ಓಲ ಉಬರ್ ಗೆ ಕೇಂದ್ರ ಶಾಕ್ ಬಂತು ಭಾರತ್ ಟ್ಯಾಕ್ಸಿ ಪ್ಯಾಸೆಂಜರ್ ಡ್ರೈವರ್ಸ್ ಇಬ್ಬರಿಗೂ ಲಾಭ ಕ್ರಾಂತಿ ಮಾಡುತ್ತಾ ಸರ್ಕಾರಿ ಟ್ಯಾಕ್ಸಿ ಕ್ಯಾಬ್ ಬೆಂಗಳೂರಂತ ಮಹಾನಗರಗಳ ಜೀವನಾಡಿ ಎಷ್ಟೋ ಜನ ಯುವಕರಿಗೆ ಅನ್ನ ಹಾಕೋ ಕಾಮದೇನು ಆದರೆ ಇಂತ ಕ್ಯಾಬ್ ಬಗ್ಗೆ ಕ್ಯಾಬ್ ರೇಟ್ ಬಗ್ಗೆ ಹಾಗೂ ಕಮಿಷನ್ ವಿಚಾರದಲ್ಲಿ ಡ್ರೈವರ್ಸ್ ಮತ್ತು ಪ್ರಯಾಣಿಕರು ಇಬ್ಬರಿಗೂನು ಕಿರಿಕಿರಿ ಇತ್ತು ಪೇ ಅವರ್ಸ್ ಅಲ್ಲಿ ಡಬಲ್ ಚಾರ್ಜ್ ಮಾಡ್ತಾರೆ ಅಂತ ಪ್ರಯಾಣಿಕರು ಅಷ್ಟೊಂದು ಚಾರ್ಜ್ ಮಾಡಿದ್ರು ನಮಗೆ ತೊಂಬು ಕೊಡ್ತಾ ಇಲ್ಲ ಅಂತ ಅಂತ ಹೇಳಿ ನಮಗೆ ದಕ್ಕಲ್ಲರೀ ಅಂತ ಹೇಳಿ ಡ್ರೈವರ್ಸ್ ಕಂಪ್ಲೇಂಟ್ ಮಾಡ್ತಾ ಇದ್ರು. ಅದಕ್ಕೆ ನಮ್ಮ ಯಾತ್ರಿ ಅನ್ನೋ ಒಂದು ಸೊಲ್ಯೂಷನ್ ಬಂದಿತ್ತು ಆದರೆ ಈಗ ಭಾರತ ಸರ್ಕಾರ ಕೂಡ ಕೇಂದ್ರ ಸರ್ಕಾರ ಭಾರತ್ ಟ್ಯಾಕ್ಸಿ ಅನ್ನೋ ಹೊಸ ಕ್ಯಾಬ್ ಸೇವೆಯನ್ನ ಲಾಂಚ್ ಮಾಡಿದೆ. ಕ್ಯಾಬ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಕೈ ಹಾಕಿದೆ. ಇದರಲ್ಲಿ ಯಾವುದೇ ಕಮಿಷನ್ ಇರಲ್ಲ. ಎಕ್ಸ್ಟ್ರಾ ಚಾರ್ಜಸ್ ಇರಲ್ಲ. ಪ್ರಯಾಣಿಕರು ಮತ್ತು ಡ್ರೈವರ್ಸ್ ಇಬ್ಬರಿಗೂ ಅನುಕೂಲ ಆಗುತ್ತೆ ಅಂತ ಹೇಳಲಾಗುತ್ತಿದೆ. ಇದರಿಂದ ಓಲಾ ಉಬರ್ ಅಧಿಪತ್ಯಕ್ಕೆ ಬ್ರೇಕ್ ಬೀಳೋ ನಿರೀಕ್ಷೆ ಇದೆ. ಹಾಗಿದ್ರೆ ಏನಿದು ಭಾರತ್ ಟ್ಯಾಕ್ಸಿ. Ola ಉಬರ್ ಗಿಂತ ಹೇಗೆ ಭಿನ್ನ. ಪ್ರಯಾಣಿಕರು ಚಾಲಕರಿಗೆ ಭಾರತ್ ಟ್ಯಾಕ್ಸಿಯಿಂದ ಆಗೋ ಲಾಭ ಏನು ಎಲ್ಲವನ್ನ ಮಾಡ್ತಾ ಹೋಗ್ತೀವಿ.
ಕ್ಯಾಬ್ ಓಡಿಸುವ ಚಾಲಕರೇ ಮಾಲಿಕರು ಕಂಪನಿಗೆ ಏನೇ ಲಾಭ ಬಂದ್ರು ಕೂಡ ಅದರಲ್ಲಿ ಡ್ರೈವರ್ಸ್ಗೆ ಸಮಾನ ಪಾಲಿರುತ್ತೆ ಅಲ್ದೆ ಪ್ರಯಾಣಿಕರಿಗೆ ಕಮ್ಮಿ ದರದಲ್ಲಿ ಸೇವೆ ಕೊಡೋ ಮಹತ್ವಾಕಾಂಕ್ಷಿ ಯೋಜನೆ ಇದು ಹೇಗೆ ಅಂತ ಮುಂದೆ ಎಕ್ಸ್ಪ್ಲೈನ್ ಮಾಡ್ತೀವಿ ಕಳೆದ ಫೆಬ್ರವರಿ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಅನೌನ್ಸ್ ಮಾಡಿತ್ತು ಭಾರತ್ ಟ್ಯಾಕ್ಸಿ ಬಗ್ಗೆ ಈಗ ಲಾಂಚ್ ಮಾಡಿದೆ ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಅಂದ್ರೆ ಅಮಿತ್ ಶಾ ಅವರ ಇಲಾಖೆ ಅವರು ಗೃಹ ಸಚಿವರು ಹೌದು ಸಹಕಾರ ಸಚಿವರು ಹೌದಲ್ವಾ ಸೋ ಅವರ ಇಲಾಖೆ ಮತ್ತು ರಾಷ್ಟ್ರೀಯ ಈ ಆಡಳಿತ ಜಂಟಿಯಾಗಿ ಇದನ್ನ ಡಿಸೈನ್ ಮಾಡಿದ್ದಾರೆ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನವೆಂಬರ್ ನಿಂದ ಭಾರತ ಟ್ಯಾಕ್ಸಿ ಶುರುವಾಗುತ್ತೆ ನಂತರ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ದೇಶಾದ್ಯಂತ ವಿಸ್ತರಣೆ ಆಗುತ್ತೆ ಅಂತ ಸರ್ಕಾರ ಹೇಳಿಕೊಂಡಿದೆ ಓಲ ಉಬರ್ ಗಿಂತ ಹೇಗೆ ಭಿನ್ನ ಡ್ರೈವರ್ಸ್ ಪ್ರಯಾಣಿಕರಿಗೆ ಹೇಗೆ ಲಾಭ ಖಾಸಗಿ ಕಂಪನಿ ಟ್ಯಾಕ್ಸ್ಗೂ ಭಾರತ ಟ್ಯಾಕ್ಸ್ಗೂ ಇರೋ ಮುಖ್ಯ ವ್ಯತ್ಯಾಸ ಅಂದ್ರೆ ಕಮಿಷನ್ ola ಉಬರ್ ಕಾರ್ಪೊರೇಟ್ ಕಂಪನಿಗಳಾಗಿರೋದ್ರಿಂದ ಕಮಿಷನ್ ತಗೊಂಡು ಅವರು ಪ್ರಾಫಿಟ್ ದಾರಿಯನ್ನ ನೋಡ್ಕೊಂಡಿದ್ದಾರೆ. ಪ್ರತಿ ಸವಾರಿಗೆ ಅಂದ್ರೆ ಪ್ರತಿ ರೈಡ್ಗೆ ಏನಿಲ್ಲ ಅಂದ್ರು 20 ರಿಂದ 25% ಕಮಿಷನ್ ಕಟ್ ಮಾಡ್ಕೊಳ್ತಾರೆ. ಆದರೆ ಭಾರತ್ ಟ್ಯಾಕ್ಸಿನಲ್ಲಿ ಚಾಲಕರೇ ಮಾಲಿಕರು ಹೀಗಾಗಿ ಜೀರೋ ಕಮಿಷನ್ ಡ್ರೈವರ್ಸ್ ಯಾವುದೇ ಕಮಿಷನ್ ಕೊಡಬೇಕಾಗಿಲ್ಲ. ಕೇವಲ ಮೆಂಬರ್ಶಿಪ್ ಶುಲ್ಕ ಮಾತ್ರ ಇರುತ್ತೆ ಅದು ಕೂಡ ತುಂಬಾ ಕಮ್ಮಿ ಇದೆ ಅನ್ನೋ ಮಾಹಿತಿ ಇದೆ. ಡೈಲಿ ವೀಕ್ಲಿ ಅಥವಾ ಮಂತ್ಲಿ ಈ ಸಣ್ಣ ಶುಲ್ಕ ಕಟ್ಟಿ ಆಪ್ ಅನ್ನ ಯೂಸ್ ಮಾಡಬಹುದು. ಹೀಗಾಗಿ ಪ್ರತಿ ರೈಡ್ ನಿಂದಲೂ ಬರೋ ಸಂಪೂರ್ಣ ಹಣ ಅಂದ್ರೆ 100% ದುಡ್ಡು ಡ್ರೈವರ್ಸ್ ಗೆ ಹೋಗುತ್ತೆ. ಜೊತೆಗೆ ಡ್ರೈವರ್ಸ್ ಗೆ ಸಹಕಾರಿ ಬೋನಸ್ ಮತ್ತು ಡಿವಿಡೆಂಡ್ ಕೂಡ ಸಿಗುತ್ತೆ. ಇನ್ನು ಈ ರೀತಿ ಕಮಿಷನ್ ಕಟ್ ಆಗದೆ ಇರೋದ್ರಿಂದ ಪ್ರಯಾಣಿಕರ ಮೇಲೂ ಕೂಡ ಯಾವುದೇ ಎಕ್ಸ್ಟ್ರಾ ಹೊರೆ ಇರೋದಿಲ್ಲ. ಯಾಕಂದ್ರೆ ಕಮಿಷನ್ ಕಟ್ ಆಗ್ತಿದ್ದ ಕಾರಣ ಕ್ಯಾಬ್ ಡ್ರೈವರ್ಸ್ ಅದನ್ನ ಕೂಡ ಮೈಂಡ್ ಅಲ್ಲಿ ಇಟ್ಕೊಂಡು ತಮ್ಮ ಪ್ರಾಫಿಟ್ ಮಾರ್ಜಿನ್ ಲೆಕ್ಕ ಹಾಕಬೇಕಾಗ್ತಿತ್ತು. ಅದಕ್ಕೆ ತಕ್ಕಂತೆ ಕ್ಯಾಬ್ ದರಗಳು ನಿರ್ಧಾರ ಆಗ್ತಾ ಇದ್ದವು. ಚಾರ್ಜಸ್ ಹೆಚ್ಚಿರ್ತಾ ಇತ್ತು.
ಭಾರತ್ ಟ್ಯಾಕ್ಸಿಯಲ್ಲಿ ಈಗ ಜೀರೋ ಕಮಿಷನ್ ಇರೋದ್ರಿಂದ ಆ ಹೆಚ್ಚುವರಿ ಖರ್ಚಿನ ತಾಪತ್ರೆಯ ಇಲ್ಲ ಅಲ್ದೆ ಸಹಕಾರಿ ಸಂಸ್ಥೆಯಾಗಿರೋದ್ರಿಂದ ಕಾರ್ಪೊರೇಟ್ ಕಂಪನಿಯಂತೆ ಟಾರ್ಗೆಟ್ ನ ರೀಚ್ ಆಗಬೇಕು ಅನ್ನೋ ಪ್ರೆಷರ್ ಕೂಡ ಇರೋದಿಲ್ಲ ಓಲ ಉಬರ್ ನಂತ ಖಾಸಗಿ ಕಂಪನಿಗಳು ಏನ್ ಮಾಡ್ತಾ ಇದ್ವು ಪೀಕ್ ಅವರ್ಸ್ ನಲ್ಲಿ ಹೆಚ್ಚುವರಿ ಸರ್ಜ್ ಫೀಸ್ ಅನ್ನ ವಿಧಿಸಿ ವಿಪರೀತ ಬೆಲೆ ಏರೋ ಹಾಗೆ ಮಾಡ್ತಾ ಇದ್ರು ಆದರೆ ಭಾರತ್ ಟ್ಯಾಕ್ಸಿನಲ್ಲಿ ಆ ಪ್ರೆಷರ್ ಇಲ್ಲ ಸ್ಟೆಡಿ ಅಂಡ್ ಟ್ರಾನ್ಸ್ಪರೆಂಟ್ ರೇಟ್ ಅಂದ್ರೆ ಯಾವಾಗಲೂ ಒಂದೇ ರೀತಿಯ ರೇಟ್ ಫಿಕ್ಸ್ಡ್ ಇರುತ್ತೆ ಹೀಗಾಗಿ ಭಾರಿ ಪ್ರಮಾಣದಲ್ಲಿ ಕ್ಯಾಬ್ ರೇಟ್ ಕಮ್ಮಿ ಆಗುತ್ತೆ ಅಂತ ಸರ್ಕಾರ ಹೇಳ್ತಿದೆ ನಿಮಗೆ ಇಲ್ಲಿ ಒಂದು ಪ್ರಶ್ನೆ ಮೂಡಬಹುದು ಕಮಿಷನ್ ಇಲ್ಲ ಅಂತೀರಾ ಎಕ್ಸ್ಟ್ರಾ ಫೀಸ್ ಹಾಕಲ್ಲ ಅಂತೀರಾ ಮತ್ತೆ ಕಂಪನಿ ಹೇಗೆ ನಡೆಯುತ್ತೆ ಅಂತ ಯಾರು ನಡೆಸ್ತಾರೆ ಅಂತ ಅದು ಅರ್ಥ ಆಗಬೇಕು ಅಂತ ಹೇಳಿದ್ರೆ ನಾವು ಕೋಆಪರೇಟಿವ್ ಸ್ಟ್ರಕ್ಚರ್ ನ ಅರ್ಥ ಮಾಡ್ಕೋಬೇಕು ಕೋ ಆಪರೇಟಿವ್ ಮಾಡೆಲ್ ಅಮುಲ್ ನಂದಿನಿ ಮಾದರಿಯಲ್ಲಿ ಭಾರತ್ ಟ್ಯಾಗಿಸಿ ಸಹಕಾರಿ ಮಾಡೆಲ್ ನಲ್ಲಿ ಕಂಪನಿ ಲಾಭ ಗಳಿಸುವುದು ಮುಖ್ಯ ಉದ್ದೇಶ ಆಗಿರೋದಿಲ್ಲ ಯಾಕಂದ್ರೆ ಲಾಭ ಗಳಿಸುವುದು ಏನಕ್ಕೆ ಕಂಪನಿಯ ಖರ್ಚು ವೆಚ್ಚೆಗಳನ್ನ ನೋಡ್ಕೊಳ್ಳೋಕ್ಕೆ ಜೊತೆಗೆ ಶೇರುದಾರರು ಅಥವಾ ಮಾಲೀಕರಿಗೆ ಹೆಚ್ಚಿನ ಆದಾಯವನ್ನು ತಂದುಕೊಡೋದಕ್ಕೆ ಆದರೆ ಸಹಕಾರಿ ಅಥವಾ ಕೋ ಆಪರೇಟಿವ್ ವ್ಯವಸ್ಥೆಯಲ್ಲಿ ಮಾಲೀಕರು ಯಾರುಸದಸ್ಯರೇ ಮಾಲೀಕರು ಈಗ ಭಾರತ್ ಟ್ಯಾಕ್ಸಿಯಲ್ಲಿ ಯಾರು ಓನರ್ಸ್ ಚಾಲಕರು ಡ್ರೈವರ್ ಗಳು ಆಲ್ರೆಡಿ ಕ್ಯಾಬ್ ರೇಟ್ ನಿಗದಿ ಮಾಡುವಾಗ ತಮ್ಮ ಪ್ರಾಫಿಟ್ ಮಾರ್ಜಿನ್ ನೋಡ್ಬಿಟ್ಟೆ ರೇಟ್ ಹೇಳಿರ್ತಾರೆ.
ಹೀಗಾಗಿ ಮತ್ತೆ ಹೆಚ್ಚಿನ ಲಾಭ ತಂದುಕೊಡೋ ಅಗತ್ಯ ಇರಲ್ಲ. ಆಪ್ ನ ಮೇಂಟೆನೆನ್ಸ್ ಗೆ ಸಣ್ಣ ಪುಟ್ಟ ಕೆಲಸಗಳಿಗೆ ಒಂದಿಷ್ಟು ಖರ್ಚು ಆಗಬಹುದು ಆದರೆ ಅದಕ್ಕೆ ಸದಸ್ಯತ್ವ ಶುಲ್ಕದಿಂದ ಬರೋ ದುಡ್ಡು ಸಾಕು. ಇವತ್ತು ಅಮುಲ್ ಆಗಲಿ ನಂದಿನಿ ಆಗಲಿ ಅಷ್ಟು ದೊಡ್ಡ ಸಂಸ್ಥೆಗಳಾಗಿರೋದು ಹೇಗೆ ಕೋಆಪರೇಟಿವ್ ಸ್ಟ್ರಕ್ಚರ್ ಸಹಕಾರಿ ವ್ಯವಸ್ಥೆಯಿಂದ. ಹೀಗಾಗಿ ದೇಶವ್ಯಾಪಿ ಟ್ಯಾಕ್ಸಿ ಸೇವೆಗೂ ಇದೇ ಮಾಡೆಲ್ ಅನ್ನ ಅನುಸರಿಸೋಣ ಅನ್ನೋದು ಸರ್ಕಾರದ ಲೆಕ್ಕಾಚಾರ. ಹೀಗಾಗಿ ಭಾರತ್ ಟ್ಯಾಕ್ಸಿಗೆ ಸಹಕಾರ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಎಕ್ಸ್ಪೀರಿಯನ್ಸ್ ಹೊಂದಿರೋ ವ್ಯಕ್ತಿಗಳನ್ನೇ ಬೋರ್ಡ್ ಮೆಂಬರ್ಸ್ ಅನ್ನಾಗಿ ನೇಮಕ ಮಾಡಲಾಗಿದೆ. ಫುಲ್ ಪ್ಲಾನಿಂಗ್ ಆಗಿದೆ. ಭಾರತ್ ಟ್ಯಾಕ್ಸಿಗೆ ಸಹಕಾರಿ ದಿಗ್ಗಜರ ಸಾತ್ ಭಾರತ್ ಟ್ಯಾಕ್ಸಿ ನೋಡಿಕೊಳ್ಳೋದಕ್ಕಾಗಿನೇ ಕೇಂದ್ರ ಸರ್ಕಾರ ಜೂನ್ ಆರನೇ ತಾರೀಕು ಒಂದು ಹೊಸ ಸಂಸ್ಥೆಯನ್ನ ಸ್ಥಾಪಿಸಿದೆ. ಮಲ್ಟಿ ಸ್ಟೇಟ್ ಸಹಕಾರಿ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅನ್ನೋ ಈ ಸಂಸ್ಥೆಯ ಖರ್ಚು ವೆಚ್ಚ ನೋಡಿಕೊಳ್ಳುದಕ್ಕೆ ಆರಂಭಿಕವಾಗಿ 300 ಕೋಟಿ ರೂಪಾಯ ದುಡ್ಡನ್ನ ಕೂಡ ಕೊಟ್ಟಿದೆ. ಸಂಪೂರ್ಣವಾಗಿ ಸದಸ್ಯತ್ವ ಆಧಾರಿತ ಮಾದರಿಯಲ್ಲಿ ಇದು ಕೆಲಸ ಮಾಡುತ್ತೆ. ಈ ಸಂಸ್ಥೆಯ ಮೇಲ್ವಿಚಾರಣೆಗಾಗಿ ಕೇಂದ್ರ ಸರ್ಕಾರ ಒಂದು ಆಡಳಿತ ಮಂಡಳಿಯನ್ನ ರಚಿಸಿದೆ. ಅದರಲ್ಲಿ ಅಮುಲ್ ಬ್ರಾಂಡ್ನ ವ್ಯವಸ್ಥಾಪಕ ನಿರ್ದೇಶಕ ಜಹೇನ್ ಮೆಹತಾ ಅವರನ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಲ್ದೇ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಉಪ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಗುಪ್ತರನ್ನ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಅಷ್ಟೇ ಅಲ್ಲ ಈ ಮಂಡಳಿಯಲ್ಲಿ ದೇಶದ ವಿವಿಧ ಸಹಕಾರಿ ಸಂಘಗಳಿಗೆ ಸೇರಿದ ಇನ್ನು ಎಂಟು ಮೆಂಬರ್ಸ್ ಇರ್ತಾರೆ. ಅಕ್ಟೋಬರ್ 16 ಕ್ಕೆ ಆಲ್ರೆಡಿ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ನ ಮೊದಲ ಸಭೆ ಕೂಡ ನಡೆದಿದೆ.
ಮಹಿಳೆಯರಿಗೆ ಎಕ್ಸ್ಟ್ರಾ ಮನ್ನಣೆ ಹಳ್ಳಿಗಳಿಗೂ ಭಾರತ್ ಟ್ಯಾಕ್ಸಿ. ಇನ್ನು ಸರ್ಕಾರ ಇದರಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡು ಕೆಲಸ ಕೂಡ ಮಾಡಿದೆ. ಭಾರತ್ ಟ್ಯಾಕ್ಸಿ ಮಹಿಳಾ ಸಾರಥಿ ಹೆಸರಲ್ಲಿ ಮಹಿಳಾ ಡ್ರೈವರ್ ಗಳಿಗೆ ವಿಶೇಷ ಮನ್ನಣೆ ಕೊಡುತ್ತೆ. ಮೊದಲ ಹಂತದಲ್ಲಿ ಇದಕ್ಕೆ 100 ಮಹಿಳಾ ಚಾಲಕೀಯರು ಸೇರ್ಪಡೆಯಾಗ್ತಾರೆ. 2030 ರ ವೇಳೆಗೆ ಈ ಸಂಖ್ಯೆಯನ್ನ 1500 ಕ್ಕೆ ಹೆಚ್ಚಿಸುವ ಗುರಿಯನ್ನ ಹೊಂದಿದೆ. ಇದಕ್ಕಾಗಿ ನವೆಂಬರ್ 15 ರಿಂದಲೇ ಉಚಿತ ತರಬೇತಿ ಮತ್ತು ವಿಶೇಷ ವಿಮಾ ಸೌಲಭ್ಯವನ್ನ ನೀಡಲಾಗುತ್ತಿದೆ. ಇನ್ನು ಸುರಕ್ಷತೆ ವಿಚಾರಕ್ಕೆ ಬಂದರೆ ಓಲಾ ಉಬರ್ ನಲ್ಲಿ ಆಪ್ ಆಧಾರಿತ ಫೀಚರ್ ಗಳಿವೆ. ಆದರೆ ಭಾರತ್ ಟ್ಯಾಕ್ಸಿಯಲ್ಲಿ ಪೊಲೀಸ್ ಸ್ಟೇಷನ್ ಜೊತೆ ನೇರ ಸಂಪರ್ಕ ಇರುತ್ತೆ. ತುರ್ತು ಸಂದರ್ಭದ ಬಳಕೆಗಾಗಿ ಎಸ್ ಓಎಸ್ ಅಥವಾ ಅಪಾಯದ ಬಟನ್ ಕೂಡ ಇಟ್ಟಿದ್ದಾರೆ. ಇದನ್ನ ಪ್ರೆಸ್ ಮಾಡಿದ್ರೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ರಿಪೋರ್ಟ್ ಆಗಿಬಿಡುತ್ತೆ ಇಮ್ಮಿಡಿಯೇಟ್ಲಿ. ಇನ್ನು ಓಲಾ ಉಬರ್ ಸಿಟಿ ಬಿಲ್ಸ್ ಸೇವೆಗಳನ್ನು ಕೊಡ್ತಾ ಇದ್ದಾವೆ. ಆದರೆ ಭಾರತ್ ಟ್ಯಾಕ್ಸಿಯಲ್ಲಿ ಗ್ರಾಮೀಣ ಪ್ರದೇಶಕ್ಕೂ ಸೇವೆ ವಿಸ್ತರಿಸುವ ಲೆಕ್ಕಾಚಾರ ಇದೆ ಅಂತ ಸರ್ಕಾರ ಹೇಳ್ಕೊಂಡಿದೆ. ಆದರೆ ಹೇಗೆ ಅನ್ನೋದು ಇನ್ನಷ್ಟೇ ಕ್ಲಿಯರ್ ಆಗಬೇಕು. ಹಳ್ಳಿ ಹಳ್ಳಿಗಳಲ್ಲಿ ತಾಲೂಕು ಲೆವೆಲ್ ಅಲ್ಲೂ ಕೂಡ ಆನ್ ಬೋರ್ಡಿಂಗ್ ಮಾಡ್ಕೊಳ್ತಾರಾ ಟ್ಯಾಕ್ಸಿ ಡ್ರೈವರ್ಸ್ ನ ಆಟೋಗಳನ್ನ ಅದೀಗ ಇರುವಂತಹ ಕುತೂಹಲ. ಭಾರತ್ ಟ್ಯಾಕ್ಸಿ ಜಾಯಿನ್ ಆಗೋದು ಹೇಗೆ? ನವೆಂಬರ್ ತಿಂಗಳಲ್ಲಿ ಆಪ್ ಸ್ಟೋರ್ ನಲ್ಲಿ ಭಾರತ್ ಟ್ಯಾಕ್ಸಿ ಆಪ್ ಕಾಣಿಸಿಕೊಳ್ಳೋಕೆ ಶುರುವಾಗುತ್ತೆ. ಡೌನ್ಲೋಡ್ ಮಾಡ್ಕೋಬಹುದು. ಸದ್ಯಕ್ಕೆ ಈ ಆಪ್ ಹಿಂದಿ, ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಷ್ಟೇ ಲಭ್ಯ ಇರುತ್ತೆ. ಮುಂದೆ ಕನ್ನಡ ಸೇರಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಕೂಡ ಇದು ಬರ್ತಾ ಇದೆ. ಈಗ ಆಲ್ರೆಡಿ ಹೇಳಿದಂತೆ ಮೊದಲ ಹಂತದಲ್ಲಿ ಪೈಲಟ್ ಯೋಜನೆಯಾಗಿ ದಿಲ್ಲಿಯಲ್ಲಿ 650 ಚಾಲಕರೊಂದಿಗೆ ಭಾರತ್ ಟ್ಯಾಕ್ಸಿ ಶುರು ಆಗ್ತಾ ಇದೆ.
ಬಳಿಕ ಡಿಸೆಂಬರ್ ನಿಂದ ದೇಶದ ಇತರ ರಾಜ್ಯಗಳಲ್ಲೂ ಕೂಡ 5000 ಚಾಲಕರೊಂದಿಗೆ ಮೊದಲ ಹಂತದ ಪೂರ್ಣ ಪ್ರಮಾಣದ ಚಾಲನೆ ಸಿಗುತ್ತೆ. 2026ರ ಮಾರ್ಚ್ ವೇಳೆಗೆ ರಾಜಕೋಟ್ ಮುಂಬೈ ಮತ್ತು ಪುಣೆಯಲ್ಲಿ ಸೇವೆ ಆರಂಭ ಆದರೆ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಲಕ್ನೋ ಭೂಪಾಲ್ ಮತ್ತು ಜೈಪುರದಲ್ಲೂ ಕೂಡ ಭಾರತ್ ಟ್ಯಾಕ್ಸಿ ವಿಸ್ತರಣೆಯಾಗುತ್ತೆ ಆಗ ಚಾಲಕರ ಸಂಖ್ಯೆ 15000 ಮತ್ತು ವಾಹನಗಳ ಸಂಖ್ಯೆ 10 ಸಾವಿರಕ್ಕೂ ಅಧಿಕ ದಾಟುವ ನಿರೀಕ್ಷೆ ಇದೆ. 2027 28ರ ಹೊತ್ತಿಗೆ ದೇಶದ 20 ಪ್ರಮುಖ ನಗರಗಳಲ್ಲಿ 50ಸಾ ಚಾಲಕರೊಂದಿಗೆ ಪ್ಯಾನ್ ಇಂಡಿಯಾ ಸೇವೆಯನ್ನ ಭಾರತ್ ಟ್ಯಾಕ್ಸಿ ಕೊಡುತ್ತೆ. ಇನ್ನು ವಿಶೇಷ ಅಂದ್ರೆ ಫಾಸ್ಟ್ ಟ್ಯಾಗ್ ಜೊತೆಗೂ ಲಿಂಕ್ ಮಾಡಲಾಗುತ್ತೆ. 2028 ರಿಂದ 2030ರ ಒಳಗೆ ಅಂದ್ರೆ ಮುಂದಿನ ಮೂರು ವರ್ಷದ ಒಳಗೆ ಒಂದು ಲಕ್ಷ ಚಾಲಕರೊಂದಿಗೆ ಜಿಲ್ಲಾ ಕೇಂದ್ರ ಮತ್ತು ಹಳ್ಳಿ ಹಳ್ಳಿಗೂ ಕೂಡ ಸೇವೆ ತಲುಪಿಸುವ ಬೃಹತ್ ನೆಟ್ವರ್ಕ್ ಅನ್ನ ಸ್ಥಾಪಿಸುವ ಗುರಿಯನ್ನ ಕೇಂದ್ರ ಸರ್ಕಾರ ಭಾರತ್ ಟ್ಯಾಕ್ಸಿ ಮೂಲಕ ಇಟ್ಕೊಂಡಿದೆ. ಒಟ್ಟಿನಲ್ಲಿ ಭಾರತ್ ಟ್ಯಾಕ್ಸಿ ಮೂಲಕ ದೇಶದ ಖಾಸಗಿ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರೋಕೆ ಸರ್ಕಾರ ಪ್ಲಾನ್ ಮಾಡ್ತಾ ಇದೆ.


