ಆಫೀಸ್ ಗಳಲ್ಲಿ ಉದ್ಯೋಗಿಗಳ ಮೇಲೆ ಕಣ್ಣಿಡೋಕೆ ಕಂಪನಿಗಳು ಮಾಡದೆ ಇರುವ ಪ್ರಯತ್ನಗಳಿಲ್ಲ ವಾಶ್ರೂಮ್ ಒಂದನ್ನ ಬಿಟ್ಟು ಲಿಫ್ಟ್ ಕಾರಿಡಾರ್ ಡೆಸ್ಕ್ ಎಲ್ಲಾ ಕಡೆ ಸಿಸಿಟಿವಿ ಗಳನ್ನ ಅಳವಡಿಕೆ ಮಾಡಿರ್ತಾರೆ ಇದು ನಮಗೆಲ್ಲ ಗೊತ್ತಿರೋದೆ ಆದರೆ ಇದೀಗ ಕಂಪನಿಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿವೆ ಕೇವಲ ಸಿಸಿಟಿವಿ ಅಲ್ಲ ನಿಮ್ಮ ಲ್ಯಾಪ್ಟಾಪ್ ಮೇಲೆಯೇ ಕಣ್ಣಿಡೋಕೆ ನಿರ್ಧರಿಸಿವೆ ಹೌದು ಭಾರತದ ದಲ್ಲೂ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಜಾಗತಿಕ ದೈತ್ಯ ಐಟಿ ಕಂಪನಿಯೊಂದು ಈ ತೀರ್ಮಾನಕ್ಕೆ ಬಂದಿದೆ ಯಾವುದು ಈ ಕಂಪನಿ ಏನಿದು ಲ್ಯಾಪ್ಟಾಪ್ ಮೇಲೆ ಕಣ್ಣಿಡುವ ತೀರ್ಮಾನ ಇದು ಉದ್ಯೋಗಿಗಳ ಮೇಲೆ ಏನೆಲ್ಲ ಪರಿಣಾಮ ಬೀರುತ್ತೆ.
ವರ್ಕ್ ಫ್ರಮ್ ಹೋಮ್ ಬಂದಮೇಲೆ ಕಂಪನಿಗಳಿಗೆ ಉದ್ಯೋಗಿಗಳು ನಿಜವಾಗಿಯೂ ಕೆಲಸ ಮಾಡ್ತಾ ಇದ್ದಾರ ಇಲ್ವಾ ಅನ್ನೋ ಅನುಮಾನ ಶುರುವಾಗಿದೆ ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಅಮೆರಿಕಾದ ಮೂರನೇ ಅತಿ ದೊಡ್ಡ ಬ್ಯಾಂಕ್ ವೇಲ್ಸ್ ಫಾರ್ಗೋದಲ್ಲಿ ನಡೆದ ಘಟನೆ ವರ್ಷದ ಹಿಂದೆಯಷ್ಟೇ ಈ ಬ್ಯಾಂಕ್ ತನ್ನ ಡಜನ್ಗೂ ಹೆಚ್ಚು ಉದ್ಯೋಗಿಗಳನ್ನ ಕೆಲಸದಿಂದ ಕಿತ್ತು ಹಾಕಿತ್ತು ಕಾರಣ ಏನು ಗೊತ್ತಾ ಮೌಸ್ ಜಿಗ್ಲರ್ಸ್ ಅಂದ್ರೆ ಕೆಲಸ ಮಾಡದಿದ್ರು ಕೆಲಸ ಮಾಡ್ತಾ ಇದ್ದೀವಿ ಅಂತ ಇವರು ತೋರಿಸಿಕೊಂಡಿದ್ರು ಇದಕ್ಕಾಗಿ ಮೌಸ್ ತಾನಾಗೆ ಅಲ್ಲಾಡುವಂತೆ ಮಾಡುವ ಡಿವೈಸ್ ಅಳವಡಿಸಿ ಕಂಪನಿಗೆ ಮೋಸ ಮಾಡಿದ್ರು ಈ ಘಟನೆ ಐಟಿ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು ಈಗ ನಮ್ಮ ಭಾರತದ ಐಟಿ ವಲಯಕ್ಕೆ ಬರೋಣ ಪ್ರಮುಖ ಐಟಿ ಕಂಪನಿಯಾದ ಕಾಗ್ನಿಸೆಂಟ್ ತನ್ನ ಉದ್ಯೋಗಿಗಳ ಮೇಲೆ ನಿಗಾ ಇಡೋದಕ್ಕೆ ಹೊಸ ಟೂಲ್ ಒಂದನ್ನ ಬಳಸುದಕ್ಕೆ ಮುಂದಾಗಿದೆ ವರದಿಗಳ ಪ್ರಕಾರ ಕಾಗ್ನಿಸೆಂಟ್ ಪ್ರೊಹ್ಯಾಂಡ್ಸ್ ಅನ್ನೋ ಒಂದು ವರ್ಕ್ ಫೋರ್ಸ್ ಮ್ಯಾನೇಜ್ಮೆಂಟ್ ಟೂಲ್ ಅಳವಡಿಸಿಕೊಳ್ತಾ ಇದೆ.
ಉದ್ಯೋಗಿಗಳ ಪ್ರತಿಯೊಂದು ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತೆ ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ ಒಬ್ಬ ಉದ್ಯೋಗಿ ತನ್ನ ತನ್ನ ಲ್ಯಾಪ್ಟಾಪ್ ನಲ್ಲಿ ಐದು ನಿಮಿಷ ಅಥವಾ 300 ಸೆಕೆಂಡ್ಗಳ ಕಾಲ ಮೌಸ್ ಅಥವಾ ಕೀಬೋರ್ಡ್ ಬಳಸದೆ ಇದ್ರೆ ಆತನ ಸ್ಟೇಟಸ್ ಐಡಲ್ ಅಂತ ವರ್ಕ್ ಆಗುತ್ತೆ. ಅಷ್ಟೇ ಅಲ್ಲ ಒಂದು ವೇಳೆ 15 ನಿಮಿಷಗಳ ಕಾಲ ಸಿಸ್ಟಮ್ ಬಳಸದಿದ್ದರೆ ಆಗ ಆಕ್ಟಿವಿಟೀಸ್ ಅವೇ ಫ್ರಮ್ ದಿ ಸಿಸ್ಟಮ್ ಅಥವಾ ಸಿಸ್ಟಮ್ ನಿಂದ ದೂರ ಇದ್ದಾರೆ ಅಂತ ರೆಕಾರ್ಡ್ ಆಗುತ್ತೆ. ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಇದೆ ಕಾಗ್ನಿಸೆಂಟ್ ನಾವು ಉದ್ಯೋಗಿಗಳ ಒಪ್ಪಿಗೆ ಪಡೆದ ನಂತರವೇ ಈ ಟೂಲ್ ಅಳವಡಿಸ್ತೀವಿ ಅಂತ ಹೇಳಿದೆ ಆದರೆ ಕೆಲ ಉದ್ಯೋಗಿಗಳು ಹೇಳೋದೇ ಬೇರೆ ಮಿಂಟ್ ವರದಿ ಪ್ರಕಾರ ಉದ್ಯೋಗಿಗಳಿಗೆ ಈ ಟೂಲ್ ಬಗ್ಗೆ ಟ್ರೈನಿಂಗ್ ಕೋರ್ಸ್ ಕಡ್ಡಾಯ ಮಾಡಲಾಗಿತ್ತು ಆ ಕೋರ್ಸ್ ಮುಗಿಬೇಕು ಅಂದ್ರೆ ಅವರು ಐ ಅಗ್ರಿ ಅಂತ ಕ್ಲಿಕ್ ಮಾಡಲೇಬೇಕಿತ್ತು ಹಾಗಿರುವಾಗ ಇದು ಎಷ್ಟರ ಮಟ್ಟಿಗೆ ಸ್ವಇಚ್ಛೆ ಅನ್ನೋದು ಉದ್ಯೋಗಿಗಳ ಪ್ರಶ್ನೆ ಈ ಟೂಲ್ ಮೂಲಕ ಎಷ್ಟೊತ್ತು ಲಾಗಿನ್ ಆಗಿದ್ರು ಯಾವ ಆಪ್ ಓಪನ್ ಮಾಡಿದ್ರು ಬ್ರೇಕ್ ಎಷ್ಟೊತ್ತು ತಗೊಂಡ್ರು ಅನ್ನೋದೆಲ್ಲ ಮ್ಯಾನೇಜರ್ಗಳಿಗೆ ಲೈವ್ ಆಗಿ ಗೊತ್ತಾಗುತ್ತೆ ಇದನ್ನೆಲ್ಲ ಕೇಳಿ ಕಾಗ್ನಿಸೆಂಟ್ ಉದ್ಯೋಗಿಗಳು ಗಾಬರಿ ಆಗೋದು ಸಹಜ ನನ್ನ ಪರ್ಫಾರ್ಮೆನ್ಸ್ ಚೆನ್ನಾಗಿಲ್ವಾ ನನ್ನನ್ನ ಕೆಲಸದಿಂದ ತೆಗಿತಾರ ಅನ್ನೋ ಭಯ ಕಾಡಬಹುದು.
ಕಾಗ್ನಿಸೆಂಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ ಕಂಪನಿಯ ವಕ್ತಾರರು ಹೇಳುವ ಪ್ರಕಾರ ಈ ಟೂಲ್ ಅಳವಡಿಕೆ ಕೇವಲ ಕ್ಲೈಂಟ್ ಪ್ರೊಸೆಸ್ ಮತ್ತು ಸಮಯದ ಮ್ಯಾನೇಜ್ಮೆಂಟ್ ಅರ್ಥ ಮಾಡಿಕೊಳ್ಳೋದಕ್ಕೆ ಮಾತ್ರ ಇದನ್ನ ಬಳಸಿಕೊಂಡು ಯಾವುದೇ ಉದ್ಯೋಗಿಯ ವೈಯಕ್ತಿಕ ಪರ್ಫಾರ್ಮೆನ್ಸ್ ಅಳಿಯೋದಿಲ್ಲ ಅಥವಾ ಅದರ ಆಧಾರದ ಮೇಲೆ ಕೆಲಸದಿಂದ ತೆಗೆಯಲ್ಲ ಅಂತ ಸ್ಪಷ್ಟಪಡಿಸಿದೆ ಅಷ್ಟೇ ಅಲ್ಲವಿಪ್ರೋ ಸೇರಿದಂತೆ ಅನೇಕ ಐಟಿ ಕಂಪನಿಗಳಲ್ಲಿ ಈ ಪ್ರೋಹಾನ್ಸ್ ಟೂಲ್ ಈಗಾಗಲೇ ಬಳಕೆಯಲ್ಲಿದೆ ಇದೊಂದು ಕಾಮನ್ ಇಂಡಸ್ಟ್ರಿ ಪ್ರಾಕ್ಟೀಸ್ ಅಷ್ಟೇ ಅಂತ ಕಂಪನಿ ಸಮರ್ಥಿಸಿಕೊಂಡಿದೆ ಒಟ್ಟಿನಲ್ಲಿ ವರ್ಕ್ ಫ್ರಮ್ ಹೋಮ್ ಮತ್ತು ಹೈಬ್ರಿಡ್ ಮಾಡೆಲ್ ಬಂದಮೇಲೆ ಕಂಪನಿಗಳು ಪ್ರೊಡಕ್ಟಿವಿಟಿ ಹೆಚ್ಚಿಸೋಕೆ ಮೈಕ್ರೋ ಟ್ರಾಕಿಂಗ್ ಮೊರೆ ಹೋಗ್ತಾ ಇರೋದು ಸುಳ್ಳಲ್ಲ ಐದು ನಿಮಿಷ ಸುಮ್ಮನೆ ಕೂತ್ರು ಐಡಲ್ ಅಂತ ತೋರಿಸೋ ಈ ಟೆಕ್ನಾಲಜಿ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚಿಸುತ್ತಾ ಅಥವಾ ಕೆಲಸದ ಶಿಸ್ತನ್ನ ತರುತ್ತಾ ಅನ್ನೋದನ್ನ ಕಾದು ನೋಡಬೇಕು.
ಜಾಗತಿಕ ತಂತ್ರಜ್ಞಾನ ಸಂಸ್ಥೆ Cognizant ತಮ್ಮ IT ಸಿಬ್ಬಂದಿ ಮೇಲಿನ ವೀಕ್ಷಣಾ ನಿಯಂತ್ರಣವನ್ನು ಹೆಚ್ಚಿಸಿದೆ. ಹೊಸ ನೀತಿಗಳ ಪ್ರಕಾರ, ಕಂಪನಿಯ ಲ್ಯಾಪ್‌ಟಾಪ್‌ಗಳು, ಸಾಫ್ಟ್‌ವೇರ್ ಬಳಕೆ ಮತ್ತು ಆನ್‌ಲೈನ್ ಕ್ರಿಯೆಗಳು ಕಂಪನಿಯ ಹಸ್ತಕ್ಷೇಪದಲ್ಲಿ ಇರಲಿದೆ. ಈ ನಿಯಂತ್ರಣ ಕ್ರಮವು ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಡೇಟಾ ಸುರಕ್ಷತೆಗೆ ಒಗ್ಗಟ್ಟನ್ನು ತರುವ ಉದ್ದೇಶದಲ್ಲಿದ್ದರೂ, ಹಲವರಿಗೆ ಒತ್ತಡ ಮತ್ತು ಆತಂಕವನ್ನು ಉಂಟುಮಾಡಿದೆ.
ಕೆಲವು IT ಉದ್ಯೋಗಿಗಳು ಈ ನಿಯಂತ್ರಣ ಕ್ರಮವು ಗೌಪ್ಯತೆ ಲಂಘನೆ ಮತ್ತು ಕೆಲಸದ ಸ್ವಾತಂತ್ರ್ಯದಲ್ಲಿ ಕಡಿತ ತರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. Cognizant ಸಂಸ್ಥೆಯು ಈ ಕ್ರಮವನ್ನು “ಸುರಕ್ಷಿತ, ಪರಿಣಾಮಕಾರಿ ಮತ್ತು ನಿರಂತರ ಕಾರ್ಯಾಚರಣೆಗೆ ಅಗತ್ಯ” ಎಂದು ವಿವರಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಈ ರೀತಿಯ ನಿಯಂತ್ರಣಗಳು ಹೆಚ್ಚುತ್ತಾ ಇರುವ ಸಂದರ್ಭದಲ್ಲಿ, ಉದ್ಯೋಗಿಗಳ ಮನೋಭಾವ ಮತ್ತು ಕೆಲಸದ ಸಂಸ್ಕೃತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.


