Thursday, December 11, 2025
HomeStartups and Businessಎಲ್ಲಾ ಬ್ರಾಂಡ್‌ಗಳನ್ನು ಮೀರಿಸಿ ಟಾಪ್‌ಗೆ ಏರಿದ Decathlon—ಅದ್ಭುತ ಯಶಸ್ಸಿನ ರಹಸ್ಯವೇನು?

ಎಲ್ಲಾ ಬ್ರಾಂಡ್‌ಗಳನ್ನು ಮೀರಿಸಿ ಟಾಪ್‌ಗೆ ಏರಿದ Decathlon—ಅದ್ಭುತ ಯಶಸ್ಸಿನ ರಹಸ್ಯವೇನು?

ನೀವೇನಾದ್ರೂ ಡೆಕೋತ್ಲನ ಒಂದು ಶಾಪ್ಗೆ ಹೋದ್ರೆ ನಿಮಗೆ ವಿಚಿತ್ರ ಅನುಭವ ಆಗೋದಂತು ಖಂಡಿತ ಯಾಕೆಂದ್ರೆ ನೀವು ಹೋಗಿರೋದು ಅಂಗಡಿಗೋ ಅಥವಾ ಮಾಲ್ಗೋ ಅಥವಾ ಆಟದ ಮೈದಾನಕ್ಕೋ ಎಂಬ ಭಾವನೆ ಬರೋದಂತು ಖಂಡಿತ ಯಾಕೆಂದ್ರೆ ಒಂದು ಕಡೆ ಕೆಲವರು ಫುಟ್ಬಾಲ್ ಅನ್ನ ಆಡ್ತಿರ್ತಾರೆ ಮತ್ತೊಂದು ಕಡೆ ಯಾರೋ ಸೈಕಲ್ ಅನ್ನ ಓಡಿಸ್ತಿರ್ತಾರೆ ಇನ್ನು ಕೆಲವರು ಟೆಂಟ್ ಅನ್ನ ಕಟ್ತಿರ್ತಾರೆ ವಿಚಿತ್ರ ಅಂದ್ರೆ ಯಾರು ಕೂಡ ಇವರನ್ನ ತಡೆಯೋದಿಲ್ಲ ಇದು ಮಾರ್ಕೆಟಿಂಗ್ ಟ್ರಿಕ್ ಅಂತ ಅನ್ನಿಸಬಹುದು ಜನರನ್ನ ಆಕರ್ಷಿಸಲು ಹೊಸ ತಂತ್ರ ಇರಬಹುದು ಆದರೆ ಆ ವಸ್ತುಗಳ ಪ್ರೈಸ್ ಟ್ಯಾಗ್ ನ್ನ ನೋಡಿದಾಗ ನೀವು ನಿಜಕ್ಕೂ ಆಶ್ಚರ್ಯ ಪಡೋದಂತು ಖಂಡಿತ ಯಾಕೆಂದ್ರೆ ನೈಟ್ ನಂತ ದೊಡ್ಡ ಬ್ರಾಂಡ್ ನ ಒಳ್ಳೆ ಗುಣಮಟ್ಟದ ಸಾಧಾರಣ ಟೀ ಶರ್ಟ್ ಗಳನ್ನ 2000ಕ್ಕೆ ಮಾರಾಟ ಮಾಡುತ್ತೆ. ಅದೇ ಗುಣಮಟ್ಟದ ಟೀ ಶರ್ಟ್ ನ್ನ ಇಲ್ಲಿ ಕೇವಲ 400 ರೂಪಾಯಿಗೆ ಮಾರಾಟ ಮಾಡ್ತಾರೆ. ನೀವು ಅಲ್ಲಿರುವಂತ ಸೇಲ್ಸ್ ಮ್ಯಾನ್ ಗಳನ್ನ ನೋಡಿದ್ರೆ ಅವರು ಸಾಮಾನ್ಯ ಮಾರಾಟಗಾರಲ್ಲ ಅವರಲ್ಲಿ ಬಹುತೇಕರು ಅತ್ಲೆಟ್ಗಳು ಡೆಕತಾನ್ ಬಹುತೇಕ ಎಲ್ಲಾ ಸೇಲ್ಸ್ ಮ್ಯಾನ್ಗಳು ಕೂಡ ಯಾವುದೋ ಒಂದು ಕ್ರೀಡೆಗೆ ಸಂಬಂಧಪಟ್ಟವರೇ ಆಗಿರುತ್ತಾರೆ.

ಡೆಕೋತ್ಲನ ಯಾವುದೋ ಚಿಕ್ಕ ಪುಟ್ಟ ಬ್ರಾಂಡ್ ಅಲ್ಲ. ಭಾರತದಲ್ಲಿ ಇದರ ಆದಾಯ ನೈಕ್ ಅಡಿಜ ಮತ್ತೆ ರೇಬಾಕ್ ಈ ಮೂರು ಬ್ರಾಂಡ್ಗಳ ಒಟ್ಟು ಆದಾಯಕ್ಕಿಂತನೂ ಕೂಡ ಅಧಿಕ ಆದಾಯವನ್ನ ಗಳಿಸ್ತಾ ಇದೆ ಹಾಗಾದ್ರೆ ಇಷ್ಟು ದೊಡ್ಡ ಬ್ರಾಂಡೆಡ್ ಸ್ಟೋರ್ ಇಷ್ಟು ಕಡಿಮೆ ದರದಲ್ಲಿ ಹೇಗೆ ವಸ್ತುಗಳನ್ನ ಮಾರಾಟ ಮಾಡ್ತಿದೆ ಡೆಕತ್ಲಾನ್ ನಲ್ಲಿ ಇರುವಂತ ಸೇಲ್ಸ್ ಮ್ಯಾನ್ಗಳ ಬದಲು ಅತ್ತೆಟ್ಟಗಳು ಯಾಕೆ ಕೆಲಸ ಮಾಡ್ತಾ ಇದ್ದಾರೆ ಮತ್ತೆ ಮುಖ್ಯವಾಗಿ ಈ ಡೆಕೋತ್ಲನ ಭಾರತದಲ್ಲಿ ಇಷ್ಟು ಜನಪ್ರಿಯ ಆಗೋದಕ್ಕೆ ಕಾರಣ ಏನು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಮುಂದೆ ತಿಳಿತಾ ಹೋಗೋಣ ಈ ಡಕಾನ್ ಕಥೆ 1970 ರಿಂದ ಶುರುವಾಗುತ್ತೆ ಫ್ರಾನ್ಸ್ನಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ವಾಸ ಮಾಡ್ತಿದ್ದ ಆತನ ಹೆಸರು ಮಿಚೆಲ್ ನೆಕ್ಲರ್ಕ್ ಈ ಮಿಚೆಲ್ ಸ್ವತಃ ಒಬ್ಬ ಉತ್ಸಾಹಿ ಕ್ರೀಡಾ ಪ್ರೇಮಿ ಆತನಿಗೆ ಯಾವಾಗಾದ್ರೂ ಸೈಕ್ಲಿಂಗ್ ಅಥವಾ ಫುಟ್ಬಾಲ್ ಅಭ್ಯಾಸಕ್ಕೆ ಬೇಕಾದಂತ ಬೇಕಾದ್ರೆ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಸುತ್ತಬೇಕಾಗ್ತಿತ್ತು ಒಂದು ಕಡೆ ಶೂಗಳು ಸಿಗ್ತಾ ಇದ್ವು ಮತ್ತೊಂದು ಕಡೆ ಫುಟ್ಬಾಲ್ ಮತ್ತೆ ಇನ್ನು ಆತನಿಗೆ ಬೇಕಾದಂತ ವಸ್ತುಗಳನ್ನು ಹುಡುಕೋದಕ್ಕೆ ಇಡೀ ಸಿಟಿಯನ್ನೇ ಹುಡುಕಬೇಕಾಗಿತ್ತು ಆಗ ಇವನ ಮನಸ್ಸಲ್ಲಿ ಒಂದು ಆಲೋಚನೆ ಬರುತ್ತೆ ಅದೇನಪ್ಪಾ ಅಂದ್ರೆ ಈ ಎಲ್ಲಾ ಕ್ರೀಡಾ ಉತ್ಪನ್ನಗಳು ಕೂಡ ಒಂದೇ ಅಂಗಡಿಯಲ್ಲಿ ಸಿಗುವಂತಿದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತ ಆ ಒಂದು ಯೋಚನೆಯನ್ನೇ ಆತ ತನ್ನ ಗುರಿಯಾಗಿಸಿಕೊಂಡ 1976ರಲ್ಲಿ ಈ ಮಿಚೆಲ್ ತನ್ನ ಕೆಲಸವನ್ನ ಬಿಟ್ಟು ಅವರ ಎಲ್ಲಾ ಉಳಿತಾಯವನ್ನು ಕೂಡ ಹೋಡಿ ಒಂದು ಚಿಕ್ಕ ಕ್ರೀಡಾ ಅಂಗಡಿಯನ್ನ ಶುರು ಮಾಡ್ತಾರೆ.

ಆ ಒಂದು ಅಂಗಡಿಯನ್ನ ಫ್ರಾನ್ಸ್ನ ಲಿಲ್ ನಗರದ ಹತ್ತಿರದ ಪೆಂಗ್ಲೋಸ್ ಎಂಬ ಸ್ಥಳದಲ್ಲಿ ತೆರೆಯಲಾಗುತ್ತೆ ಅಂಗಡಿಗೆ ಡೆಕತ್ಲಾನ್ ಎಂಬ ಹೆಸರನ್ನ ಇಡ್ತಾರೆ ಈ ಒಂದು ಹೆಸರು ಡೆಕಾ ಮತ್ತು ಅತ್ಲಾನ್ ಎಂಬ ಎರಡು ಪದಗಳಿಂದ ಬಂದಂತ ಹೆಸರು ಡೆಕಾ ಅಂದ್ರೆ 10 ಮತ್ತೆ ಅತ್ಲಾನ್ ಅಂದ್ರೆ ಸ್ಪರ್ಧೆ ಇದು ಒಲಂಪಿಕ್ಸ್ನ 10 ಕ್ರೀಡೆಗಳ ಆಟ ಆರಂಭದ ದಿನಗಳು ಅಷ್ಟು ಸುಲಭವಾಗಿರಲಿಲ್ಲ ಅಂಗಡಿ ಚಿಕ್ಕದಾಗಿತ್ತು ವಸ್ತುಗಳ ಸಂಖ್ಯೆ ಕೂಡ ಕಡಿಮೆ ಇತ್ತು ಮತ್ತೆ ಜನರು ಕೂಡ ಹೊಸ ರೀತಿಯ ವಸ್ತುಗಳ ಮೇಲೆ ತಕ್ಷಣ ನಂಬಿಕೆಯನ್ನ ಇಡುತಿರಲಿಲ್ಲ ಆರಂಭಿಕ ದಿನಗಳಲ್ಲಿ ಹೆಚ್ಚು ಉತ್ಪನ್ನಗಳು ಸೈಕ್ಲಿಂಗ್ಗೆ ಸಂಬಂಧಪಟ್ಟವೆ ಯಾಕೆಂದ್ರೆ ಈ ಮಿಚಲ್ ಅವರಿಗೆ ಆ ಒಂದು ಕ್ರೀಡೆ ಮೇಲೆ ಹೆಚ್ಚು ಆಸಕ್ತಿ ಇತ್ತು ಮತ್ತೆ ಅವರಿಗೆ ಈ ಒಂದು ಕ್ರೀಡೆ ಬಗ್ಗೆ ಅನುಭವ ಇತ್ತು ಈ ಮಿಚಲ್ ನಿಧಾನವಾಗಿ ಫುಟ್ಬಾಲ್ ಟೆನ್ನಿಸ್ ಮೀನುಗಾರಿಕೆ ರನ್ನಿಂಗ್ ಈ ರೀತಿ ಮೊದಲಾದಂತ ಕ್ರೀಡೆಗಳ ಸಾಮಾನುಗಳನ್ನು ಕೂಡ ಅಂಗಡಿಯಲ್ಲಿ ಇಡೋದಕ್ಕೆ ಶುರು ಮಾಡ್ತಾರೆ ನಂತರ ಒಂದು ಟರ್ನಿಂಗ್ ಪಾಯಿಂಟ್ ಬರುತ್ತೆ ಅದೇ ಈ ಡೆಕತ್ಲನ್ನಾನ್ ಅನ್ನ ಉಳಿದಂತಹ ಅಂಗಡಿಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿಸಿದಂತ ಕ್ಷಣ ಯಾಕೆಂದ್ರೆ 1986 ರಲ್ಲಿ ಡೆಕತ್ಲಾನ್ ತನ್ನದೇ ಉತ್ಪನ್ನಗಳನ್ನ ಡಿಸೈನ್ ಮಾಡೋದಕ್ಕೆ ಶುರು ಮಾಡಿತ್ತು. ಅಂದ್ರೆ ಈಗ ಡೆಕಥಾನ್ ಬಳಿ ಕೇವಲ ವೈವಿಧ್ಯತೆ ಮಾತ್ರ ಅಲ್ಲ ಬೆಲೆ ಮತ್ತು ಗುಣಮಟ್ಟದ ಮೇಲು ಕೂಡ ಸಂಪೂರ್ಣ ನಿಯಂತ್ರಣ ಇತ್ತು. ಫ್ರಾನ್ಸ್ ನಲ್ಲಿ ಈ ಒಂದು ಮಾದರಿ ಯಶಸ್ವಿಯಾಗಿ ಕೆಲಸ ಮಾಡ್ತಿದ್ದ ಹಾಗೇನೆ ಮಿಚೆಲ್ ಗೆ ಈ ಒಂದು ಯೋಚನೆ ಬರುತ್ತೆ.

ಈ ಒಂದು ಐಡಿಯಾ ಇಲ್ಲಿ ಯಶಸ್ವಿಯಾಗಿ ನಡೆಯಬಹುದಾದರೆ ಇಡೀ ಜಗತ್ತಿನಲ್ಲಿ ಯಾಕೆ ಇದನ್ನ ಶುರು ಮಾಡಬಾರದು ಅಂತ ಅವರು ಯೋಚಿಸುತ್ತಾರೆ. ಇದೇ ಒಂದು ಆಲೋಚನೆಯಿಂದ ಅವರು 1986ರಲ್ಲಿ ತಮ್ಮ ಮೊದಲ ಅಂತರಾಷ್ಟ್ರೀಯ ಅಂಗಡಿಯನ್ನ ಜರ್ಮನಲ್ಲಿ ಶುರು ಮಾಡ್ತಾರೆ. ನಂತರ ನಿಧಾನವಾಗಿ ಯೂರೋಪಿನ ಕೆಲವು ದೇಶಗಳಲ್ಲಿ ಡೆಕತ್ಲಾಂತನನ್ನ ಪಾದಾರ್ಪಣೆಯನ್ನ ಮಾಡುತ್ತೆ. ಪ್ರತಿ ದೇಶಕ್ಕೆ ಹೋಗಿ ಅವರು ಅಲ್ಲಿ ಜನರು ಯಾವ ಕ್ರೀಡೆಯನ್ನ ಹೆಚ್ಚು ಇಷ್ಟ ಪಡುತ್ತಾರೆ ಅಂತ ಗಮನಿಸುತ್ತಾರೆ. ನಂತರ ಅದಕ್ಕೆ ಅನುಗುಣವಾಗಿ ತಮ್ಮ ಮಾದರಿಯನ್ನ ಅಳವಡಿಸಿಕೊಂಡು ಒಂದು ಜಾಗತಿಕ ಕ್ರಾಂತಿಗೆ ಚಾಲನೆಯನ್ನ ಕೊಡ್ತಾರೆ. ಮುಂದಿನ ಕೆಲವು ವರ್ಷಗಳಲ್ಲಿ ಡೆಕೋತ್ಲಾನ್ ದೇಶ ವಿದೇಶಗಳಿಗೆ ಕಾಲಿಡುತ್ತೆ. ಕೋಟ್ಯಾಂತರ ಜನರಿಗೆ ಕ್ರೀಡೆ ಒಂದು ಕನಸಿದ್ದಂತೆ. ನಂತರ ಈ ಡೆಕತ್ಲಾನ್ ಭಾರತಕ್ಕೂ ಕಾಲಿಡಲು ಸಜ್ಜಾಗಿತ್ತು. 2009ರ ಸಮಯದಲ್ಲಿ ಭಾರತದ ಸ್ಪೋರ್ಟ್ಸ್ ರಿಟೇಲ್ ಮಾರುಕಟ್ಟೆ ಸ್ಥಿತಿ ಸ್ವಲ್ಪ ವಿಚಿತ್ರವಾಗಿತ್ತು. ಒಂದುಕಡೆ ನೈಕ್ ಅಡಿಡಾಸ್ ರೀಬಾಕ್ ಮತ್ತು ಉಪಮ ಈ ರೀತಿ ಮೊದಲಾದಂತ ದೊಡ್ಡ ಬ್ರಾಂಡ್ಗಳು ಇದ್ವು ಅವರ ಶೋರೂಮ್ಗಳು ಕೇವಲ ಮೆಟ್ರೋ ನಗರಗಳ ದುಬಾರಿ ಮಾಲ್ಗಳು ಅಥವಾ ಹೈ ಎಂಡ್ ಮಾರ್ಕೆಟ್ ಗಳಲ್ಲಿ ಮಾತ್ರ ಕಾಣಿಸ್ತಿದ್ವು ಮತ್ತೊಂದಡೆ ಲೋಕಲ್ ಸ್ಪೋರ್ಟ್ಸ್ ಅಂಗಡಿಗಳು ಇದ್ವು ಒಬ್ಬ ಸಾಮಾನ್ಯ ವ್ಯಕ್ತಿ ಈ ದುಬಾರಿ ಮಾಲ್ಗಳಲ್ಲಿ ಕಾಲಿಡೋದಕ್ಕೂ ಮುಂಚೆ ಹಲವು ಬಾರಿ ಯೋಚಿಸುತ್ತಾನೆ.

ಯಾಕೆಂದ್ರೆ ಒಂದು ಫುಟ್ಬಾಲ್ ಅಥವಾ ಬ್ರಾಂಡೆಡ್ ಜರ್ಸಿಯನ್ನ ಖರೀದಿ ಮಾಡೋದೇ ಅತ್ಯಂತ ದುಬಾರಿ ಮಧ್ಯಮ ವರ್ಗದ ಜನ ಅದನ್ನ ಖರೀದಿ ಮಾಡೋದಕ್ಕೆ 100 ಬಾರಿ ಯೋಚಿಸ್ತಾ ಇದ್ರು ಮತ್ತೊಂದು ಕಡೆ ಲೋಕಲ್ ಸ್ಪೋರ್ಟ್ಸ್ ಅಂಗಡಿಗಳು ಕೂಡ ಇದ್ವು ಅಲ್ಲಿ ವಸ್ತುಗಳು ಕಡಿಮೆ ದರದಲ್ಲಿ ಇದ್ರೂ ಗುಣಮಟ್ಟ ಕೆ ಯಾವುದೇ ಗ್ಯಾರೆಂಟಿ ಇರಲಿಲ್ಲ ಜೊತೆಗೆ ಆ ಅಂಗಡಿಗಳಲ್ಲಿ ಇರುವಂತ ಉತ್ಪನ್ನಗಳು ಕೇವಲ ಕ್ರಿಕೆಟ್ ಮತ್ತು ಫುಟ್ಬಾಲ್ ಮಟ್ಟಕ್ಕೆ ಮಾತ್ರ ಸೀಮಿತ ಆಗಿತ್ತು ಯಾರಾದರೂ ನನಗೆ ಆರ್ಚರಿ ಕಲಿಬೇಕು ಅಥವಾ ಟ್ರಕಿಂಗ್ ಗೇರಬೇಕು ಅಂದ್ರೆ ಅದನ್ನ ವಿದೇಶಗಳಿಂದ ತರಿಸಿಕೊಳ್ಳಬೇಕಿತ್ತು ಈ ಒಂದು ಸಮಸ್ಯೆಯನ್ನು ಬಗೆಹರಿಸಬೇಕು ಅಂತನೆ 2009ರಲ್ಲಿ ಬೆಂಗಳೂರು ಹೊರವಲಯದ ಒಂದು ದೊಡ್ಡ ಪ್ರದೇಶದಲ್ಲಿ ತನ್ನ ಮೊದಲ ಅಂಗಡಿಯೊಂದಿಗೆ ಡೆಕೋತನ್ ಭಾರತಕ್ಕೆ ಕಾಲಿಡುತ್ತೆ ಅಂದರೆ ಬೆಂಗಳೂರಿನ ಸರ್ಜಾಪುರ ಬಳಿ ಇದು ತನ್ನ ಮೊದಲ ಅಂಗಡಿಯನ್ನ ಶುರು ಮಾಡಿತ್ತು ಆದರೆ ಇದು ಆರಂಭದ ಸಮಯದಲ್ಲಿ ದೊಡ್ಡ ಸಮಸ್ಯೆಯನ್ನ ಎದುರಿಸಬೇಕಾಗುತ್ತೆ ಆ ಒಂದು ಸಮಯದಲ್ಲಿ ಭಾರತ ಸರ್ಕಾರದ ನಿಯಮ ಏನು ಅಂದ್ರೆ ಯಾವುದೇ ವಿದೇಶಿ ಕಂಪನಿ ಭಾರತದಲ್ಲಿ ಕೇವಲ ತನ್ನದೇ ಬ್ರಾಂಡ್ ವಸ್ತುಗಳನ್ನ ಮಾರಾಟ ಮಾಡೋದಕ್ಕೆ ಬಯಸಿದರೆ ಕನಿಷ್ಠ 30% ಉತ್ಪನ್ನಗಳನ್ನ ಭಾರತದಲ್ಲಿ ತಯಾರಿಸಬೇಕು ಅನ್ನೋದು ಈ ಒಂದು ನಿಯಮವನ್ನ ಪಾಲಿಸದೆ ಇರುವರಿಗೆ ಆ ಕಂಪನಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವಂತ ಅನುಮತಿ ಇರಲಿಲ್ಲ ಹೀಗಾಗಿ ಆರಂಭದಲ್ಲಿ ಈ ಅಂಗಡಿ ಹೋಲ್ಸೇಲ್ ಮಾದುರಿಯಲ್ಲಿ ತೆರೆಯಲ್ಪಟ್ಟಿತ್ತು ಶಾಪಿಂಗ್ ಮಾಡೋದಕ್ಕೆ ಗ್ರಾಹಕರಿಗೆ ಬೇಸಿಕ್ ಸದಸ್ಯತ್ವವನ್ನ ಪಡೆದುಕೊಳ್ಳಬೇಕಿತ್ತು.ಯಾಕೆಂದ್ರೆ ಹೋಲ್ಸೇಲ್ ಮಾದರಿಯಲ್ಲಿ ನೀವು ನೇರವಾಗಿ ಗ್ರಾಹಕರಿಗೆ ಮಾರಾಟವನ್ನ ಮಾಡುವಂತಿಲ್ಲ ಬದಲಿಗೆ ಬಿಸಿನೆಸ್ ಗಳಿಗೆ ಗ್ರೂಪ್ಸ್ ಅಥವಾ ನೊಂದಾಯಿತ ಸದಸ್ಯ ಸರಿಗೆ ಮಾತ್ರ ವಸ್ತುಗಳನ್ನ ಮಾರಬಹುದು.

ಡೆಕತ್ಲಾನ್ ಅನ್ನ ವಿದೇಶಗಳಲ್ಲಿ ಮೊದಲೇ ನೋಡಿದವರಿಗೆ ಅದು ಭಾರತಕ್ಕೆ ಬಂದಿರುವಂತ ವಿಚಾರ ಬಹಳ ಸಂತೋಷವನ್ನ ತಂದಿತ್ತು. ಮತ್ತೆ ಮೊದಲ ಬಾರಿಗೆ ಡೆಕತ್ಲಾನ್ ಬಗ್ಗೆ ಕೇಳಿದವರು ಕುತುಹಲದಿಂದ ಅಂಗಡಿಗೆ ಹೋಗಿ ಖರೀದಿ ಮಾಡೋದಕ್ಕೆ ಹೋಗ್ತಿದ್ರು. ಈ ಡೆಕತ್ಲಾನ್ ತನ್ನನ್ನ ನೈಕಿ ಅಥವಾ ಅಡಿಡಾಸ್ ಟೈಪ್ ಅಲ್ಲಿ ಪ್ರಚಾರ ಮಾಡಲಿಲ್ಲ. ಬದಲಿಗೆ ಅದು ಅತ್ಯಂತ ಪ್ರೀಮಿಯಂ ಅಲ್ಲ ಅಥವಾ ಕಡಿಮೆ ಗುಣಮಟ್ಟದ್ದು ಅಲ್ಲ ಎಂಬಂತೆ ತೋರಿಸಿಕೊಂಡಿತ್ತು. ಅಲ್ಲಿ ಸಣ್ಣ ಪುಟ್ಟ ವಸ್ತುಗಳಿಂದ ದೊಡ್ಡ ಮಟ್ಟದ ವಸ್ತುಗಳವರೆಗೂ ಎಲ್ಲ ಕೂಡ ಸಿಗತಾ ಇದ್ವು. ಆದರೆ ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆ ಈ ಒಂದು ಬ್ರಾಂಡ್ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಪ್ರಸಿದ್ಧಿಯನ್ನ ಪಡೆಯುವಲ್ಲಿ ಅದರಲ್ಲಿ ಅಂತ ವಿಶೇಷತೆ ಏನಿತ್ತು ಅಂತ ಜನ ಇದನ್ನ ಒಂದು ಅಂಗಡಿ ಅಂತ ಹೇಳಿದೆ ವೀಕೆಂಡ್ ನ ಡೆಸ್ಟಿನೇಷನ್ ರೀತಿ ಕೂಡ ನೋಡ್ತಿದ್ರು. ಇದಕ್ಕೆ ಕಾರಣ ಈ ಡೆಕಾಥಾನ್ ಮಾಡಿದಂತ ಅತ್ಯಂತ ದೊಡ್ಡ ಮಾಸ್ಟರ್ ಸ್ಟ್ರೋಕ್ ಅಂದ್ರೆ ಇದರ ಅಂಗಡಿ ಡಿಸೈನ್ ಮತ್ತು ಸ್ಥಳದ ನಿರ್ಧರ ಆಗಿತ್ತು. ಭಾರತದಲ್ಲಿ ಅನೇಕ ದೊಡ್ಡ ದೊಡ್ಡ ಬ್ರಾಂಡ್ಗಳು ತಮ್ಮ ಅಂಗಡಿಗಳನ್ನ ಹೈ ಎಂಡ್ ಮಾಲ್ಗಳಲ್ಲಿ ತೆರೆಯೋದಕ್ಕೆ ಹುಡುಕ್ತಾ ಇರ್ತಾರೆ. ಅಲ್ಲಿ ಬಾಡಿಗೆ ತುಂಬಾ ದುಬಾರಿ ಮತ್ತೆ ಗ್ರಾಹಕರ ಸಂಖ್ಯೆ ಕೂಡ ಸೀಮಿತವಾಗಿರುತ್ತೆ. ಆದರೆ ಡೆಕತ್ ಅಂತನ ಅಂಗಡಿಗಳನ್ನ ಕೇವಲ ಶೋರೂಮ್ಗಳಾಗಿ ಒಂದು ಅನುಭವದ ಕೇಂದ್ರದಂತೆ ವಿನ್ಯಾಸಗೊಳಿಸಿದ್ರು. ಅದಕ್ಕೆ ಹೆಚ್ಚು ದೊಡ್ಡ ಮತ್ತು ಕಡಿಮೆ ಬೆಲೆಯ ಜಾಗ ಬೇಕಾಗಿತ್ತು. ಅದಕ್ಕಾಗಿ ಅವರು ಮಾಲ್ಗಳಿಂದ ದೂರ ಬಂದು ನಗರದ ಹೊರಗಡೆ ಇರುವಂತ ದೊಡ್ಡ ಪ್ರದೇಶದಲ್ಲಿ ತಮ್ಮ ಆರಂಭಿಕ ಅಂಗಡಿಗಳನ್ನ ತೆರೆಯುವಂತ ನಿರ್ಧಾರವನ್ನ ಮಾಡಿದರು.

