Thursday, January 15, 2026
HomeTech Newsಫ್ರೀ AI ಹಿಂದಿನ ಡೀಲ್: ನಿಮ್ಮ ಡೇಟಾ, ನಿಮ್ಮ ಗೌಪ್ಯತೆ!

ಫ್ರೀ AI ಹಿಂದಿನ ಡೀಲ್: ನಿಮ್ಮ ಡೇಟಾ, ನಿಮ್ಮ ಗೌಪ್ಯತೆ!

ಫ್ರೀ ಎಐ ಭಯಾನಕ ರಹಸ್ಯ ಅಮೆರಿಕದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಬರೊಬ್ಬರಿ 2000 ರೂಪಾಯಿ ಕೊಟ್ಟು ಬಳಸುವ ಟೆಕ್ನಾಲಜಿಯನ್ನ ಎಐ ಯನ್ನ ಭಾರತದಲ್ಲಿ ನಿಮಗೆ ನನಗೆ ನಮಗೆಲ್ಲರಿಗೂ ಫ್ರೀಯಾಗಿ ಕೊಡೋಕೆ ಅವರೇನು ಕರ್ನಾಟಕ ಸರ್ಕಾರದವರ ಯಾಕೆ ಕೊಡ್ತಿದ್ದಾರೆ ಫ್ರೀಯಾಗಿ ಯೋಚನೆ ಮಾಡ್ತಿದ್ದೀವಾ ಇಲ್ಲ ಫ್ರೀ ಕೊಟ್ಕೂಡಲೇ ನಾವು ನೀವು ಏನು ಮಾಡ್ತೀವಿ ವಾವ್ ಎಷ್ಟು ಒಳ್ಳೆ ಕಂಪನಿ ಅಲ್ವಾ ಅಂತ ಖುಷಿ ಪಡ್ತೀವಿ. ಆದರೆ ಸ್ವಲ್ಪ ತಡಿರಿ ಆ ಖುಷಿಯಲ್ಲಿ ಇರುವಾಗಲೇ ನಿಮಗೊಂದು ಶಾಕಿಂಗ್ ವಿಚಾರವನ್ನ ಹೇಳ್ತೀವಿ ಇವತ್ತು ನಿಮ್ಮ ಕೈಯಲ್ಲಿರೋ ಸ್ಮಾರ್ಟ್ ಫೋನ್ನಲ್ಲಿ ಆಎಐ ಆಪ್ ಗಳು ಫ್ರೀಯಾಗಿ ವರ್ಕ್ ಆಗ್ತಿವೆ ಅಂದ್ರೆ ಅದಕ್ಕೆ ಕಾರಣ ಆ ಕಂಪನಿಗಳ ಉದಾರತೆ ಅಲ್ಲ ಬದಲಾಗಿ ಅವರ ಅತ್ಯಂತ ಭಯಾನಕವಾದ ಒಂದು ಹಸಿವು ಎಸ್ ಸ್ನೇಹಿತರೆ ಇತ್ತೀಚಿಗೆ ಬಂದಿರುವ ಸ್ಪೋಟಕ ರಿಪೋರ್ಟ್ ಪ್ರಕಾರ ಜೆಮಿನೈ ನಿರ್ಮಾಣ ಮಾಡಿರೋ ಗೂಗಲ್ ಚಾಟ್ ಜಿಪಿಡಿ ನಿರ್ಮಾಣ ಮಾಡಿರೋ ಓಪನ್ಎಐ ಕಂಪನಿಗಳು ಭಾರತೀಯರ ಮೇಲೆ ಒಂದು ಅದೃಶ್ಯವಾಗಿರೋ ಬಲೆಯನ್ನ ಬೀಸಿಬಿಟ್ಟಿದೆ ಅಮೆರಿಕನ್ಸ್ ದುಡ್ಡು ಕೊಟ್ಟು ತಗೊಳ್ಳಬೇಕಾದ ಸಿಕ್ಕಬಟ್ಟೆ ಕಾಸ್ಟ್ಲಿ ಫೀಚರ್ಸ್ ಅನ್ನ ಭಾರತೀಯರಿಗೆ ಮಾತ್ರ ಇಂಡಿಯನ್ಸ್ ತಗೊಳ್ರಯ್ಯ ಪುಕ್ಸಟೆ ಅಂತ ಕೊಡ್ತಾ ಇದ್ದಾರೆ ಯಾಕ ಗೊತ್ತಾ ಟೆಕ್ ಲೋಕದಲ್ಲಿ ಒಂದು ಫೇಮಸ್ ಮಾತಿದೆ ಇಫ್ ಇಟ್ ಇಸ್ ಫ್ರೀ ಯು ಆರ್ ದ ಪ್ರಾಡಕ್ಟ್ ಅಂತ ಅಂದ್ರೆ ಯಾವುದಾದರೂ ವಸ್ತು ನಿಮಗೆ ಫ್ರೀಯಾಗಿ ಸಿಗತಾ ಇದೆ ಅಂದ್ರೆ ಅಲ್ಲಿ ನೀವು ಗ್ರಾಹಕರಲ್ಲ ನೀವೇ ಅವರ ಸರಕು ಅಂತ ನೀವೇ ಪ್ರಾಡಕ್ಟ್ ಅಂತ ಹಾಗಾದ್ರೆ ಇವರಿಗೆ ಭಾರತವೇ ಯಾಕಬೇಕು ನಮ್ಮ ಭಾಷೆ ನಮ್ಮ ಮಾತು ನಮ್ಮ ಉಚ್ಚಾರಣೆ ಇವೆಲ್ಲವನ್ನ ಕದ್ದು ಇವರು ಮಾಡ್ತಿರೋದಾದರೂ.

ಅಮೆರಿಕಾದಲ್ಲಿ ಹಣ ಭಾರತದಲ್ಲಿ ಪುಕ್ಕಟೆ ಇವರು ನಮಗೆ ಏನ ಏನೆಲ್ಲಾ ಫ್ರೀ ಕೊಡ್ತಿದ್ದಾರೆ ಅನ್ನೋದರ ಒಂದು ಲೆಕ್ಕಾಚಾರ ನೋಡೋಣ ಇದೆ ಹೊಡೆದು ಹೋಗುವಷ್ಟು ವ್ಯತ್ಯಾಸ ಇದೆ. ಮೊದಲು ಓಪನ್ ಎ ಅಥವಾ ಚಾಟ್ ಜಿಪಿಟಿ ವಿಚಾರಕ್ಕೆ ಬರೋಣ. ಅಮೆರಿಕ ಮತ್ತು ಯುರೋಪಿಯನ್ ರಾಫ್ಟರ್ ಗಳಲ್ಲಿ ನೀವು ಚಾಟ್ ಜಿಪಿಟಿಯ ಲೇಟೆಸ್ಟ್ ವರ್ಷನ್ ಅಂದ್ರೆ ಜಿಪಿಟಿ 4.0 ಬೆಳಸಬೇಕು ಅಂದ್ರೆ ಅಥವಾ ಅದರ ಜೊತೆ ವಾಯ್ಸ್ ನಲ್ಲಿ ಮಾತನಾಡಬೇಕು ಅಂದ್ರೆ ತಿಂಗಳಿಗೆ ಬರೋಬರಿ 20 ಡಾಲರ್ ಕಟ್ಟಬೇಕು. ನಮ್ಮ ರೂಪಾಯಿ ಲೆಕ್ಕದಲ್ಲಿ ಅಂದಾಜು 1700 ರೂಪಾಯಿ ವರ್ಷಕ್ಕೆ ಎಷ್ಟಾಯ್ತು ಹತ್ತತ್ರ 2000 ರೂಪಾಯಿ ಆದರೆ ಭಾರತದಲ್ಲಿ ಅದೇ ಅಮೆರಿಕನ್ ಕಂಪನಿ ಚಾಟ್ ಜಿಪಿಟಿ ಗೋ ಅಂತ ಬಿಟ್ಟು ಅದರಲ್ಲಿ ಎಲ್ಲಾ ಪ್ರೀಮಿಯಂ ಫೀಚರ್ಸ್ ಅನ್ನ ಒಂದು ವರ್ಷದ ತನಕ ಪೂರ್ತಿ ಫ್ರೀ ಅಂತ ಅನೌನ್ಸ್ ಮಾಡಿದೆ ಮೊದಲು ತಿಂಗಳಿಗೆ 399 ರೂಪಾಯಿಂದ ರೇಟ್ ಫಿಕ್ಸ್ ಮಾಡಿದ್ರು ಆದರೆ ಈಗ ಅದನ್ನ ಕೂಡ ತೆಗೆದು ಹಾಕಿ ತಗೊಳಿ ಎಷ್ಟು ಬೇಕಾದ್ರೂ ಬಳಸಿ ಅಂತ ಬಾಗಿಲು ಓಪನ್ ಮಾಡಿ ತೆರೆದುಇಟ್ಕೊಂಡು ಕೂತಿದ್ದಾರೆ ಫ್ರೀ ಇನ್ನುಗೂಗಲ್ ಕಥೆ ಕೇಳಿ ಅಮೆರಿಕದಲ್ಲಿ ಜೆಮಿನೈ ಅಡ್ವಾನ್ಸ್ಡ್ ಅನ್ನೋದು ಪೇಡ್ ಸರ್ವಿಸ್ ಅದಕ್ಕೆ ವರ್ಷಕ್ಕೆ ಸುಮಾರು 400 ಡಾಲರ್ ಕೊಡಬೇಕು 30 ರಿಂದ 35000 ರೂಪಾಯ ಬೆಲೆ ಇದೆ ಆದರೆ ಭಾರತದಲ್ಲಿರಿಲಯನ್ಸ್ಜಿo ಜೊತೆ ಸೇರಿಕೊಂಡು ಬರೋಬರಿ 18 ತಿಂಗಳುಗಳ ಕಾಲ ಈ ಸರ್ವಿಸ್ ಫ್ರೀ ಒಂದೂವರೆ ವರ್ಷ ಫ್ರೀ ಹಾಗೆ ಇಷ್ಟಕ್ಕೆ ಮುಗಿದಿಲ್ಲ ವಿಚಾರ ಪಬ್ಲೆಕ್ಸಿಟಿ ಅನ್ನೋ ಮತ್ತೊಂದು ಎಐ ಕಂಪನಿ ಏಟೆಲ್ ಜೊತೆಗೆ ಸೇರಿಕೊಂಡಿದ್ದಾರೆ ತನ್ನ 17000 ರೂಪಾಯ ಬೆಲೆ ಬಾಳೋ ಪ್ರೋ ಪ್ಲಾನ್ ಅನ್ನ ಭಾರತೀಯರಿಗೆ ಫ್ರೀ ಅಂತ ಕೊಟ್ಟಿದ್ದಾರೆ. ಸ್ವಲ್ಪ ಯೋಚನೆ ಮಾಡಿ.

ಅಮೆರಿಕದಂತಹ ಬಂಡವಾಳ ಶಾಹಿ ಕ್ಯಾಪಿಟಲಿಸ್ಟ್ ರಾಷ್ಟ್ರದ ಕಂಪನಿಗಳು ಒಂದು ರೂಪಾಯಿ ಕೂಡ ಲಾಭ ಇಲ್ಲದೆ ಬಿಡಲ್ಲ ಅಮೆರಿಕನ್ ಪ್ರಜೆಯಿಂದ 35000 ರೂಪಾಯ ವಸೂಲಿ ಮಾಡ್ತಿದ್ದಾರೆ ಅಂತದರಲ್ಲಿ 90 ಕೋಟಿ ಭಾರತೀಯರಿಗೆ ಇಷ್ಟೊಂದು ದುಬಾರಿ ಸೇವೆಯನ್ನ ಫ್ರೀಯಾಗಿ ಕೊಡ್ತಿದ್ದಾರೆ ಅಂದ್ರೆ ಏನೋ ಮಿಸ್ ಹೊಡಿತಾ ಇದೆ ಅಲ್ವಾ ಅಸಲಿ ಆಟ ಶುರುವಾಗುವುದೇ ಇಲ್ಲಿ ಉದಾರತೆ ಅಲ್ಲ ಅನಿವಾರ್ಯತೆ ರೀಸೆಂಟ್ಆಗಿ ರಾಯಟರ್ಸ್ ಅನ್ನೋ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಒಂದು ವರದಿಯನ್ನ ಬಿಡುಗಡೆ ಮಾಡಿದೆ ಅದರ ಪ್ರಕಾರ ಈ ಕಂಪನಿಗಳು ಚಾರಿಟಿ ಮಾಡ್ತಾ ಇಲ್ಲ ಬದಲಿಗೆ ಗೆ ಡೇಟಾ ಹಸಿವು ಇದೆ ಅವರಿಗೆ ಟೆಕ್ ಭಾಷೆಯಲ್ಲಿ ಇದನ್ನ ಅರ್ಥ ಮಾಡ್ಕೋಬೇಕು ಅಂದ್ರೆ ಯೂಸರ್ ಇಂಟರಾಕ್ಷನ್ ಡೇಟಾ ಇಸ್ ನೌ ಮೋರ್ ವ್ಯಾಲ್ಯುಬಲ್ ದನ್ ಸಬ್ಸ್ಕ್ರಿಪ್ಷನ್ ರೆವಿನ್ಯೂ ಅಂತ ಇಲ್ಲಿ ನಂಬರ್ಸ್ ಮಾತನಾಡ್ತಾವೆ ಸ್ನೇಹಿತರೆ ಸೆನ್ಸಾರ್ ಟವರ್ ವರದಿ ಪ್ರಕಾರ ಅಮೆರಿಕದಲ್ಲಿ ಚಾಂಟ್ ಜಿಪಿಟಿ ಬಳಸೋರು ದಿನಕ್ಕೆ ಕೇವಲ 35 ಮಿಲಿಯನ್ ಜನ ಆದರೆ ಭಾರತದಲ್ಲಿ ಬರೋಬರಿ 73 ಮಿಲಿಯನ್ ಜನ ಅಂದ್ರೆ ಅಮೆರಿಕಗಿಂತ ಡಬಲ್ಗೂಗಲ್ ಜೆಮಿನ ವಿಚಾರದಲ್ಲೂ ಕೂಡ ಅಷ್ಟೇ ಅಮೆರಿಕದಲ್ಲಿ ಕೇವಲಮೂರು ಮಿಲಿಯನ್ ಇದ್ರೆ ಭಾರತದಲ್ಲಿ 17 ಮಿಲಿಯನ್ ಯೂಸರ್ಸ್ ಇದ್ದಾರೆ ಇಲ್ಲಿ ಲಾಜಿಕ್ ಸಿಂಪಲ್ ಈಎಐ ಕಂಪನಿಗಳಿಗೆ ಈಗ ದುಡ್ಡು ಮುಖ್ಯ ಅಲ್ಲ ಅವರಿಗೆ ಬೇಕಾಗಿರೋದು ನಿಮ್ಮ ಪ್ರಶ್ನೆಗಳು ನಿಮ್ಮ ಡೌಟ್ಗಳು ನೀವು ಟೈಪ್ ಮಾಡೋ ಸ್ಟೈಲ್ ಮತ್ತು ಮುಖ್ಯವಾಗಿ ನಿಮ್ಮ ವಾಯ್ಸ್ ಯಾಕೆ ಅದಕ್ಕೆ ಉತ್ತರವನ್ನ ಎಕ್ಸ್ಪ್ಲೈನ್ ಮಾಡ್ತೀವಿ ನೋಡಿ ಭಾರತ ಭಾಷೆಗಳ ಚಿನ್ನದ ಗಣಿ ಎಸ್ಎಐ ಕಂಪನಿಗಳ ಪಾಲಿಗೆ ಚಿನ್ನದ ಗಣಿ ಭಾರತ ಯಾಕಂದ್ರೆ ಪ್ರಪಂಚದಲ್ಲಿ ಬೇರೆ ಎಲ್ಲೂ ಸಿಗದಂತ ಅತ್ಯಮೂಲ್ಯವಾದ ಡೇಟಾ ಇಲ್ಲಿ ಮಾತ್ರ ಸಿಗುತ್ತೆ ಅಮೆರಿಕದಲ್ಲಿ 30 33 ಕೋಟಿ ಜನ ಒಂದೇ ಲ್ಯಾಂಗ್ವೇಜ್ ಯೂಸ್ ಮಾಡ್ತಾರೆ. ಹೆಚ್ಚಿನವರು ಆಲ್ಮೋಸ್ಟ್ ಎಲ್ಲರೂ ಕೂಡ ಇಂಗ್ಲಿಷ್ನಲ್ಲಿ ಅವರು ಕಾನ್ವರ್ಸೇಟ್ ಮಾಡ್ತಾರೆ.

ಎಲ್ಲಾ ಕಡೆ ಇಂಗ್ಲಿಷ್ನ್ನೇ ಬಳಸ್ತಾರೆ ಎಲ್ಲದಕ್ಕೂ ಮೆಜಾರಿಟಿಯಾಗಿ 90% ಇಂಗ್ಲಿಷ್ ಯೂಸ್ ಆಗುತ್ತೆ ಆದರೆ ಭಾರತದಲ್ಲಿ ಒಂದೊಂದು ರಾಜ್ಯಕ್ಕೆ ಒಂದೊಂದು ಭಾಷೆ ಕೆಲವು ಸಲಿ ಒಂದೊಂದು ರಾಜ್ಯಕ್ಕೆ ಎರಡೆರಡು ಮೂರು ಮೂರು ಭಾಷೆ ನಿಮಗೆ ಸಿಗುತ್ತೆ. ಮಲ್ಟಿಪ್ಲೇಯರ್ ಎಫೆಕ್ಟ್ ಅಲ್ಲಿ ಉಂಟಾಗಿಬಿಡುತ್ತೆ ಸ್ನೇಹಿತರೆ. ಅದರಿಂದ ಏನಾಗುತ್ತೆ? ಕೋರ್ಸ್ ಸ್ವಿಚಿಂಗ್ ಮತ್ತು ಆಕ್ಸೆಂಟ್ಸ್ ವಿಚಾರದಲ್ಲಿ ಚಿನ್ನದ ಗಣಿ ಆಗಿಬಿಡ್ತೀವಿ ನಾವು. 22 ಅಧಿಕೃತ ಭಾಷೆಗಳು ನೂರಾರು ಉಪಭಾಷೆಗಳು. ಆ ಭಾಷೆಗಳಲ್ಲೂ ಕೂಡ ಅಗೈನ್ ಪ್ರತಿ 10 ಕಿಲೋಮೀಟರ್ ಗೆ ಭಾಷೆಯ ಸ್ಟೈಲ್ ಚೇಂಜ್ ಆಗುತ್ತೆ. ಉಚ್ಚಾರಣೆಯ ಶೈಲಿ ಚೇಂಜ್ ಆಗುತ್ತೆ ಬದಲಾಗುತ್ತೆ. ಇಂತ ವೈವಿಧ್ಯಮಯ ಡೇಟಾ ಅವರಿಗೆ ಅಮೆರಿಕದಲ್ಲಿ ಆಗಲಿ, ಯೂರೋಪ್ ನಲ್ಲಿ ಆಗಲಿ ಸಿಗೋದಿಲ್ಲ. ಜೊತೆಗೆ ನಾವು ಮಾತಾಡುವಾಗ ನೋಡಿ ಸ್ನೇಹಿತರೆ ಪೂರ್ತಿ ಕನ್ನಡ ಮಾತಾಡಲ್ಲ, ಪೂರ್ತಿ ಇಂಗ್ಲಿಷ್ ಕೂಡ ಮಾತಾಡಲ್ಲ. ಬಸ್ ಲೇಟ್ ಆಯ್ತು, ಸ್ವಲ್ಪ ಅಡ್ಜಸ್ಟ್ ಮಾಡಿ, ಮೂಡ್ ಆಫ್ ಆಗಿದೆ. ಹೀಗೆ ಮಿಕ್ಸಡ್ ಭಾಷೆಯನ್ನ ಯೂಸ್ ಮಾಡ್ತೀವಿ. ಇದನ್ನೇ ಟೆಕ್ನಿಕಲ್ ಆಗಿ ಕೋಡ್ ಸ್ವಿಚಿಂಗ್ ಅಂತ ಕರೀತಾರೆ. ಈ ತರಹದ ಮಿಕ್ಸಿಂಗ್ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಕಂಪ್ಯೂಟರ್ ಗಳಿಗೆ ತುಂಬಾ ಕಷ್ಟ. ಅಮೆರಿಕದ ಇಂಗ್ಲೀಷ್ ಮಾತ್ರ ಕಲಿತಿರೋ ಚಾಟ್ ಜಿಪಿಟಿಗೆ ನಮ್ಮ ಬೆಂಗಳೂರು ಇಂಗ್ಲಿಷ್ ಅಥವಾ ಲೋಕಲ್ ಸ್ಲಾಂಗ್ ಕೂಡಲೇ ಅರ್ಥ ಆಗಲ್ಲ. ಸೋ ನಾಳೆ ಇಡೀ ಪ್ರಪಂಚವನ್ನ ಈಎಐ ಆಳಬೇಕು ಅಂದ್ರೆ ಅದಕ್ಕೆ ಭಾರತೀಯರು ಮಾತನಾಡೋ ಈ ವಿಚಿತ್ರವಾದ ಇಂಗ್ಲಿಷ್ ಕೂಡ ಅರ್ಥ ಆಗಬೇಕು. ಈ ಡೇಟಾ ಸಿಗಬೇಕು ಅಂದ್ರೆ ಅವರು ಏನು ಮಾಡಬೇಕು ಒಂದು ಲಕ್ಷಾಂತರ ಜನರನ್ನ ಕೂರಿಸಿಕೊಂಡು ರೆಕಾರ್ಡ್ ಮಾಡಿ ಅವರಿಗೆ ಸಂಬಳ ಕೊಟ್ಟು ಡೇಟಾ ಕಲೆ ಹಾಕಬೇಕು. ಒಂದು ಅಂದಾಜಿನ ಪ್ರಕಾರ ಈ ತರಹದ ಕ್ಲೀನ್ ಆಡಿಯೋ ಡೇಟಾ ಪಡ್ಕೋಬೇಕು ಅಂದ್ರೆ ಗಂಟೆಗೆ 100 ಡಾಲರ್ ಖರ್ಚಾಗುತ್ತೆ. ಆದರೆ ಭಾರತೀಯರ ಕೈಗೆ ಫ್ರೀ ಅಂತ ಒಂದು ಬೋರ್ಡ್ ಹಾಕಿದ್ರೆ ನಾವೇ ಮುಗಿಬಿದ್ದು ದಿನಕ್ಕೆ ಗಂಟೆಗಟ್ಟಲೆ ಅದರೊಂದಿಗೆ ಚಾಟ್ ಮಾಡಿ ಮಾತಾಡಿ ಕೋಟ್ಯಾಂತರ ರೂಪಾಯಿ ಬೆಲೆಬಾಳೋ ಡೇಟಾನ ಫ್ರೀಯಾಗಿ ಅವರ ಮಡಲಿಗೆ ಹಾಕಬಿಡ್ತೀವಿ.

ಈಎಐ ಟೂಸ್ ಜೊತೆಗೆ ನಾವು ಎಷ್ಟು ಮಾತಾಡ್ತೀವೋ ಎಷ್ಟು ಪ್ರಶ್ನೆ ಕೇಳ್ತಿವೋ ಎಷ್ಟು ಅದರಲ್ಲಿ ನಾವು ರಿಸರ್ಚ್ ಮಾಡ್ತೀವೋ ಅಷ್ಟು ಆ ಮಷೀನ್ ಶಾರ್ಪ್ ಆಗುತ್ತೆ. ಅವರು ನಮ್ಮ ಹತ್ತಿರ ದುಡ್ಡು ಕೇಳ್ತಿಲ್ಲ. ಯಾಕಂದ್ರೆ ನಾವೇ ಅವರಿಗೆ ಫ್ರೀಯಾಗಿ ಕೆಲಸ ಮಾಡಿಕೊಡ್ತಾ ಇದ್ದೀವಿ. ವಿ ಆರ್ ಟ್ರೈನಿಂಗ್ ದೇರ್ ಎಐ ಫಾರ್ ಫ್ರೀ. ನಿಮ್ಮ ಧ್ವನಿ ಅವರ ಆಸ್ತಿ. ವಿಷಯ ಇಷ್ಟಕ್ಕೆ ನಿಲ್ಲಲ್ಲ. ಈಗ ಬಂದಿರೋದು ವಾಯ್ಸ್ ಮೋಡ್. ನೀವು ಗಮನಿಸಿರಬಹುದು ಚಾಟ್ ಜಿಪಿಟಿ ಮತ್ತು ಜೆಮಿನಾಯಿ ಈಗೀಗ ಫೋನ್ ನಲ್ಲಿ ಮಾತನಾಡುವ ಫೀಚರ್ ನ ತುಂಬಾ ಪ್ರಮೋಟ್ ಮಾಡ್ತಿದ್ದಾರೆ. ನೀವು ಯಾವಾಗ ಆಪ್ ಆನ್ ಮಾಡಿ ಹೇ ಚಾಟ್ ಜಿಪಿಟಿ ಟೆಲ್ ಮಿ ಅ ಸ್ಟೋರಿ ಅಂತೀರೋ ಅಥವಾ ಕನ್ನಡದಲ್ಲಿ ಒಂದು ಕವಿತೆ ಹೇಳು ಅಂತೀರೋ ಅಥವಾ ಇನ್ನೇನೋ ಅದು ಹೇಳಿದ್ದು ಹೇಳು ಅಂತೀರೋ ಆಗ ನಿಮ್ಮ ಧ್ವನಿ ನಿಮ್ಮ ಎಮೋಷನ್ ನಿಮ್ಮ ಭಾವನೆ ನಿಮ್ಮ ಏರಿಳಿತ ಎಲ್ಲವೂ ರೆಕಾರ್ಡ್ ಆಗ್ತಿರುತ್ತೆ ಗೂಗಲ್ ಜೆಮಿನೈನ ಪ್ರೈವಸಿ ಪಾಲಿಸಿನ ಒಂದ್ಸಲ ಸೂಕ್ಷ್ಮವಾಗಿ ಓದಿ ನೋಡಿ ಅಲ್ಲಿ ಕ್ಲಿಯರ್ ಆಗಿ ಬರೆದಿದ್ದಾರೆ ನಿಮ್ಮ ಆಡಿಯೋ ರೆಕಾರ್ಡಿಂಗ್ ಗಳನ್ನ ನಮ್ಮ ಮಾಡೆಲ್ ಟ್ರೈನಿಂಗ್ಗೆ ನಾವು ಯೂಸ್ ಮಾಡ್ತೀವಿ ಮಾಡಬಹುದು ಅಂತ ಅಂದ್ರೆ ನೀವು ಮನೆಯಲ್ಲಿ ಮಾತನಾಡಿದ್ದು ಆಫೀಸ್ ವಿಚಾರ ಮಾತಾಡಿದ್ದು ನೀವು ನಿಮ್ಮ ಪರ್ಸನಲ್ ವಿಚಾರಗಳನ್ನ ಮಾತಾಡಿದ್ದು ಎಲ್ಲವೂ ಕೂಡ ಅವರ ಸರ್ವರ್ ಸೇರ್ತಾ ಇದೆ. ಅದನ್ನ ಬಳಸಿಕೊಂಡು ಅವರ ಎಐ ನ ಟ್ರೈನ್ ಮಾಡ್ತಿದ್ದಾರೆ. ಭಾರತದ ಸೈಬರ್ ಎಕ್ಸ್ಪರ್ಟ್ ಗಳು ಈಗ ಆಲ್ರೆಡಿ ಇದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಮ್ಮ ಧ್ವನಿ ಅನ್ನೋದು ನಮ್ಮ ಬಯೋಮೆಟ್ರಿಕ್ ಇದ್ದ ಹಾಗೆ ಡೇಟಾ ನಾಳೆ ಇದೆ ಧ್ವನಿಯನ್ನ ಬಳಸಿ ಅವರು ಏನು ಬೇಕಾದ್ರೂ ಮಾಡಬಹುದು ಆದರೆ ನಾವು ಏನ್ ಮಾಡ್ತಾ ಇದ್ದೀವಿ ಫ್ರೀ ಅಲ್ವಾ ಬಿಡು ಅಂತ ನಮ್ಮ ಪ್ರೈವಸಿಯನ್ನ ಅಡ ಇಡ್ತಾ ಇದೀವಿ. ಸದ್ಯಕ್ಕೆ ನಷ್ಟ ಮುಂದೆ ಭಾರಿ ಲಾಭ ಬಿಸಿನೆಸ್ ಆಂಗಲ್ ಈಗ ಇದನ್ನ ಲಾಸ್ ಲೀಡರ್ ಸ್ಟ್ರಾಟಜಿ ಅಂತಾರೆ. ಅಂದ್ರೆ ಶುರುನಲ್ಲಿ ನಷ್ಟ ಮಾಡಿಕೊಂಡು ಗ್ರಾಹಕರನ್ನ ಒಳಗೆ ಎಳೆಕೊಳ್ಳೋದು. ಸೆನ್ಸಾರ್ ಟವರ್ ರಿಪೋರ್ಟ್ ಪ್ರಕಾರ ಓಪನ್ ಎಐ ಗೆ ಅಮೆರಿಕದಲ್ಲಿ 330 ಮಿಲಿಯನ್ ಡಾಲರ್ ಆದಾಯ ಬಂದ್ರೆ ಭಾರತದಲ್ಲಿ ಬರ್ತಿರೋದು ಕೇವಲ 8 ಮಿಲಿಯನ್ ಡಾಲರ್ ಆದರೂ ಅವರು ಸುಮ್ನಿದ್ದಾರೆ ಯಾಕೆ ಯಾಕಂದ್ರೆ ಒಮ್ಮೆ ನೀವುಗೂಗಲ್ ಅಥವಾ ಚಾಟ್ ಜಿಪಿಟಿಗೆ ಅಡ್ಜಸ್ಟ್ ಆಗಿ ಅಡಿಕ್ಟ್ ಆಗ್ಬಿಟ್ರಿ ಅಂದ್ರೆ ನಿಮ್ಮ ಆಫೀಸ್ ಕೆಲಸ ನಿಮ್ಮ ಓದು ನಿಮ್ಮ ಬರವಣಿಗೆ ಎಲ್ಲ ಬೇಕು ಅದೇ ಬೇಕು ಅಂತ ಆಗ್ಬಿಟ್ರೆ ಆಗ ಅವರು ಚಾರ್ಜ್ ಮಾಡೋಕೆ ಶುರು ಮಾಡ್ತಾರೆ. ಅವತ್ತು ನೀವು ಅವರು ಹೇಳಿದಷ್ಟು ಹಣವನ್ನ ಕೊಡ್ಲೇ ಬೇಕಾಗುತ್ತೆ ಅವರು ರೇಟ್ ಜಾಸ್ತಿ ಮಾಡಿದ್ರು ಅಂತ ಹೇಳಿ ಇನ್ನೊಂದು ಹೊಸ ಎಐ ಮಾಡೋಣ ಅಂದ್ರೆ ಅಂಗಡಿ ಓಪನ್ ಮಾಡಿದಷ್ಟು ಚಿಕ್ಕದಾಗಿ ಸುಲಭ ಇಲ್ಲ ಇದು ಇದನ್ನ ಮಾಡೋಕೆ ಬಿಲಿಯನ್ ಬಿಲಿಯನ್ ಬಿಲಿಯನ್ ಬಿಲಿಯನ್ ಡಾಲರ್ ದುಡ್ಡನ್ನ ಸುರಿಬೇಕಾಗುತ್ತೆ.

ಎಂಟ್ರಿ ಬ್ಯಾರಿಯರ್ ಇಸ್ ಟೂ ಹೈ ಸೋ ಇರೋ ಒಬ್ರು ಇಬ್ರು ಹತ್ರನೇ ಅವರು ಕೇಳಿದ ರೇಟಿಗೆ ಹೋಗಬೇಕಾಗುತ್ತೆ ಇನ್ನು ಜಿಯೋ ಬಂದಾಗಲೂ ಕೂಡ ಹಾಗೆ ಆಗಿದ್ದು ತಿಂಗಳಿಗೆ 1 GB ಡೇಟಾ ಯೂಸ್ ಮಾಡ್ತಿದ್ರು ಭಾರತೀಯರು 1 GB 1/2 GB 2 GB ತಿಂಗಳಿಗೆ ಹೈಯೆಸ್ಟ್ ಅಂತ ಹೇಳಿದ್ರೆ 2014 15 ರವರೆಗೂ ಕೂಡ ಅಲ್ವಾ ನೆನಪಿದೆಯಾ ನಿಮಗೆ 350 ರೂಪಾಯಿ ಕೊಟ್ರೆ ಇಡೀ ತಿಂಗಳಿಗೆ 1 GB ಡೇಟಾ ಅಯೋ ಅವಾಗ ಮಾಡ್ತಿದ ನೋಡಬೇಕು ಅವಸ್ಥೆ ಕೆಲವರಿಗೆ ಇನ್ನು ಆ ಚಟ ಹೋಗಿಲ್ಲ ಏನು ಡೇಟಾ ಆನ್ ಮಾಡೋದು ಆಫ್ ಮಾಡೋದು ಇವತ್ತಿಗೂ ಕೂಡ ಎಲ್ಲರೂ ಫಾಲೋ ಮಾಡ್ತಾರೆ ಕೆಲವರು ಯಾವಾಗಿಂದ ಬಂದಿದ್ದು ಅವಾಗಿಂದ ಬಂದಿರೋದು ಡೇಟಾ ಹೋಗ್ಬಿಡುತ್ತೆ ಅಂತ ಹೇಳಿ ಡೇಟಾ ಯೂಸೇಜ್ ಅಲರ್ಟ್ ಕೂಡ ಇಟ್ಕೊಳ್ತಾ ಇದ್ರು ಮೆಸೇಜ್ ವಿಡಿಯೋ ಸ್ಟ್ರೀಮಿಂಗ್ ಮರೆತುಬಿಡಿ ನೀವು ಮೆಸೇಜ್ ಯಾವುದಾದ್ರೂ ಸೋಶಿಯಲ್ ಮೆಸೇಜಿಂಗ್ ಆಪ್ ಗಳಲ್ಲಿ ಒಂದು ಮೆಸೇಜ್ ಕಳಿಸಿ ಡೇಟಾ ಆಫ್ ಮಾಡಿಬಿಡೋದು ಯಾವಾಗ್ಲೋ ಬಿಟ್ಟು ಮತ್ತೆ ಆನ್ ಮಾಡಿ ನೋಡೋದು ಮತ್ತೆ ಬಂದಿದಯಾ ನೋಡೋದು ಮತ್ತೆ ರಿಪ್ಲೈ ಮಾಡೋದು ಮತ್ತೆ ಡೇಟಾ ಆಫ್ ಮಾಡೋದು ಆತರ ಇದ್ದ ಜನರನ್ನ ದಿನಕ್ಕೆ 2gb ಸಾಕಾಗಲ್ಲ ಅನ್ನೋ ಲೆವೆಲ್ಗೆ ತಂದಿರೋದು ಇದೆ ಜಿಯೋ ರೆವಲ್ಯೂಷನ್ ಏನಾಗಿದೆ ಈಗ ಜನಕ್ಕೆ ಅಂದ್ರೆ ಏನು ಜನಕ್ಕೆ ಈಗ ದಿನಕ್ಕೆ ಒಂದೆರಡು ಜಿಬಿ ಸಾಕಾಗಲ್ಲ ಅನ್ನೋ ಮಟ್ಟಿಗೆ ಅಡ್ಜಸ್ಟ್ ಆಗಿ ಹೋಗಿದ್ದೇವೆ ಅದರ ಪರಿಣಾಮ ನಾವೀಗ ದುಬಾರಿ ಡೇಟಾ ಪ್ಯಾಕ್ ಗಳನ್ನ ಹಾಕೊಳ್ಳೋಕ್ಕು ಕೂಡ ರೆಡಿ ಆಗಿದ್ದೀವಿ ಬಟ್ ಸ್ಟಿಲ್ ಮುಂಚಿಗೆ ಕಂಪೇರ್ ಮಾಡಿದ್ರೆ ಇವತ್ತು ಚೀಪೇ ಇದೆ ಬಟ್ ನಮ್ಮ ಲೈಫ್ ಸ್ಟೈಲ್ ಚೇಂಜ್ ಆಗಿದೆ ನೆಕ್ಸ್ಟ್ ಹೋಗ್ತಾ ಹೋಗ್ತಾ ಆರ್ಥಿಕ ಅಭಿವೃದ್ಧಿ ಆದಹ ಹಾಗೂ ಭಾರತದಲ್ಲಿ ಜಾಸ್ತಿ ಚಾರ್ಜ್ ಮಾಡಿದ್ರು ಕೂಡ ನಾವು ಪೇ ಮಾಡೋಕೆ ರೆಡಿ ಇರ್ತೀವಿ ನಮಗೆ ಇದು ತುಂಬಾ ಮುಖ್ಯ ಅಂತ ಅನ್ಿಸಿಬಿಟ್ಟಿದೆ ಈಗ ಡೇಟಾ ಅದು ಜನರ ಯೂಸರ್ ಬಿಹೇವಿಯರ್ನೇ ಚೇಂಜ್ ಮಾಡೋದರ ಒಂದು ಮಾರ್ಕೆಟಿಂಗ್ ಸ್ಟ್ರಾಟಜಿ ಬಿಸಿನೆಸ್ ಸ್ಟ್ರಾಟಜಿ ಇದನ್ನ ಟೆಕ್ ಭಾಷೆಯಲ್ಲಿ ಈಕೋಸಿಸ್ಟಮ್ ಲಾಕ್ ಇನ್ ಅಂತನು ನೀವು ಕರಿಬಹುದು. ಅವರ ಪ್ರಾಡಕ್ಟ್ಸ್ ಗೆ ನಿಮ್ಮನ್ನ ಲಾಕ್ ಿನ್ ಮಾಡೋ ರೀತಿಯಲ್ಲಿ ನಿಮ್ಮ ಬಿಹೇವಿಯರ್ ನ ಚೇಂಜ್ ಮಾಡೋದು. ದೇಶಿ ಸ್ಟಾರ್ಟಪ್ ಗಳಿಗೆ ಮರಣ ಶಾಸನ ನಮಗೇನು ಬಿಡು ಫ್ರೀ ಸಿಗ್ತಿದೆಯ ಅಲ್ವಾ ಅಂತ ನಾವು ಸುಮ್ನಾಗಬಹುದು ಆದ್ರೆ ಇದರ ದೂರಗಾಮಿ ಪರಿಣಾಮಗಳು ತುಂಬಾ ಡೇಂಜರಸ್ ಇವೆ. ಮೊದಲನೆದಾಗಿ ನಮ್ಮ ದೇಶದ ಸ್ಟಾರ್ಟಪ್ ಗಳ ಕಥೆ ಏನಾಗಬೇಕು. ಬೆಂಗಳೂರು ಹೈದರಾಬಾದ್ನಲ್ಲಿ ಎಷ್ಟೋ ಸಣ್ಣ ಭಾರತೀಯ ಕಂಪನಿಗಳು ಕಷ್ಟಪಟ್ಟು ಎಐ ಮಾಡೆಲ್ಸ್ ಅನ್ನ ರೆಡಿ ಮಾಡ್ತಿದ್ದಾರೆ.

ಈ ಗೂಗಲ್ ಓಪನ್ ಏನ ಅಂತ ದೈತ್ಯರು ಒಂದು ಫ್ರೀಯಾಗಿ ಕೊಟ್ಟುಬಿಟ್ಟಾಗ ನಮ್ಮ ದೇಶದ ಕಂಪನಿಗಳನ್ನ ಮೂಸಿ ನೋಡೋರು ಯಾರು? ಇವರ ಹಣಬಲದ ಮುಂದೆ ಅವರು ಹೇಗೆ ನಿಂತುಕೊಂತಾರೆ ಇದು ದೇಶಿ ತಂತ್ರಜ್ಞಾನದ ಬೆಳವಣಿಗೆಯನ್ನೇ ಮುಗಿಸಿ ಹಾಕುತ್ತೆ. ಹಾಗೆ ಕಾನೂನ್ ಸಮಸ್ಯೆ ಭಾರತದಲ್ಲಿ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ ಇನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಈ ಗ್ಯಾಪ್ ಅನ್ನೇ ಈ ಕಂಪನಿಗಳು ಬಳಸಿಕೊಳ್ಳುತ್ತಿದೆ. ನಮ್ಮ ಡೇಟಾ ಎಲ್ಲಿಗೆ ಹೋಗ್ತಿದೆ ಅದನ್ನ ಬೇರೆ ಯಾರಿಗಾದ್ರೂ ಮಾರುತಿದ್ದಾರಾ ಇದರ ಬಗ್ಗೆ ಸ್ಪಷ್ಟತೆ ಇನ್ನು ಕೂಡ ಇಲ್ಲ. ಯೂರೋಪ್ ನಲ್ಲಿ ಇರುವಷ್ಟು ಕಠಿಣ ಕಾನೂನು ಭಾರತದಲ್ಲಿ ಇಲ್ಲದೆ ಇರೋದೇ ಇವರಿಗೆ ವರದಾನ ಆಗಿದೆ. ನಾವೇನಾದ್ರೂ ಕೂಡ ಮಾತಾಡಿರ್ತೀವಿ ಅಂತ ಅಂದಕೊಳ್ಳಿ ಒಂದು ಕಾರ್ ಬಗ್ಗೆ ಮಾತಾಡಿರ್ತೀವಿ ಅಥವಾ ಒಂದು ಫೋನ್ ಬಗ್ಗೆ ಮಾತಾಡಿರ್ತೀವಿ ಒಂದು ಪ್ರಾಡಕ್ಟ್ ಬಗ್ಗೆ ಮಾತಾಡಿರ್ತೀವಿ. ನಾವೇನು ಸರ್ಚೆ ಮಾಡಿರಲ್ಲ ಅಂತ ಅಂದಕೊಳ್ಳಿ ಮರುಕ್ಷಣ ಮೊಬೈಲ್ನಲ್ಲಿ ಮೆಸೇಜ್ನಲ್ಲಿ ಅದರ ಕಮರ್ಷಿಯಲ್ ಬಂದಿರುತ್ತೆ ಆಡ್ ಬಂದಿರುತ್ತೆ ನಮಗೆ ನೆಕ್ಸ್ಟ್ ಯಾವುದಾದ್ರೂ ವಿಡಿಯೋ ಪ್ಲೇ ಮಾಡಿದಾಗ ಅದರದೇ ಆಡ್ ಪ್ಲೇ ಆಗಿರುತ್ತೆ. ಸೋ ನಮ್ಮ ಆಡಿಯೋವನ್ನ ಕೂಡ ನಮ್ಮ ಅನುಮತಿ ಇಲ್ಲದೇನೆ ಕೇಳಿಸಿಕೊಂಡು ಬಿಗ್ ಡೇಟಾಗೆ ಯೂಸ್ ಮಾಡ್ತಿರೋ ಅನುಮಾನಗಳಿದೆ. ಸೋ ವೀಕ್ಷಕರೇ ಟೆಕ್ನಾಲಜಿ ಬಳಸೋದು ತಪ್ಪು ಅಲ್ಲ ಖಂಡಿತ ಬಳಸಲೇಬೇಕು ಅದು ಈ ಕಾಲದ ಅವಶ್ಯಕತೆ. ಆದರೆ ಅಯ್ಯೋ ಅಮೆರಿಕದವರು ದಡ್ಡರು ನಮಗೆ ಫ್ರೀ ಸಿಗ್ತಿದೆ ಅನ್ನೋ ಒಂದು ನಾವೇ ಬುದ್ಧಿವಂತರು ಅನ್ನೋ ಫೀಲಿಂಗ್ ಬೇಡ. ಅವರು ಬುದ್ದಿವಂತರು ಇದ್ದಾರೆ ನಮಗಿಂತನೂ ಕೂಡ ಅವರು ನಮ್ಮನ್ನ ಬಳಸ್ತಾ ಇದ್ದಾರೆ. ಅದನ್ನ ನಮಗೆ ಗೊತ್ತಿರಲಿ ಅಷ್ಟೇ. ಓಗೂಗಲ್ ಎಂತ ಒಳ್ಳೆ ಕಂಪನಿ ನಮಗೆ Gmail ಫ್ರೀ ಕೊಟ್ಟಿದೆ ನಮಗೆ ಶೀಟ್ಸ್ ಫ್ರೀ ಕೊಟ್ಟಿದೆ ನಮಗೆ ಮ್ಯಾಪ್ಸ್ ಅನ್ನ ಫ್ರೀ ಕೊಟ್ಟಿದೆ ನಮಗೆ ಸರ್ಚ್ ಫ್ರೀ ಕೊಟ್ಟಿದೆಗೂಗಲ್ ಕೀಪ್ ನೋಟ್ಸ್ ಅನ್ನ ಫ್ರೀ ಕೊಟ್ಟಿದೆ ಅಂತ ಅನ್ಕೊಂತೀವಿ ಆದ್ರೆ ಗೂಗಲ್ ನ ಫೌಂಡರ್ಸ್ ಒಂದು ಇವೆಂಟ್ ನಲ್ಲಿ ಹೇಳ್ತಾರೆ ಯಾರು ಹೇಳಿದ್ದು ನಾವು ಸರ್ಚ್ ಕಂಪನಿ ಅಂತ ನಾವು ಅಲ್ಟಿಮೇಟ್ಲಿ ಎಐ ಕಂಪನಿ ನಮಗೆ ಇದೆಲ್ಲ ಡೇಟಾ ಆಗಬೇಕು ಅಂತ ಈ ಹಿಂದೆ ಒಂದು ಸಲಿ ಹೇಳಿದ್ರು.

ನಮ್ಮ ಡೇಟಾವನ್ನ ಮಾರ್ಬಿಟ್ಟು ಅವರಿಗೆ ಕೊಟ್ಟುಬಿಟ್ಟು ನಾವು ಪ್ರಾಡಕ್ಟ್ ನ ಫ್ರೀಯಾಗಿ ಯೂಸ್ ಮಾಡ್ತಿದೀವಿ ಅಷ್ಟೇ ಫ್ರೀ ಅಲ್ಲ ಈ ತರದ ಬಾರ್ಟ ಸಿಸ್ಟಮ್ ನಲ್ಲಿ ಯೂಸ್ ಮಾಡ್ತಿದೀವಿ ನೋಡಿ ಇದರ ಬಗ್ಗೆ ನಿಮಗೆ ಏನು ಅನ್ಸುತ್ತೆ ಹೇಳಿ ಈಗ ಒಂದು ಚಪ್ಲಿ ಬೇಕು ಅಂತ ಹೇಳಿದ್ರೆ ಅವರಿಗೆ ಡೇಟಾ ಮಾರ್ಬಿಟ್ಟು ನೀವು ಚಪ್ಲಿ ತಗೊಂತೀರಾ ದುರ್ಕೊಟ್ಟು ತಗೊಂತೀರ ಅಲ್ವಾ ಒಂದು ಬನಿಯನ್ ಬೇಕು ಅಂತ ಹೇಳಿದ್ರೆ ಡೇಟಾ ಮಾರ್ಬಿಟ್ಟು ಬನಿಯನ್ ತಗೊಂತೀರಾ ದುಡ್ಡು ಕೊಟ್ಟು ತಗೊಂತೀರ ಅಲ್ವಾ ನೀವು ಆದ್ರೆಜಿಮೇಲ್ ಸರ್ವಿಸ್ ಆಗಿರಬಹುದು ಅಥವಾ ಮ್ಯಾಪ್ಸ್ ಆಗಿರಬಹುದು ಸರ್ಚ್ ಆಗಿರಬಹುದು ನಾವು ಯಾಕೆ ದುಡ್ಡು ಕೊಟ್ಟು ತಗೊಂತಾ ಇಲ್ಲ ಬರಿ ನಮ್ಮ ಡೇಟಾ ಮಾರ್ಬಿಟ್ಟೆ ಯಾಕೆ ತಗೊಂತಾ ಇದೀವಿ ಇದು ಒಂದು ಡಿಬೇಟ್ ಇದು ನಮ್ಮ ಡೇಟಾ ನಮಗೆ ಸೇಫ್ ಬೇಕು ನಮ್ಮ ಡೇಟಾ ನೀವು ಬಳಸಬೇಡಿ ಮಿಸ್ ಯೂಸ್ ಮಾಡ್ಕೋಬೇಡಿ ನೀವು ಅದಕ್ಕೆ ಬೇರೆ ತರದಲ್ಲಿ ದುಡ್ಡು ಖರ್ಚು ಮಾಡ್ಕೊಂಡು ಮಾಡಿ ಈ ಸರ್ವಿಸಸ್ ಎಲ್ಲ ಕೊಡ್ತಿದೀರಲ್ಲ ಅದಕ್ಕೆ ಮಂತ್ಲಿ ಇಷ್ಟೋ 50 ರೂಪಾಯಿನೋ 100 ರೂಪಾಯಿನೋ ಚಾರ್ಜ್ ಮಾಡಿ ಅನ್ನೋ ದಿನಗಳು ಓಕೆನ ನಿಮಗೆ ಅಥವಾ ಪರವಾಗಿಲ್ಲ ನಮ್ಮ ಡೇಟಾ ತಗೊಳಿ ನಮಗೆ ಏನು ತೊಂದರೆ ಇಲ್ಲ ನಮಗೆ ಫ್ರೀ ಆಗಿ ಕೊಡಿ ಆ ಮಾಡೆಲ್ ಓಕೆನಾ ಈ ಡಿಬೇಟ್ ಜಗತ್ತಲ್ಲಿ ನಡೀತಾ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments