ರಾಜ್ಯದಲ್ಲಿ ಹೊಸ ನಗರ ಸೃಷ್ಟಿ ಬಿಡದೆ ಬಳಿ ದೇಶದ ಮೊದಲ ಎಐ ಸಿಟಿ ನಿರ್ಮಾಣ ಡಿಕೆಶಿ ಬಿಗ್ ಕನಸು ಏನಿದು ಜಿಬಿಐಟಿ ಸ್ನೇಹಿತರೆ ಇಡೀ ಜಗತ್ತು ಎಐ ಕಡೆ ಮುಖ ಮಾಡ್ತಿರೋ ಹೊತ್ತಲ್ಲಿ ರಾಜ್ಯ ಸರ್ಕಾರ ದೊಡ್ಡ ಘೋಷಣೆ ಮಾಡಿದೆ ಬೆಂಗಳೂರಿನಿಂದ ಜಸ್ಟ್ 30 ಕಿಲೋಮೀಟ ದೂರದಲ್ಲಿರೋ ಬಿಡದಿಯಲ್ಲಿ ದೇಶದ ಮೊದಲ ಎಐಸಿಟಿ ಅಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಗರ ನಿರ್ಮಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಅನೌನ್ಸ್ ಮಾಡಿದ್ದಾರೆ. 2000 ಎಕರೆ ಜಾಗದಲ್ಲಿ ಎಐ ಆಧಾರಿತ ಇಂಡಸ್ಟ್ರಿಗಳು ತಲೆ ಎತ್ತಲಿವೆ. ಓವರ್ ಆಲ್ 9000 ಎಕರೆ ಪ್ರದೇಶದಲ್ಲಿ ಈ ಬೃಹದಾಕಾರದ ನಗರ ನಿರ್ಮಾಣ ಆಗಲಿದೆ ಅಂದಿದ್ದಾರೆ. ಹಾಗಿದ್ರೆ ಏನಿದು ಎಐ ಸಿಟಿ? ಇಲ್ಲಿ ಏನೆಲ್ಲಾ ಅದ್ಭುತ ಇರುತ್ತೆ? ಈ ಎಐ ನಗರದಿಂದ ರಾಜ್ಯಕ್ಕೆ ಏನು ಉಪಯೋಗ? .
ಜೊತೆಗೆ ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿರುವ ಬೃಹತ್ ಯೋಜನೆಗಳ ಕಥೆ ಏನಾಯ್ತು ಅನ್ನೋದನ್ನು ಕೂಡ ರಿವ್ಯೂ ಮಾಡೋಣ. ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣ. ಡಿಸಿಎಂ ಡಿಕೆಶಿ ದೊಡ್ಡ ಘೋಷಣೆ. ಹೌದು ಸ್ನೇಹಿತರೆ ಸೆಪ್ಟೆಂಬರ್ ಐದರಂದು ಡಿಸಿಎಂ ಡಿಕೆ ಶಿವಕುಮಾರ್ ಇಂಥದೊಂದು ಅನೌನ್ಸ್ಮೆಂಟ್ ಮಾಡಿದ್ದಾರೆ. ಬೆಂಗಳೂರು ಸಮೀಪದ ಬಿಡದಿ ಬಳಿ ಒಟ್ಟು 9ಸ000 ಎಕರೆ ವ್ಯಾಪ್ತಿಯಲ್ಲಿ ದೇಶದಲ್ಲೇ ಮೊದಲ ಎಐ ಸಿಟಿ ನಿರ್ಮಾಣ ಮಾಡ್ತೀವಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಜಿಬಿಐಟಿ ಅನ್ನೋ ಈ ನಗರದಲ್ಲಿ ಎಐ ಆಧಾರಿತ ಇಂಡಸ್ಟ್ರಿಗಳು ತಲೆಯಎತ್ತಲಿವೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತೆ ಅಲ್ಲದೆ 950 ಎಕರೆ ಜಾಗದಲ್ಲಿ ಉದ್ಯಾನವನ್ನ ಹಾಗೂ ಕೆರೆಗಳ ನಿರ್ಮಾಣ ಮಾಡ್ತೀವಿ ಜೀರೋ ಟ್ರಾಫಿಕ್ ಅತ್ಯಾಧುನಿಕ ಸಾರಿಗೆ ಸಂಪರ್ಕ ಸೇರಿ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತೆ ಅಂತ ಡಿಕೆಶಿ ಹೇಳಿದ್ದಾರೆ ಈ ಯೋಜನೆಗಾಗಿ ಬಿಡದಿ ಬಳಿ ಒಂಬತ್ತು ಗ್ರಾಮಗಳ 8493 ಎಕರೆ ಜಮೀನನ್ನ ಸ್ವಾಧೀನ ಪಡಿಸಿಕೊಳ್ಳುತೀವಿ ಭೂಮಿ ಕೊಟ್ಟವರಿಗೆ 2013ರ ಭೂಸ್ವಾಧೀ ನ ಕಾಯ್ದೆ ಅಡಿ ಪ್ರಸಕ್ತ ಮಾರ್ಕೆಟ್ ರೇಟಲ್ಲಿ ಪ್ರತಿ ಎಕರೆಗೆ ಒಂದೂವರೆಯಿಂದ ಎರಡುವರೆ ಕೋಟಿ ಪರಿಹಾರ ನೀಡ್ತೀವಿ ಒಪ್ಪಿಗೆ ಪತ್ರ ಕೊಟ್ಟವರಿಗೆ ಮೂರೇ ದಿನದಲ್ಲಿ ಪರಿಹಾರದ ಚೆಕ್ ಕೊಡ್ತೀವಿ ಅಂದಿದ್ದಾರೆ ಏನಿದು ಎಐಸಿಟಿ ಸ್ನೇಹಿತರೆ ಹೆಸರೇ ಹೇಳೋ ಹಾಗೆ ಎಐಸಿಟಿ ಅಂದ್ರೆ ಮುಖ್ಯವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮೂಲಕ ಕೆಲಸ ಮಾಡೋ ನಗರ ಅಂದ್ರೆ ಟ್ರಾಫಿಕ್ ಲೈಟ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಎನರ್ಜಿ ವಾಟರ್ ವೇಸ್ಟ್ ಮ್ಯಾನೇಜ್ಮೆಂಟ್ ಸೆಕ್ಯೂರಿಟಿ ಮತ್ತು ಪಬ್ಲಿಕ್ ಸೆಕ್ಟರ್ ಐಟಿ ಹೀಗೆ ಹಲವು ವಲೆಗಳನ್ನ ಎಐ ಮೂಲಕ ಮ್ಯಾನೇಜ್ ಮಾಡಲಾಗುತ್ತೆ ಸುಮಾರು 9ಸ000 ಎಕರೆ ಪ್ರದೇಶದಲ್ಲಿ ಬಿಡದಿಯಲ್ಲಿ ಈ ದೊಡ್ಡ ಸಿಟಿ ನಿರ್ಮಾಣ ಮಾಡಲಾಗುತ್ತದೆ ಈ ಪೈಕಿ 2000ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಎಐ ಆಧಾರಿತ ಇಂಡಸ್ಟ್ರಿಗಳು ನಿರ್ಮಾಣವಾಗಲಿವೆ ಇಲ್ಲಿ ಗ್ಲೋಬಲ್ ಇನ್ವೆಸ್ಟರ್ಸ್ ಅನ್ನ ಆಕರ್ಷಿಸೋ ನಿಟ್ಟಿನಲ್ಲಿ ವಿಶ್ವ ದರ್ಜೆಯ ವಾಣಿಜ್ಯ ಕಟ್ಟಡಗಳು ಪ್ಲಗ್ ಅಂಡ್ ಪ್ಲೇ ಸೆಟ್ಪ್ ಅಂದ್ರೆ ಇಮ್ಮಿಡಿಯೇಟ್ ಆಗಿ ಎಐ ಕಂಪನಿಗಳು ಬಂದು ಕೆಲಸ ಶುರು ಮಾಡೋ ವ್ಯವಸ್ಥೆ ಇರುತ್ತೆ ಹಾಗೆ ಅತ್ಯಾಧುನಿಕ ವೇರ್ ಹೌಸ್ ಗಳನ್ನ ಅಂದ್ರೆ ಅಡ್ವಾನ್ಸ್ಡ್ ಸ್ಟೋರೇಜ್ ಫೆಸಿಲಿಟಿಗಳನ್ನ ಇಲ್ಲಿ ನಿರ್ಮಿಸಲಾಗುತ್ತೆ ಸ್ಟಾರ್ಟಪ್ ಇನ್ಕ್ಯುಬೇಟರ್ ಮತ್ತು ಆಕ್ಸಲರೇಟರ್ ಕೂಡ ಬರಲಿವೆ ಜೊತೆಗೆ ಇಲ್ಲಿ ವಾಕ್ ಟು ವರ್ಕ್ ಸಮುದಾಯ ನಿರ್ಮಿಸ್ತೀವಿ ಅಂತ ಡಿಕೆಶಿ ಹೇಳಿಕೊಂಡಿದ್ದಾರೆ ಅಂದ್ರೆ ಕೆಲಸಕ್ಕೆ ನಡೆದು ಹೋಗುವ ಆರೋಗ್ಯಕರ ಜೀವನ ಶೈಲಿಗೆ ಒತ್ತು ನೀಡ್ತೀವಿ 17ಕ್ಕೂ ಹೆಚ್ಚು ಕೆರೆಗಳು ಅಂದ್ರೆ 1012 ಎಕರೆ ಜಲಪ್ರದೇಶ ಮತ್ತು 1080 ಎಕರೆಗಳಷ್ಟು ಉದ್ಯಾನವನ ಹಾಗೂ ತೆರೆದ ಸ್ಥಳ ಇಲ್ಲಿರುತ್ತೆ ಎನ್ನಲಾಗಿದೆ ಅದರ ಜೊತೆ ಜೊತೆಗೆ ಎಐ ಚಾಲಿತ ಸ್ಮಾರ್ಟ್ ಮನೆಗಳು ವಿಶ್ವ ದರ್ಜೆಯ ಶಿಕ್ಷಣ ಮತ್ತು ವೈದ್ಯಕೀಯ ಕೇಂದ್ರ ಇರಲಿದೆ ಅಲ್ದೇ ಹೂಡಿಕೆದಾರ ಸ್ನೇಹಿ ನೀತಿ ಮೂಲಕ ಉದ್ಯಮಶೀಲತೆಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿಟಿ ನಿರ್ಮಾಣ ಮಾಡ್ತಿದ್ದೀವಿ ಅಂತ ಡಿಕೆಶಿ ಹೇಳಿದ್ದಾರೆ ಅಲ್ದೆ ಲಕ್ಷಾಂತರ ಜಾಬ್ಸ್ ಕ್ರಿಯೇಟ್ ಆಗಲಿವೆ ಅಂತಷ್ಟೇ ಹೇಳಿದ್ದಾರೆ ಪರ್ಟಿಕ್ಯುಲರ್ ಫಿಗರ್ಸ್ ಬಗ್ಗೆ ಮಾಹಿತಿ ನೀಡಿಲ್ಲ ಆದರೆ 9ಸ000 ಎಕರೆ ವ್ಯಾಪ್ತಿ ನೋಡಿದರೆ ಒಂದು ಅಂದಾಜ ಚಿನ ಪ್ರಕಾರ ಕನಿಷ್ಠ ಎರಡರಿಂದಮೂರು ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಅಂತ ಹೇಳಲಾಗ್ತಿದೆ ಇದರಿಂದ ಸ್ಥಳೀಯ ಹಾಗೂ ದೇಶದ ಆರ್ಥಿಕತೆಗೆ ದೊಡ್ಡ ಬೂಸ್ಟ್ ಸಿಗಲಿದೆ ಏನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸ್ಟೈಲ್ಸ್ ಟೂರಿಸಂ ಕಂಪನಿ ದುಬೈಗೆ ಇನ್ನೊಂದು ಟ್ರಿಪ್ ಆಯೋಜಿಸಿದೆ ಬೆಸ್ಟ್ ಆಫರ್ ಪ್ರೈಸ್ 88500 ರೂಪಾಯ ಮಾತ್ರ ದುಬಾೈ ಮತ್ತು ಅಬುದಾಬಿ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಈ ಪ್ಯಾಕೇಜ್ ಅಲ್ಲಿ ಫ್ಲೈಟ್ ಟಿಕೆಟ್ಸ್ ದುಬೈ ವೀಸಾ ತ್ರೀ ಸ್ಟಾರ್ ಹೋಟೆಲ್ ಸ್ಟೇ ಇಂಡಿಯನ್ ಫುಡ್ ಎಸಿ ಟ್ರಾನ್ಸ್ಪೋರ್ಟೇಷನ್ ಕನ್ನಡ ಟೂರ್ ಮ್ಯಾನೇಜರ್ ಬುರ್ಜ್ ಖಲೀಫಾ 125ನೇ ಫ್ಲೋರ್ ನ ವ್ಯೂ, ಡೆಸರ್ಟ್ ಸಫಾರಿ, ದುಬೈ ಸಿಟಿ ಟೂರ್, ಅಬುದಾಬಿ ಸಿಟಿ ಟೂರ್, ದುಬೈನ ಸ್ವಾಮಿನಾರಾಯಣ ಹಿಂದೂ ಟೆಂಪಲ್, ಗ್ರಾಂಡ್ ಮಾಸ್ಕ್, ಫೆರಾರಿ ವರ್ಲ್ಡ್ ಎಲ್ಲಾ ಹೋಗೋದಿರುತ್ತೆ. ಹೊರಡೋ ದಿನ 15 ಅಕ್ಟೋಬರ್ 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ. ಬೆಂಗಳೂರಿಗೆ ಜಾಗ ಸಾಲ್ತಿಲ್ಲ ಎಸ್ ಸ್ನೇಹಿತರೆ ಡಿಕೆ ಶಿವಕುಮಾರ್ ತಮ್ಮ ಪೋಸ್ಟ್ನಲ್ಲಿ ಈ ಎಐಸಿಟಿ ಸೃಷ್ಟಿಸುತ್ತಿರೋ ಮುಖ್ಯ ಉದ್ದೇಶ ಬೆಂಗಳೂರನ್ನ ಎಕ್ಸ್ಪ್ಯಾಂಡ್ ಮಾಡೋದು ಅಂದಿದ್ದಾರೆ ಹತ್ರ ಒಂದೂವರೆ ಕೋಟಿ ಜನಸಂಖ್ಯೆ ಇರೋ ಸಿಲಿಕಾನ್ ಸಿಟಿ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡೋದು ಅಂದ್ರೆ ಜೀರೋ ಟ್ರಾಫಿಕ್ ಜೀರೋ ವೇಸ್ಟ್ ಜೀರೋ ಕಾರ್ಬನ್ ಮಾಡೆಲ್ ನ ಸಹಕಾರಗೊಳಿಸೋದು ಸ್ಟಾರ್ಟ್ ಅಪ್ ಐಟಿಬಿಟಿ ಹೆಲ್ತ್ ಎಜುಕೇಶನ್ ಹಾಗೂ ಇನ್ನೋವೇಷನ್ ಕ್ಷೇತ್ರದಲ್ಲಿ ಬೆಂಗಳೂರು ದೇಶದಲ್ಲಿ ಟಾಪ್ ಪ್ಲೇಸ್ ನಲ್ಲಿ ಇದೆ ಸೋ ಈ ಸಿಟಿ ಇನ್ನು ಎಕ್ಸ್ಪ್ಯಾಂಡ್ ಆಗೋಕೆ ಇನ್ನಷ್ಟು ಜಾಗ ಬೇಕಿತ್ತು.
ಅದೀಗ ಈ ಎಐ ಸಿಟಿ ಪ್ರಾಜೆಕ್ಟ್ನಿಂದ ಫಿಲ್ ಆಗಬಹುದು ಎನ್ನಲಾಗ್ತಿದೆ ಯಾಕಂದ್ರೆ ಬಿಡದಿ ಬೆಂಗಳೂರಿನಿಂದ ಕೇವಲ 30 ಕಿಲೋಮೀಟ ದೂರ ಆಲ್ಮೋಸ್ಟ್ ಸಿಟಿಗೆ ಹೊಂದಿಕೊಂಡೆ ಇದೆಎನ್ಹಚ್ 275 ಹಾಗೂಎನ್ಹಚ್ 205 ನಂತ ಪ್ರಮುಖ ನ್ಯಾಷನಲ್ ಹೈವೆಗಳಿಗೂ ಕನೆಕ್ಷನ್ ಹೊಂದಿದೆ ಅಲ್ದೆ ಈಎಐ ಸಿಟಿ ನಿರ್ಮಾಣ ಆಗಲಿರೋ ಜಾಗ ಬಿಡದಿ ರೈಲ್ವೆ ಸ್ಟೇಷನ್ ನಿಂದ ಕೇವಲಆು ಕಿಲೋಮೀಟರ್ ಹಾಗೆ ಬೆಂಗಳೂರಿನ ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 16 ಕಿಲೋಮೀಟರ್ ಮಾತ್ರ ದೂರ ಇದೆ ಸೋ ಟ್ರಾನ್ಸ್ಪೋರ್ಟ್ ವ್ಯವಸ್ಥೆಗೂ ಹೇಳಿ ಮಾಡಿಸಿರೋ ಜಾಗ ಭವಿಷ್ಯದಲ್ಲಿ ಬಿಡದಿವರೆಗೂ ಮೆಟ್ರೋ ರೈಲು ಸಂಚರಿಸು ಪ್ರಸ್ತಾಪ ಕೂಡ ಇದ್ದು ಇದೊಂದಾದರೆ ಬಿಡದಿ ಆಲ್ಮೋಸ್ಟ್ ಬೆಂಗಳೂರಿಗೆ ಮತ್ತಷ್ಟು ಹತ್ರ ಆಗಲಿದೆ ಅದೇನೇ ಇರಲಿ ಈಗ ಅಧಿಕಾರದಲ್ಲಿರೋ ಕಾಂಗ್ರೆಸ್ ಸರ್ಕಾರ ಹಿಂದೆ ಕೂಡ ಇಂತಹ ಕೆಲ ಪ್ರಮುಖ ಯೋಜನೆಗಳನ್ನ ಘೋಷಿಸಿತ್ತು ಸೋ ಅವುಗಳ ಕೆಲಸ ಎಲ್ಲಿಗೆ ಬಂದಿದೆ ಅಂತ ತಿಳ್ಕೊಳ್ಳೋಣ ಬನ್ನಿ ಕ್ವಿನ್ ಸಿಟಿ ಕಥೆ ಏನಾಯಿತು ಸ್ನೇಹಿತರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರೋ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಆಯ್ತು ಅಂದ್ರೆ ಆಲ್ಮೋಸ್ಟ್ ಅರ್ಧ ಅವಧಿ ಮುಗಿತು ಆದರೆ ಈವರೆಗೆ ಕ್ವೀನ್ ಸಿಟಿ ಹಲವು ಪ್ರಾಜೆಕ್ಟ್ ಘೋಷಿಸಿದ್ರು ಅವುಗಳು ಯಾವುದು ಇನ್ನು ಕಂಪ್ಲೀಟ್ ಆಗಿಲ್ಲ ಕಾಮಗಾರಿ ನಡೀತಾನೆ ಇದೆ ಅದರಲ್ಲಿ ದೊಡ್ಡಬಳ್ಳಾಪುರ ಮತ್ತು ದಾಬಸ್ಪೇಟೆ ಮಧ್ಯೆ 5800 ಎಕರೆ ಜಾಗದಲ್ಲಿ ಸುಮಾರು 40ಸಾ ಕೋಟಿ ರೂಪಾಯಿ ವೆಚ್ಚದಲ್ಲಿ ಕ್ವಿನ್ ಸಿಟಿ ನಿರ್ಮಿಸಲಾಗುತ್ತದೆ.
ಅಂದರೆ ವಿಶ್ವದರ್ಜೆಯ ಶಿಕ್ಷಣ ಕೇಂದ್ರ ಆಧುನಿಕ ಆರೋಗ್ಯ ಸೇವೆ ಹಾಗೆ ಅತ್ಯಾಧುನಿಕ ಸಂಶೋಧನಾ ಕೇಂದ್ರಗಳನ್ನ ಒಂದೇ ಕಡೆ ಸ್ಥಾಪಿಸೋ ಗುರಿ ಇಟ್ಟಕೊಳ್ಳಲಾಗಿತ್ತು ಆದರೆ ಭೂಸ್ವಾಧೀನ ವಿರೋಧ ಅದು ಇದು ಅಂತ ಹೇಳಿ ಆ ಯೋಜನೆ ಕುಂಠಿತಗೊಂಡಿದೆ ಮುಂದಿನ 18 ತಿಂಗಳಲ್ಲಿ ಸುಮಾರು 500 ಎಕರೆ ವ್ಯಾಪ್ತಿಯ ಫೇಸ್ ಒನ್ ಹಂತದ ಕೆಲಸ ಕಂಪ್ಲೀಟ್ ಆಗುತ್ತೆ ಅಂತ ಸರ್ಕಾರ ಹೇಳಿದೆ ಆದರೆ ಮಿಕ್ಕಿದ್ದು ಹೇಗೆ ಅನ್ನೋ ಬಗ್ಗೆ ಸ್ಪಷ್ಟನೆ ಇಲ್ಲ ಇನ್ನು ಆತ ಕೆಆರ್ಎಸ್ ಡ್ಯಾಮ್ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪನೆ ಮಾಡಿ ಅದಕ್ಕೆ ಆರತಿ ಮಾಡೋ ಯೋಜನೆಗೆ ಸರ್ಕಾರ ಮುಂದಾಗಿತ್ತು ಆದರೆ ಇದರ ಕಾಮಗಾರಿ ವೇಳೆ ಅಗಿಯುವಾಗ ಡ್ಯಾಮ್ ಸೇಫ್ಟಿಗೆ ಹಾನಿಯಾಗುತ್ತೆ ಅಂತ ಹೇಳಿ ಹೈಕೋರ್ಟ್ನಲ್ಲಿ ಕೇಸ್ ನಡೀತಿದೆ ಇನ್ನು ಅತ್ತ 500 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಟೂರಿಸಂ ಎಕ್ಸ್ಪ್ಯಾಂಡ್ ಮಾಡೋ ನೆಟ್ಟಿನಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಇದಕ್ಕಾಗಿ ಕುಂಭಘಟ್ಟದಲ್ಲಿ 30 ಎಕರೆ ಜಾಗ ಕೂಡ ಗುರುತಿಸಲಾಗಿದೆ ಬಟ್ ಅದಿನ್ನು ಸರಿಯಾಗಿ ಸ್ಟಾರ್ಟ್ ಆಗಿಲ್ಲ ಅದೆಲ್ಲ ಬಿಡಿ ಮೊದಲೇ ಪಂಚ ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರ ತನ್ನ ಬೊಕ್ಕಸವನ್ನ ಖಾಲಿ ಮಾಡಿಕೊಳ್ತದೆ ಸ್ವಲ್ಪ ಮಳೆಯಾದರೂ ಬೆಂಗಳೂರು ನಗರದಲ್ಲಿ ಬೀಡೋ ತಗ್ಗು ಗುಂಡಿಗಳನ್ನ ಸರಿಯಾಗಿ ಮುಚ್ಚೋಕೆ ಸಾಧ್ಯ ಆಗ್ತಿಲ್ಲ ಅಂತದ್ರಲ್ಲಿ ಸರ್ಕಾರ ಈ ಎಐಸಿಟಿ ಪ್ರಾಜೆಕ್ಟ್ನ ಮುಂದಿನ ಮೂರು ವರ್ಷಗಳಲ್ಲಿ ಕಂಪ್ಲೀಟ್ ಮಾಡೋದಾಗಿ ಘೋಷಿಸಿದೆ.