ನಿಮ್ಮ ಫೋನ್ ನಂಬರ್ ನಿಮ್ಮ ಮನೆ ಅಡ್ರೆಸ್ ನೀವು ಕೊಟ್ಟ ಆಧಾರ್ ಫೋಟೋ ಎಲ್ಲ ಈಗ ಇಂಟರ್ನೆಟ್ ನಲ್ಲಿ ಸಾರ್ವಜನಿಕವಾಗಿದೆ ಹೌದು ವೆಬ್ಸೈಟ್ ಒಂದು ಲಿಟರಲಿ ಭಾರತದ ಕೋಟ್ಯಾಂತರ ಜನರ ಜಾತಕ ಓಪನ್ ಮಾಡಿದೆ ಅದು ಕೂಡಗೂಗಲ್ ನಂತ ಬಹಿರಂಗ ವೆಬ್ಸೈಟ್ನಲ್ಲಿ ಜಸ್ಟ್ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿದ್ರೆ ಸಾಕು ಇಡೀ ನಿಮ್ಮ ಪರ್ಸನಲ್ ಮಾಹಿತಿ ಓಪನ್ ಆಗಿ ಲಭ್ಯ ಆಗ್ತಿದೆ ನೆಟ್ವರ್ಕ್ ಆಪರೇಟರ್ಗಳ ಹತ್ತಿರ ಸುರಕ್ಷಿತ ಆಗಿರಬೇಕಾಗಿದ್ದ ನಿಮ್ಮ ಮಾಹಿತಿ ಇಂಟರ್ನೆಟ್ನಲ್ಲಿ ಪ್ರಸಾದದ ತರಹ ಹಂಚಿಕೆ ಆಗ್ತಿದೆ ಹಾಗಿದ್ರೆ ಯಾವುದು ಈ ವೆಬ್ಸೈಟ್ ನಿಮ್ಮ ಡಾಟಾ ಲೀಕ್ ಆಗಿದ್ದು ಹೇಗೆ ಇದರ ಹಿಂದೆ ಯಾರಿದ್ದಾರೆ ಸರ್ಕಾರ ಯಾಕೆ ಏನು ಮಾಡ್ತಿಲ್ಲ ಎಲ್ಲವನ್ನ ವಿವರವಾಗಿ ನೋಡೋಣ.
ಸೋರಿಗೆ ಆಯ್ತು ಪರ್ಸನಲ್ ಮಾಹಿತಿ ಇದೆಲ್ಲ ಶುರುವಾಗಿದ್ದು ಒಂದು ವಾರದ ಹಿಂದೆ ಇಂಟರ್ನೆಟ್ ನಲ್ಲಿ ಸೈಲೆಂಟ್ಆಗಿ ಪ್ರಾಕ್ಸಿ ಅರ್ಥ್ ಅನ್ನೋ ವೆಬ್ಸೈಟ್ ಒಂದು ಲಾಂಚ್ ಆಯ್ತು ಈ ವೆಬ್ಸೈಟ್ದು ಒಂದೇ ಕೆಲಸ ಇದರಲ್ಲಿ ನೀವು ಯಾರ ನಂಬರ್ ಹಾಕಿದ್ರು ಆ ವ್ಯಕ್ತಿಯ ಪೂರ್ತಿ ಡೇಟಾ ನಿಮ್ಮ ಮುಂದೆ ಬರ್ತಿತ್ತು ಡೇಟಾ ಅಂದ್ರೆ ಸಾಮಾನ್ಯ ಡೇಟಾ ಅಲ್ಲ ಸೆಲ್ ಟವರ್ ಮಾಹಿತಿ ಆಧರಿಸಿ ಕೆಲವರ ಲೈವ್ ಲೊಕೇಶನ್ ಕೂಡ ಇದರಲ್ಲಿ ಗೊತ್ತಾಗಿದೆ ಯಾವ ಸಿಮ್ ಯೂಸ್ ಮಾಡ್ತಿದ್ದಾರೆ ಆಧಾರ್ ಕಾರ್ಡ್ ನಂಬರ್ ಏನು ಆಲ್ಟರ್ನೇಟ್ ನಂಬರ್ ಏನು ಕೊಟ್ಟಿದ್ದಾರೆ ಅವರ ತಂದೆ ಹೆಸರೇನು ಆಧಾರ್ ಕಾರ್ಡ್ ನಲ್ಲಿರೋ ವಿಳಾಸ ಎಲ್ಲಿದು ಮನೆ ನಂಬರ್ ಇಮೇಲ್ ಐಡಿ ಹೀಗೆ ಎಲ್ಲಾ ಸೂಕ್ಷ್ಮ ಮಾಹಿತಿನ ಒಬ್ಬ ವ್ಯಕ್ತಿಯ ಫುಲ್ ಡಿಜಿಟಲ್ ಐಡೆಂಟಿಟಿನ ಈ ವೆಬ್ಸೈಟ್ ಬಹಿರಂಗಪಡಿಸಿದೆ ಅಷ್ಟೇ ಅಲ್ಲ ಇದರಲ್ಲಿ ಅಡ್ರೆಸ್ ಗೆಗೂಗಲ್ ಮ್ಯಾಪ್ ಲಿಂಕ್ ಕೂಡ ನೀಡಲಾಗಿತ್ತು ಅದರ ಮೇಲೆ ಕ್ಲಿಕ್ ಮಾಡಿದ್ರೆ ನೇರ ನಿಮ್ಮ ಲೊಕೇಶನ್ ಟ್ರೇಸ್ ಆಗ್ತಿತ್ತು ಬಹಳ ಪ್ರಕರಣಗಳಲ್ಲಿ ಸಿಮ್ ಖರೀದಿ ಮಾಡುವಾಗ ನೀಡಿದ ಅಡ್ರೆಸ್ ಆಧಾರ್ ಐಡಿಯಲ್ಲಿ ದಾಖಲಾದ ವಿಳಾಸ ಕಂಡುಬಂದಿದೆ ಆದರೆ ಕೆಲ ಕೇಸ್ಗಳಲ್ಲಿ ರೀಸೆಂಟ್ಆಗಿ ವಿಸಿಟ್ ಮಾಡಿದ ಜಾಗಗಳನ್ನ ಕೂಡ ತೋರಿಸಿದೆ ಒಬ್ಬರಿಬ್ಬರು ಅಲ್ಲ ಈತರ ಲಕ್ಷ ಲಕ್ಷಾಂತರ ಜನರ ಮಾಹಿತಿ ಸೋರಿಕೆಯಾಗಿದೆ ಅಲ್ದೆ ಇದರಲ್ಲಿ ಎಷ್ಟು ಹೆಚ್ಚು ಮಾಹಿತಿ ಇರ್ತಿತ್ತೋ ಅಷ್ಟು ಹೆಚ್ಚು ರೇಟಿಂಗ್ಸ್ ತೋರಿಸ್ತಿತ್ತು ವೀಕ್ ಡೇಟಾ ಸ್ಟ್ರಾಂಗ್ ಡೇಟಾ ಅಂತ ಪರ್ಸನಲ್ ಮಾಹಿತಿಗೆ ಸಿಗ್ನಲ್ ನೀಡಲಾಗಿತ್ತು ಯಾರು ಮಾಡಿದ್ದು.
