Thursday, November 20, 2025
HomeProduct Reviewsಕ್ಯಾಂಪಾ ಕೋಲಾ ಪೆಪ್ಸಿ-ಕೋಕ್‌ಗೆ ಸವಾಲು!

ಕ್ಯಾಂಪಾ ಕೋಲಾ ಪೆಪ್ಸಿ-ಕೋಕ್‌ಗೆ ಸವಾಲು!

ಒಂದು ಕಾಲದಲ್ಲಿ ಪೆಪ್ಸಿ ಹಾಗೂ ಕೋಕೋಕೋಲಾ ನಡುವಿನ ಜಿದ್ದಾಜಿದ್ದಿಯನ್ನೇ ಮೊದಲ ಕೋಲಾ ಯುದ್ಧ ಅಂತ ಕರೆಯಲಾಗ್ತಾ ಇತ್ತು ಆ ಯುದ್ಧದಲ್ಲಿ ಶಸ್ತ್ರಾಸ್ತ್ರಗಳೆಂದರೆ ಗುಂಡುಗಳೆಲ್ಲ ಬದಲಿಗೆ ಕೋಟ್ಯಂತರ ರೂಪಾಯಿಗಳ ಜಾಹಿರಾತುಗಳು ಜನಪ್ರಿಯ ಸಿನಿತಾರೆಯರ ಬೆಂಬಲ ಹಾಗೂ ಪ್ರಬಲ ಮಾರ್ಕೆಟಿಂಗ್ ತಂತ್ರಗಳು ಮಾತ್ರವೇ ಆಗಿದ್ದವು ಕೋಕ್ ಫ್ಯಾಂಟಾ ಸ್ಪ್ರೈಟ್ ಹಾಗು ಕಿನ್ಲೆ ಅಂತಹ ಬ್ರಾಂಡ್ಗಳನ್ನ ಮಾರುಕಟ್ಟೆಗೆ ತಂದರೆ ಪೆಪ್ಸಿ ಅದಕ್ಕೆ ಪ್ರತಿಯಾಗಿ ಮೆರಿಂಡ ಸೆವೆನ್ ಅಪ್ ಹಾಗೂ ಅಕ್ವಾಫೀನಾದ ಮೂಲಕ ತಿರುಗೇಟು ನೀಡಿತ್ತು ಅಷ್ಟೇ ಅಲ್ಲದೆ ಕೋಕೋಲಾ ಅಮೀರ್ ಖಾನ್ ಹಾಗೂ ಶಾರುಕ್ ಖಾನ್ ಅವರನ್ನ ಬಳಸಿದರೆ ಪೆಪ್ಸಿ ಸಲ್ಮಾನ್ ಖಾನ್ ಅವರನ್ನ ಕಣಕ್ಕಿಳಿಸುವ ಮೂಲಕ ತಾರಾಬಲದ ಹೋರಾಟವನ್ನ ನಡೆಸಿತ್ತು ಈ ತೀವ್ರ ಸ್ಪರ್ಧೆಗಳೇ ಮೊದಲ ಕೋಲಾ ಯುದ್ಧದ ಮುಖ್ಯಾಂಶಗಳಾಗಿದ್ದವು ಆದರೆ ಈಗ ಆರಂಭವಾಗ್ತಾ ಇರುವ ಕೋಲಾ ಯುದ್ಧ 2.0 ಇದು ಇನ್ನಷ್ಟು ತೀವ್ರ ಸಂಕೀರ್ಣ ಹಾಗೂ ರೋಚಕವಾಗುವ ಎಲ್ಲಾ ಲಕ್ಷಣಗಳಿವೆ ಯಾಕಂದ್ರೆ ಈ ಬಾರಿ ಕಣಕ್ಕಿಳಿಯುತ್ತಿರುವವರು ಕೇವಲ ಎರಡು ವಿದೇಶಿ ಕಂಪನಿಗಳಲ್ಲ ಬದಲಿಗೆ ಹೊಸ ಪೈಪೋಟಿದಾರರು ಹೊಸ ಬ್ರಾಂಡ್ಗಳು ಹಾಗೂ ಹೊಸ ಆರ್ಥಿಕ ತಂತ್ರಗಳು ಮೈದಾನಕ್ಕಿಳಿಯುತ್ತಿವೆ.

ಒಬ್ಬ ವ್ಯಕ್ತಿಯ ಪ್ರವೇಶದಿಂದ ಇಡೀ ಉದ್ಯಮದ ಸಮೀಕರಣಗಳೇ ಬದಲಾಗುವುದುಂಟು ಅವರ ಆಗಮನ ಎಂದರೆ ಕೇವಲ ಸ್ಪರ್ಧೆಯಲ್ಲ ಹಳೆಯ ನಿಯಮಗಳ ಪತನ ಹಾಗೂ ಹೊಸ ಯುಗದ ಆರಂಭ ಅಂತಹ ಪ್ರಭಾ ಭಾವಿ ವ್ಯಕ್ತಿ ಬಲವಾದ ನಿರ್ಧಾರ ಹಾಗೂ ದೂರದೃಷ್ಟಿ ಹೊಂದಿರುವವರೇ ಮೋಟಾಭಾಯ್ ಅಂದ್ರೆ ಮುಕೇಶ್ ಅಂಬಾನಿ ಇವರು ಯಾವ ಉದ್ಯಮಕ್ಕೆ ಕಾಲಿಟ್ಟರು ಅಲ್ಲಿನ ನಿಯಮಗಳನ್ನ ಬದಲಾಯಿಸಿ ಮಾರುಕಟ್ಟೆಯ ಡೈನಾಮಿಕ್ಸ್ ಸಂಪೂರ್ಣವಾಗಿ ಹೊಸ ಸ್ವರೂಪ ಪಡೆಯುವಂತೆ ಮಾಡ್ತಾರೆ ಇಡೀ ವಲಯದ ಕಂಪನಿಗಳಲ್ಲಿ ನಂಬರ್ ಒನ್ ಸ್ಥಾನವು ಅವರದ್ದೇ ಆಗಿರುತ್ತೆ ಈಗ ಹೊಸ ಪೈಪೋಟಿದಾರರು ಹೊಸ ಬ್ರಾಂಡ್ಗಳು ಹಾಗೂ ಹೊಸ ತಂತ್ರಗಳು ಮೈದಾನಕ್ಕಇಳಿದು ದೊಡ್ಡ ಸಂಚಲನ ಸೃಷ್ಟಿಸಲು ಸಜ್ಜಾಗಿರುವ ಈ ಕೋಲಾ ಮಾರುಕಟ್ಟೆಯಲ್ಲಿ ಇಡೀ ಉದ್ಯಮವನ್ನೇ ಬದಲಿಸ ಬಲ್ಲ ಸಾಮರ್ಥ್ಯ ಹೊಂದಿರುವ ಮೋಟಾಬಾಯಿ ಯವರ ಪ್ರವೇಶವು ಈ ಬಾರಿಯೂ ಅದೇ ಇತಿಹಾಸ ಮರುಕಳಿಸುತ್ತದೆಯೇ ಅನ್ನುವ ಅತ್ಯಂತ ಸಹಜವಾದ ಪ್ರಶ್ನೆಯನ್ನ ಮೂಡಿಸುತ್ತಾ ಇದೆ ಹಾಗಾದರೆ ಈ ಕ್ಷೇತ್ರದಲ್ಲಿ ಯಾವ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಯಾವೆಲ್ಲ ಸವಾಲುಗಳು ಎದುರಾಗಬಹುದು ಅಂತಿಮವಾಗಿ ಈ ಮಹತ್ತರ ಬದಲಾವಣೆಯು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಲಾಭವನ್ನ ತರುತ್ತದೆಯೇ ಅಥವಾ ನಷ್ಟವನ್ನ ಉಂಟುಮಾಡುತ್ತದೆಯೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನ ತಿಳಿದುಕೊಳ್ಳೋಣ ಮಾರುಕಟ್ಟೆಯ ಇಡೀ ಸಮೀಕರಣವನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮುಕೇಶ್ ಅಂಬಾನಿ ಐತಿಹಾಸಿಕ ಬ್ರಾಂಡ್ ಕ್ಯಾಂಪಕೋಲಾ ಮೂಲಕ ಜಾಗತಿಕ ದಿಗ್ಗಜರಾದ ಕೋಕೋಕೋಲಾ ಹಾಗೂ ಪೆಪ್ಸಿಗೆ ಹೊಸ ರೀತಿಯಲ್ಲಿ ಪಾಠ ಕಲಿಸಲು ಹೊರಟಿದ್ದಾರೆ ಈ ಯುದ್ಧದಲ್ಲಿ ಅವರು ಅನುಸರಿಸುತ್ತಿರುವ ಪ್ರಬಲ ಅಸ್ತ್ರಗಳಾದ ಬೆಲೆನಿಗದಿ ತಂತ್ರಗಳು ಮಾರ್ಕೆಟಿಂಗ್ ಚತುರತೆ ಹಾಗೂ ವಿತರಣ ಜಾಲವನ್ನ ಬಲಪಡಿಸುತ್ತಿರುವ ವಿಧಾನಗಳು ಎಲ್ಲವೂ ಕೋಲಾ ಯುದ್ಧ 2.ಓರ ಓರ ಭವಿಷ್ಯವನ್ನ ನಿರ್ಧರಿಸಲಿವೆ ಆದರೆ ಈ ಹೊಸ ಸಮರವನ್ನ ಅರ್ಥ ಮಾಡಿಕೊಳ್ಳುವ ಮೊದಲು ಈ ಐತಿಹಾಸಿಕ ಕ್ಯಾಂಪ ಬ್ರಾಂಡ್ನ ಮೂಲ ಹಾಗೂ ಪುನರುಜ್ಜೀವನದ ಕಥೆಯನ್ನ ತಿಳಿದುಕೊಳ್ಳುವುದು.

