ಎಐ ಅಂದ್ರೆ ಕೃತಕ ಬುದ್ದಿಮತ್ತೆ ಮೂಲಕ ಜಗತ್ತನ್ನ ಆಳ್ತಿದ್ದ ಸಂಸ್ಥೆ ಅಂದ್ರೆ ಅದು ಓಪನ್ ಎಐ ಆದರೆ ಈಗ ಈ ವಲಯದಲ್ಲಿ ಮುಂಚೂಣಿಯಲ್ಲಿರೋದು ಟೆಕ್ ದೈತ್ಯ ಇಂಟರ್ನೆಟ್ ಜಗತ್ತಿನ ಅನಭಿಷಿಕ್ತ ದೊರೆ ಗೂಗಲ್ ಅದೇ ಗೂಗಲ್ ಸಿಇಓ ಹೇಳಿರುವ ಒಂದು ಮಾತು ಇದೀಗ ಇಡೀ ಜಗತ್ತಿನಲ್ಲೇ ಭಾರಿ ಆತಂಕ ಹುಟ್ಟು ಹಾಕಿದೆ ಹೌದು ಬಿಬಿಸಿ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಸಿಇಓ ಸುಂದರ್ ಪಿಚೈ ಆತಂಕಕಾರಿ ವಿಚಾರವನ್ನ ಹೊರಹಾಕಿದ್ದಾರೆ ಜಗತ್ತಿನಾದ್ಯಂತ ನಡೆಯುತ್ತಿರುವ ಎಐ ಹೂಡಿಕೆಯಲ್ಲಿ ಅವೈಜ್ಞಾನಿಕತೆ ಅಥವಾ ಅವಿವೇಕದ ಅಂಶಗಳಿವೆ ಅಂತ ಹೇಳಿದ್ದಾರೆ ಈ ಮೂಲಕ ಆರ್ಥಿಕ ತಜ್ಞರ ನಿದ್ದೆಗೆಡಿಸಿದ್ದಾರೆ ಹಾಗಾದರೆ ಏನಿದು ಎಐ ಬಬಲ್ ಸುಂದರ್ ಪಿಜೆ ನೀಡಿದ ಎಚ್ಚರಿಕೆಯಾದರೂ ಏನು ಇದರಿಂದ ಉದ್ಯೋಗಗಳಿಗೆ ಮತ್ತು ಜಾಗತಿಕ ಆರ್ಥಿಕತೆಗೆ ಏನಾಗುತ್ತೆ.
ಎಐ ಬಬಲ್ ಓಡೆದ್ರೆ ಕಾದಿದೆ ಕಷ್ಟ ಯಾರಿಗೂ ಇಲ್ಲ ವಿನಾಯಿತಿ ಕಳೆದ ಕೆಲವು ತಿಂಗಳುಗಳಲ್ಲಿ ಎಐ ಕಂಪನಿಗಳ ಮೌಲ್ಯ ರಾಕೆಟ್ ವೇಗದಲ್ಲಿ ಏರಿದೆ ಸಾವಿರಾರು ಕೋಟಿ ಡಾಲರ್ ಹಣವನ್ನ ಕಂಪನಿಗಳು ಈ ಕ್ಷೇತ್ರದಲ್ಲಿ ಸುರಿತಾ ಇವೆ. ಇದನ್ನ ಗಮನಿಸಿದರೆ ಇದೊಂದು ಬಬಲ್ ಅಥವಾ ಗುಳ್ಳೆಯಂತೆ ಕಾಣ್ತಾ ಇದೆ. ಈ ಗುಳ್ಳೆ ಯಾವಾಗ ಬೇಕಾದರೂ ಒಡಿಬಹುದು ಅನ್ನೋದು ತಜ್ಞರ ಆತಂಕ. ಇದೇ ವಿಚಾರವಾಗಿ ಮಾತನಾಡಿರೋ ಸುಂದರ್ ಪಿಚೈ ಸದ್ಯ ಎಐ ಕ್ಷೇತ್ರದಲ್ಲಿ ನಡೆಯುತ್ತಿರುವ ಹೂಡಿಕೆ ಅಸಮಾನ್ಯವಾಗಿದೆ ನಿಜ. ಆದರೆ ಅದರಲ್ಲಿ ಕೆಲವೊಂದು ಅವಿವೇಕದ ಅಂಶಗಳು ಇವೆ. ಒಂದು ವೇಳೆ ಈ ಎಐ ಬಬಲ್ ಒಡೆದರೆ ಅಂದ್ರೆ ಈ ಹೂಡಿಕೆಗಳೆಲ್ಲವೂ ನಷ್ಟದಲ್ಲಿ ಕೊನೆಗೊಂಡರೆ ಜಗತ್ತಿನ ಯಾವ ಕಂಪನಿಯು ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆಗೂಗಲ್ ಕೂಡ ಇದಕ್ಕೆ ಹೊರತಲ್ಲ ಅಂತ ಎಚ್ಚರಿಸಿದ್ದಾರೆ ಆದರೆ ಗೂಗಲ್ ತನ್ನದೇ ಆದ ಚಿಪ್ ಗಳು ಡೇಟಾ ಸೆಂಟರ್ಗಳು ಮತ್ತು ತಂತ್ರಜ್ಞಾನವನ್ನು ಹೊಂದಿರೋದ್ರಿಂದ ಈ ಬಿರುಗಾಳಿಯನ್ನು ಎದುರಿಸುವ ಶಕ್ತಿ ಹೊಂದಿದೆ ಅನ್ನೋದು ಪಿಚಯ ಅವರ ಅಚಲ ವಿಶ್ವಾಸ ಎಐಗೂ ಬರುತ್ತಾ 90ರ ದಶಕದ ಇಂಟರ್ನೆಟ್ ಹಣೆಬರಹ 1990ರ ದಶಕದ ಕೊನೆಯಲ್ಲಿ ಇಂಟರ್ನೆಟ್ ಬಂದಾಗಲೂ ಹೀಗೆ ನಡೆದಿತ್ತು ಎಲ್ಲರೂ ಕಣ್ಣು ಮುಚ್ಚಿ ಹಣ ಹೂಡಿಕೆ ಮಾಡಿದ್ರು ಕೊನೆಗೆ 2000 ಇಸವಿ ಹೊತ್ತಿಗೆ ಆ ಡಾಟ್ಕಾಂ ಬಬಲ್ ಒಡೆದಾಗ ಶೇರು ಮಾರುಕಟ್ಟೆ ಕುಸಿದಿತ್ತು.
ಸಾವಿರಾರು ಜನ ಕೆಲಸ ಕಳ್ಕೊಂಡರು ವಿಜಯ್ ಪ್ರಕಾರ ಈಗಿನ ಎಐ ಹೂಡಿಕೆ ಕೂಡ ಅದೇ ಹಾದಿಯಲ್ಲಿದೆ ಅಂದು ಇಂಟರ್ನೆಟ್ ಬಗ್ಗೆ ಅತಿಯಾದ ನಿರೀಕ್ಷೆ ಇತ್ತು ಇಂದು ಎಐ ಬಗ್ಗೆಯೂ ಅದೇ ಆಗ್ತಾ ಇದೆ ಎಐ ತಂತ್ರಜ್ಞ ಜ್ಞಾನ ಶ್ರೇಷ್ಠ ಅನ್ನೋದರಲ್ಲಿ ಸಂಶಯ ಇಲ್ಲ ಆದರೆ ಹೂಡಿಕೆಯ ಭರಾಟೆಯಲ್ಲಿ ಜನ ಎಚ್ಚರ ತಪ್ಪುತಿದ್ದಾರೆ ಅಂತ ಅವರು ಹೇಳ್ತಿದ್ದಾರೆ ಕುತೂಹಲಕಾರಿ ಸಂಗತಿ ಅಂದ್ರೆ ಅಮೆರಿಕಾದ ಅತಿ ದೊಡ್ಡ ಬ್ಯಾಂಕ್ ಜೆಪಿ ಮಾರ್ಗನ್ ಮುಖ್ಯಸ್ಥ ಜೆಮಿ ಡೈಮನ್ ಕೂಡ ಇತ್ತೀಚಿಗೆ ಇದೇ ಎಚ್ಚರಿಕೆ ನೀಡಿದ್ರು ಕರೆಂಟ್ ಕುಡಿಯುತ್ತೆ ಎಐ ಹವಮಾನ ಗುರಿಮರೆತ ಗೂಗಲ್ ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ ಎಐ ಗೆ ಬೇಕಾಗುವ ಅಗಾದ ಪ್ರಮಾಣದ ವಿದ್ಯುತ್ ಕಳೆದ ವರ್ಷ ಜಗತ್ತಿನ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡ 1.5ರಷ್ಟು ಐದರಷ್ಟು ಕೇವಲ ಎಐ ತಂತ್ರಜ್ಞಾನವೇ ಬಳಸಿಕೊಂಡಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರೋ ಪಿಚ್ಚೆ ಎಐ ಅಭಿವೃದ್ಧಿಗೆ ಬೇಕಾದಷ್ಟು ಇಂಧನ ಹೊಂದಿಸಲು ನಾವು ಹೆಣಗಾಡ್ತಾ ಇದ್ದೀವಿ ಅಂತ ಒಪ್ಪಿಕೊಂಡಿದ್ದಾರೆ.
ಇದರಿಂದಾಗಿ 2030ರ ವೇಳೆಗೆ ಶೂನ್ಯ ಇಂಗಾಲ ಅಥವಾ ನೆಟ್ ಜೀರೋ ಸಾಧಿಸಬೇಕೆಂಬ ಗೂಗಲ್ ನ ಗುರಿ ತಡವಾಗಲಿದೆ. ಪರಿಸರಕ್ಕಿಂತ ಸದ್ಯಕ್ಕೆ ತಂತ್ರಜ್ಞಾನವೇ ಮುಖ್ಯ ಅನ್ನೋ ಹಂತಕ್ಕೆ ಕಂಪನಿಗಳು ಬಂದು ನಿಂತಿವೆ. ಇಷ್ಟೆಲ್ಲದರ ನಡುವೆಯೂಗೂಗಲ್ ಬ್ರಿಟನ್ ನಲ್ಲಿ ಸುಮಾರು 50ಸಾ ಕೋಟಿ ರೂಪಾಯಿ ಹೂಡಿಕೆ ಮಾಡ್ತಾ ಇದೆ. ಅಲ್ಲಿ ಹೊಸ ಡೇಟಾ ಸೆಂಟರ್ ಮತ್ತು ಸಂಶೋಧನಾ ಕೇಂದ್ರಗಳನ್ನ ಸ್ಥಾಪಿಸಲು ಮುಂದಾಗಿದೆ. ಸಿಇಓ ಕುರ್ಚಿಗೂ ಬಂತು ಕುತ್ತು ಸುಂದರ್ ಪಿಜ್ಜೈ ಕೆಲಸಕ್ಕೆ ಸಂಚಕಾರ. ಎಲ್ಲಕ್ಕಿಂತ ಸ್ವಾರಸ್ಯಕರ ಮತ್ತು ಭಯಾನಕ ವಿಚಾರ ಅಂದ್ರೆ ಎಐ ನಿಂದ ಕೇವಲ ಸಣ್ಣ ಪುಟ್ಟ ಉದ್ಯೋಗಗಳಲ್ಲ ಕುದ್ದು ಸಿಇಓ ಕೆಲಸಕ್ಕೂ ಕುತ್ತು ಬರಬಹುದು ಹೌದು ಸಂದರ್ಶನದಲ್ಲಿ ಮಾತನಾಡುತ್ತಾ ಪಿಚ್ಚೈ ಮುಂದೊಂದು ದಿನ ಸಿಇಓ ಮಾಡುವ ಕೆಲಸವನ್ನು ಎಐ ಮಾಡಬಹುದು.
ವಾಸ್ತವದಲ್ಲಿ ಸಿಇಓ ಮಾಡುವ ಕೆಲಸವೇ ಎಐ ಗೆ ಮಾಡಲು ಅತ್ಯಂತ ಸುಲಭದ ಕೆಲಸವಿರಬಹುದು ಅಂತ ಬಾಂಬ್ ಸಿಡಿಸಿದ್ದಾರೆ. ಡೇಟಾ ವಿಶ್ಲೇಷಣೆ ವರದಿಗಳ ಪರಿಶೀಲನೆ ಮತ್ತು ತೀರ್ಮಾನಗಳನ್ನ ತೆಗೆದುಕೊಳ್ಳುವಲ್ಲಿ ಎಐ ಮನುಷ್ಯರಿಗಿಂತ ವೇಗವಾಗಿದೆ ಆದರೆ ನಾಯಕತ್ವ ಗುಣ ನಂಬಿಕೆ ಗಳಿಸೋದು ಮತ್ತು ನೈತಿಕ ನಿರ್ಧಾರಗಳನ್ನ ಕೈಗೊಳ್ಳುವಲ್ಲಿ ಮನುಷ್ಯರೇ ಬೇಕು ಅನ್ನೋದು ಸಮಾಧಾನದ ಸಂಗತಿ ಆದರೂ ಮುಂದಿನ 12 ತಿಂಗಳುಗಳಲ್ಲಿ ಎಐ ನಮ್ಮ ಕೆಲಸದ ರೀತಿಯನ್ನೇ ಬದಲಿಸಲಿದೆ ಅನ್ನೋದು ಪಿಚೈ ಅವರ ಭವಿಷ್ಯವಾಣಿ ಒಟ್ಟಿನಲ್ಲಿ ಎಐ ಅನ್ನೋದು ಒಂದು ಅದ್ಭುತ ತಂತ್ರಜ್ಞಾನ ನಿಜ ಆದರೆ ಅದರ ಹೆಸರಿನಲ್ಲಿ ನಡೀತಾ ಇರೋ ಕೋಟ್ಯಂತರ ಡಾಲರ್ ಜೂಜು ಜಾಗತಿಕ ಆರ್ಥಿಕತೆಯನ್ನ ಯಾವ ಪ್ರಪಾತಕ್ಕೆ ತಳ್ಳುತ್ತೋ ಕಾದು ನೋಡಬೇಕಿದೆ ಎಐ ನಿಂದ ಮನುಷ್ಯರ ಕೆಲಸಕ್ಕೆ ಕುತ್ತು ಬರುತ್ತಾ ಅಥವಾ ಸಿಇಓ ಕೆಲಸವನ್ನು ಎಐ ಕಸಿದುಕೊಳ್ಳುತ್ತಾ


