Thursday, November 20, 2025
HomeStartups and Businessಸಾಧನೆಯ ಸೆಕ್ಯುರಿಟಿ ಗಾರ್ಡ್: ZOHO ಕಂಪನಿಯ ಪ್ರೇರಣಾದಾಯಕ ಹಾದಿ!

ಸಾಧನೆಯ ಸೆಕ್ಯುರಿಟಿ ಗಾರ್ಡ್: ZOHO ಕಂಪನಿಯ ಪ್ರೇರಣಾದಾಯಕ ಹಾದಿ!

ಈ ವ್ಯಕ್ತಿ ನೋಡಿ ಹಳ್ಳಿಯಲ್ಲಿ ಲುಂಗಿ ಹಾಕೊಂಡು ಸೈಕಲ್ ಓಡಿಸಿಕೊಂಡು ಸಾಮಾನ್ಯರಂತೆ ಹೋಗ್ತಿರೋ ಈ ವ್ಯಕ್ತಿ ಭಾರತದ ಅತ್ಯಂತ ಯಶಸ್ವಿ ಸ್ಟಾರ್ಟಪ್ ನ ಮಾಲಿಕ ಇವರ ಒಂದು ವರ್ಷದ ಪ್ರಾಫಿಟ್ 2800 ಕೋಟಿ ರೂಪಾಯಿ 180 ರಾಷ್ಟ್ರಗಳಲ್ಲಿ ಇವರ ಬಿಸಿನೆಸ್ ಇದೆ 6 ಕೋಟಿಗೂ ಅಧಿಕ ಕಸ್ಟಮರ್ಸ್ ಇದ್ದಾರೆ 11000ಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ ಫಾರ್ಚೂನ್ 500 ಪಟ್ಟಿಯಲ್ಲಿ ರೋ 300 ಕಂಪನಿಗಳಿಗೆ ಕನ್ಸಲ್ಟೆನ್ಸಿ ಸರ್ವಿಸಸ್ ಕೊಡ್ತಿದ್ದಾರೆ. Apple, Netflix, Amazon, Mahindra ಇವರ ಕ್ಲೈಂಟ್ಸ್. ಇವರ ಆದಾಯ 7000 ಕೋಟಿ ರೂಪಾಯಿ ಪ್ರಾಫಿಟ್ 2700 ಕೋಟಿ ರೂಪಾಯಿ, ಕಂಪನಿ ಮೌಲ್ಯ 40,000 ಕೋಟಿ ರೂಪಾಯಿ. ಯಾವುದೇ ಸಾಲ ಇನ್ವೆಸ್ಟರ್ಸ್ ಇಲ್ಲದೆ ಕೇವಲ ತಮ್ಮ ಸ್ವಂತ ಹಣದಿಂದಲೇ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ. ಇಂತ ವ್ಯಕ್ತಿ ಹೆಸರು ಶ್ರೀಧರ್ ವೆಂಬು. ಇವರ ಕಂಪನಿ ಹೆಸರು ಜೋಹೋ. ಹಾಗಿದ್ರೆ ಏನಿದು ಜೋಹೋ ಏನ್ು ಮಾಡುತ್ತೆ ಹಳ್ಳಿಯಲ್ಲಿ ಕೂತ್ಕೊಂಡು ಸೈಕಲ್ ಹೊಡ್ಕೊಂಡು ಓಡಾಡೋ ಈ ವ್ಯಕ್ತಿ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಬನ್ನಿ ಈ ವರದಿಯಲ್ಲಿ ಜೋಹೋದ ಬಿಸಿನೆಸ್ ಕೇಸ್ ಸ್ಟಡಿ ಮಾಡೋಣ ರೈತರ ಮನೆ ಹುಡುಗ ಐಐಟಿ ಗೆ ಅಮೆರಿಕಾಗೆ ಹೋದ್ರು ಓದಿನಲ್ಲಿ ತೃಪ್ತಿ ಇಲ್ಲ ಶ್ರೀಧರ್ ವೆಂಬು ಹುಟ್ಟಿದ್ದು 1968 ರಲ್ಲಿ ತಮಿಳುನಾಡಿನ ಪುಟ್ಟಹಳ್ಳಿಯಲ್ಲಿ ಕೃಷಿ ಶ್ರೀಧರ್ ಕುಟುಂಬದ ಕುಲಕಸವು ತಾತಾ ಚಿಕ್ಕಪ್ಪ ತಂದೆ ಎಲ್ಲ ಕೃಷಿಯಲ್ಲಿಇದ್ರು ಆದರೆ ಸ್ವಲ್ಪ ಟೈಮ್ ನಂತರ ಅವರ ತಂದೆಗೆ ಚೆನ್ನೈನಲ್ಲಿ ಜಾಬ್ ಸಿಕ್ತು ಹೀಗಾಗಿ ಶ್ರೀಧರ್ ಕೂಡ ಚೆನ್ನೈಗೆ ಹೋಗಬೇಕಾಯಿತು ಚೆನ್ನೈ ತಲುಪಿದ ಶ್ರೀಧರ್ ಅಲ್ಲಿ ಜೆ ಡಬಲ್ಇ ಪರೀಕ್ಷೆ ಬರೆದರು ಅಂದಿನ ಕಾಲದಲ್ಲೇ ಆಲ್ ಇಂಡಿಯಾ 27ನೇ ರಯಾಂಕ್ ಪಡೆದು ಐಐಟಿ ಮೆಡ್ರಾಸ್ ನಂತಹ ಭಾರತದ ಅತ್ಯುನ್ನತ ಇಂಜಿನಿಯರಿಂಗ್ ಕಾಲೇಜ್ ಸೇರಿಕೊಂಡರು ಈ ಸಾಧನೆ ಎಷ್ಟು ಇಂಪಾರ್ಟೆಂಟ್ ಆಗಿತ್ತು ಅಂದ್ರೆ ಅವತ್ತಿಗೆ ಇಡೀ ಕುಟುಂಬದಲ್ಲಿ ಕಾಲೇಜಿನ ಮೆಟ್ಟಿಲು ಹತ್ತಿ ಗ್ರಾಜುಯೇಟ್ ಆದ ಮೊದಲ ವ್ಯಕ್ತಿಯಾಗಿದ್ರು ಶ್ರೀಧರ್ ವೆಂಬು ಹೀಗೆ ಹಳ್ಳಿಯಿಂದ ಬಂದರು ಕೂಡ ಅವರ ಮನಸ್ಸು ಮಾತ್ರ ಯಾವಾಗಲೂ ಹೊಸತನ ಆವಿಷ್ಕಾರ ಆಳವಾದ ಅಧ್ಯನದ ಕಡೆಗೆ ಸೆಳಿತಾಇದ್ರು ಐಐಟಿ ಯಲ್ಲೂ ಕೂಡ ಹೀಗೆ ಕಂಪ್ಯೂಟರ್ ಸೃಷ್ಟಿ ಮಾಡೋಕೆ ಮಷೀನ್ ತಯಾರು ಮಾಡೋಕೆ ಫಂಡಮೆಂಟಲ್ ರಿಸರ್ಚ್ ಮಾಡೋಕೆ ಅವಕಾಶ ಸಿಗುತ್ತೆ ಅಂತ ಅನ್ಕೊಂಡಿದ್ರು ಆದರೆ ಐಐಟಿಯ ಇಂಜಿನಿಯರಿಂಗ್ ಸಿಲಬಸ್ ಶ್ರೀಧರರ ಆಸೆಗೆ ತಣ್ಣೀರನ್ನ ಹಾಕ್ತು ಎಲ್ಲರಂತೆ ಶ್ರೀಧರ್ ಕೇವಲ ಥಿಯರಿಯನ್ನ ಪಟಿಸಬೇಕಾಯಿತು ಆದರೆ ಇಷ್ಟ ಇಲ್ಲದೆ ಹೋದರು ಕೂಡ ಒಲ್ಲದ ಮನಸ್ಸಿನಲ್ಲಿ ಶ್ರೀಧರ್ ಯಶಸ್ವಿಯಾಗಿ ಅಲ್ಲಿ ಇಂಜಿನಿಯರಿಂಗ್ ಮುಗಿಸಿದರು ಆದರೆ ಅವರ ಈ ಆಳ ಅಧ್ಯಯನದ ಹುಚ್ಚು ಮಾತ್ರ ನಿಲ್ಲೋದೇ ಇಲ್ಲ ಇದು ಕಡೆಗೆ ಅವರನ್ನ ಅಮೆರಿಕದ ಕಡೆ ಗೆ ಆಕರ್ಷಿಸಿತು. ಅವರ ಪ್ರತಿಭೆಗೆ ಅಲ್ಲಿನ ಪ್ರತಿಷ್ಠಿತ ಪ್ರಿನ್ಸ್ಟನ್ ಯೂನಿವರ್ಸಿಟಿಯಲ್ಲಿ ಸೀಟ್ ಸಿಕ್ತು.

ಶ್ರೀಧರ್ ಅಲ್ಲಿ ಪಿಎಚ್ಡಿ ಮುಗಿಸಿದ್ರು ಆದರೆ ಅಂತಹ ಟಾಪ್ ಕಾಲೇಜ್ನಲ್ಲಿ ಓದಿದ್ರುನು ಮತ್ತೆ ಅಗೈನ್ ಅವರಿಗೆ ತೃಪ್ತಿನೇ ಇಲ್ಲ. ಹೀಗಾಗಿ ಲೈಬ್ರರಿಗೆ ಹೋಗಿ ತಾವೇ ಕುದ್ದು ಹೊಸ ಹೊಸ ವಿಚಾರಗಳ ಬಗ್ಗೆ ಓದೋದು ರಿಸರ್ಚ್ ಮಾಡೋದು ಶುರು ಮಾಡಿಕೊಂಡರು. ಇದೇ ಹಂತದಲ್ಲಿ ಕ್ವಾಲ್ಕಾಮ ನಲ್ಲಿ ಅವರಿಗೆ ಕೆಲಸ ಸಿಕ್ತು. ಹಲವು ವರ್ಷಗಳ ಕಾಲ ಸಾಫ್ಟ್ವೇರ್ ಉದ್ಯೋಗಿಯಾಗಿ ಅಲ್ಲಿ ದುಡಿದರು. ಹೀಗೆ ಕ್ವಾಲ್ಕಾಮ್ ನಲ್ಲಿದ್ದ ಶ್ರೀಧರ್ ಅವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಇಲ್ಲ ಸಾಕು. ವಾಪಸ್ ಹೋಗಬೇಕು. ನನ್ನ ಮನೆಗೆ ಹೋಗಬೇಕು. ಭಾರತಕ್ಕೆ ಹೋಗಬೇಕು ಅಂತ ಅನ್ನಿಸ್ತು. ಕೈತುಂಬ ಸಂಬಳ ಕೈಬಿಟ್ರು ಭಾರತಕ್ಕೆ ಬಂದು ಸಾವಿರ ಕೋಟಿಯ ಕಂಪನಿ ಕಟ್ಟಿದ್ರು. 90ರ ದಶಕದಲ್ಲಿ ಅವತ್ತಿಗಾಗಲೇ ಕಂಪ್ಯೂಟರ್ ಕ್ರಾಂತಿ ಜಗತ್ತನ್ನ ಆವರಿಸಿತ್ತು. ಅಮೆರಿಕದಲ್ಲಿ ದೊಡ್ಡ ದೊಡ್ಡ ಸಾಫ್ಟ್ವೇರ್ ಕಂಪನಿಗಳು ತಲೆ ಎತ್ತಿದ್ದವು. ಆ ಕಂಪನಿಗಳಲ್ಲಿ ಕೆಲಸ ಮಾಡೋಕೆ ಅಮೆರಿಕನ್ ಡ್ರೀಮ್ ಅರಸಿ ಭಾರತದ ಇಂಜಿನಿಯರ್ಸ್ ಅಮೆರಿಕಾಗೆ ಹಾರುತ್ತಾ ಇದ್ರು. ಅಮೆರಿಕನ್ ಕಂಪನಿಸ್ ತುಂಬಾ ಬರಿ ಭಾರತೀಯರೇ ತುಂಬಿಕೊಂಡಿದ್ರು. ಆದರೆ ಹೀಗಿದ್ರೂ ಕೂಡ ಸಾಫ್ಟ್ವೇರ್ ಜಗತ್ತಲ್ಲಿ ಅವತ್ತು ಭಾರತದ ಕಂಪನಿಗಳ ಸಂಖ್ಯೆ ಬೆರಳೆಣಿಕೆ ಎಷ್ಟಿತ್ತು. ಇದನ್ನ ನೋಡಿದ ಶ್ರೀಧರ್ ಅವರಿಗೆ ನಾವ್ ಯಾಕೆ ಭಾರತಕ್ಕೆ ಹೋಗಿ ಒಂದು ಸಾಫ್ಟ್ವೇರ್ ಕಂಪನಿ ತೆಗೆಬಾರದು ಅನ್ನೋ ಪ್ರಶ್ನೆ ಬಂತು. ಅಷ್ಟೇ ತಡ ದೊಡ್ಡ ಕಂಪನಿ ಕೈ ತುಂಬಾ ಸಂಬಳ ಎಲ್ಲ ಬಿಟ್ಟು ಶ್ರೀಧರ್ ಭಾರತಕ್ಕೆ ವಾಪಸ್ ಆದ್ರು 1996 ರಲ್ಲಿ ಅವರ ಸೋದರರೊಂದಿಗೆ ಸೇರಿ ಚೆನ್ನೈನಲ್ಲಿ ಒಂದು ಪುಟ್ಟ ಕೋಣೆಯಲ್ಲಿ ಅಡ್ವೆಂಟ್ ನೆಟ್ ಅನ್ನೋ ಸಾಫ್ಟ್ವೇರ್ ಕಂಪನಿ ಶುರು ಮಾಡಿದ್ರು. ಟೆಲಿಕಾಂ ಕಂಪನಿಗಳಿಗೆ ನೆಟ್ವರ್ಕ್ ಮ್ಯಾನೇಜ್ಮೆಂಟ್ ಸರ್ವಿಸ್ ಕೊಡೋಕ್ಕೆ ಮುಂದಾದರು. ಆರಂಭದಲ್ಲಿ ಕಷ್ಟ ಆದರೂ ಕೂಡ ಶ್ರೀಧರ್ ಅವರ ಹೊಸ ಚಿಂತನೆಗಳಿಂದ ನಿಧಾನಕ್ಕೆ ಕಂಪನಿ ಪ್ರಗತಿ ಕಾಣೋಕೆ ಶುರು ಮಾಡುತ್ತೆ. 1998ರ ಹೊತ್ತಿಗೆ ದೊಡ್ಡ ಬ್ರೇಕ್ ತ್ರೂ ಸಿಗುತ್ತೆ. ಎಕ್ಸಿಬಿಷನ್ ಒಂದರಲ್ಲಿ ಶ್ರೀಧರ್ ತಮ್ಮ ಸಾಫ್ಟ್ವೇರ್ ನ ತೋರಿಸುವಾಗ ಜಪಾನ್ ಕಂಪನಿಯೊಂದು ಅವರನ್ನ ಅಪ್ರೋಚ್ ಮಾಡುತ್ತೆ. ತಮಗೆ ಅಮೆರಿಕದ ಹಚ್ಪಿ ಕಂಪನಿ ಒಂದು ಸಾಫ್ಟ್ವೇರ್ ಕೊಡ್ತಾ ಇದೆ ಆದರೆ ತುಂಬಾ ದುಬಾರಿ ಇದೆ.

ಹೀಗಾಗಿ ಅದೇ ಸಾಫ್ಟ್ವೇರ್ ನ್ನ ನೀವು ಕಡಿಮೆ ರೇಟ್ನಲ್ಲಿ ಕೊಡೋಕಾಗುತ್ತಾ ಅಂತ ಜಪಾನ್ ಕಂಪನಿ ಇವರ ಹತ್ರ ಕೇಳ್ತು ಸ್ಟಾರ್ಟಪ್ ಅಲ್ಲ ಮಾಡಿಕೊಡ್ತಾರಾ ನೋಡೋಣ ಕೊಟ್ರೆ ಕೊಡ್ಲಿ ಅಂತ ತಾನಾಗೆ ಬಂದ ಆಫರ್ನ ಶ್ರೀಧರ್ ಮರು ಮಾತನಾಡದೆ ಒಪ್ಪಿಕೊಳ್ತಾರೆ. ಇದು ಅಡ್ವೆಂಟ್ ನೆಟ್ ಗೆ ದೊರೆತ ಮೊದಲ ದೊಡ್ಡ ಪ್ರಾಜೆಕ್ಟ್ ಅಲ್ದೆ ಶ್ರೀಧರರ ಭವಿಷ್ಯದ ಬಿಸಿನೆಸ್ ಸ್ಟ್ರಾಟಜಿಗೆ ಅಡಿಪಾಯ. ಅಲ್ಲಿವರೆಗೂ ದೊಡ್ಡ ದೊಡ್ಡ ಕಂಪನಿಗಳು ದುಬಾರಿ ದರದಲ್ಲಿ ದೊಡ್ಡವರಿಗೆ ಸಾಫ್ಟ್ವೇರ್ ಮಾಡಿಕೊಡ್ತಾ ಇದ್ರು ಆದರೆ ಅದೇ ಸಾಫ್ಟ್ವೇರ್ ನ ತಾನು ಅಗ್ಗದ ರೇಟಲ್ಲಿ ಸಾಮಾನ್ಯ ಕಂಪನಿಗಳಿಗೆ ಮಾಡಿಕೊಟ್ಟರೆ ಈ ದೈತ್ಯರ ಮಧ್ಯೆ ಸರ್ವೈವ್ ಆಗೋಕೆ ಸ್ಪೇಸ್ ಇದೆ ಅಂತ ಶ್ರೀಧರ್ ಅರ್ಥ ಮಾಡಿಕೊಳ್ತಾರೆ ಇದೆ ಬಿಸಿನೆಸ್ ಮಂತ್ರದಿಂದ ಕೇವಲ ಎರಡೇ ವರ್ಷದಲ್ಲಿ ಅಡ್ವೆಂಟ್ ನೆಟ್ ಆದಾಯ ಒನ್ ಮಿಲಿಯನ್ ಡಾಲರ್ ತಲುಪುತ್ತೆ 2000ನೇ ಇಸವಿಯನ್ನ ಹೊತ್ತಿಗೆ ಕಂಪನಿಯ ಟರ್ನ್ಓವರ್ 10 ಮಿಲಿಯನ್ ಡಾಲರ್ ದಾಟುತ್ತೆ ಸುಮಾರು 115 15 ಜನ ಕೆಲಸ ಮಾಡ್ತಿರ್ತಾರೆ ಅಷ್ಟೊತ್ತಿಗಾಗಲೇ ಆಪತ್ತಿನಲ್ಲಿ ಆವಿಷ್ಕಾರ ಸಂಕಷ್ಟದಲ್ಲಿದ್ದಾಗ ಜೋಹೋ ಚಮತ್ಕಾರ ಶ್ರೀಧರರ ಕಂಪನಿ ಹೇಗೆ ಭರ್ಜರಿ ಟೇಕ್ ಆಫ್ ತಗುತ್ತಿದ್ದ ಟೈಮ್ನಲ್ಲಿ ವಿಶ್ವದಲ್ಲಿ ಡಾಟ್ಕಾಂ ಬಬಲ್ ಬಿಕ್ಕಟ್ಟು ಸೃಷ್ಟಿಯಾಯಿತು ಅವತ್ತಿಗೆ ಇಂಟರ್ನೆಟ್ ನಿಂದ ಎಕ್ಸೈಟ್ ಆಗಿದ್ದ ಜನ ಇಂಟರ್ನೆಟ್ ಕಂಪನಿಗಳ ಮೇಲೆ ಭರ್ಜರಿ ಹೂಡಿಕೆ ಮಾಡೋಕೆ ಶುರು ಮಾಡಿದ್ರು ಕಂಪನಿ ಸಾಲಿಡ್ ಇದೆಯಾ ಇಲ್ವಾ ಭವಿಷ್ಯ ಇದೆಯಾ ಇಲ್ವಾ ಏನು ನೋಡದೆ ಡಾಟ್ಕಾಮ ಅಂತ ಇದ್ರೆ ಸಾಕು ಇಂಟರ್ನೆಟ್ ಕಂಪನಿ ಅಂತ ಇದ್ರೆ ಸಾಕು ಕೋಟಿ ಕೋಟಿ ಹಣವನ್ನ ಸುರಿತಾ ಇದ್ರು ಇದರಿಂದ ಇಂಟರ್ನೆಟ್ ಕಂಪನಿಗಳ ಶೇರುಗಳ ಬೆಲೆ ಗಗನಕ್ಕೆ ಮುಡಿತು ಆದರೆ 2000ನೇ ಇಸವಿಗೆ ಬರ್ತಿದ್ದ ಹಾಗೆ ವೈಟುಕೆ ಪ್ರಾಬ್ಲಮ್ ಸೇರಿದ ಹಾಗೆ ಇತರ ಸಮಸ್ಯೆಗಳಿಂದ ಇಂಟರ್ನೆಟ್ ಕಂಪನಿಗಳು ಒಂದೊಂದಾಗಿ ಶಟ್ ಡೌನ್ ಆಗೋಕೆ ಶುರುವಾದ್ವು ಗುಳ್ಳೆ ಹೊಡೆದೋಯ್ತು ಬಬಲ್ ಬಸ್ಟ್ ಆಯ್ತು ನೋಡಿ ನೋಡುತ್ತಿದ್ದ ಹಾಗೆ ಎಲ್ಲ ಇಂಟರ್ನೆಟ್ ಕಂಪನಿಗಳ ಶೇರ್ಗಳು ಬಿದ್ದಹೋದ್ವು 5000ದ ಪಾಯಿಂಟ್ ನಲ್ಲಿದ ಅಮೆರಿಕದ ನಾಸ್ಡಾಕ್ 1000ಕ್ಕೆ ಗುಸಹೋಯ್ತು siscಕೋಇಟೆಲ್ ಓರಾಕಲ್ ಅಂತ ದೊಡ್ಡ ದೊಡ್ಡ ಗುಡ್ ಕಂಪನಿಸ್ ಸ್ಟಾಕ್ಗಳು ಕೂಡ 80% ಬಿದ್ದುಹೋದ್ವು ಆ ಟೈಮ್ನಲ್ಲಿ ಅಡ್ವೆಂಟ್ ನೆಟ್ ಸ್ಟಾಕ್ ಮಾರ್ಕೆಟ್ ನಲ್ಲಿ ಲಿಸ್ಟೆಡ್ ಇರ್ಲಿಲ್ಲ ಆದ್ರೆ ಸಾಫ್ಟ್ವೇರ್ ಜಗತ್ತಿನ ತಲ್ಲಣ ಅಡ್ವೆಂಟ್ ನೆಟ್ ಗುತ್ತಾಗ್ತು.

80% ಗ್ರಾಹಕರು ರಾತ್ರೋ ರಾತ್ರಿ ಖಾಲಿಯಾದ್ರು ಹೊಸ ಆರ್ಡರ್ ಸಿಗೋದು ಕಷ್ಟ ಆಯ್ತು. ಇಂತ ಟೈಮ್ನಲ್ಲಿ ಯಾರೇ ಆಗಿದ್ರೂ ಕೂಡ ದೊಡ್ಡ ಕಂಪನಿ ಯಾವುದಾದ್ರೂ ಬಂದು ತಗೊಳ್ಳಿ ನಮ್ಮ ಕಂಪನಿನ ಅಂತ ಹೇಳಿ ಶೇರ್ ಮಾರಿ ಕೈ ತೊಳ್ಕೊಳ್ಳೋಕೆ ನೋಡ್ತಾ ಇದ್ರು ಆದ್ರೆ ಶ್ರೀಧರ್ ಮಾತ್ರ ಎದೆಗುಂದದೆ ಒಂದು ದೊಡ್ಡ ಹೆಜ್ಜೆ ಇಡ್ತಾರೆ ಬಂದಿರೋ ಆಪತ್ತನ್ನೇ ಒಂದು ಅಪಾರ್ಚುನಿಟಿ ಮಾಡಿಕೊಳ್ತಾರೆ ಆರಂಭದಿಂದಲೂ ಸಾಲ ಮಾಡದೆ ಬಂದ ಲಾಭವನ್ನ ಕಂಪನಿಯಲ್ಲೇ ಹುಡಿ ಕಂಪನಿ ಕಟ್ಟಿದ ಶ್ರೀಧರ್ ಬಳಿ ಒಂಬತ್ತು 10 ತಿಂಗಳಿಗೆ ಆಗುವಷ್ಟು ಕ್ಯಾಶ್ ಇತ್ತು ಹೀಗಾಗಿ ಕಾಸ್ಟ್ ಕಟ್ ಹೆಸರಲ್ಲಿ ಉದ್ಯೋಗಿಗಳನ್ನ ತೆಗೆಯದೆ ಶ್ರೀಧರ್ ಆ ವರ್ಷವನ್ನ ಆರ್ಎಂಟಿ ವರ್ಷ ಅಂತ ಡಿಕ್ಲೇರ್ ಮಾಡಿದ್ರು ಅಂದ್ರೆ ಮಾರ್ಕೆಟ್ ಸರಿಯಾಗೋವರೆಗೂ ಹೇಗೂ ಕೆಲಸ ಇರಲ್ಲ. ಸೋ ಆ ಟೈಮ್ನಲ್ಲಿ ರಿಸರ್ಚ್ ಮೇಲೆ ಫೋಕಸ್ ಮಾಡೋಣ ಅಂತ ಹೇಳ್ತಾರೆ. 115 ಉದ್ಯೋಗಿಗಳು ತಮ್ಮ ಪ್ರಾಡಕ್ಟ್ ನ ಹೇಗೆ ಇಂಪ್ರೂವ್ ಮಾಡಬಹುದು ಹೊಸದಾಗಿ ತಮ್ಮ ಗ್ರಾಹಕರಿಗೆ ಏನೇನು ಕೊಡಬಹುದು ಅಂತ ರಿಸರ್ಚ್ ಮಾಡೋಕೆ ಶುರು ಮಾಡ್ತಾರೆ. ಪರಿಣಾಮ 2001ರಲ್ಲಿ ಅಡ್ವೆಂಟ್ ನೆಟ್ ಮ್ಯಾನೇಜ್ ಇಂಜಿನ್ ಅನ್ನೋ ಕ್ರಾಂತಿಕಾರಿ ಸಾಫ್ಟ್ವೇರ್ ನ ಪರಿಚಯಿಸುತ್ತೆ. ಇದು ಕಂಪನಿಯ ಅದೃಷ್ಟವನ್ನೇ ಬದಲಾಯಿಸುತ್ತೆ. ಅಲ್ಲಿವರೆಗೂ ಹೆಚ್ಚು ಟೆಲಿಕಾಂ ಕಂಪನಿಗಳಿಗೆ ನೆಟ್ವರ್ಕ್ ಮ್ಯಾನೇಜ್ಮೆಂಟ್ ಸರ್ವಿಸ್ ಕೊಡ್ತಾ ಇದ್ದ ಅಡ್ವೆಂಟ್ ನೆಟ್ ನಂತರ ಐಟಿ ಸೈಬರ್ ಸೆಕ್ಯೂರಿಟಿ ಅಂತಹ ಕ್ಷೇತ್ರಗಳಿಗೂ ಕೈ ಹಾಕುತ್ತೆ. ಅಗ್ಗದ ದರದಲ್ಲಿ ಸೇವೆ ಕೊಡ್ತಿರೋದ್ರಿಂದ ಐಬಿಎಂ ಹೆಚ್ಪಿ ಗಿಂತ ಅಡ್ವೆಂಟ್ ನೆಟ್ ಗೆ ಹೆಚ್ಚು ಅಡ್ವಾಂಟೇಜ್ ಸಿಗುತ್ತೆ. ಭಾರಿ ಆದಾಯ ಹರಿದು ಬರುತ್ತೆ.

ಒಂದು ಪ್ರಾಡಕ್ಟ್ ನಿಂದ ಕಂಪನಿ ಹೆಸರೇ ಬದಲು ಸಾಫ್ಟ್ವೇರ್ ಜಗತ್ತಲ್ಲಿ Zoho ಕ್ರಾಂತಿ. ಇನ್ನು ಇದೇ ಸಮಯದಲ್ಲಿ ಅಡ್ವೆಂಟನೆಟ್ ಜೋಹo ಅನ್ನೋ ಕ್ಲೌಡ್ ಸರ್ವಿಸ್ ಸಾಫ್ಟ್ವೇರ್ ಕೂಡ ಶುರು ಮಾಡುತ್ತೆ. ಇದರಲ್ಲಿ ಒಂದು ಉದ್ಯಮ ನಡೆಸಬೇಕಾದ್ರೆ ಬೇಕಾಗುವ ಎಲ್ಲಾ ಫಂಕ್ಷನ್ ಗಳಿಗೆ ಅಂದ್ರೆ ಹೈಲಿಂಗ್ ಮ್ಯಾನೇಜ್ಮೆಂಟ್ ಫೈನಾನ್ಸ್ ಹೆಚ್ಆರ್ ಹೀಗೆ ಎಲ್ಲಾ ಕೆಲಸಗಳಿಗೆ ಬೇಕಾದ ಅಪ್ಲಿಕೇಶನ್ ಗಳನ್ನ ಸೃಷ್ಟಿಸಲಾಗುತ್ತೆ. ಅಗೈನ್ ಇಲ್ಲಿ ಶ್ರೀಧರ್ ವೆಂಬು ತಮ್ಮ ಬಿಸಿನೆಸ್ ಮಂತ್ರವನ್ನ ಅಪ್ಲೈ ಮಾಡ್ತಾರೆ. ದೊಡ್ಡ ದೊಡ್ಡ ಕಂಪನಿಗಳು ದುಬಾರಿ ದರದಲ್ಲಿ ಆಲ್ರೆಡಿ ಇಂತ ಸಾಫ್ಟ್ವೇರ್ ಗಳನ್ನ ಮಾಡಿಕೊಡ್ತಾ ಇದ್ವು ಆದರೆ ಶ್ರೀಧರ್ ಜೋಹೋ ಮೂಲಕ ಒಂದು ಸಣ್ಣ ಕಿರಾಣಿ ಅಂಗಡಿ ಕೂಡ ತಮ್ಮ ಅಪ್ಲಿಕೇಶನ್ ತಗೊಳ್ಬಹುದು ಅಷ್ಟು ಅಗ್ಗದ ಕ್ಲೌಡ್ ಸಾಫ್ಟ್ವೇರ್ ಅನ್ನ ರೆಡಿ ಮಾಡಿಕೊಡ್ತಾರೆ ಅಷ್ಟೇ ಅಲ್ಲ ಒಂದು ಅಪ್ಲಿಕೇಶನ್ ಅಲ್ಲ ಕಸ್ಟಮರ್ ರಿಲೇಷನ್ಶಿಪ್ ಮ್ಯಾನೇಜ್ಮೆಂಟ್ ಅಕೌಂಟಿಂಗ್ ಮಾರ್ಕೆಟಿಂಗ್ ಎಚ್ಆರ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಹೀಗೆ ಬರೋಬರಿ 45 50 ಆಪ್ ಗಳನ್ನ ಡೆವಲಪ್ ಮಾಡ್ತಾರೆ ಎಲ್ಲ ಒಂದೇ ಕಡೆ ಸಿಗಬೇಕು ಆ ರೀತಿ ಮಾಡ್ತಾರೆ ಅಲ್ದೇ ಜೋಹೋ ಪ್ರಾಡಕ್ಟ್ ಪರ್ಚೇಸ್ ಮಾಡೋರು ಆರಂಭದ ಎರಡು ತಿಂಗಳು ಆ ಸರ್ವಿಸ್ ನ ಫ್ರೀಯಾಗಿ ಯೂಸ್ ಮಾಡಬಹುದು ಅದಾದಮೇಲೆ ಅದು ಇಷ್ಟ ಆಯ್ತು ಅಂದ್ರೆ ತಮ್ಮ ಪ್ರಾಡಕ್ಟ್ ನಿಂದ ಬಿಸಿನೆಸ್ ಗೆ ಬೆನಿಫಿಟ್ ಆದ್ರೆ ಆಮೇಲೆ ಪೇ ಮಾಡಿ ಪೇಡ್ ಸರ್ವಿಸಸ್ ತಗೋಬಹುದು ಅಂತ ಆಫರ್ ಕೊಟ್ರು ಎಲ್ಲ ಸ್ಟ್ರಾಟಜಿಸ್ ಇಂದ ಜೋಹೋ ಬಹುಬೇಗ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಸಿಕ್ಕಪಟ್ಟೆ ಪಾಪ್ಯುಲರ್ ಆಗುತ್ತೆ ಅಡ್ವೆಂಟ್ ನೆಟ್ ತನ್ನ ಹೆಸರನ್ನೇ ಜೋಹೋ ಕಾರ್ಪೊರೇಷನ್ಸ್ ಅಂತ ಬದಲಾಯಿಸುತ್ತೆ ಜೋಹೋ ಮಾರ್ಕೆಟಿಂಗ್ ಕೂಡ ಮಾಡೋದಿಲ್ಲ ತನ್ನ ಉತ್ಪನ್ನಗಳನ್ನ ಬಳಸಿದವರ ರೆಫರಲ್ ಮೂಲಕವೇ ಜೊತೆಗೆ ತನ್ನ ಗ್ರಾಹಕರನ್ನೇ ಮಾರ್ಕೆಟಿಂಗ್ ಪಾರ್ಟ್ನರ್ ಮಾಡಿಕೊಳ್ಳುವ ಮೂಲಕ ಹೊಸ ಗ್ರಾಹಕರನ್ನ ಪಡೆಯುತ್ತೆ ಹೇಗೆ ಬೆಳೆದ ಜೋಹೋ ಕೊನಗೆಆರು ಬಿಲಿಯನ್ ಡಾಲರ್ನ ದೊಡ್ಡ ಉದ್ಯಮ ಆಗಿದೆ ವರ್ಷಕ್ಕೆ 8ಸಾವಿರ ಕೋಟಿ ರೂಪಾಯಿ ದುಡ್ಡು ಹರೆದು ಬರ್ತಾ ಇದೆ 160 ರಾಷ್ಟ್ರಗಳಲ್ಲಿ 50ಸಾಕ್ಕೂ ಅಧಿಕ ಕಂಪನಿಗಳಿಗೆ ಸರ್ವಿಸಸ್ ಕೊಡ್ತಾ ಇದ್ದಾರೆ ವಿಶ್ವಾದ್ಯಂತ 8 ಕೋಟಿ ಕಸ್ಟಮರ್ಸ್ ಇದ್ದಾರೆ 150000 ಜನ ಜೋಹೋದಲ್ಲಿ ಕೆಲಸ ಮಾಡ್ತಿದ್ದಾರೆ ಜೋಹೋತನ ಉದ್ಯೋಗಿಗಳನ್ನ ನೇಮಕ ಮಾಡೋದು ಕೂಡ ವೆರಿ ವೆರಿ ಇಂಟರೆಸ್ಟಿಂಗ್ ಸ್ಟ್ರಾಟಜಿ ಇದೆ ಅಲ್ಲೂ ಕೂಡ ಉದ್ಯೋಗಿಗಳಿಗಾಗಿ ಯೂನಿವರ್ಸಿಟಿ ಸೆಕ್ಯೂರಿಟಿ ಗಾರ್ಡ್ ಕೂಡ ಇಂಜಿನಿಯರ್ ಜೋಹೋ ಎಷ್ಟು ದುಡ್ಡು ಮಾಡ್ತಾ ಇದೆ ಎಷ್ಟು ಲಾಭ ಗಳಿಸ್ತಾ ಇದೆ ಅನ್ನೋದಕ್ಕಿಂತ ಜೋಹೋ ಮೂಲಕ ಶ್ರೀಧರ್ ವೆಂಬು ಏನೇನು ಮಾಡ್ತಿದ್ದಾರೆ ಅನ್ನೋದು ಅದೊಂತರ ಅಧ್ಯಯನ ಮಾಡಬೇಕಾಗಿರು ವಿಚಾರ ಭಾರತದ ನಿರುದ್ಯೋಗ ಸಮಸ್ಯೆ ನಿವಾರಿಸುಕ್ಕೆ ಜೋಹೋ ದೊಡ್ಡ ಕ್ರಾಂತಿ ಮಾಡ್ತಾ ಇದೆ.

ಕಾಲೇಜಿನಲ್ಲಿ ಕಲಿಸುದಕ್ಕೂ ಕಂಪನಿಗಳ ಅವಶ್ಯಕತೆ ಇರುದಕ್ಕೂ ಅಜಗಜಾಂತರ ವ್ಯತ್ಯಾಸ ಇರೋದು ನಮಗೆಲ್ಲರಿಗೂ ಕೂಡ ಗೊತ್ತಿರೋ ವಿಚಾರನೆ ನಾಲ್ಕು ವರ್ಷ ಇಂಜಿನಿಯರಿಂಗ್ ಓದಿದ್ರು ಕೂಡ ನಮ್ಮ ಯುವಕರಲ್ಲಿ ಬೇಕಾಗಿರೋ ಸ್ಕಿಲ್ಸ್ ಇರೋದಿಲ್ಲ ಹೀಗಾಗಿ ಇದನ್ನ ಸಾಲ್ವ್ ಮಾಡಬೇಕು ಅಂತ ಜೋಹೋ ತಾನೇ ಕುದ್ದು ಒಂದು ಯೂನಿವರ್ಸಿಟಿಯನ್ನ ಸ್ಥಾಪನೆ ಮಾಡಿದೆ 2004ನೇ ಇಸವಿಯಲ್ಲೇ ಈ ಜೋಹೋ ಯೂನಿವರ್ಸಿಟಿಯ ಸ್ಥಾಪನೆಯಾಗಿತ್ತು ಇದರಲ್ಲಿ ಹೈ ಸ್ಕೂಲ್ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳನ್ನ ಸೇರಿಸಿಕೊಳ್ಳಲಾಗುತ್ತೆ ಎರಡು ವರ್ಷಗಳಲ್ಲಿ ಅವರಿಗೆ ಮ್ಯಾಥಮೆಟಿಕ್ಸ್ ಇಂಗ್ಲಿಷ್ ಪ್ರೋಗ್ರಾಮಿಂಗ್ ಸೇರಿದ ಹಾಗೆ ಟೆಕ್ ಸಾಫ್ಟ್ವೇರ್ ಕಮ್ಯುನಿಕೇಶನ್ ಸಂಬಂಧಪಟ್ಟ ಎಲ್ಲಾ ಸ್ಕಿಲ್ಸ್ ಅನ್ನ ಅಳವಡಿಸಲಾಗುತ್ತೆ ಅಂತ ಹೇಳಿಕೊಡ್ಲಾಗುತ್ತೆ. ಅಲ್ಲ ಇದಕ್ಕೆ ಫೀಸ್ ಕೂಡ ತಗೊಳಲ್ಲ ಬದಲಾಗಿ ತಿಂಗಳಿಗೆ 10ಸಾ ರೂಪಾಯಿ ಇವರೇ ಕುದ್ದು ಸ್ಟೈಫಂಡ್ ಕೊಡ್ತಾರೆ. ಹೀಗಾಗಿ ಒಬ್ಬ ಸಾಮಾನ್ಯ ವಿದ್ಯಾರ್ಥಿ ಎರಡು ವರ್ಷದ ನಂತರ ಎಂಪ್ಲಾಯಬಲ್ ವ್ಯಕ್ತಿಯಾಗಿರ್ತಾನೆ ಸರ್ಟಿಫಿಕೇಟ್ ಜೊತೆಗೆ ಇಂತಹ ವಿದ್ಯಾರ್ಥಿಗಳನ್ನ ಜೋಹೋ ತಾನೇ ಹೈರ್ ಮಾಡಿ ಕೆಲಸ ಕೊಡುತ್ತೆ. ಜೋಹೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಸಲೀಂ ಅನ್ನೋ ವಿದ್ಯಾರ್ಥಿ 2021 ರಲ್ಲಿ ಪ್ರೋಗ್ರಾಮಿಂಗ್ ಇಂಜಿನಿಯರ್ ಆಗಿ ಹೋ ಸೇರಿದ್ರು. ಜೋಹೋದಲ್ಲಿ ಕೆಲಸ ಮಾಡ್ತಿರೋ 15,000 ಉದ್ಯೋಗಿಗಳ ಪೈಕಿ 10% ಇದೇ ರೀತಿ ಬಂದಿರೋದು. 15% ಉದ್ಯೋಗಿಗಳ ಬಳಿ ಫಾರ್ಮಲ್ ಡಿಗ್ರಿನೇ ಇಲ್ಲ. ಜೋಹೋದ ವರ್ಕ್ ಕಲ್ಚರ್ ನಿಂದ ಉಳಿದ ಟೆಕ್ ಕಂಪನಿಗಳ ಅಟ್ರಿಷನ್ ರೇಟ್ 18 ರಿಂದ 20% ಇದ್ರೆ ಜೋಹದಲ್ಲಿ 7% ಇದೆ. ಅಂದ್ರೆ ಇಲ್ಲಿ ಕೆಲಸ ಮಾಡೋರು ಬೇಗ ಬಿಟ್ಟು ಹೊರಗೆ ಹೋಗೋದಿಲ್ಲ. ಅಷ್ಟು ಉತ್ತಮ ವಾತಾವರಣವನ್ನ ಸೃಷ್ಟಿ ಮಾಡಿದ್ದಾರೆ. ಹಳ್ಳಿಯಲ್ಲಿ ಸಿಇಓ ಏನು ಮಲ್ಟಿನ್ಯಾಷನಲ್ ಕಂಪನಿ ಅಂದ್ರೆ ಬೆಂಗಳೂರು ಕ್ಯಾಲಿಫೋರ್ನಿಯಾ ಚೆನ್ನೈನಂತ ಬೃಹತ್ ನಗರಗಳ ನಡುವೆ ಆಫೀಸ್ ಹಿಡ್ಕೊಂಡು ಚಾರ್ಟೆಡ್ ಫ್ಲೈಟ್ ನಲ್ಲಿ ಹಾರ್ತಾ ಇರ್ತಾರೆ ಕಂಪನಿಯ ಸಿಇಓ ಇಂತಹ ದೊಡ್ಡ ದೊಡ್ಡ ಕಚೇರಿಯಲ್ಲಿ ಕೆಲಸ ಮಾಡ್ತಿರ್ತಾರೆ ಪ್ರೈವೇಟ್ ಜೆಟ್ ಕೂಡ ಇರಬಹುದು ಆದರೆ ಶ್ರೀಧರ್ ಬೆಂಬು ಈ ವಿಚಾರದಲ್ಲಿ ತದ್ವಿರುದ್ಧ ಜೋಹೋ ವಿಶ್ವಾದ್ಯಂತ ಒಂಬತ್ತು ರಾಷ್ಟ್ರಗಳಲ್ಲಿ ಆಫೀಸ್ ಹೊಂದಿದೆ ಆದರೆ ಶ್ರೀಧರ್ ಮಾತ್ರ ತಮಿಳುನಾಡಿನ ಮಾದಲಂ ಪರೈ ಅನ್ನೋ ಒಂದು ಹಳ್ಳಿಯಲ್ಲಿ ವಾಸ ಮಾಡ್ತಿದ್ದಾರೆ ಹಳ್ಳಿಯಿಂದಲೇ ಇಡೀ ಕಂಪನಿಯನ್ನ ಆಪರೇಟ್ ಮಾಡ್ತಾರೆ ಎಲ್ಲರಂತೆ ಊರಿನ ಕೆರೆಯಲ್ಲೇ ಸ್ನಾನ ಮಾಡ್ತಾರೆ ಆರ್ಗ್ಯಾನಿಕ್ ಫಾರ್ಮಿಂಗ್ ಮೂಲಕ ತಾವೇ ತಮಗೆ ಬೇಕಾದ ತರಕಾರಿಗಳನ್ನ ಬೆಳೆಕೊಳ್ತಾರೆ ಸೈಕಲ್ನಲ್ಲಿ ಹಳ್ಳಿ ಹಿಡಿ ಸುತ್ತಾಡ್ತಾ ಸ್ವಚ್ಛ ಗಾಳಿಯನ್ನ ಉಸಿರಾಡುತಾ ಓಡಾಡುತ್ತಾರೆ ಕೇವಲ ತಾವಷ್ಟೇ ಅಲ್ಲ ತಮ್ಮ ಕಂಪನಿಯ ಕಚೇರಿಗಳು ಕೂಡ ಹಳ್ಳಿಗಳಲ್ಲಿ ಕೆಲಸ ಮಾಡಬೇಕು ಅನ್ನೋ ಕನಸನ್ನ ಇವರು ಹೊಂದಿದ್ದಾರೆ ಹೇಗಾಗಿ ಮಾದಲಂ ಪರೈ ಜೊತೆಗೆ ಆಂಧ್ರದ ರನೆಗುಂಟ ಅನ್ನೋ ಹಳ್ಳಿಯಲ್ಲೂ ಕೂಡ ಜೋಹೋ ಆಫೀಸ್ ಇದೆ ಹಳ್ಳಿಯಲ್ಲಿ ಈ ರೀತಿ ಸುಮಾರು 200ಕ್ಕೂ ಅಧಿಕ ಹಳ್ಳಿಗಳಲ್ಲಿ ಆಫೀಸ್ ಮಾಡಬೇಕು ಕನಿಷ್ಠ 500 ಜನ ಆ ಹಳ್ಳಿಗಳಲ್ಲಿ ಕೆಲಸ ಮಾಡಬೇಕು ಅನ್ನೋ ಟಾರ್ಗೆಟ್ ಅನ್ನ ಹಾಕೊಂಡಿದ್ದಾರೆ ಹಳ್ಳಿಯಿಂದಲೇ ಟೆಕ್ ಕ್ರಾಂತಿ ಮಾಡೋಕೆ ಪ್ರಯತ್ನ ಪಡ್ತಾ ಇದ್ದಾರೆ ಶ್ರೀಧರ್ ವೆಂಬು ಇಂತಹ ಶ್ರೀಧರ್ ವೆಂಬು ಅವರ ಸಾಧನೆಗಾಗಿ ಭಾರತ ಸರ್ಕಾರ ಕೂಡ ಇವರನ್ನ ಗುರುತಿಸಿ 2021 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಆಗಿರೋ ಪದ್ಮಶ್ರೀಯನ್ನ ಇವರಿಗೆ ಕೊಟ್ಟು ಗೌರವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments