ಆಂಧ್ರಪ್ರದೇಶ ಹೂಡಿಕೆ ವಿಚಾರಕ್ಕೆ ಬಂದರೆ ಯಾವಾಗಲೂ ಕರ್ನಾಟಕಕ್ಕೆ ಸ್ಟ್ರಾಂಗ್ ಕಂಟೆಂಡರ್ ಆದರೆ ಈಗ ದೇಶದಲ್ಲಿ ಅತಿ ಹೆಚ್ಚು ಇನ್ವೆಸ್ಟ್ಮೆಂಟ್ ಸೆಳೆಯೋ ಹೂಡಿಕೆ ಪವರ್ ಹೌಸ್ ಆಗಿ ಜಾಗತಿಕ ಮಟ್ಟದಲ್ಲಿ ಗಮನ ಸಿಳಿತಾ ಇದೆ. ಪಕ್ಕದಲ್ಲೇ ದೇಶದ ಐಟಿ ಕ್ಯಾಪಿಟಲ್ ಬೆಂಗಳೂರು ಕೆಳಗೆ ಹೋದ್ರೆ ಚೆನ್ನೈ ಮೇಲಕ್ಕೆ ಹೋದ್ರೆ ಹೈದರಾಬಾದ್ ದಕ್ಷಿಣ ಭಾರತದಲ್ಲಿ ಎಷ್ಟೊಂದು ಮೆಗಾ ಸಿಟಿಗಳಿದ್ರು ಕೂಡ ಆಲ್ರೆಡಿ ಒಂದಕ್ಕೆ ಓಡ್ತಿರೋ ಕುದುರೆಗಳಿದ್ದರೂ ಕೂಡ ಇನ್ವೆಸ್ಟರ್ಸ್ ನ ತನ್ನ ಕಡೆಗೆ ಸೆಳೆಯುವಲ್ಲಿ ಏನು ಇಲ್ಲದ ಆಂಧ್ರಪ್ರದೇಶ ಯಶಸ್ವಿ ಆಗ್ತಾ ಇದೆ ಆಂಧ್ರಪ್ರದೇಶ ಹೈದರಾಬಾದ್ನ ಕಳ್ಕೊಂಡಿದೆ ಮುಂಚಿನ ತರ ಅಲ್ಲ ಏನು ಇಲ್ಲ ನಮ್ಮ ಕರ್ನಾಟಕದಲ್ಲಿ ಒಂದು ಕರಾವಳಿ ಜಿಲ್ಲೆಗಳು ಮತ್ತೆ ಮಲ್ನಾಡಿನ ಒಂದು ಚೂರು ಭಾಗ ಅಪ್ ಟು ತುಮಕೂರು ತನಕ ತಗೊಂಡು ಅಷ್ಟು ಮಾತ್ರ ಇಡ್ಕೊಂಡ್ರೆ ಹೆಂಗಿರುತ್ತೋ ಬೆಂಗಳೂರು ಇಲ್ಲದೆ ಆ ತರ ಇರೋದು ಆಂಧ್ರದ ಕಥೆ ಹಂಗಿದ್ರೂ ಕೂಡ ಅವರು ಇಂತ ಮಹಾನಗರಗಳನ್ನ ಇಟ್ಕೊಂಡಿರೋ ನಮಗೆನೇ ಕಾಂಪಿಟೇಷನ್ ಕೊಡ್ತಾ ಇದ್ದಾರೆ. ಕಳೆದ 16 ತಿಂಗಳಲ್ಲಿ ಬರೋಬರಿ 120 ಬಿಲಿಯನ್ ಡಾಲರ್ ಹೂಡಿಕೆ ಸೇಳಿದಿದ್ದಾರೆ. ನೆಟ್ಟಿಗೆ ರಾಜಧಾನಿ ಇಲ್ಲ ಇವಾಗ ಕಡತಿರೋದು ರಾಜಧಾನಿ.
ಗೂಗಲ್ ಸೇರಿದ ಹಾಗೆ ಹಲವು ಹೊಸ ಕಂಪನಿಗಳು ಹೊಸ ಹೊಸ ಇನ್ವೆಸ್ಟ್ಮೆಂಟ್ ಅನೌನ್ಸ್ ಮಾಡ್ತಿದ್ದಾರೆ. ಅಲ್ಲಿನ ಐಟಿ ಸಚಿವ ನಾರ ಲೋಕೇಶ್ ನಮ್ಮ ಊಟ ಖಾರ ಹೂಡಿಕೆ ಕೂಡ ಖಾರ ಅಂತ ಹೇಳಿ ಟಾಂಟ್ ಕೊಡ್ತಾ ಹೂಡಿಕೆಗಳನ್ನೆಲ್ಲ ಆ ಕಡೆಗೆ ಸೇಳ್ಕೊಳ್ತಾ ಇದ್ದಾರೆ. ಹಾಗಿದ್ರೆ ಆಂಧ್ರದಲ್ಲಿ ಏನಾಗ್ತಾ ಇದೆ ಬೃಹತ್ ನಗರಗಳನ್ನ ಬಿಟ್ಟು ಹೂಡಿಕೆ ಯಾಕೆ ಆಂಧ್ರಗೆ ಹರಿದು ಹೋಗ್ತಾ ಇದ. ಸದ್ಯ ದೇಶದಲ್ಲೇ ಅತಿ ಹೆಚ್ಚು ಹೂಡಿಕೆ ಸೆಳಿತಾ ಇರೋ ರಾಜ್ಯ ಆಂಧ್ರಪ್ರದೇಶ ಮಲ್ಟಿನ್ಯಾಷನಲ್ ಕಂಪನಿಗಳು ಒಂದಾದಮೇಲೊಂದು ನಾವು ಆಂಧ್ರದಲ್ಲೇ ಹೂಡಿಕೆ ಮಾಡ್ತೀವಿ ಅಂತ ಹೇಳ್ತಿದ್ದಾರೆ ನಿಮಗೆ ಗೊತ್ತಿರೋ ಹಾಗೆ ಸದ್ಯ ಅಲ್ಲಿ ಎನ್ಡಿಎ ಮೈತ್ರಿಕೂಟದ ಸರ್ಕಾರ ಇದೆ. ಚಂದ್ರಬಾಬು ನಾಯಡುರ ತೆಲುಗು ದೇಶಂ ಪಾರ್ಟಿ ಟಿಡಿಪಿ ಪವನ್ ಕಲ್ಯಾಣರ ಜನಸೇನಾ ಪಾರ್ಟಿ ಮತ್ತು ಬಿಜೆಪಿ ಸೇರಿ ಸರ್ಕಾರ ನಡೆಸುತ್ತೇವೆ. ಬೇರೆ ರಾಜ್ಯಗಳ ಹಾಗೆ ದೊಡ್ಡ ರಾಜಧಾನಿ ಕೂಡ ಅವರಿಗಿಲ್ಲ. ಅಮರಾವತಿಯನ್ನ ಹೊಸದಾಗಿ ರಾಜಧಾನಿಯಾಗಿ ಕಡ್ತಾ ಇದ್ದಾರೆ. ರಾಷ್ಟ್ರೀಯ ಅಂತರಾಷ್ಟ್ರೀಯ ಮೂಲಗಳಿಂದ ಸಾಲ ತಂದು ರಾಜಧಾನಿ ಕಡಿಸಿದ್ದಾರೆ. ಆದರೆ ರಾಜ್ಯ ಹೀಗೆ ಇನ್ನು ಕನ್ಸ್ಟ್ರಕ್ಷನ್ ಸ್ಟೇಟಸ್ ನಲ್ಲಿ ಇರೋ ಟೈಮ್ನಲ್ಲೇನೆ ಆಂಧ್ರಪ್ರದೇಶಕ್ಕೆ ಹೂಡಿಕೆ ಸಮುದ್ರದಂತೆ ಹರಿದು ಹೋಗ್ತಾ ಇದೆ. ಸರ್ಕಾರದ ರಿಪೋರ್ಟ್ ಪ್ರಕಾರ ಬರೋಬರಿ 16 ತಿಂಗಳಲ್ಲಿ 400ಕ್ಕೂ ಅಧಿಕ ಮಲ್ಟಿನ್ಯಾಷನಲ್ ಕಂಪನಿಗಳು ಆಂಧ್ರದಲ್ಲಿ ಇನ್ವೆಸ್ಟ್ ಮಾಡೋದಾಗಿ ಹೇಳಿದೆ.
613 ಕ್ಕೂ ಹೆಚ್ಚು ಎಂಓಯುಗಳು ಸೈನ್ ಆಗಿವೆ. ಒಂದುವರೆ ವರ್ಷದಲ್ಲೇ ಆಂಧ್ರ 120 ಬಿಲಿಯನ್ ಡಾಲರ್ ಹೂಡಿಕೆ ಸೆಳೆದಿದೆ. ಆದರೆ 10.5 5 ಲಕ್ಷ ಕೋಟಿ ದುಡ್ಡು ನೆರೆಯ ರಾಜ್ಯಕ್ಕೆ ಹರೆದು ಹೋಗಿದೆ ಸುತ್ತಲೂ ಬೆಂಗಳೂರು ಚೆನ್ನೈ ಹೈದರಾಬಾದ್ ಭುವನೇಶ್ವರದಂತಹ ಮೇಜರ್ ಸಿಟೀಸ್ ಇದ್ರೂ ಕೂಡ ಹೂಡಿಕೆದಾರರು ಆಂಧ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹೈದರಾಬಾದ್ ತೆಲಂಗಾಣದ ರಾಜಧಾನಿ ಆದಮೇಲಂತೂ ಆಂಧ್ರಪ್ರದೇಶ ಬೆಳೆಯೋದೇ ಇಲ್ಲ ಅನ್ನೋ ಪರಿಸ್ಥಿತಿ ಇತ್ತು ಈಗ ನೋಡಿದ್ರೆ ಆದರೆ ಅದನ್ನ ಸುಳ್ಳು ಮಾಡ್ತೀವಿ ಅಂತ ಹೇಳಿ ಆಂಧ್ರಪ್ರದೇಶ ಪ್ರಯತ್ನ ಪಡ್ತಾ ಇದೆ ಗೂಗಲ್ ನಿಂದ ಅದಾನಿ ವರೆಗೆ ಹರಿದ ಹೂಡಿಕೆ ಆಂಧ್ರದ ಅದೃಷ್ಟ ಬದಲಾಯಿಸಿದ ಇನ್ವೆಸ್ಟರ್ಸ್ ಎಸ್ ಗೂಗಲ್ ನಿಪಾನ್ ಸ್ಟೀಲ್ ಆರ್ಸುಲರ್ ಮಿತ್ತಲ್ ಸೇರಿ ಹಲವು ಕಂಪನಿಗಳೆಲ್ಲ ಆಂಧ್ರದಲ್ಲೇ ಹೂಳಿಕೆ ಮಾಡ್ತೇವೆ. 2024 ರಲ್ಲಿ ಚಂದ್ರಬಾಬು ನಾಯಡು ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಹುರಾಷ್ಟ್ರೀಯ ಕಂಪನಿಗಳು ಆಂಧ್ರದ ಕಡೆಗೆ ನೋಡ್ತಾ ಇವೆ. ಟೆಕ್ ದೈತ್ಯಗೂಗಲ್ ನಿಂದ ಹಿಡಿದು ಅದಾನಿವರೆಗೆ ಎಲ್ಲಾ ಕಂಪನಿಗಳು ನಾವು ಆಂಧ್ರದಲ್ಲೇ ನಮ್ಮ ಬಂಡವಾಳ ಹೂಡಿಕೆ ಮಾಡ್ತೀವಿ ಅಂತಿದ್ದಾರೆ. ಗೂಗಲ್ ಬರೋಬರಿ 15 ಬಿಲಿಯನ್ ಡಾಲರ್ ವೆಚ್ಚದಲ್ಲಿ ಆಂಧ್ರದಲ್ಲಿ ಡೇಟಾ ಸೆಂಟರ್ ನಿರ್ಮಾಣ ಮಾಡೋ ಘೋಷಣೆ ಮಾಡಿದ್ದಾರೆ. ಆಂಧ್ರದ ವಿಶಾಖಪಟ್ಟಣಂನಲ್ಲೇ ಇದು ನಿರ್ಮಾಣ ಆಗುತ್ತೆ. ಭಾರತಿ ಏರ್ಟೆಲ್ ಮತ್ತು ಅದಾನಿ ಕಾಮೆಕ್ಸ್ ಜಾಯಿಂಟ್ ವೆಂಚರ್ ನಡಿ ಇದು ನಿರ್ಮಾಣ ಆಗ್ತಾ ಇದೆ. ಇದೇ ಡೇಟಾ ಸೆಂಟರ್ ಕರ್ನಾಟಕದ ಕೈ ತಪ್ಪಿತು ಅಂತ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ವು. ಬೆಂಗಳೂರಿನ ಗುಂಡಿಗಳು ಮತ್ತು ಬಿಸಿನೆಸ್ ಫ್ರೆಂಡ್ಲಿ ಇಲ್ಲದ ಇಲ್ಲಿನ ವಾತಾವರಣದಿಂದಾಗಿ ಉದ್ಯಮಿಗಳಿಗೆ ಮತ್ತು ಉದ್ಯಮಗಳಿಗೆ ಕೊಡ್ತಿರೋ ಕಿರುಕುಳದಿಂದಾಗಿ ಜಿಎಸ್ಟಿ ಅಧಿಕಾರಿಗಳ ಹರಾಸ್ಮೆಂಟ್ ನಿಂದಾಗಿ ಎಲ್ಲಾ ಅಲ್ಲಿಗೆ ಹೋಗ್ತಿದ್ದಾರೆ ಅಂತ ಹೇಳಿ ಬಿಲಿಯನ್ ಬಿಲಿಯನ್ ಡಾಲರ್ ಹೂಡಿಕೆ ಅಲ್ಲಿಗೆ ಹೋಗ್ತಾ ಇದೆ. ಹೊಸೂರಿಗೆ ಹೋಗ್ತಾ ಇದೆ ಆಂಧ್ರಗೆ ಹೋಗ್ತಿದ್ದಾರೆ ನಮ್ಮಲ್ಲಿ ಮಾತ್ರ ಬರ್ತಿಲ್ಲ ಅಂತ ಹೇಳಿ ವಾಗ್ದಾಳಿ ಮಾಡಿದ್ರು. ಸರ್ಕಾರ ಹೇಳುತ್ತೆ ನಮ್ಮಲ್ಲೂ ಕೂಡ ಬರ್ತಿದೆ ನೋಡಿ ಅಂತ ಪಟ್ಟಿ ಕೊಡ್ತಾರೆ.
ಬೆಂಗಳೂರು ಬೆಳೆದಿರೋ ಸಿಟಿ, ಬೆಂಗಳೂರಿಗೆ, ಹೈದರಾಬಾದ್ ಗೆ, ಚೆನ್ನೈಗೆ ಇನ್ವೆಸ್ಟ್ಮೆಂಟ್ ಬರುತ್ತೆ. ಸಡನ್ ಆಗಿ ಎಲ್ಲ ಒಂದೇ ಸಲಿ ಇಲ್ಲಿಂದ ಹೋಗೋದಿಲ್ಲ. ಆದರೆ ನಾವಿದ್ದಂತೆನು ಯಾವುದೇ ಒಂದು ಸಿಟಿಯನ್ನೇ ಹೊಂದಿರದೆ ಅವರು ಕಿತ್ತುಕೊಳ್ತಿದ್ದಾರಲ್ಲ ಮೇಜರ್ ಪ್ರಾಜೆಕ್ಟ್ಸ್ ನ ಅದು ಇಲ್ಲಿ ಗಮನಿಸಬೇಕಾಗಿರುವ ವಿಚಾರ. ದೊಡ್ಡ ಪ್ರಮಾಣದಲ್ಲಿ ಚಾರ್ಟೆಡ್ ಅಕೌಂಟೆಂಟ್ ಗಳು ಕೂಡ ಇಲ್ಲೆಲ್ಲಾ ಹರಾಸ್ಮೆಂಟ್ ಅಂತೆಲ್ಲ ಬಂದಾಗ ಕೆಲವೊಂದು ಸಲಿ ಕೆಲವೊಂದು ಭ್ರಷ್ಟ ಅಧಿಕಾರಿಗಳು ಕೆಲವೊಂದು ಸಲಿ ಸರ್ಕಾರದ ಪ್ರೆಷರ್ ನಿಂದ ದುಡ್ಡಿಲ್ಲರೀ ಸಂಗ್ರಹ ಮಾಡ್ರಿ ಟ್ಯಾಕ್ಸ್ ಕಲೆಕ್ಷನ್ ಜಾಸ್ತಿ ಮಾಡ್ರಿ ಅನ್ನೋ ಪ್ರೆಷರ್ ನಿಂದ ಕೆಲವೊಂದು ಸಲಿ ಅಧಿಕಾರಿಗಳ ಭ್ರಷ್ಟಾಚಾರದಿಂದ ಅದು ಇದು ನೋಟಿಸ್ ಗಿಟಿಸ್ ಅಂತ ಹಿಂಸೆ ಕೊಟ್ಟಾಗಲಿಲ್ಲ ಏನ್ ಸಾರ್ ಹಿಂಗೆ ಅಂತ ಸಿಎಗಳ ಬಳಿ ಕೇಳಿದಾಗ ಸಿಎಗಳೇ ಅಡ್ವೈಸ್ ಮಾಡೋಕೆ ಶುರು ಮಾಡಿದ್ದಾರೆ ಬಾರ್ಡರ್ ದಾಟಿ ಪಕ್ಕದಲ್ಲಿ ಅನಂತಪುರ ಅನಂತಪುರ ರಿಜಿಸ್ಟ್ರೇಷನ್ ತಗೋಬೇಡಿ ಪರವಾಗಿಲ್ಲ ಅಲ್ಲಿ ಏನು ಟಾರ್ಚರ್ ಇಲ್ಲ ಸುಮಾರು ಜನ ನಮಗೆ ಹೇಳ್ತಾ ಇದ್ದಾರೆ ಆ ಕಡೆ ಹೊಸೂರು ಅಲ್ಲೂ ಕೂಡ ಬಿಸಿನೆಸ್ ಫ್ರೆಂಡ್ಲಿ ಇದೆ ಯಾರ ಗವರ್ನಮೆಂಟ್ ಇರೋದಲ್ಲ ಡಿಎಂಕೆ ನವರದು ಅವರು ಕೂಡ ಪರವಾಗಿಲ್ಲ ತೊಂದರೆ ಕೊಡ್ತಾ ಇಲ್ಲ ಅನ್ನೋ ಒಪಿನಿಯನ್ ಗಳನ್ನ ಸಿಎ ಗಳೇ ವ್ಯಕ್ತಪಡಿಸೋಕೆ ಶುರು ಮಾಡಿದ್ದಾರೆ. ಬಿಸಿನೆಸ್ ಸ್ನೇಹಿ ವಾತಾವರಣ ಅಧಿಕಾರಿಗಳು ಸರ್ಕಾರ ಆ ರೀತಿಯಾಗಿ ನಡೆಸಿಕೊಳ್ಳುತ್ತಿಲ್ಲ ಅನ್ನೋ ಕಾರಣದಿಂದ ಈ ರೀತಿಯಲ್ಲ ಒಂದು ಪ್ರತಿಪಕ್ಷಗಳು ಗಲಾಟೆ ಮಾಡಿದ್ವಲ್ಲ ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಒಂದು gಗಾವಟ್ ಸಾಮರ್ಥ್ಯದ ಡೇಟಾ ಸೆಂಟರ್ ಮತ್ತು 6 G ಸಾಮರ್ಥ್ಯದ ಸೋಲಾರ್ ಪ್ರಾಜೆಕ್ಟ್ ಅನ್ನ ಕೂಡ ಅಲ್ಲೇ ಮಾಡೋ ಭರವಸೆಯನ್ನ ಕೊಟ್ಟಿದ್ದಾರೆ ಘೋಷಣೆ ಮಾಡಿಬಿಟ್ಟಿದ್ದಾರೆ ಆಂಧ್ರದಲ್ಲಿ ಮಾಡ್ತೀವಿ ಅಂತ ಇನ್ನು ಅದಾನಿ ಗ್ರೂಪ್ ರಿನ್ಯೂವಬಲ್ ಎನರ್ಜಿ ಪೋರ್ಟ್ಸ್ ಲಾಜಿಸ್ಟಿಕ್ಸ್ ಡಿಜಿಟಲ್ ಇನ್ಫ್ರಾಸ್ ಸ್ಟ್ರಕ್ಚರ್ ಕ್ಷೇತ್ರಗಳಲ್ಲೂ ಕೂಡ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡೋದಾಗಿ ಹೇಳಿದೆ ಈಗ ಆಲ್ರೆಡಿ ಆಂಧ್ರದಲ್ಲಿ ಅದಾನಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ ಇನ್ನು ಆರ್ಸಿಲರ್ ಮೆತ್ತಲ್ ಮತ್ತು ನಿಪಾನ್ ಸ್ಟೀಲ್ ಜಂಟಿಯಾಗಿ ಬೃಹತ್ ಉಕ್ಕಿನ ಕಾರ್ಖಾನೆ ನಿರ್ಮಿಸೋಕೆ 17 ಬಿಲಿಯನ್ ಡಾಲರ್ ಹೂಡಿಕೆ ಮಾಡೋದಾಗಿ ಘೋಷಿಸಿವೆ.
ಈ ಕಂಪನಿ ಬಿಜೆಪಿ ಆಡಳಿತ ಇರುವ ರಾಜ್ಯಗಳು ಸೇರಿ ಬೇರೆ ಸ್ಟೇಟ್ಗಳಲ್ಲಿ ಸ್ಟೀಲ್ ಪ್ಲಾಂಟ್ ನಿರ್ಮಿಸೋ ಪ್ಲಾನ್ ಹಾಕೊಂಡಿತ್ತು. ಆದರೆ ಕಡೆಗೆ ಅದು ಕೂಡ ಆಂಧ್ರ ಕಡೆಗೆ ಮುಖ ಮಾಡ್ತು. ಇನ್ನು ಅರ್ಬನ್ ಡೆವಲಪ್ಮೆಂಟ್, ಗವರ್ನೆನ್ಸ್, ಏವಿಯೇಷನ್ ಸರ್ವಿಸ್ ಸಸ್ಟೈನಬಿಲಿಟಿ ಕ್ಷೇತ್ರಗಳಲ್ಲೂ ಕೂಡ ಒಟ್ಟಾಗಿ ಕೆಲಸ ಮಾಡೋಕೆ ಸಿಂಗಪೂರ್ ಸರ್ಕಾರ ಮತ್ತು ಆಂಧ್ರ ಸರ್ಕಾರನು ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಆಂಧ್ರದ ನಂದ್ಯಾಲ್ನಲ್ಲಿ 1200 ಮೆಗಾವಟ್ ಅವರ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಬಿಎಸ್ಎಸ್ ಸ್ಥಾಪಿಸೋಕೆ ಆಂಧ್ರ ಸರ್ಕಾರದೊಂದಿಗೆ ಡೀಲ್ ಮಾಡಿಕೊಂಡಿದೆ. ಇನ್ನು ರೇಮನ್ ಗ್ರೂಪ್ ಬಟ್ಟೆ ಉತ್ಪಾದನೆ ಆಟೋಮೊಬೈಲ್ ವಿಡಿಯೋ ಭಾಗಗಳು ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸುಮಾರು 1200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಇನ್ವೆಸ್ಟ್ ಮಾಡೋದಾಗಿ ಹೇಳಿದ್ದಾರೆ ಹೀಗೆ ಹಲವು ಕಂಪನಿಗಳು ಆಂಧ್ರದಲ್ಲಿ ಹೂಡಿಕೆ ಘೋಷಣೆ ಮಾಡಿವೆ ಇದರಿಂದ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಈ ಇನ್ವೆಸ್ಟ್ಮೆಂಟ್ ಅನ್ನ ನೋಡಿ ಹಲವು ಕಂಪನಿಗಳು ಕೂಡ ಆಂಧ್ರದ ಕಡೆಗೆ ಮುಖ ಮಾಡಲಿವೆ ಈ ಹೂಡಿಕೆಯ ವೇಗ ನೋಡಿ ಆಂಧ್ರ ಐಟಿ ಸಚಿವ ನಾರ ಲೋಕೇಶ್ 2029ರ ವೇಳೆಗೆ ಬರೋಬರಿ ಒಂದು ಟ್ರಿಲಿಯನ್ ಡಾಲರ್ ಇನ್ವೆಸ್ಟ್ಮೆಂಟ್ ಕಮಿಟ್ ಮಾಡಿರು ಇರುವುದಾಗಿ ಹೇಳಿದೆ ನಾರಾ ಲೋಕೇಶ್ ಹೂಡಿಕೆ ಮಂತ್ರ ಡಬಲ್ ಇಂಜಿನ್ ಸರ್ಕಾರದ ತಂತ್ರ ಸ್ನೇಹಿತರೆ ಆಂಧ್ರ ಐಟಿ ಸಚಿವ ಚಂದ್ರಬಾಬು ನಾಯಡು ಅವರ ಪುತ್ರ ನಾರಾ ಲೋಕೇಶ್ ಇವರ ವಂಶವಾದಕ್ಕೆ ಇವರನ್ನ ಟೀಕೆ ಮಾಡಬೇಕು ಅಪ್ಪ ಆದಮೇಲೆ ಮಗನ್ನ ಬೆಳೆಸ್ತಿದ್ದಾರೆ ಅಂತ ಹೇಳಿ ಆದರೆ ಅಪ್ಪ ಮಗ ಬಿಸಿನೆಸ್ ಅನ್ನ ಸೆಳೆಯೋದ್ರಲ್ಲಿ ಎಕ್ಸ್ಟ್ರಾರ್ಡಿನರಿ ಇವರು ಹೈದರಾಬಾದ್ನ ಕಟ್ಟೋದ್ರಲ್ಲೂ ಕೂಡ ಇವರ ದೊಡ್ಡ ಕೊಡುಗೆ ಇದೆ ಯಾರದು ಇವರ ಅಪ್ಪ ಚಂದ್ರಬಾಬು ನಾಯಡುದು ಸಿಇಓ ಚೀಫ್ ಮಿನಿಸ್ಟರ್ ಅಂತ ಕರೀತಾ ಇದ್ರು ಅವಾಗ ಚಂದ್ರಬಾಬು ನಾಯಡು ಅವರನ್ನ ಈ ಹಿಂದಿನ ಅವಧಿಗಳಲ್ಲಿ ಅವರು ಯಾವಾಗ್ಲೂ ಹಾಗೆ ಸಿಕ್ಕಾಪಟ್ಟೆ ಬಿಸಿನೆಸ್ ಫ್ರೆಂಡ್ಲಿ ಮಗನ್ನ ಕೂಡ ಅದೇ ಅದೇ ರೀತಿ ಟ್ರೈನ್ ಮಾಡ್ತಾ ಇದ್ದಾರೆ.
ಹೂಡಿಕೆಗಳ ಹೀರೋ ಆಗಿ ಹೊರ ಹೊಮ್ಮಿದ್ದಾರೆ ಅಪ್ಪ ಮಗ ಹೂಡಿಕೆ ವಿಚಾರವಾಗಿ ಇವರು ಕರ್ನಾಟಕ ಸರ್ಕಾರದೊಂದಿಗೆ ಟ್ವಿಟರ್ ನಲ್ಲಿ ಕುಸ್ತಿನೋ ಕುಸ್ತಿ ಬೆಂಗಳೂರಿನ ಗುಂಡಿ ಟ್ರಾಫಿಕ್ ಸಮಸ್ಯೆ ಚರ್ಚೆ ಆಗ್ತಿರುವಾಗ ಮಧ್ಯ ಮೂಗು ತೂರಿಸಿಕೊಂಡು ಬರ್ತಾ ಇದೆ ಹಿಂಗೆ ಬನ್ನಿ ನಮ್ಮ ರಾಜ್ಯಕ್ಕೆ ಬನ್ನಿ ಫ್ರೀ ಕರೆಂಟ್ ಕೊಡ್ತೀನಿ ಫ್ರೀ ಜಮೀನ್ ಕೊಡ್ತೀನಿ ಬೇಕಾದಷ್ಟು ಜಾಗ ಇದೆ ಸಿಟಿನೇ ಇಲ್ಲ ಹೊಸದಾಗಿ ಕಡ್ತಿರೋದು ಬನ್ನಿ ಅಂತ ಕರೀತಾ ಇದ್ದಾರೆ ಹಾಗಂತ ಅಷ್ಟಕ್ಕೆ ಮಾತ್ರ ಅಲ್ಲ ಆಂಧ್ರ ಸರ್ಕಾರ ತಗೊಳ್ತಿರೋ ಕ್ರಮ ರೂಪಿಸುತ್ತಿರೋ ಪಾಲಿಸಿ ಕೂಡ ಹುಡಿಕೆದಾರನ್ನ ಅಲ್ಲಿಗೆ ಅಟ್ರಾಕ್ಟ್ ಮಾಡ್ತಿದೆ ಆಂಧ್ರದಲ್ಲಿ ಒಪ್ಪಂದ ಒಪ್ಪಂದಾದ 15 20 ದಿನಗಳಲ್ಲಿ ಲ್ಯಾಂಡ್ ಅಲಾಟ್ಮೆಂಟ್ ಆಗ್ತಾ ಇದೆ ಇದು ತುಂಬಾ ತುಂಬಾ ಇಂಪಾರ್ಟೆಂಟ್ ಪ್ರೈವೇಟ್ ಕಂಪನಿಗಳಿಗಿಂತನೂ ಫಾಸ್ಟ್ ಆಗಿ ಕಂಪನಿಗಳು ಒಪ್ಪಂದವೇನೋ ಮಾಡ್ಕೊಳ್ತಾರೆ ಆದ್ರೆ ಅದು ಹೂಡಿಕೆಯಾಗಿ ಕನ್ವರ್ಟ್ ಆಗಿ ಫ್ಯಾಕ್ಟರಿ ಸ್ಥಾಪನೆ ಆಗಬೇಕು ಅಂದ್ರೆ ಲ್ಯಾಂಡ್ ಅಲಾಟ್ಮೆಂಟ್ ಫಾಸ್ಟ್ ಆಗಬೇಕು ವರ್ಷಘಟ್ಟಲೆ ಆಗೋದಿಲ್ಲ ಲಾಸ್ಟ್ಗೆ ಬೇರೆ ಕಡೆ ಹೋಗ್ತಾರೆ ಅವರು ಸುಮಾರು ಸ್ಟೇಟ್ಸ್ ಅಲ್ಲಿ ಹಂಗ ಆಗುತ್ತೆ ಆದ್ರೆ ಇಲ್ಲಿ 15 20 ಡೇಸ್ ಅಲ್ಲಿ ಲ್ಯಾಂಡ್ ಅಲಾಟ್ಮೆಂಟ್ ಆಗಬೇಕು ಅಷ್ಟು ಫಾಸ್ಟ್ ಇದ್ದಾರೆ ಭಾರತದಲ್ಲಿ ಎಲ್ಲೇ ಹೋದ್ರು ಕೂಡ ಭೂಸ್ವಾಧೀನದ್ದೇ ಸಮಸ್ಯೆ ಆದರೆ ಇಲ್ಲಿ ಹಂಗಿಲ್ಲ ಪ್ಯಾರಲಲ್ ಪ್ರಾಸೆಸಿಂಗ್ ಮಾಡ್ಸಿದ್ದಾರೆ ಅಂದ್ರೆ ಹೂಡಿಕೆ ಮಾಡೋಕೆ ಬರೋರು ಅಲ್ಲಿಲ್ಲಿ ಅಲ್ಲಾಡಬೇಕಂತಿಲ್ಲ ಅವರನ್ನ ಸುಸ್ತು ಮಾಡಲ್ಲ ಫೈಲ್ ಇಟ್ಕೊಂಡು ಅಲ್ಲಿ ಇಲ್ಲಿ ಸಲಾಂ ಮಾಡ್ಕೊಂಡು ಓಡಾಡಬೇಕು ಅಂತಿಲ್ಲ ಅವರು ಎಲ್ಲ ಒಂದೇ ಕಡೆ ಮಾಡ್ತಾ ಇದ್ದಾರೆ ಜೊತೆಗೆ ಅರ್ಲಿ ಬರ್ಡ್ ಸ್ಕೀಮ್ ಮೊದಲು ಬಂದವರಿಗೆ ಆಧ್ಯತೆ ಫಸ್ಟ್ ಯಾರು ಬರ್ತೀರಾ ಅವರಿಗೆ ಚೆನ್ನಾಗಿ ಇನ್ಸೆಂಟಿವ್ ಕೊಡ್ತೀವಿ ಅನ್ನೋ ದಾಳವನ್ನ ಉರುಳಿಸ್ತಾ ಇದ್ದಾರೆ ಇದರಿಂದ ಹುಳಿಕೆದಾರರು ಆ ಕಡೆಗೆ ಓಡ್ತಾ ಇದ್ದಾರೆ ಅಲ್ದೆ ಎಸ್ಕ್ರೋ ಅಕೌಂಟ್ ಮಾಡಿಕೊಡ್ತಾ ಇದ್ದಾರೆ ಹಿಂದೆ ಸರ್ಕಾರಗಳು ಸಬ್ಸಿಡಿ ಹಣ ಕೊಡ್ತಿರಲಿಲ್ಲ ಅನ್ನೋ ದೂರಗಳಿದ್ವು ಸರ್ಕಾರಗಳು ಹಸ್ತಕ್ಷೇಪ ಮಾಡ್ತೀವಿ ಅನ್ನೋ ಕಂಪ್ಲೇಂಟ್ಸ್ ಇದ್ವು ಇದನ್ನ ಹೋಗಲಾಡಿಸೋಕ್ಕೆ ಎಸ್ಕ್ರೋ ಅಕೌಂಟ್ ಜಾರಿ ತಂದಿದ್ದಾರೆ ಇದರಿಂದ ಕಂಪನಿಗಳಿಗೆ ಸರ್ಕಾರದಿಂದ ಜಮೆಯಾಗುವ ಹಣ ಆಟೋಮ್ಯಾಟಿಕ್ ಆಗಿ ಅವರ ಕೈ ಸೇರ್ತಾ ಇದೆ.
ಸಾಮಾನ್ಯವಾಗಿ ಸಚಿವರು ಅಧಿಕಾರಿಗಳ ಮೂಲಕ ಇನ್ವೆಸ್ಟರ್ ಗಳ ಜೊತೆ ಮಾತುಕಥೆ ನಡೆಸುತ್ತಾರೆ. ಆದರೆ ಆಂಧ್ರದಲ್ಲಿ ವ್ಯಕ್ತ ವಿರುದ್ಧ ಕುದ್ದು ನಾರಾ ಲೋಕೇಶ್ ಅಧಿಕಾರಿಗಳ ಮುಂದೆ ಹೋಗಿ ಮಾತನಾಡ್ತಿದ್ದಾರೆ. ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಓದಿರೋದ್ರಿಂದ ಕಾರ್ಪೊರೇಟ್ ಭಾಷೆ ಚೆನ್ನಾಗಿ ಬರುತ್ತೆ. ತಾವೇ ಅಧಿಕಾರಿಗಳೊಂದಿಗೆ ನೇರವಾಗಿ ಡಿಸ್ಕಸ್ ಮಾಡ್ತಾರೆ. ಸಿಂಪಲ್ ಆಗಿ ಹೇಳಬೇಕು ಅಂದ್ರೆ ಹೂಡಿಕೆದಾರ ಅತಿ ದೊಡ್ಡ ಸಮಸ್ಯೆಯನ್ನ ಅವರ ಅಂತರಾಳವನ್ನ ನಾರಾ ಲೋಕೇಶ್ ಅರ್ಥ ಮಾಡಿಕೊಂಡಿದ್ದಾರೆ. ಅಪ್ಪ ಕೂಡ ಬಿಸಿನೆಸ್ ಮ್ಯಾನ್, ಚೀಫ್ ಮಿನಿಸ್ಟರ್, ಸಿಇಓ ಚೀಫ್ ಮಿನಿಸ್ಟರ್. ಅಪ್ಪ ಕೂಡ ಬಿಸಿನೆಸ್ ಸಾಮ್ರಾಜ್ಯವನ್ನ ಕೂಡ ಕಟ್ಟಿದ್ದಾರೆ ಮಿಲ್ಕ್ ಪ್ರಾಡಕ್ಟ್ ಅದು ಇದು ಅಂತ ಹೇಳಿ ಸೋ ಇವರಿಗೂ ಕೂಡ ಅದೆಲ್ಲ ಮುಂಚೆಯಿಂದನೂ ಟ್ರೈನಿಂಗ್ ಆಗ್ಬಿಟ್ಟಿದೆ. ಸೋ ಡಿಲೇ ಇರಬಾರದು ಅನ್ಸರ್ಟನಿಟಿ ಇರಬಾರದು ಬಿಸಿನೆಸ್ ನಲ್ಲಿ ಅದನ್ನ ಪ್ರೈವೇಟ್ ಕಂಪನಿ ಯವರಿಗೆ ಅದು ಎಷ್ಟು ಮುಖ್ಯ ಅನ್ನೋದನ್ನ ಇವರು ಅರ್ಥ ಮಾಡ್ಕೊಂಡಿದ್ದಾರೆ ಒಂತರ ಆಂಧ್ರದ ಮಾರ್ಕೆಟಿಂಗ್ ಮ್ಯಾನೇಜರ್ ತರ ಓಡಾಡಿಸಿದ್ದಾರೆ. ಇದರ ಜೊತೆಗೆ ಅವರ ತಂದೆ ಸಿಎಂ ಚಂದ್ರಬಾಬು ನಾಯಡು ಲೀಡರ್ಶಿಪ್ ಇದು ಕೂಡ ಮ್ಯಾಟರ್ ಚಂದ್ರಬಾಬು ನಾಯಡು ಅವರ ಲೀಡರ್ಶಿಪ್ ಟ್ರಾಕ್ ರೆಕಾರ್ಡ್ ಇಡೀ ದೇಶಕ್ಕೆ ಗೊತ್ತು ನಿಮಗೆ ಆಗಲೇ ಹೇಳಿದ್ವಿ ಸಿಇಓ ಚೀಫ್ ಮಿನಿಸ್ಟರ್ ಅಂತ ಕರೀತಾರೆ ಅವರನ್ನ ಅಂತ ಹಾಗೇಗ ಪಿಎಂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಬೆಂಬಲ ಕೂಡ ಕೊಟ್ಟಿರೋದ್ರಿಂದ ಆ ಕಡೆನು ಕೂಡ ಇವರಿಗೆ ಒಂತರ ಪಾಸಿಟಿವಿಟಿ ಇದೆ ಅವರು ಕೂಡ ಒಂದು ಸ್ವಲ್ಪ ಪಾಲಿಸಿಯಲ್ಲಿ ಮತ್ತೆ ಹೊಸ ರಾಜಧಾನಿ ಕಟ್ಟೋಕೆ ಫಂಡಿಂಗ್ ಅದೆಲ್ಲ ಹೆಲ್ಪ್ ಮಾಡ್ತಾ ಇದ್ದಾರೆ.
ಈ ಚಂದ್ರಬಾಬು ನಾಯಡು ಅಂತನು ಒಂತರ ವೆದರ್ ರಿಪೋರ್ಟರ್ ರಾಜಕಾರಣದ ವೆದರ್ ರಿಪೋರ್ಟರ್ ಅಂತ ಹೇಳ್ತಾರೆ ಮುಂಚೆನೇ ಹವಮಾನ ಬದಲಾವಣೆ ಗೊತ್ತಾಗುತ್ತೆ ಇವರಿಗೆ ಅಂತ ಹೇಳಿ ಒಂದು ಸಲಾ ಮಾತ್ರ ಇವರು ಆ ರೀತಿ ಮೋಸ ಹೋಗಿರೋದು ಅಂದ್ರೆ ಸೋತಿರೋ ಸೈಡ್ನಲ್ಲಿ ಇದ್ದಿದ್ದು ಯಾವಾಗ್ಲೂ ವಿನ್ನಿಂಗ್ ಸೈಡ್ನಲ್ಲೇ ಇರ್ತಾರೆ ಇವರು ಚಂದ್ರಬಾಬು ನಾಯಡು ಮುಂಚೆನೆ ಗುರುತಿಸಿಬಿಟ್ಟು ಆ ಕಡೆ ಸೇರ್ಕೊಂಡು ಬಿಟ್ಟಿರ್ತಾರೆ ಆಮೇಲೆ ಒಳ್ಳೆ ರಿಲೇಷನ್ಶಿಪ್ ಮೇಂಟೈನ್ ಮಾಡಿ ದುಡ್ತಾ ಇರ್ತಾರೆ ಚೆನ್ನಾಗಿ ಸೋಲ್ತಾರೆ ಅಂತ ಗೊತ್ತಾದ್ರೆ ಕೈ ಬಿಟ್ಟು ಓಡಹೋಗ್ಬಿಡ್ತಾರೆ ದೂರಕ್ಕೆ ಸೋ ಫ್ರೆಂಡ್ಸ್ ಇದಾಗಿತ್ತು ಆಂಧ್ರದಲ್ಲಿ ಯಾವ ರೀತಿ ಇನ್ವೆಸ್ಟ್ಮೆಂಟ್ ಹರೆದು ಬರ್ತಾ ಇದೆ ಹೇಗೆ ಅರ್ಧ ರಾಜ್ಯ ಆಮೇಲೆ ಹೈದರಾಬಾದ್ನಂತಹ ಕ್ಯಾಶ್ ಕೌ ದುಡ್ಡಿನ ಕಾಮದೇನುವನ್ನ ಕಳ್ಕೊಂಡಮೇಲೂ ಕೂಡ ಒಂದೇ ಒಂದು ದೊಡ್ಡ ಬಿಸಿನೆಸ್ ಹಬ್ನ ಜಿಲ್ಲೆ ಅಥವಾ ಪ್ರದೇಶ ಇಲ್ಲದೆ ಇದ್ರೂ ಕೂಡ ಫ್ರಮ್ ಸ್ಕ್ರಾಚ್ ಕಟ್ತಾ ಇದ್ರೂ ಕೂಡ ಹೇಗೆ ಈ ರೀತಿ ಹಂಡ್ರೆಡ್ಸ್ ಆಫ್ ಬಿಲಿಯನ್ಸ್ ಆಫ್ ಡಾಲರ್ಸ್ ನ ಸೆಳಿತಾ ಇದಾರೆ ಅನ್ನೋದನ್ನ ಎಕ್ಸ್ಪ್ಲೈನ್ ಮಾಡೋ ಪ್ರಯತ್ನ.


