು ಹೊಸ ಹೂಡಿಕೆ ಸಾಧ್ಯ ಆಗುತ್ತೆ. ಆದರೆ ಈ ಡನ್ ಮೌಲ್ಯ ಕಡಿಮೆ ಮಾಡಿದ್ರೆ ರಿಲಯನ್ಸ್ ಹೂಡಿಕೆ ಮಾಡಿದಂತ 200 ಮಿಲಿಯನ್ ಡಾಲರ್ ನ ಮೌಲ್ಯ ಕಡಿಮೆ ಆಗುತ್ತೆ. ಉದಾಹರಣೆಗೆ 800 ಮಿಲಿಯನ್ ಡಾಲರ್ ಮೌಲ್ಯದಿಂದ 400 ಮಿಲಿಯನ್ ಡಾಲರ್ ಕಡಿಮೆ ಮಾಡಿದ್ರೆ ರಿಲಯನ್ಸ್ ನ ಹುಡುಕೆ 200 ಮಿಲಿಯನ್ ಡಾಲರ್ ನ ಒಂದು ಭಾಗ ಕೇವಲ 100 ಮಿಲಿಯನ್ ಡಾಲರ್ ಆಗುತ್ತೆ ಮತ್ತೆ 100 ಮಿಲಿಯನ್ ಡಾಲರ್ ನಷ್ಟು ನಷ್ಟ ಆಗುತ್ತೆ. ಈ ಒಂದು ನಷ್ಟವನ್ನ ರಿಲಯನ್ಸ್ ಅವರು ತಮ್ಮ ವಾರ್ಷಿಕ ವರದಿಯಲ್ಲಿ ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್ ನಲ್ಲಿ ತೋರಿಸಬೇಕು ಮತ್ತೆ ಆ ಒಂದು ನಷ್ಟ ರಿಲಯನ್ಸ್ ಒಟ್ಟು ನೆಟ್ ಪ್ರಾಫಿಟ್ ಮೇಲೆ ಪ್ರಭಾವ ಬೀರುತ್ತೆ ಅಂದ್ರೆ ನೆಟ್ ಪ್ರಾಫಿಟ್ ಕಡಿಮೆಯಾಗುತ್ತೆ. ಅದರ ಪರಿಣಾಮ 100 ಮಿಲಿಯನ್ ಡಾಲರ್ ಕಡಿಮೆಯಾಗುತ್ತೆ. ಇದರಿಂದ ರಿಲಯನ್ಸ್ ನ ಶೇರ್ ಕೂಡ ಕಡಿಮೆ ಆಗುವಂತ ಸಾಧ್ಯತೆ ಇರುತ್ತೆ. ಆದ್ದರಿಂದ ರಿಲಯನ್ಸ್ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಡನ್ ಗೆ ಹೊಸ ಫಂಡಿಂಗ್ ಬರೋದಿಲ್ಲ. ಮತ್ತೆ ಸ್ಟಾರ್ಟಪ್ ಅನ್ನ ನಡೆಸೋದು ಕೂಡ ಕಷ್ಟ ಆಗುತ್ತೆ. 2023 ರಲ್ಲಿ ಇದರ ಆದಾಯ 54 ಕೋಟಿಯಿಂದ 226 ಕೋಟಿ ಆಗುತ್ತೆ ಆದರೆ ನಷ್ಟ 464 ಕೋಟಿಯಿಂದ 1800 ಕೋಟಿಗೆ ಏರಿಕೆ ಆಗುತ್ತೆ. ಹೀಗಾಗಿ ಒಂದು ಕಡೆ ಫಂಡಿಂಗ್ ಕೂಡ ಇಲ್ಲ. ಮತ್ತೊಂದು ಕಡೆ ಭಾರಿ ಮೊತ್ತದ ನಷ್ಟ ನಷ್ಟವನ್ನ ಕಡಿಮೆ ಮಾಡೋದಕ್ಕೆ ಆಫ್ ಪ್ರಕ್ರಿಯೆಯನ್ನ ಶುರು ಮಾಡ್ತಾರೆ. ಇದರಿಂದ ಕಂಪನಿಯ ಕೆಲ ಸಿಬ್ಬಂದಿಗಳಿಗೆ ತಡವಾಗಿ ಸಂಬಳವನ್ನ ಕೊಡ್ತಿದ್ರು ಮತ್ತೆ ಕೆಲವರಿಗೆ ಸಂಬಳ ಕೊಡೋದನ್ನೇ ನಿಲ್ಲಿಸಿ ಪಟ್ಟಿದ್ರು ಯಾಕೆಂದ್ರೆ ಸಂಬಳ ಕೊಡೋದಕ್ಕೆ ಅವರ ಬಳಿ ಹಣ ಇರಲಿಲ್ಲ. ನಂತರ ಏಪ್ರಿಲ್ 2023 ರಲ್ಲಿ 75 ಮಿಲಿಯನ್ ಡಾಲರ್ ಫಂಡಿಂಗ್ ಅನ್ನ ಪಡೆದುಕೊಳ್ಳುತಾರೆ. ಆದರೆ ಡಂಜೋಗೆ ಅದು ಸಾಕಾಗೋದಿಲ್ಲ ಅಂತ ಮೊದಲೇ ಗೊತ್ತಿತ್ತು ಆದರೆ ಹೊಸ ಫಂಡಿಂಗ್ ಅನ್ನ ಪಡೆಯೋದಕ್ಕೆ ರಿಲಯನ್ಸ್ ಒಪ್ಪಲಿಲ್ಲ.
ನಂತರ 2023 ಅಕ್ಟೋಬರ್ ನಲ್ಲಿ ಅದರ ಸಂಸ್ಥಾಪಕರು ಕಂಪನಿಯಿಂದ ಹೊರ ಬರ್ತಾರೆ. ನಂತರ 2024 ರಲ್ಲಿ ಈ ಡನ್ ವಿರುದ್ಧ ಬಹಳಷ್ಟು ಕೋರ್ಟ್ ಕೇಸ್ಗಳು ದಾಖಲಾಗ್ತವೆ. ಈ ಡನ್ಜೋದವರು ಹಣ ಕೊಡಬೇಕಾದವರಿಗೆ ಕೊಡದೆ ಇರೋದ್ರಿಂದ ಸಮಸ್ಯೆಗಳು ಉಂಟಾಗ್ತವೆ. ಹೀಗಾಗಿ ಡನ್ಜೋ ವಿರುದ್ಧ ಕೋರ್ಟ್ನಲ್ಲಿ ದೂರುಗಳು ಕೂಡ ದಾಖಲಾಗ್ತವೆ. ಆಗಸ್ಟ್ 2024ರ ಹೊತ್ತಿಗೆ ಡನ್ಜೋ ನಲ್ಲಿ ಮಾತ್ರ ಕೇವಲ 50 ಸಿಬ್ಬಂದಿಗಳು ಉಳಿದಿದ್ದರು. ನಂತರ ಜನವರಿ 2025 ರಲ್ಲಿ ಮುಖ್ಯ ಸಂಸ್ಥಾಪಕ ಕಬೀರ್ ವಿಶ್ವಾಸ್ ಕೂಡ ಕಂಪನಿಯಿಂದ ಹೊರ ಬರ್ತಾರೆ. ಅದೇ ತಿಂಗಳಲ್ಲಿ ಡನ್ ದ ವೆಬ್ಸೈಟ್ ಮತ್ತು ಅಪ್ಲಿಕೇಶನ್ ಕೂಡ ಆಫ್ಲೈನ್ ಆಗ್ತವೆ. ಹೀಗಾಗಿ ಡನ್ ಅಧಿಕೃತವಾಗಿ ದಿವಾಳಿಯಾಗಿತ್ತು. ಕೊನೆಗೆ 2025 ಆಗಸ್ಟ್ ತಿಂಗಳಲ್ಲಿ ರಿಲಯನ್ಸ್ ಅವರ ವಾರ್ಷಿಕ ವರದಿ ಹೊರಬಿತ್ತು. ಅವರು ಡನ್ ದಲ್ಲಿ ಹೂಡಿಕೆ ಮಾಡಿದಂತ ಇನ್ವೆಸ್ಟ್ಮೆಂಟ್ ಅನ್ನ ಲಾಸ್ ಅಂತ ಒಪ್ಪಿಕೊಳ್ತಾರೆ. ಅಂದ್ರೆ ಹೂಡಿಕೆ ವ್ಯರ್ಥವಾಗಿದೆ. ಹೀಗಾಗಿ ರಿಲಯನ್ಸ್ ಕೂಡ ಹೊರ ಬರುತ್ತೆ ಮತ್ತೆ ಆ ಒಂದು ಕಂಪನಿ ಸಂಪೂರ್ಣವಾಗಿ ಬಿದ್ದು ಹೋಗುತ್ತೆ. ವೀಕ್ಷಕರೇ ಇದರಿಂದ ನಿಮಗೆ ನಾಲ್ಕು ಮುಖ್ಯವಾದಂತಹ ಸ್ಟಾರ್ಟಪ್ ಪಾಠಗಳು ಸಿಗ್ತವೆ. ಮೊದಲನೇ ಪಾಠ ಡೌನ್ಸೋ ಫೌಂಡರ್ ಗಳು ಅತಿಯಾಗಿ ಆತ್ಮವಿಶ್ವಾಸದಿಂದ ಕಂಪನಿಯನ್ನ ವಿಸ್ತರಣೆ ಮಾಡಿದ್ದು. ಆರಂಭದಲ್ಲಿ ಹೈಪರ್ ಲೋಕಲ್ ಡೆಲಿವರಿ ಇದ್ರೂ ಕೂಡ ನಂತರ ಕ್ವಿಕ್ ಕಾಮರ್ಸ್ ನಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನ ಮಾಡಿ ವಿಸ್ತರಿಸಿದ್ರು. ಇದರಿಂದ ನಾವು ಕಲಿಬೇಕಾದದ್ದು ಏನು ಅಂದ್ರೆ ಮೊದಲು ಸ್ಟ್ರಾಟಜಿಕಲಿ ವಿಸ್ತರಿಸಬೇಕು. ಮೊದಲು ಒಂದು ನಗರಕ್ಕೆ ವಿಸ್ತಾರ ಮಾಡಿ ಅದು ವರ್ಕೌಟ್ ಆದರೆ ಮುಂದಿನ ನಗರಕ್ಕೆ ವಿಸ್ತರಣೆ ಮಾಡಬೇಕು. ಮೊದಲ ನಗರದಲ್ಲಿ ಸಮಸ್ಯೆ ಇದ್ದರೆ ಅಲ್ಲಿ ವಿಸ್ತರಣೆ ನಿಲ್ಲಿಸಿ ನಂತರ ಮುಂದಿನ ಹೆಜ್ಜೆಯನ್ನ ಕುರಿತು ಆಲೋಚಿಸಬೇಕು. ಡನ್ ಆಫ್ ಫೌಂಡರ್ ಗಳು ಈ ರೀತಿ ಮಾಡಲಿಲ್ಲ. ಅವರ ಬಳಿ ಹಣ ಇದೆ ಅಂತ ಕಣ್ಣಿದ್ದು ಕೂಡ ಕೂಡರಂತೆ ವಿಸ್ತರಿಸುತ್ತಾ ಹೋದರು. ಇನ್ನು ಎರಡನೇ ಪಾಠ ಈ ಡನ್ ಆಫ್ ಓನರ್ ಗಳು ಹಣವನ್ನ ಸರಿಯಾಗಿ ನಿರ್ವಹಿಸಲಿಲ್ಲ. ಆದಾಯ ಮತ್ತು ನಷ್ಟಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲದೆ ಎಲ್ಲಾ ಹಣವನ್ನು ಕೂಡ ಒಮ್ಮೆಲೆ ಗ್ರೋತ್ ಮೇಲೆ ಖರ್ಚು ಮಾಡಿದರು. ಇದರಿಂದ ನಾವು ಕರಿಬೇಕಾಗಿದ್ದು ಏನು ಅಂದ್ರೆ ನಾವು ಎಷ್ಟು ಹಣ ಖರ್ಚು ಮಾಡ್ತೀವೋ ಅದಕ್ಕೆ ಸರಿಯಾದ ಬೆಳವಣಿಗೆ ಇದೆಯಾ ಅಂತ ಮೊದಲು ಪರೀಕ್ಷೆ ಮಾಡಬೇಕು ಮತ್ತೆ ಮುಂದೆ ಖರ್ಚನ್ನ ಎಷ್ಟು ಮಾಡಬೇಕು ಹೇಗೆ ಮಾಡಬೇಕು ಎಂಬುದನ್ನು ಚಿಂತಿಸಬೇಕು ಅಭಿವೃದ್ಧಿ ಇಲ್ಲದೆ ಇದ್ದರೆ ಖರ್ಚನ್ನ ನಿಲ್ಲಿಸಬೇಕು ಯಾಕೆ ಅಭಿವೃದ್ಧಿ ಆಗ್ತಿಲ್ಲ ಅಂತ ಚಿಂತನೆ ಮಾಡಬೇಕು ಲಾಭ ಇಲ್ಲದೆ ಖರ್ಚನ್ನ ಮಾಡೋದು ವ್ಯರ್ಥ ಇನ್ನು ಮೂರನೇ ಪಾಠ ಅಲ್ಟ್ರಾ ಕಾಂಪಿಟೇಟಿವ್ ಇಂಡಸ್ಟ್ರಿಯಲ್ಲಿ ಪ್ರವೇಶ ಮಾಡೋದು ತುಂಬಾ ಅಪಾಯಕಾರಿ ನಿಮ್ಮಲ್ಲಿ ಕಾನ್ಫಿಡೆನ್ಸ್ ಕ್ಯಾಲ್ಕುಲೇಷನ್ ತಂತ್ರ ಸ್ಟ್ರಾಟಜಿ ಇದ್ದರೆ ಮಾತ್ರ ಪ್ರವೇಶ ಮಾಡಬೇಕು ಈಗಾಗಲೇ ಸ್ಪರ್ಧೆಗಳು ಇದ್ದಂತ ಜಾಗದಲ್ಲಿ ಪ್ರವೇಶ ಮಾಡೋದು ತುಂಬಾ ಅಪಾಯಕಾರಿ ಯಾಕೆಂದ್ರೆ ಮೊದಲು ಇದ್ದವರಿಗೆ ಆಧ್ಯತೆ ಹೆಚ್ಚಿರುತ್ತೆ ಇದರಿಂದ ಅವರಿಗೆ ಪ್ರಯೋಜನ ಕೂಡ ಅಧಿಕ ನೀವು ತಡವಾಗೆ ಪ್ರವೇಶ ಮಾಡಿದ್ರೆ ನಿಮ್ಮ ಬಳಿ ಅತ್ಯಂತ ಶಕ್ತಿ ಇರುವಂತ ತಂತ್ರ ಮಾರ್ಕೆಟಿಂಗ್ ನಾಲೆಡ್ಜ್ ಅಥವಾ ಇತರರಿಗಿಂತ ಹೆಚ್ಚಿನ ಹಣ ಇರಬೇಕು ಇದು ಯಾವುದು ಕೂಡ ಈ ಡನ್ಸೋ ಬಳಿ ಇರಲಿಲ್ಲ ಇನ್ನು ನಾಲ್ಕನೇ ಪಾಠ ಕೇವಲ ಹಣ ಇರೋದ್ರಿಂದ ಎಲ್ಲಾ ಹೂಡಿಕೆದಾರು ಕೂಡ ಒಳ್ಳೆಯವರು ಎಂಬುದು ಸತ್ಯ ಅಲ್ಲ ಯಾರಿಗೆಲ್ಲ ಸ್ಟಾರ್ಟಪ್ ಗಳಲ್ಲಿ ಹೂಡಿಕೆ ಅನುಭವ ಉತ್ತಮವಾಗಿದೆ ಅವರ ಬಳಿ ಹೂಡಿಕೆ ಮಾಡೋದು ಉತ್ತಮ ಹೀಗಾಗಿ ಕೇವಲ ಹೂಡಿಕೆದಾರರಿಂದ ಮಾತ್ರ ಹಣವನ್ನ ಸಂಗ್ರಹ ಮಾಡಬೇಕು ಇದೆಲ್ಲವನ್ನು ಕೂಡ ಗಮನದಲ್ಲಿ ಇಟ್ಕೊಂಡು ಮುಂದುವರೆದರೆ ಒಳ್ಳೆಯ ಅಭಿವೃದ್ಧಿ ಿಯನ್ನ ನೋಡಬಹುದು ಆದರೆ ಇದು ಯಾವುದನ್ನು ಕೂಡ ಡನ್ಸೋ ಮಾಡದೆ ತನ್ನ ಪತನಕ್ಕೆ ತಾನೇ ಕಾರಣ ಆಯಿತು.