ಆ ಒಂದು ಸಮಯದಲ್ಲಿ ಈ ಸ್ಟ್ರಾಟಜಿ ಬಗ್ಗೆ ಕೇಳಿದವರು ಸ್ವಲ್ಪ ಆಶ್ಚರ್ಯ ಪಟ್ಟಿದ್ರು ಮತ್ತೆ ಜನ ಕೂಡ ನಗರದಿಂದ ಹೊರಹೋಗಿ ಆ ಅಂಗಡಿಗೆ ಭೇಟಿ ಕೊಡ್ತಾರೆ ಅಂತ ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಡೆಕಾತನ್ ಬಹಳ ಕಡಿಮೆ ಸಮಯದಲ್ಲಿ ಜನರ ಮನವನ್ನ ಗೆದ್ದಿತ್ತು ಅಲ್ಲಿ ಕ್ರಿಕೆಟ್ ಫುಟ್ಬಾಲ್ ಸೈಕ್ಲಿಂಗ್ ಸ್ವಿಮ್ಮಿಂಗ್ ಟ್ರಕಿಂಗ್ ಆರ್ಚರಿ ಸ್ಕೇಟಿಂಗ್ ಕ್ಯಾಂಪಿಂಗ್ ಮತ್ತು ಬಾಕ್ಸಿಂಗ್ ಈ ರೀತಿ ಮೊದಲಾದಂತ ಎಲ್ಲಾ ಕ್ರೀಡೆಗಳಿಗೆ ಬೇಕಾದಂತ ವಸ್ತುಗಳು ಲಭ್ಯ ಇದ್ವು ಇನ್ನು ಬೆಲೆ ಬಗ್ಗೆ ಹೇಳಬೇಕು ಅಂದ್ರೆ ಮಧ್ಯಮರ್ಗದ ಜನರು ಕೂಡ ಖರೀದಿ ಮಾಡುವಷ್ಟು ಕಡಿಮೆ ದರದಲ್ಲಿ ಅವು ಇದ್ವು ಮತ್ತೆ ಅತ್ಯಂತ ದೊಡ್ಡ ಆಚರ್ಯ ಏನು ಅಂದ್ರೆ ಈ ಎಲ್ಲಾ ಉತ್ಪನ್ನಗಳು ಅಡಿಡಾಸ್ ಅಥವಾ ನೈಕಿ ಶೈಲಿಯ ಬ್ರಾಂಡೆಡ್ ಉತ್ಪನ್ನಗಳ ರೀತಿಯಲ್ಲಿ ಪ್ರೀಮಿಯಂ ಕ್ವಾಲಿಟಿಯಲ್ಲಿ ಇದ್ವು ಇವೆಲ್ಲವೂ ಕೂಡ ಈ ಡೆಕತ್ಲನ್ನ ಸ್ವಂತ ಇನ್ಹೌಸ್ನ ಬ್ರಾಂಡ್ ಗಳು ಈ ಡೆಕತ್ ಈತರ ಕಂಪನಿಯ ಮಾರ್ಕೆಟ್ ಶೇರ್ ನ್ನ ಕಸದುಕೊಳ್ಳಲಿಲ್ಲ ಬದಲಾಗಿ ಡೆಕತ್ಲನ್ ಒಂದು ಕಸ್ಟಮರ್ ಬೇಸ್ ಅನ್ನ ಸೃಷ್ಟಿ ಮಾಡಿಕೊಳ್ತು ಮೊದಲು ಸ್ಪೋರ್ಟ್ಸ್ ಕೇರ್ನ್ನ ಖರೀದಿ ಮಾಡೋದಕ್ಕೆ ಸಾಧ್ಯ ಆಗದವರು ಅಥವಾ ಯಾವತ್ತಕೂನು ಪ್ರಯತ್ನಿಸಿದವರು ಈಗ ಕೇವಲ ನೋಡೋದಕ್ಕೆ ಅಂಗಡಿಗೆ ಬರ್ತಿದ್ರು ಜೊತೆಗೆ ಬಾಲ್ಕನಿಯಿಂದ ಕ್ರಿಕೆಟ್ ಪಂದೆಗಳನ್ನ ಮಾತ್ರ ನೋಡ್ತಿದ್ದಂತ ಜನರಿಗೂನು ಆಟದ ಮೈದಾನಕ್ಕೆ ಬರೋದಕ್ಕೆ ಪ್ರೇರಣೆಯನ್ನ ಕೊಡ್ತು ಇದರಿಂದ ಬಹಳ ದೊಡ್ಡ ಮಟ್ಟದ ಬದಲಾವಣೆ ಸೃಷ್ಟಿ ಆಯ್ತು ಡೆಕತನ್ ಅಂಗಡಿಗಳಲ್ಲಿ ಪ್ರತಿ ವೀಕೆಂಡ್ ನಲ್ಲಿ ಕಸ್ಟಮರ್ಗಳ ಸಂಖ್ಯೆ ಹೆಚ್ಚಾಗ್ತಿತ್ತು ಪಾರ್ಕಿಂಗ್ ಸದಾ ತುಂಬಿರ್ತಿತ್ತು ಟ್ರೈ ಜೋನ್ ಯಾವಾಗಲೂನು ಬಿಸಿಯಾಗಿರ್ತಿತ್ತು ಮತ್ತೆ ಕೌಂಟರ್ಗಳ ಮುಂದೆ ಜನ ಸಾಲು ಸಾಲಾಗಿ ನಿಂತಿರ್ತಿದ್ರು ಭಾರತದ ಮಧ್ಯಮ ವರ್ಗದ ಜನ ಮೊದಲ ಬಾರಿಗೆ ಯಾವುದೋ ಒಂದು ಸ್ಪೋರ್ಟ್ಸ್ ಅಂಗಡಿಯನ್ನ ತಮ್ಮ ಅಂಗಡಿಯಂತೆ ಪ್ರೀತಿಸುದಕ್ಕೆ ಶುರು ಮಾಡಿದ್ರು ಇದರ ಹಿಂದಿರುವಂತ ಮುಖ್ಯ ಕಾರಣನೇ ಅನುಭವ ಭಾರತದಲ್ಲಿ ರಿಟೇಲ್ ಅಂಗಡಿಗಳ ಬಗ್ಗೆ ಒಂದು ಡಿಫಾಲ್ಟ್ ಚಿತ್ರಣ ನಿರ್ಮಾಣವಾಗಿದೆ ಶೆಲ್ಫ್ಗಳು ವಸ್ತುಗಳಿಂದ ತುಂಬಿರುತ್ತವೆ.

ಗ್ರಾಹಕರಿಗೆ ನೋಡಿ ಆದರೆ ಮುಟ್ಟಬೇಡಿ ಅನ್ನುವಂತ ಭಾವನೆ ಉಂಟಾಗ್ತಿತ್ತು ಆದರೆ ಡೆಕಾತ್ಲಾನ್ ಈ ಪೂರ್ಣ ಕಲ್ಪನೆಯನ್ನ ಸಂಪೂರ್ಣವಾಗಿ ತೆಗೆದು ಹಾಕ್ತು ಖರೀದಿ ಮಾಡುವಂತ ಮೊದಲು ಅದನ್ನ ಆಡುವಂತ ಸ್ವಾತಂತ್ರವನ್ನು ಕೂಡ ಕೊಡಲಾಯಿತು ಇದಕ್ಕಾಗಿನೇ ಡೆಕಾಕತ್ಲಾನ್ ಒಂದು ಸ್ಥಳವನ್ನ ವಿಶೇಷವಾಗಿ ಗ್ರಾಹಕರಿಗೆ ಅಂತನೇ ಸಿದ್ಧಪಡಿಸಿ ತ್ತು ಭಾರತದ ರಿಟೇಲ್ ಸಂಸ್ಕೃತಿಯಲ್ಲಿ ಸಂಪೂರ್ಣ ಹೊಸದಾದಂತ ಒಂದು ಎಕ್ಸ್ಪೀರಿಯನ್ಸ್ ಮಾಡೆಲ್ ಶುರುವಾಯಿತು ಯಾರಾದರೂ ಮೊದಲ ಬಾರಿಗೆ ಡೆಕಾಲತನ ಅಂಗಡಿಗೆ ಪ್ರವೇಶ ಮಾಡಿದಾಗ ಅವರಿಗೆ ಸ್ವಲ್ಪ ಗೊಂದಲ ಮತ್ತು ಶಾಕ್ ಆಗ್ತಿತ್ತು ನಾವು ನಿಜವಾಗಿಯೂ ಈ ಪಾಲನ ಜೊತೆ ಆಟಾಡಬಹುದಾ ಅಲ್ಲಿರುವಂತ ಸೈಕಲ್ನ್ನ ಓಡಿಸಿ ನೋಡಬಹುದಾ ಟೆಂಟ್ನ್ನ ತೆರೆದು ನೋಡಬಹುದಾ ಟೆಂಟ್ನ್ನ ತೆರಿಬಹುದಾ ಎಂಬ ಗ್ರಾಹಕರ ಪ್ರಶ್ನೆಗೆ ಬರ್ತಾ ಇದ್ದದ್ದು ಒಂದೇ ಉತ್ತರ ಅದು ಖಂಡಿತವಾಗಿಯೂ ಹೌದು ಅಂತ ಡೆಕತನ್ ಅಂಗಡಿಯ ಒಳಗೆ ಬೇರೆ ಬೇರೆ ಕ್ರೀಡೆಗಳಿಗಾಗಿ ಪ್ಲೇ ಜೋನ್ಗಳು ನಿರ್ಮಿಸಲ್ಪಟ್ಟಿದ್ದು ಅಲ್ಲಿ ನೀವು ಬ್ಯಾಸ್ಕೆಟ್ ಬಾಲ್ ಹೋಪ್ ನಲ್ಲಿ ಅನ್ನ ಹೊಡಿಬಹುದು ಬ್ಯಾಡ್ಮಿಂಟನ್ ರಾಕೆಟ್ ಇಂದ ರ್ಯಾಲಿಯನ್ನ ಮಾಡಬಹುದು ಮತ್ತೆ ಅತ್ಯಂತ ವಿಶೇಷವಾದಂತ ಸಂಗತಿ ಏನು ಅಂದ್ರೆ ಈ ಎಲ್ಲವನ್ನು ಕೂಡ ಉದ್ದೇಶ ಪೂರ್ವಕವಾಗಿನೇ ಮಾಡಲಾಗಿತ್ತು. ಕಾರಣ ಡೆಕಾಥನ್ ಗೆ ಗೊತ್ತಿತ್ತು ಒಬ್ಬ ಗ್ರಾಹಕ ಯಾವುದೇ ಉತ್ಪನ್ನವನ್ನ ಸ್ವತಃ ಸ್ಪರ್ಶಿಸಿ ಬಳಸಿದಾಗ ಆ ಒಂದು ವಸ್ತುವಿನೊಂದಿಗೆ ಅವನಿಗೆ ಒಂದು ಭಾವನಾತ್ಮಕ ಸಂಪರ್ಕ ನಿರ್ಮಾಣ ಆಗುತ್ತೆ ಅಂತ. ಇದನ್ನ ಎಂಡ್ರೋಮೆಂಟ್ ಎಫೆಕ್ಟ್ ಅಂತ ಕರೀತಾರೆ. ಅಂದ್ರೆ ನೀವು ಯಾವುದನ್ನಾದರೂ ಸ್ವತಹ ಬಳಸಿದಾಗ ಅದು ನಿಮ್ಮದೇ ಎಂಬ ಭಾವನೆ ಉಂಟಾಗುತ್ತೆ. ಹೀಗಿರುವಾಗ ಗ್ರಾಹಕರು ಖಂಡಿತವಾಗಿ ಅದನ್ನ ಖರೀದಿ ಮಾಡೇ ಮಾಡ್ತಾರೆ. ಇನ್ನು ಇಲ್ಲಿ ಕೆಲಸ ಮಾಡೋರು ಸಾಮಾನ್ಯ ಸೇಲ್ಸ್ ಪರ್ಸನ್ ಗಳು ಅಲ್ಲ.

ಅವರು ಅಥೆಟ್ಗಳು ಉದಾಹರಣೆಗೆ ಸೈಕ್ಲಿಂಗ್ ನ ವಿಭಾಗದಲ್ಲಿ ನಿಮಗೆ ಒಬ್ಬ ಸೈಕ್ಲಿಸ್ಟ್ ಟ್ರಕಿಂಗ್ ಗೇರ್ನ ವಿಭಾಗದಲ್ಲಿ ಒಬ್ಬ ಟ್ರಕರ್ ಮತ್ತೆ ಜಿಮ್ ಉಪಗಣದ ವಿಭಾಗದಲ್ಲಿ ಒಬ್ಬ ರಿಯಲ್ ಫಿಟ್ನೆಸ್ ಎಕ್ಸ್ಪರ್ಟ್ ಇರ್ತಾರೆ. ಹೀಗಾಗಿ ನೀವು ಅವರ ಬಳಿ ಏನಾದ್ರೂ ಕೇಳಿದಾಗ ಅವರು ನಿಮಗೆ ಏನನ್ನಾದ್ರೂ ಬಲವಂತವಾಗಿ ಹೇಳಿ ಮಾರೋದಕ್ಕೆ ಪ್ರಯತ್ನಿಸುದಿಲ್ಲ. ಬದಲಿಗೆ ಅವರು ನಿಜವಾದ ಮನಸ್ಸಿನಿಂದ ನೀವು ಬಿಗಿನರ್ ಆಗಿದ್ರೆ ಸಾ000 ರೂಪಾಯಿನ ಬೆಲೆಯ ಉತ್ಪನ್ನನೆ ನಿಮಗೆ ಸೂಕ್ತ 4000ದು ಬೇಡ ಅಂತ ಉತ್ತಮ ಸಲಹೆಯನ್ನ ಕೊಡ್ತಾರೆ. ಇನ್ನು ಜನರು ಈ ಡೆಕಾತನ್ ಅಂಗಡಿಗಳಿಗೆ ಹೋದ್ರೆ ಅದು ಶಾಪಿಂಗ್ ಅಲ್ಲದೆ ವೀಕೆಂಡ್ ಪಿಕ್ನಿಕ್ ರೀತಿ ಹೋಗುವಂತ ಅನುಭವವನ್ನ ಪಡೀತಾರೆ. ಮಕ್ಕಳು ಕೂಡ ಬಹಳ ಉತ್ಸಾಹದಿಂದ ಆ ಒಂದು ಅಂಗಡಿಗೆ ಯಾಕೆಂದ್ರೆ ಅಲ್ಲಿ ಅವರಿಗೆ ಬೇಕಾದ ವಸ್ತುಗಳ ಜೊತೆ ಆಟವನ್ನ ಆಡಬಹುದು. ಜೊತೆಗೆ ತಂದೆ ತಾಯಿಗಳು ಕೂಡ ಸಂತೋಷವಾಗಿರ್ತಾರೆ. ಯಾಕೆಂದ್ರೆ ಶಾಪಿಂಗ್ ಮಾಡುವಂತ ಸಮಯದಲ್ಲಿ ಅವರ ಮಕ್ಕಳಿಗೆ ಬೋರಾಗೋದೇ ಇಲ್ಲ. ಈ ಡೆಕತ್ಲಾನ್ ಕೇವಲ ಶಾಪಿಂಗ್ ಮಾಡುವಂತ ಸ್ಥಳವಾಗಿರದೆ ಒಂದು ಫ್ಯಾಮಿಲಿ ಔಟಿಂಗ್ ಸ್ಪಾಟ್ ಆಗಿ ಕೂಡ ಮಾರ್ಪಟ್ಟಿತ್ತು. ಆದರೆ ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆ ಕೇವಲ ಕಡಿಮೆ ಬೆಲೆಯಿಂದ ಒಂದು ಬ್ರಾಂಡ್ ದೀರ್ಘಕಾಲ ಉಳಿಬಹುದಾ ಅನ್ನೋದು ಅಥವಾ ಇದರ ಹಿಂದೆ ಇನ್ನು ಯಾವುದಾದರೂ ತಂತ್ರ ಇದೆಯಾ ಅಂತ ಅನ್ಸುತ್ತೆ. ವಾಸ್ತವದಲ್ಲಿ ಈ ಡೆಕಥಾನ್ ಗೆ ಚೆನ್ನಾಗಿನೇ ಗೊತ್ತಿತ್ತು. ಭಾರತದಲ್ಲಿ ದೀರ್ಘ ಪಯಾಣ ನಡಬೇಕು ಅಂದ್ರೆ ಲೋಕಲ್ ಮಟ್ಟದಲ್ಲಿ ಸೋರ್ಸಿಂಗ್ ಅನ್ನ ಹೆಚ್ಚಿಸಬೇಕಾಗುತ್ತೆ. ಅಲ್ಲಿಂದಲೇ ಅವರ ಇಂಡಿಯಾ ಸಿಂಟ್ರಿಕ್ ಮಾಡೆಲ್ ಶುರುವಾಗುತ್ತೆ. ನಿಧಾನವಾಗಿ ಅವರು ಫ್ಯಾಬ್ರಿಕ್ಸ್, ಪ್ಲಾಸ್ಟಿಕ್ ಮತ್ತು ಲೋಹದಂತ ಎಲ್ಲಾ ಕಚ್ಚಾ ವಸ್ತುಗಳನ್ನು ಕೂಡ ಭಾರತದಲ್ಲೇ ಪಡೆಯೋದಕ್ಕೆ ಶುರು ಮಾಡ್ತಾರೆ. ಇದರ ಜೊತೆಗೆ ಅವರಿಗೆ ಎರಡು ಲಾಭಗಳು ಕೂಡ ಉಂಟಾಯಿತು.

ಮೊದಲನೆಯದು ಉತ್ಪನ್ನಗಳ ಖರ್ಚು ಇನ್ನೂ ಕೂಡ ಕಡಿಮೆ ಆಯ್ತು. ಮತ್ತೊಂದು ಸಪ್ಲೈ ಚೈನ್ ವೇಗವಾಗಿ ಮತ್ತು ಬಲವಾಗಿ ಆಯ್ತು. ಈಗ ಅವರಿಗೆ ಯೂರೋಪ್ನಿಂದ ಸರಕು ತರಬೇಕಾದಂತ ಅಗತ್ಯ ಇರಲಿಲ್ಲ. ಯಾಕೆಂದ್ರೆ ಭಾರತದ ಮಾರುಕಟ್ಟೆಗೆ ಸರಕುಗಳು ಈಗ ಭಾರತದಲ್ಲೇ ತಯಾರಾಗೋದಕ್ಕೆ ಶುರುವಾಯಿತು. ಆದರೆ ಡೆಕತ್ಲಾನ್ 2009 ರಲ್ಲಿ ಭಾರತಕ್ಕೆ ಬಂದಾಗ ಅದರ ದೊಡ್ಡ ಶಕ್ತಿ ಕೇವಲ ಕಡಿಮೆ ಬೆಲೆ ಮಾತ್ರ ಆಗಿರಲಿಲ್ಲ. ಅದು ವರ್ಷಗಳ ಹಿಂದಿನಿಂದಲೇ ಮಾಡಿದಂತ ಆವಿಷ್ಕಾರ ಕೂಡ ಆಗಿತ್ತು. ಈ ಒಂದು ಕಂಪನಿ ಬಹಳ ಹಿಂದೆನೆ ಚೆನ್ನಾಗಿ ಅರ್ಥ ಮಾಡಿಕೊಂಡಿತ್ತು. ಇನ್ನು ನೀವು ಒಂದು ವಿಚಾರವನ್ನ ಯೋಚಿಸಿ ನೋಡಿ. ನೀವು ಟಿವಿಯಲ್ಲಿ ಡೆಕೋತಲಾನ್ ಗೆ ಸಂಬಂಧಪಟ್ಟಂತ ಯಾವುದಾದರೂ ಒಂದು ಜಾಹಿರಾತನ್ನ ನೋಡಿದ್ದೀರಾ? ಇದಕ್ಕೆ ಉತ್ತರ ಖಂಡಿತವಾಗಿನೂ ಇಲ್ಲ. ಯಾಕೆಂದ್ರೆ ಈತರ ಬ್ರಾಂಡ್ ಗಳು ಕೋಟ್ಯಂತ ರೂಪಾಯಿಗಳನ್ನ ಮಾರ್ಕೆಟಿಂಗ್ ಅಂತನೇ ಖರ್ಚು ಮಾಡಿ ಜಾಹಿರಾತನ್ನ ಮಾಡ್ತಿರಬೇಕಾದ್ರೆ ಡೆಕೋತಾನ್ ಯಾವುದೇ ಸೆಲೆಬ್ರಿಟಿ ಇಲ್ಲದೆ ಟಿವಿ ಜಾಹಿರಾತು ಕೂಡ ಇಲ್ಲದೆ ಭಾರತದಲ್ಲಿ ತನ್ನನ್ನ ಅತ್ಯಂತ ದೊಡ್ಡ ಸ್ಪೋರ್ಟ್ಸ್ ಬ್ರಾಂಡ್ ಆಗಿ ಹೇಗೆ ಇಷ್ಟು ಸುಲಭವಾಗಿ ಸ್ಥಾಪಿಸೋದಕ್ಕೆ ಸಾಧ್ಯ ಆಯ್ತು ಗೊತ್ತಾ ಇದಕ್ಕೆ ಉತ್ತರ ಈ ಡೆಕೋತಾನ್ ಶುರುನಿಂದಲೇ ವಿಭಿನ್ನ ಮಾರ್ಗವನ್ನ ಆಯ್ಕೆ ಮಾಡಿತ್ತು. ಅವರ ನಂಬಿಕೆ ಏನಪ್ಪಾ ಅಂದ್ರೆ ಉತ್ಪನ್ನಗಳು ಚೆನ್ನಾಗಿದ್ದರೆ ಮತ್ತು ಬೆಲೆ ಸರಿಯಾಗಿದ್ದರೆ ಜನರೇ ಸ್ವತಃ ನಿಮ್ಮ ಉತ್ಪನ್ನವನ್ನ ಪ್ರಚಾರ ಮಾಡ್ತಾರೆ. ಯಾಕೆಂದ್ರೆ ಯಾರಾದ್ರೂ ಬ್ರಾಂಡ್ ನ ಜೊತೆ ಭಾವನಾತ್ಮಕ ಸಂಪರ್ಕವನ್ನ ಹೊಂದಿದ್ರೆ ಅವರೇ ಸ್ವತಹ ಆ ಒಂದು ಬ್ರಾಂಡ್ ನ ಅಂಬಾಸಿಡರ್ ಆಗ್ತಾರೆ. ಇಲ್ಲೂ ಕೂಡ ನಡೆದದ್ದು ಅದೇನೇ ಟಿವಿ ಜಾಹಿರಾತುಗಳಿಗೆ ಈತರ ಬ್ರಾಂಡ್ ಗಳು ಖರ್ಚು ಮಾಡ್ತಿದ್ದಂತಹ ಹಣವನ್ನೇ ಉಳಿಸಿ ಡಕಲನ್ ತನ್ನ ಉತ್ಪನ್ನಗಳ ಬೆಲೆಯನ್ನ ಕಡಿಮೆ ಮಾಡ್ತು. ಇದರಿಂದ ಅವರ ಉತ್ಪನ್ನಗಳು ಮಾರಾಟ ಆದ ನಂತರ ಜನರು Instagram ನಲ್ಲಿ ಉಚಿತ ಸ್ಟೋರಿಗಳನ್ನ ಹಾಕೋದಕ್ಕೆ ಶುರು ಮಾಡಿದ್ರು. ಮತ್ತೆ YouTube ನಲ್ಲಿ ಫ್ರೀ ಅನಾನ್ಸಿಂಗ್ ವಿಡಿಯೋಗಳು ಕೂಡ ಶುರುವಾದವು. ಈ ರೀತಿ ಶುರುವಾಯ್ತು ನೋಡಿ ಆರ್ಗಾನಿಕ್ ಮಾರ್ಕೆಟಿಂಗ್ ಎಂಬ ನಿಜವಾದ ಮಾಯೆ ವರ್ಡ್ ಆಫ್ ಮೌತ್ ಮುಖಾಂತರ ಡೆಕಾಲನ್ ಪ್ರತಿಯೊಂದು ಬೇದಿಗೆ ಪ್ರತಿಯೊಂದು WhatsApp ನ ಗ್ರೂಪ್ಗೆ ಮತ್ತು ಪ್ರತಿಯೊಂದು ಕಾಲೇಜ್ ಕ್ಯಾಂಪಸ್ ಗೆ ತಲುಪಿತು. ಡೆಕಾಲನ್ ಇದರಿಂದ ಒಂದು ವಿಷಯವನ್ನ ಸಾಬೀತು ಮಾಡ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments