ಕಾಲ ಉರುಳುತ್ತಾ ಸಾಗಿದಂತೆ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಮಾತಿನಂತೆ ತಂತ್ರಜ್ಞಾನ ವ್ಯಾಪಿಸಿಕೊಳ್ಳದ ಕ್ಷೇತ್ರನೇ ಇಲ್ಲ ಎತ್ತಿಚ್ಚಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜಗತ್ತನ್ನ ಆಳ್ತಾ ಇರುವುದಂತೂ ಸತ್ಯ ಪ್ರತಿಯೊಬ್ಬರು ಪ್ರತಿಯೊಂದು ಕಂಪನಿಯು ಒಂದಲ್ಲ ಒಂದು ಕೆಲಸಕ್ಕೆ ಕೃತಕ ಬುದ್ಧಿಮತ್ತೆಗೆ ಮೊರೆ ಹೋಗ್ತಿದ್ದ ದಾರೆ ಇಂತಹ ಸಮಯದಲ್ಲಿ ತಮ್ಮ ಜಾಬ್ ಉಳಿಸಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆ ಎಲ್ಲರನ್ನ ಕಾಡ್ತಾ ಇದೆ ಕೃತಕ ಬುದ್ಧಿ ಮತ್ತೆ ಚಾಲ್ತಿಗೆ ಬಂದ ಬಳಿಕ ಪ್ರತಿ ಕಂಪನಿಗಳು ಸ್ಮಾರ್ಟ್ ಆಗ್ತಾ ಇವೆ ಜನರ ಬದಲಿಗೆ ಎಐಎನ್ನೇ ಬಳಸಿಕೊಳ್ಳುತ್ತಿವೆ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಗೊಳಿಸುತ್ತಿದ್ದಾರೆ ಹಾಗಾಗಿ ಉದ್ಯೋಗಿಗಳಿಗೆ ಇದೊಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ ನಿರುದ್ಯೋಗಿಗಳಿಗೆ ಮುಂದೆ ಯಾವ ಕೆಲಸ ಮಾಡೋದು ಎಲ್ಲಾದರೂ ಒಂದು ಕಡೆ ಜಾಬ್ ಸಿಗಬಹುದಾ ಅನ್ನುವ ಆತಂಕ ಕೂಡ ಮೂಡ್ತಾ ಇದೆ ಐಟಿ ಫೀಲ್ಡ್ಗಳಲ್ಲೂ ಜಾಬ್ ಗ್ಯಾರಂಟಿ ಇಲ್ವಾ ಎಐ ಜನರ ಸ್ಥಾನಗಳನ್ನ ಹೇಗೆ ಕಸಿದುಕೊಳ್ಳುತ್ತಾ ಇದೆ ಇದಕ್ಕೆ ಪರಿಹಾರಗಳೇನು ನಿರುದ್ಯೋಗಿಗಳು ಹೇಗೆ ಆತ್ಮಸ್ಥೈರ್ಯವನ್ನ ತುಂಬಿಸಿಕೊಳ್ಳಬಹುದು ಎಲ್ಲ ಕುರಿತಾದ ಸಂಪೂರ್ಣ ಮಾಹಿತಿಯನ್ನ ತೋರಿಸ್ತೀವಿ ನೋಡಿ ಮಹಾಮಾರಿ ಕೊರೋನಾ ಒಕ್ಕರಿಸಿದ ನಂತರ ಒಂದಷ್ಟು ಮಂದಿ ಉದ್ಯೋಗ ಕಳೆದುಕೊಂಡರು ಹೇಳದೆ ಕೇಳದೆ ಬಂದ ಕೊರೋನಾ ಅದೆಷ್ಟೋ ಉದ್ಯೋಗಿಗಳ ಪಾಲಿಗೆ ಶಾಪವಾಯಿತು ಕೊರೋನಾ ಕಾಲಘಟ್ಟ ಮುಗಿದು ಜನಜೀವನ ಮಾಮೂಲಿ ಹಂತಕ್ಕೆ ತಲುಪುತ್ತದೆ ಅನ್ನುವಾಗ ಹೊಸದೊಂದು ಸಮಸ್ಯೆ ಶುರುವಾಗಿದೆ.
ಐಟಿ ಕಂಪನಿಗಳಲ್ಲಿ ಸೈಲೆಂಟ್ಆಗಿ ಆಫ್ಗಳು ನಡೀತಾ ಇದೆ ಸೈಲೆಂಟ್ ಆಫ್ ಅಂದರೆ ಹೆಚ್ಚಿನ ಮಾಹಿತಿಗಳನ್ನ ನೀಡದೆ ತಕ್ಷಣಕ್ಕೆ ಕೆಲಸದಿಂದ ವಜಾ ಮಾಡೋದು ಇದು ಈಗ ಐಟಿ ಕಂಪನಿಗಳಲ್ಲಿ ಸರ್ವೇ ಸಾಮಾನ್ಯ ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಎರಡು ಮೂರು ವರ್ಷಗಳಿಂದ ಮನೆಮಾಡಿದೆ ಯಾಕಂದರೆ 2023 ಮತ್ತು 2024 ರಲ್ಲಿ ಸುಮಾರು 25000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಪ್ರಸಕ್ತ ವರ್ಷದಲ್ಲಿ ಈ ಸಂಖ್ಯೆಯು ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಅಂತ ವರದಿಯೊಂದು ಹೇಳಿದೆ ಕಂಪನಿಗಳ ವ್ಯವಹಾರಿಕ ಬೆಳವಣಿಗೆಗೆ ಮತ್ತು ದಿನನಿತ್ಯದ ಇಂಜಿನಿಯರಿಂಗ್ ಕಾರ್ಯಗಳನ್ನ ಎಐ ತಂತ್ರಜ್ಞಾನವೇ ನಿರ್ವಹಿಸುತ್ತಾ ಇರೋದು ಇದಕ್ಕೆ ಮೂಲ ಕಾರಣ ಅಂತ ಉದ್ಯಮತಜ್ಞ ರು ತಿಳಿಸಿದ್ದಾರೆ ಅಮೆರಿಕಾದ ಎಚ್ಎಫ್ಎಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹಾಗೂ ಜಗತ್ತಿನ ಪ್ರಧಾನ ವಿಶ್ಲೇಷಕ ಫಿಲ್ ಫ್ರಸ್ಟ್ ಕಂಪನಿ ಕಾರ್ಯಕ್ಷಮತೆಗೆ ಬೇಕಾಗುವ ವ್ಯವಸ್ಥೆ ಮತ್ತು ವೃತ್ತಿ ಪ್ರಗತಿಗಾಗಿ ಕಡಿಮೆ ನೇಮಕಾತಿ ಸೈಲೆಂಟ್ ಆಫ್ಗಳು ಈಗ ವ್ಯಾಪಕವಾಗಿವೆ ಈ ವರ್ಷ ದೊಡ್ಡ ಕಂಪನಿಗಳಲ್ಲಿ 10ಸಾವಿರ ಹುದ್ದೆಗಳನ್ನ ಸದ್ದಿಲ್ಲದೆ ಹಂತಹಂತವಾಗಿ ತೆಗೆದು ಹಾಕಲಾಗಿದೆ ಎಂದಿದ್ದಾರೆ ಸೈಲೆಂಟ್ಆಗಿ ಮಾಡ್ತಾ ಇರುವ ಆಫ್ಗಳು ಉದ್ಯೋಗಿಗಳಲ್ಲಿ ಭವಿಷ್ಯದ ಬಗ್ಗೆ ಭಯ ಸೃಷ್ಟಿಸಿದೆ. ಕಂಪನಿ ಮ್ಯಾನೇಜರ್ ಇವತ್ತು ಬಂದು ಇವತ್ತೇ ನಿಂದು ಕೊನೆಯ ಕೆಲಸದ ದಿನ ಅಂತಾರೆ ಅದಕ್ಕೆ ಹೇಗೆ ರಿಪ್ಲೈ ಮಾಡಬೇಕು ಅನ್ನೋದೇ ತಿಳಿಯೋದಿಲ್ಲ ಅಂತ ಕಂಪನಿಯಿಂದ ವಜಾಗೊಂಡಿರುವ ಉದ್ಯೋಗಿಗಳು ಸಂಕಟ ತೋಡಿಕೊಳ್ಳುತ್ತಿದ್ದಾರೆ ಇನ್ನು ಕೆಲವು ಸಂಸ್ಥೆಗಳು ಹೆಚ್ಚು ಸೂಕ್ಷ್ಮ ರೀತಿಯಲ್ಲಿ ವಜಗೊಳಿಸತ್ತಾ ಇದ್ದಾರೆ ಕೆಲವು ತಿಂಗಳ ಮೊದಲೇ ಮ್ಯಾನೇಜರ್ ಬಂದು ನೀವು ಕೆಲಸದಿಂದ ಆಫ್ ಆಗುವ ಲಿಸ್ಟ್ನಲ್ಲಿ ಇದ್ದೀರಿ ನಿಮಗೆ ಬೇರೆ ನಿಮಗೆ ಬೇರೆ ಕೆಲಸ ಹುಡುಕೋದಕ್ಕೆ ಮೂರು ತಿಂಗಳ ಅವಧಿ ಇದೆ ಅಂತ ಮುನ್ನೆಚ್ಚರಿಕೆಯನ್ನ ನೀಡುತ್ತಾರೆ ಎಂದು ತಂತ್ರಜ್ಞಾನ ಸಂಸ್ಥೆಯ ಕ್ಲೈಂಟ್ ಸೈಟ್ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ತಮಗೆ ಒದಗಿರುವ ಕಷ್ಟವನ್ನ ಅವಲತ್ತುಕೊಳ್ಳುತ್ತಾರೆ.
ಈ ಸೈಲೆಂಟ್ ಆಫ್ ಎಲ್ಲಾ ಐಟಿ ಉದ್ಯೋಗಿಗಳ ಜೀವನವನ್ನ ಚಿದ್ರಗೊಳಿಸುತ್ತಾ ಅನ್ನುವ ಸಂಶಯ ನಿಮ್ಮಲ್ಲಿರಬಹುದು. 25 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವವರು ತಮ್ಮ ಉಳಿದ ಸೇವೆಗೆ ಯೋಗ್ಯವಾಗಿರುತ್ತಾರೆ ಆದರೆ ಸುಮಾರು 10 ವರ್ಷ ಅಥವಾ ಅದಕ್ಕಿಂತ ಕಡಿಮೆ ಅನುಭವ ಉಳ್ಳವರು ಸೈಲೆಂಟ್ ಆಗಿ ಆಫ್ ಆಗ್ತಾ ಇದ್ದಾರೆ. ವರದಿಯೊಂದರಲ್ಲಿ ಉಲ್ಲೇಖಿಸಲಾದ ಮೂಲಗಳ ಪ್ರಕಾರ ಕಂಪನಿಗಳು ಉದ್ಯೋಗಿಗಳನ್ನ ನೇರ ವಜಾಗೊಳಿಸಲ್ಲ. ಅದರ ಬದಲು ಸಂಸ್ಥೆಯ ಪೂರ್ವ ನಿರ್ಧರಿತ ಮಾನದಂಡಗಳ ಆಧಾರದ ಮೇಲೆ ರಾಜೀನಾಮೆ ಕೊಡುದಕ್ಕೆ ಹೇಳ್ತಾ ಇದ್ದಾವೆ. ಸಾವಿರಾರು ಕಂಪನಿಗಳು ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದಾಗಿ ಸವಾಲುಗಳನ್ನ ಎದುರಿಸುತ್ತಿವೆ. ಕೋವಿಡ್ ಸಮಯದಲ್ಲಿ ಗಣನೀಯ ಬೆಳವಣಿಗೆ ಕಂಡ ಭಾರತೀಯ ತಂತ್ರಜ್ಞಾನ ಕಂಪನಿಗಳು ಈಗ ಭೌಗೋಳಿಕ ರಾಜಕೀಯ ಉದ್ವಿಜ್ಞತೆಗಳು ಆರ್ಥಿಕ ಕುಸಿತ ಮತ್ತು ಉತ್ಪಾದಕ ಎಐ ತಂತ್ರಜ್ಞಾನದ ಪ್ರಭಾವ ಸೇರಿದಂತೆ ಬಹು ಸವಾಲುಗಳನ್ನ ಎದುರಿಸುತ್ತಿವೆ. ಅಮೆರಿಕಾದ ಪ್ರಾಥಮಿಕ ಮಾರುಕಟ್ಟೆಯಲ್ಲಿನ ನೀತಿಗಳು ವಿಶೇಷವಾಗಿ ವಲಸೆ ನಿಯಮಗಳು ಮತ್ತು ಹೆಚ್ಚಿದ ವೀಸಾ ವೆಚ್ಚಗಳಿಗೆ ಸಂಬಂಧಿಸಿದಂತೆ ಬದಲಾಗ್ತಾ ಇರೋದರಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ ಚ್ಒಬಿ ವೀಸಾ ಶುಲ್ಕದಲ್ಲಿ ಬೆಲೆಯರಿಕೆಯಾಗಿದೆ ವಿದೇಶಿ ಕಾರ್ಮಿಕರನ್ನ ನೇಮಿಸಿಕೊಳ್ಳುವ ಸಂಸ್ಥೆಗಳ ಮೇಲೆ ತೆರಿಗೆ ವಿಧಿಸುವ ಹೈಯರ್ ಕಾಯ್ದೆಯಿಂದಾಗಿ ಹೆಚ್ಚುವರಿ ಒತ್ತಡ ಹೆಚ್ಚಾಗಿದೆ ಈ ಬೆಳವಣಿಗೆಗಳು ಕಾರ್ಯಾಚರಣೆಯ ವೆಚ್ಚ ಹೆಚ್ಚಾಗುವುದಕ್ಕೆ ಕಾರಣವಾಗಿದೆ ತಂತ್ರಜ್ಞಾನ ಸೇವಾ ವಲಯವು ಸಿಬ್ಬಂದಿ ನಿರ್ವಹಣೆಯಿಂದ ಹೊರಗೆ ಬಂದು ಸಾಮರ್ಥ್ಯ ಆಧಾರಿತವಾಗಿ ರೂಪಾಂತರಗೊಳ್ಳುತ್ತಾ ಇದೆ.
ಟೆಕ್ ಕ್ಷೇತ್ರವೇ ಹೆಚ್ಚಾಗಿ ಸೈಲೆಂಟ್ ಆಫ್ ಗಳಿಗೆ ಒಳಗಾಗ್ತಾ ಇದೆ ಅದಕ್ಕೆ ಕಾರಣಗಳು ಹಲವಾರು ಟೆಕ್ ಅಥವಾ ಐಟಿ ವಲಯವು ವೇಗವಾಗಿ ಬದಲಾದ ತಂತ್ರಜ್ಞಾನಗಳಿರುವ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಎಐ ಆಟೋಮೇಷನ್ ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ತಂತ್ರಜ್ಞಾನಗಳಿಂದಾಗಿ ಕಂಪನಿಗಳ ಕಾರ್ಯ ವೈಕರಿಯೇ ರೂಪಾಂತರಗೊಂಡಿದೆ ಈ ಬದಲಾವಣೆಗಳು ಉದ್ಯೋಗ ರಚನೆಗೂನೇ ನೇರ ಪರಿಣಾಮ ಬೀರ್ತಾ ಇದೆ ಎಐ ಮತ್ತು ಆಟೋಮೇಷನ್ ಬಳಕೆ ಮಾನವ ಕೆಲಸವನ್ನ ನಿರ್ವಹಿಸುತ್ತಾ ಇದೆ ಹಿಂದೆ ನೂರಾರು ಇಂಜಿನಿಯರ್ಗಳು ಮಾಡಿದ ಕೆಲಸವನ್ನ ಈಗ ಕೆಲವೇ ಕೆಲವು ಆಲ್ಗೋರಿದಂಗಳು ಕರೆಕ್ಟಾಗಿ ಮಾಡ್ತಾ ಇವೆ ಇದರ ಪರಿಣಾಮ ಕಂಪನಿಗಳು ತಮ್ಮ ಕಾರ್ಯಾಚರಣ ವೆಚ್ಚ ಕಡಿಮೆ ಮಾಡುವುದಕ್ಕೆ ಸೈಲೆಂಟ್ ಆಫ್ ವಿಧಾನ ಬಳಸುತ್ತಿದೆ ಮಾತ್ರವಲ್ಲದೆ ಟೆಕ್ ಕಂಪನಿಗಳ ಪ್ರಾಜೆಕ್ಟ್ ಆಧಾರಿತ ಉದ್ಯೋಗ ಮಾದರಿಯೇ ಈ ಸಮಸ್ಯೆಗೆ ಕಾರಣ ಪ್ರತಿ ಪ್ರಾಜೆಕ್ಟ್ ಮುಗಿದ ನಂತರ ಹೊಸ ಕೆಲಸ ದೊರೆಯದಿದ್ದರೆ ಕಂಪನಿಗಳು ಆ ಉದ್ಯೋಗಿಗಳನ್ನ ಉಳಿಸಿಕೊ ಸಾಧ್ಯವಾಗುವುದಿಲ್ಲ ಹೀಗಾಗಿ ಅಧಿಕೃತ ಪ್ರಕಟಣೆ ನೀಡದೆ ಉದ್ಯೋಗಿಗಳನ್ನ ವಜಾ ಮಾಡ್ತಾ ಇದ್ದಾರೆ ಜಾಗತಿಕ ಆರ್ಥಿಕ ಅನಿಶ್ತತೆಯು ಸೈಲೆಂಟ್ ಆಫ್ಗೆ ಕಾರಣವಾಗಿದೆ ಅಮೆರಿಕ ಮತ್ತು ಯುರೋಪ್ನ ಮಾರುಕಟ್ಟೆ ಕುಸಿತ ಡಾಲರ್ ಬದಲಾವಣೆ ವಲಸೆ ನೀತಿ ಬದಲಾವಣೆ ಇವು ಭಾರತೀಯ ಐಟಿ ಕಂಪನಿಗಳ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರ್ತಾ ಇದೆ ಟೆಕ್ ಉದ್ಯಮದೊಳಗಿನ ಅತಿಯಾದ ಸ್ಪರ್ಧೆ ಮತ್ತು ಪರ್ಫಾರ್ಮೆನ್ಸ್ ಒತ್ತಡವು ಒಂದು ರೀತಿಯಲ್ಲಿ ಆಫ್ ಗೆ ಕಾರಣವಾಗಿದೆ ಕಂಪನಿಗಳು ಳ ಹೈ ಪರ್ಫಾರ್ಮರ್ಗಳನ್ನ ಉಳಿಸಿಕೊಂಡು ಸಾಧಾರಣ ಕೆಲಸ ಮಾಡುವವರನ್ನ ನಿಧಾನವಾಗಿ ಹೊರಹಾಕುತ್ತವೆ ಅಧಿಕೃತ ವಜಾಪತ್ರದ ಬದಲಿಗೆ ಉದ್ಯೋಗಿಯೇ ರಾಜೀನಾಮೆ ನೀಡುವಂತೆ ಮಾಡಲಾಗುತ್ತೆ.
ಉದ್ಯೋಗಿಗಳ ಕೌಶಲ್ಯದಿಂದಾಗಿಯೂ ಕೆಲಸ ದೊರಕುತ್ತದೆ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳದ ಉದ್ಯೋಗಿಗಳು ಹೊಸ ವ್ಯವಸ್ಥೆಯಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ ಒಟ್ಟನಲ್ಲಿ ಹೇಳುವುದಾದರೆ ಕಂಪನಿಗಳು ಈಗ ಮಾನವ ಸಂಪನ್ಮೂಲದಿಂದ ಎಐ ಆಧಾರಿತ ಮಾದರಿಗೆ ತಿರುಗುತ್ತಿವೆ ಎಐ ಬಳಸಿಕೆಸ ಮಾಡಿದ್ರು ಅನಾನುಕೂಲಗಳಿವೆ ತಂತ್ರಜ್ಞಾನ ಯಾವತ್ತಿದ್ದರು ತಂತ್ರಜ್ಞಾನವೇ ಅದಕ್ಕೆ ಮನುಷ್ಯ ಭಾಷೆ ಭಾವನೆಗಳು ಅರ್ಥವಾಗುವುದಿಲ್ಲ ಎಐ ಅಳವಡಿಕೆಯಿಂದಾನೆ ಅನೇಕ ಗಂಭೀರ ಸವಾಲುಗಳು ಎದುರಾಗ್ತಾ ಇವೆ ಮೊದಲನೆದಾಗಿ ಎಐ ಅಳವಡಿಕೆ ವೆಚ್ಚ ತುಂಬಾನೇ ದುಬಾರಿ ಉನ್ನತ ಮಟ್ಟದ ಯಂತ್ರಗಳು ಡೇಟಾ ಸೆಂಟರ್ಗಳು ಸಾಫ್ಟ್ವೇರ್ ಪರವಾನಗಿ ಮತ್ತು ತರಬೇತಿ ಕಾರ್ಯಕ್ರಮಗಳು ಕಂಪನಿಗಳಿಗೆ ಆರ್ಥಿಕ ಒತ್ತಡ ತರುತ್ತವೆ ಸಣ್ಣ ಮತ್ತು ಮಧ್ಯಮ ಕಂಪನಿಗಳಿಗೆ ಇದು ದೊಡ್ಡ ಬಂಡವಾಳ ಹೋಡಿಕೆ ಮಾಡುವಂತೆ ಮಾಡುತ್ತದೆ ಹಾಗಾಗಿ ಮಧ್ಯಮ ವರ್ಗದ ಕಂಪನಿಗಳಿಗೆ ಎಐ ಕನಸಿನ ಮಾತಾಗಿ ಪರಿಣಮಿಸತ್ತಾ ಇದೆ. ಒಂದುವೇಳೆ ಎಐ ಅಳವಡಿಸಿದ್ರು ಸಾಲದ ಮೊರೆ ಹೋಗುವ ಸ್ಥಿತಿ ಎದುರಾಗುತ್ತವೆ. ಇದು ತಂತ್ರಜ್ಞಾನದ ಯುಗ ಮಾಹಿತಿ ಸೋರಿಕೆ ಡಿ ಫೇಕ್ ಎಲ್ಲಾನು ಕಾಮನ್ ಆಗಿಬಿಟ್ಟಿದೆ. ವ್ಯಕ್ತಿಯೊಬ್ಬನ ಗೌಪ್ಯ ವಿಚಾರಗಳು ಉರುತುಂಬ ಹರಡುದಕ್ಕೆ ತಂತ್ರಜ್ಞಾನ ಅನುಕೂಲ ಕಲ್ಪಿಸುತ್ತದೆ ಅದೇ ರೀತಿ ಕಂಪನಿಯಲ್ಲೂ ಕಂಪನಿ ಡೇಟಾವನ್ನ ಎಐ ಭದ್ರವಾಗಿ ಇರಿಸುದಿಲ್ಲ. ಹ್ಯಾಕಿಂಗ್ ಲೀಕ್ ಅಥವಾ ದುರ್ಬಳಕೆಗೆ ಸುಲಭ ಮಾರ್ಗಗಳು ಎಐ ನಲ್ಲಿ ಲಭಿಸುತ್ತವೆ. ಎಐ ತಜ್ಞರ ಕೊರತೆ ಕಂಪನಿಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಎಐ ಸಿಸ್ಟಮ್ ಗಳನ್ನ ಅಭಿವೃದ್ಧಿ ಪಡಿಸಲು ಹಾಗೂ ನಿರ್ವಹಿಸಲು ತರಬೇತಿ ಪಡೆದ ತಂತ್ರಜ್ಞರ ಸಂಖ್ಯೆ ಸೀಮಿತವಾಗಿದೆ. ಹಾಗಾಗಿ ಕಂಪನಿಗಳು ಎಐ ಯನ್ನ ನಿರ್ವಹಿಸುವುದಕ್ಕೆ ಹೆಣಗಾಡುವ ಸ್ಥಿತಿ ಉಂಟಾಗ್ತಾ ಇದೆ. ತಂತ್ರಜ್ಞಾನ ಕೆಡುಕು ಕೂಡ ಹೌದು, ಒಳಿತು ಕೂಡ ಹೌದು. ನಮ್ಮ ಅವಲಂಬನೆ ಮೇಲೆ ಒಳಿತು ಕೆಡುಕು ನಿರ್ಧಾರವಾಗುತ್ತೆ.
ಕಂಪನಿಗಳಲ್ಲಿ ಎಐ ಮೇಲೆ ಅವಲಂಬನೆ ಹೆಚ್ಚಾಗಿರೋದ್ರಿಂದ ಮಾನವೀಯ ತೀರ್ಮಾನ ಶಕ್ತಿ ಕುಂದುತ್ತಿದೆ. ಯಂತ್ರದ ದೋಷ ಅಥವಾ ಸರ್ವರ್ ವೈಫಲ್ಯದಿಂದ ಸಂಪೂರ್ಣ ವ್ಯವಸ್ಥೆ ನಿಂತು ಹೋಗ್ತಾ ಇದೆ. ಸರಿಯಾದ ಸಮಯದಲ್ಲಿ ಕ್ಲೈಂಟ್ ಜೊತೆಗೆ ಮಾತನಾಡಲು ಪ್ರಾಜೆಕ್ಟ್ ಹಂಚಲು ಅಸಾಧ್ಯವಾಗುತ್ತಿದೆ. ಇದು ಅವಿಶ್ವಾಸ ಮೂಡಲು ಕಂಪನಿ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿ ಬಿಡುತ್ತದೆ ಮಾತ್ರವಲ್ಲದೆ ಎಐ ನಿರ್ಧಾರಗಳಲ್ಲಿ ಪಕ್ಷಪಾತ ಡೇಟಾ ದುರ್ಬಳಕೆ ಪಾರದರ್ಶಕತೆಯ ಕೊರತೆ ಹಾಗೂ ಕೃತಕ ನಿರ್ಧಾರಗಳಿಂದ ಗ್ರಾಹಕರ ನಂಬಿಕೆ ಕುಸಿಯಲು ಮೂಲವಾಗುತ್ತಿದೆ ಎಐನ ಕೆಲಸಗಳನ್ನ ತಾನೇ ನಿರ್ವಹಿಸುವುದರಿಂದಾಗಿ ಮಾನವ ಸಂಪನ್ಮೂಲದ ಅಗತ್ಯತೆ ಕಡಿಮೆಯಾಗುತ್ತದೆ ಇದರಿಂದಾಗಿ ನಿರುದ್ಯೋಗದ ಪ್ರಮಾಣ ಹೆಚ್ಚಾಗ್ತಾ ಇದೆ ಸಡನ್ಆಗಿ ಉದ್ಯೋಗ ಕಳೆದುಕೊಂಡ ನಿರುದ್ಯೋಗಿಗಳಿಗೆ ಮುಂದೆ ತಾವೇನು ಮಾಡೋದು ಅನ್ನುವ ಒತ್ತಡ ಉಂಟಾಗುತ್ತದೆ ತಮ್ಮ ಉದ್ಯೋಗಕ್ಕೆ ಕೊಳ್ಳಿ ಇಟ್ಟ ತಂತ್ರಜ್ಞಾನವನ್ನ ಬಳಸಿಕೊಂಡು ಪುನಃ ಉದ್ಯೋಗಕ್ಕೆ ಸೇರುವ ಅವಕಾಶವಿದೆ ಆಫ್ ಆದ ಉದ್ಯೋಗಿಗಳು ಆನ್ಲೈನ್ ಉದ್ಯೋಗ ಹುಡುಕಾಟಕ್ಕೆ ತೊಡಗಬೇಕು ಲಿಂಕ್ಡಡಿನ್ ನೌಕರಿ ಗ್ಲಾಸ್ ಡೋರ್ ಮುಂತಾದ ಪ್ಲಾಟ್ಫಾರ್ಮ್ ಗಳಲ್ಲಿ ಪ್ರೊಫೈಲ್ ಅಪ್ಡೇಟ್ ಮಾಡಿ ಹಿಂದಿನ ಅನುಭವ ಮತ್ತು ಕೌಶಲ್ಯಗಳನ್ನ ಪ್ರದರ್ಶಿಸಬೇಕು ಡಿಜಿಟಲ್ ಮಾರ್ಕೆಟಿಂಗ್ ಡೇಟಾ ಅನಾಲಿಟಿಕ್ಸ್ ಕೋಡಿಂಗ್ ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಕೋರ್ಸುಗಳ ಮೂಲಕ ಕೌಶಲ್ಯಗಳನ್ನ ಮತ್ತಷ್ಟು ಆಧುನೀಕರಣಗೊಳಿಸಬಹುದು ಉದ್ಯೋಗ ಕಳೆದುಕೊಳ್ಳಲು ಕಾರಣವಾದ ಎಐ ಯನ್ನ ಹೇಗೆ ನಿಭಾಯಿಸುವುದು ಅದಕ್ಕೆ ಸೂಚನೆಗಳನ್ನ ನೀಡುವುದು ಹೇಗೆ ಅನ್ನೋದನ್ನ ಕಲಿತು ಎಐ ತಾಂತ್ರಿಕ ಪರಿಣಿತಿಯನ್ನ ಪಡಬಹುದು.


