Thursday, January 15, 2026
HomeLatest Newsಬೆಂಗಳೂರುಗೆ ದೊಡ್ಡ ಹೊಡೆತ: 2ನೇ ಏರ್‌ಪೋರ್ಟ್ ಯೋಜನೆಗೆ ಕೇಂದ್ರದಿಂದ ಬ್ರೇಕ್ ಯಾಕೆ?

ಬೆಂಗಳೂರುಗೆ ದೊಡ್ಡ ಹೊಡೆತ: 2ನೇ ಏರ್‌ಪೋರ್ಟ್ ಯೋಜನೆಗೆ ಕೇಂದ್ರದಿಂದ ಬ್ರೇಕ್ ಯಾಕೆ?

ಬೆಂಗಳೂರಲ್ಲಿ ಎರಡನೇ ಏರ್ಪೋರ್ಟ್ ಆಗುತ್ತೆ ಇದರಿಂದ ಜನರಿಗೆ ಹೆಲ್ಪ್ ಆಗುತ್ತೆ ದೇವನಹಳ್ಳಿ ಏರ್ಪೋರ್ಟ್ಗೆ ಟ್ರಾಫಿಕ್ನಲ್ಲಿ ಗಂಟೆಗಟ್ಟಲೆ ಕಾದು ಏರ್ಪೋರ್ಟ್ಗೆ ಹೋಗೋದು ತಪ್ಪುತ್ತೆ ಅಂತ ಕನಸು ಕಾಣುತಿದ್ದವರಿಗೆ ಇದು ಶಾಕಿಂಗ್ ಶುದ್ದಿ ನಗರದ ದಕ್ಷಿಣ ಭಾಗದಿಂದ ಅಥವಾ ಪಶ್ಚಿಮ ಭಾಗದಿಂದ ದೇವನಹಳ್ಳಿಯಲ್ಲಿರುವ ಕೆಂಪೆ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಂದ್ರೆ ಅದೊಂದು ದೊಡ್ಡ ಸಾಹಸವೇ ಸರಿ ಫ್ಲೈಟ್ ಹಿಡಿಯಲು ಬೇಕಾಗುವ ಸಮಯಕ್ಕಿಂತ ಏರ್ಪೋರ್ಟ್ ತಲುಪಲು ಬೇಕಾಗುವ ಸಮಯವೇ ಹೆಚ್ಚಾಗಿದೆ ಅನ್ನೋದು ಕಹಿ ಸತ್ಯ ಹೀಗಾಗಿಯೇ ಬೆಂಗಳೂರಿನ ಜನ ಕಳೆದ ಕೆಲ ವರ್ಷಗಳಿಂದ ಒಂದು ದೊಡ್ಡ ಕನಸನ್ನ ಕಂಡಿದ್ರು ಅದೇನಪ್ಪಾ ಅಂದ್ರೆ ಬೆಂಗಳೂರಿನ ಆಸುಪಾಸಿನಲ್ಲೇ ಮತ್ತೊಂದು ಅಂದ್ರೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತೆ ಎಂಬ ದೊಡ್ಡ ಕನಸು ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಹೆಜ್ಜೆಯನ್ನ ಇಟ್ಟಿತ್ತು ನೆಲಮಂಗಲವು ಕನಕಪುರವೋ ಅಥವಾ ಮೈಸೂರು ರಸ್ತೆಯೋ ಎಲ್ಲೋ ಒಂದು ಕಡೆ ಎರಡನೇ ಏರ್ಪೋರ್ಟ್ ಬಂದೇ ಬಿಡುತ್ತೆ ಅಂತ ಜನ ಸಂಭ್ರಮದಲ್ಲಿ ಇದ್ರು ಆದರೆ ಈಗ ಆ ಸಂಭ್ರಮಕ್ಕೆ ಕೇಂದ್ರ ಸರ್ಕಾರ ತಣ್ಣೀರು ಎರಚಿದೆ ಹೌದು ಬೆಂಗಳೂರು ಎರಡನೇ ಏರ್ಪೋರ್ಟ್ ಕನಸು ಕಂಡಿದ್ದ ಜನರಿಗೆ ಇದು ಬಿಗ್ ಶಾಕ್ ಹೌದು ಬೆಂಗಳೂರು ಎರಡನೇ ಏರ್ಪೋರ್ಟ್ ಕನಸು ಕಂಡಿದ್ದ ಜನರಿಗೆ ಇದು ಬಿಗ್ ಶಾಕ್ ಯಾಕೆ ಗೊತ್ತಾ ಕೇಂದ್ರ ಸರ್ಕಾರದ ಅಧಿಕೃತ ಸ್ಪಷ್ಟನೆ ಪ್ರಕಾರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 25 ವರ್ಷ ಆಗುವವರೆಗೂ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ತೆಲೆಯಎತ್ತಲು ಸಾಧ್ಯವಿಲ್ಲ ಹಾಗಾದರೆ ಕೇಂದ್ರ ಸರ್ಕಾರ ಏಕಾಯಕಿ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಕೆಂಪೆಗೌಡ ಏರ್ಪೋರ್ಟ್ಗೆ ಯಾವಾಗ 25 ವರ್ಷ ಆಗುತ್ತೆ.

ಎಷ್ಟು ವರ್ಷ ಕಾಯಬೇಕು ರಾಜ್ಯ ಸರ್ಕಾರ ಈಗ ಏನ್ ಮಾಡುತ್ತೆ ಡೀಟೇಲ್ ಆಗಿ ನೋಡೋಣ ಬನ್ನಿ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದರಾದ ಪಿಸಿ ಮೋಹನ್ ಲೋಕಸಭೆಯಲ್ಲಿ ಎತ್ತಿದ ಒಂದು ಪ್ರಶ್ನೆಗೆ ಉತ್ತರವಾಗಿ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳಿಧರ್ ಮೋಹನ್ ಅವರು ನೀಡಿರುವ ಉತ್ತರ ಈಗ ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 25 ವರ್ಷ ತುಂಬುವವರೆಗೆ ಹೊಸ ವಿಮಾನ ನಿಲ್ದಾಣಕ್ಕೆ ಅನುಮತಿ ಸಿಗಲ್ಲ ಅನ್ನೋದನ್ನ ಕೇಂದ್ರ ಸ್ಪಷ್ಟವಾಗಿ ಹೇಳಿದೆ. ಸಚಿವರು ನೀಡಿರುವ ಮಾಹಿತಿ ಪ್ರಕಾರ 2008 ಮೇ 24 ರಂದು ಕೆಂಪೇಗೌಡ ವಿಮಾನ ನಿಲ್ದಾಣ ತನ್ನ ಕಾರ್ಯಾರಂಭವನ್ನ ಮಾಡಿದೆ. ಅದರ ರಿಯಾತಿ ಒಪ್ಪಂದದ ಪ್ರಕಾರ 25 ವರ್ಷಗಳ ಕಾಲ ಅಂದ್ರೆ 203ರ ಮೇ ತಿಂಗಳವರೆಗೆ ಇದರ 150 km ವ್ಯಾಪ್ತಿಯಲ್ಲಿ ಯಾವುದೇ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ನಿರ್ಮಿಸುವಂತಿಲ್ಲ ಈ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಅಂದ್ರೆ ಬಿಐಎಲ್ ಈಗಾಗಲೇ ಸಹಿಯನ್ನ ಹಾಕಿವೆ ಹೀಗಾಗಿ ಕಾನೂನಾತ್ಮಕವಾಗಿ 2033ರವರೆಗೆ ಎರಡನೇ ಏರ್ಪೋರ್ಟ್ ಕನಸು ನನಸಾಗುವುದು ಕಷ್ಟ ಸಾಧ್ಯ ಎಂಬುದು ಕೇಂದ್ರದ ವಾದ ರಾಜ್ಯ ಸರ್ಕಾರದಿಂದ ಪ್ರಸ್ತಾವ ಬಂದಿಲ್ಲ ಸದನದಲ್ಲಿ ಶಾಕ್ ಕೊಟ್ಟ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಯನ್ನ ನಡೆಸಿತ್ತು ಸಚಿವ ಎಂ ಬಿ ಪಾಟೀಲ್ ಅವರು ಪದೇ ಪದೇ ಸ್ಥಳ ಪರಿಶೀಲನೆಯನ್ನ ನಡೆಸುತ್ತಾ ಇದ್ರು ಕನಕಪುರ ರಸ್ತೆಯ ಚೂಡಹಳ್ಳಿ ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನ ಗುರುತಿಸಿ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಂದರೆ ಎಎಐ ವರದಿಯನ್ನ ಕೇಳಿದ್ರು ಎಎಐ ಈ ಸ್ಥಳಗಳಿಗೆ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಕೂಡ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಆದರೆ ಕೇಂದ್ರ ಸರ್ಕಾರ ಹೇಳುವುದ ಬೇರೆ ಕೇಂದ್ರ ಸಚಿವರು ತಿಳಿಸಿರುವಂತೆ ರಾಜ್ಯ ಸರ್ಕಾರದಿಂದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಪ್ರಸ್ತಾವನೆ ಕೇಂದ್ರಕ್ಕೆ ಬಂದಿಲ್ಲ ಕೇವಲ ಸ್ಥಳ ಪರಿಶೀಲನೆ ಮಾತ್ರ ಎಎಐ ತಂಡವನ್ನ ಕೇಳಲಾಗಿತ್ತು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳ ನೀತಿಯಾ ಅಡಿ ಯಾವುದೇ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಕೇಂದ್ರ ಅದನ್ನ ಪರಿಶೀಲಿಸುತ್ತೆ ಆದರೆ ಬೆಂಗಳೂರಿನ ವಿಚಾರದಲ್ಲಿ ಅಂತಹ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಅಂತ ಹೇಳಿದ್ದಾರೆ ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ಮುಖಬಂಗವಾಗಿದೆ ಮೈಸೂರು ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸೂಚನೆ ಇಲ್ಲಿ ಪ್ರಮುಖವಾದ ಅಡ್ಡಿಗೆ 150 ಕಿಲೋಮೀಟ ನಿಯಮ ಬಿಐಎಎಲ್ ಜೊತೆಗಿನ ಒಪ್ಪಂದದ ಪ್ರಕಾರ ಕೆಂಪೇಗೌಡ ವಿಮಾನ ನಿಲ್ದಾಣದಿಂದ 150 ಕಿಲೋಮೀಟ ವ್ಯಾಪ್ತಿಯಲ್ಲಿ ಮತ್ತೊಂದು ಏರ್ಪೋರ್ಟ್ ಆರಂಭಿಸಬೇಕಾದರೆ ಬಿಐಎಎಲ್ ನಿಂದ ಅನುಮತಿ ಪಡೆಯಲೇಬೇಕು ಕೇವಲ ಹೊಸ ಏರ್ಪೋರ್ಟ್ ಮಾತ್ರವಲ್ಲ ಹಳೆಯ ಹಚ್ಎಎಲ್ ವಿಮಾನ ನಿಲ್ದಾಣವನ್ನ ಮತ್ತೆ ನಾಗರಿಕ ಸೇವೆಗೆ ಅಂದರೆ ಪ್ಯಾಸೆಂಜರ್ ಫ್ಲೈಟ್ಸ್ಗೆ ಲಭ್ಯವಾಗುವಂತೆ ಆರಂಭಿಸಬೇಕಂದ್ರೂ ಕೂಡ ಬಿಐಎಎಲ್ ಒಪ್ಪಿಗೆ ಅನಿವಾರ್ಯ ಆದರೆ ಮೈಸೂರು ಮತ್ತು ಹಾಸನ ವಿಮಾನ ನಿಲ್ದಾಣಗಳನ್ನ ದೇಶೀಯ ವಿಮಾನ ನಿಲ್ದಾಣಗಳಾಗಿ ಅಭಿವೃದ್ಧಿ ಪಡಿಸಲು ಮಾತ್ರ ರಿಯಾಯಿತಿ ಇದೆ ಎನ್ನುಳಿದಂತೆ ಬೆಂಗಳೂರಿನ ಆಸುಪಾಸಿನಲ್ಲಿ ಯಾವುದೇ ಅಂತರಾಷ್ಟ್ರೀಯ ಅಥವಾ ದೊಡ್ಡ ಮಟ್ಟದ ಡೊಮೆಸ್ಟಿಕ್ ಏರ್ಪೋರ್ಟ್ 2033ರವರೆಗೆ ಸಾಧ್ಯವೇ ಇಲ್ಲ ಎಂಬ ಕಹಿ ಸತ್ಯ ಈಗ ಬಯಲಾಗಿದೆ.

ಟೆಂಡರ್ ಕರೆದ ಕೆಎಸ್ಐಐಡಿಸಿ ಇಷ್ಟೆಲ್ಲ ಸವಾಲುಗಳ ನಡುವೆಯೂ ಕೂಡ ಕರ್ನಾಟಕ ಕೈಗಾರಿಕ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಎರಡನೇ ವಿಮಾನ ನಿಲ್ದಾಣದ ಕೆಲಸವನ್ನ ಕೈಬಿಟ್ಟಿಲ್ಲ. ನೂತನ ವಿಮಾನ ನಿಲ್ದಾಣಕ್ಕೆ ಸ್ಥಳದ ಅನುಕೂಲತೆ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸದ್ಧತೆ ಬಗ್ಗೆ ವರದಿ ನೀಡಲು ಪರಿಣಿತ ಸಲಹಾ ಸಂಸ್ಥೆಯ ಆಯ್ಕೆಗಾಗಿ ಟೆಂಡರ್ ಅನ್ನ ಕರೆದಿದೆ. ಈ ಟೆಂಡರ್ ಸಲ್ಲಿಸಲು 2026ರ ಜನವರಿ 12 ಕೊನೆಯ ದಿನವಾಗಿದೆ. ಆಯ್ಕೆಯಾಗುವ ಸಂಸ್ಥೆಯು ಐದು ತಿಂಗಳೊಳಗೆ ಸಂಪೂರ್ಣ ವರದಿಯನ್ನ ನೀಡಬೇಕು. ಭೂಮಿ ಎಲ್ಲಿ ಸಿಗುತ್ತೆ ಎಷ್ಟು ಹಣ ಖರ್ಚಾಗುತ್ತೆ ಡಿಜಿಸಿಎ ಮತ್ತು ರಕ್ಷಣಾ ಸಚಿವಾಲಯದಿಂದ ಯಾವ ರೀತಿ ಅನುಮತಿ ಪಡೆಯಬೇಕು ಇವೆಲ್ಲ ಅಂಶಗಳು ಈ ವರದಿಯಲ್ಲಿ ಇರಲಿವೆ. ಅಂದ್ರೆ 2033 ರ ವೇಳೆಗೆ ಏರ್ಪೋರ್ಟ್ ರೆಡಿ ಇರಬೇಕಾದರೆ ಈಗಿನಿಂದಲೇ ಸಿದ್ಧತೆ ನಡೆಸ್ತಾ ಇದ್ದೇವೆ ಅಂತ ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುತ್ತಾ ಇದೆ. ಬೆಂಗಳೂರು ಮಂದಿ ಕನಸಿಗೆ ಕೊಳ್ಳಿ. ಈ ಸುದ್ದಿಯಿಂದ ಬೆಂಗಳೂರಿನ ಜನರಿಗೆ ತುಂಬಾನೇ ಬೇಸರವಾಗಿದೆ. ಅದರಲ್ಲೂ ಬೆಂಗಳೂರಿನ ಸೌತ್ ಮತ್ತು ವೆಸ್ಟ್ ಭಾಗದ ಜನರಿಗೆ ಇದು ಬಿಗ್ ಶಾಕ್ ಅಂತಾನೆ ಹೇಳಬಹುದು. ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಬೇಕಾಗುವ ಸಂಕಷ್ಟ ಅವರಿಗೆ ಮಾತ್ರ ಗೊತ್ತು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವುದರಿಂದ 2033ರ ವರೆಗೆ ಕಾಯುವುದು ಅಂದ್ರೆ ತುಂಬಾನೇ ಕಷ್ಟ. ಅದರಲ್ಲೂ ಟ್ರಾಫಿಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆ ಅನ್ನೋದು ನಗರದ ಮಂದಿ ಅಳಲು. ಅಲ್ಲದೆ ಎರಡನೇ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಆರ್ಥಿಕ ಬೆಳವಣಿಗೆಗೆ ದೊಡ್ಡ ಬೂಸ್ಟ್ ಸಿಗ್ತಾ ಇತ್ತು. ಲಾಜಿಸ್ಟಿಕ್ಸ್ ಸರಕು ಸಾಗಣೆ ಮತ್ತು ಉದ್ಯೋಗ ಸೃಷ್ಟಿಗೆ ಇದು ಪೂರಕವಾಗಿತ್ತು.

ಈಗ ಎಲ್ಲವೂ ಇನ್ನೊಂದು ದಶಕದವರೆಗೆ ನೆನೆಕೊದಿಗೆ ಬಿದ್ದಂತಾಗಿದೆ. ಹೆಚ್ಎಎಲ್ ಏರ್ಪೋರ್ಟ್ ಮತ್ತೆ ಪುನಾರಂಭ. ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣವನ್ನ ಮತ್ತೆ ನಾಗರಿಕ ಪ್ರಯಾಣಕ್ಕೆ ಬಳಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಅಂತ ಕೈಗಾರಿಕ ಸಚಿವ ಎಂ ಬಿ ಪಾಟೀಲ್ ಮಹತ್ವದ ಮಾಹಿತಿಯನ್ನ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಬೆಂಗಳೂರಿನ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗೆ ಮೂರು ಸ್ಥಳಗಳನ್ನ ಗುರುತಿಸಲಾಗಿದೆ. ಈ ಮೂರು ಸ್ಥಳಗಳನ್ನ ಪ್ರಾಧಿಕಾರದ ತಾಂತ್ರಿಕ ತಂಡ ಕಳೆದ ಏಪ್ರಿಲ್ ನಲ್ಲಿ ಪರಿವೀಕ್ಷಣೆ ಕೈಗೊಂಡು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯಿಂದ ಪೂರ್ವ ಕಾರ್ಯಸಾಧ್ಯತಾ ವರದಿಯನ್ನ ಪಡೆದಿರುತ್ತೆ. ಆದರೆ ಸರ್ಕಾರ ಗುರುತಿಸಿರುವ ಜಾಗಗಳ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಡಿರುವ ಶಿಫಾರಸುಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರ ಆಯ್ಕೆಗೆ ಟೆಂಡರ್ ಅನ್ನ ಕರೆಯಲಾಗಿದೆ ಅಂತ ಸಚಿವರು ಹೇಳಿದರು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಸ್ತುತ ಗುರುತಿಸಿರುವ ಜಾಗಗಳಲ್ಲಿ ಏರಳಿತದಿಂದ ಕೂಡಿರುವಂತಹ ಗುಡ್ಡಗಳು ಇರುವುದರಿಂದ ನಿರ್ಮಾಣ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಆದೇಶದ ನಡುವೆಯೂ ಕೂಡ ರಾಜ್ಯ ಸರ್ಕಾರ ತನ್ನ ಕಾರ್ಯವನ್ನ ನಿಲ್ಲಿಸಿಲ್ಲ. ಎರಡನೇ ಏರ್ಪೋರ್ಟ್ಗೆ ಏನೇನು ಬೇಕು ಅದೆಲ್ಲವನ್ನೂ ಕೂಡ ನೀಟಾಗಿ ಮಾಡ್ತಾ ಇದೆ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಮಾತನಾಡಿ 2030 ರೊಳಗೆ ಕೆಲಸವನ್ನ ಆರಂಭಿಸುತ್ತಾ ಅಥವಾ ಕೇಂದ್ರದ ಮಾತಿಗೆ ಒಪ್ಪಿಕೊಳ್ಳುತ್ತಾ ಅದನ್ನು ಕೂಡ ಕಾದು ನೋಡಬೇಕು. ನೋಡಿದ್ರಲ್ಲ ವೀಕ್ಷಕರೇ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಬೇಕು ಅನ್ನೋದು ಕೇವಲ ಹಂಬಲವಲ್ಲ ಅದು ಈ ನಗರದ ಅಗತ್ಯ ಕೂಡ ಹೌದು ಆದರೆ ಕಾನೂನಾತ್ಮಕ ಒಪ್ಪಂದಗಳು ಮತ್ತು ಕೇಂದ್ರ ರಾಜ್ಯ ಸರ್ಕಾರದ ನಡುವಿನ ಸಮನ್ವಯದ ಕೊರತೆ ಈಗ ಜನರಿಗೆ ನಿರಾಸೆಯನ್ನ ತಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments