ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆಯ ಗಾಳಿ ಬೀಸ್ತಾ ಇದೆ ಕೇಂದ್ರ ಸರ್ಕಾರ ದೇಶದ ಬ್ಯಾಂಕಿಂಗ್ ಚಿತ್ರಣವನ್ನೇ ಸಂಪೂರ್ಣ ಬದಲಾಯಿಸುವ ಮತ್ತೊಂದು ದೊಡ್ಡ ಹೆಜ್ಜೆ ಇಡ್ತಾ ಇದೆ ದೇಶದ ನಾಲ್ಕು ಪ್ರಮುಖ ಬ್ಯಾಂಕ್ಗಳನ್ನ ಮತ್ತೆ ಮರ್ಜ್ ಅಂದ್ರೆ ವಿಲೀನ ಮಾಡೋಕೆ ಹೆಜ್ಜೆ ಇಟ್ಟಿದೆ ಈ ಮೂಲಕ ಕೆಲವೇ ಕೆಲವು ಶಕ್ತಿಶಾಲಿ ಪವರ್ಫುಲ್ ಬಿಗ್ ಬ್ಯಾಂಕ್ಸ್ ಅನ್ನ ರೂಪಿಸೋಕೆ ಸಜ್ಜಾಗಿದೆ. ಹಾಗಿದ್ರೆ ಉದ್ದೇಶ ಏನು ಏನು ಮಾಡ್ತಾ ಇದೆ ಈ ಮಹಾ ವಿಲೀನರದ ಲೆಕ್ಕಾಚಾರ ಏನು ಯಾವೆಲ್ಲ ಬ್ಯಾಂಕ್ ಗಳು ಮರ್ಜ್ ಆಗಲಿವೆ ಗ್ರಾಹಕರ ಮೇಲೆ ಇದರ ಪರಿಣಾಮ ಏನು ಬನ್ನಿ ಇದೆಲ್ಲವನ್ನ ಇವತ್ತಿನ ವಿಡಿಯೋದಲ್ಲಿ ಅರ್ಥ ಮಾಡಿಕೊಳ್ಳುತ್ತಾ ಹೋಗೋಣ ಮೋದಿ ಬ್ಯಾಂಕಿಂಗ್ ಕ್ರಾಂತಿ ನಾಲ್ಕು ಮಹಾ ಬ್ಯಾಂಕ್ ಗಳು ವಿಲೀನ ಎಸ್ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆ ಮೋದಿ ತಮ್ಮ ಮೊದಲನೇ ಅವಧಿಯಲ್ಲಿ ಸರ್ಕಾರಿ ಬ್ಯಾಂಕುಗಳನ್ನಷ್ಟು ಮರ್ಜ್ ಮಾಡಿದ್ದು ಬಿಟ್ಟರೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮತ್ತೆ ಕೈ ಹಾಕಿರಲಿಲ್ಲ ಹಾಗಾಗ ಬ್ಯಾಂಕಿಂಗ್ ರೆಗುಲೇಷನ್ ಅಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡ್ತಾ ಬಂದಿದ್ರು ಎನ್ಪಿಎ ಕಮ್ಮಿ ಮಾಡೋಕ್ಕೆ ಹೆಜ್ಜೆ ಇಡ್ತೀವಿ ಅಂತ ಹೇಳಿ ಒಂದಷ್ಟು ಮಾಡ್ತಾ ಬಂದಿದ್ರು. ಆದರೆ ದೊಡ್ಡ ಮಟ್ಟದ ಚೇಂಜಸ್ ಗೆ ಕೈ ಹಾಕಿರಲಿಲ್ಲ. ಈಗ ಬರೋಬರಿ ಏಳೆಂಟು ವರ್ಷಗಳ ನಂತರ ಬ್ಯಾಂಕಿಂಗ್ಗೆ ಮತ್ತಷ್ಟು ಚುರುಕು ನೀಡೋಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರೋಕೆ ಸರ್ಕಾರದ ಹತ್ತಾರು ಬ್ಯಾಂಕುಗಳ ಈ ಮಹಾಸಾಗರವನ್ನ ಸ್ಟ್ರೀಮ್ಲೈನ್ ಮಾಡೋಕೆ ನಾಲ್ಕು ಬ್ಯಾಂಕುಗಳನ್ನ ಮರ್ಜ್ ಮಾಡ್ತಾ ಇದ್ದಾರೆ.
ಸರ್ಕಾರಿ ಮೂಲಗಳ ಮಾಹಿತಿ ಆಧರಿಸಿ ಫೈನಾನ್ಸಿಯಲ್ ಪೋರ್ಟಲ್ ಮನಿ ಕಂಟ್ರೋಲೇ ಇದನ್ನ ರಿಪೋರ್ಟ್ ಮಾಡಿದೆ. ಇದರ ಪ್ರಕಾರ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಐಓಬಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐ, ಬ್ಯಾಂಕ್ ಆಫ್ ಇಂಡಿಯಾ ಬಿಓಐ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಬಿಓಎಂ ಸದ್ಯ ವಿಲೀನ ಆಗ್ತಿರೋ ಬ್ಯಾಂಕ್ಸ್ ಈ ಸಣ್ಣ ಬ್ಯಾಂಕ್ಗಳನ್ನ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಂತಹ ದೊಡ್ಡ ಬ್ಯಾಂಕ್ಗಳೊಂದಿಗೆ ಮರ್ಜ್ ಮಾಡಲಾಗುತ್ತೆ. ಮೋದಿ ಹಸ್ತಾಕ್ಷರ ಬಾಕಿ ಮಾಹಿತಿ ಪ್ರಕಾರ 2027ರ ಆರ್ಥಿಕ ವರ್ಷನೇ ಈ ಮಹಾ ವಿಲೀನಕ್ಕೆ ಫೈನಲ್ ಡೆಡ್ ಲೈನ್ ಸೋ ಇನ್ನು ನಾಲ್ಕೈದು ತಿಂಗಳಲ್ಲಿ ಇದು ಜಾರಿಯಾಗುವ ಎಲ್ಲಾ ಲಕ್ಷಣ ಇದೆ. ಈಗ ಆಲ್ರೆಡಿ ಸರ್ಕಾರದಲ್ಲಿ ಉನ್ನತ ಮಟ್ಟದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸಭೆ ನಡೀತಾ ಇದೆ. ಅಲ್ದೆ ಈ ಚರ್ಚೆಯ ಸಾರಾಂಶ ದಾಖಲಿಸೋ ರೆಕಾರ್ಡ್ ಆಫ್ ಡಿಸಿಷನ್ ಅನ್ನೋ ಆಂತರಿಕ ಸರ್ಕಾರಿ ದಾಖಲೆಯನ್ನ ಕೂಡ ರೆಡಿ ಮಾಡಿ ಆಗಿದೆ. ಮುಂದಿನ ನಿರ್ಧಾರಗಳಿಗೆ ಈ ದಾಖಲೆ ಆಧಾರ. ಇದನ್ನೀಗ ಮೊದಲು ಕ್ಯಾಬಿನೆಟ್ ಮಟ್ಟದ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಾರೆ. ನಂತರ ಫೈನಲ್ ಅಪ್ರೂವಲ್ ಗೆ ಪ್ರಧಾನ ಮಂತ್ರಿಗಳ ಕಚೇರಿಗೆ ಪಿಎಂಓ ಗೆ ಪ್ರೈಮ್ ಮಿನಿಸ್ಟರ್ಸ್ ಆಫೀಸ್ ಗೆ ಕಳಿಸಲಾಗುತ್ತೆ. ಮಾರ್ಚ್ ಒಳಗೆ ಈ ಪ್ಲಾನ್ ನ ಬ್ಲೂಪ್ರಿಂಟ್ ಫೈನಲ್ ಮಾಡಬೇಕು ಅನ್ನೋ ಟಾರ್ಗೆಟ್ ಹಾಕೊಳ್ಳಲಾಗಿದೆ.
ಈ ಅವಧಿಯಲ್ಲಿ ಸಂಬಂಧಪಟ್ಟ ಬ್ಯಾಂಕುಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತೆ ಅಲ್ದೆ ಸಚಿವಾಲಯಗಳ ನಡುವೆ ಇಂಟರ್ ಮಿನಿಸ್ಟ್ರಿ ಚರ್ಚೆಗಳು ಕೂಡ ನಡೆಯಲಿವೆ. ಅಧಿಕೃತ ಘೋಷಣೆ ಮಾಡೋಕು ಮೊದಲು ಆಂತರಿಕವಾಗಿ ಸಂಪೂರ್ಣ ಒಮ್ಮತ ಸಾಧಿಸಬೇಕು ಅಂತ ಸರ್ಕಾರ ಪ್ರಯತ್ನ ಪಡ್ತಾ ಇದೆ. ಒಂದು ವೇಳೆ ಈ ನಾಲ್ಕು ಬ್ಯಾಂಕ್ ಗಳು ಮರ್ಜ್ ಆದ್ರೆ ಅಲ್ಲಿಗೆ ದೇಶದಲ್ಲಿ ಎಂಟು ಪಿಎಸ್ ಯು ಬ್ಯಾಂಕ್ ಗಳು ಅಂದ್ರೆ ಪಬ್ಲಿಕ್ ಸೆಕ್ಟರ್ ಯೂನಿಟ್ ಬ್ಯಾಂಕ್ ಗಳು ಉಳಿಯಲಿವೆ. 2014ರ ಮೇ ನಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ 27 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿದ್ದವು. ಆದರೆ ಬ್ಯಾಂಕುಗಳನ್ನ ಮರ್ಜ್ ಮಾಡಿ ಮರ್ಜ್ ಮಾಡಿ ಈಗ 12 ಬ್ಯಾಂಕುಗಳಿಗೆ ಇಳಿಸಲಾಯಿತು. ಬಿಗ್ ಬ್ಯಾಂಕ್ಸ್ ಜೊತೆಗೆ ಸಣ್ಣ ಬ್ಯಾಂಕುಗಳನ್ನ ಮರ್ಜ್ ಮಾಡಿ ಮರ್ಜ್ ಮಾಡಿ. ಅದರಲ್ಲಿ ಈಗ ಮತ್ತೆ ನಾಲ್ಕು ಬ್ಯಾಂಕ್ ದೊಡ್ಡ ಸರ್ಕಾರಿ ಬ್ಯಾಂಕುಗಳೊಂದಿಗೆ ಮರ್ಜ್ ಆದ್ರೆ ಎಂಟು ದೊಡ್ಡ ಸರ್ಕಾರಿ ಬ್ಯಾಂಕುಗಳು ಉಳಿಯಲಿವೆ. ಆದ್ರೆ ಮೋದಿ ಸರ್ಕಾರ ಇತರ ಯಾಕೆ ಮಾಡ್ತಾ ಇದೆ ಬ್ಯಾಂಕುಗಳನ್ನ ಕಮ್ಮಿ ಮಾಡೋದ್ರಿಂದ ಆಗುವ ಲಾಭ ಏನು? ಕೇಂದ್ರದಿಂದ ಬ್ಯಾಂಕ್ ವಿಲೀನ ಯಾಕೆ ಸರ್ಕಾರ ಈ ಮಹತ್ವದ ಹೆಜ್ಜೆ ಇಡೋಕೆ ಹಲವು ಪ್ರಬಲ ಕಾರಣಗಳಿವೆ ಮೊದಲನೆದು ದೇಶದ ಆರ್ಥಿಕತೆಗೆ ಬೆನ್ನೆಲುವಾಗಿ ನಿಲ್ಲಬಲ್ಲ ದೊಡ್ಡ ಮೊತ್ತದ ಸಾಲಗಳನ್ನ ಕೊಡಬಲ್ಲ ಮತ್ತು ಆರ್ಥಿಕ ಆಘಾತಗಳನ್ನ ಫೇಸ್ ಮಾಡಬಲ್ಲ ಬಲಿಷ್ಠ ಬ್ಯಾಂಕುಗಳನ್ನ ರೂಪಿಸುವುದು ಪ್ರಮುಖ ಉದ್ದೇಶ ಯಾಕಂದ್ರೆ ದೊಡ್ಡ ಬ್ಯಾಂಕುಗಳ ಹತ್ರ ಕ್ಯಾಪಿಟಲ್ ಜಾಸ್ತಿ ಇರುತ್ತೆ ಸಡನ್ಆಗಿ ಮಲ್ಯ ತರದ ದೊಡ್ಡ ಕಂಪನಿ ಕೈ ಎತ್ತಿದ್ರೆ ಅಥವಾ ದೊಡ್ಡ ಮಟ್ಟದಲ್ಲಿ ಕೆಟ್ಟ ಸಾಲಗಳು ಜಾಸ್ತಿ ಆದ್ರೆ ಅದನ್ನ ಅಬ್ಸಾರ್ಬ್ ಮಾಡುವಂತ ಶಕ್ತಿ ಇರುತ್ತೆ ಉದಾಹರಣೆಗೆಎಸ್ಬಿi ನ ಟೋಟಲ್ ಆಸೆಟ್ ಮಾರ್ಚ್ ಅಂತ್ಯಕ್ಕೆ 66.76 76 ಲಕ್ಷ ಕೋಟಿ ರೂಪಾಯಿ ಇತ್ತು ಅಲ್ದೆ ಅದರ ಸಿಆರ್ಎಆರ್ ಕ್ಯಾಪಿಟಲ್ ಟು ರಿಸ್ಕ್ ವೇಟೆಡ್ ಅಸೆಟ್ಸ್ ರೇಶಿಯೋ 14% ಇತ್ತು ಇಲ್ಲಿ ಸಿಆರ್ಎಆರ್ ಅಂದ್ರೆ ಸೇಫ್ಟಿ ಕುಶನ್ ಬ್ಯಾಂಕ್ ತಾನು ಸಾಲ ಕೊಡೋ ಹಣಕ್ಕೆ ಪ್ರತಿಯಾಗಿ ಸೇಫ್ಟಿ ಕುಶನ್ ಅಂತ ಇಟ್ಟಿರೋ ದುಡ್ಡು ಅಥವಾ ಆಸೆಟ್ ಒಂದುವೇಳೆ ಸಾಲ ವಾಪಸ್ ಬರಲಿಲ್ಲ ಅಂದ್ರೆ ಈ ಸೇಫ್ಟಿ ದುಡ್ಡಿನಿಂದ ಆ ಲಾಸ್ ಅನ್ನ ರಿಕವರ್ ಮಾಡ್ಕೊಬಹುದು ಆರ್ಬಿಐ ನಿಯಮದ ಪ್ರಕಾರ ಈ ಸಿಆರ್ಎಆರ್ ಅಥವಾ ಸೇಫ್ಟಿ ಕುಶನ್ ಒಂಬತ್ತರಿಂದ 10% ಇರಬೇಕು ಅಂದ್ರೆ ಬ್ಯಾಂಕುಗಳು ಕೊಡುವ ಪ್ರತಿ 100 ರೂಪಾಯಿ ಸಾಲಕ್ಕೆ ಸೇಫ್ಟಿಯಾಗಿ 10 ರೂಪಾಯಿ ಪ್ರತ್ಯೇಕ ಅಸೆಟ್ ರೂಪದಲ್ಲಿ ಇಡಬೇಕು. ಅಂತದರಲ್ಲಿಎಸ್ಬಿi 14% ಸಿಆರ್ಎಆರ್ ಹೊಂದಿದೆ. ಸೋ ಏನೇ ತೊಂದರೆ ಆದ್ರೂ ಕೂಡ ಅದನ್ನ ಅಬ್ಸರ್ವ್ ಮಾಡೋ ತಾಕತ್ತುಎಸ್ಬಿi ನಂತ ದೊಡ್ಡ ಬ್ಯಾಂಕುಗಳಿಗಿದೆ. ಆದರೆ ಸಣ್ಣ ಬ್ಯಾಂಕುಗಳಿಗೆ ಆ ಶಕ್ತಿ ಇಲ್ಲ.
ಯಾರೋ ಒಬ್ಬರು ದೊಡ್ಡ ಕೂಡ ಕೈ ಎತ್ತಿದ್ರು ಕೂಡ ಬ್ಯಾಂಕ್ಗೆ ದಿವಾಳಿಯಾಗಿ ಅನಾಹುತ ಆಗೋ ಚಾನ್ಸಸ್ ಇರುತ್ತೆ. ಎಷ್ಟು ಸಲ ಸರ್ಕಾರವೇ ಸಣ್ಣ ಬ್ಯಾಂಕುಗಳಿಗೆ ದುಡ್ಡು ತುಂಬಿ ಈ ರೀತಿ ದಿವಾಳಿ ಆಗೋದನ್ನ ತಪ್ಪಿಸಬೇಕಾಗುತ್ತೆ. ಸರ್ಕಾರಿ ಬ್ಯಾಂಕ್ ಅಲ್ವಾ ಹಾಗಾಗಿ 2017 ರಲ್ಲಿ ಕೇಂದ್ರ ಸರ್ಕಾರ ಪಿಎಸ್ ಬ್ಯಾಂಕ್ ಗಳಿಗೆ ಈತರ ಬರೋಬರಿ 2.8 8 ಲಕ್ಷ ಕೋಟಿ ರೂಪಾಯಿ ಸುರಿಬೇಕಾಗಿ ಬಂದಿತ್ತು ದೊಡ್ಡ ಬ್ಯಾಂಕ್ ಇದ್ರೆ ಇದರ ಅವಶ್ಯಕತೆ ಕಮ್ಮಿಯಾಗುತ್ತೆ ಏನೋ ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ ಆಫರ್ ಪ್ರೈಸ್ ಕೇವಲ 51700 ರೂಪಯ ಮಾತ್ರ ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್ ಸೆಲ್ುಲಾರ್ ಜೈಲ್ ಲೈಟ್ ಹ್ಯಾಂಡ್ ಸೌಂಡ್ ಶೋ ಹಾವಲಾಕ್ ಐಲ್ಯಾಂಡ್ ಟೂರ್ ಬರ್ತಂಗ್ ಐಲ್ಯಾಂಡ್ ಟೂರ್ ಲೈಮ್ ಸ್ಟೋನ್ ಕೇವ್ ಎಲಿಫೆಂಟ್ ಬೀಚ್ ಟೋರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೆರಿ ಟಿಕೆಟ್ಸ್ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ. ಹೊರಡೋ ದಿನ 10 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಗ್ಲೋಬಲ್ ಬ್ಯಾಂಕ್ ಸೃಷ್ಟಿ ಕನಸು ಭಾರತದ ಬ್ಯಾಂಕಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಅಂದ್ರೆ ಅವುಗಳ ಬ್ಯಾಲೆನ್ಸ್ ಶೀಟ್ ತೊಡದಾಗಿರಬೇಕು ಈ ಮರ್ಜರ್ ನಿಂದ ಅದು ಸಾಧ್ಯ ಆಗುತ್ತೆ ಭಾರತೀಯ ಬ್ಯಾಂಕಗಳಿಗೆ ಜಾಗತಿಕ ವೇದಿಕೆಯಲ್ಲಿ ಚಾಪು ಮೂಡಿಸೋಕ್ಕೆ ಸಹಾಯ ಆಗುತ್ತೆ.
ಸಣ್ಣ ಬ್ಯಾಂಕುಗಳಿದ್ದಾಗ ಉದಾಹರಣೆಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ತಗೊಳ್ಳಿ ಈ ಬ್ಯಾಂಕ್ ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡ್ತಿರುತ್ತೆ ಹೀಗಾಗಿ ಹೆಚ್ಚಾಗಿ ಅಲ್ಲೇ ಸಾಲ ಕೊಡ್ತಿರುತ್ತೆ ಆದ್ರೆ ಸಡನ್ಆಗಿ ಮಹಾರಾಷ್ಟ್ರದಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಿ ಆ ವರ್ಷ ಹೆಚ್ಚಿನ ಜನರಿಗೆ ಸಾಲ ವಾಪಸ್ ಮಾಡೋಕ್ಕೆ ಆಗಲಿಲ್ಲ ಅಂದ್ರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಬರಬಾದ ಆಗಿಬಿಡಬಹುದು ಆದರೆ ದೊಡ್ಡ ಬ್ಯಾಂಕ್ಗಳು ಹಾಗಲ್ಲ ಹಲವು ಪ್ರದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಹಲವು ರಾಷ್ಟ್ರಗಳಲ್ಲೂ ಸಾಲ ಕೊಡೋದು ಡೆಪಾಸಿಟ್ ತಗೊಳೋದು ಮಾಡ್ತಾ ಇರಬಹುದು ಲೋನ್ ಡೈವರ್ಸಿಫೈಡ್ ಆಗಿರುತ್ತೆ ಇನ್ಕಮ್ ಸೋರ್ಸ್ ಕೂಡ ಡೈವರ್ಸಿಫೈಡ್ ಆಗಿರುತ್ತೆ ಹೀಗಾಗಿ ಒಂದು ಭಾಗದಲ್ಲಿ ಅಥವಾ ಒಂದು ಸೆಕ್ಟರ್ನಲ್ಲಿ ಲಾಸ್ ಆದ್ರೂ ಕೂಡ ನಿಭಾಯಿಸುವ ತಾಕತ್ತ ಇರುತ್ತೆ ಹಾಗೆ ದೊಡ್ಡ ಬ್ಯಾಂಕ್ ಇದ್ದಾಗ ಇವುಗಳ ಸಿಎಎಸ್ಐ ಕ್ಯಾಸ ಅಂದ್ರೆ ಕರೆಂಟ್ ಅಕೌಂಟ್ ಸೇವಿಂಗ್ಸ್ ಅಕೌಂಟ್ ಡೆಪಾಸಿಟ್ ಜಾಸ್ತಿ ಇರುತ್ತೆ ನಿಮಗೆ ಗೊತ್ತಿರಬಹುದು ಬ್ಯಾಂಕ್ಗಳು ಈ ಸೇವಿಂಗ್ಸ್ ಅಕೌಂಟ್ ಗೆ ಕರೆಂಟ್ ಅಕೌಂಟ್ ಗೆಲ್ಲ ಜಾಸ್ತಿ ಬಡ್ಡಿ ಕೊಡಲ್ಲ ಸೋ ನಿವಾಯಿಸೋದು ಸುಲಭ ಆದರೆ ಸಣ್ಣ ಬ್ಯಾಂಕ್ಗಳಲ್ಲಿ ಖಾಸ ಡೆಪಾಸಿಟ್ ಜಾಸ್ತಿ ಇರಲ್ಲ ಎಫ್ಡಿ ಅಂತಹ ಲಾಂಗ್ ಟರ್ಮ್ ಡೆಪಾಸಿಟ್ ಮೇಲೆ ಹೆಚ್ಚು ಡಿಪೆಂಡ್ ಆಗಬೇಕಾಗುತ್ತೆ ಇದರಿಂದ ಬ್ಯಾಂಕ್ ತುಂಬಿ ಕೊಡಬೇಕಾದ ಬಡ್ಡಿ ಕೂಡ ಜಾಸ್ತಿ ಆಗುತ್ತೆ ಪರಿಣಾಮ ಬ್ಯಾಂಕ್ನ ಪ್ರಾಫಿಟ್ ಮಾರ್ಜಿನ್ ಮೇಲೆ ಹೊಡ್ತಾ ಬೀಳುತ್ತೆ ಆದರೆ ದೊಡ್ಡ ಬ್ಯಾಂಕ್ಗಳಿಗೆ ಇಷ್ಟು ಸಮಸ್ಯೆ ಆಗಲ್ಲ ಅಲ್ದೇ ವಿಲೀನದಿಂದ ಬ್ಯಾಂಕಗಳ ಆಪರೇಷನಲ್ ಖರ್ಚು ಕಮ್ಮಿ ಆಗುತ್ತೆ ಟಾಪ್ ಲೆವೆಲ್ ಮ್ಯಾನೇಜ್ಮೆಂಟ್ ನ ಕಾಸ್ಟ್ ಉಳಿಯುತ್ತೆ.
ಪ್ರತಿಯೊಂದು 12 ಬ್ಯಾಂಕಿಗೆ 12 ಸಪರೇಟ್ ಎಂಡಿ ಸಿಇಓ ಬೇರೆ ಬೇರೆ ಮ್ಯಾನೇಜ್ಮೆಂಟ್ ಲೆವೆಲ್ ಇಟ್ಕೊಳ್ಳೋದರ ಬದಲು ಬೇರೆ ಬೇರೆ ಬೋರ್ಡ್ ಇಟ್ಕೊಳ್ಳೋದರ ಬದಲು ಮರ್ಜ್ ಮಾಡಿದಾಗ ಒಂದೇ ಆದ್ರೆ ಹೈ ಕ್ವಾಲಿಟಿಯ ಒಂದೇ ಮ್ಯಾನೇಜ್ಮೆಂಟ್ ನಿಂದ ಬ್ಯಾಂಕುಗಳನ್ನ ರನ್ ಮಾಡಬಹುದು ಬ್ಯಾಂಕುಗಳನ್ನ ಓಕೆ ಡಿಸೆಂಟ್ರಲೈಜ ಇಡಬೇಕು ಇಲ್ಲಂದ್ರೆ ಅಡ್ಮಿನಿಸ್ಟರ್ ಮಾಡಕ್ಕೆ ಆಗಲ್ಲ ಅಂತ ಏನಿಲ್ಲ ಅವೆಲ್ಲ ರೂಲ್ಸ್ ಪ್ರಕಾರ ನಡೆಯೋದು ಪ್ಯಾಟರ್ನ್ ಫಾಲೋ ಮಾಡ್ಕೊಂಡು ನಡೆಯೋದು ಅದು ಎಷ್ಟು ದೊಡ್ಡದಿದ್ರೂ ಕೂಡ ಎಷ್ಟು ಸಾವಿರ ಬ್ರಾಂಚ್ ಇದ್ರೂ ಕೂಡ ರೂಲ್ಸ್ ಒಂದೇ ರೀತಿ ಅಪ್ಲೈ ಆಗೋದ್ರಿಂದ ಸಾಕಾಗುತ್ತೆ ನಡೆಸಲಿಕ್ಕೆ ಸಾಧ್ಯ ಆಗುತ್ತೆ ಜೊತೆಗೆ ಒಂದು ಏರಿಯಾ ಇದೆ ಅಂತ ಅಂಕೊಳ್ಳಿ ಅದರಲ್ಲಿ 12 ಬ್ಯಾಂಕ್ದು 12 ಬ್ರಾಂಚ್ ಇದೆ ಅಂತ ಅಂಕೊಳ್ಳಿ ಮರ್ಜ್ ಮಾಡಿದಾಗ ಯಾವುದೋ ಒಂದು ದೊಡ್ಡದು ಒಂದು ಬ್ರಾಂಚ್ ಓಪನ್ ಮಾಡಿ ಉಳಿದಿದೆಲ್ಲ ಮರ್ಜ್ ಮಾಡಬಹುದು ಅದಕ್ಕೆ ಅಲ್ವಾ ಅವಾಗ ಎಷ್ಟು ದುಡ್ಡು ಉಳಿಯುತ್ತೆ ರಿಯಲ್ ಎಸ್ಟೇಟ್ ಕಾಸ್ಟ್ ಎಷ್ಟು ಉಳಿಯುತ್ತೆ ರೆಂಟಲ್ ಕಾಸ್ಟ್ ಎಷ್ಟು ಉಳಿಯುತ್ತೆ ಸೆಕ್ಯೂರಿಟಿ ವ್ಯವಸ್ಥೆಯ ಕಾಸ್ಟ್ ಎಷ್ಟು ಉಳಿಯುತ್ತೆ ಓವರ್ಆಲ್ ಅಷ್ಟು ಬ್ಯಾಂಕುಗಳು ಮರ್ಜ್ ಆಗಿ ಒಂದು ಬ್ಯಾಂಕಿಂಗ್ ಕ್ರಿಯೇಟ್ ಆಗುತ್ತೆ ಅದರ ಪ್ರಾಫಿಟ್ ಮತ್ತು ಅದರ ಫೈನಾನ್ಸಿಯಲ್ ಹೆಲ್ತ್ ಇದ್ದಕ್ಕಿದ್ದಂತೆ ಜಂಪ್ ಆಗುತ್ತೆ ತಂತ್ರಜ್ಞಾನ ಮಾನವ ಸಂಪನ್ಮೂಲವನ್ನ ಕೂಡ ಎಫೆಕ್ಟಿವ್ ಆಗಿ ಬಳಸಕೊಬಹುದು ಇದೆಲ್ಲ ಆದಾಗ ಭಾರತದ ಬ್ಯಾಂಕ್ಗಳು ಅಟ್ರಾಕ್ಟಿವ್ ಆಗಿ ಕಾಣುತ್ತವೆ ವಿದೇಶಿ ಹೂಡಿಕೆ ಕೂಡ ಹರೆದು ಬರಬಹುದು ಇದರಿಂದ ನಾವು ಕೂಡ ನಮ್ಮಎಸ್ಬಿಐ ಅಮೆರಿಕದ ಎಚ್ಎಸ್ಪಿಸಿ ಜೆಪಿ ಮಾರ್ಗನ್ ತರ ಅಥವಾ ಚೀನಾದ ಸರ್ಕಾರಿ ಬ್ಯಾಂಕ್ ಬ್ಯಾಂಕಗಳ ತರ ನಾವು ಗ್ಲೋಬಲ್ ಬ್ಯಾಂಕಿಂಗ್ ಸ್ಪೇಸ್ ನಲ್ಲೂ ಕೂಡ ತಲೆ ಎತ್ತಬಹುದು. ಹೀಗಾಗಿ ಸರ್ಕಾರ ಸಣ್ಣ ಸಣ್ಣ ಗವರ್ನಮೆಂಟ್ ಬ್ಯಾಂಕ್ಗಳನ್ನ ವಿಲೀನಗೊಳಿಸಿ ಬಿಗ್ ಬ್ಯಾಂಕ್ಸ್ ನ ಕ್ರಿಯೇಟ್ ಮಾಡಿ ಅವುಗಳನ್ನ ಸ್ಟ್ರಾಂಗ್ ಮಾಡೋಕೆ ನೋಡ್ತಾ ಇದೆ.
ಭಾರತದ ಸಾಲದ ಬೇಡಿಕೆಗೆ ಬೇಕು ದೊಡ್ಡ ಬ್ಯಾಂಕ್ ಜೊತೆಗೆ ಭಾರತದ ಕ್ರೆಡಿಟ್ ಡಿಮ್ಯಾಂಡ್ ಗೆ ತಕ್ಕಂತೆ ಬ್ಯಾಂಕ್ಗಳನ್ನ ಅಭಿವೃದ್ಧಿ ಪಡಿಸುವ ಅವಶ್ಯಕತೆ ಕೂಡ ಇದೆ. ಭಾರತ ದೊಡ್ಡ ಎಕಾನಮಿ ಆಗ್ತಿದ್ದಂತೆ ಭಾರತದ ಕ್ರೆಡಿಟ್ ಡಿಮ್ಯಾಂಡ್ ಸಾಲದ ಬೇಡಿಕೆ ಕೂಡ ಜಾಸ್ತಿ ಆಗ್ತಿದೆ. ಪ್ರತಿವರ್ಷ ಕ್ರೆಡಿಟ್ ಗ್ರೋತ್ ಅಂದ್ರೆ ಸಾಲ ತಗೊಳುವರ ಪ್ರಮಾಣ ಒಂಬತ್ತರಿಂದ 10% ಏರಿಕೆ ಆಗ್ತಾ ಇದೆ. ಯಾಕಂದ್ರೆ ಆರ್ಥಿಕತೆ ಭೂಮಿ ಆದಂತೆ ಹಣದ ಅವಶ್ಯಕತೆ ಹೆಚ್ಚಾಗುತ್ತೆ. ಹೊಸದಾಗಿ ಉದ್ಯಮ ನಡೆಸುವರು ಬಿಸಿನೆಸ್ ಲೋನ್ಗೆ ನೋಡ್ತಾರೆ. ಮನೆ ಕಟ್ಟೋರು ಹೌಸಿಂಗ್ ಲೋನ್ ಗಳಿಗೆ ಕಾಯ್ತಾರೆ. ಪರ್ಸನಲ್ ಲೋನ್ ತಗೊಂಡು ಹೊಸ ಹೊಸ ಕಾರು, ಬೈಕ್ ಗೃಹೋಪಯೋಗಿ ವಸ್ತು ಖರೀದಿ ಮಾಡೋರು ಹೆಚ್ಚಾಗ್ತಾರೆ. ಹೀಗಾಗಿ ಸಾಲ ಕೊಡುವವರ ಪ್ರಮಾಣ ಕೂಡ ಹಂಗೆ ಏರಿಕೆ ಆಗಬೇಕಲ್ಲ. ಹೀಗಾಗಿ ಸರ್ಕಾರ ವಿಲೀನ ಮಾಡಿ ದೊಡ್ಡ ಬ್ಯಾಂಕ್ಗಳನ್ನ ಸೃಷ್ಟಿ ಮಾಡೋಕ್ಕೆ ಹೆಜ್ಜೆ ಇಟ್ಟಿದೆ. ಜೊತೆಗೆ ಸ್ನೇಹಿತರೆ ಇಲ್ಲಿ ಇನ್ನು ಒಂದು ಲೆಕ್ಕಾಚಾರ ಇರಬಹುದು. ಇದು ವಿಶ್ಲೇಷಣೆ ಅಷ್ಟೇ ಹೆಂಗೆ ಆಗುತ್ತೆ ಅಂತ ಅಲ್ಲ ಈ ರೀತಿ ಲೆಕ್ಕಾಚಾರ ಮಾಡಿದ್ದಾರೆ ಅಂತಾನೆ ಅಲ್ಲ ಸಾಧ್ಯತೆ ಈಗ 20 27 ಬ್ಯಾಂಕ್ ಇದೆ ಅಂತ ಅಂಕೊಳ್ಳಿ ಪ್ರೈವೇಟೈಸೇಷನ್ ಮಾಡಬೇಕು ಗವರ್ನಮೆಂಟ್ ಬ್ಯಾಂಕ್ ನಡೆಸಬಾರದು ಬರಿ ಹಾಳು ಮಾಡ್ತಾರೆ ಅನ್ನೋ ಟೀಕೆಗಳ ನಡುವೆ ಯಾವುದಾದ್ರೂ ಸರ್ಕಾರ ಪ್ರೈವೇಟೈಜ್ ಮಾಡೋಕ್ಕೆ ಹೋದ್ರೆ ಓ ಇವನು ಮಾರ್ಕೊಂಡು ತಿಂತಿದ್ದಾನೆ ಅನ್ನೋ ಟೀಕೆ ಬರುತ್ತೆ.
ಗವರ್ನಮೆಂಟ್ ಬ್ಯಾಂಕ್ ಎಲ್ಲ ಮಾರ್ಕೊಂಡು ತಿಂತಿದ್ದಾನೆ ಅಂತ ಹೇಳಿ ಆದರೆ ಬದಲಿಗೆ 27 ಬ್ಯಾಂಕ್ನ ಮರ್ಜ್ ಮಾಡಿ ಮರ್ಜ್ ಮಾಡಿ ಮರ್ಜ್ ಮಾಡಿ ನಾಲಕೋ ಆರೋ ಎಂಟೋ ಇಷ್ಟೇ ದೊಡ್ಡ ಬ್ಯಾಂಕುಗಳನ್ನಾಗಿ ಮಾಡಿದ್ರೆ ನೆಕ್ಸ್ಟ್ ಆ ಅಷ್ಟು ಬ್ಯಾಂಕುಗಳಲ್ಲಿ 15% ಅಥವಾ 20 20% ಸರ್ಕಾರ ತನ್ನ ಶೇರುಗಳನ್ನ ಡೈಲ್ಯೂಟ್ ಮಾಡಿದ್ರೆ ಅಂದ್ರೆ ಓಪನ್ ಮಾರ್ಕೆಟ್ಗೆ ಬಿಟ್ರೆ ಖಾಸಗಿಯವರಿಗೆ ನಮಗೆ ನಿಮಗೆ ಯಾರಿಗಾದ್ರೂ ತಗೊಳಕೆ ಬಿಟ್ರೆ ಅದನ್ನ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ದುಡ್ಡು ಬರುತ್ತೆ ಕಂಪ್ಲೀಟ್ ಆಗಿ ಕಂಟ್ರೋಲ್ ಕಳೆಕೊಳ್ಳದೇನೆ ಮಾಲಿಕತ್ವ ಉಳಿಸಿಕೊಂಡೆ ಪ್ರೈವೇಟೈಸೇಶನ್ ಮಾಡೋಕ್ಕೆ ಈಸಿ ಆಗುತ್ತೆ ಸಪರೇಟ್ ಸಪರೇಟ್ ಇದ್ದಾಗ ಒಂದು 30 ಬ್ಯಾಂಕ್ ಇದ್ದಾಗ ಒಂದು ಎರಡು ಮೂರು ಬ್ಯಾಂಕುಗಳನ್ನ ಫುಲ್ ಮಾರಿದ್ರೆ ಎಷ್ಟು ದುಡ್ಡು ಬರುತ್ತೋ ಅಷ್ಟು ದುಡ್ಡು ಮರ್ಜ್ ಆಗಿರೋ ಎಂಟಿಟಿಗಳಲ್ಲಿ ಒಂದು ಎಂಟು ಬ್ಯಾಂಕಲ್ಲಿ 20 20% ಮಾರಿದ್ರು ಕೂಡ ಸರ್ಕಾರಕ್ಕೆ ಆ ದುಡ್ಡು ಬರುತ್ತೆ ಆ ಲೆಕ್ಕಾಚಾರ ಕೂಡ ಇರಬಹುದು ಅವಾಗ ಪ್ರೈವೇಟೈಸ್ ಮಾಡಿದಂಗೂ ಆಗುತ್ತೆ ಪ್ರೊಪೋರ್ಷನೇಟ್ಲಿ ಸರ್ಕಾರದ ಓನರ್ಶಿಪ್ ಉಳಿಸಿಕೊಂಡಂಗೂ ಆಗುತ್ತೆ ಸರ್ಕಾರಕ್ಕೂ ದುಡ್ಡು ಬಂದಂಗೆ ಆಗುತ್ತೆ ಜೊತೆಗೆ ಆಡಳಿತಾತ್ಮಕವಾಗೂ ಕೂಡ ಸಿಕ್ಕಾಪಟ್ಟೆ ದೊಡ್ಡ ಅಡ್ಮಿನಿಸ್ಟ್ರೇಟಿವ್ ನೆಟ್ವರ್ಕ್ ಮತ್ತು ಹ್ಯೂಮನ್ ರಿಸೋರ್ಸ್ನ ಅವಶ್ಯಕತೆ ಕೂಡ ಬೀಳೋದಿಲ್ಲ ಅಥವಾ ಕಟ್ಟಡಗಳು ಮತ್ತು ನೆಟ್ವರ್ಕ್ನ ಅವಶ್ಯಕತೆ ಕೂಡ ಬೀಳೋದಿಲ್ಲ ಎಲ್ಲಾ ರೀತಿಯಲೂ ವಿನ್ ವಿನ್ ಅನ್ನೋ ಲೆಕ್ಕಾಚಾರ ಸರ್ಕಾರಕ್ಕೆ ಇರಬಹುದು ಅಂತ ಇದೇ ಕಾರಣಕ್ಕೆ ಮೋದಿ ಸರ್ಕಾರ ಬ್ಯಾಂಕುಗಳ ಮರ್ಜರ್ ಮೇಲೆ ಜಾಸ್ತಿ ಆಸಕ್ತಿಯನ್ನ ತೋರಿಸ್ತಾ ಇದೆ.