ಈ ಕ್ಯಾಂಪಕೋಲ ಅಂದ್ರೆ ಏನು ಇದು ಕೇವಲ ಒಂದು ಬ್ರಾಂಡ್ ಮಾತ್ರವಲ್ಲ ಭಾರತದ ಸಾಫ್ಟ್ ಡ್ರಿಂಕ್ಸ್ ಇತಿಹಾಸದ ಒಂದು ರೋಚಕ ಅಧ್ಯಾಯ ಈ ಬ್ರಾಂಡ್ ಅನ್ನ ಹುಟ್ಟುಹಾಕಿದ ಸಂಸ್ಥೆ ಪ್ಯೂರ್ ಡ್ರಿಂಕ್ಸ್ ಗ್ರೂಪ್ ಸ್ಥಾಪನೆಯಾದದ್ದು 1949 ರಲ್ಲಿ ನಮ್ಮ ಭಾರತದ ಸಂವಿಧಾನ ಜಾರಿಗೆ ಬರುವ ಒಂದು ವರ್ಷದ ಮುಂಚೆಯೇ ಇದರ ಮೂಲ ಕಂಪನಿ ಅಸ್ತಿತ್ವಕ್ಕೆ ಬಂದಿತ್ತು. ಅದೇ 1949 ರಲ್ಲಿ ಕೋಕೋಕೋಲಾ ಕೂಡ ಭಾರತದ ಮಾರುಕಟ್ಟೆಗೆ ಪ್ರವೇಶಿಸಿತ್ತು. ಆ ದಿನಗಳಲ್ಲಿ ಬೇರೆ ಯಾವುದೇ ಪ್ರಬಲ ಸ್ಪರ್ಧಿಗಳು ಇರದ ಕಾರಣ ಕೋಕೋಕೋಲಾ ಬಹುತೇಕವಾಗಿ ಏಕೈಕ ಮಾರುಕಟ್ಟೆಯ ನಾಯಕನಾಗಿತ್ತು. ಆಶ್ಚರ್ಯವೆಂದರೆ ಪ್ಯೂರ್ ಡ್ರಿಂಕ್ಸ್ ಗ್ರೂಪ್ ಆಗ ಕೋಕೋಕೋಲಾದ ಪ್ರಮುಖ ಬಾಟ್ಲಿಂಗ್ ಪಾಲುದಾರ ಸಂಸ್ಥೆಯಾಗಿ ಕೆಲಸ ಮಾಡ್ತಾ ಇತ್ತು. ಹೀಗಾಗಿ 70ರ ದಶಕದ ಕೊನೆಯವರೆಗೂ ಅವರು ಮಾರುಕಟ್ಟೆಯಲ್ಲಿ ಅತ್ಯಂತ ಬಲಿಷ್ಠ ಸ್ಥಾನ ಪಡೆದಿದ್ದರು ಅಷ್ಟೇ ಅಲ್ಲ ಅವರೇ ಆಗ ದೇಶದ ನಿಜವಾದ ಮಾರುಕಟ್ಟೆಯ ನಾಯಕರಾಗಿದ್ದರು ಆದರೆ 19778 ರಲ್ಲಿ ಕೋಕೋಕೋಲಾ ಕಂಪನಿಯು ಭಾರತದಿಂದ ಹೊರನಡೆದಾಗ ಪ್ಯೂರ್ ಡ್ರಿಂಕ್ಸ್ ಗ್ರೂಪ್ಗೆ ಒಂದು ದೊಡ್ಡ ಸುವರ್ಣಾವಕಾಶವೇ ಲಭಿಸಿತು ಅವರು ತಕ್ಷಣ ನಮ್ಮ ಬಳಿ ಈಗಾಗಲೇ ಅತ್ಯಾಧುನಿಕ ಪ್ಲಾಂಟ್ ಗಳಿವೆ ಉತ್ಪಾದನಾ ಸೌಲಭ್ಯಗಳೆಲ್ಲ ಸಿದ್ಧವಾಗಿದೆ ಹಾಗಾದರೆ ಯಾಕೆ ನಾವೇ ಒಂದು ಹೊಸ ದೇಶೀಯ ಬ್ರಾಂಡ್ ಅನ್ನ ಸೃಷ್ಟಿಸಬಾರದು ಅಂತ ಯೋಚಿಸಿದ್ರು ಇದರ ಫಲವಾಗಿಯೇ ಭಾರತದಲ್ಲಿ ಕ್ಯಾಂಪೋಲ ಉದಯಿಸಿತು. ಮುಂದಿನ ಸುಮಾರು 15ರಿಂದ 20 ವರ್ಷಗಳವರೆಗೆ ಕ್ಯಾಂಪಾಕೋಲ ಭಾರತದ ಸಾಫ್ಟ್ ಡ್ರಿಂಕ್ಸ್ ಮಾರುಕಟ್ಟೆಯನ್ನ ದರ್ಪದಿಂದ ಆಳಿತು. ಕೋಲ ಅನ್ನೋದು ವಿದೇಶಿ ಕಂಪನಿಗಳಿಗೆ ಮಾತ್ರ ಸೀಮಿತವಲ್ಲ ಅಂತ ಜಗತ್ತಿಗೆ ತೋರಿಸಿದ ಮೊದಲ ರಾಷ್ಟ್ರೀಯ ಬ್ರಾಂಡ್ ಇದಾಗಿತ್ತು. ಹೀಗಾಗಿ ದೂರದೃಷ್ಟಿ ಹೊಂದಿರುವ ಮೋಟಾಬಾಯ್ ಅಂದರೆ ಮುಕೇಶ್ ಅಂಬಾನಿ ಅತ್ಯಂತ ಮಹತ್ವದ ನಿರ್ಧಾರವಂದನ್ನ ಕೈಗೊಂಡರು ಯಾವುದೇ ಹೊಸ ಬ್ರಾಂಡ್ ಅನ್ನ ಶೂನ್ಯದಿಂದ ಪ್ರಾರಂಭಿಸುವ ಬದಲು ಒಮ್ಮೆ ಭಾರತದಲ್ಲಿ ಜನಮಾನಸವನ್ನ ಗೆದ್ದಿದ್ದ ಆದರೆ ಕಾಲಾನಂತರದಲ್ಲಿ ಕಳೆದು ಹೋಗಿದ್ದ ಈ ಹಳೆಯ ಹಾಗೂ ಜನಪ್ರಿಯ ಬ್ರಾಂಡ್ ಅನ್ನ ಪುನರುಜ್ಜೀವನಗೊಳಿಸೋಣವೆಂದು ಅದೇ ಯೋಚನೆಯ ಆಧಾರದ ಮೇಲೆ ಆಗಸ್ಟ್ 2022 ರಲ್ಲಿ ಕೇವಲ 22 ಕೋಟಿ ರೂಪಾಯಿಗಳ ಅತ್ಯಲ್ಪ ಮೊತ್ತಕ್ಕೆರಿಲಯನ್ಸ್ ಗ್ರೂಪ್ ಕ್ಯಾಂಪಕೋಲ ಬ್ರಾಂಡ್ ನ್ನ ಅದರ ಹಕ್ಕುಗಳ ಸಮೇತ ಸಂಪೂರ್ಣವಾಗಿ ಖರೀದಿ ಮಾಡ್ತು ಹಾಗಾದರೆ ರಿಲಯನ್ಸ್ ಕ್ಯಾಂಪಾಕೋಲದಲ್ಲಿ ಯಾವ ಮಹತ್ವದ ಬದಲಾವಣೆಗಳನ್ನ ತಂದಿದೆ.

ಆಧಾರದ ಮೇಲೆ ಈ ಕೋಲಾ ಇಂಡಸ್ಟ್ರಿಯ ನಾಯಕನಾಗಲು ಯತ್ನಿಸುತ್ತಾ ಇದೆ ಅನ್ನುವ ಪ್ರಶ್ನೆಗಳಿಗೆ ಉತ್ತರ ಸರಳ ನಾಯಕತ್ವದಲ್ಲಿನ ಕ್ರಾಂತಿ ಹೌದು ರಿಲಯನ್ಸ್ ಯಾವುದೇ ಹೊಸ ವಲಯಕ್ಕೆ ಕಾಲಿಟ್ಟರು ಅದರ ಯಶಸ್ಸಿನ ಹಿಂದಿನ ಮೊದಲ ಹಾಗೂ ಪ್ರಮುಖ ರಹಸ್ಯ ಅತ್ಯುನ್ನತ ತಜ್ಞರ ನೇಮಕ ರಿಲಯನ್ಸ್ ಯಾವ ಹೊಸ ಕ್ಷೇತ್ರದಲ್ಲಿ ಕಾಲಿಟ್ಟರು ಅದರ ಸಂಪೂರ್ಣ ಕಾರ್ಯ ನಿರ್ವಹಣೆಯನ್ನ ಅದೇ ಕ್ಷೇತ್ರದ ಅತ್ಯಂತ ನುರಿತ ಹಾಗೂ ಯಶಸ್ವಿ ತಜ್ಞರ ಕೈಗೆ ನೀಡುತ್ತದೆ ಉದಾಹರಣೆಗೆ ಹಾಟ್ ಸ್ಟಾರ್ ಅನ್ನ ದೇಶದ ನಂಬರ್ ಒನ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಮಾಡಿದ ಮುಖ್ಯಸ್ಥರನ್ನ ಕರೆತಂದು ಈಗ ನಮ್ಮ ಕ್ಯಾಂಪಕೋಲ ಬ್ರಾಂಡ್ ಅನ್ನ ನಂಬರ್ ಒನ್ ಮಾಡಿ ಅಂತ ಅಂಬಾನಿ ಸೂಚಿಸಿದ್ದಾರೆ ಅದೇ ರೀತಿ ಜಿಯೋ ಫೈನಾನ್ಸಿಯಲ್ ಸರ್ವಿಸ್ ಪ್ರಾರಂಭಿಸುವಾಗ ಹಿಂದೆ ಅನೇಕ ದೊಡ್ಡ ಬ್ಯಾಂಕುಗಳನ್ನ ಯಶಸ್ವಿಯಾಗಿ ನಿರ್ಮಿಸಿದ್ದ ಕೆವಿ ಕಾಮತ್ ಅವರನ್ನ ಅಧ್ಯಕ್ಷರಾಗಿ ನೇತೃತ್ವಕ್ಕೆ ತಂದರು ಇದೇ ಯಶಸ್ವಿ ಮಾದರಿಯನ್ನ ಕ್ಯಾಂಪ್ ಕೋಲದಲ್ಲಿಯೂ ಅಳವಡಿಸಲಾಗಿದೆ ಮಾರ್ಕೆಟಿಂಗ್ ಬೆಲೆನಿಗದಿ ವಿತರಣೆ ಈ ಪ್ರಮುಖ ಕಾರ್ಯತಂತ್ರಗಳ ನಿರ್ವಹಣೆಯು ಆಯಾ ಕ್ಷೇತ್ರದ ಅತ್ಯುತ್ತಮ ತಜ್ಞರ ಕೈಯಲ್ಲಿದೆ ಸ್ನೇಹಿತರೆ ನಿಮಗೆ ನೆನಪಿರಬಹುದು 2002ರಲ್ಲಿ ಕೋಕೋಕೋಲ ಬಿಡುಗಡೆ ಮಾಡಿದ ಒಂದು ಅತಿ ಹೆಚ್ಚು ಯಶಸ್ವಿ ಜಾಹಿರಾತು ಅದರಲ್ಲಿ ಅಮೆರಿಕಾನ ವಿವಿಧ ಮನರಂಜಕ ಪಾತ್ರಗಳಲ್ಲಿ ಕಾಣಿಸಿಕೊಂಡು ಹೈದರಾಬಾದಿ ಶೈಲಿಯಲ್ಲಿ ತಂಡ ಪೀಕು ನಿಕಲ್ಗಯಿ ಮೆರೆಕೋ ಪೈಸಾ ಚೋಡಗಯಿ ಅಂತ ಹೇಳಿದ್ದರು ಆ ಜಾಹಿರಾತು ಆ ಸಮಯದಲ್ಲಿ ಭಾರತದ ಯುವಜನತೆ ನ್ನ ಅಕ್ಷರಶಹ ಹುಚ್ಚೆಬ್ಬಿಸಿತ್ತು ಆ ಐತಿಹಾಸಿಕ ಜಾಹಿರಾತನ್ನ ನಿರ್ಮಿಸಿದವರು ಜಾಹಿರಾತು ಜಗತ್ತಿನ ದಿಗ್ಗಜ ಪ್ರಸೋನ್ ಜೋಷಿ ಅಂದು ಕೋಕೋಕೋಲ ತನ್ನ ಜಾಹಿರಾತಿನ ಮೂಲಕ ನಮಗೆ ಒಂದು ಜಾಹಿರಾತು ಬೇಕು ಅದು ಕುಡಿಯುವವರಿಗೆ ಕೋಕೋಕೋಲ ಒಂದು ಅದ್ಭುತ ಅನುಭವ ನೀಡುತ್ತದೆ ಅಂತ ಭಾಸವಾಗಬೇಕು ಅನ್ನುವ ಸರಳ ಸಂದೇಶವನ್ನ ಸಾರಿತ್ತು.

ಈ ಅಭಿಯಾನದಿಂದಾಗಿಯೇ ಭಾರತದಾದ್ಯಂತ ಕೋಕೋಕೋಲಾಗೆ ಸ್ವೀಕೃತಿ ದೊರೆಯಿತು ಜನರು ಅದನ್ನ ಕೇವಲ ಪಾನೀಯವಾಗಿ ನೋಡದೆ ಸಂತೋಷ ಹಾಗೂ ಸಮುದಾಯದ ಸಂಕೇತವಾಗಿ ಸ್ವೀಕ ಕರಿಸಿದ್ರು ಇಂದಿನ ಪರಿಸ್ಥಿತಿಗೆ ಅನುಸಾರವಾಗಿ ಅಂಬಾನಿ ಅವರು ಇದೇ ಯಶಸ್ವಿ ಸೂತ್ರದ ಮನೋಭಾವವನ್ನ ಬಳಸುತ್ತಿದ್ದಾರೆ ಆದರೆ ಅದನ್ನ ಕೇವಲ ಅನುಸರಿಸದೆ ಇಂದಿನ ಕಾಲಕ್ಕೆ ತಕ್ಕಂತೆ ಹೊಸ ರೂಪದಲ್ಲಿ ಪರಿವರ್ತಿಸಿ ಹೊಸ ಪೀಳಿಗೆಯನ್ನ ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ತುಮಕಿದ್ದಾರೆ ಇಲ್ಲಿ ನಾವು ಗಮನಿಸಬೇಕಾದ ಮಹತ್ವದ ಅಂಶವೆಂದರೆ ಯಶಸ್ಸಿನ ಮಂತ್ರ ಅನುಸರಣೆಯಲ್ಲ ಹೊಸ ಮಾರ್ಗ ನಿರ್ಮಾಣ ಹೌದು ಯಶಸ್ವಿ ನಾಯಕರು ಕೇವಲ ಪ್ರತಿಸ್ಪರ್ಧಿಯನ್ನ ಅನುಸರಿಸುವುದಿಲ್ಲ ಬದಲಿಗೆ ತಮ್ಮದೇ ಆದ ಹೊಸತಂತ್ರಗಳ ನ್ನ ರೂಪಿಸುತ್ತಾರೆ ಯಾಕಂದ್ರೆ ಮಾರುಕಟ್ಟೆಯಲ್ಲಿ ಮಾರ್ಕೆಟಿಂಗ್ ಯಾವಾಗಲೂ ಹೋಲಿಕೆಯಲ್ಲಿಯೇ ತನ್ನ ಉತ್ಕೃಷ್ಟತೆಯನ್ನ ಸಾಬಿತು ಪಡಿಸುತ್ತದೆ ಅಂದು ಕೋಕೋಕೋಲ ತನ್ನ ಜಾಹಿರಾತಿನ ಕೇಂದ್ರಬಿಂದುವಾಗಿ ಕೇವಲ ತಂಪು ಅನ್ನುವ ಸರಳ ವಿಚಾರವನ್ನ ಬಲವಾಗಿ ಪ್ರಚಾರ ಮಾಡಿತು ಆ ಸರಳ ಪರಿಕಲ್ಪನೆಯು ಸೃಷ್ಟಿಸಿದ ಪ್ರಭಾವ ಎಷ್ಟಿತ್ತೆಂದರೆ ಆ ತಂಪು ಪರಿಕಲ್ಪನೆಯು ಇಂದಿಗೂ ಕೋಲ ಮಾರ್ಕೆಟಿಂಗ್ನ ಪ್ರಮುಖ ಭಾಗವಾಗಿ ದೃಢವಾಗಿ ಉಳಿದಿದೆ ಕ್ಯಾಂಪಕೋಲದ ಹೊಸ ಯುಗದ ಮಾರ್ಕೆಟಿಂಗ್ನ ಶಕ್ತಿಯನ್ನ ನಾವು ನೋಡಬಹುದು ಇತ್ತೀಚಿಗೆ ಐಪಿಎಲ್ ನಂತಹ ಬೃಹತ್ ವೇದಿಕೆಗಳಲ್ಲಿ ಕ್ಯಾಂಪಾಕೋಲದ ಹೊಸ ಜಾಹಿರಾತುಗಳು ಅತ್ಯಂತ ಬಲವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು ಇದರ ಹಿಂದಿನ ಉದ್ದೇಶ ಸ್ಪಷ್ಟ ಹೆಚ್ಚು ಜನಸಂದರಣಿಯನ್ನ ತಲುಪಿ ಬ್ರಾಂಡ್ ಅನ್ನ ಮರುಪರಿಚಯಿಸುವುದು ಹಳೆಯ ಗ್ರಾಹಕರಿಗೆ ಹಳೆಯ ನೆನಪುಗಳನ್ನ ಮನವಿ ಮಾಡುವುದು ಸುಲಭವಿತ್ತು ಆದರೆ ಇಂದಿನ ಯುವಕರಿಗೆ ಈ ಐತಿಹಾಸಿಕ ಬ್ರಾಂಡ್ ಯಾವುದು ಅನ್ನುವ ಅರಿವೇ ಇರಲಿಲ್ಲ ಹೀಗಾಗಿ ಈ ಐತಿಹಾಸಿಕ ಬ್ರಾಂಡ್ಅನ್ನ ಹೊಸ ಪೀಳಿಗೆಗೆ ಮರು ಪರಿಚಯಿಸುವುದು ಕ್ಯಾಂಪಾಕೋಲದ ಮುಖ್ಯ ಗುರಿಯಾಗಿತ್ತು.

ಮಾರ್ಕೆಟಿಂಗ್ ಹಾಗೂ ನಾಯಕತ್ವದ ನಂತರ ಕ್ಯಾಂಪಾಕೋಲ ಅನುಸರಿಸುತ್ತಿರುವ ಮೂರನೇ ಹಾಗೂ ಅತ್ಯಂತ ಆಕ್ರಮಣಕಾರಿ ತಂತ್ರವೇ ಬೆಲೆಯ ಮಾಯಾಜಾಲ. ಇದು ಅಂಬಾನಿ ಜಿಯೋ ಸಿಮ್ ಮೂಲಕ ಮಾಡಿದ ತಂತ್ರವನ್ನೇ ಹೋಲುತ್ತದೆ. ಮೊದಲು ಫ್ರೀ ಸಿಮ್ ತೆಗೆದುಕೊಳ್ಳಿ ಅಂತ ಘೋಷಿಸಿ ಕೋಟ್ಯಂತರ ಜನರನ್ನ ತಲುಪುವ ಮೂಲಕ ಮಾರುಕಟ್ಟೆಯಲ್ಲಿ ಬಲವಾದ ಅಸ್ತಿತ್ವವನ್ನ ಸ್ಥಾಪಿಸಲಾಯಿತು. ನಂತರ ನಿಧಾನವಾಗಿ ಶುಲ್ಕವನ್ನ ಹೆಚ್ಚಿಸಲಾಯಿತು. ಅಂತಿಮವಾಗಿ ಬೆಲೆಯನ್ನ ಹೆಚ್ಚಿಸಿದ್ರು ಬಹುತೇಕ ಗ್ರಾಹಕರು ಜಿಯೋ ನೆಟ್ವರ್ಕ್ಗೆ ಹೊಂದಿಕೊಂಡುಬಿಟ್ಟರು. ಈಗ ಅದೇ ತಂತ್ರವನ್ನ ಕ್ಯಾಂಪಕೋಲ ಮಾರುಕಟ್ಟೆಯಲ್ಲಿ ಬಳಸಲಾಗ್ತಾ ಇದೆ ಹೌದು ಮೊದಲಿಗೆ ಜನರಿಗೆ ಪರಿಚಯ ಮಾಡಿಸುವುದು ಕೋಕೋಕೋಲ ಹಾಗೂ ಪೆಪ್ಸಿಗಿಂತ ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನವನ್ನ ನೀಡಿ ಹೆಚ್ಚು ಜನರಿಗೆ ಬ್ರಾಂಡ್ ಪರಿಚಯ ಮಾಡಿಸಿ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನ ಗಟ್ಟಿ ಮಾಡಿಕೊಳ್ಳುವುದು ಒಮ್ಮೆ ಗ್ರಾಹಕರು ಬ್ರಾಂಡ್ ಅನ್ನ ನಂಬಿ ಒಪ್ಪಿಕೊಂಡರೆ ನಂತರ ಬೆಲೆ ಹಾಗೂ ಪ್ರೀಮಿಯಂ ವೈಶಿಷ್ಟ್ಯಗಳನ್ನ ತರುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ನಂಬಿಕೆ ಹಾಗೂ ಲಾಭದ ಅಂಚನ್ನ ನಿರ್ಮಿಸುವುದು ಇದು ಕ್ಯಾಂಪಾಕೋಲ ಯುದ್ಧದ ಅತ್ಯಂತ ಪ್ರಮುಖ ಹಾಗೂ ಆಳವಾದ ಆರ್ಥಿಕ ತಂತ್ರವಾಗಿದೆ ಈ ತಂತ್ರದ ಭಾಗವಾಗಿಯೇ ಅಂಬಾನಿ ಯವರು ಈಗಲೂ ಅದೇ ಬೆಲೆ ಯುದ್ಧದ ತಂತ್ರವನ್ನ ಅನುಸರಿಸುತ್ತಿದ್ದಾರೆ ಕೋಕೋಕೋಲ ಹಾಗೂ ಪೆಪ್ಸಿಯಂತಹ ಸ್ಪರ್ಧಿಗಳು ಸಾಮಾನ್ಯವಾಗಿ 20 ರೂಪಾಯಿಗೆ ಸ್ಟ್ಯಾಂಡರ್ಡ್ ಸಾಫ್ಟ್ ಡ್ರಿಂಕ್ ಬಾಟಲಿಗಳನ್ನ ಮಾರಾಟ ಮಾಡಿದರೆ ಕ್ಯಾಂಪಕೋಲ ಅದೇ ಗ್ರಾಹಕರಿಗಾಗಿ 250ಎಲ್ ಬಾಟಲನ್ನ ಕೇವಲ 10 ರೂಪಾಯಿಗೆ ನೀಡ್ತಾ ಇದೆ ಈ ಆಕ್ರಮಣಕಾರಿ ಬೆಲೆನಿಗದಿ ಕೋಕ್ ಹಾಗೂ ಪೆಪ್ಸಿ ಕಂಪನಿಗಳನ್ನ ಅಕ್ಷರಶಹ ಬೆಚ್ಚಿ ಹಚ್ಚಿಬೀಳಿಸಿದೆ ಜೊತೆಗೆ ಅವರಿಗೆ ಎರಡು ದ್ವಂದ್ವ ಆಯ್ಕೆಯನ್ನ ಎದುರಿಸುವಂತೆ ಮಾಡಿದೆ ಅವರು ಬೆಲೆ ಕಡಿಮೆ ಮಾಡಿದರೆ ಅವರ ಲಾಭದ ಅಂಶ ಕಡಿಮೆಯಾಗಿ ದೊಡ್ಡ ನಷ್ಟ ಸಂಭವಿಸುತ್ತದೆ ಸ್ನೇಹಿತರೆ ಒಂದುವೇಳೆ ಅವರು ಬೆಲೆಯನ್ನ ಹೆಚ್ಚಿಸಿ ಮುಂದುವರಿಸಿದರೆ ಗ್ರಾಹಕರು ಕಡಿಮೆ ಬೆಲೆಯ ಕ್ಯಾಂಪಾಕೋಲ ಕಡೆಗೆ ತಿರುಗುವುದರಿಂದ ಮಾರುಕಟ್ಟೆ ಹಂಚಿಕೆಯನ್ನ ಕಳೆದುಕೊಳ್ಳುತ್ತಾರೆ.

ಹೀಗಾಗಿ ಈ ಇಬ್ಬರು ಜಾಗತಿಕ ಸ್ಪರ್ಧಿಗಳು ನಿರ್ಧಾರ ಕೈಗೊಳ್ಳಲು ತೀವ್ರ ಅಸಮರ್ಥರಾಗಿದ್ದಾರೆ ಯಾಕಂದರೆ ಅವರು ಯಾವ ನಿರ್ಧಾರ ಕೈಗೊಂಡರು ಅವರಿಗೆ ದೊಡ್ಡ ಆರ್ಥಿಕ ಹೊಡತ ಬೀಳು ಳುವುದು ಕಚಿತ ಬೆಲೆ ನಿಗದಿಯಷ್ಟೇ ಬಲಿಷ್ಟವಾಗಿ ಕ್ಯಾಂಪಕೋಲ ಈಗ ವಿತರಣ ಜಾಲದ ತಂತ್ರವನ್ನ ಬಳಸ್ತಾ ಇದೆ ಈ ಸಂಪೂರ್ಣ ಜಾಲವು ರಿಲಯನ್ಸ್ ನ ಬೃಹತ್ ಸಾಮರ್ಥ್ಯದ ಮೇಲೆ ನಿಂತಿದೆ ಒಂದು ಪ್ರಮುಖ ಅಂಶವನ್ನ ಗಮನಿಸಿ ಕೋಕೋಕೋಲ ಹಾಗೂ ಪೆಪ್ಸಿ ಅಂತಹ ಕಂಪನಿಗಳು ಜಗತ್ತಿನ 150ರಿಂದ 200 ದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುತ್ತಾವೆ ಹಾಗಿದ್ದರೂ ಕೇವಲ ಬಾಟಲ್ ವ್ಯಾಲ್ಯೂಮ ದೃಷ್ಟಿಯಿಂದ ಭಾರತವು ವಿಶ್ವದ ಐದನೇ ದೊಡ್ಡ ಮಾರುಕಟ್ಟೆಯಾಗಿದೆ ಇದರರ್ಥ ಇಂತಹ ಮಹತ್ವದ ಭಾರತೀಯ ಮಾರುಕಟ್ಟೆಯನ್ನ ಕಳೆದುಕೊಳ್ಳುವುದು ಅವರಿಗೆ ದೊಡ್ಡ ನಷ್ಟವಾಗುತ್ತದೆ ಸ್ನೇಹಿತರೆ ಭಾರತದಲ್ಲಿ ಕೋಕೋಲ ಕಂಪನಿಯು ತನ್ನ ಬೃಹತ್ತ ಫೋರ್ಟ್ ಪೋಲಿಯೋವನ್ನ ಹೊಂದಿದೆ ಕೋಕೋಲ ತಮ್ಸ್ಪ್ ಸ್ಪ್ರೈಟ್ ಫ್ಯಾಂಟ ಮಾಜ ಹಾಗೂ ಕಿನ್ಲೆ ಕ್ಯಾಂಪಕೋಲ ಈಗ ಈ ಎಲ್ಲಾ ವಿಭಾಗಗಳಲ್ಲಿ ನೇರವಾಗಿ ಹಾಗೂ ಆಕ್ರಮಣಕಾರಿ ಅಗ್ಗದ ಬೆಲೆಯಲ್ಲಿ ಪ್ರತಿಸ್ಪರ್ಧಿಸಲು ಸಜ್ಜ ಆಗಿದೆ ಅದರ ಮುಖ್ಯ ಗುರಿ ತಮ್ಸ್ ಅಪ್ ಹಾಗೂ ಕೋಲ ವಿಭಾಗವಾಗಿದೆ ಹೀಗಾಗಿ ಕ್ಯಾಂಪಕೋಲ ತನ್ನ ಬೆಲೆ ಹಾಗೂ ವಿತರಣ ತಂತ್ರಗಳನ್ನ ಸಂಪೂರ್ಣವಾಗಿ ಬಳಸಿ ಪೆಪ್ಸಿ ಕೋಕ್ನ ಮಾರುಕಟ್ಟೆ ನೆಲೆಯನ್ನ ಅಲುಗಾಡಿಸಲು ಯತ್ನಿಸುತ್ತಾ ಇದೆ. ವಿತರಣೆಯಲ್ಲಿರುವ ರಿಲಯನ್ಸ್ ನ ಶಕ್ತಿ ಅಂದ್ರೆ ಪ್ರತಿ ಸಣ್ಣ ರಿಟೇಲ್ ಶಾಪ್ಗೂ ಉತ್ಪನ್ನಗಳನ್ನ ಸುಲಭವಾಗಿ ತಲುಪಿಸುವ ಸಾಮರ್ಥ್ಯ ಈ ಕೋಲಾ ಯುದ್ಧ 2.0 ನಲ್ಲಿ ಸಂಪೂರ್ಣವಾಗಿ ನಿರ್ಣಾಯಕ ಪಾತ್ರ ವಹಿಸಲಿದೆ. ಸ್ನೇಹಿತರೆ 2023ರ ವಾರ್ಷಿಕ ಅಂಕಿ ಅಂಶಗಳ ಪ್ರಕಾರ ಕೋಲಾ ಯುದ್ಧದ ಎರಡು ಪ್ರಬಲ ಆಟಗಾರರಾದ ಕೋಕೋಲಾ ಹಾಗೂ ಪೆಪ್ಸಿ ಆರ್ಥಿಕ ಶಕ್ತಿಯಲ್ಲಿ ಗಮನಾರ್ಹ ವ್ಯತ್ಯಾಸಗಳನ್ನ ಹೊಂದಿವೆ ಕೋಕೋಲಾ ನೇರ ಉತ್ಪಾದನೆಯ ಆದಾಯ 4 00 ಕೋಟಿ ರೂಪಾಯಿ ಹಾಗೂ ಬಾಟಲ್ಗಳ ಆದಾಯ ಸೇರಿ ಒಟ್ಟು 12500 ಕೋಟಿ ರೂಪಾಯಿ ಆದಾಯ ಗಳಿಸಿದ್ದು 722 ಕೋಟಿ ರೂಪಾಯಿ ನಿವ್ವಳ ಲಾಭವನ್ನ ಪಡೆದಿದೆ ಹಾಗೂ ಇದರ ಕಾರ್ಯಕ್ಷೇತ್ರವು ಪ್ರಧಾನವಾಗಿ ಪಾನಿಯಗಳ ಮೇಲೆ ಕೇಂದ್ರೀಕೃತವಾಗಿದೆ ಮತ್ತೊಂದೆಡೆ ಪೆಪ್ಸಿಕೋ 8000 ಕೋಟಿ ರೂಪಾಯಿ ಒಟ್ಟು ಆದಾಯದಲ್ಲಿ 255 ಕೋಟಿ ನಿವ್ವಳ ಲಾಭ ಗಳಿಸಿದ್ದು ಇದು ಕೋಕೋಕೋಲಕ್ಕಿಂತ ಕಡಿಮೆ ಲಾಭವಾದರೂ ಪೆಪ್ಸಿಕೋನ ಕಾರ್ಯಕ್ಷೇತ್ರವು ವೈವಿಧ್ಯಮಯವಾಗಿದ್ದು ಪಾಗಳ ಜೊತೆಗೆ ಕುರ್ಕುರೆ ಡೋರಿಟೋಸ್ ನಂತ ಆಹಾರ ಸ್ನಾಕ್ಸ್ ಉತ್ಪನ್ನಗಳನ್ನ ದೊಡ್ಡ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಅದರ ಮಾರುಕಟ್ಟೆ ವ್ಯಾಪ್ತಿ ಕೋಕೋಕೋಲಕಿಂತ ಹೆಚ್ಚು ವಿಸ್ತಾರವಾಗಿದೆ ರಿಲಯನ್ಸ್ ನ ಕ್ಯಾಂಪಕೋಲ ಸ್ಟ್ರಾಟರ್ಜಿಗಳು ಆಕ್ರಮಣಕಾರಿಯಾಗಿವೆ ನಿಜ ಆದರೆ ಅಂಬಾನಿ ಅವರು ಎದುರಿಸಬೇಕಾದ ನೆಲಮಟ್ಟದ ವಾಸ್ತವಿಕ ಸವಾಲುಗಳು ಬಹಳ ದೊಡ್ಡವು ಕೋಲ ಮಾರುಕಟ್ಟೆಯಲ್ಲಿನ ಒಂದು ನಿರ್ಣಾಯಕ ಅಂಶವೆಂದರೆ ಕೇವಲ ಸ್ಟಾಕ್ ಇನ್ವೆಂಟರಿ ಮಾತ್ರವಲ್ಲ ಗ್ರಾಹಕರ ಅನುಭವ ಒಬ್ಬ ಪೆಪ್ಸಿ ಅಥವಾ ಕೋಕ್ ಗ್ರಾಹಕನನ್ನ ಕ್ಯಾಂಪಕೋಲ ಕಡೆಗೆ ಆಕರ್ಷಿಸಬೇಕೆಂದರೆ ಪಾನಿಯವು ತಣ್ಣಗಾಗಿರಲೇಬೇಕು ಇದಕ್ಕಾಗಿ ಫ್ರಿಡ್ಜ್ಗಳ ಲಭ್ಯತೆ ಅತ್ಯಗತ್ಯ ಆದರೆ ಈ ಫ್ರಿಡ್ಜ್ಗಳು ಕೆಲಸ ಮಾಡಲು ನಿರಂತರವಾದ ವಿದ್ಯುತ್ ಪೂರೈಕೆ ಬೇಕಾಗುತ್ತೆ.

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಚಿಕ್ಕ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯು ಇಂದಿಗೂ ಒಂದು ಪ್ರಮುಖ ಸಮಸ್ಯೆಯಾಗಿ ಉಳಿದಿದೆ ಜೊತೆಗೆ ಈ ಫ್ರಿಡ್ಜ್ಗಳನ್ನ ದೇಶದ ಮೂಲೆ ಮೂಲೆಗೂ ತಲುಪಿಸುವುದು ಕೂಡ ಒಂದು ದೊಡ್ಡ ವಿತರಣ ಸವಾಲಾಗಿದೆ ಈ ಎಲ್ಲಾ ವಾಸ್ತವಗಳ ಕಾರಣಗಳಿಂದಾಗಿ ಕೇವಲ ಕಡಿಮೆ ಬೆಲೆ ಹಾಗೂ ಬ್ರಾಂಡ್ ಪರಿಚಯದಿಂದ ಪೆಪ್ಸಿ ಹಾಗೂ ಕೋಕ್ನ ನಿಷ್ಠಾವಂತ ಗ್ರಾಹಕರನ್ನ ಕ್ಯಾಂಪಕೋಲ ಕಡೆಗೆ ಸೆಳೆಯುವುದು ಸುಲಭವಲ್ಲ ಆದರೆ ಅಂಬಾನಿಯ ಟೀಮ್ ಸುಮ್ನೆ ಕೂತಿಲ್ಲರಿಲಯನ್ಸ್ ತನ್ನ ಬಹುಬಲವಾದ ವಿತರಣ ಜಾಲದ ಸಾಮರ್ಥ್ಯದೊಂದಿಗೆ ಸಣ್ಣ ರಿಟೇಲರ್ ಗಳಿಗೆ ಅಗತ್ಯವಿರುವ ಫ್ರಿಡ್ಜ್ಗಳನ್ನ ಒದಗಿಸುವ ಮೂಲಕ ಈ ಸವಾಲುಗಳನ್ನ ಜಯಿಸಲು ಯತ್ನಿಸುತ್ತಾ ಇದೆ ಕಡಿಮೆ ಬೆಲೆ ಬೃಹತ್ ವಿತರಣೆ ಹಾಗೂ ಸೂಕ್ತ ತಂಪು ಪೂರೈಕೆ ಈ ಮೂರು ಅಂಶಗಳನ್ನ ಒಟ್ಟಿಗೆ ಬಳಸಿಕೊಂಡು ಮೋಟಾ ಬಾಯ್ ಈ ಕೋಲಾ ಯುದ್ಧ 2.0 ಓ ಅನ್ನ ಗೆಲ್ಲಲು ಸಜ್ಜಾಗಿದ್ದಾರೆ ಇಲ್ಲಿ ಎದುರಾಗುವ ಪ್ರಮುಖ ಸವಾಲನ್ನರಿಲಯನ್ಸ್ ಬಹಳ ಬುದ್ಧಿವಂತಿಕೆಯಿಂದ ಬಳಸಿಕೊಳ್ಳುತ್ತಿದೆ ಒಂದು ಸಣ್ಣ ಅಂಗಡಿಯು ಕೋಕ್ ಪೆಪ್ಸಿ ಹಾಗೂ ಕ್ಯಾಂಪಕೋಲ ಈ ಮೂರು ಬ್ರಾಂಡ್ಗಳಿಗಾಗಿ ಪ್ರತ್ಯೇಕ ಫ್ರಿಡ್ಜ್ಗಳನ್ನ ಇರಿಸಲು ಸಾಧ್ಯವಿಲ್ಲ ಇದನ್ನೇ ಬಂಡವಾಳ ಮಾಡಿಕೊಂಡ ರಿಲಯನ್ಸ್ ತನ್ನ ಫ್ರಿಡ್ಜ್ಗಳನ್ನ ನೇರವಾಗಿ ಆಪರೇಟರ್ನ ನಿಯಂತ್ರಣದಲ್ಲಿ ಇಲ್ಲದೆ ರಿಲಯನ್ಸ್ ನ ನಿಯಂತ್ರಣದಡಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಿದೆ ಇದು ಕ್ಯಾಂಪಾಕೋಲವನ್ನ ತಣ್ಣಗೆ ಇರಿಸುವ ಭರವಸೆಯೊಂದಿಗೆ ಇತರೆ ಪ್ರತಿಸ್ಪರ್ಧಿಗಳಿಗೆ ಪರೋಕ್ಷವಾಗಿ ಸವಾಲು ಹಾಕುತ್ತಿದೆ. ಈ ಯುದ್ಧದಲ್ಲಿ ಅಂಬಾನಿ ಬಳಸುತ್ತಿರುವ ಬೃಹತ್ ಅಸ್ತ್ರವೆಂದರೆ ಅದು ಸ್ವಂತ ವಿತರಣ ಸಾಮರ್ಥ್ಯ. ರಿಲಯನ್ಸ್ ಗ್ರೂಪ್ ಗೆ ಈಗಾಗಲೇ 18,918 ಕ್ಕೂ ಹೆಚ್ಚು ಸ್ವಂತ ಮಳಿಗೆಗಳಿವೆ. ಇವುಗಳಲ್ಲಿ ರಿಲಯನ್ಸ್ ಫ್ರೆಶ್ ಸ್ಮಾರ್ಟ್ ಬಜಾರ್ ಹಾಗೂ ಜಿಯೋ ಮಾರ್ಟ್ ಗಳು ಸೇರಿವೆ. ಈ ಸುಮಾರು 19,000 ಸ್ಟೋರ್ಗಳಲ್ಲಿ ಕ್ಯಾಂಪೋಲ್ಗೆ ಯಾವುದೇ ಅಡೆತಡೆ ಇಲ್ಲದೆ ನಂಬರ್ ಒನ್ ಸ್ಥಾನ ಸಿಗುವುದು ಖಚಿತ.

ಜೊತೆಗೆ ಕ್ವಿಕ್ ಡೆಲಿವರಿ ಅಪ್ಲಿಕೇಶನ್ಗಳ ಮೂಲಕ ವೇಗದ ವಿತರಣ ವ್ಯವಸ್ಥೆಯನ್ನ ಬಳಸುತ್ತಿರುವುದು ಗ್ರಾಹಕರನ್ನ ತ್ವರಿತವಾಗಿ ತಲುಪಲು ಸಹಾಯ ಮಾಡುತ್ತದೆ ಕೇವಲ ತಮ್ಮ ಅಂಗಡಿಗಳ ಮೇಲೆ ಅವಲಂಬಿತವಾಗದೆ ರಿಲಯನ್ಸ್ ಇಡೀ ದೇಶದಾದ್ಯಂತ ವಿತರಣ ಜಾಲವನ್ನ ಬಲಪಡಿಸಲು ಶ್ರಮಿಸುತ್ತಿದೆ ಇದಕ್ಕಾಗಿ ಅವರು ಹೊಸ ಬಾಟಲಿಂಗ್ ಪ್ಲಾಂಟ್ಗಳನ್ನ ಖರೀದಿ ಮಾಡುತ್ತಾ ಇದ್ದಾರೆ ದೆಹಲಿ ಮುಂಬೈ ಎನ್ಸಿಆರ್ ನಂತಹ ಪ್ರಮುಖ ನಗರಗಳಲ್ಲಿ ಸ್ವಂತ ಪ್ಲಾಂಟ್ಗಳನ್ನ ಸ್ಥಾಪಿಸುತ್ತಿದ್ದಾರೆ ಇದು ಉತ್ಪಾದನೆಯನ್ನ ಹೆಚ್ಚಿಸಿ ಭಾರತದಾದ್ಯಂತ ವಿತ ತರಣ ವೆಚ್ಚವನ್ನ ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮೋಟಾಬಾಯ್ ಅಂದ್ರೆ ಅಂಬಾನಿ ಅವರು ಈ ಕ್ಷೇತ್ರದಲ್ಲಿ ಕಾಲಿಡಲು ಒಂದು ಪ್ರಬಲ ಆರ್ಥಿಕ ಕಾರಣವಿದೆ ಮಾರುಕಟ್ಟೆಯ ದತ್ತಾಂಶ ಭವಿಷ್ಯದ ಬೃಹತ್ ವೃದ್ಧಿಯನ್ನ ಸ್ಪಷ್ಟವಾಗಿ ತೋರಿಸುತ್ತದೆ 2019ರಲ್ಲಿ ನಾನ್ ಆಲ್ಕೋಹಾಲಿಕ್ ಪಾನಿಯಾಗಳ ಮಾರುಕಟ್ಟೆ ಸುಮಾರು 36ಸಾ ಕೋಟಿ ರೂಪಾಯಿ ಇತ್ತು ಆದರೆ 2030ರ ವೇಳೆಗೆ ಈ ಮಾರುಕಟ್ಟೆಒಲ50ಸಾವಿರ ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆ ಇದೆ ಅಂದರೆ ಮುಂದಿನ ಮುಂದಿನ ದಶಕದಲ್ಲಿ ಸುಮಾರು ನಾಲ್ಕು ಪಟ್ಟು ದೊಡ್ಡದಾಗುವ ಮಾರುಕಟ್ಟೆಯಲ್ಲಿ ಆರಂಭಿಕ ನಾಯಕತ್ವ ಸಾಧಿಸಿದರೆ ಸಿಗುವ ಲಾಭವು ಅಸಾಧಾರಣವಾಗಿರುತ್ತದೆ ಅಂಬಾನಿಯ ಪ್ರವೇಶವು ಸರಿಯಾದ ಸಮಯದಲ್ಲೇ ಆಗಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಯಾವುದು ಬೇಡ ಅನ್ಸುತ್ತೆ ಸಾರಾಂಶವಾಗಿ ರಿಲಯನ್ಸ್ ನ ಕ್ಯಾಂಪಕೋಲ ಬ್ರಾಂಡ್ ಅನ್ನ ದೇಶದಾದ್ಯಂತ ತಲುಪಿಸಲು ರೂಪಿಸಿದ ಈ ತಂತ್ರಗಳು ನಾಲ್ಕು ಸ್ತಂಭಗಳ ಮೇಲೆ ನಿಂತಿವೆ ಸ್ಪರ್ಧಿಗಳಿಗಿಂತ ಕಡಿಮೆ ಬೆಲೆಗೆ ನೀಡಿ ಗ್ರಾಹಕರನ್ನ ಆಕರ್ಷಿಸುವುದು ತಂಪಾದ ಪಾನ್ಯಗಳ ಮಾರಾಟಕ್ಕೆ ಅಗತ್ಯವಾದ ಫ್ರಿಡ್ಜ್ ವಿತರಣೆ ಹಾಗೂ ನಿಯಂತ್ರಣವನ್ನ ಸಾಧಿಸುವುದು ಹಾಗೂ ಸ್ವಂತ ಮಳಿಗೆಯ ಜಾಲ ಪ್ಲಾಂಟ್ಗಳ ವಿಸ್ತರಣೆ ಹಾಗೂ ಡಿಜಿಟಲ್ ಡೆಲಿವರಿ ಮೂಲಕ ಮಾರುಕಟ್ಟೆಯ ಎಲ್ಲಾ ಮೂಲೆಗಳಿಗೂ ತಲುಪುವುದು ಈ ತಂತ್ರಗಳಿಂದಾಗಿ ಕೋಲ ಯುದ್ಧ 2.0 ಕೇವಲ ಎರಡು ಬ್ರಾಂಡ್ಗಳ ನಡುವಿನ ಪೈಪೋಟಿ ಆಗಿರದೆ ಒಂದು ಜಾಗತಿಕ ಕಂಪನಿ ಹಾಗೂ ಭಾರತೀಯ ಅತಿ ದೊಡ್ಡ ಸಮೂಹದ ನಡುವಿನ ಆರ್ಥಿಕ ಸಮರವಾಗಿ ಮಾರ್ಪಟ್ಟಿದೆ ಈ ವಿಶ್ಲೇಷಣೆಯಲ್ಲಿ ಭಾರತದ ಪಾನಿಯ ಮಾರುಕಟ್ಟೆಯು ಮಹತ್ವದ ವಿರೋಧಾಭಾಸಗಳನ್ನ ಪ್ರದರ್ಶನ ಮಾಡ್ತಾ ಇದೆ.

ಭಾರತದ ವಿತರಣ ಕ್ಷೇತ್ರದಲ್ಲಿ ಎಫ್ಎಂಸಿಜಿ ಉತ್ಪನ್ನಗಳು ಹಾಗೂ ಸಾಫ್ಟ್ ಡ್ರಿಂಕ್ಸ್ ಗಳ ನಡುವೆ ಒಂದು ದೊಡ್ಡ ಅಂತರವಿದೆ ಈ ಅಂತರಕ್ಕೆ ಮುಖ್ಯ ಕಾರಣವೆಂದರೆ ಸಾಫ್ಟ್ ಕಡ್ಡಾಯವಾಗಿ ತಂಪಾಗಿರಬೇಕು ಇದಕ್ಕಾಗಿ ಪ್ರತಿ ಅಂಗಡಿಯಲ್ಲಿ ಫ್ರಿಡ್ಜ್ಗಳು ಬೇಕಾಗುತ್ತೆ. ಆದರೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯು ಒಂದು ಸೀಮಿತ ಸವಾಲಾಗಿದೆ. ಇತ್ತೀಚಿಗೆ ಭಾರತೀಯರಲ್ಲಿ ಆರೋಗ್ಯ ಜಾಗೃತಿ ತೀವ್ರವಾಗಿ ಹೆಚ್ಚಾಗ್ತಾ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಕ್ ಹಾಗೂ ಪೆಪ್ಸಿ ಅಂತಹ ಪಾನೀಯಗಳಲ್ಲಿನ ಸಕ್ಕರೆಯ ಪ್ರಮಾಣದ ಕುರಿತು ಹರಿದಾಡುತ್ತಿರುವ ಮಾಹಿತಿ ಹಾಗೂ ರೈಲ್ಸ್ ಗಳಿಂದಾಗಿ ಹಳೆಯ ಕೋಕ್ ಪೆಪ್ಸಿ ಪ್ರೇಮಿಗಳು ತಮ್ಮ ಜೀವನಶೈಲಿ ಹಾಗೂ ಅಭಿರುಚಿಯನ್ನ ಬದಲಿಸುತ್ತಿದ್ದಾರೆ. ಅನೇಕರು ಈಗ ಸಾಫ್ಟ್ ಡ್ರಿಂಕ್ ಕುಡಿಯೋದನ್ನ ನಿಲ್ಲಿಸಿ ಆರೋಗ್ಯಕರ ಪರ್ಯಾಯಗಳಿಗಾಗಿ ಹುಡುಕುತಾ ಇದ್ದಾರೆ. ಈ ಎಲ್ಲಾ ಅಂಶಗಳನ್ನ ಒಟ್ಟುಗೂಡಿಸಿದಾಗ ಸಾಫ್ಟ್ ಡ್ರಿಂಕ್ ಉದ್ಯಮಕ್ಕೆ ಹೊಸ ಸವಾಲುಗಳು ಎದುರಾಗುವುದು ಸ್ಪಷ್ಟವಾಗಿದೆ. ಮಾರುಕಟ್ಟೆಯಲ್ಲಿ ಎದುರಾದ ಈ ಸವಾಲುಗಳನ್ನ ಜಯಿಸಲು ಈಗ ಮೂರು ಪ್ರಮುಖ ಅಂಶಗಳ ಮೇಲೆ ಗಮನ ಹರಿಸಬೇಕಿದೆ. ವಿತರಣ ಜಾಲವನ್ನ 40 ಲಕ್ಷದಿಂದ 1ಕೋಟಿ 25 ಲಕ್ಷ ಅಂಗಡಿಗಳಿಗೆ ವಿಸ್ತರಿಸುವುದು, ಬಳಕೆದಾರರ ಅಭಿರುಚಿ ಬದಲಾವಣೆಗೆ ಸ್ಪಂದಿಸಿ ಕೇವಲ ಕೋಲಾ ಕೇಂದ್ರಿತ ಪಾನಿಯಗಳಿಂದ ಆರೋಗ್ಯಕರ ಪರ್ಯಾಯಗಳ ಕಡೆಗೆ ಗಮನಹರಿಸುವುದು ಹಾಗೂ ಸಕ್ಕರೆ ಮುಕ್ತ ಅಥವಾ ನೈಸರ್ಗಿಕ ಉತ್ಪನ್ನಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತರುವುದು ಹೀಗಾಗಿ ಮೋಟಾಬಾಯಿಯ ಕ್ಯಾಂಪಾಕೋಲ ಯುದ್ಧವು ಕೇವಲ ಬೆಲೆಸ್ಪರ್ಧಿಯಾಗಿ ಒಳಿಯದೆ ವಿತರಣೆ ಹಾಗೂ ಹೊಸ ಆರೋಗ್ಯ ಪ್ರಜ್ಞೆಯ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ ಹಿಂದಿನ ದಿನಗಳಲ್ಲಿ ಕೋಕ್ ಹಾಗು ಪೆಪ್ಸಿ ದೈತ್ಯರು ಮಾರುಕಟ್ಟಿಗೆ ಪ್ರವೇಶಿಸಿದಾಗ ಅವರು ಅನುಸರಿಸಿದ ತಂತ್ರ ಅತ್ಯಂತ ಸರಳ ಆದರೆ ಪ್ರಭಾವಶಾಲಿ ಅದು ಕೂಲ್ ಲುಕ್ ಹಾಗೂ ಲೈಫ್ ಸ್ಟೈಲ್ ಮಾರ್ಕೆಟಿಂಗ್ ಯಾವುದೇ ಸಿನಿಮಾ ಹೀರೋ ಅಥವಾ ಜನಪ್ರಿಯ ವ್ಯಕ್ತಿ ಬಾಟಲನ್ನ ಕೈಯಲ್ಲಿ ಹಿಡಿದು ಕುಡಿಯುವ ದೃಶ್ಯವನ್ನ ನೋಡಿದಾಗ ಸಾಮಾನ್ಯ ಜನರಿಗೆ ನಾನು ಇದನ್ನೇ ಕುಡಿಯುತ್ತೇನೆ ನಾನು ಕೂಡ ಕೂಲ್ ಆಗಿದ್ದೇನೆ ಅನ್ನುವ ಸಂದೇಶ ಸ್ಪಷ್ಟವಾಗಿ ತಲುಪುತ್ತಿತ್ತು ಇದರಿಂದ ಬ್ರಾಂಡ್ನ ಮೌಲ್ಯವು ಕೇವಲ ಪಾನೀಯವಾಗಿ ಉಳಿಯದೆ ಬ್ರಾಂಡ್ ಕೂಲ್ ಲೈಫ್ ಸ್ಟೈಲ್ ಎಂಬ ಮನೋಭಾವ ಗ್ರಾಹಕರಲ್ಲಿ ಬೇರೂರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments