Thursday, November 20, 2025
HomeLatest Newsಚೀನಾದ ಎಐ ಚಾಟ್‌ಬಾಟ್ ಶಾಕ್: ಅಮೆರಿಕದ ಟೆಕ್ ಕಂಪನಿಗಳಿಗೆ ಎಚ್ಚರಿಕೆ

ಚೀನಾದ ಎಐ ಚಾಟ್‌ಬಾಟ್ ಶಾಕ್: ಅಮೆರಿಕದ ಟೆಕ್ ಕಂಪನಿಗಳಿಗೆ ಎಚ್ಚರಿಕೆ

ಚೀನಾ ಡೀಪ್ ಸೀಕ್ ದಾಳಿ ಅಮೆರಿಕಾ ಮಾರ್ಕೆಟ್ ಧ್ವಂಸ ಒಂದೇ ದಿನ 83 ಲಕ್ಷ ಕೋಟಿ ಭಸ್ಮ ನಮಸ್ಕಾರ ಸ್ನೇಹಿತರೆ ಅಮೆರಿಕಾ ವಿಶ್ವದ ಮಾಜಿ ದೊಡ್ಡಣ್ಣ ಟ್ರಂಪ್ ಬಂದಾಗಿನಿಂದ ಮತ್ತೆ ವಿಶ್ವದ ದೊಡ್ಡಣ್ಣ ಆಗೋಕೆ ಏಕಮೇವಾಧಿಪತಿ ಆಗೋಕೆ ಹೊರಟಿತು ಆದ್ರೀಗ ಡೀಪ್ ಸೀಕ್ ಅನ್ನು ಚೀನಿ ಕ್ಷುದ್ರ ಗ್ರಹ ದಾಳಿಗೆ ಅಕ್ಷರಶಹ ತತ್ತರಿಸಿ ಹೋಗಿದೆ ದೊಡ್ಡ ವಿನಾಶ ಆಗಿದೆ ಅಮೆರಿಕದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಚೈನೀಸ್ ಎಐ world ಸ್ಟಾಕ್ ಮಾರ್ಕೆಟ್ ನಲ್ಲಿ ಒಂದೇ ದಿನ ಬರೋಬರಿ ಒಂದು ಟ್ರಿಲಿಯನ್ ಡಾಲರ್ ಕಿತ್ತುಕೊಂಡು ಹೋಗಿದೆ ಒಂದು ಟ್ರಿಲಿಯನ್ ಡಾಲರ್ ಒಂದು ದಿನದಲ್ಲಿ ಹೆಚ್ಚು ಕಡಿಮೆ ಸೌದಿ ಅರೇಬಿಯಾದ ಜಿಡಿಪಿ ಗೆ ಸಮ ಸ್ಟಾಕ್ ಮಾರ್ಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಕುಸಿತ ಇತಿಹಾಸದಲ್ಲೇ ಇದರಿಂದ ವಿಶ್ವ ಆಳ್ತೀನಿ ಅಂತ ಹೊರಟಿದ್ದಂತಹ ಈ ಟ್ರಂಪ್ ಮಹಾಶಯ ಕೂಡ ಇದೇನಿದು ಎಲ್ಲಾ ತಂಪಾಗಿ ಹೋಗಿಬಿಡುತ್ತಲ್ಲ ಎಲ್ಲಾ ತಂಡ ಹೊಡೆದು ಬಿಡುತ್ತಲ್ಲ ಅಂತ ಹೇಳಿ ಬೆಚ್ಚಿ ಬಿದ್ದಿದ್ದಾರೆ ಫ್ರಮ್ ಚೈನೀಸ್ ಕಂಪನಿ ಹಾಗಿದ್ರೆ ಏನಿದು ಡೀಪ್ ಸೀಕ್ ಅಮೆರಿಕದಲ್ಲಿ ಏನಾಗ್ತಾ ಇದೆ ಅಮೆರಿಕದಂತಹ ಈ ದೈತ್ಯನೇ ಅಲ್ಲಾಡುವಂತದ್ದು ಏನಾಯ್ತು ಇಲ್ಲಿ ಭಾರತದ ಮೇಲೆ ಇದರ ಪರಿಣಾಮ ಏನು ಎಲ್ಲವನ್ನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಡ್ರಾಗನ್ ಎಐ ದಾಳಿ ಅಮೆರಿಕಾ ಟೆಕ್ ಲೋಕ.

ಈ ಹಿಂದಿನ ಅನೇಕ ವರದಿಯಲ್ಲಿ ನಾವು ಹೇಳ್ತಾನೆ ಬರ್ತಿರೋ ತರ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಐ ಭವಿಷ್ಯದ ಸೂಪರ್ ಪವರ್ ಗಳ ಮಹಾಶಕ್ತಿ ಈ ಶಕ್ತಿಯನ್ನ ದಕ್ಕಿಸಿಕೊಳ್ಳೋಕೆ ಅಮೆರಿಕಾ ಚೀನಾ ನಡುವೆ ಭಾರಿ ಪೈಪೋಟಿ ನಡೀತಾ ಇತ್ತು ಒಂದು ಹಂತದಲ್ಲಿ ಅಮೆರಿಕಾ ಚೀನಾಗೆ ತುಂಬಾ ಮುಂದಕ್ಕೆ ಹೋಗಿ ಹೋಗ್ಬಿಟ್ಟಿತ್ತು ಆದರೆ ಈಗ ಡ್ರಾಗನ್ ಡೀಪ್ ಸೀಕ್ ಅನ್ನೋ ಪ್ರಳಯಾಂತಕ ಎಐ ಸೃಷ್ಟಿಸಿ ಅಮೆರಿಕಾಗೆ ಚೆಕ್ ಮೇಟ್ ಕೊಟ್ಟಿದೆ ಪರಿಣಾಮ ಅಮೆರಿಕದ ಇಡೀ ಟೆಕ್ ಲೋಕ ಶೇಕ್ ಆಗಿದೆ ಅದರಲ್ಲೂ ಎಐ ಕ್ರಾಂತಿಗೆ ದೊಡ್ಡ ಶಕ್ತಿಯಾಗಿದ್ದ ಎನ್ ವಿಡಿಯಾ ಮಕಾಡೆ ಮಲಗಿದೆ ಡೀಪ್ ಸೀಕ್ ಹೊಡೆತಕ್ಕೆ ಎನ್ವಿಡಿಯಾ ಶೇರುಗಳು 17% ಕೊಚ್ಚಿಕೊಂಡು ಹೋಗಿವೆ ಒಂದೇ ದಿನ ಎನ್ವಿಡಿಯಾದ 593 ಬಿಲಿಯನ್ ಡಾಲರ್ ಸಂಪತ್ತು ಕಿತ್ತುಕೊಂಡು ಹೋಗಿದೆ 593 ಬಿಲಿಯನ್ ಡಾಲರ್ ಅಂದ್ರೆ ಎಷ್ಟು ಸ್ವಾಮಿ ಹತ್ತತ್ರ 50 ಲಕ್ಷ ಕೋಟಿ ರೂಪಾಯಿ ನಮ್ಮ ಬಜೆಟ್ ಗಿಂತ ಹೆಚ್ಚಿನ ದುಡ್ಡು ಒಂದು ದಿನದಲ್ಲಿ ಕಿತ್ತುಕೊಂಡು ಹೋಗಿದೆ ಎನ್ವಿಡಿಯಾ ದು ಎಐ ಗೆ ಅತ್ಯಾವಶ್ಯಕ ಜಿಪಿಯು ಚಿಪ್ ತಯಾರಿಸುತ್ತೆ ಅನ್ನೋ ಕಾರಣಕ್ಕೆ ಎನ್ವಿಡಿ ಗೆ ಭಾರಿ ಡಿಮ್ಯಾಂಡ್ ಬಂದಿತ್ತು ಎರಡೇ ವರ್ಷದಲ್ಲಿ ನಾಲ್ಕು ಟ್ರಿಲಿಯನ್ ಡಾಲರ್ ತಲುಪುವ ಮೂಲಕ ವಿಶ್ವದ ಅತಿ ದೊಡ್ಡ ಕಂಪನಿಯಾಗಿತ್ತು ಆದರೆ ಸೋಮವಾರ ಒಂದೇ ದಿನ 600 ಬಿಲಿಯನ್ ಡಾಲರ್ ಕಿತ್ತುಕೊಂಡು ಹೋಗಿದೆ ಸ್ಟಾಕ್ ಮಾರ್ಕೆಟ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಕುಸಿತ ಈ ಹಿಂದೆ 2022ರ ಸೆಪ್ಟೆಂಬರ್ 6ರಲ್ಲಿ ಚೀನಾ ಸರ್ಕಾರ ತನ್ನ ನೌಕರರು ಐಫೋನ್ ಯೂಸ್ ಮಾಡಬಾರದು ಅಂತ ಬ್ಯಾನ್ ಮಾಡಿದಾಗ apple 82 ಬಿಲಿಯನ್ ಡಾಲರ್ ಬಿದ್ದುಹೋಗಿತ್ತು ಎನ್ವಿಡಿಯಾ ಅದಕ್ಕಿಂತ ಮೂರು ಪಟ್ಟು ಬಿದ್ದುಹೋಗಿದೆ ಕೇವಲ ಎನ್ವಿಡಿಯಾ ಅಷ್ಟೇ ಅಲ್ಲ ಈ ಕುಸಿತ ಇಡೀ ಅಮೆರಿಕದ ಟೆಕ್ ಲೋಕವನ್ನ ಬೀಳಿಸಿಬಿಟ್ಟಿದೆ ಮೈಕ್ರೋಸಾಫ್ಟ್ 2% ಗೂಗಲ್ 4% ಒರಾಕಲ್ 13% ಬ್ರಾಡ್ಕಾಮ್ 17% ಎಂಡಿ 6% ಎಐ ಸರ್ವರ್ ಸೇವೆ ಕೊಡೋ ಡೆಲ್ 8.7% ಸೂಪರ್ ಮೈಕ್ರೋ ಕಂಪ್ಯೂಟರ್ 13% ಹೀಗೆ ಅಮೆರಿಕದ ಟಾಪ್ ಕಂಪನಿಗಳು ಬಿದ್ದು ಹೋಗಿಬಿಟ್ಟಿದ್ದಾವೆ ಟೆಕ್ ಕಂಪನಿಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿದ್ದ.

ಪವರ್ ಕಂಪನಿಗಳು ಕೂಡ ಹೊಡೆತ ತಿಂದಿವೆ ಕಾನ್ಸ್ಟಲೇಷನ್ ಎನರ್ಜಿ ಕಾರ್ಪೊರೇಷನ್ 21% ಬಿದ್ದಿದೆ ಪರಿಣಾಮ ಅಮೆರಿಕದ ನ್ಯಾಡಾಕ್ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 3.1% ಡ್ರಾಪ್ ಆಗೋಗಿದೆ snp 500 ಕೂಡ 1/2% ಬಿದ್ದುಹೋಗಿದೆ ಅಮೆರಿಕದ ಹೂಡಿಕೆದಾರರು ಒಟ್ಟಾರೆ ಒಂದು ಟ್ರಿಲಿಯನ್ ಡಾಲರ್ 85 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಗಾಬರಿಯಿಂದ ಹಣ ತಗೊಂಡು ಹೋಗಿ ಸೇಫ್ ಅಸೆಟ್ ಗಳಾದ ಅಮೆರಿಕದ ಬಾಂಡ್ಸ್ ಗೋಲ್ಡ್ ನಲ್ಲೆಲ್ಲ ಹಾಕ್ತಾ ಇದ್ದಾರೆ ಇದೇ ಸಂದರ್ಭದಲ್ಲಿ 10 ವರ್ಷದ ಅಮೆರಿಕದ ಟ್ರೆಜರಿ ಬಾಂಡ್ ಬಾಂಡ್ ಯಲ್ಡ್ ಕೂಡ ಮೂರು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದು ಹೋಗಿದೆ ಹಾಗಿದ್ರೆ ಇಷ್ಟಕ್ಕೆಲ್ಲ ಏನು ಕಾರಣ ಯಾಕೆ ಅಮೆರಿಕನರಿಗೆ ಡೀಪ್ ಸೀಕ್ ಅಂದ್ರೆ ಇಷ್ಟೊಂದು ಭಯ ಡೀಪ್ ಸಿಕ್ ಅಂತದ್ದು ಏನು ಮಾಡ್ತು ಅಂತ ಕೇಳುವುದಾದರೆ ಕಡಿಮೆ ಖರ್ಚಲ್ಲಿ ಎಐ ದೊಡ್ಡಣ್ಣನ ಜಂಬಕ್ಕೆ ಡೀಪ್ ಆಗಿರೋ ಏಟು ಇದುವರೆಗೂ ಎಐ ಮಾಡೆಲ್ ಡೆವಲಪ್ ಮಾಡೋದು ಅಂದ್ರೆ ಭಗೀರಥ ಪ್ರಯತ್ನ ನೂರಾರು ಕೋಟಿ ಹಣ ಬೇಕು ಅತ್ಯಾಧುನಿಕ ಜಿಪಿಯು ಚಿಪ್ ಗಳು ಬೇಕು ನಿಮ್ಮ ಸಾಮಾನ್ಯ ತಲೆಗೆಲ್ಲ ಆಗೋದಿಲ್ಲ ಎಕ್ಸ್ಟ್ರಾ ಆರ್ಡಿನರಿ ತಲೆ ಬೇಕು ಅದಕ್ಕೆ ಹಲವು ವರ್ಷಗಳ ಪರಿಶ್ರಮ ಬೇಕು ಅನ್ನೋ ತರದಲ್ಲಿ ಅಮೆರಿಕಾ ಬಿಲ್ಡ್ ಅಪ್ ಕೊಡ್ತಿತ್ತು ಆದರೆ ಚೀನಾದ ಡೀಪ್ ಸೀಕ್ ತಿಂಗಳು ಗಳಲ್ಲೇ ಮಾಡಿ ತೋರಿಸಿಬಿಟ್ಟಿದೆ ನಿಮಗೆ ಪ್ರಿವಿಯಸ್ ರಿಪೋರ್ಟ್ ನಲ್ಲಿ ಈ ರಿಪೋರ್ಟ್ ನಲ್ಲಿ ಹೇಳಿದ್ವಿ 2023 ರಲ್ಲಿ ಲಿಯಾಂಗ್ ವೆನ್ ಫೆಂಗ್ ಅನ್ನೋ ವ್ಯಕ್ತಿಯೊಬ್ಬರು ಡೀಪ್ ಸಿಕ್ ನ ಹುಟ್ಟು ಹಾಕಿದ್ರು.

ಈ ವೆನ್ ಫೆಂಗ್ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ ಆದರೆ ವೆನ್ ಫೆಂಗ್ ಹೈ ಫ್ಲೈಯರ್ ಕೋನಟ್ ಅನ್ನೋ ಹೆಡ್ಜ್ ಫಂಡ್ ನ ಕೂಡ ನಡೆಸ್ತಾ ಇದ್ರು ಎಐ ನಲ್ಲಿ ಆಸಕ್ತಿ ಇತ್ತು ಟ್ರೇಡಿಂಗ್ ನಲ್ಲಿ ಎಐ ಬಳಸ್ತಾ ಇದ್ರು ನಂತರ ಅದೇ ಆಸಕ್ತಿ ಡೀಪ್ ಸೀಕ್ ಸ್ಥಾಪಿಸೋಕೆ ಕಾರಣ ಆಯ್ತು ಅಂತ ಹೇಳ್ತಾರೆ ಕಳೆದ ಡಿಸೆಂಬರ್ ವರೆಗೆ ಇವರದೇನು ಸುದ್ದಿ ಇರಲಿಲ್ಲ ಆದರೆ ಡಿಸೆಂಬರ್ ನ ಕೊನೆಯ ವಾರದಲ್ಲಿ ಇದ್ದಕ್ಕಿದ್ದಂತೆ ಡೀಪ್ ಸೀಕ್ ಸುದ್ದಿ ಆಗೋಕೆ ಶುರುವಾಯಿತು ತನ್ನ ಮೊದಲ ಎಐ ಮಾಡೆಲ್ ನ ರಿಲೀಸ್ ಮಾಡಿ ಮಾಡ್ತು ಇನ್ನು ಒಂದೇ ತಿಂಗಳಲ್ಲಿ ಎರಡನೇ ಮಾಡೆಲ್ ಬಂದಿದ್ದು ನೋಡಿ ಎಐ ಜಗತ್ತು ಗಾಬರಿ ಬಿತ್ತು ಅಲ್ದೆ ಈ ಡೀಪ್ ಸೀಕ್ ನ ಡೆವಲಪ್ ಮಾಡಿದ ರೀತಿ ಅಮೆರಿಕವನ್ನ ದಂಗುಪಡಿಸಿತು ಯಾಕಂದ್ರೆ ಚಾಟ್ ಜಿಪಿಟಿ ಸೃಷ್ಟಿಗೆ ಓಪನ್ ಎಐ 60 ಬಿಲಿಯನ್ ಡಾಲರ್ ಸುರಿದಿದೆ ಇವತ್ತಿಗೂ ವರ್ಷಕ್ಕೆ ಐದರಿಂದ ಆರು ಬಿಲಿಯನ್ ಡಾಲರ್ ತಾನೇ ಇದೆ ಗೂಗಲ್ ಕೂಡ ತನ್ನ ಎಐ ಗೆ 51 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಮೈಕ್ರೋಸಾಫ್ಟ್ ಕೂಡ ಓಪನ್ ಎಐ ಮೇಲೆ 13 ಬಿಲಿಯನ್ ಡಾಲರ್ ಚೆಲ್ಲಿದೆ ಅಂತದ್ರಲ್ಲಿ ಈ ಚೀನಿ ಕಂಪನಿ ಕೇವಲ 55 ಮಿ ಬಿ ಅಲ್ಲ ಮಿ ಮಿಲಿಯನ್ ಡಾಲರ್ ನಲ್ಲಿ ಅಮೆರಿಕದ ಕಂಪನಿಗಳು ಖರ್ಚು ಮಾಡುತ್ತಿರುವುದರ ಬರಿ 1% ಒಂದು ತುಣುಕು ಖರ್ಚು ಮಾಡಿ ಡೀಪ್ ಸೇಕ್ ನ ಸೃಷ್ಟಿ ಮಾಡಿದೆ ಅದು ಯಾವಾಗ ಅಮೆರಿಕಾ ಚೀನಾಗೆ ನಿಮಗೆ ಜಿಪಿಯು ಕೊಡಲ್ಲ ಚಿಪ್ ಕೊಡಲ್ಲ ಅಂತ ಬಂದ ಹೇರ್ತಿದ್ದಾಗಲೇ ಡೀಪ್ ಸೀಕ್ ಎಐ ಲೋಕದಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಎನ್ ವಿಡಿಯೋದ ಹೆಚ್ 800 ಚಿಪ್ ಗಳನ್ನೇ ಹಿಡ್ಕೊಂಡು ಯಶಸ್ವಿ ಚಾಟ್ ಬಾಟ್ ನಿರ್ಮಾಣ ಮಾಡಿಬಿಟ್ಟಿದೆ ಚಾಟ್ ಜಿಪಿಟಿ ಯನ್ನ ಬಳಸಿಕೊಂಡು ಅದಕ್ಕಿಂತ ಪವರ್ಫುಲ್ ಎಐ ನ ನಿರ್ಮಾಣ ಮಾಡಿಬಿಟ್ಟಿದೆ ಅಕ್ಯುರೆಸಿ ಕಂಪ್ಯೂಟಿಂಗ್ ಮ್ಯಾಥ್ಸ್ ಕೋಡಿಂಗ್ ರೀಸನಿಂಗ್ ಎಲ್ಲಾ ಪರೀಕ್ಷೆಯಲ್ಲೂ ಕೂಡ ಓಪನ್ ಎ ನ ಚಾಟ್ ಜಿಪಿಟಿ ಗೂಗಲ್ ನ ಜೆಮಿನೈ facebook ನ ಲಾಮಾ ಗಿಂತ ಹೆಚ್ಚು ಸ್ಕೋರ್ ಮಾಡಿದೆ ಜಗತ್ತಿನ ಮೋಸ್ಟ್ ಪವರ್ಫುಲ್ ಎಐ ಅನಿಸಿಕೊಂಡಿದೆ ಸಾಲ್ದು ಅಂತ ಈ ಡೀಪ್ ಸೀಕ್ ಓಪನ್ ಸೋರ್ಸ್ ಬೇರೆ ಅಂದ್ರೆ ಯಾವುದೇ ಸಾಫ್ಟ್ವೇರ್ ಡೆವಲಪರ್ಸ್ ಇದರ ಕೋಡಿಂಗ್ ನ ನೋಡಬಹುದು ಡೀಪ್ ಸೀಕ್ ನ ಕೋಡ್ ಬಳಸಿ ಮತ್ತೊಂದು ಎಐ ನ ಡೆವಲಪ್ ಮಾಡ್ಕೋಬಹುದು ಅಲ್ದೆ ಫ್ರೀಯಾಗಿ ಸಿಗುತ್ತೆ.

ಹೀಗಾಗಿ ಎಐ ಬಳಕೆದಾರರು ಮುಗಿಬಿದ್ದು ಡೀಪ್ ಸೀಕ್ ನ ಡೌನ್ಲೋಡ್ ಮಾಡ್ತಿದ್ದಾರೆ ಈಗ ಆಲ್ರೆಡಿ ಅಮೆರಿಕಾ ಚೈನಾ ಬ್ರಿಟನ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಆಪಲ್ ಸ್ಟೋರ್ ಆಂಡ್ರಾಯ್ಡ್ ನ ಪ್ಲೇ ಸ್ಟೋರ್ ಗಳಲ್ಲಿ ಅತಿ ಹೆಚ್ಚು ಡೌನ್ಲೋಡ್ ಮಾಡಿದ ನಂಬರ್ ಒನ್ ಆಪ್ ಆಗಿದೆ ಸೋ ಇಷ್ಟು ಕಡಿಮೆ ಖರ್ಚಲ್ಲಿ ಕಡಿಮೆ ಟೈಮ್ ನಲ್ಲಿ ಡೀಪ್ ಸೀಕ್ ನಂತ ಬಲಿಷ್ಠ ಎಐ ಸೃಷ್ಟಿಸಬಹುದು ಅಂದ್ರೆ ಅಮೆರಿಕದ ಕಂಪನಿಗಳ ಅಗತ್ಯ ಏನಿದೆ ಅಂತ ಹೂಡಿಕೆದಾರರು ಬಿದ್ದು ದುಡ್ಡು ವಾಪಸ್ ತಗೊಳ್ತಿದ್ದಾರೆ ಯಾಕಂದ್ರೆ ಇದುವರೆಗೂ ಎಐ ಮಾಡೆಲ್ ಗಳನ್ನ ನಿರ್ಮಿಸಬೇಕು ಅಂದ್ರೆ ಎಲ್ಲರೂ ಅಮೆರಿಕವನ್ನ ನೆಚ್ಚಿಕೋಬೇಕು ಎನ್ವಿಡಿಯಾನೇ ಬಿಗ್ ಡ್ಯಾಡಿ ಅವರ ಕೃಪಾ ಕಟಾಕ್ಷ ಇಲ್ಲ ಅಂದ್ರೆ ಆಗೋದೇ ಇಲ್ಲ ಅನ್ನೋ ವಾತಾವರಣ ಇತ್ತು ಆದರೆ ಆ ನಂಬಿಕೆಯನ್ನ ಚೀನಾ ಬೀಟ್ ಮಾಡಿದೆ ಹೀಗಾಗಿ ಅಮೆರಿಕದ ಎಐ ಕಂಪನಿಗಳು ಹಿನ್ನಡೆ ಕಾಣುತ್ತಿವೆ ಡೀಪ್ ಸಿಕ್ ನ ಈ ದಾಳಿ ನೋಡಿ ಕುದ್ದು ಟ್ರಂಪ್ ಬೆಚ್ಚಿ ಬಿದ್ದಿದ್ದಾರೆ ಡೀಪ್ ಸಿಕ್ ನಮ್ಮ ಕಂಪನಿಗಳಿಗೆ ವೇಕಪ್ ಕಾಲ್ ಎಚ್ಚರಿಕೆಯ ಕರೆಗಂಟೆ ನಾವು ಚೀನಾ ಜೊತೆಗಿನ ಸ್ಪರ್ಧೆಯಲ್ಲಿ ಲೇಸರ್ ನಷ್ಟು ಫೋಕಸ್ ಹೊಂದಿರಬೇಕು ಅಂತ ಅವರ ಕಂಪನಿಗಳಿಗೆ ತಾಕೀತು ಮಾಡಿದ್ದಾರೆ ಟ್ರಂಪ್ ಟ್ರಂಪ್ ಬರ್ತಿದ್ದ ಹಾಗೆ ಅಲ್ಲಿನ ಸ್ಟಾಕ್ ಮಾರ್ಕೆಟ್ ಹೂಡಿಕೆದಾರರ ಪೋರ್ಟ್ ಫೋಲಿಯೋ ಬಂದ್ರು ಟ್ರಂಪ್ ತಂದ್ರು ಕೆಂಪು ಅಂತ ಹೇಳಿ ಬೈಯೋಕೆ ಶುರು ಮಾಡ್ತಾರಲ್ಲ ಈಗ ಎಲ್ಲಾ ಕಡೆ ರೆಡ್ ರೆಡ್ ಅಂತ ಹೇಳಿ ಹಾಗಾಗಿ ಟ್ರಂಪ್ಗೂ ಕೂಡ ಈಗ ತಲೆಬಿಸಿ ಶುರುವಾಗಿದೆ ಏನೋ ಒಂತರ ಫುಲ್ ಫಿಲ್ಮ್ ಹೀರೋ ತರ ಬಂದು ಏನೋ ಮಾಡ್ಬಿಡ್ತೀನಿ ಅಂತೆಲ್ಲ ಅನೌನ್ಸ್ ಮಾಡ್ಬಿಟ್ಟಿದೆ ನೋಡಿದ್ರೆ ಬರ್ತಾ ಬರ್ತಾ ಈ ತರ ಆಗ್ತಾ ಇದಿಯಲ್ಲ ಅಂತ ಟ್ರಂಪ್ ಕೂಡ ಈಗ ಟೆನ್ಶನ್ ಗೆ ಒಳಗಾಗಿದ್ದಾರೆ ಭಾರತ ಏನ್ ಮಾಡಬೇಕು ಭಾರತಕ್ಕೂ ಕೂಡ ಇದು ದೊಡ್ಡ ಪಾಠ ಯಾವಾಗ್ಲೂ ನಾವು ಟೆಕ್ನಾಲಜಿ ಇಲ್ಲ ಚಿಪ್ ಇಲ್ಲ ಹೂಡಿಕೆ ಇಲ್ಲ ನೀವು ಕೊಡಿ ನೀವು ಕೊಡಿ ಓ ಇವರು ಕೊಡ್ತಿಲ್ಲ.

ಭಾರತಕ್ಕೆ ಕೊಡಲ್ಲ ಅಂತ ಹೇಳ್ಬಿಟ್ರು ಅಂತ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಬೇರೆ ರಾಷ್ಟ್ರ ವೈತ ಕೊಡುವುದರ ಬದಲು ನಾವು ಇರೋದ್ರಲ್ಲೇ ಹೇಗೆ ಕ್ರಾಂತಿ ಮಾಡಬಹುದು ಅನ್ನೋದನ್ನ ಚೀನಾದಿಂದ ಕಲಿಬೇಕು ಶತ್ರು ರಾಷ್ಟ್ರ ಹೌದು ಚೀನಾ ಆದರೆ ಶತ್ರುವಿನಿಂದ ಮೋಟಿವೇಷನ್ ಪಡ್ಕೊಂಡು ನಾವು ಇನ್ನು ಸ್ಟ್ರಾಂಗ್ ಆಗ್ಬೇಕು ಅಂತ ಹೋಗೋದ್ರಲ್ಲಿ ಏನು ತಪ್ಪಿಲ್ಲ ಸ್ನೇಹಿತರೆ ಅಮೆರಿಕಾ ಅಷ್ಟೆಲ್ಲಾ ಅಡೆತಡೆ ಹಾಕಿದ್ರು ಕೂಡ ಅದನ್ನು ಮೀರಿ ಆಸ್ ಎ ನೇಷನ್ ನಾವು ಮುಂದಕ್ಕೆ ಹೋಗ್ತೀವಿ ಅಂತ ಹೇಳಿದ್ರೆ ಎಐ ರೇಸ್ ನಲ್ಲಿ ಚೀನಾ ಅಮೆರಿಕವನ್ನ ಬೀಟ್ ಮಾಡಿ ತೋರಿಸುತ್ತೆ ಅಂತ ಹೇಳಿದ್ರೆ ತನ್ನಲ್ಲಿರೋ ರಿಸೋರ್ಸ್ ನಿಂದಲೇ ಓಪನ್ ಎಐ ಗೂಗಲ್ ಮೆಟಾದಂತಹ ದಿಗ್ಗಜರನ್ನ ಬಿಚ್ಚಿ ಬೀಳಿಸುತ್ತಾರೆ ಅಂತ ಹೇಳಿದ್ರೆ ನಾವು ಕೂಡ ಎಷ್ಟು ಹಾರ್ಡ್ ವರ್ಕ್ ಇನ್ನು ಮಾಡೋದು ಬಾಕಿ ಇದೆ ಅಂತ ಅರ್ಥ ಮಾಡ್ಕೋಬೇಕು ಬಹಳ ಜನ ಡೀಪ್ ಸಿಕ್ ಚಾಟ್ ಜಿಪಿಟಿ ಕಾಪಿ ಮಾಡ್ತಾ ಇದೆ ಅಮೆರಿಕದಿಂದ ಕದ್ದು ಮಾಡ್ತಿದೆ ಅನ್ನೋ ಆರೋಪ ಮಾಡ್ತಿದ್ದಾರೆ ಆದರೆ ಎಐ ತಜ್ಞರೇ ಹೇಳ್ತಿದ್ದಾರೆ ಅಮೆರಿಕನ್ಸ್ ಹೇಳ್ತಿದ್ದಾರೆ ಇದು ಕಾಪಿ ಅಲ್ಲ ಡೀಪ್ ಸಿಕ್ ಬುದ್ಧಿವಂತಿಕೆಯಿಂದ ಚಾಟ್ ಜಿಪಿಟಿ ನ ಒಂದಷ್ಟು ಕಲಿಕೆಯನ್ನ ಆಲ್ರೆಡಿ ಎಸ್ಟಾಬ್ಲಿಷ್ ಆಗಿರುವ ಪಾಠಗಳನ್ನ ಬಳಸಿಕೊಂಡಿದೆ ಆ ಕಲಿಕೆಯನ್ನ ಬಳಸಿಕೊಂಡಿದೆ ತನ್ನ ಎಐ ನ ಟ್ರೈನ್ ಮಾಡಿದ್ದಾರೆ ಲಾರ್ಜ್ ಎಲ್ ಎಲ್ ಎಂ ನಿಂದ ಅದಕ್ಕಿಂತ ಶಕ್ತಿಶಾಲಿ ಎಐ ಮಾಡೆಲ್ನ ಡೆವಲಪ್ ಮಾಡಿದ್ದಾರೆ ಈ ತರ ಟ್ರೈನ್ ಮಾಡೋದು ಕೂಡ ಅಷ್ಟು ಸುಲಭ ಅಲ್ಲ ಅದಕ್ಕೂ ಕೂಡ ಸಾಕಷ್ಟು ಟೆಕ್ನಾಲಜಿ ಬೇಕಾಗುತ್ತೆ ಬುದ್ಧಿವಂತಿಕೆ ಬೇಕಾಗುತ್ತೆ ಚೈನಾ ಇಂಜಿನಿಯರ್ಸ್ ಅದನ್ನ ಮಾಡಿ ತೋರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments