Saturday, February 7, 2026
HomeTech NewsFast Track Court + AI System: 1 ವರ್ಷದಲ್ಲಿ ನ್ಯಾಯ? ಹೊಸ ಕಾನೂನು ಪರಿಚಯ

Fast Track Court + AI System: 1 ವರ್ಷದಲ್ಲಿ ನ್ಯಾಯ? ಹೊಸ ಕಾನೂನು ಪರಿಚಯ

ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ಜಿಲ್ಲೆಗೊಂದು ತೊರಿತ ಕೋರ್ಟ್ ನಿರ್ಮಾಣ 500 ಹೊಸ ಸಭಾಂಗಣಕ್ಕೆ ನಿರ್ಧಾರ ಮೆಟ್ಟಿಲೇರಿದರೆ ಪರಿಹಾರ ಸಿಗಲು ತಲೆಮಾರುಗಳೇ ಕಳೆಯುತ್ತವೆ ಎಂಬ ಹಳೆಯ ಮಾತಿಗೆ ಶೀಘ್ರವೇ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ ದಶಕಗಳಿಂದ ದೂಳು ಹಿಡಿಯುತ್ತಿರುವ ಪ್ರಕರಣಗಳಿಗೆ ಮುಕ್ತಿ ನೀಡಲು ಮತ್ತು ಜನಸಾಮಾನ್ಯರಿಗೆ ಶೀಘ್ರ ನ್ಯಾಯ ಒದಗಿಸಲು ಕರ್ನಾಟಕ ಸರ್ಕಾರ ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ 2025 ಎಂಬ ಬ್ರಹ್ಮಾಸ್ತ್ರವನ್ನ ಸಿದ್ಧಪಡಿಸಿದೆ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ಸಿದ್ಧವಾಗಿರುವ ಈ ಮಹತ್ವಾಕಾಂಕ್ಷೆ ಯೋಜನೆಯು ಕೃತಕ ಬುದ್ಧಿಮತ್ತೆಯ ಬಳಕೆ ಮೂಲ ಸೌಕರ್ಯದ ವಿಸ್ತರಣೆ ಮತ್ತು ನ್ಯಾಯಾಂಗ ಅಧಿಕಾರಿಗಳ ಉತ್ತರದಾಯಿತ್ವವನ್ನ ಕೇಂದ್ರೀಕರಿಸಿದೆ ಹಳ್ಳಿಗಳ ಜನರು ರೈತಾಪಿ ವರ್ಗ ಮತ್ತು ಧಾವೆದಾರರ ಹಿತದೃಷ್ಟಿಯಿಂದ ರೂಪಿಸಲಾಗಿರುವ.

ಈ ಸುಧಾರಣೆಗಳು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲಾಗುವ ಮುನ್ಸೂಚನೆ ನೀಡ್ತಾ ಇವೆ ಹಾಗಾದರೆ ಏನಿದು ಜಿಲ್ಲೆಗೊಂದು ಕೋರ್ಟ್ ನಿರ್ಮಾಣ ಇದರಿಂದ ಏನು ಲಾಭ ಡೀಟೇಲ್ ಆಗಿ ನೋಡ್ಕೊಂಡು ಬರೋಣ ಬನ್ನಿ ಜಿಲ್ಲೆಗೊಂದು ಫಾಸ್ಟ್ ಟ್ರಾಕ್ ಕೋರ್ಟ್ ಹಳ್ಳಿಗಳ ಜನರು ಮತ್ತು ರೈತರು ಸಣ್ಣ ಪುಟ್ಟ ಸಿವಿಲ್ ದಾವೆಗಳಿಗಾಗಿ ವರ್ಷಗಟ್ಟಲೆ ಅಲೆಯುವುದನ್ನ ತಪ್ಪಿಸಲು ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ತ್ವರಿತಗತಿ ನ್ಯಾಯಾಲಯ ಅಂದ್ರೆ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪಿಸಲು ನಿರ್ಧಾರವನ್ನ ಮಾಡಿದೆ ಈ ನ್ಯಾಯಾಲಯಗಳು ರೈತರು ಕೃಷಿ ಕಾರ್ಮಿಕರು ಮತ್ತು ಉದ್ಯೋಗ ವಂಚಿತ ವ್ಯಕ್ತಿಗಳಿಗೆ ಸಂಬಂಧಿಸಿದ ಸಿವಿಲ್ ಪ್ರಕರಣಗಳನ್ನ ಆಧ್ಯತೆಯ ಮೇಲೆ ವಿಚಾರಣೆ ನಡೆಸಲಿವೆ ಅತಿ ಮುಖ್ಯವಾದ ಅಂಶವಂದರೆ ಇಂತಹ ಪ್ರಕರಣಗಳು ನ್ಯಾಯಾಲಯಕ್ಕೆ ದಾಖಲಾದ 12 ತಿಂಗಳೊಳಗೆ ಅಂದ್ರೆ ಒಂದು ವರ್ಷದ ಅವಧಿಯ ಒಳಗೆ ಇತ್ಯರ್ಥವಾಗಬೇಕು ಎಂಬ ಕಟ್ಟುನಿಟ್ಟಿನ ಆಶಯವನ್ನ ಸರ್ಕಾರ ವ್ಯಕ್ತಪಡಿಸಿದೆ ಮೂಲ ಸೌಕರ್ಯದ ಬಲವರ್ಧನೆ 500 ಹೊಸ ಕೋರ್ಟ್ ಹಾಲ್ಗಳು ನ್ಯಾಯ ವಿಳಂಬಕ್ಕೆ ಪ್ರಮುಖ ಕಾರಣವೇನಂದ್ರೆ ಮೂಲ ಸೌಕರ್ಯಗಳ ಕೊರತೆ ಇದನ್ನ ನೀಗಿಸಲು ಸರ್ಕಾರ 2030ರ ಬೇಳಿಗೆ ರಾಜ್ಯಾದ್ಯಂತ 500 ಹೊಸ ನ್ಯಾಯಾಲಯದ ಕೊಟ್ಟಡಿಗಳನ್ನ ನಿರ್ಮಿಸುವ ಬೃಹತ್ ಗುರಿಯನ್ನ ಹೊಂದಿದೆ ಕೇವಲ ಕಟ್ಟಡಗಳಲ್ಲದೆ.

ನ್ಯಾಯಾಂಗ ಅಧಿಕಾರಿಗಳಿಗೆ ಸುಸಜ್ಜಿತ ವಸತಿ ಸೌಲಭ್ಯಗಳನ್ನ ಒದಕಿಸುವುದು ಈ ಯೋಜನೆಯ ಭಾಗವಾಗಿದೆ ವಿಶೇಷವಾಗಿ ಕೋರ್ಟಿಗೆ ಬರುವ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ಮತ್ತು ಸುಸ ಸುಸಜ್ಜಿತ ವ್ಯವಸ್ಥೆಗಳನ್ನ ಕಲ್ಪಿಸುವುದನ್ನ ಈ ವಿಧೇಯಕದಲ್ಲಿ ಕಡ್ಡಾಯಗೊಳಿಸಲಾಗಿದೆ ಇದು ನ್ಯಾಯಾಲಯಗಳನ್ನ ಜನ ಸ್ನೇಹಿಯಾಗಿಸುವತ್ತ ಇಟ್ಟ ಮೊದಲ ಹೆಜ್ಜೆಯಾಗಿದೆ ತಡೆಯಾಜ್ಞೆಗಳ ಮೇಲೆ ಕಠಿಣ ನಿಯಂತ್ರಣ ಹಲವು ವರ್ಷಗಳಿಂದ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳು ಅಥವಾ ಮೂಲ ಸೌಕರ್ಯ ಕಾಮಗಾರಿಗಳು ಕೇವಲ ತಡೆಯಾಜ್ಞೆ ಅಂದರೆ ಸ್ಟೇ ಆರ್ಡರ್ ಕಾರಣದಿಂದ ಅರ್ಧಕ್ಕೆ ನಿಂತಿರುತ್ತವೆ ಇದಕ್ಕೆ ಅಂತ್ಯ ಹಾಡಲು ಸರ್ಕಾರ ಹೊಸ ನಿಯಮವನ್ನು ರೂಪಿಸಿದೆ ಇನ್ನು ಮುಂದೆ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಮಧ್ಯಂತರ ಆದೇಶ ಆದೇಶ ನೀಡುವಾಗ ಅತ್ಯಂತ ಜಾಗರಕತೆ ವಹಿಸಬೇಕಾಗುತ್ತೆ.

ಯಾವುದೇ ಮಧ್ಯಂತರ ಆದೇಶವು ಹೊರಡಿಸಿದ ದಿನಾಂಕದಿಂದ ಗರಿಷ್ಠ 30 ದಿನಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತೆ ವಿಶೇಷ ಮತ್ತು ಅನಿವಾರ್ಯ ಕಾರಣಗಳಿಲ್ಲದೆ ಇದನ್ನ ಮುಂದುವರಿಸುವಂತಿಲ್ಲ ಇದರಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ನ್ಯಾಯಾಂಗದಲ್ಲಿ ಕೃತಕ ಬುದ್ಧಿಮತ್ತೆ ಅಂದರೆ ಎಐ ಬಳಕೆ ಆಧುನಿಕ ತಂತ್ರಜ್ಞಾನದ ಸಮ್ಮೇಲನವಿಲ್ಲದೆ ವೇಗ ಅಸಾಧ್ಯ ಹೀಗಾಗಿ ಜಿಲ್ಲಾ ನ್ಯಾಯಾಂಗದಲ್ಲಿ ಪ್ರಕರಣಗಳ ಸಲ್ಲಿಕೆ ದಾಖಲೆಗಳ ಪರಿಶೀಲನೆ ಕಾನೂನು ಸಂಶೋಧನೆ ಮತ್ತು ನ್ಯಾಯಾಲಯದ ದಿನಚರಿ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ ಅಂದರೆ ಎಐ ಬಳಸಲು ನಿರ್ಧರಿಸಲಾಗಿದೆ. ಎಐ ತಂತ್ರಜ್ಞಾನವು ಕೇವಲ ಸಹಾಯಕವಾಗಿ ಕೆಲಸ ಮಾಡಲಿದೆಯ ಹೊರತು ನ್ಯಾಯಾಂಗದ ವಿವಚನೆಯನ್ನ ಬದಲಿಸುವುದಿಲ್ಲ. ಅಂತಿಮ ತೀರ್ಪು ಯಾವಾಗಲೂ ನ್ಯಾಯಾಂಗ ಅಧಿಕಾರಿಯದ್ದೆ ಆಗಿರುತ್ತೆ ಅಂತ ಸರ್ಕಾರ ಸ್ಪಷ್ಟಪಡಿಸಿದೆ. ಇದು ನ್ಯಾಯಾಧೀಶರ ಕೆಲಸದ ಹೊರೆಯನ್ನ ಕಡಿಮೆ ಮಾಡಿ ತೀರ್ಪಿನ ಗುಣಮಟ್ಟವನ್ನ ಹೆಚ್ಚಿಸಲಿದೆ. ಕೇಸ್ ಮುಂದುಡಿಕೆ ಸಂಸ್ಕೃತಿಗೆ ಬ್ರೇಕ್. ಕೋರ್ಟ್ಗಳಲ್ಲಿ ಇಂದಿನ ವಿಚಾರಣೆ ಮುಂದುಡಪಟ್ಟಿದೆ ಎಂಬ ಮಾತು ದಾವೆದಾರರನ್ನ ಹೈರಣಾಗಿಸುತ್ತಾ ಇದೆ. ಇದನ್ನ ತಡೆಯಲು ವಿಧೇಯಕದಲ್ಲಿ ಕಟ್ಟುನಿಟ್ಟಿನ ಕ್ರಮಗಳು ಇವೆ.

ಸಮರ್ಥನೀಯ ಮತ್ತು ಅಸಾಧಾರಣ ಕಾರಣಗಳಿಲ್ಲದೆ ವಿಚಾರಣೆಯನ್ನ ಮುಂದುಡುವಂತಿಲ್ಲ. ಒಂದು ವೇಳೆ ಯಾವುದೇ ಪಕ್ಷಕಾರರು ವಿನಾಕಾರಣ ಮುಂದುಡಿಕೆ ಕೇಳಿದರೆ ಅವರಿಗೆ ಕನಿಷ್ಠ 5000 ರೂಪಾಯಿ ದಂಡ ವಿಧಿಸುವ ಪ್ರಸ್ತಾಪವಿದೆ. ಅಷ್ಟೇ ಅಲ್ಲ ವರ್ಷದಲ್ಲಿ ಶೇಕಡಹಕ್ಕಿಂತ ಕಡಿಮೆ ಮುಂದುಡಿಕೆ ನೀಡುವ ದಕ್ಷ ನ್ಯಾಯಾಂಗ ಅಧಿಕಾರಿಗಳಿಗೆ ವಾರ್ಷಿಕ ಕಾರ್ಯಕ್ಷಮತೆ ವರದಿಯಲ್ಲಿ ವಿಶೇಷ ಪ್ರೋತ್ಸಾಹದಾನ ನೀಡವನ್ನು ಕೂಡ ನಿರ್ಧರಿಸಲಾಗಿದೆ. ಪಾರದರ್ಶಕತೆ ಮತ್ತು ಆಸ್ತಿ ವಿವರ ಘೋಷಣೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ನಂಬಿಕೆಯನ್ನ ಹೆಚ್ಚಿಸಲು ಸರ್ಕಾರ ಒಂದು ದೊಡ್ಡ ಹೆಜ್ಜೆಯನ್ನ ಇಟ್ಟಿದೆ. ಇನ್ನು ಮುಂದೆ ಪ್ರತಿಯೊಬ್ಬ ಜಿಲ್ಲಾ ನ್ಯಾಯಾಂಗ ಅಧಿಕಾರಿಯು ಪ್ರತಿವರ್ಷದ ಜನವರಿ 31ರ ಒಳಗೆ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಸ್ಥಿರ ಮತ್ತು ಜರ ಆಸ್ತಿಗಳ ವಿವರಗಳನ್ನು ಕಡ್ಡಾಯವಾಗಿ ಘೋಷಣೆ ಮಾಡಲೇಬೇಕು.

ಈ ವಿವರಗಳನ್ನ ನ್ಯಾಯಾಂಗದ ಅಧಿಕೃತ ವೆಬ್ಸೈಟ್ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನ ಹೆಚ್ಚಿಸಲಿದೆ. ಒಟ್ಟಿನಲ್ಲಿ ಹೆಚ್ಚಿನ ಪ್ರಕರಣಗಳು ಕೆಳಹಂತದ ನ್ಯಾಯಾಲಯಗಳಲ್ಲಿ ಇತ್ತರ್ಥವಾಗುವುದರಿಂದ ವಿಚಾರಣಾ ನ್ಯಾಯಾಲಯಗಳನ್ನ ಬಲಪಡಿಸುವುದು ಅತ್ಯಗತ್ಯ. ಕರ್ನಾಟಕ ಸರ್ಕಾರದ ಈ ಹೊಸ ವಿಧೇಯಕವು ಕೇವಲ ಕಾನೂನುಗಳ ಬದಲಾವಣೆಯಲ್ಲ ಬದಲಾಗಿ ಒಂದು ವ್ಯವಸ್ಥಿತ ಸುಧಾರಣೆಯಾಗಿದೆ. ಉಚ್ಚ ನ್ಯಾಯಾಲಯದ ಮಾರ್ಗದರ್ಶನದಲ್ಲಿ ಈ ಬದಲಾವಣೆಗಳು ಜಾರಿಗೆ ಬಂದರೆ ಸಾಮಾನ್ಯ ಜನರಿಗೆ ನ್ಯಾಯಾಲಯದ ಮೆಟ್ಟಿಲರುವುದು ಶಾಪವಾಗಿ ಉಳಿಯುವುದಿಲ್ಲ. ದಾವೆದಾರರು ತಮ್ಮ ಜೀವನದ ಅಮೂಲ್ಯ ಸಮಯವನ್ನ ನ್ಯಾಯಾಲಯದ ಆವರಣದಲ್ಲಿ ಕಳೆಯುವ ಬದಲಾಗಿ ಶೀಘ್ರವಾಗಿ ನ್ಯಾಯ ಪಡೆದು ನೆಮ್ಮದಿಯ ಜೀವನ ನಡೆಸಲು ಈ ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ 2025 ಪೂರಕವಾಗಲಿದೆ ಕೃತಕ ಬುದ್ಧಿಪತ್ಯೆ ಮತ್ತು ಕಟ್ಟುನಿಟ್ಟಿನ ನಿಯಮಗಳ ಸಮ್ಮಿಲನವು ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನ ರಾಷ್ಟ್ರ ಮಟ್ಟದಲ್ಲಿ ಮಾದರಿಯನ್ನಾಗಿ ಮಾಡುವ ಎಲ್ಲಾ ಲಕ್ಷಣಗಳನ್ನ ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments