ಸ್ವಲ್ಪ ಇಮ್ಯಾಜಿನ್ ಮಾಡ್ಕೊಳ್ಳಿ ನೀವು ಸುಮ್ಮನೆ ನಿಮ್ಮ ಮನೆಯಲ್ಲಿ ಕೂತಿರ್ತೀರಾ ಇದ್ದಕ್ಕಿದ್ದಂತೆ ನಿಮ್ಮ ಮನೆ ಬಾಗಿಲಿಗೆ ಪೊಲೀಸರು ಬರ್ತಾರೆ ಅವರಿಗೆ ನಿಮ್ಮ ಹೆಸರು ಗೊತ್ತು ನಿಮ್ಮ ಅಪ್ಪ ಅಮ್ಮ ಯಾರು ಅಂತ ಗೊತ್ತು ನೀವು ಯಾವಾಗ ಗಾಡಿ ಓಡಿಸ್ತೀರಾ ಅಂತ ಗೊತ್ತು ಲಾಸ್ಟ್ ವೀಕ್ ನೀವು ಎಲ್ಲಿಗೆ ಟ್ರಾವೆಲ್ ಮಾಡಿದ್ರಿ ಅನ್ನೋದು ಗೊತ್ತು ಅಷ್ಟೇ ಯಾಕೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಅನ್ನೋದು ಕೂಡ ಅವರಿಗೆ ಕೇವಲ ಒಂದು ಕ್ಲಿಕ್ನಲ್ಲಿ ಸಿಕ್ಕಿಬಿಡುತ್ತೆ ಹಾಗಂದ ಕೂಡಲೇ ಇದ ಯಾವುದು ಸೈಫೈ ಸಿನಿಮಾ ಕಥೆ ಅಂತ ಅನ್ಕೋಬೇಡಿ ಅಲ್ಲ ಇದು ಸೈಫೈ ಮೂವಿ ಕಥೆ ಅಲ್ಲ ಇದು ಭಾರತದಲ್ಲಿ ಜಾರಿಗೆ ಬರ್ತಿರೋ ಲೇಟೆಸ್ಟ್ ಟೆಕ್ನಾಲಜಿ ಪೊಲೀಸರ ಕೈಗೆ ಸಿಗತಿರೋ ಮಹಾ ಅಸ್ತ್ರ ಇದನ್ನ ಗಾಂಡೀವ ಎಐ ಅಂತ ಕರೀತಾರೆ ಈ ಹೆಸರು ಕೇಳಿದ್ದು ಕೂಡಲೇ ತುಂಬಾ ಜನಕ್ಕೆ ಮಹಾಭಾರತ ನೆನಪಾಗಬಹುದು ಹೌದು ಅರ್ಜುನರ ಬಿಲ್ಲು ಗಾಂಡೀವದಿಂದ ಬಿಟ್ಟ ಬಾಣ ಹೇಗೆ ಗುರಿ ತಪ್ಪತಿರಲಿಲ್ವೋ ಹಾಗೆಯೇ ಈ ಸಿಸ್ಟಮ ಕೂಡ ಅಪರಾಧಿಗಳನ್ನ ಹುಡುಕುತ್ತೆ ಅಂತ ಸರ್ಕಾರ ಹೇಳ್ತಿದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡೋರನ್ನ ಇದು ಎಲ್ಲಿದ್ರೂ ಹಿಡಿದಾಕುತ್ತೆ ಹಾಗಿದ್ರೆ ದರೆ ಏನಿದು ಹೊಸ ಗಾಂಧಿವ ಇದರಲ್ಲಿ ಕೇವಲ ಅಪರಾಧಿಗಳ ಡೇಟಾ ಇರುತ್ತಾ ಅಥವಾ ನಿಮ್ದು ನಮ್ದು ಎಲ್ಲರ ಡೇಟಾ ಕೂಡ ಇದೆಯಾ ಅಸಲಿಗೆ ಇದು ಹೇಗೆ ಕೆಲಸ ಮಾಡುತ್ತೆ.
ಪೊಲೀಸರ ಸ್ಪೆಷಲ್ ಸರ್ಚ್ ಇಂಜಿನ್ಈ ಗಾಂಡೀವಾ ಬಗ್ಗೆ ತಿಳ್ಕೊಳ್ಳೋಕ್ಕಿಂತ ಮುಂಚೆ ನೀವು ನ್ಯಾಟ್ ಗ್ರಿಡ್ ಬಗ್ಗೆ ತಿಳ್ಕೊಬೇಕು ಏನಿದು ನ್ಯಾಟ್ ಗ್ರಿಡ್ ಇದರ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದು ನಮ್ಮ ದೇಶದ ಇಂಟೆಲಿಜೆನ್ಸ್ ಏಜೆನ್ಸಿಗಳು ಮತ್ತು ಪೊಲೀಸರಿಗೆ ಇರೋ ಒಂದು ಸ್ಪೆಷಲ್ ಸರ್ಚ್ ಇಂಜಿನ್ ನಮಗೆ ಏನಾದ್ರೂ ಬೇಕಾದ್ರೆ ಗೂಗಲ್ ಮಾಡ್ತೀವಿ ಅಲ್ವಾ ಹಾಗೆ ಪೊಲೀಸರಿಗೆ ಯಾವುದಾದರೂ ಕ್ರಿಮಿನಲ್ ಬಗ್ಗೆ ಅಥವಾ ಒಬ್ಬ ಶಂಕಿತನ ಬಗ್ಗೆ ಮಾಹಿತಿ ಬೇಕಾದ್ರೆ ಈ ನ್ಯಾಟ್ ಗ್ರಿಡ್ ಬಳಸ್ತಾರೆ ಈ ನ್ಯಾಷನಲ್ ಇಂಟೆಲಿಜೆನ್ಸ್ ಕ್ರಿಡ್ ಒಳಗಡೆ ಇರೋ ಒಂದು ಅತ್ಯಂತ ಶಕ್ತಿಶಾಲಿ ಅಸ್ತ್ರವೇ ಈ ಗಾಂಡಿವ ಎಐ ಇದು ಕೇವಲ ಒಂದು ಸಾಫ್ಟ್ವೇರ್ ಅಲ್ಲ ಇದು ಒಂದು ಡಿಜಿಟಲ್ ಇಂಟೆಲಿಜೆನ್ಸ್ ಇದು ಏನ್ ಮಾಡುತ್ತೆ ಅಂದ್ರೆ ಬೇರೆ ಬೇರೆ ಸರ್ಕಾರಿ ಹಾಗೂ ಇತರ ಡಾಟಾ ಸೋರ್ಸ್ ನಲ್ಲಿ ಹರಿದು ಹಂಚಿ ಹೋಗಿರೋ ಮಾಹಿತಿಯನ್ನ ಒಟ್ಟುಗೂಡಿಸಿ ಒಬ್ಬ ವ್ಯಕ್ತಿಯ ಕಂಪ್ಲೀಟ್ ಪ್ರೊಫೈಲ್ ರೆಡಿ ಮಾಡುತ್ತೆ ಮುಂಬೈ ದಾಳಿಯ ಭೀಕರ ಪಾಠ ನಿಮಗೆ ನೆನಪಿರಬಹುದು 2008ರಲ್ಲಿ ಮುಂಬೈ ಮೇಲೆ ದಾಳಿ ನಡೀತು ಆ ಸಂದರ್ಭದಲ್ಲಿ ಒಂದು ದೊಡ್ಡ ಸಮಸ್ಯೆ ಬೆಳಕಿಗೆ ಬಂತು ಅದೇನಂದ್ರೆ ನಮ್ಮ ದೇಶದ ಬೇರೆ ಬೇರೆ ಏಜೆನ್ಸಿಗಳ ಹತ್ತಿರ ಬೇರೆ ಬೇರೆ ಮಾಹಿತಿ ಇತ್ತು ಆದರೆ ಆ ಮಾಹಿತಿಗಳನ್ನ ಒಬ್ಬರಿಗೊಬ್ಬರು ಶೇರ್ ಮಾಡಿಕೊಳ್ಳೋಕೆ ಒಂದು ಕಾಮನ್ ಪ್ಲಾಟ್ಫಾರ್ಮ್ ಇರಲಿಲ್ಲ ಆದರೆ ಒಬ್ಬ ಉಗ್ರ ಫ್ಲೈಟ್ ಟಿಕೆಟ್ ಬುಕ್ ಮಾಡಿರೋ ಮಾಹಿತಿ ಏರ್ಲೈನ್ಸ್ ಹತ್ರ ಇರುತ್ತೆ ಅವನು ಸಿಮ್ ಕಾರ್ಡ್ ತಗೊಂಡಿರೋ ಮಾಹಿತಿ ಟೆಲಿಕಾಂ ಕಂಪನಿ ಹತ್ರ ಇರುತ್ತೆ ಆದರೆ ಇವೆಲ್ಲವನ್ನ ಒಂದೇ ಕಡೆ ನೋಡಿ ಇವನು ಅಪಾಯಕಾರಿ ಅಂತ ಪತ್ತೆ ಹಚ್ಚೋಕೆ ಸಾಧ್ಯ ಆಗ್ತಿರಲಿಲ್ಲ ಆಗ ಹುಟ್ಟಕೊಂಡಿದೆ ಈ ನ್ಯಾಟ್ ಗ್ರಿಡ್ ಐಡಿಯಾ 2009 ರಲ್ಲಿ ಶುರುವಾದ ಈ ಪ್ರಾಜೆಕ್ಟ್ ಈಗ ಕಂಪ್ಲೀಟ್ ಆಗಿ ರೆಡಿಯಾಗಿದೆ.
ಈ ಸದ್ಯಕ್ಕೆ ನ್ಯಾಟ್ ಗ್ರಿಡ್ ಎರಡು ಕಡೆ ತನ್ನ ಕ್ಯಾಂಪಸ್ ಓಪನ್ ಮಾಡಿದೆ ಒಂದು ಕ್ಯಾಂಪಸ್ ದೆಹಲಿಯಲ್ಲಿದ್ದರೆ ಇನ್ನೊಂದು ಬೆಂಗಳೂರಿನ ಸಾತನೂರನಲ್ಲಿದೆ ಈಗ ಪ್ರತಿ ತಿಂಗಳು ನ್ಯಾಟ್ ಗ್ರಿಡ್ಗೆ 45000 ರಿಕ್ವೆಸ್ಟ್ಗಳು ಬರ್ತಿವೆ ಇದರ ನಡುವೆಯೇ ಈಗ ಈಗ ನ್ಯಾಟ್ ಗ್ರಿಡ್ಗೆ ಈ ಗಾಂಡಿವಎಐ ಅನ್ನೋ ಹೊಸ ಪವರ್ ಟೂಲ್ ಆಡ್ ಮಾಡಲಾಗಿದೆ ನ್ಯಾಟ್ ಗ್ರಿಡ್ ಗೆ ಜನಸಂಖ್ಯೆ ಡಾಟಾ ಲಿಂಕ್ ಹೌದು ಈಗ ಭಾರತ ಸರ್ಕಾರ ಇಟ್ಟಿರೋ ಅತೀ ದೊಡ್ಡ ಹೆಜ್ಜೆ ಅಂದ್ರೆ ಇದೇನೆ ನ್ಯಾಟ್ ಗ್ರಿಡ್ ಅನ್ನ ಈಗ ಎನ್ಪಿಆರ್ ನ್ಯಾಷನಲ್ ಪಾಪುಲೇಷನ್ ರಿಜಿಸ್ಟರ್ ಜೊತೆ ಲಿಂಕ್ ಮಾಡಲಾಗಿದೆ ಇಲ್ಲಿಂದಲೇ ವಿಷಯ ಸೀರಿಯಸ್ ಆಗೋದು ಯಾಕಂದ್ರೆ ಎನ್ಪಿಆರ್ ಅಂದ್ರೆ ನಮ್ಮ ದೇಶದ ಸುಮಾರು 119 ಕೋಟಿ ಜನರ ಫ್ಯಾಮಿಲಿ ಹಿಸ್ಟರಿ ಇರೋ ದಾಖಲೆ ಇದರಲ್ಲಿ ನಿಮ್ಮ ಹೆಸರು ವಯಸ್ಸು ಮಾತ್ರ ಇರಲ್ಲ ನಿಮ್ಮ ಕುಟುಂಬದ ಸದಸ್ಯರು ಯಾರು ಅವರ ಜೊತೆ ನಿಮಗಿರೋ ಸಂಬಂಧ ಏನು ಅನ್ನೋ ಕಂಪ್ಲೀಟ್ ಫ್ಯಾಮಿಲಿ ಟ್ರೀ ಇರುತ್ತೆ. ಸೋ ಇದನ್ನ ನ್ಯಾಟ್ ಗ್ರಿಡ್ ಜೊತೆಗೆ ಲಿಂಕ್ ಮಾಡೋದ್ರಿಂದ ಇದರ ಸಂಪೂರ್ಣ ಮಾಹಿತಿ ಪೊಲೀಸರ ಕೈಗೆ ಸಿಗುತ್ತೆ. ಇದರ ಪರಿಣಾಮ ಗಾಂಡಿವಾ ಎಐ ಹತ್ರ ನಿಮ್ಮ ಫೋಟೋ ಇರುತ್ತೆ, ಫೋನ್ ನಂಬರ್ ಇರುತ್ತೆ. ಈಗ ನಿಮ್ಮ ಇಡೀ ಫ್ಯಾಮಿಲಿ ಡೀಟೇಲ್ಸ್ ಕೂಡ ಸಿಕ್ಕಿದೆ. ಒಬ್ಬ ವ್ಯಕ್ತಿ ಎಲ್ಲಿದ್ದಾನೆ ಅಂತ ಗೊತ್ತಾಗದಿದ್ರೆ ಅವನ ಫ್ಯಾಮಿಲಿ ಮೆಂಬರ್ಸ್ ಎಲ್ಲಿದ್ದಾರೆ ಅವರು ಯಾರ್ ಜೊತೆ ಮಾತಾಡ್ತಿದ್ದಾರೆ ಅನ್ನೋದನ್ನ ಈ ಎಐ ಸುಲಭವಾಗಿ ಪತ್ತೆ ಹಚ್ಚುತ್ತೆ. ಪತ್ತೆ ಹಚ್ಚೋದು ಹೇಗೆ? ಸರಿ, ಇದು ಪೊಲೀಸ್ ಗೆ ಹೇಗೆ ಹೆಲ್ಪ್ ಆಗುತ್ತೆ ಅಂತ ಒಂದು ಉದಾಹರಣೆ ಮೂಲಕ ನೋಡೋಣ.
ಒಬ್ಬ ವ್ಯಕ್ತಿ ಯಾವುದೋ ಒಂದು ಕೇಸ್ನಲ್ಲಿ ತಪ್ಪಿಸಿಕೊಂಡು ಓಡ್ತಿದ್ದಾನೆ ಅಂದುಕೊಳ್ಳಿ. ಪೊಲೀಸರ ಹತ್ರ ಅವನದೊಂದು ಹಳೆ ಫೋಟೋ ಇದೆ. ಈಗ ಅವರು ಏನ್ ಮಾಡ್ತಾರೆ ಅಂದ್ರೆ ಆ ಫೋಟೋನ ಗಾಂಡೀವಾ ಎಐ ಸಿಸ್ಟಮ್ ಗೆ ಫೀಡ್ ಮಾಡ್ತಾರೆ. ಈಗ ಗಾಂಡೀವಾ ಎಐ ತನ್ನ ಕೆಲಸ ಶುರು ಮಾಡುತ್ತೆ. ಮೊದಲು ಫೇಶಿಯಲ್ ರೆಕಾಗ್ನಿಷನ್ ಮೂಲಕ ಈ ಫೋಟೋ ಇರೋ ವ್ಯಕ್ತಿ ದೇಶದ ಯಾವುದಾದರೂ ಏರ್ಪೋರ್ಟ್ ನಲ್ಲಿ ಓಡಾಡಿದ್ದಾನ. ಯಾವುದಾದರೂ ಸಿಸಿಟಿವಿ ಕ್ಯಾಮೆರಾದಲ್ಲಿ ಇವನ ಮುಖ ಮ್ಯಾಚ್ ಆಗುತ್ತಾ ಅಂತ ಚೆಕ್ ಮಾಡುತ್ತೆ. ಬಳಿಕ ಎಂಟಿಟಿ ರೆಸಲ್ಯೂಷನ್ ಅಂದ್ರೆ ವ್ಯಕ್ತಿಯ ದಾಖಲೆಗಳು. ಅವನ ಮುಖಕ್ಕೆ ಮ್ಯಾಚ್ ಆಗೋ ಡ್ರೈವಿಂಗ್ ಲೈಸೆನ್ಸ್ ಇದೆಯಾ? ಅವನು ಸಿಮ್ ಕಾರ್ಡ್ ತಗೊಳೋಕೆ ಕೊಟ್ಟಿರೋ ಕೆವೈಸಿ ಫೋಟೋ ಇದೆನಾ? ಇವೆಲ್ಲವನ್ನ ಲಿಂಕ್ ಮಾಡಿ ಇವನೇ ಆ ವ್ಯಕ್ತಿ ಅಂತ ಕನ್ಫರ್ಮ್ ಮಾಡುತ್ತೆ. ಫೈನಲ್ ಆಗಿ ರಿಯಲ್ ಟೈಮ್ ಟ್ರಾಕಿಂಗ್ ಶುರು ಮಾಡುತ್ತೆ. ಅವನು ಎಲ್ಲಿ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾನೆ ಅವನ ಗಾಡಿ ಯಾವ ಟೋಲ್ಗೇಟ್ ದಾಟಿದೆ. ಅವನು ಯಾವ ಹೋಟೆಲ್ನಲ್ಲಿ ಚೆಕ್ ಇನ್ ಆಗಿದ್ದಾನೆ. ಇಷ್ಟು ಮಾಹಿತಿ ಕೆಲವೇ ಸೆಕೆಂಡ್ಗಳಲ್ಲಿ ಪೊಲೀಸರ ಕೈಗೆ ಸಿಗುತ್ತೆ. ಹಿಂದೆಲ್ಲ ಒಬ್ಬ ಕ್ರಿಮಿನಲ್ ನ ಹಿಡಿಯೋಕೆ ತಿಂಗಳುಗಟ್ಟಲೆ ಆಗ್ತಿತ್ತು. ಆದರೆ ಈ ಗಾಂಡೀವಾ ಎಎ ಮೂಲಕ ಕೆಲವೇ ಗಂಟೆಗಳಲ್ಲಿ ಈ ಕೆಲಸ ಆಗುತ್ತೆ ಸರ್ಕಾರ ಕೂಡ ಸಂಘಟಿತ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನ ತಡೆಯೋಕೆ ಇದು ತುಂಬಾ ಸಹಾಯ ಮಾಡುತ್ತೆ ಅಂತ ಹೇಳ್ತಿದೆ ಏನೆಲ್ಲ ಮಾಹಿತಿ ಇರುತ್ತೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಾಹಿತಿ ಈ ಸಿಸ್ಟಮ್ ನಲ್ಲಿ ಇರುತ್ತೆ ಸರ್ಕಾರದ ಪ್ರಕಾರ ಸುಮಾರು 20ಕ್ಕೂ ಹೆಚ್ಚು ಡಿಪಾರ್ಟ್ಮೆಂಟ್ನ ಡೇಟಾ ಇದರಲ್ಲಿ ಇರುತ್ತೆ.
ನಿಮ್ಮ ಗಾಡಿಯ ಡೀಟೇಲ್ಸ್ ಅಂದ್ರೆ ಆರ್ಸಿ ಮತ್ತು ಡ್ರೈವಿಂಗ್ ಲೈಸೆನ್ಸ್ ಕೂಡ ಇದರಲ್ಲಿ ಇರುತ್ತೆ ಟ್ರಾವೆಲ್ ಹಿಸ್ಟರಿ ಇರುತ್ತೆ ನೀವು ಎಲ್ಲೆಲ್ಲಿಗೆ ಫ್ಲೈಟ್ ಬುಕ್ ಮಾಡಿದ್ದೀರಾ ಯಾವ ಹೋಟೆಲ್ನಲ್ಲಿ ತಂಗಿದ್ದೀರಾ ಎಲ್ಲಾನು ಗೊತ್ತಾಗುತ್ತೆ. ಅಲ್ದೆ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಸ್ ದೊಡ್ಡ ದೊಡ್ಡ ಟ್ರಾನ್ಸಾಕ್ಷನ್ ಗಳು ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಡೀಟೇಲ್ಸ್ ನೀವು Facebook ಅಥವಾ Instagram ನಲ್ಲಿ ಏನು ಪೋಸ್ಟ್ ಮಾಡ್ತಿದ್ದೀರಾ ಅನ್ನೋದನ್ನ ಕೂಡ ಅನಾಲಿಸಿಸ್ ಮಾಡೋ ಪವರ್ ಈ ಗಾಂಡಿವಾ ಎಐ ಗೆ ಇದೆ. ಇಲ್ಲಿ ಪೊಲೀಸರು ಈ ಮಾಹಿತಿಯನ್ನ ಮೂರು ಭಾಗವಾಗಿ ಮಾಡಿಕೊಂಡಿದ್ದಾರೆ. ನಾನ್ ಸೆನ್ಸಿಟಿವ್ ಇದರಲ್ಲಿ ನಿಮ್ಮ ಹೆಸರು ಅಡ್ರೆಸ್ ಇತ್ಯಾದಿ ಇರುತ್ತೆ. ಹಾಗೆ ಸೆನ್ಸಿಟಿವ್ ಇದರಲ್ಲಿ ಟ್ರಾವೆಲ್ ಡೀಟೇಲ್ಸ್ ಇರಲಿದೆ. ಹೈಲಿ ಸೆನ್ಸಿಟಿವ್ ಡಾಟಾದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್, ಯುಪಿಐ ಟ್ರಾನ್ಸಾಕ್ಷನ್, ಹಣಕಾಸಿನ ವ್ಯವಹಾರಗಳು ಇರಲಿವೆ. ಪ್ರೈವಸಿ ಕಥೆ ಏನು? ಈಗ ನಿಮ್ಮ ತಲೆಯಲ್ಲಿ ಒಂದು ಪ್ರಶ್ನೆ ಬಂದೇ ಇರುತ್ತೆ. ನಾನು ಯಾವ ತಪ್ಪು ಮಾಡಿಲ್ಲ, ಆದರೂ ನನ್ನ ಪರ್ಸನಲ್ ಲೈಫ್ ಇಷ್ಟೊಂದು ಓಪನ್ ಆಗಿರೋದು ಸರಿನಾ ಅಂತ. ಯಾಕಂದ್ರೆ ಇದರ ಮೂಲಕ ಎಫ್ಐಆರ್ ಇಲ್ದೆಯೂ ಪೊಲೀಸರು ನಿಮ್ಮ ಡೇಟಾ ನೋಡಬಹುದು. ಸಾಮಾನ್ಯವಾಗಿ ಪೊಲೀಸರು ಯಾರದಾದರೂ ಪರ್ಸನಲ್ ಡೀಟೇಲ್ಸ್ ತೆಗಿಬೇಕಾದ್ರೆ ಒಂದು ಎಫ್ಐಆರ್ ಇರಬೇಕು ಅಥವಾ ಕೋರ್ಟ್ ಆರ್ಡರ್ ಇರಬೇಕು ಆದರೆ ನ್ಯಾಟ್ ಗ್ರೇಡ್ ಬಳಸುವಾಗ ತನಿಕೆಯ ಹಿತದೃಷ್ಟಿಯಿಂದ ಎಫ್ಐಆರ್ ಇಲ್ಲದೆಯೋ ಮಾಹಿತಿ ಚೆಕ್ ಮಾಡಬಹುದು ಜೊತೆಗೆ ಆರ್ಟಿಐ ನಿಂದ ಕೂಡ ಇದನ್ನ ಹೊರಗಿಡಲಾಗಿದೆ ಅಂದ್ರೆ ನೀವು ಆರ್ಟಿಐ ಹಾಕಿ ನನ್ನ ಬಗ್ಗೆ ಏನೇನು ಮಾಹಿತಿ ನಿಮ್ಮ ಹತ್ತಿರ ಇದೆ ಅಂತ ಕೇಳೋಕೆ ಬರಲ್ಲ ಯಾಕಂದ್ರೆ ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯ ಅಂತ ಹೇಳಿ ಸರ್ಕಾರ ಇದನ್ನ ಆರ್ಟಿಐ ವ್ಯಾಪ್ತಿಯಿಂದ ಹೊರಗಿಟ್ಟಿದೆ ಸೋ ಇದು ಪ್ರೈವೆಸಿ ಉಲ್ಲಂಘನೆ ಅಲ್ವಾ ಅಂತ ಕೆಲವರಿಗೆ ಅನಿಸಬಹುದು ಆದರೆ ಸರ್ಕಾರ ಹೇಳ್ತಿರೋದೇ ಬೇರೆ. ಈ ಮಾಹಿತಿಯನ್ನ ಯಾರೋ ಸಾಮಾನ್ಯ ವ್ಯಕ್ತಿಗಳು ಅಥವಾ ಕೆಳದರ್ಜೆಯ ಅಧಿಕಾರಿಗಳು ನೋಡೋಕೆ ಆಗಲ್ಲ.
ಕೇವಲ ಉನ್ನತ ದರ್ಜೆಯ ಅಧಿಕಾರಿಗಳು ಅಂದ್ರೆ ಎಸ್ಪಿ ರಯಾಂಕ್ ಮತ್ತು ಅದಕ್ಕಿಂತ ಮೇಲೆ ಇರೋರು ಮಾತ್ರ ಈ ಸಿಸ್ಟಮ್ ಬಳಸಬಹುದು. ಜೊತೆಗೆ ಪ್ರತಿ ಬಾರಿ ಯಾರಾದ್ರೂ ಡೇಟಾ ನೋಡಿದಾಗಲೂ ಸಿಸ್ಟಮ್ ನಲ್ಲಿ ರೆಕಾರ್ಡ್ ಆಗುತ್ತೆ. ಯಾರು ಯಾಕ್ ನೋಡಿದ್ರು ಅನ್ನೋದಕ್ಕೆ ಅವರು ಕಾರಣವನ್ನು ಕೊಡಬೇಕಾಗುತ್ತೆ. ಹೀಗಾಗಿ ಇದನ್ನ ದುರುಪಯೋಗಪಡಿಸಿಕೊಳ್ಳೋಕೆ ಆಗಲ್ಲ ಅಂತ ಸರ್ಕಾರಿ ಅಧಿಕಾರಿಗಳು ಹೇಳ್ತಿದ್ದಾರೆ. ಇಲ್ಲಿ ಸರ್ಕಾರ ಯಾಕೆ ಇದನ್ನ ಮಾಡ್ತಿದೆ ಅಂತ ಗೊತ್ತಾಗಬೇಕು. ಅಂದ್ರೆ ನಾವು ಚೂರು ಫ್ಲಾಶ್ ಬ್ಯಾಕ್ ಗೆ ಹೋಗಬೇಕು. ನೀವು ಡೇವಿಡ್ ಹೆಡ್ಲಿ ಹೆಸರು ಕೇಳಿರಬಹುದು. ಈತ ಮುಂಬೈ ದಾಳಿಯ ಸಂಚುಕೋರ ಪಾಕಿಸ್ತಾನ ಮೂಲದ ಅಮೆರಿಕನ್ ಪ್ರಜೆ ಈತ ದಾಳಿಗೂ ಮುನ್ನ ಇವನು ಹತ್ತಾರು ಬಾರಿ ಭಾರತಕ್ಕೆ ಬಂದು ಹೋಗಿದ್ದ. ಮುಂಬೈ ರೈಲ್ವೆ ಸ್ಟೇಷನ್ ತಾಜ್ ಹೋಟೆಲ್ ಹೀಗೆ ಅಟ್ಯಾಕ್ ಆ ಪ್ರತಿಯೊಂದು ಜಾಗವನ್ನ ಇವನು ಮೊದಲೇ ಬಂದು ವೀಕ್ಷಣೆ ಮಾಡಿದ್ದ ಆಶ್ಚರ್ಯ ಅಂದ್ರೆ ಇವನು ಅಮೆರಿಕಾದಿಂದ ಪಾಕಿಸ್ತಾನಕ್ಕೆ ಹೋಗ್ತಿದ್ದ ಅಲ್ಲಿಂದ ದುಬಾಯಿಗೆ ಆಮೇಲೆ ಭಾರತಕ್ಕೆ ಬರ್ತಿದ್ದ ಇಷ್ಟೆಲ್ಲ ಅನುಮಾನಾಸ್ಪದವಾಗಿ ಓಡಾಡಿದ್ರು ನಮ್ಮ ಇಂಟೆಲಿಜೆನ್ಸ್ ಏಜೆನ್ಸಿಗಳಿಗೆ ಇವನ ಮೇಲೆ ಕಿಂಚಿತ್ತು ಸಂಶಯ ಇರಲಿಲ್ಲ ಯಾಕೆ ಗೊತ್ತಾ ಯಾಕಂದ್ರೆ ಅವತ್ತು ನಮ್ಮ ಹತ್ರ ಇವನ ಟ್ರಾವೆಲ್ ಹಿಸ್ಟರಿ ಇವನ ಫೋನ್ ಕಾಲ್ಸ್ ಇವನ ಬ್ಯಾಂಕ್ ಟ್ರಾನ್ಸಾಕ್ಷನ್ ಎಲ್ಲವನ್ನ ಲಿಂಕ್ ಮಾಡಿ ನೋಡೋ ಒಂದು ಪವರ್ಫುಲ್ ಸಿಸ್ಟಮ್ ಇರ್ಲಿಲ್ಲ ಇಮಿಗ್ರೇಷನ್ ಹತ್ರ ಇವನ ಪಾಸ್ಪೋರ್ಟ್ ಮಾಹಿತಿ ಇತ್ತು ಏರ್ಲೈನ್ಸ್ ಹತ್ರ ಟಿಕೆಟ್ ಮಾಹಿತಿ ಇತ್ತು ಆದರೆ ಆ ಎರಡು ಮಾಹಿತಿ ಒಂದಕ್ಕೊಂದು ಕನೆಕ್ಟ್ ಆಗ್ತಿರಲಿಲ್ಲ.
ಒಂದುವೇಳೆ ಅವತ್ತು ನಮ್ಮ ಹತ್ರ ನಾಟಿಗ್ರಿಡ್ ಅನ್ನೋ ಸಿಸ್ಟಮ್ ಇರ್ತಿದ್ರೆ ಡೇವಿಡ್ ಮೊದಲ ಅಥವಾ ಎರಡನೇ ಬಾರಿ ಭಾರತಕ್ಕೆ ಬಂದಾಗಲೇ ಅವನ ಅನುಮಾನಾಸ್ಪದ ಟ್ರಾವೆಲ್ ಪ್ಯಾಟನ್ ರೆಡ್ ಸಿಗ್ನಲ್ ತೋರಿಸ್ತಿತ್ತು ದಾಳಿ ಆಗು ಮುಂಚೆಯೇ ಅವನನ್ನ ಅರೆಸ್ಟ್ ಮಾಡಬಹುದಿತ್ತು ಹೀಗಾಗಿ ಇಂತಹ ಕ್ರಮಗಳು ಭಾರತಕ್ಕೆ ತುಂಬಾ ತುಂಬಾ ಇಂಪಾರ್ಟೆಂಟ್ ಅದರಲ್ಲೂ ಇವತ್ತಿನ ಡಿಜಿಟಲ್ ಯುಗದಲ್ಲಿ ಅಪರಾಧ ಗಳು ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಿ ನಮ್ಮ ಗುರುತು ಮರೆಮಾಚುತ್ತಿದ್ದಾರೆ ಸೋ ಅವರನ್ನ ಮಟ್ಟ ಹಾಕೋಕೆ ನ್ಯಾಟ್ ಗ್ರಿಡ್ ನ್ಯಾಷನಲ್ ಇಂಟೆಲಿಜೆನ್ಸ್ ಗ್ರೇಡ್ ಅತ್ಯಂತ ಅವಶ್ಯಕ ಉದಾಹರಣೆಗೆ ಒಬ್ಬ ಸಂಶಯಾಸ್ಪದ ವ್ಯಕ್ತಿಯ ಕ್ರೆಡಿಟ್ ಕಾರ್ಡ್ ವಿವರಗಳು ಬ್ಯಾಂಕ್ನಲ್ಲಿ ಆತನ ಓಡಾಟದ ಲೊಕೇಶನ್ ಟೆಲಿಕಾಂ ಸಂಸ್ಥೆಗಳಲ್ಲಿ ಮತ್ತು ಕುಟುಂಬದ ವಿವರಗಳು ಎನ್ಪಿಆರ್ ನಲ್ಲಿ ಇರ್ತವೆ ಈ ರೀತಿ ಬೇರೆ ಬೇರೆ ಕಡೆ ಚದುರಿ ಹೋಗಿರುವ ಮಾಹಿತಿಯನ್ನ ನ್ಯಾಟ್ ಗ್ರೇಡ್ ಒಂದೇ ವೇದಿಕೆಗೆ ತಂದು ಪೊಲೀಸರಿಗೆ ಲಭ್ಯವಾಗುವಂತೆ ಮಾಡ್ತವೆ ಒಂದು ವೇಳೆ ಒಬ್ಬ ಅಪರಾಧಿ ತನ್ನ ಹೆಸರು ಬದಲಾಯಿಸಿ ವಿಮಾನದ ಟಿಕೆಟ್ ಬುಕ್ ಮಾಡಿದ್ರು ಅಥವಾ ಯಾವುದೋ ಒಂದು ಹೋಟೆಲ್ನಲ್ಲಿ ತಂಗಲು ಪ್ರಯತ್ನಿಸಿದ್ರು ಆತನ ಡಿಜಿಟಲ್ ಫುಟ್ಪ್ರಿಂಟ್ಸ್ ಆಧರಿಸಿ ಸಿಸ್ಟಮ್ ತಕ್ಷಣವೇ ತನಿಕ ಸಂಸ್ಥೆಗಳಿಗೆ ಅಲರ್ಟ್ ರವಾನಿಸುತ್ತೆ ಸೋ ಈ ಕೆಲಸಕ್ಕೆ ಪೂರಕವಾಗಿ ಗಾಂಡಿವಾ ಸೇರಿಕೊಂಡಿರೋದು ಏಜೆನ್ಸಿಗಳಿಗೆ ಮತ್ತಷ್ಟು ಬಲ ಕೊಡುತ್ತೆ ಇದು ಕೇವಲ ಅಕ್ಷರ ರೂಪದ ಡಾಟಾ ಮಾತ್ರವಲ್ಲ ವ್ಯಕ್ತಿಯ ಫೋಟೋಗಳನ್ನ ಸಹ ಅನಲೈಸ್ ಮಾಡುತ್ತೆ ಇದರಿಂದಾಗಿ ಒಬ್ಬ ಉಗ್ರ ಮುಖವಾಡ ಧರಿಸಿದ್ರು ಅಥವಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ರು ಆತನ ಹಳೆಯ ಫೋಟೋದಲ್ಲಿರುವ ಮುಖದ ಮೂಳೆ ವಿನ್ಯಾಸ ಮತ್ತು ಲಕ್ಷಣಗಳನ್ನ ಈ ಎಐ ಹೋಲಿಸಿ ನೋಡುತ್ತೆ ಆತ ಯಾರೆಂದು ನಿಖರವಾಗಿ ಪತ್ತೆ ಹಚ್ಚುತ್ತೆ ಮಾಹಿತಿಯ ನೂರು ದಾರಗಳನ್ನ ಒಂದೇ ಸೂತ್ರಕ್ಕೆ ಪೋಣಿಸಿ ತನಿಕೆಗೆ ಸಹಕಾರ ಮಾಡುತ್ತೆ.


