ಏಷಿಯನ್ ಪೇಂಟ್ಸ್ ಕಳೆದ 83 ವರ್ಷಗಳಿಂದ ಪೇಂಟ್ ಇಂಡಸ್ಟ್ರಿಯ ಮಹಾರಾಜನಂತೆ ಕಂಗೊಳಿಸುತ್ತಿದೆ ಮಗ ತಂದೆ ಅಜ್ಜ ಹೀಗೆ ಮೂರು ಪೀಳಿಗೆಯ ಜನರು ಈ ಖ್ಯಾತ ಕಂಪನಿಯ ಬಣ್ಣಗಳನ್ನ ತಮ್ಮ ಮನೆ ಕಚೇರಿ ಅಂಗಡಿಗಳ ವಾಲ್ಗಳಿಗೆ ಬಳಸಿದ್ದಾರೆ ಅವರೆಲ್ಲರ ಮೊದಲ ಆಯ್ಕೆ ಏಷಿಯನ್ ಪೇಂಟ್ಸ್ ಆಗಿ ಗಿತ್ತು ಅನ್ನೋದು ಸುಳ್ಳೇನಲ್ಲ ಹೀಗೆ ಹತ್ತು ಹಲವು ಐತಿಹಾಸಿಕ ಹೆಜ್ಜೆಗಳ ಮೂಲಕ ಭಾರತೀಯರ ಮನೆಮಾತಾಗಿದ್ದ ಏಷಿಯನ್ ಪೇಂಟ್ಸ್ ಬದಲಾದ ಕಾಲಘಟ್ಟದಲ್ಲಿ ಬಹಳ ತುರಸಿನ ಸ್ಪರ್ಧೆ ಎದುರಿಸ್ತಾ ಇದೆ ತಾಂತ್ರಿಕವಾಗಿ ಸಂಸ್ಥೆ ಸಾಕಷ್ಟು ಬದಲಾವಣೆಯನ್ನ ಕಂಡಿದೆ ಹಾಗಾದರೆ ನಿಜಕ್ಕೂ ಏಷಿಯನ್ ಪೇಂಟ್ಸ್ ಪೈಪೋಟಿ ಎದುರಿಸ್ತಾ ಇದೀಯಾ ಈ ಬಣ್ಣದ ಸಂಸ್ಥೆ ಹುಟ್ಟಿದ್ದು ಹೇಗೆ ಬ್ರಿಟಿಷ್ ಕಂಪನಿಗಳಿಗೂ ಸೆಡ್ಡು ಹೊಡೆದಿದ್ದ ಏಷಿಯನ್ ಪೇಯಿಂಟ್ಸ್ ಬಣ್ಣಗಳ ಗುಣಮಟ್ಟದ ಗುಟ್ಟೇನು ಇದೆಲ್ಲವನ್ನ ಇಂದಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದು 1942ರ ಸಮಯ ದೇಶದಲ್ಲಿ ಸ್ವತಂತ್ರೀಯದ ಕಿಚ್ಚು ತಾರಕಕ್ಕೇರಿದ್ದ ಕಾಲಘಟ್ಟ ಅತ್ತ ಬೀದಿಗಳಲ್ಲಿ ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಸ್ವತಂತ್ರೀಯ ಚಳುವಳಿ ನಡೀತಾ ಇದ್ದರೆ ಇತ್ತ ಮುಂಬೈನ ಸಣ್ಣ ಗ್ಯಾರೇಜ್ ಕೊಟಡಿಯೊಂದರಲ್ಲಿ ಪೇಂಟ್ಸ್ ವಿಚಾರದಲ್ಲಿ ಸ್ವಾವಲಂಬನೆಯ ಬೀಜ ಬಿತ್ತಲಾಗುತ್ತಿತ್ತು ನಾಲ್ವರು ಯುವಕ ರು ಭಾರತದ ಬಣ್ಣದ ಲೋಕಕ್ಕೆ ರಂಗು ತುಂಬುತ್ತಿದ್ದರು ಅಂದಿನ ಸಮಯದಲ್ಲಿ ಇಡೀ ಪೇಂಟ್ ಕ್ಷೇತ್ರ ಆಂಗ್ಲರ ಕಪಿಮುಷ್ಟಿಯಲ್ಲೇ ಇತ್ತು ಇಂಗ್ಲೆಂಡ್ನಿಂದ ಬರುವ ಬಣ್ಣಗಳೇ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದವು.
ಭಾರತೀಯ ಬಣ್ಣಗಳ ಬ್ರಾಂಡ್ಗಳನ್ನ ಕೇಳೋರೆ ಇರಲಿಲ್ಲ ಆದರೆ ಎರಡನೇ ಜಾಗತಿಕ ಯುದ್ಧದ ವೇಳೆ ಸಮಯ ಬದಲಾಯಿತು ವಿಶ್ವಯುದ್ಧ ಹಾಗೂ ಭಾರತದಲ್ಲಿ ಚಲೆಜಾವು ಚಳುವಳಿ ತಾರಕಕ್ಕೇರಿದ ಪರಿಣಾಮ ಬ್ರಿಟಿಷರು ಇಂಗ್ಲೆಂಡ್ನಿಂದ ಪೇಂಟ್ಗಳ ಆಮದನ್ನ ಕೆಲಕಾಲ ಸ್ಥಗಿತಗೊಳಿಸಿದ್ರು ಇದರಿಂದ ಮಾರುಕಟ್ಟೆಯಲ್ಲಿ ಬಣ್ಣಗಳ ಆಯ್ಕೆಯೇ ಇರಲಿಲ್ಲ ಅಸಲಿಗೆ ಅಂದು ಪೇಂಟ್ ಮಾರುಕಟ್ಟೆಯಲ್ಲಿ ದೇಶೀಯ ಬಣ್ಣದ ಬ್ರಾಂಡ್ ಶಾಲಿಮಾರ್ ಪೇಂಟ್ಸ್ ಸಾಕಷ್ಟು ಜನಪ್ರಿಯವಾಗ ತೊಡಗಿತ್ತು ಒಂದು ರೀತಿಯಲ್ಲಿ ಸೊರಗಿದ ಸ್ಥಿತಿಯಲ್ಲಿತ್ತು ಇದನ್ನೇ ಗಮನಿಸಿದ ಚಂಪಕ್ಲಾಲ್ ಚೋಕ್ಸೆ ತಾವ್ಯಾಕೆ ಈ ಪೇಂಟ್ಸ್ ಬರವನ್ನ ನೀಗಿಸಬಾರದು ಅಂದುಕೊಂಡು ಫೀಲ್ಡ್ಗೆ ಇಳಿದರು ಹಾಗಂತ ಇದು ಒಬ್ಬರೇ ಮಾಡುವಂತ ಕೆಲಸವಲ್ಲ ಅನ್ನುವ ಅರಿವು ಚಂಪಕ್ಲಾಲ್ ಅವರಿಗಿತ್ತು ಹೀಗಾಗಿ ತಮ್ಮ ಇತರೇ ಮೂವರು ಗೆಳೆಯರನ್ನ ಒಗ್ಗೋಳಿಸಿಕೊಂಡು ಅಕಾಡಕ್ಕೆ ಇಳಿತ್ತಾರೆ ಮುಂಬೈನ ಕಿರಿದಾದ ಗ್ಯಾರೇಜ್ ಶೆಡ್ ಒಂದರಲ್ಲಿ ಮೂವರು ಗೆಳೆಯರೊಂದಿಗೆ ಪೇಂಟ್ಸ್ ತಯಾರಿಕೆಯ ಕೆಲಸ ಆರಂಭವಾಗಿತ್ತು ಅಂದುಕೊಂಡಂತೆ ಪೇಂಟ್ಸ್ ರೆಡಿಯಾಗಿತ್ತು ಆರಂಭದಲ್ಲಿ ಕ್ವಾಲಿಟಿ ಚೆಕ್ ಬಳಿಕ ಪ್ಯಾಕೇಜಿಂಗ್ ದರ ನಿಗದಿ ಸೇರಿದಂತೆ ಪ್ರೊಡಕ್ಷನ್ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನ ಮಾಡಲಾಯಿತು ಬಳಿಕ ಪೇಂಟ್ಸ್ಗೆ ಏಷಿಯನ್ ಪೇಂಟ್ಸ್ ಅಂತ ಹೆಸರಿಡಲಾಯಿತು ಇನ್ನೇನು ಬಣ್ಣದ ಡಬ್ಬಿಗಳನ್ನ ಮಾರುಕಟ್ಟೆಗೆ ಪರಿಚಯಿಸಬೇಕು ಅಂದುಕೊಂಡು ವಿತ್ತರಕರ ಬಳಿ ಹೋಗಲಾಯಿತು ಆದರೆ ಆರಂಭದಲ್ಲೇ ವಿಘ್ನ ಅನ್ನುವ ಹಾಗೆ ಪೇಂಟ್ಸ್ ವಿತರಕರು ಹೊಸ ಬ್ರಾಂಡ್ ಎನ್ನುವ ಕಾರಣಕ್ಕೆ ಏಷಿಯನ್ ಪೇಂಟ್ಸ್ ಮಾರಾಟಕ್ಕೆ ನಿರಾಕರಿಸಿದ್ರು ಇದರಿಂದ ಗೆಳೆಯರಿಗೆ ದೊಡ್ಡ ನಿರಾಸೆಯೇ ಆಯಿತು ಆದರೆ ಹಾಗಂತ ಸುಮ್ಮನೆ ಕುಳಿತುಕೊಳ್ಳುವಂತಿರಲಿಲ್ಲ.
ಈ ವಿಚಾರದಲ್ಲಿ ಚಂಪಕ್ಲಾಲ್ ಒಂದು ನಿರ್ಧಾರಕ್ಕೆ ಬಂದ್ರು ತಾವೇ ಕೊದ್ದು ಗ್ರಾಹಕರ ಬಳಿ ಹೋಗೋಣ ಚಿಲ್ಲರೆ ಅಂಗಡಿಕಾರರ ಮನವಲಿಸಿ ನೇರವಾಗಿ ಪೇಂಟ್ಸ್ ಮಾರಾಟ ಅಕಾಡಕ್ಕೆ ಇಳಿಯೋಣ ಅಂತ ನಿರ್ಧರಿಸಿದ್ರು ಇದೇವೇಳೆ ಚಂಪಕ್ಲಾಲ್ ಒಂದು ವಿಷಯವನ್ನ ಗಮನಿಸಿದ್ರು ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಪೊಂಗಲ್ ವೇಳೆ ಪ್ಯಾಂಟ್ಸ್ಗಳಿಂದ ನೆಲವನ್ನ ಸಿಂಗರಿಸುವ ಒಲೆ ಬಾಗಿಲುಗಳಿಗೆ ಬಣ್ಣ ಬಳೆಯುವ ಕೆಲಸ ನಡೆಯುತ್ತದೆ ಹಾಗೆಯೇ ಕಾರ ಹುಣ್ಣಿಮೆ ದೀಪಾವಳಿಯಲ್ಲಿ ಉತ್ತರ ಕರ್ನಾಟಕ ಮಹಾರಾಷ್ಟ್ರದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಟಗರುಗಳ ಸ್ಪರ್ಧೆ ನಡೆಯುತ್ತೆ ಈ ಸ್ಪರ್ಧೆಯ ಸಂದರ್ಭಗಳಲ್ಲಿ ಎತ್ತು ಎಮ್ಮೆ ಕೋಣ ಟಗರುಗಳ ಕೋಡುಗಳಿಗೆ ಬಣ್ಣ ಬಳೆಯಲಾಗುತ್ತೆ ಇದಕ್ಕಾಗಿ ರೈತಾಪಿ ಜನರು ಪೇಂಟ್ಸ್ಗಳನ್ನ ಬಳಸುತ್ತಾರೆ ಆದರೆ ಈ ಸಮಯದಲ್ಲಿ ಪೇಂಟ್ಸ್ ಡಬ್ಬಿಗಳು ದೊಡ್ಡ ಗಾತ್ರದಲ್ಲೇ ಲಭ್ಯವಿರುತ್ತಿದ್ದವು ಕಡಿಮೆ ಉಪಯೋಗಕ್ಕೆ ಅಗತ್ಯವಾದ ಕ್ವಾಂಟಿಟಿ ಡಬ್ಬಗಳು ಮಾರಾಟಕ್ಕೆ ಲಭ್ಯವಿರಲಿಲ್ಲ ಇದರಿಂದ ಕೃಷಿಕರು ಅನಗತ್ಯವಾಗಿ ದೊಡ್ಡ ಬಾಕ್ಸ್ಗಳನ್ನೇ ಖರೀದಿಸಬೇಕಾಗ್ತಾ ಇತ್ತು.
ಹೀಗಾಗಿ ಸಣ್ಣ ಸಣ್ಣ ಡಬ್ಬಿಗಳಲ್ಲಿ ಅಂದರೆ 100 200 ಗ್ರಾಂಗಳ ಡಬ್ಬಿಗಳಲ್ಲಿ ಪೇಂಟನ್ನ ಪರಿಚಯಿಸಿದ್ರೆ ಹೇಗೆ ಎನ್ನುವ ಪ್ಲಾನ್ ಹೊಳೆಯಿತು 1945ರಲ್ಲಿ ಮೊದಲ ಬಾರಿಗೆ 50 100 ಎl ನ ಪೇಂಟ್ಸ್ ಮಿನಿ ಬಾಕ್ಸ್ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು ಚಂಪಕ್ಲಾಲ್ ಅವರ ಪ್ರಯೋಗ ಏಷಿಯನ್ ಪೇಂಟ್ಸ್ ಕಂಪನಿಯ ಅದೃಷ್ಟವನ್ನೇ ಬದಲಾಯಿಸಿತು ಜನರು ಈ ಮಿನಿ ಡಬ್ಬಗಳಿಗೆ ನಿರೀಕ್ಷೆ ಮೀರಿ ಸ್ಪಂದಿಸಿದ್ರು ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ಬಣ್ಣದ ಡಬ್ಬಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿದ್ದರಿಂದ ಜನರು ಅನಗತ್ಯ ಖರೀದಿ ಹೊರೆಯಿಂದ ಬಚಾವಾದರು ಇದು ಗ್ರಾಹಕರಿಗೂ ಒಂದು ರೀತಿಯಲ್ಲಿ ಅನುಕೂಲತೆ ಒದಗಿಸಿತು ನೋಡ ನೋಡುತ್ತಿದ್ದಂತೆ ಏಷಿಯನ್ ಪೇಂಟ್ಸ್ ಹಳ್ಳಿಯಿಂದ ಹಿಡಿದು ಸಣ್ಣ ಪಟ್ಟಣಗಳವರೆಗೂ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲು ಪ್ರಾರಂಭಿಸಿತು ಜನರು ತಮ್ಮ ಮನೆಗಳ ಚೌಕಟ್ಟಿನಿಂದ ಹಿಡಿದು ಅಂಗಡಿಗಳ ಬಾಗಿಲು ಗುಡಿಗೋಪುರಗಳ ಕಟ್ಟಡಗಳಿಗೂ ಏಷಿಯನ್ ಪೇಂಟ್ಸ್ ಗಳನ್ನ ಬಳಸಲು ಪ್ರಾರಂಭಿಸಿದ್ರು ಇದಾದ ಕೆಲವು ವರ್ಷಗಳ ಬಳಿಕ ದೊಡ್ಡ ನಗರಗಳ ಬಿಲ್ಡಿಂಗ್ಗಳು ಇಮಾರತುಗಳು ಸಹ ಏಷಿಯನ್ ಪೇಂಟ್ಸ್ ನಿಂದ ರಂಗು ತುಂಬಿಕೊಂಡವು ವಿಚಿತ್ರ ಅಂದ್ರೆ ಯಾವ ವಿತರಕರು ಅಂದು ಏಷಿಯನ್ ಪೇಂಟ್ಸ್ ವಿತರಣೆಗೆ ನಿರಾಕರಿಸಿದ್ರೋ ಬಳಿಕ ಅವರೇ ಮುಂದೆ ಬಂದು ಪೇಂಟ್ಸ್ ವಿತರಣೆಯ ಹಕ್ಕು ನೀಡುವಂತೆ ಕಂಪನಿಯನ್ನ ಗೋಗರಿಯುವಂತಾಯಿತು ಅಷ್ಟರ ಮಟ್ಟಿಗೆ ಏಷಿಯನ್ ಪೇಂಟ್ಸ್ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು
ಎಲ್ಲವೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿತ್ತು ಏಷಿಯನ್ ಪೇಂಟ್ಸ್ ಉತ್ತಮ ರೀತಿಯಲ್ಲೇ ನಡೆದಿತ್ತು ಆದರೆ 1950 ರಲ್ಲಿ ಚಂಪಕ್ಲಾಲ್ ಚೋಕ್ಸೆ ಅವರಿಗೆ ಪೇಂಟ್ಸ್ ಮಾರುಕಟ್ಟೆ ಏಕತಾನತೆಯಿಂದ ಕೂಡಿದೆ ಅನಿಸಲು ಶುರುವಾಯಿತು ಅಂದು ಮಾರುಕಟ್ಟೆಯಲ್ಲಿಇದ್ದದ್ದು ಕೇವಲ ಎರಡೇ ಎರಡು ವೆರೈಟಿಯ ಬಣ್ಣಗಳು ಒಂದು ಡ್ರೈ ಡಿಸ್ಟೆಂಪರ್ ಮತ್ತೊಂದು ಪ್ಲಾಸ್ಟಿಕ್ ಇಮುಲೇಷನ್ ಪೇಂಟ್ ಇದರಲ್ಲಿ ಡ್ರೈ ಟೆಂಪರ್ ಪೇಂಟ್ ಬಹಳ ಕೆಟ್ಟದಾಗಿ ವಾಸನೆ ಬರ್ತಾ ಇತ್ತು ಜೊತೆಗೆ ಬಹುಬೇಗನೇ ತನ್ನ ರಂಗು ಕಳೆದುಕೊಳ್ತಾ ಇತ್ತು ಬಾಳಿಕೆ ಬರ್ತಾ ಇರಲಿಲ್ಲ ಆದರೆ ಪ್ಲಾಸ್ಟಿಕ್ ಎಮಿಲೇಷನ್ ಪೇಂಟ್ ಬಾಳಿಕೆ ಏನು ಬರ್ತಾ ಇತ್ತು ಆದರೆ ಇದು ಸಿಕ್ಕಪಟ್ಟೆ ದುಬಾರಿಯಾಗಿತ್ತು ಸಾಮಾನ್ಯ ಜನರು ಇದನ್ನ ಬಳಸೋದು ಬಹಳವೇ ದುರ್ಲಭವಾಗಿತ್ತು ಹೀಗಾಗಿ ಚಂಪಕ್ಲಾಲ್ ಇವೆರಡು ಗುಣಗಳು ಮಿಳಿತವಾಗಿರುವ ಹಾಗೂ ಗ್ರಾಹಕರಿಗೂ ಹೊರೆಯಾಗದಂತಹ ಬಣ್ಣವಂದನ್ನ ಹೊರತರುವ ಯೋಚನೆ ಮಾಡಿದ್ರು ಅದರ ಪ್ರತಿಫಲವೇ ಟ್ರ್ಾಕ್ಟರ್ ಡಿಸ್ಟೆಂಪರ್ ಈ ಪೇಂಟ್ ಗುಣಮಟ್ಟದಲ್ಲೂ ಡ್ರೈ ಡಿಸ್ಟೆಂಪರ್ ಗಿಂತ ಉತ್ತಮವಾಗಿತ್ತು ಜೊತೆಗೆ ಬೆಲೆಯು ಕೂಡ ಗ್ರಾಹಕ ಸ್ನೇಹಿಯಾಗಿತ್ತು ಹಲ ವರ್ಷಗಳ ಕಾಲ ಇದು ಬಾಳಿಕೆ ಸಹ ಬರುತ್ತಿತ್ತು.
ಈ ಎಲ್ಲಾ ಕಾರಣಗಳಿಂದಾಗಿ ಟ್ರ್ಯಾಕ್ಟರ್ ಡಿಸ್ಟೆಂಪರ್ ಅನ್ನ ಜನರು ಬಹುಬೇಗನೆ ಸ್ವೀಕರಿಸಿದ್ರು ಬೇಡಿಕೆ ಅದೆಷ್ಟರ ಮಟ್ಟಿಗೆ ಏರಿತ್ತು ಅಂದ್ರೆ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ವು ಇದರ ಎಫೆಕ್ಟ್ ಅನ್ನುವ ಹಾಗೆ ಎರಡೇ ವರ್ಷದಲ್ಲಿ ಕಂಪನಿಯ ಆದಾಯ ಕೂಡ ಮುಗಿಲುಮುಟ್ಟಿತ್ತು 19 52ರಲ್ಲಿ ಕಂಪನಿಯ ಆದಾಯ 23 ಕೋಟಿಗೆ ಏರಿತು. ಇದು ಅಂದಿನ ದಿನಮಾನಗಳಲ್ಲಿ ಅತ್ಯಧಿಕ ವರಮಾನವಾಗಿತ್ತು. ಈ ಯಸಸ್ಸಿನೊಂದಿಗೆ ಕಂಪನಿ ತನ್ನ ಬ್ರಾಂಡಿಂಗ್ ಗಾಗಿ ಚಿತ್ತನಿಟ್ಟಿತು. ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಗ್ರಾಹಕರನ್ನ ಸೆಳಿಯುವಂತೆ ಮಾಡುವ ಪ್ರಯೋಗಗಳತ್ತ ಗಮನಹರಿಸಲಾಯಿತು. 1952 ರಲ್ಲಿ ಕಂಪನಿ ಇದಕ್ಕಾಗಿ ಜಾಹಿರಾತು ಪ್ರಚುರಪಡಿಸಲು ಯೋಚನೆಯೊಂದನ್ನ ರೂಪಿಸಿತು. ಈ ಜಾಹಿರಾತು ಅಭಿಯಾನ ಕೇವಲ ಹೊಸ ಗ್ರಾಹಕರನ್ನ ಸೆಳೆಯೋದಷ್ಟೇ ಅಲ್ಲ ಜೊತೆಗೆ ಹಳೆಯ ಗ್ರಾಹಕರನ್ನ ಹಿಡಿದಿಟ್ಟುಕೊಳ್ಳುವ ಯೋಚನೆ ಹೊಂದಿತ್ತು. ಅಲ್ಲದೆ ಇದು ಜನರ ಹೃದಯವನ್ನ ಮುಟ್ಟಬೇಕು ಅನ್ನೋದು ಕಂಪನಿಯ ನಿಲುವಾಗಿತ್ತು. ಇದಕ್ಕಾಗಿ ಅಂದಿನ ಜನಪ್ರಿಯ ಕಾರ್ಟೂನಿಸ್ಟ್ ಶ್ರೀ ಆರ್ ಕೆ ಲಕ್ಷ್ಮಣ್ ಅವರನ್ನ ಕಂಪನಿ ಸಂಪರ್ಕಿಸಿತು. ಮೊದಲೇ ವ್ಯಂಗ್ಯ ಚಿತ್ರದಲ್ಲಿ ಮಹಾ ದೈತ್ಯರಾಗಿದ್ದ ಆರ್ ಕೆ ಲಕ್ಷ್ಮಣ್ ಏಷಿಯನ್ ಪೇಂಟ್ಸ್ ಗಾಗಿ ನೆನಪಿಟ್ಟುಕೊಳ್ಳುವಂತಹ ಹಾಗೆ ಜನರಿಗೆ ಸುಲಭವಾಗಿ ಕನೆಕ್ಟ್ ಆಗುವ ಚಿತ್ರವಂದನ್ನ ಬಿಡಿಸಿಕೊಟ್ಟರು.
ಈ ಚಿತ್ರಕ್ಕೆ ಗಟ್ಟು ಅಂತ ಹೆಸರಿಡಲಾಯಿತು. ಗಟ್ಟು ಒಬ್ಬ ಬಾಲಕನ ಚಿತ್ರವಾಗಿತ್ತು ಕೈಯಲ್ಲಿ ಪೇಂಟ್ ಬ್ರಷ್ ಹಿಡಿದುಕೊಂಡು ಕೆದರಿದ ಕೂದಲಿನೊಂದಿಗೆ ನಗು ಮೊಗದಿಂದ ಕೂಡಿದ ತುಂಟ ಬಾಲಕನ ಚಿತ್ರ ಎಂಥವರನ್ನ ಕೂಡ ಮೋಡಿ ಮಾಡುವಂತಿತ್ತು ಈ ಚಿತ್ರದಲ್ಲಿರುವ ಬಾಲಕ ತಮ್ಮ ಮನೆಯ ಸದಸ್ಯನೇನು ಅನ್ನುವ ರೀತಿಯಲ್ಲಿ ಫೀಲ್ ಕೊಡ್ತಾ ಇತ್ತು ಜೊತೆಗೆ ಅದಕ್ಕೆ ಇಡಲಾದ ಹೆಸರು ಕೂಡ ಅಷ್ಟೇ ಆಪ್ತವಾಗಿತ್ತು ಇನ್ನು ಕಂಪನಿಯ ಜಾಹಿರಾತು ಅಭಿಯಾನದ ಅಂಗವಾಗಿ ಜನರ ಒಳಗೊಳ್ಳುವಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಪರ್ಧೆಕೂಡ ಆಯೋಜಿಸಿತ್ತು ಈ ಜಾಹಿರಾತು ಬಾಲಕನ ಸರಿಯಾದ ಹೆಸರು ಹೇಳಿದವರಿಗೆ 500 ರೂಪಾಯಿ ಬಹುಮಾನ ಕೊಡೋದಾಗಿ ಘೋಷಣೆ ಮಾಡಲಾಯಿತು ಅಚ್ಚರಿ ಅಂದ್ರೆ ಅಂದಿನ ಸಂದರ್ಭದಲ್ಲಿ ಬರೊಬ್ಬರಿ 47000 ಜನ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಆದರೆ ಗೆದ್ದವರು ಮಾತ್ರ ಇಬ್ಬರೇ ಆಗಿದ್ರು ಅಲ್ಲದೆ ಆಗಿನ ಸಮಯದಲ್ಲಿ 500 ಬಹುಮಾನ ದೊಡ್ಡ ಮೊತ್ತವೇ ಆಗಿತ್ತು ದಿನಗಳದಂತೆ ಈ ಗಟ್ಟು ಕೇವಲ ಪಾತ್ರವಾಗಲಿಲ್ಲ ಬದಲಾಗಿ ಕಂಪನಿಯ ಐಕಾನ್ ಆಗಿ ಹೊರಹೊಮ್ಮಿದ್ದ ಕಂಪನಿ ಟ್ರ್ಾಕ್ಟರ್ ಡಿಸ್ಟೆಂಪರ್ ಗಾಗಿ ಈ ಗಟ್ಟು ಚಿತ್ರವನ್ನೇ ಮುಖ್ಯ ರಾಯಭಾರಿಯನ್ನಾಗಿ ಬಳಸಿಕೊಳ್ತು ಇದಲ್ಲದೆ ಡೋಂಟ್ ಲೂಸ್ ಯುವರ್ ಟೆಂಪರ್ ಯೂಸ್ ಟ್ರ್ಾಕ್ಟರ್ ಡಿಸ್ಟೆಂಪರ್ ಎನ್ನುವ ಟ್ಯಾಗ್ ಲೈನ್ ಸಾಕಷ್ಟು ಗಮನ ಸೆಳೆದಿತ್ತು ಇದು ಜನರಿಗೆ ಈ ಬ್ರಾಂಡ್ ಮೇಲೆ ಮತ್ತಷ್ಟು ಭರವಸೆ ಮೂಡುವಂತೆ ಮಾಡಿತ್ತು ಈ ಅಭಿಯಾನ ಕಂಪನಿಗೆ ಒಳ್ಳೆಯ ಪ್ರಾಫಿಟ್ ತಂದುಕೊಡುತ್ತೆ ನಾಲ್ಕೇ ವರ್ಷಗಳಲ್ಲಿ ಪೇಂಟ್ಸ್ ಬೇಡಿಕೆ 10 ಪಟ್ಟು ಹೆಚ್ಚಳ ಕಂಡಿತು ಅಲ್ಲದೆ ಬೇಡಿಕೆ ಅದೆಷ್ಟರ ಮಟ್ಟಿಗೆ ಹೆಚ್ಚಿತು ಅಂದ್ರೆ ಕಂಪನಿ ಮುಂಬೈನ ನ ಭಾಂಡೂಪ್ನಲ್ಲಿ ಪ್ರತ್ಯೇಕ ಪೇಂಟ್ ಉತ್ಪಾದನಾ ಘಟಕವನ್ನೇ ಸ್ಥಾಪಿಸುವಂತ ಆಯಿತು.
1967 ರಲ್ಲಿ ಕಂಪನಿ ತನ್ನ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ತು ಕಾಕತಾಳಿಯ ಅನ್ನುವ ಹಾಗೆ ಇದೇ ವರ್ಷ ಏಷಿಯನ್ ಪೇಂಟ್ಸ್ ಭಾರತದ ನಂಬರ್ ಒನ್ ಪೇಂಟ್ಸ್ ಕಂಪನಿ ಎನ್ನುವ ಗರಿಮೆಗೂ ಪಾತ್ರವಾಯಿತು ನಿಮಗೆ ಗೊತ್ತಿರಲಿ ಕಂಪನಿ ಸ್ಥಾಪನೆಯಾಗಿ 83 ವರ್ಷದ ಬಳಿಕ ಇಂದಿಗೂ ಏಷಿಯನ್ ಪೇಂಟ್ಸ್ ನಂಬರ್ ಒನ್ ಸ್ಥಾನವನ್ನ ಅಜಯವಾಗಿಸಿಕೊಂಡಿದೆ ಅಷ್ಟಕ್ಕೂ ಇಷ್ಟು ವರ್ಷಗಳ ಕಾಲ ಏಷಿಯನ್ ಪೇಂಟ್ಸ್ ಈ ಹಿರಿಮೆ ಕಾಯ್ದುಕೊಂಡಿದ್ದು ಹೇಗೆ ಅನ್ನುವ ಪ್ರಶ್ನೆ ಸಹಜ ಅದಕ್ಕೊತ್ತರ ಕಂಪನಿ ಕಂಪನಿಯ ಡೆಡಿಕೇಶನ್ ಹಾಗೂ ಗುಣಮಟ್ಟದ ಪೇಂಟ್ಸ್ ಗಳಲ್ಲೇ ಇದೆ ಇದಕ್ಕಾಗಿ ಕಂಪನಿ ಹಲವಾರು ಅಂಶಗಳನ್ನ ಅಳವಡಿಸಿಕೊಂಡಿದ್ದು ಗಮನ ಸೆಳೆಯುತ್ತದೆ ಮೊದಲನೆದಾಗಿ ತಾಂತ್ರಿಕತೆಯಲ್ಲಿ ಹೂಡಿಕೆ ತಮಗೆ ಗೊತ್ತಿರಲಿ ಏಷಿಯನ್ ಪೇಂಟ್ಸ್ ಕೇವಲ ಪ್ರಾಡಕ್ಟ್ಗಳ ಉತ್ಪಾದನೆಯತ್ತ ಮಾತ್ರ ಚಿತ್ತ ನಿಟ್ಟಿರಲಿಲ್ಲ ಬದಲಾಗಿ ಕಂಪನಿಯ ತಾಂತ್ರಿಕತೆಯಲ್ಲೂ ವಿಶೇಷ ಗಮನಹರಿಸಿತು ಬೇರೆಲ್ಲ ಕಂಪನಿಗಳು ಬೇಡಿಕೆ ಆದರಿಸಿ ಉತ್ಪನ್ನಗಳನ್ನ ಮಾರುಕಟ್ಟೆಗೆ ಬಿಟ್ಟರೆ.
ಏಷಿಯನ್ ಪೇಂಟ್ಸ್ ಭವಿಷ್ಯದಲ್ಲಿ ಯಾವ ಪೇಂಟ್ಗೆ ಯಾವ ರಾಜ್ಯದಿಂದ ಬೇಡಿಕೆ ಕೆ ಬರಲಿದೆ ಅಲ್ಲಿ ಬಳಸುವ ವಿಶೇಷ ಬಣ್ಣಗಳು ಯಾವುವು ಅನ್ನೋದನ್ನ ಮೊದಲೇ ತಿಳಿದುಕೊಂಡಿರತಾ ಇತ್ತು ಸರಿಯಾದ ಸಮಯಕ್ಕೆ ಆ ಉತ್ಪನ್ನಗಳು ಮಾರ್ಕೆಟ್ನಲ್ಲಿ ಇರುವಂತೆ ಯೋಜನೆ ರೂಪಿಸುತ್ತಿತ್ತು ಇದು ಸಾಧ್ಯವಾಗಿದ್ದು ಕಂಪನಿಯ ತಾಂತ್ರಿಕ ಸಾಮರ್ಥ್ಯದಿಂದ 1970 ರಲ್ಲಿ ಏಷಿಯನ್ ಪೇಂಟ್ಸ್ ದೇಶದಲ್ಲೇ ಮೊದಲ ಬಾರಿಗೆ 9 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಕಂಪ್ಯೂಟರ್ನ್ನ ಖರೀದಿಸಿ ಗಮನ ಸೆಳೆದಿತ್ತು ಇದರಿಂದ ಲೆಕ್ಕಾಚಾರ ಹಾಕೋದು ಸುಲಭವಾಗ್ತಾ ಇತ್ತು ಬೇಡಿಕೆ ಪೂರೈಕೆ ಗುಣಮಟ್ಟ ಪರೀಕ್ಷೆ ಪ್ಯಾಕೇಜಿಂಗ್ ಆಯ್ಕೆ ಹೀಗೆ ಹಲವು ವಿಚಾರಗಳಲ್ಲಿ ಈ ತಾಂತ್ರಿಕತೆಯನ್ನ ಬಳಕೆ ಮಾಡಲಾಗ್ತಾ ಇತ್ತು ಅಂಕಿ ಅಂಶಗಳನ್ನ ಮನುಷ್ಯರ ಸಹಜ ಅಂದಾಜಿನಿಂದ ಹೊರಗೆ ತಂದು ಅತ್ಯಂತ ನಿಖರ ಡೇಟಾದ ಸಂಗ್ರಹಣೆಗೆ ಇದು ಅನುಕೂಲವಾಯಿತು ಬೇಡಿಕೆ ಪೂರೈಕೆಯ ಅಂಕಿ ಸಂಖ್ಯೆ ಅತ್ಯಂತ ನಿಖರವಾಗಿ ಸಿಗತಾ ಇದ್ದಿದ್ದರಿಂದ ಮಾರಾಟ ಸರಪಳಿ ಅತ್ಯಂತ ಸರಳವಾಗಿ ಸಾಗುವಂತಾಯಿತು ಇದರಿಂದ ಕಂಪನಿಯ ವ್ಯವಹಾರ ತೀವ್ರಗತಿಯಲ್ಲಿ ಸಾಗಲು ಅನುಕೂಲವಾಯಿತು ಇನ್ನು ಎರಡನೇ ಅಂಶ ಅಂದರೆ ಮಧ್ಯವರ್ತಿ ಮುಕ್ತ ಮಾದರಿ ಅಂದ್ರೆ ಮಿಡಲ್ ಮ್ಯಾನ್ ಫ್ರೀ ಮಾಡೆಲ್ 1970 ರಲ್ಲಿ ಕಂಪನಿ ಹಳೆಯ ಪೂರೈಕೆ ವ್ಯವಸ್ಥೆಯನ್ನ ಬದಲಿಸಿತು ಅಂದರೆ ಹೋಲ್ಸೇಲ್ ಡೀಲರ್ಗಳ ಬದಲಾಗಿ ನೇರವಾಗಿ ವಿತರಕರಿಗೆ ಅಂದರೆ ಹೋಲ್ಸೇಲ್ ಡೀಲರ್ಗಳ ಬದಲಾಗಿ ನೇರವಾಗಿ ವಿತರಕರಿಗೆ ಉತ್ಪನ್ನಗಳನ್ನ ತಲುಪಿಸಲು ಪ್ರಾರಂಭಿಸಿತು ಇದರಿಂದ ಗ್ರಾಹಕರ ಮೇಲೆ ಬೀಳುತ್ತಿದ್ದ ವೆಚ್ಚದ ಹೊರೆ ತಪ್ಪಿತು ಜೊತೆಗೆ ವಿತರಕರ ಮೇಲೆ ಕಂಪನಿಗೆ ನೇರ ನಿಯಂತ್ರಣ ಸಿಗುವಂತಾಯಿತು ಈಗಲೂ ಕೂಡ ಏಷಿಯನ್ ಪೇಂಟ್ಸ್ ಸರಿಸುಮಾರು 70ಸಾವ ಡೀಲರ್ ಗಳಿಗೆ ನೇರವಾಗಿಯೇ ತನ್ನ ಉತ್ಪನ್ನಗಳನ್ನ ತಲುಪಿಸುತ್ತಾ ಇದೆ ಇನ್ನು ಮತ್ತೊಂದು ಕ್ರಾಂತಿಕಾರಕ ಬದಲಾವಣೆ ಅಂದರೆ ಈ ಮೊದಲು ವಿತರಕರು ಉತ್ಪನ್ನಗಳನ್ನ ಮಾರಾಟ ಮಾಡಿದ ಬಳಿಕ 180 ದಿನಗಳ ಕ್ರೆಡಿಟ್ ಪಡೆದುಕೊಳ್ಳುತ್ತಿದ್ದರು.
ಈ ಕಂಪನಿ ಈ ವ್ಯವಸ್ಥೆಯನ್ನೇ ತಿರುಗು ಮುರುಗಾಗಿ ಬದಲಾಯಿಸಿತು ರೆಗ್ಯುಲರ್ ಪೇಮೆಂಟ್ ಪರ್ಫಾರ್ಮೆನ್ಸ್ ಡಿಸ್ಕೌಂಟ್ ಎನ್ನುವ ಸ್ಕೀಮ್ ಅನ್ನ ಪರಿಚಯಿಸಿತು ಯಾವುದೇ ಡೀಲರ್ಸ್ ಸಮಯಕ್ಕೆ ಸರಿಯಾಗಿ ಮೊತ್ತ ಪಾವರ್ತಿಸಿದರೆ ಆತನಿಗೆ ಶೇಕಡ 3.5ರಷ್ಟು ಐರಷ್ಟು ಡಿಸ್ಕೌಂಟ್ ಸಿಗತಾ ಇತ್ತು ಒಂದುವೇಳೆ ಆತ ಉತ್ಪನ್ನ ಪಡೆದ ತಕ್ಷಣವೇ ಹಣ ಪಾವತಿ ಮಾಡಿದರೆ ಶೇಕಡ ಐದರಷ್ಟು ಡಿಸ್ಕೌಂಟ್ ಸಿಗತಾ ಇತ್ತು ಇದರಿಂದ ವಿತರಕರಿಗೂ ಕಂಪನಿಗೂ ಎರಡು ಕಡೆ ಲಾಭವಾಗ ತೊಡಗಿತು ಇನ್ನು ಏಷಿಯನ್ ಪೇಂಟ್ಸ್ ಸುಸ್ಥಿರ ಬೆಳವಣಿಗೆಗೆ ಮೂರನೇ ಪ್ರಮುಖ ಕಾರಣ ಅಂದ್ರೆ ವಿತರಕರೊಂದಿನ ಉತ್ತಮ ಸಂಬಂಧ ಏಷಿಯನ್ ಪೇಂಟ್ಸ್ ಯಾವತ್ತೂ ತನ್ನ ವಿತರಕರನ್ನ ಕೇವಲ ತನ್ನ ಉತ್ಪನ್ನಗಳ ಡೀಲರ್ ಆಗಿ ಮಾತ್ರ ನೋಡಲಿಲ್ಲ ಬದಲಾಗಿ ತಮ್ಮ ವ್ಯವಹಾರದ ಪಾಲುದಾರ ಅನ್ನುವ ರೀತಿಯಲ್ಲೇ ಅವರನ್ನ ನಡೆಸಿಕೊಂಡಿದೆ ಉದಾಹರಣೆಗೆ ಡೀಲರ್ಗಳಿಗೆ ಅಗತ್ಯವಾದ ಟಿಂಟಿಂಗ್ ಮಷೀನ್ ಅನ್ನ ಕಂಪನಿ ಮೊದಲು ಪುರೈಕೆ ಮಾಡ್ತಾ ಇತ್ತು ಬಳಿಕವಷ್ಟೇ ಅದರ ಮೊತ್ತ ಪಡಿತಾ ಇತ್ತು ಆದರೆ ಬಾಕಿ ಕಂಪನಿಗಳಲ್ಲಿ ಈ ವ್ಯವಸ್ಥೆ ಇರಲಿಲ್ಲ ಅವರೆಲ್ಲ ಮೊದಲೇ ದುಡ್ಡು ಪಾವತಿಸಿ ಟೆಂಟಿಂಗ್ ಮಷೀನ್ ಖರೀದಿಸಬೇಕಿತ್ತು ಹೀಗಾಗಿ ವಿತರಕರು ಸಹಜವಾಗಿ ಏಷಿಯನ್ ಪೇಂಟ್ಸ್ ವಿತರಣ ಜಾಲ ಸೇರಲು ಆಸಕ್ತಿ ತೋರಿಸ್ತಾ ಇದ್ರು 2001ರಲ್ಲಿ ಸುಮಾರು 15ಸ000 ವಿತರಕರು ಏಷಿಯನ್ ಪೇಂಟ್ಸ್ ಡೀಲರ್ಸ್ ಆಗಿ ಬದಲಾಗ್ತಾರೆ ಆದರೆ 2001ರಲ್ಲಿ ಸುಮಾರು 15ಸ000 ವಿತರಕರು ಏಷಿಯನ್ ಪೇಂಟ್ಸ್ ಡೀಲರ್ಸ್ ಆಗಿದ್ರು ಆದರೆ 2018ರ ವೇಳೆಗೆ ಆ ಸಂಖ್ಯೆ 52000ಕ್ಕೆ ಏರುತ್ತೆ ಸಣ್ಣ ಸಣ್ಣ ಪೇಂಟ್ಸ್ ಮಾರಾಟಗಾರರು ಕೂಡ ಇಂದು ಕಂಪನಿಯ ವಿತರಣ ಚಾಲದ ಭಾಗವಾಗಿದ್ದಾರೆ ಇಂದು ಪ್ರಮುಖ ನಗರಗಳಲ್ಲಿ ಆರ್ಡರ್ ನೀಡಿದ ಕೆಲವೇ ಗಂಟೆಗಳಲ್ಲಿ ಕಂಪನಿ ತನ್ನ ಉತ್ಪನ್ನವನ್ನ ತಲುಪಿಸುತ್ತದೆ.
ಪ್ರಸ್ತುತ ಏಷಿಯನ್ ಪೇಂಟ್ಸ್ ಭಾರತದ ಅತಿ ದೊಡ್ಡ ಗೃಹಲಂಕಾರ ಕಂಪನಿಯಾಗಿದೆ ಹಾಗೆ ಏಷ್ಯಾದ ಎರಡನೇ ಅತೀ ದೊಡ್ಡ ಪೇಂಟ್ ಕಂಪನಿ ಆಗಿದೆ ಜೊತೆಗೆ ವಿಶ್ವದ ಅಗ್ರ ಪೇಂಟ್ಸ್ ಕಂಪನಿಗಳ ಪೈಕಿ ಎಂಟನೇ ಸ್ಥಾನದಲ್ಲಿದೆ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದರೆ ಕಂಪನಿ ಕಳೆದ 60 ವರ್ಷಗಳಿಂದ ಶೇಕಡ 20ರಷ್ಟು ಬೆಳವಣಿಗೆಯ ದರದೊಂದಿಗೆ ಪ್ರಗತಿ ಸಾಧಿಸತ್ತಾ ಇದೆ ಬರ್ಗರ್ ಪೇಂಟ್ಸ್ ಕಂಪನಿಯ ವಾರ್ಷಿಕ ವೈವಾಟು 11544 ಕೋಟಿ ಇದ್ದರೆ ನೆರೋಲಿಕ್ ಪೇಂಟ್ಸ್ ವೈವಾಟು 7962 ಕೋಟಿ ಇದೆ ಆದರೆ ಏಷಿಯನ್ ಪೇಂಟ್ಸ್ ಏಕಾಂಗಿಯಾಗಿಯೇ ಬರೊಬ್ಬರಿ 33855 ಕೋಟಿ ರೂಪಾಯಿ ವಾರ್ಷಿಕ ವೈವಾಟು ಹೊಂದಿದೆ. ಸ್ನೇಹಿತರೆ ಇಷ್ಟೆಲ್ಲ ದಾಖಲೆಯ ವೈವಾಟು ಸುಸ್ಥಿರ ಆರ್ಥಿಕ ವ್ಯವಹಾರ ಇದ್ದರು ಕಳೆದೆರಡು ವರ್ಷಗಳಿಂದ ಏಷಿಯನ್ ಪೇಂಟ್ಸ್ ತೀವ್ರ ಸಂಕಷ್ಟ ಎದುರಿಸ್ತಾ ಇದೆ. ಈ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ವೈವಾಟು ಶೇಕಡ 45ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆ ಶೇರು ಮೌಲ್ಯ ಕೂಡ ಶೇಕಡ 59 ರಿಂದ 52 ಕ್ಕೆ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಆದಿತ್ಯ ಬಿರ್ಲಾ ಕಂಪನಿಯ oppos ಪೇಂಟ್. ಈ ಕಂಪನಿ 2024 ರಲ್ಲಿ ಪೇಂಟ್ ಉದ್ಯಮಕ್ಕೆ ಕಾಲಿಟ್ಟಿದೆ. ಆರಂಭದಿಂದಲೇ ಕಂಪನಿ ಪೇಂಟ್ಸ್ ಮಾರುಕಟ್ಟೆಯಲ್ಲಿ ಹಲ್ಚಲ್ ಎಬ್ಬಿಸಿದೆ. ಸುಮಾರು 10ಸಾ ಕೋಟಿ ಬೃಹತ್ ಬಂಡವಾಳದೊಂದಿಗೆ ಈ ಕಂಪನಿ ಪೇಂಟ್ಸ್ ಉದ್ಯಮಕ್ಕೆ ಕಾಲಿಟ್ಟಿದೆ. ಹೀಗಾಗಿಯೇ ಕೇವಲ ಒಂದೂವರೆ ವರ್ಷದಲ್ಲಿ ಬಿರ್ಲಾ ಒಪೋಸ್ ಪೇಂಟ್ಸ್ ದೇಶದ ಎರಡನೇ ಅತಿ ದೊಡ್ಡ ಪೇಂಟ್ಸ್ ಕಂಪನಿಯಾಗಿ ಬೆಳೆದು ನಿಂತಿದೆ. ಹೀಗೆ ದಿಡೀರ್ ಬೆಳವಣಿಗೆಗೆ ಕಂಪನಿಯ ಮಾರಾಟ ಸ್ಟ್ರಾಟರ್ಜಿ ಕೂಡ ಕಾರಣವಾಗಿದೆ. ಕಂಪನಿ ವಿತರಕರಿಗೆ ಕ್ರೆಡಿಟ್ ಟೈಮ್ ನಲ್ಲಿ ಉದಾರವಾದಿ ಧೋರಣೆ ತಾಳಿದೆ.
ಏಷಿಯನ್ ಪೇಂಟ್ಸ್ ಕ್ರೆಡಿಟ್ ಟೈಮ್ ಕೇವಲ ಐದು ದಿನ ಇದೆ. ಅಂದ್ರೆ ವಿತರಕರು ಐದು ದಿನದೊಳಗೆ ಮೆಟೀರಿಯಲ್ಸ್ ಮೊತ್ತವನ್ನ ಪಾವತಿಸಬೇಕು. ಆದರೆ ಬಿರ್ಲಾ ಕಂಪನಿ ಈ ಕ್ರೆಡಿಟ್ ಟೈಮಿಂಗ್ ಅನ್ನ 30 ದಿನಕ್ಕೆ ನೀಡಿದೆ. ಜೊತೆಗೆ ಲಾಭಾಂಶದ ಮಾರ್ಜಿನ್ ಕೂಡ ಜಾಸ್ತಿ ಇದೆ ಹೀಗಾಗಿ ಸಹಜವಾಗಿ ವಿತರಕರು ಬಿರ್ಲಾ oppos ಪೇಂಟ್ಸ್ ನತ್ತ ಜಾರುತಾ ಇದ್ದಾರೆ. ಇನ್ನು oppos ಪೇಂಟ್ಸ್ ಏಷಿಯನ್ ಪೇಂಟ್ಸ್ ಗೆ ಹೋಲಿಸಿದರೆ ಕಡಿಮೆ ಮೊತ್ತಕ್ಕೆ ಬಿಕರಿಯಾಗ್ತಾ ಇದೆ ಹೀಗಾಗಿ ಗ್ರಾಹಕರು ಕೂಡ oppos ನತ್ತ ಆಕರ್ಷಿತರಾಗುತ್ತಿದ್ದಾರೆ ಇಷ್ಟೆಲ್ಲ ಧನಾತ್ಮಕ ಬೆಳವಣಿಗೆ ಇದ್ದರೂ ಬಿರ್ಲಾ ಗುಂಪಿನ ಸಾಲದ ಹೊರೆ ಏರುತ್ತಲೆ ಇದೆ ಕಂಪನಿ ಕ್ಯಾಶ್ ಬರ್ನಿಂಗ್ ಮೋಡ್ನಲ್ಲಿದೆ ಹೀಗಾಗಿ ಒಪೋಸ್ ಅಷ್ಟು ಸುಲಭವಾಗಿ ಏಷಿಯನ್ ಪೇಂಟ್ಸ್ ಅನ್ನ ಹಿಂದಿಕ್ಕಲು ಸಾಧ್ಯವಿಲ್ಲ ಅನ್ನುವ ಮಾತುಗಳು ಉದ್ಯಮ ವಲಯದಲ್ಲಿದೆ ಇನ್ನು ಇತ್ತ ಏಷಿಯನ್ ಪೇಂಟ್ಸ್ ಪೈಪೋಟಿಯ ನಡುವೆಯು ತನ್ನ ಘಟಕಗಳ ವಿಸ್ತರಣೆಗೆ ವ್ಯವಸ್ಥಿತವಾಗಿ ಆಗಿ ಕಾರ್ಯಾಚರಣೆ ನಡೆಸುತ್ತಾ ಇದೆ. ಮಧ್ಯಪ್ರದೇಶ ಗುಜರಾತ್ನಲ್ಲಿ ಹೊಸ ಹೊಸ ಪೇಂಟ್ ಘಟಕಗಳನ್ನ ತೆರೆಯುತ್ತಿದೆ ಹಾಗೆ ನಮ್ಮ ಮೈಸೂರು ಜಿಲ್ಲೆಯಲ್ಲಿರುವ ಘಟಕದ ವಿಸ್ತರಣೆಗೂ ಕೈ ಹಾಕಿದೆ.


