ಚಿನ್ನದ ಬೆಲೆ ನೋಡಿದ್ರ ಅದು ಒಂದೇ ಸಮಕ್ಕೆ ಆಗಸದ ಕಡೆಗೆ ಮುಖ ಮಾಡಿ ರಾಕೆಟ್ ತರ ಏರ್ತಲೆ ಹೋಗ್ತಾ ಇದೆ ಇಲ್ಲಿ ಮಧ್ಯಮ ವರ್ಗ ಏನು ಚಿನ್ನ ಖರೀದಿ ಮಾಡೋದು ಕಷ್ಟ ಅನ್ಸುವಷ್ಟು ಬೆಲೆ ಏರಿಕೆ ಆಗ್ತಾ ಇದ್ದರೆ ಚಿನ್ನದ ಈ ಗಗನಮುಖಿ ಚಲನೆ ಭಾರತದ ಸಾಕಷ್ಟು ಜನರನ್ನ ಶ್ರೀಮಂತರನ್ನಾಗಿ ಮಾಡಿದೆ ಅನ್ನೋ ಅಭಿಪ್ರಾಯವು ಕೆಲವರಲ್ಲಿದೆ ಆದರೆ 10 ವರ್ಷಗಳ ಹಿಂದೆ ಭೌತಿಕ ಚಿನ್ನ ಖರೀದಿಯನ್ನ ನಿಯಂತ್ರಿಸುವುದಕ್ಕೆ ಭಾರತದ ಚಿನ್ನದ ಆಮದನ್ನ ಕಡಿಮೆ ಮಾಡಿಕೊಳ್ಳು ಉದ್ದೇಶದಿಂದ ಮತ್ತು ರೂಪಾಯಿಯ ಮೇಲಿನ ಒತ್ತಡವನ್ನ ಕಡಿಮೆ ಮಾಡಿಕೊಂಡು ಸರ್ಕಾರಕ್ಕೆ ಬರುವ ಹೂಡಿಕೆ ಹಣವನ್ನ ಹೆಚ್ಚು ಮಾಡಿಕೊಳ್ಳುದಕ್ಕೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಎಸ್ಜಿಬಿ ಅಥವಾ ಸಾವರನ್ ಗೋಲ್ಡ್ ಬಾಂಡ್ ಸರ್ಕಾರದ ಖಜಾನೆಯ ಮೇಲೆ ಭಯಾನಕ ಒತ್ತಡವನ್ನ ಹೇರ್ತಾ ಇದೆಯಾ ಈ ಬಾಂಡುಗಳು ಸರ್ಕಾರಕ್ಕೆ ಭಾರಿ ನಷ್ಟವನ್ನು ಉಂಟು ಮಾಡ್ತಾ ಇದೆಯಾ ಇಷ್ಟಕ್ಕೂ ಚಿನ್ನದ ಬೆಲೆ ಹೀಗೆ ಏರುತಾ ಇರೋದು ಯಾಕೆ ಅದು ಏನನ್ನ ಸೂಚಿಸುತ್ತಾ ಇದೆ ಬನ್ನಿ ನೋಡೋಣ ಗಳರೆ ಚಿನ್ನ ಅನ್ನೋದು ಕಳೆದ ಕೆಲ ತಿಂಗಳುಗಳಿಂದ ಒಂದೇ ಸಮಕ್ಕೆ ಬೆಲೆ ಏರಿಸಿಕೊಳ್ಳುತ್ತಾ ಇದೆ ಬಡವರು ಮಧ್ಯಮ ವರ್ಗದವರಿಗೆ ಆ ಹಳದಿ ಲೋಹದ ಖರೀದಿ ಇನ್ನು ಸಾಧ್ಯವೇ ಆಗೋದಿಲ್ಲವೇನೋ ಅನ್ನೋ ತರದ ವಾತಾವರಣ ನಿರ್ಮಾಣ ಆಗ್ತಾ ಇದೆ.
ಈಗ ಉಂಟಾಗ್ತಾ ಇರೋ ಬೆಲೆ ಏರಿಕೆ ತುಂಬಾ ಅನೈಸರ್ಗಿಕ ಅಂತ ಕೂಡ ಅನ್ನಿಸ್ತಾ ಇದೆ. ಸಾಮಾನ್ಯವಾಗಿ ನೀವು ಹಣದುಬ್ಬರ ಅಥವಾ ನಮ್ಮ ಹಣದ ಮೌಲ್ಯವನ್ನ ನೋಡ್ತಾ ಬಂದಾಗ ನಮ್ಮ ಆದಾಯ ನಾವು ಖರೀದಿ ಮಾಡುವ ಪದಾರ್ಥಗಳ ಬೆಲೆ ಏರಿಕೆ ಹಾಗೂ ಚಿನ್ನದ ಬೆಲೆಯಲ್ಲಿ ಏರಿಕೆ ಇವೆಲ್ಲ ಒಂದೇ ಪ್ರಮಾಣದಲ್ಲಿ ಕಾಣುತ್ತವೆ. ಈ ಹಿಂದೆ 100 ರೂಪಾಯಿಗೆ ಎಷ್ಟು ಬೆಲೆ ಇತ್ತು ಅನ್ನೋದನ್ನ ನಾವು ಇವತ್ತಿಗೆ ಲೆಕ್ಕ ಹಾಕ್ತಾ ಇದ್ದದ್ದು ಇವತ್ತಿನ ಮತ್ತು ಅವತ್ತಿನ ಚಿನ್ನದ ಬೆಲೆಯ ಆಧಾರದಲ್ಲಿ. ಆದರೆ ಈಗೇನಾಗಿದೆ ನೋಡಿ ಬೇರೆಲ್ಲ ಹಾಗೆ ಇವೆ ನಮ್ಮ ಆದಾಯ ಕೂಡ ತುಂಬಾ ಹೆಚ್ಚೇನಾಗಿಲ್ಲ ಆದರೆ ಚಿನ್ನದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇಕಡ 35ರಷ್ಟು ಏರಿಕೆಯಾಗಿದೆ. ಇದನ್ನೇ ಅಸಾಂಪ್ರದಾಯಿಕ ಏರಿಕೆ ಅಂತ ಹೇಳ್ತಾ ಇರೋದು. ಹೀಗೆ ಚಿನ್ನದ ಬೆಲೆಯಲ್ಲಿ ಏಕಾಏಕಿ ಏರಿಕೆ ಆಗುವುದು ಜಾಗತಿಕ ಆರ್ಥಿಕ ಸ್ಥಿತಿಯ ಬಗ್ಗೆ ಅನುಮಾನಗಳು ಉಂಟಾದ ಸಂದರ್ಭದಲ್ಲಿ ಜಗತ್ತು ಆರ್ಥಿಕ ಅಸಮತೋಲನಕ್ಕೆ ಆರ್ಥಿಕ ಸಮಸ್ಯೆಗಳಿಗೆ ಈಡಾಗುವ ಸೂಚನೆಯನ್ನು ಕೊಡುವುದು ಚಿನ್ನದ ಬೆಲೆಯ ಏರಿಕೆ ಸಾಮಾನ್ಯವಾಗಿ ಹೂಡಿಕೆದಾರರು ಸರ್ಕಾರಿ ಬಾಂಡ್ಗಳ ಮೇಲೆ ಡಾಲರ್ಗಳ ಮೇಲೆ ಶೇರ್ ಮಾರುಕಟ್ಟೆಯಲ್ಲಿ ಕಮಾಡಿಟಿಸ್ ಮೇಲೆ ಹೆಚ್ಚು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡ್ಕೊಬೇಕು ಅಂಕೊತಾರೆ ಎಲ್ಲ ಸರಿ ಇದ್ದರೆ ಚಿನ್ನದ ಮೇಲಿನ ಹೂಡಿಕೆ ಸೇಫ್ ಅನ್ಸುತ್ತೆ ಹೊರತು ತುಂಬಾ ಲಾಭದಾಯಕ ಅಂತಏನು ಅನ್ಸುದಿಲ್ಲ ಹೂಡಿಕೆದಾರನಿಗೆ ಬೇರೆ ಹೂಡಿಕೆಗಳು ಸೇಫ್ ಅಂತ ಅನ್ನಿಸದೆ ಇದ್ದಾಗ ಅವನು ಹಣ ತಂದು ಸುರಿಯೋದು ಈ ಅತ್ಯಂತ ಕ್ಷೇಮದ ಹೂಡಿಕೆ ಅನ್ನಿಸುವ ಚಿನ್ನದ ಮೇಲೆ ಯಾವಾಗ ಚಿನ್ನದ ಕಡೆ ಹೂಡಿಕೆದಾರರು ಆಕರ್ಷಿತರಾಗ್ತಾರೋ ಆಗ ಸಹಜವಾಗಿ ಚಿನ್ನದ ಬೆಲೆ ಏರಿಕೆ ಆಗ್ತಾ ಹೋಗುತ್ತೆ.
ಈಗ ಆಗ್ತಾ ಇರೋದು ಅದೇ ಅಮೆರಿಕಾದ ಅನಿಶ್ಚಿತತೆ ನಾನಾ ದೇಶಗಳ ಮೇಲೆ ಟ್ರಂಪ್ ಹೇರ್ತಾ ಇರೋ ಟ್ಯಾರಿಫ್ ಹೆಚ್ಚಾಗ್ತಾ ಇರೋ ಅಮೆರಿಕಾದ ಸಾಲ ಮೌಲ್ಯ ಕಳೆಕೊಳ್ತಾ ಇರೋ ಡಾಲರ್ ಅಮೆರಿಕಾದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನ ಯಾವಾಗ ಕಡಿಮೆ ಮಾಡುತ್ತೋ ಅನ್ನೋ ಭಯ ಶೇರು ಮಾರುಕಟ್ಟೆಯ ಪತನಗಳು ಜಾಗತಿಕ ಯುದ್ಧ ಸದೃಶ ವಾತಾವರಣ ಯಾವಾಗ ಎಲ್ಲಿ ಯುದ್ಧ ಶುರುವಾಗಿಬಿಡುತ್ತೋ ಅನ್ನೋ ಭಯ ಹೀಗೆ ನಾನಾ ಕಾರಣಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಕಾಣ್ತಾ ಇದೆ ಹೀಗಾಗಿ ಹೂಡಿಕೆದಾರರು ಸೇಫ್ ಇನ್ವೆಸ್ಟ್ಮೆಂಟ್ ಅಂತ ಕರೆಸಿಕೊಳ್ಳೋ ಚಿನ್ನದ ಕಡೆಗೆ ಹೆಚ್ಚು ಆಕರ್ಷಿತರಾಗ್ತಾ ಇದ್ದಾರೆ ಇದರ ಪರಿಣಾಮನೇ ಇವತ್ತಿನ ನೀವು ನೋಡ್ತಾ ಇರೋ ಚಿನ್ನದ ಬೆಲೆ ಇದು ಯಾರೆಲ್ಲ ಚಿನ್ನದ ಮೇಲೆ ಈಗಾಗಲೇ ಹೂಡಿಕೆ ಮಾಡಿದ್ದಾರೆ ಯಾರು ಫಿಸಿಕಲ್ ಗೋಲ್ಡ್ ಅಥವಾ ಬಾಂಡ್ಗಳ ರೂಪದಲ್ಲಿ ಚಿನ್ನವನ್ನು ಇಟ್ಟುಕೊಂಡಿದ್ದಾರೆ ಅವರೆಲ್ಲರ ಅದೃಷ್ಟವನ್ನ ಇದು ಹೆಚ್ಚು ಮಾಡ್ತಾ ಇದೆ ಅನ್ನೋದು ನಿಜ ಹಾಗೇನೇ ಭಾರತದ ಸರ್ಕಾರಕ್ಕೆ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಹೊರೆ ಬೀಳುವ ಹಾಗೆ ಮಾಡ್ತಾ ಇದೆ ಅನ್ನೋದು ಕೂಡ ಅಷ್ಟೇ ನಿಜ ನಿಮಗೆ ನೆನಪಿದೆ ಅಲ್ವಾ 10 ವರ್ಷಗಳ ಹಿಂದೆ ಸರ್ಕಾರ ಸಾವರೆನ್ ಗೋಲ್ಡ್ ಬಾಂಡ್ ಎಸ್ಜಿಬಿ ಯನ್ನ ಶುರು ಮಾಡ್ತು ಬ್ಯಾಂಕುಗಳ ಮೂಲಕ ಗೋಲ್ಡ್ ಬಾಂಡ್ಗಳನ್ನ ಬಿಡುಗಡೆ ಮಾಡಲಾಯಿತು ನೀವು ಒಂದು ಗ್ರಾಂ ನಿಂದ ಹಿಡಿದು ಕೆಜಿ ಗಟ್ಟಲೆ ಚಿನ್ನವನ್ನು ಕೂಡ ಬಾಂಡ್ ರೂಪದಲ್ಲಿ ಖರೀದಿ ಮಾಡೋದಕ್ಕೆ ಅವಕಾಶವನ್ನ ಕೊಡಲಾಯಿತು ಈ ಸ್ಕೀಮ್ ಬಂದಿದ್ದು ಯಾಕೆ ಅಂದ್ರೆ ನಮ್ಮಲ್ಲಿ ಮೊದಲಿಂದಲೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡೋದಕ್ಕೆ ಬಯಸುವದು ಹೆಚ್ಚು ಚಿನ್ನ ನಮಗೆ ಆಪದ್ಧನ ಕೂಡ ಮನೆಗಳಲ್ಲಿ ಹೆಣ್ಣು ಮಕ್ಕಳಿದ್ದರಂತೂ ಅವರ ಮದುವೆ ಟೈಮ್ಗೆ ಬೇಕಾಗುತ್ತೆ ಅಂತ ಆಗಾಗ ಎಷ್ಟೆಷ್ಟು ಆಗುತ್ತೋ ಅಷ್ಟಷ್ಟು ಚಿನ್ನ ಖರೀದಿ ಮಾಡಿಡೋರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ ಹೀಗೆ ಖರೀದಿ ಮಾಡೋದು.
ಫಿಸಿಕಲ್ ಗೋಲ್ಡ್ ಅನ್ನ ನಮ್ಮಲ್ಲಿ ಅಂದ್ರೆ ಭಾರತದಲ್ಲಿ ಚಿನ್ನದ ಉತ್ಪಾದನೆ ತುಂಬಾ ಕಡಿಮೆ ಇದೆ ನಾವು ಚಿನ್ನವನ್ನ ಹೊರಗಿನಿಂದ ಆಮದು ಮಾಡ್ಕೊತೀವಿ ಗೆಳೆಯರೇ ಗೋಲ್ಡ್ ಮತ್ತು ಪೆಟ್ರೋಲಿಯಂ ಆಮದು ನಮ್ಮಲ್ಲಿ ಕಡಿಮೆ ಆಗ್ಬಿಟ್ಟರೆ ಡಾಲರ್ ಡಿಪೆಂಡೆನ್ಸಿ ಇಂದ ನಾವು ಬಹುತೇಕ ಹೊರ ಬರೋದಕ್ಕೆ ಸಾಧ್ಯ ಆಗುತ್ತೆ ನಮ್ಮ ರೂಪಾಯಿ ಮೇಲೆ ಬೀಳೋ ಒತ್ತಡ ಕಡಿಮೆಯಾಗುತ್ತೆ ನಮ್ಮಲ್ಲಿ ಸಾಕಷ್ಟು ವಿದೇಶಿ ವಿನಿಮಯ ಸಂಗ್ರಹ ಕೂಡ ಹೆಚ್ಚಾಗುತ್ತೆ ಆದರೆ ಇವೆರಡರ ಆಮದು ನಮ್ಮಲ್ಲಿ ಕಡಿಮೆ ಆಗ್ತಾ ಇಲ್ಲ ಇನ್ನು ಚಿನ್ನದ ಮೇಲಿನ ಹೂಡಿಕೆ ಅಂದ್ರೆ ಏನು ನಾವು ಹಣ ಕೊಟ್ಟು ಚಿನ್ನದ ಗಟ್ಟಿಯನ್ನೋ ಬಿಸ್ಕೆಟ್ಸ್ ಅನ್ನೋ ಖರೀದಿ ಮಾಡ್ತೀವಿ ಹಾಗೆ ಖರೀದಿ ಮಾಡಿದ ಚಿನ್ನವನ್ನ ಮನೆ ತಿಜೋರಿಯಲ್ಲಿ ಭದ್ರವಾಗಿ ಇಟ್ಕೊತೀವಿ ಅಲ್ಲಿಗೆ ಅದು ಲಾಕ್ ಆದ ಹಾಗೇನೆ ನಮ್ಮ ನಮ್ಮ ಮನೆಗಳಲ್ಲಿ ಹೀಗೆ ಲಾಕ್ ಮಾಡೋದಕ್ಕೆ ಚಿನ್ನನ ಇಂಪೋರ್ಟ್ ಮಾಡ್ಕೊತೀವಲ್ಲ ಅದಕ್ಕೆ ನಮ್ಮ ದೇಶ ಡಾಲರ್ ರೂಪದಲ್ಲಿ ಹಣವನ್ನ ವಿದೇಶಗಳಿಗೆ ಕೊಡುತ್ತೆ ಹೀಗೆ ಮಾಡೋದ್ರಿಂದ ವಿದೇಶಿ ವಿನಿಮಯ ಸಂಗ್ರಹ ಖಾಲಿಯಾಗುತ್ತೆ ಈ ಆಮದು ಹೆಚ್ಚಾಗಿ ನಾವು ಡಾಲರ್ಲ್ಲಿ ಹಣವನ್ನು ಕೊಡೋದಕ್ಕೆ ಹೆಚ್ಚು ಹೆಚ್ಚು ಡಾಲರ್ನ್ನ ಖರೀದಿ ಮಾಡ್ತಾ ಹೋದಂತೆ ನಮ್ಮ ರೂಪಾಯಿಯ ಮೌಲ್ಯ ಕೂಡ ಕಡಿಮೆ ಆಗ್ತಾ ಹೋಗುತ್ತೆ ಹೀಗಾಗಿ ಸರ್ಕಾರ ಸಾಧ್ಯವಾದಷ್ಟು ಗೋಲ್ಡ್ ಇಂಪೋರ್ಟ್ ನ್ನ ಕಡಿಮೆ ಮಾಡಬೇಕು ಅಂಕೊತು ಹೀಗೆ ಯಾರು ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಅಂಕೊತಾರೋ ಅಂತವರಿಗಾಗಿ ಗೋಲ್ಡ್ ಬಾಂಡ್ಗಳನ್ನ ಜಾರಿಗೆ ತಗೊಂಡು ಬಂತು ಅದು ಒಂತರ ತುಂಬಾ ಚೆನ್ನಾಗಿದ್ದ ಸ್ಕೀಮ್ ಮಿನಿಮಮ್ ಒಂದು ಗ್ರಾಂ ನಿಂದ ಎಷ್ಟಾದರೂ ಗೋಲ್ಡ್ ಬಾಂಡ್ನ್ನ ಬ್ಯಾಂಕುಗಳ ಮೂಲಕ ಖರೀದಿ ಮಾಡ್ತೀರಿ ಅವತ್ತಿನ ಚಿನ್ನದ ಬೆಲೆಗೆ ನಿಮಗೆ ಬಾಂಡ್ ಸಿಗುತ್ತೆ ಅದನ್ನ ಎಂಟು ವರ್ಷ ನೀವು ಹಾಗೆ ಇಟ್ಕೊಬೇಕು ಆನಂತರ ಬಾಂಡ್ ಮೆಚುರಿಟಿ ಸಮಯದಲ್ಲಿ ಅವತ್ತಿನ ಚಿನ್ನದ ಬೆಲೆ ಏನಿರುತ್ತೆ ಅಷ್ಟು ಹಣವನ್ನ ನಿಮಗೆ ಕೊಡ್ತಾರೆ ಇಲ್ಲಿ ಚಿನ್ನದ ಬೆಲೆಯಲ್ಲಿ ಏರು ಪೇರು ಇರುತ್ತೆ ಸಾಮಾನ್ಯವಾಗಿ ಶೇರ್ ಬೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಗಳಿಸುವಷ್ಟು ಹಣ ಚಿನ್ನದಲ್ಲಿ ಗಳಿಸುದಕ್ಕೆ ಸಾಧ್ಯ ಇಲ್ಲ ಅಂತ ಅನಿಸಿ ಜನ ಹೂಡಿಕೆಗೆ ಅನಾಸಕ್ತಿಯನ್ನ ತೋರಬಾರದು ಅಂತ ಸರ್ಕಾರ ಹೆಚ್ಚುವರಿಯಾಗಿ ವಾರ್ಷಿಕಎವರೆ %ಂಟ್ ಬಡ್ಡಿ ಕೂಡ ಕೊಡುವುದಾಗಿ ಘೋಷಣೆ ಮಾಡ್ತು.
ಈ ಸ್ಕೀಮಿನ ಆಕರ್ಷಣೆಗೆ ಬಿದ್ದರು ಸುಮಾರು 147 ಟನ್ ತೂಕದ ಚಿನ್ನಕ್ಕೆ ಸಮನಾಗುವಷ್ಟು ಬಾಂಡುಗಳ ಮಾರಾಟ ಕೂಡ ಆಯ್ತು ಆ ಚಿನ್ನದ ಇವತ್ತಿನ ಬೆಲೆ ಒಂದೂವರೆ ಲಕ್ಷ ಕೋಟಿ ರೂಪಾಯಿ ಗೆಳೆಯರೇ ಅವತ್ತಿಗೆ ಚಿನ್ನದ ಬೆಲೆ ಇಷ್ಟೊಂದು ಇರಲಿಲ್ಲ ಹೀಗಾಗಿ ಆ ಬಾಂಡ್ಗಳ ಮಾರಾಟದಿಂದ ಸರ್ಕಾರಕ್ಕೆ ಸಂಗ್ರಹ ಆಗಿದ್ದು 7275 ಕೋಟಿ ರೂಪಾಯಿ ಇನ್ನು ಈ ಬಾಂಡ್ಗಳ ಮೂಲಕ ಸರ್ಕಾರ ಹಣ ಸಂಗ್ರಹ ಮಾಡುದಿದೆಯಲ್ಲ ಇದು ಹೊಸತಲ್ಲ ಇದನ್ನ ಡೆಟ್ ಇನ್ಸ್ಟ್ರುಮೆಂಟ್ ಅಂತ ಕರೀತಾರೆ ಸರ್ಕಾರಿ ಬಾಂಡ್ಗಳ ಮೂಲಕ ದೇಶದ ಒಳಗೆ ಮತ್ತು ಹೊರಗಿನಿಂದ ಸರ್ಕಾರ ಸಾಲ ತರುತ್ತೆ ಭಾರತ ಮಾತ್ರ ಅಲ್ಲ ಜಗತ್ತಿನ ಬಹುತೇಕ ದೇಶಗಳ ಸರ್ಕಾರಗಳು ಹೀಗೆ ಸಾಲ ತಗೊಳ್ಳುತ್ತವೆ ಇವತ್ತು ಅತಿ ಹೆಚ್ಚು ಬಾಂಡ್ಗಳ ಮೂಲಕ ಹಣ ಸಾಲ ತಂದಿರುವುದು ಅಮೆರಿಕಾನೇ ಇನ್ನು ಇಲ್ಲಿ ವಿದೇಶಗಳಿಗೆ ಬಾಂಡ್ ಮಾರಾಟ ಮಾಡೋದಿದೆಯಲ್ಲ ಅವರಿಗೆ ಹಣವನ್ನು ವಾಪಸ್ ಕೊಡುವಾಗ ನಾವು ಡಾಲರ್ಗಳಲ್ಲಿ ಕೊಡಬೇಕಾಗುತ್ತೆ ಡಾಲರ್ ಬೆಲೆ ಏರಿಕೆ ಆದರೆ ಸಾಲದ ಮೊತ್ತ ಕೂಡ ಏರಿಕೆ ಆಗುತ್ತೆ ಅದರ ಜೊತೆ ಅವರಿಗೆ ಹೆಚ್ಚಿನ ಬಡ್ಡಿ ಕೂಡ ಕೊಡಬೇಕಾಗುತ್ತೆ. ಇನ್ನು ದೇಶದ ಒಳಗೆ ಮಾರಾಟ ಆಗುವ ಬಾಂಡ್ಗಳ ಹಣವನ್ನ ಅವಧಿ ಮುಗಿದ ನಂತರ ರೂಪಾಯಿಯಲ್ಲಿ ಕೊಡ್ತಾರೆ. ಹೀಗಾಗಿ ಇಲ್ಲಿ ಹೆಚ್ಚುವರಿ ಹೊರಗಳು ಬೀಳೋದಿಲ್ಲ. ಇನ್ನು ಈ ಬಾಂಡ್ಗಳಿಗೆ ಸರ್ಕಾರ ಶೇಕಡ ಆರರಿಂದ 7% ನಷ್ಟು ಬಡ್ಡಿ ಕೊಡುತ್ತೆ. ಇದಕ್ಕೂ ಒಂದು ಲಾಕಿನ್ ಪಿರಿಯಡ್ ಅಂತ ಇರುತ್ತೆ. ಇಲ್ಲಿ 7% ಬಡ್ಡಿ ಅಂದ್ರೆ 7% ಬಡ್ಡಿ ಅಷ್ಟೇ ಆದರೆ ಚಿನ್ನದ ವಿಷಯದಲ್ಲಿ ಹಾಗಲ್ಲ. ಮಾರುಕಟ್ಟೆಯ ಏರಿಳಿತದ ಆಧಾರದ ಮೇಲೆ ಇಲ್ಲಿ ಸರ್ಕಾರ ಹಣವನ್ನು ವಾಪಸ್ ಕೊಡಬೇಕಾಗುತ್ತೆ. ಇದು ತುಂಬಾ ಹೊರೆ ಆಗುತ್ತೆ ಅಂತ ಮೊದಲೇನು ಅನ್ನಿಸಿರಲಿಲ್ಲ. ಇಲ್ಲಿ ಸಾಮಾನ್ಯ ಬಾಂಡ್ಗಳ ಬಡ್ಡಿಗೆ ಹೋಲಿಸಿದರೆ ಇದು ಇನ್ನೊಂದು ಪರ್ಸೆಂಟ್ ಹೆಚ್ಚಾಗಬಹುದು ಆದರೆ ಇದರ ಮೂಲಕ ಬೇರೆ ಬೇರೆ ಲಾಭಗಳು ಇದ್ವು ಹೀಗಾಗಿ ಸರ್ಕಾರ ಬಾಂಡ್ ಸ್ಕೀಮ್ ಅನ್ನ ಜಾರಿ ಮಾಡ್ತು.
ಈಗ ಏನಾಗಿದೆ ಅಂದ್ರೆ ಸರ್ಕಾರ ಕಲೆಕ್ಟ್ ಮಾಡಿದ್ದು ಸುಮಾರು 72ಸಾವ ಕೋಟಿ ಅದಕ್ಕೆ ಬದಲಾಗಿ ಈಗ ಒಂದೂವರೆ ಲಕ್ಷ ಕೋಟಿ ರೂಪಾಯಿಯಷ್ಟು ಹಣವನ್ನ ವಾಪಸ್ ಕೊಡಬೇಕಾಗಿ ಬರ್ತಾ ಇದೆ ಇದರ ಜೊತೆಎರಡುವರೆ ಲೆಕ್ಕದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರ ಹೂಡಿಗೆದಾರರಿಗೆ ಬಡ್ಡಿಯನ್ನು ಪಾವತಿ ಮಾಡಿದೆ ಈಗ ಸುಮಾರು 78ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹೊರೆಯನ್ನ ಸರ್ಕಾರ ಅನುಭವಿಸಬೇಕಾಗಿ ಬರ್ತಾ ಇದೆ. ಬಹುಶಃ ಚಿನ್ನದ ಬೆಲೆ ಏರಿಕೆ ಶುರುವಾದ ಕೂಡಲೇ ಇದು ಸರ್ಕಾರಕ್ಕೂ ಅರಿವಾಯ್ತು ಅನ್ಸುತ್ತೆ ಹಿಂಗಾಗಿ ಕಳೆದ ವರ್ಷದಿಂದ ಈ ಬಾಂಡ್ಗಳನ್ನ ಕೊಡ್ತಾ ಇಲ್ಲ. ಇನ್ನು ಇದು ಸರ್ಕಾರಿ ಸ್ಕೀಮ್ ಹೀಗಾಗಿ ಹಣವನ್ನ ವಾಪಸ್ ಕೊಡಲೇಬೇಕಾಗುತ್ತೆ ಬೇರೆ ಖಾಸಗಿ ಕಂಪನಿಗಳ ಸ್ಕೀಮ್ ಆಗಿದ್ದಿದ್ರೆ ಆ ಕಂಪನಿಗಳು ಬೋರ್ಡ್ ತಿರುವು ಹಾಕಿ ದಿವಾಳಿ ಘೋಷಣೆ ಮಾಡ್ತಾ ಇದ್ವೋ ಏನೋ ಇನ್ನು ಈ ಬಾಂಡ್ಗಳಿಗೆ ಕೊಡು ಹಣವನ್ನ ನಮ್ಮ ದೇಶದ ಜನಕ್ಕೆ ಕೊಡ್ತಾರೆ ಇದರಿಂದ ಜನಕ್ಕೆ ಲಾಭ ಏನು ಆಗುತ್ತೆ ನಿಜ ಆದರೆ ಸರ್ಕಾರಕ್ಕಾಗು ನಷ್ಟ ಇಲ್ಲಿಇದನ್ನ ತುಂಬಾ ದೊಡ್ಡ ನಷ್ಟ ಅಂತ ಕೂಡ ಹೇಳೋ ಹಾಗಿಲ್ಲ ಅನ್ನೋ ವಾದ ಕೂಡ ಕೆಲ ಆರ್ಥಿಕ ತಜ್ಞರು ಮಾಡ್ತಾ ಇದ್ದಾರೆ ಯಾಕೆಂದ್ರೆ ಈ ಬಾಂಡುಗಳನ್ನ ಜಾರಿಗೆ ತರದೆ ಇದ್ದಿದ್ರೆ ಜನ ಚಿನ್ನದ ಖರೀದಿಯನ್ನ ಅಂದ್ರೆ ಭೌತಿಕ ಚಿನ್ನದ ಖರೀದಿಯನ್ನ ಹೆಚ್ಚು ಮಾಡ್ತಾ ಇದ್ರು ಆಗ ಚಿನ್ನದ ಆಮದು ಹೆಚ್ಚಾಗ್ತಾ ಇತ್ತು ಅದಕ್ಕೆ ಡಾಲರ್ಲ್ಲಿ ಹಣ ಕೊಡಬೇಕಾಗಿ ಬರ್ತಾ ಇತ್ತು ಹೀಗಾಗಿ ನಮ್ಮ ವಿದೇಶಿ ವಿನಿಮಯದ ಮೇಲೆ ಹೆಚ್ಚು ಒತ್ತಡ ಮತ್ತು ಹೊರೆ ಬೀಳುತಾ ಇತ್ತು ನಾವು ರೂಪಾಯಿನ್ನು ಕೊಟ್ಟು ಡಾಲರ್ ಖರೀದಿ ಮಾಡೋದನ್ನ ಹೆಚ್ಚು ಮಾಡಿದ್ರೆ ರೂಪಾಯಿಯ ಮೌಲ್ಯ ಮತ್ತಷ್ಟು ಕುಸಿತಾ ಇತ್ತು ಇನ್ನು ಹಾಗೆ ಖರೀದಿ ಮಾಡಿದ ಚಿನ್ನು ಬನ್ನಿ ಇವರು ಮನೆಲ್ಲಿ ಇಟ್ಕೊತಾ ಇದ್ರು ಹೀಗಾಗಿ ಅಷ್ಟು ಮೌಲ್ಯದ ಹಣ ಕೂಡ ಲಾಕ್ ಆಗ್ತಾ ಇತ್ತು ನಾವು ರೂಪಾಯಿಯನ್ನ ಕೊಟ್ಟು ಡಾಲರ್ ಖರೀದಿ ಮಾಡೋದನ್ನ ಹೆಚ್ಚು ಮಾಡಿದ್ದಿದ್ರೆ ರೂಪಾಯಿಯ ಮೌಲ್ಯ ಮತ್ತಷ್ಟು ಕುಸಿತಾ ಇತ್ತು ಈಗ ಅದೊಂದು 87 88 ಆಗಿದೆ.
ಈ ಗೋಲ್ಡ್ ಬಾಂಡ್ ಬದಲಿಗೆ ಚಿನ್ನವನ್ನೇ ಖರೀದಿ ಮಾಡಿದ್ದಿದ್ರೆ ಇಷ್ಟೊತ್ತಿಗೆ ರೂಪಾಯಿಯ ಮೌಲ್ಯನೂರಕ್ಕಿಂತ ಹೆಚ್ಚಾಗ್ತಾ ಇತ್ತು ಇನ್ನು ನಮ್ಮ ಹಣ ಡಾಲರ್ ಆಗಿ ಬದಲಾಗಿ ವಿದೇಶಕ್ಕೆ ಹೋಗ್ತಾ ಇತ್ತು ನಾವು ತಗೊಂಡು ಬಂದ ಚಿನ್ನ ನಮ್ಮ ನಮ್ಮ ಮನೆಗಳಲ್ಲಿ ಕಪಾಟಗಳಲ್ಲಿ ತಿಜೋರಿಗಳಲ್ಲಿ ಹಾಗೆ ಬಿದ್ದಿರ್ತಾ ಇತ್ತು ಅಂದ್ರೆ ಅಷ್ಟು ಹಣ ನಮಗೆ ಲಾಕ್ ಆದಹಾಗ ಆಗ್ತಾ ಇತ್ತು ಆದರೆ ಈ ಬಾಂಡ್ಗಳ ಮೂಲಕ ನಮ್ಮ ಡಾಲರ್ನ ಅಗತ್ಯ ಕಡಿಮೆ ಆಯಿತು ಭಾರತದ ಹಣ ಭಾರತದಲ್ಲೇ ಉಳಿತು ಮತ್ತು ಸರ್ಕಾರ ಅದನ್ನ ನಾನಾ ಯೋಜನೆಗಳ ಮೇಲೆ ಹೂಡಿಕೆ ಮಾಡ್ತಾ ಹೋಯ್ತು ಅಂದ್ರೆ ನಾವು ಬಾಂಡ್ ಖರೀದಿ ಮಾಡುವ ಮೂಲಕ ಸರ್ಕಾರಕ್ಕೆ ಸಾಲ ಕೊಟ್ಟಹಾಗಆಯ್ತು ಸರ್ಕಾರ ದೇಶಿ ಸಾಲವನ್ನ ಹೆಚ್ಚು ಮಾಡಿಕೊಳ್ಳತು ವಿದೇಶಿ ಸಾಲ ಕಡಿಮೆ ಆಯ್ತು ಇಲ್ಲಿ ಸಾಕಷ್ಟು ಹಣ ಸರ್ಕಾರಕ್ಕೆ ಉಳಿತಾಯ ಕೂಡ ಆಯ್ತು ಆದರೆ ಹೀಗೆ ಲಾಭ ಆದ ಮೊತ್ತ ಎಷ್ಟು ಅನ್ನೋದರ ಲೆಕ್ಕ ಖಚಿತವಾಗಿ ಗೊತ್ತಾಗ್ತಾ ಇಲ್ಲ ಡಾಲರ್ ಎಕ್ಸ್ಚೇಂಜ್ ಮೂಲಕ ಸುಮಾರು 10 ಬಿಲಿಯನ್ ಡಾಲರ್ ನಷ್ಟು ಉಳಿತಾಯ ಆಗಿರಬಹುದು ಅಂತ ಹೇಳ್ತಾ ಇದ್ದಾರೆ ಇರಲುಬಹುದು ಇನ್ನು ಇದೇ ಹಣವನ್ನ ಬೇರೆ ಬಾಂಡ್ಗಳಲ್ಲಿ ಹೂಡಿಕೆ ಮಾಡಿದ್ದಿದ್ರೆ ಈಗೊಂದು 7% ವಾಪಸ್ ಕೊಡಬೇಕಾಗ್ತಾ ಇತ್ತು ಈಗ ಚಿನ್ನದ ಬಾಂಡ್ಗಳ ಕಾರಣದಿಂದಾಗಿ ಸುಮಾರು 12 ರಿಂದ 15% ನಷ್ಟು ಹೆಚ್ಚುವರಿ ಹಣವನ್ನ ಹೂಡಿಕೆದಾರರಿಗೆ ಭಾರತದ ಸರ್ಕಾರ ಕೊಡಬೇಕಾಗಿ ಬರ್ತಾ ಇದೆ ಹೀಗಾಗಿ ಇದನ್ನ ಹೆಚ್ಚುವರಿ ಒತ್ತಡ ಅಂತ ಹೇಳ್ತಾ ಇದ್ದಾರೆ.
ಚಿನ್ನದ ಬೆಲೆಯ ಏರಿಕೆ ಇದೆಯಲ್ಲ ಇದು ಮುಂದಿನ ದಿನಗಳಲ್ಲಿ ಆರ್ಥಿಕ ಕುಸಿತ ರಿಸೆಷನ್ ಸೂಚನೆಯನ್ನ ಕೊಡ್ತಾ ಇದೀಯಾ ಯಾಕೆಂದ್ರೆ ಐಎಂಎಫ್ ನ ಭವಿಷ್ಯದ ಆರ್ಥಿಕ ಪ್ರಗತಿಯ ವರದಿಗಳ ಪ್ರಕಾರ ಅಮೆರಿಕಾ ಚೈನಾ ಯುರೋಪಿಯನ್ ಯೂನಿಯನ್ಗಳ ಜಿಡಿಪಿ ಬೆಳವಣಿಗೆಯ ಮಟ್ಟ ಕುಸಿತ ಆಗುತ್ತೆ ಚೈನಾದ ಜಿಡಿಪಿ ಬೆಳವಣಿಗೆಯ ದರ 2025ರಲ್ಲಿ ಶೇಕ 4.8 ರಷ್ಟಿದೆ ಅದು ಮುಂದಿನ ವರ್ಷ ಸುಮಾರು ಶೇಕಡ ನಾಲ್ಕರಿಂದ 4.2 ಕ್ಕೆ ಕುಸಿಯುತ್ತೆ ಯುರೋಪಿಯನ್ ಯೂನಿಯನ್ ಶೇಕಡ 1.2 ರಿಂದ ಶೇಕಡ ಒಂದಕ್ಕೆ ಕುಸಿತವನ್ನು ಕಂಡರೆ ಅಮೆರಿಕಾದ ಬೆಳವಣಿಗೆ 2025ರ ಸಾಲಲ್ಲಿ ಶೇಕಡ ಎರಡು ಅಂತ ಅಂದಾಜಿಸಲಾಗಿದೆ ಅದು ಶೇಕ 2.1ಕ್ಕೆ ಅಂದ್ರೆ 0.1% ನಷ್ಟು ಏರಿಕೆ ಆಗಬಹುದು ಅಂತ ಐಎಂಎಫ್ ಹೇಳ್ತಾ ಇದೆ ಇನ್ನು ಭಾರತ ಪ್ರಸಕ್ತ 6.5ರಷ್ಟು ಬೆಳವಣಿಗೆ ದರವನ್ನ ಹೊಂದಿದ್ದು ಅದು ಕೂಡ ಮುಂದಿನ ವರ್ಷ ಪ2ರಷ್ಟು ಕುಸಿತವನ್ನ ಕಂಡು 6.3ರಷ್ಟು ರಷ್ಟ ಆಗುತ್ತೆ ಅಂತ ಐಎಂಎಫ್ ಹೇಳ್ತಾ ಇದೆ ಇದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಸಂಸ್ಥೆಯ ಆರ್ಥಿಕ ಮುನ್ನೋಟದ ಮಾಹಿತಿ ಇದರಲ್ಲಿ ಒಂದಷ್ಟು ಏರುಪೇರುಗಳು ಕೂಡ ಇರಬಹುದು ಆದರೆ ಅಮೆರಿಕಾದ ಲಾರ್ಡ್ ಆಫ್ ಟ್ಯಾರಿಫ್ ಡೊನಾಲ್ಡ್ ಟ್ರಂಪ್ ಅವರ ಹುಚ್ಚುಗಳು ಹೀಗೆ ಮುಂದುವರೆದರೆ ಅಮೆರಿಕ ತರೋದಕ್ಕೆ ಹೋಗ್ತಾ ಇರುವ ಹೈಯರ್ ಆಕ್ಟ್ ಅನ್ನೋದಏನಾದರೂ ಜಾರಿಯಾದರೆ ಅದರಿಂದ ಭಾರತದ ಐಟಿ ಕ್ಷೇತ್ರದ ಮೇಲೆ ದೊಡ್ಡ ಹೊಡತ ಏನಾದರೂ ಬಿದ್ರೆ ಭಾರತದ ಆರ್ಥಿಕತೆಯ ಮೇಲೆ ತುಂಬಾನೇ ಪರಿಣಾಮಗಳು ಖಂಡಿತ ಉಂಟಾಗುತ್ತವೆ ಐಟಿ ಕ್ಷೇತ್ರದ ಮೇಲೆ ಹೊಡತ ಬಿದ್ದರೆ ರಿಯಲ್ ಎಸ್ಟೇಟ್ ಹಾಗೂ ವಾಹನ ಮಾರುಕಟ್ಟೆಯ ಮೇಲೆ ಕೂಡ ಅದರ ದುಷ್ಪರಿಣಾಮಗಳು ಉಂಟಾಗುತ್ತವೆ. ಆದರೆ ಡಿಸೆಂಬರ್ ನಂತರ ಅಮೆರಿಕ ಬದಲಾಗುತ್ತೆ ಅಂತ ಹೇಳ್ತಾ ಇದ್ದಾರೆ. ಈಗಾಗಲೇ ಟ್ರಂಪ್ ಕೂಡ ಜಾಗತಿಕ ನಾಯಕತ್ವ ಯುದ್ಧ ಅದೆಲ್ಲವನ್ನು ಬಿಟ್ಟು ನಾನು ಅಮೆರಿಕಾದ ಕಡೆಗೆ ಗಮನ ಕೊಡಬೇಕಿದೆ ಅನ್ನೋ ಮಾತುಗಳನ್ನು ಆಡ್ತಾ ಇದ್ದಾರೆ. ಭಾರತದ ಜೊತೆ ವ್ಯಾಪಾರ ಒಪ್ಪಂದಕ್ಕೆ ಮಾತುಗಳು ನಡೀತಾ ಇವೆ ಭಾರತ ರಷ್ಯಾದ ತೈಲವನ್ನ ತರಿಸಿಕೊಳ್ಳುವುದಿಲ್ಲ ಅಂತ ಪದೇ ಪದೇ ಹೇಳ್ತಾ ಭಾರತದ ಜೊತೆಗಿನ ವ್ಯಾಪಾರಿ ಸಂಘರ್ಷವನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ಕೂಡ ಮುಂದೆ ಅಮೆರಿಕ ಒಂದಷ್ಟು ದಾರಿಗಳನ್ನ ಹುಡುಕ್ತಾ ಇದೆ. ಚೈನಾ ಮೇಲಿನ ಟ್ಯಾರಿಫ್ ನಮಗೆ ತೊಂದರೆ ಕೊಡುತ್ತೆ ಅನ್ನೋ ಮಾತುಗಳನ್ನು ಕೂಡ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಆಡಿದ್ದಾರೆ.


