Thursday, January 15, 2026
HomeTech NewsCoforge–Encora 2.35 ಬಿಲಿಯನ್ ಡಾಲರ್ ವ್ಯವಹಾರ: ಎಚ್‌1ಬಿ ಗದ್ದಲದ ನಡುವೆ ಷೇರು ಮೌಲ್ಯದಲ್ಲಿ ಇಳಿಕೆ

Coforge–Encora 2.35 ಬಿಲಿಯನ್ ಡಾಲರ್ ವ್ಯವಹಾರ: ಎಚ್‌1ಬಿ ಗದ್ದಲದ ನಡುವೆ ಷೇರು ಮೌಲ್ಯದಲ್ಲಿ ಇಳಿಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಹೆಚ್ ವೀಸಾ ಕಥೆ ಹೆಚ್ಚು ಕಡಿಮೆ ಮುಗಿದೇ ಹೋಗಿದೆ. ಮುಂದೆ ಏನಾಗುತ್ತೋ ಅಂತ ನಮ್ಮ ಐಟಿ ಉದ್ಯೋಗಿಗಳು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಆದರೆ ಈ ಗದ್ದಲದ ನಡುವೆಯೇ ಭಾರತದ ಐಟಿ ಕಂಪನಿಯೊಂದು ಸದ್ದಿಲ್ಲದೆ ಅಮೆರಿಕಾದ ಕಂಪನಿಗೆ ಕೈ ಹಾಕಿದೆ ಹೌದು ಅಮೆರಿಕಾ ನಮಗೆ ವೀಸಾ ಕೊಡೋದು ಬಿಡೋದು ಆಮೇಲೆ ನಾವೇ ನಿಮ್ಮ ಕಂಪನಿಯನ್ನ ಖರೀದಿ ಮಾಡ್ತೀವಿ ಅಂತ ಭಾರತದ ಕಂಪನಿಯೊಂದು ಮುಂದೆ ನುಗ್ಗಿದೆ ಬರೊಬ್ಬರಿ 21100 ಕೋಟಿ ರೂಪಾಯ ಮೆಗಾ ಡೀಲ್ ಇದು ಏನಿದು ಡೀಲ್ ಯಾವ ಕಂಪನಿ ಯಾರನ್ನ ಖರೀದಿ ಮಾಡ್ತಿದೆ ಇದರಿಂದ ಭಾರತದ ಐಟಿ ರಯಾಂಕಿಂಗ್ ಪಟ್ಟಿ ಹೇಗೆ ಹೇಗೆ ಬದಲಾಗುತ್ತೆ ಕಂಪನಿಯ ಶೇರು ಬೆಲೆ ಏನಾಗಿದೆ.

ಬಿಗ್ ಬ್ರೇಕಿಂಗ್ ನ್ಯೂಸ್ ಏನಂದ್ರೆ ನೋಯಿಡಾ ಮೂಲದ ಭಾರತೀಯ ಐಟಿ ಕಂಪನಿ ಕೋಫೋರ್ಜ್ ಅಮೆರಿಕಾದ ಎನ್ಕೋರ ಎಂಬ ಕಂಪನಿಯನ್ನ ಖರೀದಿಸ ಒಪ್ಪಂದ ಮಾಡಿಕೊಂಡಿದೆ ಈ ಡೀಲ್ನ ಮೊತ್ತ ಎಷ್ಟು ಗೊತ್ತಾ ಬರುಬ್ಬರಿ 2.35 35 ಬಿಲಿಯನ್ ಡಾಲರ್ ಅಂದ್ರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಸುಮಾರು 21100 ಕೋಟಿ ರೂಪಾಯಿಗಳು ಇಲ್ಲಿ ಇಂಟರೆಸ್ಟಿಂಗ್ ವಿಷಯ ಏನಂದ್ರೆ ಕೋಫೋರ್ಜ್ ಕಂಪನಿ ಈ ಎನ್ಕೋರವನ್ನ ಪೂರ್ತಿಯಾಗಿ ನಗದು ಕೊಟ್ಟು ಖರೀದಿ ಮಾಡ್ತಿಲ್ಲ ಬದಲಿಗೆ ಇದು ಆಲ್ ಸ್ಟಾಕ್ ಡೀಲ್ ಅಂದ್ರೆ ಕೋಫೋರ್ಜ್ ತನ್ನ ಶೇರುಗಳನ್ನ ಎನ್ಕೋರ ಮಾಲಿಕರಿಗೆ ನೀಡುವ ಮೂಲಕ ಈ ಕಂಪನಿಯನ್ನ ತನ್ನದಾಗಿಸಿಕೊಳ್ತಾ ಇದೆ ಏನಿದು ಎನ್ಕೋರ ಯಾಕಿಷ್ಟು ಡಿಮ್ಯಾಂಡ್ ಈಗ ಈಗ ನಿಮಗೆ ಪ್ರಶ್ನೆ ಬರಬಹುದು ಅಷ್ಟಕ್ಕೂ ಈ ಎನ್ಕೋರ ಕಂಪನಿಯಲ್ಲಿ ಅಂತದ್ದೇನಿದೆ ಅಂತ ಎನ್ಕೋರ ಅನ್ನೋದು ಅಮೆರಿಕಾ ಮೂಲದ ಡಿಜಿಟಲ್ ಇಂಜಿನಿಯರಿಂಗ್ ಕಂಪನಿ ಇವರ ಹತ್ತಿರ ಎಐ ಅಂದ್ರೆ ಕೃತಕ ಬುದ್ಧಿಮತ್ತೆಯ ಅಪಾರ ಜ್ಞಾನ ಇದೆ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಇಂಜಿನಿಯರಿಂಗ್ ನಲ್ಲಿ ಇವರು ಎಕ್ಸ್ಪರ್ಟ್ಸ್ ಮುಖ್ಯವಾಗಿ ಲ್ಯಾಟಿನ್ ಅಮೆರಿಕಾ ಮತ್ತು ಅಮೆರಿಕಾದ ಪಶ್ಚಿಮ ಭಾಗದಲ್ಲಿ ಇವರ ನೆಟ್ವರ್ಕ್ ತುಂಬಾ ಸ್ಟ್ರಾಂಗ್ ಇದೆ.

ಅಲ್ಲಿ ಸುಮಾರು 31ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತಿದ್ದಾರೆ ಈಗ ಜಗತ್ತೇ ಎಐ ಕಡೆಗೆ ಮುಖ ಮಾಡಿರೋದರಿಂದ ಕೋಫೋರ್ಜ್ಗೆ ತನ್ನ ಎಐ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳೋದಕ್ಕೆ ಎನ್ಕೋರ ಪರ್ಫೆಕ್ಟ್ ಮ್ಯಾಚ್ ಆಗಿದೆ ಸ್ನೇಹಿತರೆ ಈ ಡೀಲ್ ಮುಗಿದ ತಕ್ಷಣ ಭಾರತದ ಐಟಿ ರಯಾಂಕಿಂಗ್ ಪಟ್ಟಿಯೇ ಬದಲಾಗಲಿದೆ ಹೇಗೆ ಅಂತೀರಾ ಕೋಫೋರ್ಜ್ ಮತ್ತು ಎನ್ಕೋರ ಸೇರಿದರೆ ಇವರ ಒಟ್ಟು ವಾರ್ಷಿಕ ಆದಾಯ ಸುಮಾರು 2.5 5 ಬಿಲಿಯನ್ ಡಾಲರ್ ಆಗಲಿದೆ ಅಂದ್ರೆ ಸುಮಾರು 22500 ಕೋಟಿ ರೂಪಾಯಿ ಇದರರ್ಥ ಕೋಫೋರ್ಜ್ ಕಂಪನಿ ಈಗ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಎಂಪಸಿಸ್ ಮತ್ತು ಹೆಕ್ಸಾವೇರ್ ನಂತ ದೊಡ್ಡ ಕಂಪನಿಗಳನ್ನ ಹಿಂದಿಕ್ಕಿ ಭಾರತದ ಏಳನೇ ಅತಿ ದೊಡ್ಡ ಐಟಿ ಸೇವಾ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಈ ಮೂಲಕ ಟಿಸಿಎಸ್ ಇನ್ಫೋಸಿಸ್ ವಿಪ್ರೋಹಚ್ಸಿಎಲ್ ನಂತ ದಿಗ್ಗಜರ ಸಾಲಿಗೆ ಈಗ ಕೋಫೋರ್ಜ್ ವೇಗವಾಗಿ ವಾಗಿ ಹೆಜ್ಜೆ ಹಾಕ್ತಿದೆ ಆದರೆ ಕಂಪನಿ ದಾಪುಗಾಲು ಇಡ್ತಾ ಇದ್ರು ಹೂಡಿಕೆದಾರರಿಗೆ ಯಾಕೋ ಈ ಡೀಲ್ ತೃಪ್ತಿ ತಂದಿಲ್ಲ ಅದಕ್ಕೆ ಸಾಕ್ಷಿಯಾಗಿ ಶುಕ್ರವಾರ ಕಂಪನಿಯ ಶೇರುಗಳು ಬರೊಬ್ಬರಿ ಶೇಕಡ 3.71ರಷ್ಟು ಕುಸಿತ ಕಂಡಿದೆ.

ಈ ಮೂಲಕ ಕೋಫೋರ್ಜ್ ಶೇರು 1673.30 ರೂಪಾಯಿಗೆ ಇಳಿಕೆ ಕಂಡಿದೆ ಹಾಗೆ ನೋಡಿದ್ರೆ ಈ ಡೀಲ್ನ ಮಾತುಕಥೆಗಳು ಶುರುವಾದ ದಿನದಿಂದಲೇ ಕಂಪನಿಯ ಶೇರುಗಳು ಇಳಿಕೆಯ ಹಾದಿಯಲ್ಲಿವೆ ಕಳೆದ ಒಂದು ತಿಂಗಳಲ್ಲಿ ಶೇರು ಶೇಕಡಹತಕ್ಕೂ ಹೆಚ್ಚು ಕುಸಿತ ಕಂಡಿರೋದೇ ಇದಕ್ಕೆ ಸಾಕ್ಷಿ ಇನ್ನೊಂದು ಮುಖ್ಯ ವಿಷಯ ಅಂದ್ರೆ ಈ ಡೀಲ್ ಏನೋ ಚೆನ್ನಾಗಿದೆ ಆದರೆ ಎನ್ಕೋರ ಕಂಪನಿ ಮೇಲೆ ಈಗಾಗಲೇ ಸಾಲ ಇದೆ ಆ ಸಾಲವನ್ನ ತೀರಿಸೋಕೆ ಕೋಫೋರ್ಸ್ ಈಗ ಹೊಸ ಪ್ಲಾನ್ ಮಾಡಿದೆ ಅಮೆರಿಕಾದ ಈ ಕಂಪನಿಯ ಸಾಲ ತೀರಿಸಲು ಕೋಫೋರ್ಜ್ ಸುಮಾರು 550 ಮಿಲಿಯನ್ ಡಾಲರ್ ಅಂದ್ರೆ ಸುಮಾರು 4600 ಕೋಟಿ ರೂಪಾಯಿಗಳ ಫಂಡ್ ರೈಸ್ ಮಾಡೋದಕ್ಕೆ ಬೋರ್ಡ್ ಮೀಟಿಂಗ್ನಲ್ಲಿ ಒಪ್ಪಿಗೆ ಪಡೆದಿದೆ ಕ್ಯುಐಪಿ ಅಥವಾ ಬ್ರಿಡ್ಜ್ ಲೋನ್ ಮೂಲಕ ಈ ಹಣ ಹೊಂದಿಸಲಾಗುತ್ತೆ ಈ ಡೀಲ್ ಮುಗಿಯೋಕೆ ಇನ್ನು ನಾಲ್ಕರಿಂದ ಆರು ತಿಂಗಳು ಬೇಕಾಗಬಹುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಮೆರಿಕಾದ ನಿಯಂತ್ರಕರಿಂದ ಅನುಮತಿ ಸಿಕ್ಕ ನಂತರ ಇದು ಫೈನಲ್ ಆಗುತ್ತೆ ಡೊನಾಲ್ಡ್ ಟ್ರಂಪ್ ಬಂ ಅಂದರು ಡೋಂಟ್ ಕೇರ್ ಸ್ನೇಹಿತರೆ ಕೊನೆಯದಾಗಿ ಒಂದು ಮಾತು ಟ್ರಂಪ್ ಬಂದರೆ ಭಾರತೀಯ ಐಟಿ ಕಂಪನಿಗಳಿಗೆ ಸಂಕಷ್ಟ ಅಂತ ಅಮೆರಿಕಾದ ಮಾಧ್ಯಮಗಳು ಬರೆಯುತ್ತಿದ್ವು ಆದರೆ ನಮ್ಮ ಭಾರತದ ಕಂಪನಿಗಳು ಅಮೆರಿಕಾದ ಕಂಪನಿಗಳನ್ನೇ ಖರೀದಿ ಮಾಡಿ ಅಲ್ಲಿಗೆ ಹೋಗಿ ಬಿಸಿನೆಸ್ ಎಕ್ಸ್ಪಾಂಡ್ ಮಾಡ್ತಾ ಇರೋದು ನಿಜಕ್ಕೂ ಹೆಮ್ಮೆಯ ವಿಷಯ ಇದು ಭಾರತದ ಐಟಿ ವಲಯದ ತಾಕತ್ತು ಎಂಥದ್ದು ಅನ್ನೋದನ್ನ ಜಗತ್ತಿಗೆ ತೋರಿಸಿದೆ.

ಈ ಡೀಲ್‌ನಿಂದ ಕೋಫೋರ್ಜ್‌ಗೆ ದೀರ್ಘಕಾಲಿಕ ಲಾಭವಾಗುವ ಸಾಧ್ಯತೆ ಇದೆ. Encora ಖರೀದಿಯಿಂದ ಕೋಫೋರ್ಜ್‌ಗೆ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕಾ ಮಾರುಕಟ್ಟೆಗಳಲ್ಲಿ ತನ್ನ ಹಾಜರಾತಿ ಬಲಪಡಿಸುವ ಅವಕಾಶ ಸಿಗುತ್ತದೆ. ಜೊತೆಗೆ ಡಿಜಿಟಲ್ ಎಂಜಿನಿಯರಿಂಗ್, ಕ್ಲೌಡ್, ಡೇಟಾ ಅನಾಲಿಟಿಕ್ಸ್ ಮತ್ತು AI ಸಂಬಂಧಿತ ಸೇವೆಗಳಲ್ಲಿ ಕಂಪನಿಯ ಸಾಮರ್ಥ್ಯ ವಿಸ್ತಾರವಾಗಲಿದೆ. ತಾತ್ಕಾಲಿಕವಾಗಿ ಷೇರು ಬೆಲೆಯಲ್ಲಿ ಅಸ್ಥಿರತೆ ಕಾಣಿಸಿಕೊಂಡರೂ, ದೀರ್ಘಾವಧಿಯಲ್ಲಿ ಆದಾಯ ವೃದ್ಧಿ ಮತ್ತು ಗ್ರಾಹಕ ನೆಲೆ ವಿಸ್ತರಣೆಗೆ ಈ ಡೀಲ್ ಸಹಕಾರಿಯಾಗಬಹುದು.

ಭಾರತದ ಐಟಿ ಕಂಪನಿಗಳು ವಿದೇಶಿ ಕಂಪನಿಗಳನ್ನು ಖರೀದಿಸುವುದು ಒಟ್ಟಾರೆ ಒಳ್ಳೆಯ ಬೆಳವಣಿಗೆಯೇ. ಇದರಿಂದ ಜಾಗತಿಕ ತಂತ್ರಜ್ಞಾನ, ನಿಪುಣ ಮಾನವ ಸಂಪನ್ಮೂಲ ಮತ್ತು ಹೊಸ ಮಾರುಕಟ್ಟೆಗಳಿಗೆ ವೇಗವಾಗಿ ಪ್ರವೇಶ ಸಿಗುತ್ತದೆ. ಆದರೆ ಇದೇ ಸಮಯದಲ್ಲಿ ದೇಶದೊಳಗೆ ಹೊಸ ತಂತ್ರಜ್ಞಾನ ಸಂಶೋಧನೆ, ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ಮತ್ತು ಇನೋವೇಷನ್‌ ಮೇಲೂ ಹೆಚ್ಚು ಹೂಡಿಕೆ ಮಾಡಬೇಕಿದೆ. ವಿದೇಶಿ ಸ್ವಾಧೀನ ಮತ್ತು ದೇಶೀಯ ತಂತ್ರಜ್ಞಾನ ಅಭಿವೃದ್ಧಿ — ಈ ಎರಡರ ಸಮತೋಲನ ಸಾಧಿಸಿದರೆ ಮಾತ್ರ ಭಾರತೀಯ ಐಟಿ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments