ಭಾರತ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನ ಸೃಷ್ಟಿಸೋಕೆ ಮುಂದಾಗಿದೆ ಬ್ಯಾಂಕಿಂಗ್ನಿಂದ ವೈದ್ಯಕೀಯದವರೆಗೂ ಸಾರಿಗೆಯಿಂದ ಡಿಫೆನ್ಸ್ ವರೆಗೂ ಎಲ್ಲೆಡೆ ಆವರಿಸಿಕೊಂಡಿರೋ ಸದ್ಯ ಮನುಷ್ಯನ ಕೆಲಸವನ್ನ ಕಸಿದುಕೊಳ್ಳುತ್ತಿರೋ ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಪಠ್ಯಕ್ರಮದಲ್ಲಿ ಅಳವಡಿಸೋಕೆ ಸಜ್ಜಾಗಿದೆ ಕೃತಕ ಬುದ್ಧಿಮತ್ತೆಯನ್ನ ಪಠ್ಯಕ್ರಮದ ಭಾಗವಾಗಿಸುವ ಬಗ್ಗೆ ಕೇಂದ್ರ ಶಿಕ್ಷಣ ಇಲಾಖೆ ಶಿಕ್ಷಣ ತಜ್ಞರೊತ್ತಿಗೆ ಸಮಾಲೋಚನೆ ಮಾಡಿದೆ ಮೂರನೇ ತರಗತಿಯಿಂದಲೇ ಮಕ್ಕಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಕಂಪ್ಯೂಟೇಷನಲ್ ಥಿಂಕಿಂಗ್ ಬಗ್ಗೆ ಕಲಿಸ್ತೀವಿ ಅಂತ ಘೋಷಿಸಿದೆ ಮುಂದಿನ ಶೈಕ್ಷಣಿಕ ವರ್ಷ ದಿಂದಲೇ ಈ ವ್ಯವಸ್ಥೆ ಜಾರಿಗೆ ಬರುತ್ತೆ ಅಂದಿದೆ ಹಾಗಿದ್ರೆ ಇದನ್ನ ಇಂಪ್ಲಿಮೆಂಟ್ ಮಾಡೋಕೆ ಸರ್ಕಾರ ಏನು ಕ್ರಮ ತಗೋತಿದೆ ಇದಕ್ಕೆ ಶಿಕ್ಷಣ ತಜ್ಞರ ಅಭಿಪ್ರಾಯವೇನು ಮಕ್ಕಳಿಗೆ ಎಐ ಕಲಿಸೋದು ಅಷ್ಟು ಸುಲಭನ ಇದರಿಂದ ಭಾರತದ ಶಿಕ್ಷಣ ವ್ಯವಸ್ಥೆ ಬದಲಾಗುತ್ತಾ.
ಮೂರನೇ ತರಗತಿಯಿಂದ ಎಐ ಶಿಕ್ಷಣ ಎಜುಕೇಶನ್ಗೆ ಮೇಜರ್ ಸರ್ಜರಿ ಹೌದು ಸ್ನೇಹಿತರೆ ತಂತ್ರಜ್ಞಾನ ಬೆಳೆದಂತೆ ಜಗತ್ತು ಅಡ್ವಾನ್ಸ್ ಆಗ್ತಿದ್ದಂತೆ ಪ್ರತಿಯೊಂದು ಕ್ಷೇತ್ರವನ್ನ ಎಐ ಆವರಿಸಿಕೊಳ್ಳುತ್ತಿದೆ. ಗುರು ಶಿಷ್ಯ ಪರಂಪರೆ ಮರೆಯಾಗುವಷ್ಟು ಶಿಕ್ಷಣ ವ್ಯವಸ್ಥೆ ಬದಲಾಗ್ತಿದೆ. ಈ ನಡುವೆ ಭಾರತ ಕೂಡ ತನ್ನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸೋಕೆ ಸಜ್ಜಾಗಿದೆ. ಫೌಂಡೇಶನ್ ಲೆವೆಲ್ನಲ್ಲಿ ಮಕ್ಕಳಿಗೆ ಎಐ ಬಗ್ಗೆ ಹೇಳ್ತೀವಿ ಅಂತ ಘೋಷಣೆ ಮಾಡಿದೆ ಅಂದ್ರೆ ಶಿಕ್ಷಕರನ್ನ ಚೇಂಜ್ ಮಾಡಲ್ಲ. ಶಿಕ್ಷಣದಲ್ಲಿ ಎಐ ಪಠ್ಯಕ್ರಮ ಅಳವಡಿಸ್ತೀವಿ ಅಂದಿದೆ. ಮೂರನೇ ತರಗತಿಯಿಂದ ಎಲ್ಲಾ ಶಾಲೆಗಳಲ್ಲಿ ನಾವು ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟೇಷನಲ್ ಥಿಂಕಿಂಗ್ ಬಗ್ಗೆ ಹೇಳ್ತೀವಿ ಅಂತ ಹೇಳಿದೆ. ಕೇಂದ್ರ ಶಿಕ್ಷಣ ಇಲಾಖೆ ಅಡಿಬರೋ ದ ಡಿಪಾರ್ಟ್ಮೆಂಟ್ ಆಫ್ ಸ್ಕೂಲ್ ಎಜುಕೇಶನ್ ಅಂಡ್ ಲಿಟರಸಿ ಡಿಓಎಸ್ ಅಂಡ್ ಎಲ್ ಈ ಘೋಷಣೆ ಮಾಡಿದೆ. ಈ ಪಠ್ಯಕ್ರಮ ನ್ಯಾಷನಲ್ ಎಜುಕೇಶನ್ ಪಾಲಿಸಿ ಎನ್ಇಪಿ ಮತ್ತು ನ್ಯಾಷನಲ್ ಕರಿಕ್ಯುಲಂ ಫ್ರೇಮ್ ವರ್ಕ್ ಫಾರ್ ಎಜುಕೇಶನ್ ಎನ್ಸಿ ಎಫ್ಎಸ್ ಗೈಡ್ಲೈನ್ಸ್ ಗಳಿಗೆ ಒಳಪಟ್ಟಿರುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಸದ್ಯ ಇರೋ ಪಠ್ಯಕ್ರಮದ ಜೊತೆಗೆ ಇದನ್ನ ಹೇಳ್ತೀವಿ. ಭವಿಷ್ಯದಲ್ಲಿ ಉದ್ಯೋಗ ತಂತ್ರಜ್ಞಾನ ಮತ್ತು ಸದ್ಯ ಮಾನವನ ಅವಿಭಾಜ್ಯ ಅಂಗವಾಗಿರೋ ಡಿಜಿಟಲ್ ಜೀವನದ ಬಗ್ಗೆ ಮಕ್ಕಳಿಗೆ ಈಗಲೇ ಅಡಿಪಾಯ ಹಾಕೋಕೆ ಇದು ತುಂಬಾ ಇಂಪಾರ್ಟೆಂಟ್ ಅಂದಿದೆ.
ಈ ಎಐ ಮತ್ತು ಕಂಪ್ಯೂಟೇಷನಲ್ ಥಿಂಕಿಂಗ್ ನ ಪಠ್ಯಕ್ರಮ ಡಿಸೈನ್ ಮಾಡೋಕೆ ಸಿಬಿಎಸ್ಸ ಪಠ್ಯಪುಸ್ತಕ ಸಮಿತಿ ಎನ್ಸಿಆರ್ಟಿ ಕೆವಿಎಸ್ ಕೇಂದ್ರೀಯ ವಿದ್ಯಾಲಯ ಸಮಿತಿ ಎನ್ವಿಎಸ್ ನವೋದಯ ವಿದ್ಯಾಲಯ ಸಮಿತಿ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಜುಕೇಶನಲ್ ಬೋರ್ಡ್ಗಳಿಗೆ ಸಪೋರ್ಟ್ ಮಾಡ್ತೀವಿ ಅಂದಿದೆ. ಈ ಶಿಕ್ಷಣ ಕಲಿಕೆ ಚಿಂತನೆ ಮತ್ತು ಬೋಧನೆಯನ್ನು ಪರಿಕಲ್ಪನೆಯನ್ನ ಬಲಪಡಿಸುತ್ತೆ. ಕಾಂಪ್ಲೆಕ್ಸ್ ಚಾಲೆಂಜ್ ಗಳನ್ನ ಸಾಲ್ವ್ ಮಾಡೋಕೆ ಹೆಲ್ಪ್ ಆಗಲಿದೆ. ಎಐ ಕೂಡ ಬೇಸಿಕ್ ಸ್ಕಿಲ್ ಆಗಬೇಕು ಅಂತ ಹೇಳಿದೆ. ತಜ್ಞರ ಜೊತೆ ಕೇಂದ್ರ ಸರ್ಕಾರ ಚರ್ಚೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ವ್ಯವಸ್ಥೆ ಜಾರಿ. ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನ ಜಾರಿ ಮಾಡೋಕು ಮೊದಲು ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ಕೂಡ ಮಾಡಿದೆ. ಸಿಬಿಎಸ್ಸ ಎನ್ಸಿಆರ್ಟಿ ಕೆವಿಎಸ್ ಎನ್ಬಿಎಸ್ ಎಜುಕೇಶನ್ ಬೋರ್ಡ್ ಸೇರಿ ಇತರ ಇಲಾಖೆಗಳ ತಜ್ಞರೊಂದಿಗೆ ಡಿಸ್ಕಸ್ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ವ್ಯವಸ್ಥೆ ಜಾರಿಗೆ ತರೋಕೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಕಸರತ್ತು ನಡೆಸುತ್ತಿದೆ. ಶಿಕ್ಷಣದಲ್ಲಿ ಎಐ ಮತ್ತು ಕಾಂಪಿಟೇಷನಲ್ ಥಿಂಕಿಂಗ್ ಅಳವಡಿಸುವುದರ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಿದೆ.
ಈಗಾಗಲೇ ಪ್ರತ್ಯೇಕವಾಗಿ ಸಿಬಿಎಸ್ಸಿ ಬೋರ್ಡ್ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ತಜ್ಞರ ಸಮಿತಿ ರಚಿಸಿದೆ ಮದ್ರಾಸ್ ಐ ಐ ಟಿಯ ಪ್ರೊಫೆಸರ್ ಕಾರ್ತಿಕ್ ರಾಮನ್ ಈ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಕಾಂಪಿಟೇಷನಲ್ ಥಿಂಕಿಂಗ್ ಎ ಐ ಮತ್ತು ಸಿಟಿ ಪಠ್ಯಕ್ರಮ ರಚಿಸೋಕೆ ಈ ಸಮಿತಿ ರಚಿಸಲಾಗಿದೆ. ಡಿಸೆಂಬರ್ ಒಳಗೆ ಲರ್ನಿಂಗ್ ಮೆಟೀರಿಯಲ್ಸ್ ಶಿಕ್ಷಕರಿಗೂ ನಡೆಯಲಿದೆ ಟ್ರೈನಿಂಗ್ ಇನ್ನು ಯುದ್ಧೋಪಾದಿಯಲ್ಲಿ ಈ ವ್ಯವಸ್ಥೆ ಜಾರಿಗೆ ತರೋಕೆ ಕೇಂದ್ರ ಸರ್ಕಾರ ನೋಡ್ತಿದೆ 2026 27ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಕಾಂಪ್ಯೂಟೇಷನಲ್ ಥಿಂಕಿಂಗ್ ಪಠ್ಯಕ್ರಮಕ್ಕೆ ಸೇರೋದ್ರಿಂದ ಈ ವರ್ಷದ ಡಿಸೆಂಬರ್ ಒಳಗೆ ಇದನ್ನ ಕಲಿಸೋಕೆ ಬೇಕಾಗುವ ಸಾಮಗ್ರಿಗಳೆಲ್ಲ ರೆಡಿಯಾಗಲಿವೆ. ಹ್ಯಾಂಡ್ ಬುಕ್ಸ್ ರಿಸೋರ್ಸ್ ಮೆಟೀರಿಯಲ್ಸ್ ಮತ್ತು ಡಿಜಿಟಲ್ ಟೂಲ್ಸ್ ಗಳು ಸಜ್ಜಾಗಲಿವೆ. ಇನ್ನು ಈ ಪಠ್ಯಕ್ರಮ ಕೂಡ ಶಾಲಾ ಅವಧಿಯೊಳಗೆ ಸಂಯೋಜನೆ ಆಗಲಿದೆ. ಅಂದ್ರೆ ಆಯಾ ಶಾಲೆಗಳು ನಿಗದಿತ ಟೈಮ್ ಫ್ರೇಮ್ ವರ್ಕ್ ನಡಿ ಈ ಸಿಲಬಸ್ ಗೆ ಎಷ್ಟು ಟೈಮ್ ಕೊಡಬೇಕು ಮತ್ತು ಯಾವ ಯಾವ ರಿಸೋರ್ಸ್ ಬಳಸಬೇಕು ಅನ್ನೋದನ್ನ ಪ್ಲಾನ್ ಮಾಡಿಕೊಳ್ಳಲಿದೆ. ಇನ್ನು ಪೆನ್ನು ಪೇಪರ್ ಕಪ್ಪು ಹಲಗೆ ಹಿಡಿದು ಮಕ್ಕಳಿಗೆ ಬೋಧಿಸಿದ ಶಿಕ್ಷಕರಿಗೆ ಮಕ್ಕಳಿಗೆ ಎಐ ಬಗ್ಗೆ ಕಲಿಸಬೇಕು ಅನ್ನೋ ಬಗ್ಗೆ ವಿಶೇಷ ಟ್ರೈನಿಂಗ್ ಕೂಡ ನೀಡಲಾಗುತ್ತೆ ಅಂತ ಸರ್ಕಾರ ಹೇಳಿದೆ. ನಿಸ್ತಾ ಪ್ರೋಗ್ರಾಮ್ ಮತ್ತು ಇತರೆ ಸಂಸ್ಥೆಗಳ ಮೂಲಕ ಮಕ್ಕಳಿಗೆ ಏನೇನು ಕಲಿಸಬೇಕು ಅನ್ನೋ ಬಗ್ಗೆ ನಿಗದಿತ ಟೈಮ್ನಲ್ಲಿ ಟ್ರೈನಿಂಗ್ ಕೊಡ್ತೀವಿ ಅಂತ ಹೇಳಿದೆ. ಯಾವ ಯಾವ ದೇಶಗಳು ಶಿಕ್ಷಣದಲ್ಲಿ ಎಐ ಬಗ್ಗೆ ಕಲಿಸ್ತಿವೆ. ಇನ್ನು ಸದ್ಯ ಭಾರತ ಕಲಿಸೋಕೆ ಮುಂದಾಗ್ತಿರೋ ಈ ಶಿಕ್ಷಣ ವ್ಯವಸ್ಥೆಯನ್ನ ಆಲ್ರೆಡಿ ಹಲವು ದೇಶಗಳು ಅಳವಡಿಸಿಕೊಂಡಿವೆ.
ಸೆಪ್ಟೆಂಬರ್ 2025 ರಿಂದ ಚೀನಾ ತನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಪಠ್ಯಕ್ರಮದಲ್ಲಿ ಎಐ ಯನ್ನ ಕಡ್ಡಾಯ ವಿಷಯವನ್ನಾಗಿಸಿದೆ. ಇತ್ತ ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ಕಿಂಡರ್ ಗಾರ್ಡನ್ ನಿಂದ ಹಿಡಿದು 12ನೇ ತರಗತಿವರೆಗೆ ಎಐ ವಿಷಯವನ್ನ ಪಠ್ಯಕ್ರಮದ ಭಾಗವಾಗಿಸಿದೆ. ಇತ್ತ ಯುರೋಪ್ ಕಂಟ್ರಿ ಎಸ್ತೋನಿಯಾ ಎಐ ಲೀಪ್ ಅನ್ನೋ ಇನಿಷಿಯೇಟಿವ್ ಲಾಂಚ್ ಮಾಡಿ ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಎಐ ಬಗ್ಗೆ ಕಲಿಸ್ತಿದೆ. ಇದೇ ಇನಿಷಿಯೇಟಿವ್ ಅನ್ನ 2027ರ ವೇಳೆಗೆ ಕಿರಿಯ ವಿದ್ಯಾರ್ಥಿಗಳಿಗೂ ಕೂಡ ವಿಸ್ತರಿಸುತ್ತೀವಿ ಅಂದಿದೆ. ಯುನೆಸ್ಕೋ ಪ್ರಕಾರ ಸದ್ಯ 11 ದೇಶಗಳು ಎಐ ಪಠ್ಯಕ್ರಮವನ್ನ ಅಭಿವೃದ್ಧಿ ಪಡಿಸಿ ಅಧಿಕೃತವಾಗಿ ಅನುಮೋದನೆ ನೀಡಿವೆ. ನಾಲ್ಕು ದೇಶಗಳು ಎಐ ಸಿಲಬಸ್ ಗೆ ಅಳವಡಿಸೋ ಕೆಲಸ ಮಾಡ್ತಿದೆ. ಈಜಿ ಇಲ್ಲ ಎಐ ಕಲಿಕೆ ಬಗ್ಗೆ ತಜ್ಞರ ತಕರಾರು ಇನ್ನು ಜಗತ್ತಿನಲ್ಲಿ ಯಾವುದೇ ವ್ಯವಸ್ಥೆ ಬಂದರು ಅದಕ್ಕೆ ಕೆಲ ಸವಾಲುಗಳು ಪರವಿರೋಧ ಅಭಿಪ್ರಾಯ ಇದ್ದೆ ಇರುತ್ತೆ. ಹಾಗೇನೇ ಈ ವ್ಯವಸ್ಥೆ ಬಗ್ಗೆ ಕೂಡ ಕೆಲವರಿಂದ ಅಪಸ್ವರ ಕೇಳಿ ಬಂದಿದೆ. ಈ ವ್ಯವಸ್ಥೆಯ ಕಲಿಕೆ ಮಕ್ಕಳಲ್ಲಿ ನೈತಿಕ ಮೌಲ್ಯವನ್ನ ಬೆಳೆಸುತ್ತಾ ಅನ್ನೋ ಪ್ರಶ್ನೆ ಮಾಡಲಾಗ್ತಿದೆ. ಜೊತೆಗೆ ಮಕ್ಕಳು ಪ್ರಶ್ನೋತ್ತರಗಳಿಗೆ ಹೆಚ್ಚಾಗಿ ಎಐ ಮೇಲೆ ಅವಲಂಬನೆ ಆಗಬಹುದು. ಅದು ಮಕ್ಕಳ ಚಿಂತನೆ ಮತ್ತು ಸಮಸ್ಯೆ ಪರಿಹರಿಸೋ ಕೌಶಲ್ಯಗಳ ಬೆಳವಣಿಗೆಯನ್ನ ಕುಗ್ಗಿಸಬಹುದು. ಕೆಲವೊಂದು ಸಲ ಎಐ ತಪ್ಪು ಮಾಹಿತಿ ಕೂಡ ಕೊಡಬಹುದು. ಮಕ್ಕಳು ಶಿಕ್ಷಕರೊಂದಿಗೆ ಚರ್ಚಿಸುವುದನ್ನ ಹ್ಯೂಮನ್ ಇಂಟರಾಕ್ಷನ್ ಕಡಿಮೆ ಮಾಡಬಹುದು. ಇದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರತ್ಯೇಕತೆ ಆಗಬಹುದು ಅಂತ ಅನೇಕ ಶಿಕ್ಷಣ ತಜ್ಞರು ಹೇಳ್ತಿದ್ದಾರೆ. ಇನ್ನು ರಿಮೋಟ್ ಏರಿಯಾ ಹಾಗೂ ಕುಗ್ರಾಮದಲ್ಲಿರೋ ಶಾಲೆಗಳಲ್ಲಿ ಸರಿಯಾದ ಇಂಟರ್ನೆಟ್ ವ್ಯವಸ್ಥೆ ಕೂಡ ಇರಲ್ಲ.
ಸರಿಯಾದ ಇನ್ಫ್ರಾಸ್ಟ್ರಕ್ಚರ್ ಕೂಡ ಇರಲ್ಲ. ಅಲ್ಲಿ ಎಐ ಶಿಕ್ಷಣವನ್ನ ಹೇಗೆ ಮಕ್ಕಳಿಗೆ ಕಲಿಸೋದು ಅನ್ನೋ ಪ್ರಶ್ನೆ ಮುಂದಿಡಲಾಗುತ್ತಿದೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಅಂತ ಕೂಡ ಕೆಲವರು ಹೇಳ್ತಿದ್ದಾರೆ. ಆದರೆ ಮತ್ತೊಂದು ಕಡೆ ಈ ವ್ಯವಸ್ಥೆಯಿಂದ ಮಕ್ಕಳು ತಂತ್ರಜ್ಞಾನದ ಬಗ್ಗೆ ಬೇಗ ಕಲಿಯಬಹುದು. ವಿಭಿನ್ನ ಮತ್ತು ವಿಶೇಷ ಸ್ಕಿಲ್ ಗಳನ್ನ ಶಿಕ್ಷಣದ ಅಡಿಪಾಯದಿಂದಲೇ ಮನನ ಮಾಡಿಕೊಳ್ಳಬಹುದು ಅಂತಾರೆ. ಹಾಗೆ ಈ ವ್ಯವಸ್ಥೆ ಬಗ್ಗೆ ನಮಗೆ ಕಳವಳ ಕೂಡ ಇದೆ ಅಂತಾರೆ. ಎಲ್ಲಾ ಶಿಕ್ಷಕರು ಈ ವ್ಯವಸ್ಥೆಯನ್ನ ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸ್ತಾರೆ ಈ ವ್ಯವಸ್ಥೆಗೆ ಮಕ್ಕಳು ಜೋತು ಬಿಡಬಹುದು ಅಂದ್ರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಕೆ ಇದೇ ವ್ಯವಸ್ಥೆಯನ್ನ ಹೆಚ್ಚಾಗಿ ಯೂಸ್ ಮಾಡಬಹುದು ಇದರಿಂದ ಮಕ್ಕಳ ಚಿಂತನಾ ಶಕ್ತಿ ಕಡಿಮೆ ಆಗಬಹುದು ಅನ್ನೋ ವಾದ ಮಾಡ್ತಾರೆ ಹೀಗೆ ಹಲವು ಅಭಿಪ್ರಾಯಗಳನ್ನ ಮುಂದಿಡಲಾಗುತ್ತೆ ಆದರೆ ಬದಲಾಗ್ತಿರೋ ಸಮಯಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆ ಕೂಡ ಚೇಂಜ್ ಆಗಬೇಕು ಎಐ ಸದ್ಯ ಇಡೀ ಜಗತ್ತನ್ನ ಆಳ್ತಿದೆ ಹೀಗಾಗಿ ಅಂತ ಕಲಿಕೆಯನ್ನ ನಮ್ಮ ಮಕ್ಕಳಿಗೆ ನೀಡದೆ ಇದ್ದರೆ ಶೈಕ್ಷಣಿಕವಾಗಿ ತಾಂತ್ರಿಕವಾಗಿ ನಾವು ಹಿಂದುಳಿದು ಬಿಡ್ತೀವಿ ಹೀಗಾಗಿ ಎಐ ಕಲಿಯೋದು ಅನಿವಾರ್ಯ.