ಇಂತ ಭಯಾನಕ ಪ್ರಾಕ್ಸಿ ಅರ್ಥ್ ವೆಬ್ಸೈಟ್ ಹಲವು ತಿಂಗಳಿಂದ ಚಾಲ್ತಿಯಲ್ಲಿದೆ ಆದರೆ ಇತ್ತೀಚಿಗೆ ಎಕ್ಸ್ ನಲ್ಲಿ ಮಾಹಿತಿ ಸೋರಿಕೆ ಆಗ್ತಿರೋದರ ಬಗ್ಗೆ ಪೋಸ್ಟ್ ಹಾಕಿದ್ರು ಆಗ ಜನರ ಗಮನಕ್ಕೆ ಬಂದಿದೆ ಈ ವೇಳೆ ಇಂಡಿಯಾ ಟುಡೇ ಮಾಧ್ಯಮ ಈ ವೆಬ್ಸೈಟ್ ಹಿಂದೆ ಯಾರಿದ್ದಾರೆ ಅಂತ ಟ್ರೇಸ್ ಮಾಡೋ ಪ್ರಯತ್ನ ಮಾಡಿತ್ತು ಆಗ ಬಿಹಾರದ ರಾಕೇಶ್ ಅನ್ನೋ ವ್ಯಕ್ತಿ ಇಂತ ಘಾತಕ ಕೆಲಸ ಮಾಡಿದ್ದಾನೆ ಅಂತ ಗೊತ್ತಾಗಿದೆ. ಇನ್ಫ್ಯಾಕ್ಟ್ ರಾಕೇಶ್ ಅನ್ನೋದು ಈತನ ಅಸಲಿ ಹೆಸರು ಅನ್ನೋದಕ್ಕೆ ಸ್ಪಷ್ಟತೆ ಇಲ್ಲ. ಆದರೆ ವೆಬ್ಸೈಟ್ನ ಸೋರ್ಸ್ ಕೋಡ್ ಚೆಕ್ ಮಾಡಿದಾಗ ಆತನ ಟೆಲಿಗ್ರಾಮ ಚಾನೆಲ್ ಮತ್ತು ರಾಕೇಶ್ ಅನ್ನೋ ಎಕ್ಸ್ ಅಕೌಂಟ್ ಪತ್ತೆಯಾಗಿದೆ. ಈತ ಒಬ್ಬ ಎಡಿಟರ್ ಮತ್ತು ಪ್ರೋಗ್ರಾಮರ್ ಆಗಿದ್ದು ಬಿಹಾರದಿಂದ ವೆಬ್ಸೈಟ್ ನ ರನ್ ಮಾಡ್ತಿದ್ದ ಎನ್ನಲಾಗಿದೆ. ಅಲ್ದೆ ಈತನನ್ನ ಕಾಂಟ್ಯಾಕ್ಟ್ ಮಾಡಿದಾಗ ಈ ಸೋ ಕಾಲ್ಡ್ ರಾಕೇಶ್ ತನ್ನ ಕೆಲಸ ಸಮರ್ಥನೆ ಕೂಡ ಮಾಡಿಕೊಂಡಿದ್ದಾನೆ. ನಾನು ಯಾವುದೇ ತಪ್ಪು ಕೆಲಸ ಮಾಡ್ತಿಲ್ಲ. ಯಾವುದನ್ನು ಹ್ಯಾಕ್ ಮಾಡ್ತಿಲ್ಲ. ಆಲ್ರೆಡಿ ಇಂಟರ್ನೆಟ್ ನಲ್ಲಿ ಲಭ್ಯವಿರೋ ಡೇಟಾನ ನನ್ನ ವೆಬ್ಸೈಟ್ನಲ್ಲಿ ಹಾಕಿದ್ದೇನೆ ಅಂದಿದ್ದಾನೆ. ಜೊತೆಗೆ ನನ್ನ ಪ್ರಾಕ್ಸಿ ಅರ್ಥ್ ವೆಬ್ಸೈಟ್ ಇಂದ ಲಾಭ ಇಲ್ಲ. ಅದರ ಮೂಲಕ ನನ್ನ ಬೇರೆ ವೆಬ್ಸೈಟ್ ಹಾಗೂ ಪ್ರಾಡಕ್ಟ್ ಗಳ ಪ್ರಚಾರ ಮಾಡ್ತೀನಿ. ಸರ್ಕಾರ ಈ ವೆಬ್ಸೈಟ್ ಬಂದ್ ಮಾಡಿಸಿದ್ರೆ ಬೇರೆ ವೆಬ್ಸೈಟ್ ಓಪನ್ ಮಾಡೋದು ನನಗೆ ದೊಡ್ಡ ವಿಷಯ ಅಲ್ಲ ಅಂತ ಉಡಾಫೆಯಲ್ಲಿ ಉತ್ತರ ನೀಡಿದ್ದಾನೆ. ಹಾಗಿದ್ರೆ ಪ್ರಾಕ್ಸಿ ಅರ್ತ್ ಗೆ ಡಾಟಾ ಸಿಕ್ಕಿದ್ದು ಎಲ್ಲಿಂದ ಸ್ನೇಹಿತರೆ ಆ ಸೈಬರ್ ಪಾತಿಕೆ ಮಾತು ಉಡಾಫೆಯಿಂದ ಕೂಡಿದೆ ಆದರೂ ಆತ ಹೇಳ್ತಿರೋದು ಮೇಲ್ನೋಟಕ್ಕೆ ಸರಿ ಇದೆ. ಇಷ್ಟು ದೊಡ್ಡ ಮಾಹಿತಿನ ಆತ ಹ್ಯಾಕ್ ಮಾಡಿ ಕದ್ದಿಲ್ಲ.
ಬದಲಿಗೆ ನಾವೇ ನಮ್ಮ ಕೈಯಾರ ನೀಡಿದ್ದೇವೆ. ಹೇಗೆ ಅಂದ್ರೆ ನೀವು ಸಿಮ್ ತಗೊಳ್ಳುವಾಗ ನಿಮ್ಮ ಆಪರೇಟರ್ ಏನೇನು ಕಲೆಕ್ಟ್ ಮಾಡ್ತಾರೆ ಆಧಾರ್, ಅಡ್ರೆಸ್ ಪ್ರೂಫ್, ಫೋಟೋ, ಫಿಂಗರ್ ಪ್ರಿಂಟ್, ಫೋನ್ ನಂಬರ್, ಈಕೆವೈಸಿ ಡೇಟಾನೇ ಈಗ ಲೀಕ್ ಆಗಿದೆ. 2024 ರಲ್ಲಿ ಅತೀ ದೊಡ್ಡ ಟೆಲಿಕಾಂ ಡಾಟಾ ಲೀಕ್ ಬೆಳಕಿಗೆ ಬಂದಿತ್ತು. ಬರೋಬರಿ 75 ಕೋಟಿ ಭಾರತೀಯ ಟೆಲಿಕಾಂ ಯೂಸರ್ಗಳ ಮಾಹಿತಿ ಸೋರಿಕೆಯಾಗಿತ್ತು. ಅಂದ್ರೆ ಭಾರತದ ಜನಸಂಖ್ಯೆಯ 85% ಜನರ ಡೇಟಾ ಇದರಲ್ಲಿತ್ತು. ಸುಮಾರು 600 GB ಕಂಪ್ರೆಸ್ಡ್ ಹಾಗೂ 1.8B ಅನ್ಕಂಪ್ರೆಸ್ಡ್ ಡೇಟಾ ಕಳ್ಳತನಾಗಿತ್ತು. ಅಷ್ಟೇ ಅಲ್ಲ ಇಂತಹ ಸೂಕ್ಷ್ಮ ಮಾಹಿತಿನ ಸೈಬೋ ಡೆವಿಲ್ ಅನ್ನೋ ಖಾತೆ ಕೇವಲ 2.5 ಲಕ್ಷ ರೂಪಾಯ ಚಿಲ್ಲರೆ ಕಾಸಿಗೆ ಮಾರಾಟ ಮಾಡಿದ್ದ. ಇದೊಂದೇ ಘಟನೆ ಅಲ್ಲ. ಕಳೆದ ವರ್ಷ ಜುಲೈನಲ್ಲಿ ಕೈಬರ್ ಫ್ಯಾಂಟಮ ಅನ್ನೋ ಹ್ಯಾಕರ್ಬಿsಎನ್ಎಲ್ ಸರ್ವರ್ ಗಳನ್ನ ಹ್ಯಾಕ್ ಮಾಡಿದ ಆಪರೇಷನಲ್ ಡಾಟಾ ಐಎಂಎಸ್ಐ ನಂಬರ್ ಸಿಮ್ ಕಾರ್ಡ್ ಡೀಟೇಲ್ ಸೆಕ್ಯೂರಿಟಿ ಕೀಗಳನ್ನ ಕದ್ದಿದ್ದ ಸರ್ವರ್ಗೆ ಕನ್ನ ಹಾಕಿ 278gb ಸೂಕ್ಷ್ಮ ಮಾಹಿತಿಯನ್ನ ಎಗರಿಸಿದ್ದ ಆದರೆ ಈತನ ಕಥೆ ಇಲ್ಲಿಗೆ ಮುಗಿದಿರಲಿಲ್ಲ ನವೆಂಬರ್ ನಲ್ಲಿ ಇದೇ ಹ್ಯಾಕರ್ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಕಾಲ್ ಹಿಸ್ಟರಿಯನ್ನ ಲೀಕ್ ಮಾಡಿದ್ದ ಅಮೆರಿಕಾ ಅಧ್ಯಕ್ಷಯ ಎಲೆಕ್ಷನ್ಗೂ ಕೆಲವೇ ದಿನ ಮೊದಲು ಈತರ ಮಾಡಿದ ಮುಂದೆ ತನಿಕೆ ವೇಳೆ ಕ್ಯಾಮರೂನ್ ಜಾನ್ ಅನ್ನು ಅಮೆರಿಕ ಮಾಜಿ ಸೈನಿಕ ಕೈಬರ್ ಫ್ಯಾಂಟಮ ಅನ್ನು ಗುಪ್ತ ಹೆಸರಲ್ಲಿ ಈ ದುಷ್ಕೃತ್ಯ ಎಸಕ್ತಿದ್ದ ಅಂತ ಗೊತ್ತಾಗಿತ್ತು. ಹೀಗೆ 2022 ರಲ್ಲಿ 30 ಕೋಟಿ ವಡಾಫೋನ್ ಗ್ರಾಹಕರ ಡೇಟಾ 2024 ರಲ್ಲಿ 37 ಕೋಟಿ ಏರ್ಟೆಲ್ ಗ್ರಾಹಕರ ಡೇಟಾ ಹೀಗೆ ಪ್ರತಿವರ್ಷ ಕೋಟ್ಯಾಂತರ ಭಾರತೀಯರ ಡೇಟಾ ಕಳುವಾಗ್ತಾನೆ ಇದೆ. ಇದನ್ನ ಈ ಪ್ರಾಕ್ಸಿ ಅರ್ಥ್ ಸೈಬರ್ ಗಳ ತನ್ನ ವೆಬ್ಸೈಟ್ನಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಸದ್ಯಕ್ಕೆ ನೇರವಾಗಿ ಸರ್ಚ್ ಮಾಡಿದಾಗ ಈ ವೆಬ್ಸೈಟ್ ಓಪನ್ ಆಗ್ತಿಲ್ಲ.
ಅಶ್ಲೀಲ ವೆಬ್ಸೈಟ್ ಸೇರಿದಂತೆ ಬೇರೆ ಕಡೆ ರೂಟ್ ಆಗ್ತಿದೆ. ಆದರೆ ವಿಪಿಎನ್ ಬಳಸಿದಾಗ ಮತ್ತೆ ಯಥಾವತ್ತ ಜನರ ಮಾಹಿತಿ ಪ್ರಕಟವಾಗ್ತಿದೆ. ಯಾಕಿದು ಡೇಂಜರಸ್ ಅನೇಕರಿಗೆ ಕೇವಲ ಮನೆ ಅಡ್ರೆಸ್ ಫೋನ್ ನಂಬರ್ ಅಲ್ವಾ ಅದು ಸೋರಿಕೆ ಆದ್ರೆ ಏನು ಮಹಾ ಆಗುತ್ತೆ ಬಿಡಿ ಅನ್ನಿಸಬಹುದು. ಆದರೆ ಸ್ನೇಹಿತರೆ ಕೇವಲ ಇಷ್ಟು ಚಿಕ್ಕ ಮಾಹಿತಿಯಿಂದ ಏನೆಲ್ಲ ಮಾಡಬಹುದು ಅಂತ ನೀವು ಊಹೆನು ಮಾಡಿರಲ್ಲ. ಅಷ್ಟು ಭಯಾನಕವಾಗಿದೆ ಕರಾಳ ಸೈಬರ್ ಸಾಮ್ರಾಜ್ಯ. ನಿಮ್ಮ ಆಧಾರ್ ನಂಬರ್ ಹಾಗೂ ಫೋನ್ ನಂಬರ್ ನಿಂದ ಬ್ಯಾಂಕ್ ಅಕೌಂಟ್ ಚೆಕ್ ಮಾಡಬಹುದು. ಫಿಶಿಂಗ್ ಟೆಕ್ನಿಕ್ ಯೂಸ್ ಮಾಡಿ ನಿಮ್ಮ ಓಟಿಪಿ ಕದ್ದು ಬ್ಯಾಂಕಲ್ಲಿರೋ ದುಡ್ಡು ಎಗರಿಸಬಹುದು. ಆಧಾರ್ ನಂಬರ್ ಇಂದ ನಿಮ್ಮ ಖಜಾನೆಗೆ ಕೈ ಹಾಕಬಹುದು. ದೇಶದಲ್ಲಿ 11% ಹಣದ ವಂಚನೆ ನಡೆಯೋದು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಮೂಲಕ. ಅಲ್ದೆ ನಿಮ್ಮ ಆಧಾರ್ ನಂಬರ್ ಬಳಸಿ ನಕಲಿ ಸಿಮ್ ಖರೀದಿಸಬಹುದು. ಮುಂದೆ ಆ ನಂಬರ್ ದುಷ್ಕೃತ್ಯಕ್ಕೆ ಕೂಡ ಬಳಕೆ ಆಗಬಹುದು. ಇತ್ತೀಚಿಗೆ ನಡೆದಿದ್ದ ದೆಹಲಿ ಉಗ್ರದಾಳಿಯಲ್ಲೂ ಆರೋಪಿಗಳು ಫೇಕ್ ಆಧಾರ್ ಬಳಸಿ ಸಿಮ್ ಖರೀದಿ ಮಾಡಿದ್ರು. ಈಗಂತೂ ಆಧಾರ್ ಕಾರ್ಡ್, ಬ್ಯಾಂಕ್ ಎಜುಕೇಶನ್ ಸರ್ಕಾರಿ ಸೇವೆ ಬಿಸಿನೆಸ್ ಎಲ್ಲಾ ಕಡೆ ಮ್ಯಾಂಡೇಟರಿ ಆಗಿದೆ. ಹೀಗಾಗಿ ಯಾವುದೇ ರೀತಿಯ ಸೈಬರ್ ಕಳತನ ನಡೆಸೋಕೆ ನಿಮ್ಮ ಆಧಾರೆ ಕೇಳಿಕೈ ಆಗುತ್ತೆ. ದೇಶದಲ್ಲಿ ಪ್ರತಿ ವರ್ಷ ಈ ಸೈಬರ್ ಕ್ರೈಮ್ಗಳ ಸಂಖ್ಯೆ ಜಾಸ್ತಿ ಆಗ್ತಾನೆ ಇದೆ. 2021 ರಲ್ಲಿ 52,000 ಕೇಸುಗಳು ದಾಖಲಾದರೆ 2023 ರಲ್ಲಿ ಈ ಸಂಖ್ಯೆ 86,000ಕ್ಕೆ ಏರಿಕೆಯಾಗಿದೆ. ಹೀಗಾಗಿ ಈಗ ಬೆಳಕಿಗೆ ಬಂದಿರೋ ಪ್ರಾಕ್ಸಿ ಅರ್ಥ್ ವಿಚಿತ್ರ ತಲೆನೋವು ತಂದಿದೆ. ಈವರೆಗೆ ದೇಶದಲ್ಲಿ ಹಲವಾರು ಡಾಟಾ ಲೀಕ್ ಆಗಿದೆ.
ಆ ಡಾಟಾ ಎಲ್ಲ ಡಾರ್ಕ್ ವೆಬ್ ಹಾಗೂ ಡೀಪ್ ವೆಬ್ ನಲ್ಲಿ ಹರಿದಾಡ್ತಿದ್ವು ಆದರೆ ಈ ಪ್ರಾಕ್ಸಿ ಅರ್ಥ್ ಸರ್ಫೇಸ್ ವೆಬ್ ಅಂದ್ರೆ ಗೂಗಲ್ ನಲ್ಲಿ ಹುಡುಕಿದ್ರು ಸಿಗೋ ಹಾಗೆಾಗಿದೆ ಹೀಗಾಗಿ ಇದೊಂದು ದೊಡ್ಡ ಪ್ರೈವೆಸಿ ಆಪತ್ತು ಸಿಸಿಟಿವಿ ವಿಡಿಯೋನು ಮಾರಾಟ ಸ್ನೇಹಿತರೆ ಡೇಟಾ ಲೀಕ್ ಅಂದ್ರೆ ಕೇವಲ ನಿಮ್ಮ ಸಿಮ್ ಡೇಟಾ ಮಾತ್ರ ಅಲ್ಲ ನಿಮ್ಮ ಸಿಸಿಟಿವಿ ವಿಡಿಯೋ ಕೂಡ ಲೀಕ್ ಆಗ್ತಿದೆ. ಗುಜರಾತ್ನ ಆಸ್ಪತ್ರೆ ಒಂದರಲ್ಲಿ ಗರ್ಭಿಣಿ ಹಾಗೂ ಬಾಣಂತಿ ಸ್ತ್ರೀಯರು ಚಿಕಿತ್ಸೆಗೆ ಒಳಗಾಗುವ ದೃಶ್ಯಗಳು ಟೆಲಿಗ್ರಾಮ ನಲ್ಲಿ ಹರಿದಾಡುತ್ತಿತ್ತು. ಗುಜರಾತ್ ಪೊಲೀಸರು ಈ ಟೆಲಿಗ್ರಾಮ ಅಕೌಂಟ್ ಜಾಡು ಹಿಡಿದು ಹೋದಾಗ ಬಯಲಾಗಿದ್ದು ಅಕ್ಷರಶಹ ಬೆಚ್ಚಿಬೀಳೋ ಸಂಗತಿ. ಆಸ್ಪತ್ರೆಯಲ್ಲಿ ಹಾಕಿದ ಸಿಸಿಟಿವಿ ಯಿಂದ 50ಸಾ ದೃಶ್ಯಗಳನ್ನ ಟೆಲಿಗ್ರಾಂ ನಲ್ಲಿ ಮಾರಾಟ ಮಾಡಲಾಗಿತ್ತು. ಜನರ ಭದ್ರತೆಗಾಗಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಜನರ ಪ್ರೈವೆಸಿಯನ್ನ ಕಸ್ತಿತ್ತು. ಇದೇ ರೀತಿ ಕೇರಳದ ತಿರುವನಂತಪುರಂನಲ್ಲಿ ಥಿಯೇಟರ್ ಸಿಸಿಟಿವಿ ಫುಟೇಜ್ ಲೀಕ್ ಆಗಿತ್ತು. ಪ್ರೇಮಿಗಳು ಯುವ ದಂಪತಿಗಳ ದೃಶ್ಯಗಳು ಅಶ್ಲೀಲ ವೆಬ್ಸೈಟ್ ಗಳಲ್ಲಿ ಪತ್ತಿಯಾಗಿತ್ತು. ಇದು ದೇಶದ ಸಮಸ್ಯೆ ಆದರೆ ಸೌತ್ ಕೊರಿಯಾದಲ್ಲೂ ಇದೇ ತರ ಆಗ್ತಿದೆ. ಕೊರಿಯಾ ಪೊಲೀಸರು ನಾಲ್ಕು ಆರೋಪಿಗಳನ್ನ ಅರೆಸ್ಟ್ ಮಾಡಿದ್ದು.
ಈ ಆರೋಪಿಗಳು 1.2 ಎ ಲಕ್ಷ ಸಿಸಿಟಿವಿ ಗಳನ್ನ ಹ್ಯಾಕ್ ಮಾಡಿ ಜನರ ಖಾಸಗಿ ಸಂದರ್ಭಗಳನ್ನ ಯೂಸ್ ಮಾಡಿ ಲೈಂಗಿಕ ಕಿರುಕುಳ ಕೊಡ್ತಿದ್ರು ಜೊತೆಗೆ ಜನರ ಖಾಸಗಿ ದೃಶ್ಯಗಳನ್ನ ಕಟ್ ಮಾಡಿ ಅದನ್ನ ವಿದೇಶಿ ವೆಬ್ಸೈಟ್ ಗಳಲ್ಲಿ ಮಾರ್ತಿದ್ರು ಪೊಲೀಸರು ನೀಡಿರೋ ಮಾಹಿತಿ ಪ್ರಕಾರ ಆರೋಪಿಗಳು ಐಪಿ ಕ್ಯಾಮೆರಾಗಳನ್ನ ಟಾರ್ಗೆಟ್ ಮಾಡಿ ಮನೆ ಗೈನಕಾಲಜಿ ಕ್ಲಿನಿಕ್ ಪಬ್ ಫಿಟ್ನೆಸ್ ಸೆಂಟರ್ ಗಳ ದೃಶ್ಯಗಳನ್ನ ಕದ್ದು ಅದರಿಂದ ಲಾಭ ಮಾಡ್ಕೊತಿದ್ರು ಇದೆಲ್ಲ ನೋಡಿದ್ರೆ ಜನರ ಡೇಟಾಗೆ ಖಾಸಗಿತನಕ್ಕೆ ಯಾವುದೇ ಸುರಕ್ಷತೆ ಇಲ್ವಾ ಅನ್ನೋ ಪ್ರಶ್ನೆ ಬರುತ್ತೆ.ಅಷ್ಟು ದೊಡ್ಡ ಸಿಮ್ ಕೆವೈಸಿ ಡೇಟಾ ಲೀಕ್ ಆಗಿದ್ರು ಆಧಾರ್ ಮಿಸ್ಯೂಸ್ ಆಗ್ತಿದ್ರು ಸಿಸಿಟಿವಿ ಫುಟೇಜ್ ಕೂಡ ಹಸಿಬಿಸಿ ವಿಡಿಯೋ ಆಗಿ ಸೇಲ್ ಆಗ್ತಿದ್ರು ಯಾರು ಕೂಡ ಜವಾಬ್ದಾರಿ ತಗೊಳ್ತಿಲ್ಲ ಸರ್ಕಾರ ಆ ಕ್ಷಣಕ್ಕೆ ತನಿಕೆ ಅಂತ ಹೇಳಿ ಸುಮ್ಮನಾಗ್ತಿದೆ ಕಂಪನಿಗಳು ಡೇಟಾ ಬ್ರೀಚ್ ಆದಾಗೊಮ್ಮೆ ಸಾರಿ ಅಂತ ಮಕ್ಕಳ ಹಾಗೆ ಕ್ಷಮೆ ಕೇಳಿ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿವೆ ಜನ ಮಾತ್ರ ಇದ್ಯಾವುದರ ಅರಿವೇ ಇಲ್ಲದೆ ಓಡಾಡುತ್ತಿದ್ದಾರೆ ಆದರೆ ಸ್ನೇಹಿತರೆ ಆಧುನಿಕ ಯುಗದಲ್ಲಿ ನಿಮ್ಮ ಡೇಟಾನೇ ನಿಮ್ಮ ಆಸ್ತಿ ಒಂದು ಫೋನ್ ನಂಬರ್ ನಿಂದ ನಿಮ್ಮ ಮನೆಗೆ ಕೈ ಹಾಕಬಹುದು ಹೀಗಾಗಿ ಕೂಡಲೇ ಎಲ್ಲರೂ ಹೆಚ್ಚೆತ್ತುಕೊಳ್ಳಬೇಕು ಸರ್ಕಾರ ಕೂಡ ಇದನ್ನ ಸೀರಿಯಸ್ ಆಗಿ ತಗೋಬೇಕು.


