ಕೇವಲ 20 ವರ್ಷಗಳಲ್ಲೇ ಜಾಬ್ಗಳೆಲ್ಲ ಬಂದ್ ಕೆಲಸ ಮಾಡದಿದ್ರು ಹಣ ಬರ್ತಿರುತ್ತೆ ಇವತ್ತು ಮನೆಗೆ ದಿನಸಿ ಮತ್ತು ವಸ್ತು ಡೆಲಿವರಿ ಆಗ್ತಾ ಇದ್ರು ಬೇಜಾರು ಕಳೆಯುದಕ್ಕೆ ಅಂತ ನಾವೇ ಅಂಗಡಿಗೆ ಹೋಗಿ ಶಾಪಿಂಗ್ ಮಾಡುವ ತರ ಹವ್ಯಾಸಕ್ಕೋಸ್ಕರ ಮನೆಯಲ್ಲೇ ತರಕಾರಿ ಬೆಳೆಯುವ ತರ ಜಾಬ್ ಅನ್ನೋದು ಆಪ್ಷನಲ್ ಆಗಿಬಿಡುತ್ತೆ ಕೆಲಸ ಅನ್ನುವ ಕಾನ್ಸೆಪ್ಟ್ ಜಗತ್ತಿನಿಂದ ಕಣಮ ಮರೆಯಾಗುತ್ತೆ ಅನ್ನುವ ಭವಿಷ್ಯವಾಣಿ ಬಂದಿದೆ ಆದರೆ ಇದು ಯಾವುದೋ ಸ್ವಾಮೀಜಿ ಪವಾಡ ಪುರುಷ ದಾಸಯ್ಯನ ಭವಿಷ್ಯವಾಣಿ ಅಲ್ಲ ಜಗತ್ತಿನ ನಂಬರ್ ಒನ್ ಶ್ರೀಮಂತ ಹೆಚ್ಚು ಕಮ್ಮಿ ಒಂದು ಟ್ರಿಲಿಯನ್ ಡಾಲರ್ ಒಡೆಯನಾಗುವ ಸನಿಹದಲ್ಲಿರುವ ಎಲನ್ ಮಸ್ಕ್ ಭವಿಷ್ಯ ಅದರಲ್ಲೂ ಭಾರತೀಯ ಪಾಡ್ಕಾಸ್ಟ್ ಒಂದರಲ್ಲಿ ಕೂತು ಎಲನ್ ಮಸ್ಕ್ ಭವಿಷ್ಯದ ಜಾಬ್ಗಳ ಬಗ್ಗೆ ಗೌರ ಭವಿಷ್ಯ ನುಡಿದಿದ್ದಾರೆ ಅಥವಾ ಇದನ್ನ ಗೌರ ಭವಿಷ್ಯ ಅನ್ನಬೇಕೋ ಇನ್ನೇನು ಅನ್ನಬೇಕೋ ಈ ವರದಿ ಕೇಳಿದ ನಂತರ ನೀವೇ ಡಿಸೈಡ್ ಮಾಡಿ ಬನ್ನಿ ಮಸ್ಕ್ ಭವಿಷ್ಯದ ಜಾಬ್ ಕಲ್ಚರ್ ಬಗ್ಗೆ ಕೆಲಸಗಳ ಬಗ್ಗೆ ಏನು ಹೇಳಿದ್ದಾರೆ ಡೀಟೇಲ್ ಆಗಿ ನೋಡೋಣ ಕೆಲಸ ಅನ್ನೋದು ಆಪ್ಷನಲ್ ಆಗುತ್ತೆ ಈಗ ಹೊಟ್ಟೆ ಬಟ್ಟೆ ವಸತಿಗೆ ಕೆಲಸ ಮಾಡ್ತಿರುವ ಜನ.
ಇನ್ನು ಕೇವಲ 20 ವರ್ಷದಲ್ಲಿ ಅವ್ಯಾಸಕ್ಕೋಸ್ಕರ ಕೆಲಸ ಮಾಡ್ತಾರೆ ಜಾಬ್ ಅನ್ನೋದು ಒಂದು ಹಾಬಿ ಆಗುತ್ತೆ ಅಂತ ಮಸ್ಕ್ ಹೇಳಿದ್ದಾರೆ ಜಾಬ್ ಅನ್ನೋದು ಒಂದು ಹಾಬಿ ಆಗುತ್ತೆ ಅಂತ ಮಸ್ಕ್ ಹೇಳಿದ್ದಾರೆ ಹೌದು ಸ್ಪೇಸ್ಎಕ್ಸ್ ಟ್ವಿಟರ್ ಅಥವಾಎಕ್ಸ್ ನ ಓನರ್ ಎಲನ್ ಮಸ್ಕ್ ಜಗತ್ತಿನ ಮತ್ತಯಾವ ಶ್ರೀಮಂತನು ಹತ್ತಿರಕ್ಕೆ ಸುಳಿಯಲಾಗದಷ್ಟು ಸಂಪತ್ತು ಸೃಷ್ಟಿಸಿಕೊಂಡು ಮೆರಿತಾ ಇರುವ ಮಸ್ಕ್ ಭವಿಷ್ಯ ನುಡಿದಿರುವ ಭವಿಷ್ಯ ಇದು ಎತ್ತಿಚಿಗಷ್ಟೇ ಮಸ್ಕ್ ಭಾರತೀಯ ಮೂಲದ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ್ದಾರೆ ಭಾರತದ ಅದರಲ್ಲೂ ಬೆಂಗಳೂರು ಮೂಲದ ಪ್ರತಿಷ್ಠಿತ ಸ್ಟಾಕ್ ಬ್ರೋಕರೇಜ್ ಕಂಪನಿ ಜಿರೋದಾದ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್ಕಾಸ್ಟ್ ನಲ್ಲಿ ಮಸ್ಕ್ ಕಾಣಿಸಿಕೊಂಡಿದ್ರು ಈ ವೇಳೆ ನಿಖಿಲ್ ಕಾಮತ್ ಭವಿಷ್ಯದ ಜಾಬ್ ಕಲ್ಚರ್ ಬಗ್ಗೆ ಕೇಳಿದಾಗ ಮಸ್ಕ್ ಈ ರೀತಿ ಹೇಳಿದ್ದಾರೆ ನನ್ನ ಪ್ರೆಡಿಕ್ಷನ್ ಪ್ರಕಾರ ಇನ್ನು ಕೇವಲ 20ೇ ವರ್ಷದಲ್ಲಿ ಅಥವಾ ಇನ್ನು 10ರಿಂದ 15 ವರ್ಷದಲ್ಲಿ ವರ್ಕಿಂಗ್ ಅನ್ನೋದು ಆಪ್ಷನಲ್ ಆಗಿಬಿಡುತ್ತೆ ಜನ ಅವರಿಗೆ ಮನಸಿದ್ದರೆ ಕೆಲಸ ಮಾಡಬಹುದು ಬೇಡವಾದರೆ ಬಿಡಬಹುದು ಕೆಲಸ ಅನ್ನೋದು ಹೆಚ್ಚು ಕಮ್ಮಿ ಹಾಬಿ ರೀತಿ ಅಥವಾ ಅವ್ಯಾಸದ ರೀತಿ ಆಗಿಬಿಡುತ್ತೆ ಈ ಕ್ರಾಂತಿಕಾರಿ ಬದಲಾವಣೆಗೆ ಕಾರಣ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಹಾಗೂ ರೋಬೋಟಿಕ್ಸ್ ಈ ಕ್ಷೇತ್ರದಲ್ಲಿ ಬರ್ತಾ ಇರುವ ಅತ್ಯಾಧುನಿಕ ತಂತ್ರಜ್ಞಾನಂ ಉದ್ಯೋಗಗಳನ್ನ ನುಂಗಿ ನೀರು ಕುಡಿಯುತ್ತೆ ಅಂತ ಮಸ್ಕ್ ಹೇಳಿದ್ದಾರೆ.
ಈಗಿನ ಈ ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ಯುಗದಲ್ಲಿ ಅಂದರೆ ಪ್ರತಿಯೊಂದು ವಸ್ತು ನಿಮಿಷಗಳಲ್ಲೇ ಮನೆ ಬಾಗಿಲಿಗೆ ಬರ್ತಿರುವ ಟೈಮ್ನಲ್ಲಿ ಅಂಗಡಿಗೆ ಹೋಗಿ ದಿನಸಿ ತರೋ ಆಪ್ಷನಲ್ ಆಗಿರುವ ತರ ಫ್ರೆಶ್ ತರಕಾರಿ ಆರ್ಗ್ಯಾನಿಕ್ ತರಕಾರಿ ಮನೆ ಬಾಗಿಲಿಗೆ ಬರ್ತಿದ್ರು ಕೆಲವರು ಹವ್ಯಾಸಕ್ಕೆ ತರಕಾರಿ ಬೆಳೆಯುವ ತರ ವರ್ಕಿಂಗ್ ಕೂಡ ಆಪ್ಷನಲ್ ಆಗಿಬಿಡುತ್ತೆ ಅಂತ ಹೇಳ್ತಿದ್ದಾರೆ ಯಾಕಂದರೆ ಕೆಲಸ ಮಾಡ್ತೀನಿ ಅಂದ್ರು ಮನುಷ್ಯರು ಮಾಡುವ ಕೆಲಸಗಳೇ ಆಗ ಇರೋದಿಲ್ಲ ಪ್ರತಿಯೊಂದು ಕ್ಷೇತ್ರದಲ್ಲಿ ಎಐ ಮೂಲಕ ಕೆಲಸ ಮಾಡುವ ಮಷೀನ್ಗಳು ರೋಬೋಟ್ಗಳು ಬಂದು ಕೂತಿರತಾವೆ ಕುದ್ದು ಎಲನ್ ಮಸ್ಕ್ ತಮ್ಮ ಆಪ್ಟಿಮನ್ ರೋಬೋಟ್ ಮನೆಯಲ್ಲೂ ಜನರಿಗೆ ಅಸಿಸ್ಟೆಂಟ್ ಕೊಡುದಕ್ಕೆ ಶುರು ಮಾಡಿರುತ್ತೆ ಅಂತ ಹೇಳ್ತಿದ್ದಾರೆ ಪ್ರತಿಯೊಂದು ಕ್ಷೇತ್ರದಲ್ಲೂ ಅಗತ್ಯಕ್ಕೆ ತಕ್ಕ ಹಾಗೆ ಎಐ ಮಷೀನ್ ಹಾಗೂ ರೋಬೋಟ್ಗಳನ್ನ ಕಸ್ಟಮೈಸ್ ಮಾಡಿ ಕೆಲಸಕ್ಕೆ ಹಚ್ಚಿಬಿಡಬಹುದು ಮನೆ ಕ್ಲೀನಿಂಗ್ ನಿಂದ ಹಿಡಿದು ಡ್ರೈವಿಂಗ್ ಲಾಜಿಸ್ಟಿಕ್ಸ್ ವೇರ್ಹೌಸಿಂಗ್ ಡೇಟಾ ಎಂಟ್ರಿ ಸರ್ಕಾರದ ಅಡ್ಮಿನಿಸ್ಟ್ರೇಟಿವ್ ಕೆಲಸಗಳು ಪ್ರತಿಯೊಂದಕ್ಕೂ ಯಾವುದೇ ಸಂಬಳ ತೆಗೆದುಕೊಳ್ಳದ ರಜ ಹಾಕದ ತಪ್ಪನ್ನೇ ಮಾಡದ ಎಐ ರೋಬೋಟ್ಗಳು ಕಾಲಿಟ್ಟಿರುತ್ತೆಏಳೆಂಟು ಗಂಟೆ ಶಿಪ್ನಲ್ಲಿ ಕೆಲಸ ಮಾಡುವ ಮನುಷ್ಯರ ಬದಲಿಗೆ 24 ಗಂಟೆ ಕೆಲಸ ಮಾಡುವ ರೋಬೋಟ್ಗಳೇ ನಡೆಸುವ ಫ್ಯಾಕ್ಟರಿಗಳು ತಲೆ ಎತ್ತಲಿವೆ ಎಐ ಹಾಗೂ ರೋಬೋಟ್ಗಳಿಂದ ಜಗತ್ತಿನ ಪ್ರೊಡಕ್ಟಿವಿಟಿ ಅಥವಾ ಉತ್ಪಾದಕತ್ವ ಜಾಸ್ತಿ ಆಗುತ್ತೆ ಇವತ್ತು ಪ್ರತಿಯೊಂದು ವಸ್ತು ಉತ್ಪಾದನೆ ಆಗುವುದಕ್ಕೂ ಸಾಕಷ್ಟು ಶ್ರಮ ಬೇಕು ಸಮಯ ಕೂಡ ಬೇಕು ಇದೇ ಕಾರಣಕ್ಕೆ ಆ ವಸ್ತುವಿಗೆ ಬೆಲೆ ಅನ್ನೋದು ನಿಗದಿಯಾಗುತ್ತೆ ಆದರೆ ರೋಬೋಟಿಕ್ಸ್ ನಿಂದ ಆ ವಸ್ತು ಉತ್ಪಾದನೆ ಆಗುದಕ್ಕೆ ಶ್ರಮನು ಬೇಡ ಸಮಯನು ಬೇಡ ಕಡಿಮೆ ಕಡಿಮೆ ಸಮಯದಲ್ಲಿ ಕಡಿಮೆ ಶ್ರಮದಲ್ಲಿ ರಾಶಿ ರಾಶಿಯಷ್ಟು ಉತ್ಪಾದನೆ ಆಗುತ್ತೆ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿನ ಸಪ್ಲೈ ಜಾಸ್ತಿ ಆಗುತ್ತೆ ಸಪ್ಲೈ ಜಾಸ್ತಿ ಆದರೆ ಬೆಲೆ ಕಡಿಮೆ ಆಗಬೇಕು ಹಾಗಾಗಿ ಪ್ರತಿಯೊಬ್ಬರಿಗೂ ಆ ವಸ್ತುಗಳು ಕಡಿಮೆ ಬೆಲೆಗೆ ಸಿಗೋದಕ್ಕೆ ಶುರುವಾಗುತ್ತೆ.
ಯಾವ ಮಟ್ಟಕ್ಕಂದರೆ ಬಹಳ ಈಸಿಯಾಗಿ ಪ್ರತಿ ವಸ್ತು ಆತನಿಗೆ ಸಿಗೋದಕ್ಕೆ ಶುರುವಾಗುತ್ತೆ ಹೇಗಿರುವಾಗ ಆತನಿಗೆ ಹೆಚ್ಚೆಚ್ಚು ಹಣ ಸಂಪಾದನೆ ಮಾಡುವ ಅವಶ್ಯಕತೆ ಇರೋದಿಲ್ಲ ಹಾಗಾಗಿ ಕೆಲಸ ಮಾಡುವ ಅವಶ್ಯಕತೆ ನ ಬರಲ್ಲ ಅನ್ನೋದು ಎಲನ್ ಮಸ್ಕ್ರ ವಾದ ಇಷ್ಟೇ ಆಗಿದ್ರೆ ಇದನ್ನೆಲ್ಲ ನಂಬುದಕ್ಕೆ ಸಾಧ್ಯನ ಅನ್ನುವ ಪ್ರಶ್ನೆ ನಿಮಗೆ ಬರ್ತಾ ಇತ್ತು ಇಲ್ಲಿ ಎಲನ್ಸ ಇನ್ನೊಂದು ಆರ್ಗ್ಯುಮೆಂಟ್ ಮುಂದಿಟ್ಟಿದ್ದಾರೆ ಅದು ಹಣದ ಬಗ್ಗೆ ಮುಂದೊಂದು ದಿನ ಹಣಕ್ಕೆ ಮೌಲ್ಯವೇ ಇಲ್ಲದಿರುವ ಟೈಮ್ ಬರುತ್ತೆ ಹಣ ತನ್ನ ಪ್ರಸ್ತುತೆಯನ್ನೇ ಕಳೆದುಕೊಳ್ಳುವ ಸಮಯ ಕೂಡ ಬಂದೇ ಬರುತ್ತೆ ಜಗತ್ತಿನಲ್ಲಿ ಆಗ ಅವಶ್ಯಕತೆ ಅಂತ ಬರೋದು ಅನಿವಾರ್ಯ ಅಂತ ಇರೋದು ಒಂದು ವಸ್ತುವಿಗೆ ಮಾತ್ರ ಅದು ಶಕ್ತಿ ಇಂಧನ ಎಐ ರೋಬೋಟಿಕ್ಸ್ ಕೆಲಸ ಮಾಡೋದಕ್ಕೆ ಶಕ್ತಿ ಬೇಕು ಹಾಗಾಗಿ ಆ ಶಕ್ತಿ ಮಾತ್ರ ಪ್ರಸ್ತುತೆಯನ್ನ ಉಳಿಸಿಕೊಳ್ಳುತ್ತೆ ಅಂತ ಹೇಳಿದ್ದಾರೆ ಜೊತೆಗೆ ಆ ಶಕ್ತಿ ಉತ್ಪಾದನೆಗೂ ಮನುಷ್ಯ ಬೇಕಿಲ್ಲ ಎ ಹಾಗೂ ರೋಬೋಟಿಕ್ಸ್ ಯಾವ ಮಟ್ಟಿಗೆ ಬೆಳೆಯುತ್ತೆ ಅಂತ ಹೇಳಿದ್ರೆ ಒಂದು ಹಂತದವರೆಗೆ ಅವು ಮನುಷ್ಯನ ಅವಶ್ಯಕತೆಯನ್ನೆಲ್ಲ ಪೂರೈಸಿಬಿಡುತ್ತೆ ಅವುಗಳ ಹತ್ರನು ಕೆಲಸ ಮಾಡೋದಕ್ಕೆ ಏನು ಉಳಿಯಲ್ಲ ಆಗ ತಮಗೆ ತಾನೇ ಕೆಲಸ ಮಾಡಿಕೊಳ್ಳೋದಕ್ಕೆ ಶುರು ಮಾಡ್ತಾವೆ ಎಐ ಗೋಸ್ಕರನೇ ಕೆಲಸ ಮಾಡುತ್ತೆ ರೋಬೋಟಿಕ್ಸ್ ನ ಇಂಪ್ರೂವ್ ಮಾಡೋದಕ್ಕೆ ಕೆಲಸ ಮಾಡುತ್ತೆ ಆ ಕೆಲಸಕ್ಕೆ ಬೇಕಾದ ಶಕ್ತಿ ಉತ್ಪಾದನೆ ಬಾಹ್ಯಾಕಾಶದಲ್ಲಿ ಆಗುತ್ತೆ ಅಂತ ಮಸ್ ಹೇಳಿದ್ದಾರೆ ಅದಕ್ಕೆ ಅವರು ಕೊಟ್ಟಿರುವ ಥಿಯರಿ ಕರ್ದಶೇವ್ ಸ್ಕೇಲ್ ಸ್ನೇಹಿತರೆ ಕರ್ದಶೇವ್ ಸ್ಕೇಲ್ ಅಂದ್ರೆ ಒಂದು ಗ್ರಹದ ಮೇಲಿರುವ ಅತ್ಯಂತ ಬುದ್ಧಿವಂತ ಜೀವಿ ಆ ಗ್ರಹಕ್ಕೆ ತಲುಪುವ ಶಕ್ತಿಯನ್ನ ಎಷ್ಟರ ಮಟ್ಟಿಗೆ ಬಳಕೆ ಮಾಡಿಕೊಳ್ಳುತ್ತೆ ಅನ್ನುವ ಮಾಪಕ ಅಥವಾ ಶಕ್ತಿಯನ್ನ ಬಳಸಿಕೊಳ್ಳುದಕ್ಕೆ ಯಾವ ಲೆವೆಲ್ನ ಟೆಕ್ನಾಲಜಿ ಅಭಿವೃದ್ಧಿ ಮಾಡಿಕೊಂಡಿದೆ ಅನ್ನುವ ಮಾಪಕ ಭೂಮಿ ಮೇಲೆಇರುವ ಅತ್ಯಂತ ಬುದ್ಧಿ ವಂತ ಜೀವಿ ಅಂದರೆ ಮನುಷ್ಯ ಇಷ್ಟು ವರ್ಷ ಮನುಷ್ಯ ಅತ್ಯಂತ ಅಡ್ವಾನ್ಸ್ಡ್ ಟೆಕ್ನಾಲಜಿಯನ್ನ ಸೃಷ್ಟಿ ಮಾಡಿ ಭೂಮಿ ಸುತ್ತ ಬಾಹ್ಯಾಕಾಶದಲ್ಲಿ ಸೋಲಾರ್ ಪ್ಯಾನೆಲ್ಗಳನ್ನ ಹಾಕಿ ಶಕ್ತಿ ಹೀರಿಕೊಳ್ಳುತ್ತಾನೆ ಅಂತ ನಂಬಲಾಗ್ತಾ ಇತ್ತು.
ಈ ಕೆಲಸ ಮನುಷ್ಯ ಅಲ್ಲ ಬದಲಿಗೆ ಮನುಷ್ಯ ಸೃಷ್ಟಿ ಮಾಡಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡುತ್ತೆ ಅಂತ ಮಸ್ಕ್ ಹೇಳಿದ್ದಾರೆ ಭೂಮಿ ಸುತ್ತ ಬಾಹ್ಯಆಕಾಶದಲ್ಲಿ ಎಐ ಚಾಲಿತ ಸೋಲಾರ್ ಪ್ಯಾನೆಲ್ಗಳು ಸುತ್ತಾಡುವ ಕಾಲ ಬರುತ್ತೆ ಆ ಮೂಲಕ ನೇರವಾಗಿ ಮನುಷ್ಯನ ಮೂಲಕ ಅಲ್ಲ ಮನುಷ್ಯ ಸೃಷ್ಟಿಸಿರುವ ಎಮೂಲ ಮೂಲಕ ಅತಿ ಹೆಚ್ಚು ಶಕ್ತಿಯ ಬಳಕೆಯಾಗುತ್ತೆ ಯಾವುದೇ ಖರ್ಚಿಲ್ಲದೆ ಶಕ್ತಿ ಸಿಗತಾ ಹೋಗುತ್ತೆ ಹಾಗಾಗಿ ಒಂದು ಹಂತ ತಲುಪು ಹೊತ್ತಿಗೆ ಮನುಷ್ಯ ಸೃಷ್ಟಿ ಮಾಡಿಕೊಂಡಿರುವ ದುಡ್ಡಿಗೂ ಬೆಲೆ ಇಲ್ಲ ಅಥವಾ ಹಣ ಅನ್ನೋದು ಅಪ್ರಸ್ತುತ ಆಗುತ್ತೆ ಅನ್ನೋದು ಮಸ್ಕರ ಭವಿಷ್ಯವಾಣಿ ಮಸ್ಕ್ ಈ ರೀತಿ ಎಐ ರೋಬೋಟಿಕ್ಸ್ ಬಗ್ಗೆ ಭವಿಷ್ಯದ ವರ್ಕ್ ಕಲ್ಚರ್ ಬಗ್ಗೆ ಭವಿಷ್ಯ ನುಡಿತಾ ಇರೋದು ಇದೆ ಮೊದಲೇನಲ್ಲ ಕಳೆದ ತಿಂಗಳಷ್ಟೇ ಅಮೆರಿಕಾ ಸೌದಿ ಅರೇಬಿಯಾ ಹೋಡಿಕೆ ಸಮ್ಮೇಳನದಲ್ಲೂ ಇದೇ ಇದೇ ರೀತಿ ಭವಿಷ್ಯ ನುಡಿದಿದ್ರು ಇದು ವಾಸ್ತವಕ್ಕೆ ದೂರ ಅಂತಲೂ ಹೇಳೋದಕ್ಕೆ ಆಗೋದಿಲ್ಲ ಬಹಳ ಹತ್ತರ ಇದೆ ಅಂತಲೂ ಹೇಳೋದಕ್ಕೆ ಸಾಧ್ಯವಿಲ್ಲ ಕಾಯಕವೇ ಕೈಲಾಸ ಅನ್ನುವ ನಂಬಿಕೆಗಳಿರುವ ಭಾರತದಂತಹ ದೇಶದಲ್ಲಿ 140 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು ಉದ್ಯೋಗ ಕೊರತೆ ತಾಂಡವವಾಡುತಾ ಇರುವ ಭಾರತದಲ್ಲಿ ಮಾಸ್ಕ್ ಕೇಳಿರುವ ರೀತಿ ಪರಿಸ್ಥಿತಿಯನ್ನ ವಹಿಸಿಕೊಳ್ಳುದಕ್ಕೆ ಸಾಧ್ಯ ಇಲ್ಲ ಆದರೆ ಅಮೆರಿಕಾ ಚೀನಾ ಜಪಾನ್ ಹಾಗೂ ಕೆಲವು ಪುಟ್ಟ ಶ್ರೀಮಂತ ರಾಷ್ಟ್ರಗಳಲ್ಲಿ ಈ ರೀತಿ ಟೆಕ್ನಾಲಜಿ ಬಜೆ ಅಡ್ವಾನ್ಸ್ ಆಗ್ತಿರೋದು ಸುಳ್ಳಲ್ಲ ಕೆಲವು ದೇಶಗಳಲ್ಲಿ ಉತ್ಪಾದಕತ್ವ ಜಾಸ್ತಿಯಾಗಿ ಅಲ್ಲಿನ ಸರ್ಕಾರಗಳೇ ಕೆಲಸ ಮಾಡಬೇಡಿ ರೆಸ್ಟ್ ತೆಗೆದುಕೊಳ್ಳಿ ಖುಷಿಯಾಗಿರಿ ಅಂತ ಹೇಳ್ತಿರೋದು ಕೂಡ ಸುಳ್ಳಲ್ಲ ಎಐ ಹಾಗೂ ರೋಬೋಟಿಕ್ಸ್ ಹಿಂದೆಂದಿಗಿಂತ ವೇಗವಾಗಿ ಮುನ್ನುಗತಾ ಇದೆ ಅಂತಹ ದೇಶಗಳಲ್ಲಿ ಮನುಷ್ಯನ ಜೀವನ ಕೂಡ ಸಿಂಪಲ್ ಆಗ್ತಿದೆ ಅದು ಯಾವ ಮಟ್ಟಿಗೆ ಸಿಂಪಲ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು.


