ತುಮಕೂರು ಮಂದಿಗೆ ಗುಡ್ ನ್ಯೂಸ್ ಬೆಂಗಳೂರು ತುಮಕೂರು ಮೆಟ್ರೋ ಪ್ಲಾನ್ ರೆಡಿ ಬಿಎಂಆರ್ಸಿ ಲಿಂದ ಹೈದರಾಬಾದ್ ಕಂಪನಿಗೆ ಟೆಂಡರ್ ಸಿಲಿಕಾನ್ ಸಿಟಿ ಬೆಂಗಳೂರಿನ ಗಡಿದಾಟಿ ಕಲ್ಪತರು ನಾಡು ತುಮಕೂರಿಗೆ ನಮ್ಮ ಮೆಟ್ರೋ ಲಗ್ಗೆ ಇಡಲು ಈಗ ಕಾಲ ಸನ್ನಿತವಾಗಿದೆ ತುಮಕೂರಿಗೆ ಮೆಟ್ರೋ ಶುರುವಾಗುತ್ತೆ ಅನ್ನೋ ಸುದ್ದಿ ಮಾತ್ರ ಇತ್ತು ಈಗ ಅದರ ಕೆಲಸಗಳು ಕೂಡ ಶುರುವಾಗಿವೆ ತೊರಿತಗತಿಯಲ್ಲಿ ಕೆಲಸ ಮಾಡಲು ಸರ್ಕಾರ ಈಗ ಮುಂದಾಗಿದೆ ಪ್ರತಿದಿನ ಲಕ್ಷಾಂತರ ಜನರು ಸಂಚರಿಸುವ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಕಿರಿಕಿರಿಗೆ ಇತಿಶಯನ್ನ ಹಾಡಲು ಬಿಎಂಆರ್ಸಿ ಅಲ್ಲಿ ಈಗ ಭರ್ಜರಿ ಮಾಸ್ಟರ್ ಪ್ಲಾನ್ ಅನ್ನ ಸಿದ್ಧಪಡಿಸಿದೆ. ಇದು ಕೇವಲ ಒಂದು ರೈಲು ಮಾರ್ಗವಲ್ಲ ಇದು ರಾಜ್ಯದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳನ್ನ ಬೆಸೆಯುವ ಮಹತ್ವದ ಕೊಂಡಿ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು ಓಡಿಸಬೇಕು ಎನ್ನುವ ದಶಕಗಳ ಕನಸು ಈಗ ನನಸಾಗುವ ಹಾದಿಯಲ್ಲಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದಂತೆ ಈ ಬೃಹತ್ ಯೋಜನೆಗೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಮುಂದಿನ ಐದು ತಿಂಗಳಲ್ಲಿ. ಈ ಯೋಜನೆಯ ಜಾತಕ ಅಂದ್ರೆ ವಿಸ್ತೃತ ಯೋಜನಾ ವರದಿ ಅಂದ್ರೆ ಡಿಪಿಆರ್ ಸಿದ್ಧವಾಗಲಿದೆ. ಹಾಗಾದ್ರೆ ಈ ಮೆಟ್ರೋ ಎಲ್ಲೆಲ್ಲಿ ಹಾದು ಹೋಗುತ್ತೆ ನಿಲ್ದಾಣಗಳು ಎಲ್ಲೆಲ್ಲಿ ಬರುತ್ತವೆಬೆಂಗಳೂರು ಮೆಟ್ರೋ ರೈಲು ನಿಗಮವು ತುಮಕೂರು ಮೆಟ್ರೋ ಯೋಜನೆಯನ್ನ ಅತ್ಯಂತ ಗಂಭೀರವಾಗಿ .
ಯೋಜನೆಯ ಮೊದಲ ಹಂತವಾಗಿ ವಿಸ್ತೃತ ಯೋಜನಾ ವರದಿ ಅಂದರೆ ಡಿಪಿಆರ್ ಸಿದ್ಧಪಡಿಸಲು ಹೈದರಾಬಾದ್ ಮೂಲದ ಖ್ಯಾತ ಸಂಸ್ಥೆ ಆರ್ವಿ ಅಸೋಸಿಯೇಟ್ಸ್ ಟೆಂಡರ್ ಪಡೆದುಕೊಂಡಿದೆ. ಸುಮಾರು 1.26 ಕೋಟಿ ರೂಪಾಯಿ ವೆಚ್ಚದಲ್ಲಿ ಈ ತಯಾರಿಸಲು ಕಂಪನಿಗೆ ಜವಾಬ್ದಾರಿಯನ್ನ ನೀಡಲಾಗಿದೆ. ಈ ಸಂಸ್ಥೆಯು ಮುಂದಿನ ಐದು ತಿಂಗಳ ಅವಧಿಯಲ್ಲಿ ಮೆಟ್ರೋ ಮಾರ್ಗಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಅಂಶವನ್ನು ಕೂಡ ಅಧ್ಯಯನ ಮಾಡಲಿದೆ. ಅಂದ್ರೆ ರೈಲು ಮಾರ್ಗದ ನಿಖರವಾದ ಸ್ಥಳ ಯಾವುದು ಎಲ್ಲೆಲ್ಲಿ ಪಿಲ್ಲರ್ಗಳನ್ನ ನಿರ್ಮಿಸಬೇಕು ಯೋಜನೆಗೆ ಎಷ್ಟು ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತೆ ಪರಿಸರಕ್ಕೆ ಹಾನಿಯಾಗದಂತೆ ಎಷ್ಟು ಮರಗಳನ್ನ ಕಡಿೆಯಬೇಕಾಗುತ್ತೆ ಮತ್ತು ನಿಲ್ದಾಣಗಳ ವಿನ್ಯಾಸ ಹೇಗಿರಬೇಕು ಎಂಬ ಬಗ್ಗೆ ವೈಜ್ಞಾನಿಕ ವರದಿಯನ್ನ ನೀಡಲಿದೆ ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ರೈಲುಗಳ ಸಂಚಾರದ ದಟ್ಟಣೆ ಮತ್ತು ಇಂಟರ್ಚೇಂಜ್ ಸೌಲಭ್ಯಗಳ ಬಗ್ಗೆ ಕೂಡ ಈ ವರದಿಯಲ್ಲಿ ಮಾಹಿತಿ ಇರಲಿದೆ ತುಮಕೂರಿನ ಶಿರಾ ಗೇಟ್ ವರೆಗೂ ಮೆಟ್ರೋ ಬೆಂಗಳೂರ ನಿಂದ ಎರಡೇ ಗಂಟೆ ಪ್ರಯಾಣ ಸದ್ಯ ಬೆಂಗಳೂರಿನ ನಮ್ಮ ಮೆಟ್ರೋದ ಹಸಿರು ಮಾರ್ಗವು ನಾಗಸಂದ್ರದಿಂದ ವಿಸ್ತರಣೆಗೊಂಡು ಮಾಧವರ ನಿಲ್ಧಾಣದಲ್ಲಿ ಕೊನೆಗೊಳ್ಳುತ್ತೆ ಅಲ್ಲಿಂದ ಮುಂದೆ ತುಮಕೂರಿನ ಶಿರಾ ಗೇಟ್ ವರೆಗೆ ಬರಬ್ಬರಿ 59.60 60 ಕಿಲೋಮೀಟ ದೂರದವರೆಗೆ ಮೆಟ್ರೋ ಹಳ್ಳಿಗಳನ್ನ ನಿರ್ಮಿಸಲು ಉದ್ದೇಶಿಸಲಾಗಿದೆ ಈ ಮಾರ್ಗವು ರಾಷ್ಟ್ರೀಯ ಹೆದ್ದಾರಿ 48ರ ಉದ್ದಕ್ಕೂ ಸಾಗಲಿದ್ದು ನೆಲಮಂಗಲ ದಾಬಸ್ಪೇಟೆ ಮತ್ತು ಖ್ಯಾತ ಸಂದರ್ಭದಂತಹ ಪ್ರಮುಖ ಕೈಗಾರಿಕ ಮತ್ತು ವಾಣಿಜ್ಯ ಪ್ರದೇಶಗಳನ್ನ ಒಳಗೊಳ್ಳಲಿದೆ ಕಾರ್ಯ ಸಾಧದ ವರದಿಯ ಪ್ರಕಾರ ಇದು ಸುಮಾರು ಎರಡು ಗಂಟೆಗಳ ಸುದೀರ್ಘ ಪ್ರಯಾಣದ ಮಾರ್ಗವಾಗಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ತಾಂತ್ರಿಕ ನಿರ್ವಹಣೆಗಾಗಿ ನೆಲಮಂಗಲ ಮತ್ತು ತುಮಕೂರು ಎರಡು ಕಡೆಗಳಲ್ಲಿ ಬೃಹತ್ ಮೆಟ್ರೋ ಡಿಪೋಗಳನ್ನ ನಿರ್ಮಿಸಲು ಸರ್ಕಾರ ಯೋಜಿಸಿದೆ. ಇದು ಕರ್ನಾಟಕದ ಮೊದಲ ಅಂತರ್ಜಿಲ್ಲಾ ಮೆಟ್ರೋ ಸಂಪರ್ಕ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಲಿದೆ. ಈ 60 km ವ್ಯಾಪ್ತಿಯಲ್ಲಿ ಒಟ್ಟು 25 ಸಂಭಾವ್ಯ ನಿಲ್ದಾಣಗಳನ್ನ ಗುರುತಿಸಲಾಗಿದೆ. ಈ ನಿಲ್ದಾಣಗಳು ಬೆಂಗಳೂರಿನ ಹೊರವಲಯದಿಂದ ತುಮಕೂರಿನ ಹೃದಯ ಭಾಗದವರೆಗೆ ಸಂಪರ್ಕವನ್ನ ಕಲ್ಪಿಸಲಿವೆ. 25 ನಿಲ್ದಾಣಗಳು ಯಾವುವು ಅಂತ ನೋಡ್ಕೊಂಡು ಬರೋದಾದರೆ ಎಲ್ಲೆಲ್ಲಿ ಬರಲಿವೆ ನಿಲ್ದಾಣ. ಮಾದಾವರ ಆರಂಭಿಕ ನಿಲ್ದಾಣ ಮಾಕಳಿ ದಾಸನಪುರ ನೆಲಮಂಗಲ ವೀವರ್ ಕಾಲೋನಿ ನೆಲಮಂಗಲ ವಿಶ್ವೇಶ್ವರಪುರ ನೆಲಮಂಗಲ ಟೋಲ್ಗೇಟ್ ಬೂದಿಹಾಳ್ ಟಿ ಬೇಗೂರು ತಿಪ್ಪಗೊಂಡನಹಳ್ಳಿ ಕುಲವನಹಳ್ಳಿ ಮಹಿಮಾಪುರ ಬಿಲ್ಡನ್ಕೋಟೆ ಸೋಂಪುರ ಕೈಗಾರಿಕ ಪ್ರದೇಶ ದಾಬಸ್ಪೇಟೆ ನಲ್ಲಾಯನಪಾಳ್ಯ ಚಿಕ್ಕಹಳ್ಳಿ ಪಂಡಿತನಹಳ್ಳಿ ಹಿರೆಹಳ್ಳಿ ಕೈಗಾರಿಕ ಪ್ರದೇಶ ಚಾನ್ಸಂದ್ರ ಬೈಪಾಸ್ ಕ್ಯಾಸಂದ್ರ ಎಸ್ಐಟಿ ಸಿದ್ಧಾರ್ಥ್ ಕಾಲೇಜು ತುಮಕೂರು ಬಸ್ ನಿಲ್ಧಾಣ ಟೂಡಾಡ್ ಲೇಔಟ್ ಶಿರಾಗೇಟ್ ಇದು ಅಂತಿಮ ನಿಲ್ದಾಣ ಈ ನಿಲ್ದಾಣಗಳು ಕೇವಲ ಜನವಸತಿ ಪ್ರದೇಶಗಳನ್ನಷ್ಟೇ ಅಲ್ಲದೆ ಪ್ರಮುಖ ಕೈಗಾರಕ ವಲಯಗಳಾದ ಸೋಂಪುರ ಮತ್ತು ಹಿರೆಹಳ್ಳಿಯನ್ನ ಸಂಪರ್ಕಿಸುವುದರಿಂದ ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ವರದಾನ 20ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಸಾಧ್ಯವಿರುವ ಕಡೆಗಳಲ್ಲಿ ಡಬಲ್ ಡೆಕ್ಕರ್ ಇಷ್ಟು ದೀರ್ಘವಾದ ಮಾರ್ಗ ನಿರ್ಮಾಣಕ್ಕೆ ಭಾರಿ ಪ್ರಮಾಣದ ಬಂಡವಳ ಬೇಕಾಗುತ್ತೆ ವರದೆಗಳ ಪ್ರಕಾರ ಈ ಯೋಜನೆಯ ಜಾರಿಗೆ ಎರಡು ರೀತಿಯ ಹಣಕಾಸು ಮಾದರಿಗಳನ್ನ ಸರ್ಕಾರ ಪರಿಶೀಲನೆಯನ್ನ ಮಾಡ್ತಾ ಇದೆ ಒಂದು ಖಾಸಗಿ ಸಾರ್ವಜನಿಕ ಪಾಲದರಕ್ಕೆ ಅಂದ್ರೆ ಒಂದು ವೇಳೆ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾದರೆ ಅಂದಾಜು 20,650 ಕೋಟಿ ರೂಪಾಯಿಗಳ ಅಗತ್ಯವಿದೆ.
ಇನ್ನೊಂದು ಸರ್ಕಾರಿ ಮತ್ತು ಸಾಲದ ಮಾದರಿ ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೇರ ಹೂಡಿಕೆ ಹಾಗೂ ಅಂತರಾಷ್ಟ್ರೀಯ ಬ್ಯಾಂಕುಗಳಿಂದ ಸಾಲ ಪಡೆಯುವ ಮೂಲಕ ಜಾರಿಗೆ ತಂದರೆ ಸುಮಾರು 18670 ಕೋಟಿ ರೂಪಾಯಿ ವೆಚ್ಚವಾಗಬಹುದು. ಈ ಎರಡರಲ್ಲಿ ಯಾವ ಮಾದರಿ ಸೂಕ್ತ ಮತ್ತು ಆರ್ಥಿಕವಾಗಿ ಲಾಭದಾಯಕ ಎಂಬುದನ್ನ ಕೇಂದ್ರ ಸರ್ಕಾರ ಅಂತಿಮವನ್ನ ಗೊಳಿಸಲಿದೆ. ನಮ್ಮ ಮೆಟ್ರೋ ಇನ್ನು ಮುಂದೆ ನಿರ್ಮಿಸುವ ಮಾರ್ಗಗಳಲ್ಲಿ ಸಾಧ್ಯವಿರುವ ಕಡೆಗಳಲ್ಲಿ ಡಬಲ್ ಡೆಕ್ಕರ್ ಅಂದರೆ ಕೆಳಗೆ ರಸ್ತೆ ಮೇಲೆ ಮೆಟ್ರೋ ಮಾದರಿಯನ್ನ ಅನುಸರಿಸುವುದಾಗಿ ತಿಳಿಸಿದೆ. ಆದರೆ ತುಮಕೂರು ಮಾರ್ಗದಲ್ಲಿ ಸದ್ಯಕ್ಕೆ ಬಿಎಂಆರ್ಸಿಎಲ್ ಎಲ್ಲಾ ನಿಲ್ದಾಣಗಳನ್ನ ಎಲಿವೇಟೆಡ್ ಅಂದ್ರೆ ಮೇಲ್ಸೇತುವೆ ಮೇಲೆ ಅಂತ ಮಾತ್ರ ಹೇಳಿದೆ. ಐದು ತಿಂಗಳ ನಂತರ ಸಿಗುವಂತಹ ಡಿಪಿಆರ್ ವರದಿಯಲ್ಲಿ ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ನಿರ್ಮಾಣ ಸಾಧ್ಯವೇ ಎಂಬುದನ್ನ ಸ್ಪಷ್ಟಪಡಿಸಲಿದೆ. ಈಗಾಗಲೇ ಬೆಂಗಳೂರಿನ ಕಿತ್ತಳೆ ಮತ್ತು ಕೆಂಪು ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ನಿರ್ಮಿಸುವ ಪ್ಲಾನ್ ಕೂಡ ಮಾಡಲಾಗಿದೆ. ಆರ್ಥಿಕ ಅಭಿವೃದ್ಧಿಗೆ ಮೆಟ್ರೋ ಬೂಸ್ಟ್. ಈ ಮೆಟ್ರೋ ಯೋಜನೆಯಿಂದ ಆಗುವ ಲಾಭಗಳು ಅಸಿಸ್ಟ್ ಅಲ್ಲ. ಟ್ರಾಫಿಕ್ ಮುಕ್ತಿ ಅಂದ್ರೆ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ಲಾರಿ ಬಸ್ಸುಗಳ ಸಂಚಾರವಿರುತ್ತೆ. ಮೆಟ್ರೋ ಬಂದರೆ ರಸ್ತೆ ಸಾರಿಗೆ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ತುಮಕೂರು ಜಿಲ್ಲೆಯ ಕೈಗಾರಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ. ವ್ಯಾಪಾರ ಬೈವಾಟುಗಳು ಹೆಚ್ಚಾಗಲಿವೆ. ರಿಯಲ್ ಎಷ್ಟೆಷ್ಟು ಚೇತ್ರಿಕೆಯನ್ನ ಕಂಡುಕೊಳ್ಳಿದೆ. ನೆಲಮಂಗಲ ಮತ್ತು ದಾಬಾಸ್ಪೇಟೆ ಸುತ್ತಮುತ್ತಲಿನ ಭೂಮಿಗೆ ಬಂಗಾರದ ಬೆಲೆ ಬರಲಿದೆ.
ಸಮಯದ ಉಳಿತ ಆಗಲಿದೆ. ರಸ್ತೆ ಮೂಲಕ ಎರಡು ಮೂರು ಗಂಟೆ ಬೇಕಾಗುವ ಪ್ರಯಾಣ ಮೆಟ್ರೋ ಮೂಲಕ ಸುಗಮವಾಗಿ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ. ಮೂರು ಜಿಲ್ಲೆಗಳಿಗೆ ಮೆಟ್ರೋ ವಿಸ್ತರಣೆ ತುಮಕೂರು ಸೇರಿ ರಾಮನಗರ ಬೆಂಗಳೂರು ಗ್ರಾಮಾಂತರಕ್ಕೂ ಕೂಡ ಮೆಟ್ರೋ ಸೇವೆ ನೀಡಲು ಬಿಎಂಆರ್ಸಿಎಲ್ ಮುಂದಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ಜಾಲವನ್ನ ಎಂಟು ಮಾರ್ಗಗಳಲ್ಲಿ ವಿಸ್ತರಣೆ ಮಾಡಲು ಕಾರ್ಯ ಸಾಧ್ಯತೆಯನ್ನ ಅಧ್ಯಯನವನ್ನ ನಡೆಸ್ತಾ ಇದೆ. ಯಾವ ಯಾವ ಮಾರ್ಗದಲ್ಲಿ ಮೆಟ್ರೋವನ್ನ ವಿಸ್ತರಣೆ ಮಾಡಲು ಬಿಎಂಆರ್ಸಿಯ ಸಮೀಕ್ಷೆಯನ್ನ ನಡೆಸ್ತಾ ಇದೆ ಎಂಬುದನ್ನ ನೋಡುವುದಾದರೆ ಒಟ್ಟು ಎಂಟು ಮಾರ್ಗಗಳಲ್ಲಿ ಮೆಟ್ರೋ ವಿಸ್ತರಣೆಗೆ ಮೆಟ್ರೋ ಕಾರ್ಪೊರೇಷನ್ ಪ್ಲಾನ್ ಅನ್ನ ಮಾಡಿಕೊಂಡಿದೆ. ಮೊದಲನೆಯದು ಚಲ್ಲಘಟ್ಟದಿಂದ ರಾಮನಗರ ಜಿಲ್ಲೆಯ ಬಿಡದಿವರೆಗೂ 15 km ಮೆಟ್ರೋ ಮಾರ್ಗ ನಿರ್ಮಿಸಲು ಸಮೀಕ್ಷೆಯನ್ನ ನಡೆಸಿದರೆ ರೇಷ್ಮೆ ಸಂಸ್ಥೆಯಿಂದ ಕನಕಪುರದ ಹಾರೋಹಳ್ಳಿಯವರೆಗೆ 24ಕಮ ವಿಸ್ತರಣೆಗೆ ಪ್ಲಾನ್ ಅನ್ನ ಮಾಡಿದೆ. ಬೊಮ್ಮ ಸಂದರ್ಭದಿಂದ ಅತ್ತಿಬಲೆವರೆಗೆ 11ಕಮ ಮಾರ್ಗ ಮಾಧಾವರದಿಂದ ತುಮಕೂರವರೆಗೆ 52 ಕಿಲೋಮೀಟ ಮೆಟ್ರೋ ಮಾರ್ಗ ದೊಡ್ಡ ಜಾಲದಿಂದ ದೇವನಹಳ್ಳಿಯವರೆಗೆ 6 ಕಿಲೋಮೀಟ ಮಾರ್ಗ ಕೆಆರ್ ಪುರದಿಂದ ಹೊಸಕೋಟೆವರೆಗೆ 15 ಕಿಲೋಮೀಟ ಮೆಟ್ರೋ ಮಾರ್ಗ ವಿಸ್ತರಿಸಲು ಪ್ಲಾನ್ನ್ನ ಮಾಡಿಕೊಳ್ಳಲಾಗ್ತಿದೆ. ಇದರ ಜೊತೆ ಕಡಬಗೆರೆಯಿಂದ ತಾವರೆಕೆರೆಗೆ 6 ಕಿಲೋಮೀಟ ಮೆಟ್ರೋ ಮಾರ್ಗ ವಿಸ್ತರಣೆಗೂ ಕೂಡ ಪ್ಲಾನ್ ಅನ್ನ ಮಾಡಲಾಗಿದೆ. ಇದು ಮೆಟ್ರೋದ ಮೂರನೇ ಹಂತದ ಮಾಗಡಿ ರಸ್ತೆಯ ಮಾರ್ಗದ ವಿಸ್ತರಣೆಯಾಗಿದೆ. ಅದರ ಜೊತೆ ಕಾಳೆನ ಅಗ್ರಹಾರದಿಂದ ಬನ್ನೇರಘಟ್ಟ ನ್ಯಾಷನಲ್ ಪಾರ್ಕ್ ಜಿಗಣಿ ಆನೇಕಲ್ ಅತ್ತಿಬೆಲೆ ಸರ್ಜಾಪುರ ವರ್ತೂರು ಕಾಡಗೋಡಿ ಟ್ರೀ ಪಾರ್ಕ್ ನಡುವೆ 68 ಕಿಲೋಮೀಟ ಮೆಟ್ರೋ ಮಾರ್ಗ ನಿರ್ಮಿಸಲು ಬಿಎಂಆರ್ಸಿಎಲ್ ಯೋಜನೆಯನ್ನ ರೂಪಿಸುತ್ತಾ ಇದೆ. ಹೀಗೆ ಹತ್ತಾರು ಕನಸುಗಳನ್ನ ಹೊತ್ತು ಸಾಗುತ್ತಿರುವ ತುಮಕೂರು ಮೆಟ್ರೋ ಯೋಜನೆ ಈಗ ಪ್ರಮುಖ ಹಂತವನ್ನು ತಲುಪಿದೆ. ಡಿಪಿಆರ್ ವರದಿ ಸಿದ್ಧವಾಗಿ ಕೇಂದ್ರ ಸರ್ಕಾರದಿಂದ ಹಸಿರು ನಿಷಾನೆ ಸಿಕ್ರೆ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಇದು ಕೇವಲ ಬೆಂಗಳೂರು ಮತ್ತು ತುಮಕೂರು ನಡುವಿನ ಅಂತರವನ್ನಷ್ಟೇ ಕಡಿಮೆ ಮಾಡುವುದಿಲ್ಲ. ಬದಲಾಗಿ ಲಕ್ಷಾಂತರ ಜನರ ಜೀವನದ ಗತಿಯನ್ನೇ ಬದಲಿಸಲಿದೆ. ಐದು ತಿಂಗಳ ನಂತರ ಬರುವಂತಹ ಆ ಯೋಜನಾ ವರದಿಯಲ್ಲಿ ಏನೆಲ್ಲಾ ವಿಶೇಷತೆಗಳು ಇರಲಿವೆ ಎಂಬ ಕುತುಹಲ ಕೂಡ ಈಗ ಎಲ್ಲರಲ್ಲೂ ಮನೆಮಾಡಿದೆ.


