ಡ್ರೈವರ್ ಇಲ್ಲ ಸ್ಟೇರಿಂಗ್ ಇಲ್ಲ ಆದರೂ ಈ ಕಾರು ಹೇಗೆ ಹೋಗ್ತಿದೆ ಅಂತ ಈ ದೃಶ್ಯಗಳು ಕಂಡುಬಂದಿದ್ದು ಬೇರೆಎಲ್ಲೂ ಅಲ್ಲ ನಮ್ಮದೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದು ಸಂಪೂರ್ಣವಾಗಿ ಭಾರತದಲ್ಲೇ ಅದರಲ್ಲೂ ನಮ್ಮ ಬೆಂಗಳೂರಿನಲ್ಲೇ ತಯಾರಾದ ಚಾಲಕ ರಹಿತ ಕಾರ್ ವಿಪ್ರೋ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಆರ್ವಿ ಇಂಜಿನಿಯರಿಂಗ್ ಕಾಲೇಜು ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಈ ಕಾರು ಈಗ ಇಂಟರ್ನೆಟ್ನಲ್ಲಿ ಸಂಶೇಷನ್ ಸೃಷ್ಟಿಸಿದೆ ಸ್ವಾಮೀಜಿಗಳು ಈ ಕಾರಲ್ಲಿ ಕುಳಿತು ಸಂಚರಿಸಿರುವುದು ಕೂಡ ವಿಶೇಷ ಬನ್ನಿ ಏನಿದು ಡ್ರೈವರ್ಲೆಸ್ ಕಾರು ಇದರ ಹಿಂದೆ ಏನೆಲ್ಲ ಇದೆ ಎಂಬುದನ್ನ ನೋಡೋಣ.
ಫುಲ್ ವೈರಲ್ ಆದ ಬೆಂಗಳೂರಿನ ವೈರಿನ್ ಕಾರು ಡ್ರೈವರ್ ಬೇಕಿಲ್ಲ ಸ್ಟೇರಿಂಗ್ ಇಲ್ಲ ಮ್ಯಾಜಿಕ್ ಕಾರು ಹೌದುವಿಪ್ರೋ ಐಐಎಸ್ಸಿ ರಿಸರ್ಚ್ ಅಂಡ್ ಇನ್ನೋವೇಷನ್ ನೆಟ್ವರ್ಕ್ ಅಂದ್ರೆ ವೈರಿನ್ ನಲ್ಲಿ ನಿರ್ಮಾಣವಾದ ಈ ಚಾಲಕ ರಹಿತ ಕಾರನ್ನ ಬೆಂಗಳೂರಿನ ಆರ್ವಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಅನಾವಣಗೊಳಿಸಲಾಗಿದೆ ಅಕ್ಟೋಬರ್ 27ರಂದು ನಡೆದ ಕಾರ್ಯಕ್ರಮದಲ್ಲಿ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು ಚಾಲಕ ರಹಿತ ಕಾರಿಗೆ ಸಾಕ್ಷಿಯಾದರು ಸ್ವಾಮೀಜಿಗಳು ಕಾರಿನಲ್ಲಿ ಕುಳಿತು ಕ್ಯಾಂಪಸ್ನಲ್ಲಿ ಪ್ರಯಾಣಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಆದರ್ಶ್ ಹೆಗಡೆ ಎಂಬುವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ದೇಶೀಯ ತಂತ್ರಜ್ಞಾನದಿಂದ ಚಲಿಸುವ ಕಾರಿನಲ್ಲಿ ಸ್ವಾಮೀಜಿಗಳುನಿ ನಿರಾಂತಕವಾಗಿ ಸಾಗುವ ದೃಶ್ಯಗಳು ಇದ್ದು ಬೆಂಗಳೂರಿನ ತಂತ್ರಜ್ಞಾನಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ವಿಪ್ರೋದ ಸ್ವಾಯತ್ತ ಸಿಸ್ಟಮ್ಸ್ ಮತ್ತು ರೋಬೋಟಿಕ್ಸ್ ವಿಭಾಗದ ಜಾಗತಿಕ ಮುಖ್ಯಸ್ಥರಾದ ರಾಮಚಂದ್ರ ಬೂದಿಹಾಳ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ಶ್ಯಾಮ್ ಮತ್ತು ಆರ್ವಿಸಿಯ ಪ್ರಾಂಶುಪಾಲರಾದ ಡಾಕ್ಟರ್ ಕೆ ಎನ್ ಸುಬ್ರಮಣ್ಯ ಅವರ ಉಪಸ್ಥಿತಿಯಲ್ಲಿ ಚಾಲಕ ರಹಿತ ಕಾರನ್ನ ಅನಾವರಣಗೊಳಿಸಲಾಯಿತು ಆರ್ವಿ ಕಾಲೇಜಿನ ಪ್ರೊಫೆಸರ್ಗಳಾದ ಉತ್ತರಕುಮಾರಿ ಮತ್ತು ರಾಜವಿದ್ಯಾ ಅವರ ಸಮನ್ವಯದಲ್ಲಿ ಬೋಧಕರು ಮತ್ತು ವಿದ್ಯಾರ್ಥಿಗಳ ತಂಡವಂದು ಈ ಆಟೋನೋಮಸ್ ಕಾರನ್ನ ಡಿಸೈನ್ ಮಾಡಿ ಡೆವಲಪ್ ಮಾಡಿದೆ ಇನ್ನು ಈ ಯೋಜನೆಯ ಪಯಣ ಆರಂಭವಾಗಿದ್ದು.
2019 ರಲ್ಲಿ ವಿಪ್ರೋ ಮತ್ತು ಐಐಎಸ್ಸಿ ಸಂಸ್ಥೆಗಳು ಭಾರತದ ರಸ್ತೆಗಳಿಗಾಗಿಯೇ ಒಂದು ಚಾಲಕ ರಹಿತ ಕಾರನ್ನ ನಿರ್ಮಿಸುವ ಸಂಕಲ್ಪ ಮಾಡಿದ್ದೇವು ಭಾರತದ ರಸ್ತೆಗಳಲ್ಲಿ ಗುಂಡಿಗಳು ಹಠಾತ್ತನೆ ಅಡ್ಡಬರುವ ಪ್ರಾಣಿಗಳು ಮತ್ತು ಇತರ ಅನಿರೀಕ್ಷಿತ ಸವಾಲುಗಳನ್ನ ತಲೆಯಲ್ಲಿಇಟ್ಟುಕೊಂಡು ಈ ಟೆಕ್ನಾಲಜಿಯನ್ನ ರೂಪಿಸಲಾಗಿದೆ ಅಭಿವೃದ್ಧಿಯ ಹಂತದಲ್ಲಿದೆ ಡ್ರೈವರ್ಲೆಸ್ ಕಾರ್ ವೈರಿನ್ ಇನಿಷಿಯೇಟಿವ್ ಅಡಿಯಲ್ಲಿ ಆಟೋನಾಮಸ್ ಸಿಸ್ಟಮ್ಸ್ ರೋಬೋಟಿಕ್ಸ್ ಕೃತಕ ಬುದ್ಧಿಮತ್ತೆ ಅಂದ್ರೆಎಐ ಮಷೀನ್ ಲರ್ನಿಂಗ್ ವಿಶುವಲ್ ಕಂಪ್ಯೂಟಿಂಗ್ ಮತ್ತು 5ಜಿ ಆಧಾರಿತ ವೆಹಿಕಲ್ ಟು ಎವರಿಥಿಂಗ್ ಸಂವೂಹನದಂತಹ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು ನೀಡಲಾಗಿದೆ ಈ ವೈರಲ್ ಆಗಿರುವ ಕಾರು ಇನ್ನು ಅಭಿವೃದ್ಧಿಯ ಹಂತದಲ್ಲಿದೆ ಮುಂದಿನ ಕೆಲವೇ ತಿಂಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆಯು ಕೂಡ ಇದೆ. ಸದ್ಯಕ್ಕೆ ಈ ಕಾರಿನ ಸಂಶೋಧಕರು ಡೆವಲಪರ್ಸ್ ಭಾರತದ ರಸ್ತೆ ಪರಿಸ್ಥಿತಿಗಳನ್ನ ಅಧ್ಯಯನ ಮಾಡುತ್ತಿದ್ದು ಕಾರ್ ಸಾರ್ವಜನಿಕ ರಸ್ತೆಗಳಲ್ಲಿ ಸುರಕ್ಷಿತವಾಗಿ ಮತ್ತು ಸುಗಮವಾಗಿ ಸಂಚರಿಸುತ್ತೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ 2026ರಲ್ಲಿ ಈ ಕಾರು ಸಾರ್ವಜನಿಕವಾಗಿ ಅನಾವರಣಗೊಳ್ಳಬಹುದು ಎನ್ನಲಾಗಿದೆ. ವೈರಿನಷ್ಟೇ ಅಲ್ಲ ಬೇರೆ ಕಾರು ಇವೆ.
ಸ್ವಾಹಿತ್ಯ ರೋಬೆಟ್ಸ್ ಮೈನಸ್ ಜೀರೋ ಭಾರತದಲ್ಲಿ ಚಾಲಕ ರಹಿತ ವಾಹನಗಳ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೇವಲ ಬೆಂಗಳೂರಿನ ವೈರಿನ್ ಡ್ರೈವರ್ಲೆಸ್ ಕಾರ್ ಮಾತ್ರವಲ್ಲದೆ ಹಲವು ಪ್ರಯತ್ನಗಳು ದೇಶದಲ್ಲಿ ನಡೆಯಿದಿವೆ. ಭೂಪಾಲ್ನ ಸ್ವಾಯಿತ್ತ ರೋಬಟ್ಸ್ ಎನ್ನುವ ಸ್ಟಾರ್ಟಪ್ ಭಾರತದ ಅನಿರೀಕ್ಷಿತ ಮತ್ತು ಸಂಕೀರ್ಣ ರಸ್ತೆಗಳಲ್ಲಿ ಸ್ವತಂತ್ರವಾಗಿ ಚಲಿಸಬಲ್ಲ ಟೆಕ್ನಾಲಜಿಯನ್ನ ಪದೇ ಪದೇ ಡಿಸ್ಪ್ಲೇ ಮಾಡುತ್ತಿದೆ ಇದರ ಜೊತೆ ಬೆಂಗಳೂರಿನ ಮೈನಸ್ ಜೀರೋ ಎಂಬ ಡೀಪ್ ಟೆಕ್ ಸ್ಟಾರ್ಟಪ್ ಭಾರತೀಯ ಸನ್ನಿವೇಶಗಳಿಗೆಂದೆ ಸ್ಪೆಷಲ್ ಆಗಿ ಡಿಸೈನ್ ಮಾಡಲಾದ ಸಂಪೂರ್ಣ ಆಟೋ ಪೈಲಟ್ ಸಿಸ್ಟಮ ಅನ್ನು ಕೂಡ ಅನಾವರಣಗೊಳಿಸಿದೆ ಟಾಟಾ ಎಲ್ಕ್ಸಿಕೆಪಿಐಟಿ ಟೆಕ್ನಾಲಜಿಸ್ ಮಹಿಂ್ರ ಮತ್ತು ಐಐಟಿ ಮದ್ರಾಸ್ನಂತಹ ಸಂಸ್ಥೆಗಳು ಕೂಡ ಡ್ರೈವರ್ಲೆಸ್ ಆಟೋನಾಮಸ್ ಕಾರ್ಗಳನ್ನ ಡಿಸೈನ್ ಮಾಡುವಲ್ಲಿ ಆಕ್ಟಿವ್ ಆಗಿ ಭಾಗವಹಿಸುತ್ತಿವೆ. ಸದ್ಯ ಚಾಲಕ ರಹಿತ ಕಾರುಗಳು ರೋಡ್ಗೆ ಬರಂಗಿಲ್ಲ. ಇವುಗಳ ಪರೀಕ್ಷೆಗೆ ಬೇರೆ ಕಡೆ ವ್ಯವಸ್ಥೆ ಇನ್ನು ಪ್ರಸ್ತುತ ಭಾರತದಲ್ಲಿ ಚಾಲಕ ರಹಿತ ವಾಹನಗಳನ್ನ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕೃತವಾಗಿ ಓಡಿಸಲು ಯಾವುದೇ ನಿರ್ದಿಷ್ಟ ಕಾನೂನು ಚೌಕಟ್ಟು ಇಲ್ಲ ಅಸ್ತಿತ್ವದಲ್ಲಿರುವ ಮೋಟಾರ್ ವಾಹನ ಕಾಯ್ದೆಯಲ್ಲೇ ಸ್ವಾಯುತ್ತ ವಾಹನಗಳಿಗೆ ಮಾನ್ಯತೆ ನೀಡಲಾಗಿಲ್ಲ ಆದ್ಯಾಗಿಯೂ ಮಧ್ಯಮ ಮತ್ತು ಪ್ರೀಮಿಯಂ ಕಾರುಗಳಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಈಗ ದೇಶದಲ್ಲಿ ಕಾಮನ್ ಆಗಿದೆ ಅದಲ್ಲದೆ ಭಾರತದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಚಾಲಕರಹಿತ ಕಾರುಗಳ ಪರೀಕ್ಷೆಗೆ ಇನ್ನು ಅನುಮತಿ ನೀಡಿಲ್ಲ ಹೀಗಾಗಿ ಪರೀಕ್ಷೆಗಳನ್ನ ನಿಯಂತ್ರಿತ ವಾತಾವರಣದಲ್ಲಿ ನಡೆಸಲಾಗುತ್ತಿದೆ.
ಐಐಟಿ ಹೈದರಾಬಾದ್ನ ತಿಹನ್ ಟೆಸ್ಟ್ ಬೆಡ್ ಪುಣೆಯ ಎಡಿಎಸ್ ಟೆಸ್ಟ್ ಸಿಟಿ ನಿರ್ಮಾಣವಾಗಿದೆ ಇಲ್ಲಿ ನಕಲಿ ರಸ್ತೆ ಸಂಕೇತಗಳು ಪಾದ ಪದಾಚಾರಿಗಳು ಬೈಕರ್ಗಳು ಮತ್ತು ಮೇಲ್ಸೇತುವೆಗಳಂತಹ ನೈಜ ಸನ್ನಿವೇಶಗಳನ್ನ ಸೃಷ್ಟಿಸಿ ವಾಹನಗಳನ್ನ ಟೆಸ್ಟ್ ಮಾಡಲಾಗುತ್ತದೆ ಇಲ್ಲಿ ಕಾರು ತಯಾರಕರು ತಮ್ಮ ಸೆನ್ಸರ್ಗಳು ರಾಡರ್ ಮತ್ತು ಎಐ ಸೆಕ್ಯೂರಿಟಿ ಸಿಸ್ಟಮ ಗಳನ್ನ ಟೆಸ್ಟ್ ಮಾಡಬಹುದು ಚಾಲಕ ರಹಿತ ಕಾರು ರಿಯಾಲಿಟಿಗೆ ಬರುತ್ತಾ ಭಾರತದಲ್ಲಿನ ಸವಾಲುಗಳನ್ನ ಟೆಕ್ನಾಲಜಿ ಮೀರಿಸುತ್ತಾ ಇನ್ನು ಬೆಂಗಳೂರಿನ ಚಾಲಕರಹಿತ ಕಾರು ಏನು ವೈರಲ್ ಆಗಿದೆ ಕೆಲವು ತಿಂಗಳುಗಳಲ್ಲಿ ಅನಾವರಣಗೊಳ್ಳುವ ಸಾಧ್ಯತೆಯು ಇದೆ ಆದರೆ ಭಾರತದಲ್ಲಿ ಚಾಲಕ ರಹಿತ ಕಾರುಗಳು ರಿಯಾಲಿಟಿಗೆ ಬರುವುದಕ್ಕೆ ಬಹಳಷ್ಟು ಚಾಲೆಂಜ್ಗಳಿವೆ ಅದನ್ನ ತಂತ್ರಜ್ಞಾನ ಬೈಪಾಸ್ ಮಾಡುತ್ತಾ ಎಂಬುದು ಡೌಟ್ ಭಾರತದ ರಸ್ತೆಗಳನ್ನ ನೀವು ನೋಡಿಯೇ ಇರ್ತೀರಿ ಏನು ಯಾವ ಕಡೆಯಿಂದ ಬರುತ್ತೆ ಎಂಬುದೇ ಗೊತ್ತಾಗಲ್ಲ ಪಾದಾಚಾರಿಗಳು ತಟ್ಟಂತ ಪ್ರತ್ಯಕ್ಷ ಆದರೆ ಪ್ರಾಣಿಗಳು ಸ್ವಯ ಅಂತ ಬಂದು ಬಿಡುತ್ತವೆ.
ಎಐ ಟೆಕ್ನಾಲಜಿಯನ್ನ ಸಿಂಪಲ್ ಮತ್ತು ಲೋಕಲ್ ಮಾಡಬೇಕಿದೆ ಅದರ ಜೊತೆ ಅಪಘಾತಗಳು ಆದಾಗ ಒಣಗಾರಿಕೆ ಮತ್ತು ಇನ್ಸೂರೆನ್ಸ್ ಕಾನೂನುಗ ಅನುಪಸ್ಥಿತಿ ದೊಡ್ಡದಿದೆ. ಪ್ರಮುಖವಾಗಿ ಚಾಲಕ ರಹಿತ ಕಾರುಗಳಿಗೆ ಅತ್ಯುತ್ತಮ ರಸ್ತೆ ಮತ್ತು ಡಿಜಿಟಲ್ ಮೂಲಸೌಖ್ಯರದ ಅವಶ್ಯಕತೆ ಇದೆ. ಪ್ರಸ್ತುತ ಪರೀಕ್ಷೆಗಳು ಕೇವಲ ಕಾಲೇಜು ಕ್ಯಾಂಪಸ್ಗಳು ಅಥವಾ ಗೊತ್ತುಪಡಿಸಿದ ನಿಯಂತ್ರಿತ ವಲಯಗಳಿಗೆ ಸೀಮಿತವಾಗಿದೆ. ಅದು ಸಾಮಾನ್ಯ ರಸ್ತೆಗೆ ಬಂದಾಗ ಚಾಲಕ ರಹಿತ ಕಾರುಗಳು ಹಕಿತ್ತು ಗೊತ್ತಾಗಲಿದೆ. ಒಟ್ಟನಲ್ಲಿ ಈಗ ವೈರಲ್ ಆಗಿರುವ ವೈರಿನ್ ಕಾರು ಕೇವಲ ಚಾಲಕ ರಹಿತ ಕಾರಲ್ಲ. ಇದು ಮೇಡ್ ಇನ್ ಇಂಡಿಯಾ ಟೆಕ್ನಾಲಜಿಯ ಶಕ್ತಿ ಮತ್ತು ನಮ್ಮ ಬೆಂಗಳೂರಿನ ಹೆಮ್ಮೆಯಾಗಿದೆ. ವಿದೇಶಿ ತಂತ್ರಜ್ಞಾನವನ್ನೇ ನೆಚ್ಚಿಕೊಳ್ಳದೆ ನಮ್ಮದೇ ರಸ್ತೆಗಳ ಚಾಲೆಂಜ್ಗಳನ್ನ ಅರಿತು ಅದಕ್ಕೆ ತಕ್ಕಂತೆ ಪರಿಹಾರಗಳನ್ನ ನಮ್ಮವರೇ ರೂಪಿಸುತ್ತಿರುವುದು ಉತ್ತಮ.


