ಇತ್ತೀಚಿಗೆ ಗೂಗಲ್ ಕಂಪನಿ ತನ್ನ ಡೇಟಾ ಸೆಂಟರ್ ಅನ್ನ ಭಾರತದ ವಿಶಾಖಪಟ್ಟಣಂನಲ್ಲಿ ಸ್ಥಾಪಿಸಬೇಕು ಅಂದುಕೊಂಡಿದೆ ಈ ಡೇಟಾ ಸೆಂಟರ್ ಅಮೆರಿಕದ ಹೊರಗಿರೋ ಡೇಟಾ ಸೆಂಟರ್ಗಳಲ್ಲೇ ಅತೀ ದೊಡ್ಡ ಡೇಟಾ ಸೆಂಟ ರ್ಗೂಗಲ್ ಕಂಪನಿ ಮುಂದಿನ ಐದು ವರ್ಷದಲ್ಲಿ 1.31 ಮೂರು ಒಂದು ಲಕ್ಷ ಕೋಟಿಗಳನ್ನ ಇಲ್ಲಿ ಹೂಡಿಕೆ ಮಾಡ್ತಾ ಇದೆ. ಈ ಡೇಟಾ ಸೆಂಟರ್ ಬರೀ ಡೇಟಾ ಸ್ಟೋರೇಜ್ ಒಂದೇ ಅಲ್ಲ ಇಲ್ಲಿ ಎಐ ನ ಡೇಟಾ ಸ್ಟೋರೇಜ್ ಕೂಡ ಆಗುತ್ತೆ. ವಿಶಾಖಪಟ್ಟಣಂ ಡೇಟಾ ಸೆಂಟರ್ ಇಂದ 12 ದೇಶಗಳಿಗೆ ಸರ್ವಿಸಸ್ ಗಳನ್ನ ಕೊಡಬೇಕು ಅಂತ ಗೂಗಲ್ ಅಂದುಕೊಂಡಿದೆ. ಮಲೇಷಿಯಾ ಇಂದ ಆಸ್ಟ್ರೇಲಿಯಾ ವರೆಗೂ ಸಮುದ್ರದಲ್ಲಿ ಅಂಡರ್ವಾಟರ್ ಆಪ್ಟಿಕ್ ಕೇಬಲ್ಗಳ ಮುಖಾಂತರ ಸರ್ವಿಸಸ್ ಗಳನ್ನ ಕೊಡಬೇಕು ಅಂದುಕೊಂಡಿದೆ.
ಮಾರ್ಚ್ 2025ರ ಡೇಟಾದ ಪ್ರಕಾರ ಪ್ರತಿದಿನ ಸುಮಾರು 20 ಪೆಟಾಬೈಟ್ಸ್ ಅಂದ್ರೆ 20 ಲಕ್ಷ GB ಗಳ ಡೇಟಾ ಗೂಗಲ್ ಗೆ ಸೇರ್ತಾ ಇದೆ. ಇದರ ಪ್ರಕಾರ ಪ್ರತಿ ನಿಮಿಷ ಎರಡು ಮಿಲಿಯನ್ GB ಯಷ್ಟು ಡೇಟಾ ಸೇರ್ತಾ ಇದೆ. ಇಷ್ಟು ದೈತ್ಯ ಡೇಟಾಗಳನ್ನ ಸೇವ್ ಮಾಡೋದಕ್ಕೆ ಗೂಗಲ್ ಗೆ ಒಂದು ಡೇಟಾ ಸೆಂಟರ್ ಬೇಕಾಗುತ್ತೆ. ಫ್ರೆಂಡ್ಸ್ಗೂಗಲ್ ಹತ್ರ ಒಟ್ಟು ಡೇಟಾದಲ್ಲಿ 90% ಡೇಟಾ ಕಳೆದ ಐದು ವರ್ಷದಲ್ಲೇ ಬಂದಿದೆ. ಡೇಟಾ ಸೆಂಟರ್ ಅಂದ್ರೆ ಏನು ಅಂತ ನೋಡೋಣ. ಡೇಟಾ ಸೆಂಟರ್ಸ್ ಅಂದ್ರೆ ಇದರಲ್ಲಿ ಹೈ ಪರ್ಫಾರ್ಮೆನ್ಸ್ ಸರ್ವರ್ ಗಳು, ಸ್ಟೋರೇಜ್ ಸಿಸ್ಟಮ್ ಗಳು, ನೆಟ್ವರ್ಕಿಂಗ್ ಎಕ್ವಿಪ್ಮೆಂಟ್ ಗಳು ಮತ್ತು ಇತರ ಇನ್ಫ್ರಾಸ್ಟ್ರಕ್ಚರ್ ಗಳನ್ನ ಹೊಂದಿರೋ ಫಿಸಿಕಲ್ ಫೆಸಿಲಿಟಿ. ಇಲ್ಲಿ ಕಂಪನಿಗಳು ಡೇಟಾನ ಸ್ಟೋರ್ ಮಾಡೋದು, ಮ್ಯಾನೇಜ್ ಮಾಡೋದು ಮತ್ತು ಡಿಸ್ಟ್ರಿಬ್ಯೂಷನ್ ಕೆಲಸ ಮಾಡುತ್ತೆ. ನೇರವಾಗಿ ಹೇಳೋದಾದ್ರೆ ಹೊರಗಿಂದ ಒಂದು ಸಾಧಾರಣ ಬಿಲ್ಡಿಂಗ್ ತರ ಕಂಡು ಅದರೊಳಗೆ ಸಾವಿರಾರು ಸೂಪರ್ ಕಂಪ್ಯೂಟರ್ ಲಕ್ಷಾಂತರ ಸರ್ವರ್ಗಳು 24 ಗಂಟೆ ನಮ್ಮ ಡೇಟಾನ ಪ್ರೋಸೆಸ್ ಮಾಡ್ತಿರುತ್ತೆ.
ಈ ಡೇಟಾ ಸೆಂಟರ್ ಗಳನ್ನ ಇಂಟರ್ನೆಟ್ ನ ಬ್ರೈನ್ ಅಂತಲೂ ಕರಿಬಹುದು. ಫ್ರೆಂಡ್ಸ್ ಪ್ರಪಂಚದ ಮೊಟ್ಟಮೊದಲ ಡೇಟಾ ಸೆಂಟರ್ 1945 ರಲ್ಲಿ ಅಮೆರಿಕದ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ಈಎನ್ಐಎಸಿ ಎನಿಯಾಕ್ ಕಂಪ್ಯೂಟರ್ ಗೋಸ್ಕರ ತಯಾರಿಸುತ್ತಾರೆ. ಇದು ಅಮೆರಿಕದ ಆರ್ಮಿ ಮತ್ತು ಅಲ್ಲಿನ ಗವರ್ನಮೆಂಟ್ ಸರ್ವಿಸಸ್ ಗಳಿಗೋಸ್ಕರ ತಯಾರಿಸಿದ್ರು. ಪ್ರಪಂಚದ ಅತಿ ದೊಡ್ಡ ಡೇಟಾ ಸೆಂಟರ್ ಅಂದ್ರೆ ಚೀನಾ ದೇಶದ ಸಿಟಿಐ ಎಂಐ ಪಾರ್ಕ್. ಫ್ರೆಂಡ್ಸ್ ಈಗ ಡೇಟಾ ಸೆಂಟರ್ ಒಳಗೆ ಏನ್ ನಡೆಯುತ್ತೆ ಅನ್ನೋದನ್ನ ನೋಡೋಣ. ನಾವು YouTube ಅಥವಾ ಗೂಗಲ್ ಕ್ರೋಮ್ ನಲ್ಲಿ ಏನಾದ್ರೂ ಸರ್ಚ್ ಮಾಡಿದ್ರೆ ಈ ಸರ್ಚ್ ರಿಕ್ವೆಸ್ಟ್ ಮೊದಲು ಗೂಗಲ್ ಡೇಟಾ ಸೆಂಟರ್ ಗೆ ಹೋಗುತ್ತೆ. ನಿಮ್ಮ ಸರ್ಚ್ಗೆ ಉತ್ತರ ಇಲ್ಲಿರೋ ಸ್ಟೋರೇಜ್ ಡ್ರೈವ್ ಗಳಲ್ಲೇ ಇರುತ್ತೆ. ಇಲ್ಲಿಂದಲೇ ನಿಮಗೆ ಉತ್ತರ ಸಿಗುತ್ತೆ. ಫ್ರೆಂಡ್ಸ್ ನಮ್ಮ Gmail ನ ಇಮೇಲ್ ಗಳು ಗೂಗಲ್ ಫೋಟೋಸ್ ನ ಇಮೇಜಸ್, ವೀಡಿಯೋಸ್, ಗೂಗಲ್ ಡ್ರೈವ್ ನ ಡಾಕ್ಯುಮೆಂಟ್ಸ್, ಫೈಲ್ಸ್, ಮ್ಯಾಪ್ಸ್, ಲೊಕೇಶನ್ಸ್, ಸರ್ಚ್ ಹಿಸ್ಟರಿ ನ ಡೇಟಾ ಎಲ್ಲಾನು ಈ ಡೇಟಾ ಸೆಂಟರ್ ಗಳಲ್ಲೇ ಸ್ಟೋರ್ ಆಗಿರುತ್ತೆ.
ಪ್ರಪಂಚದಾದ್ಯಂತ ಸ್ಮಾರ್ಟ್ ಫೋನ್ ಬಳಸೋವರ ಡೇಟಾ ಎಲ್ಲ ಇದೇ ಡೇಟಾ ಸೆಂಟರ್ ಗಳಲ್ಲಿ ಇರುತ್ತೆ. ಈ ಡೇಟಾ ಸೆಂಟರ್ ಗಳಿಗೆ ಸೆಕ್ಯೂರಿಟಿ ತುಂಬಾ ಬಲಿಷ್ಟವಾಗಿರುತ್ತೆ. ಒಳಗೆ ಬರಿ ಅಥರೈಸ್ಡ್ ಇಂಜಿನಿಯರ್ಗಳು ಮಾತ್ರ ಹೋಗೋಕೆ ಮಲ್ಟಿ ಲೇಯರ್ ಪ್ರೊಟೆಕ್ಷನ್ ಇರುತ್ತೆ. ಇಲ್ಲಿ ಬಯೋಮೆಟ್ರಿಕ್ ಸ್ಕ್ಯಾನರ್ಸ್, ಐ ರೆಟಿನಾ ಸ್ಕ್ಯಾನರ್ಸ್ ಜೊತೆಗೆ ಆರ್ಮಿ ರೇಂಜ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ಕಾವಲಿರ್ತಾರೆ. ಫ್ರೆಂಡ್ಸ್ ಇಲ್ಲಿನ ಡೇಟಾನ ಡಿಜಿಟಲಿ ಕದಿಯೋ ಸಾಧ್ಯತೆ ಇರುತ್ತೆ. ಇದಕ್ಕೋಸ್ಕರ ಎನ್ಕ್ರಿಪ್ಶನ್ ಫೈರ್ ವಾಲ್ಸ್ ಇಂದ ಇದಕ್ಕೆ ಭದ್ರತೆಯನ್ನ ಕೊಟ್ಟಿರ್ತಾರೆ. ಇಲ್ಲಿಗೂಗಲ್ ಎಂಪ್ಲಾಯಿಸ್ ಗಳಿಗೂ ನಮ್ಮ ಪರ್ಸನಲ್ ಇನ್ಫಾರ್ಮೇಷನ್ ಅನ್ನ ನೋಡೋ ಅವಕಾಶ ಇರಲ್ಲ. ಫ್ರೆಂಡ್ಸ್ ಈ ಡೇಟಾ ಸೆಂಟರ್ಗಳು ವಿಪರೀತ ಪವರ್ ಕನ್ಸಂಷನ್ ಅನ್ನ ಮಾಡುತ್ತೆ. ಪ್ರಪಂಚದಾದ್ಯಂತ ಚಿಕ್ಕದು ದೊಡ್ಡದು ಸೇರಿ ಸುಮಾರು 8000 ಡೇಟಾ ಸೆಂಟರ್ ಗಳಿವೆ ಪ್ರಪಂಚದ ಒಟ್ಟು ಪವರ್ ಕನ್ಸಂಶನ್ ನಲ್ಲಿ 2% ಪವರ್ ಕನ್ಸಂಶನ್ ಈ ಡೇಟಾ ಸೆಂಟರ್ ಗಳೇ ತಗೊಳ್ತಾವೆ. ಒಂದು ಅಂದಾಜಿನ ಪ್ರಕಾರ ಒಂದು ಡೇಟಾ ಸೆಂಟರ್ ಸುಮಾರು ಒಂದು ಲಕ್ಷ ಮನೆಗಳು ಕನ್ಸ್ಯೂಮ್ ಮಾಡುವಷ್ಟು ಪವರ್ ಅನ್ನ ಕನ್ಸ್ಯೂಮ್ ಮಾಡುತ್ತೆ. ಇದೇ ಕಾರಣಕ್ಕೆ ಡೇಟಾ ಸೆಂಟರ್ ಗಳು ಪರಿಸರ ಅಲ್ಲ ಅಂತ ಕೆಲವರು ವಾದ ಮಾಡ್ತಾರೆ. ಇದಕ್ಕೆ ಈ ನಡುವೆ ಕಂಪನಿಗಳು ಡೇಟಾ ಸೆಂಟರ್ ಗಳನ್ನ ಏರ್ಪಾಟು ಮಾಡಿದ್ರೆ ಜೊತೆಗೆ ವಿಂಡ್ ಎನರ್ಜಿ ಮತ್ತು ಸೋಲಾರ್ ಪವರ್ ಪ್ರೊಡಕ್ಷನ್ ಯೂನಿಟ್ ಗಳನ್ನ ಇಡ್ತಾರೆ. ಈ ಡೇಟಾ ಸೆಂಟರ್ಗಳು ದಿನದ 24 ಗಂಟೆ ವಾರದ ಏಳು ದಿನ ವರ್ಷದ 350 ದಿನನು ನಿರಂತರ ಕೆಲಸ ಮಾಡ್ತಿರಬೇಕು. ಇದರಿಂದ ಸರ್ವರ್ಗಳು ಹೀಟ್ ಆಗೋ ಸಾಧ್ಯತೆ ಹೆಚ್ಚಾಗಿರುತ್ತೆ.
ಈ ಸರ್ವರ್ ಗಳನ್ನ ಕೂಲ್ ಮಾಡೋದು ಒಂದು ದೊಡ್ಡ ಚಾಲೆಂಜ್ ಇದಕ್ಕಂತಲೇ ಮಾಸ್ ಕೂಲಿಂಗ್ ಸೆಂಟರ್ಗಳು ಇರುತ್ತವೆ. ಇವು ಚಿಲ್ಡ್ ವಾಟರ್ ಸಿಸ್ಟಮ್ ಮತ್ತು ಅಡ್ವಾನ್ಸ್ಡ್ ಏರ್ಫೋರ್ ಸಿಸ್ಟಮ್ ನಿಂದ ಸರ್ವರ್ಗಳನ್ನ ಕೂಲ್ ಮಾಡುತ್ತವೆ. ಇದೇ ಕಾರಣಕ್ಕೆ ಡೇಟಾ ಸೆಂಟರ್ಗಳಲ್ಲಿ ನೀರಿನ ಬಳಕೆ ಹೆಚ್ಚಾಗಿರುತ್ತೆ. ಸರ್ವರ್ ಗಳ ಕೂಲಿಂಗ್ ತೊಂದರೆಯನ್ನು ಹೋಗಲಾಡಿಸೋಕೆ ಮೈಕ್ರೋಸಾಫ್ಟ್ ಕಂಪನಿ ತನ್ನ ಡೇಟಾ ಸೆಂಟರ್ ಅನ್ನ ಸಮುದ್ರದೊಳಗೆ ನಿರ್ಮಿಸಬೇಕು ಅಂದುಕೊಳ್ಳುತ್ತಿದೆ ಗೂಗಲ್ ಗೆ 11 ದೇಶಗಳಲ್ಲಿ 29 ಡೇಟಾ ಸೆಂಟರ್ ಗಳಿವೆ ಇಲ್ಲಿ ಒಂದು ಡೇಟಾ ಸೆಂಟರ್ ಇಂದ ಇನ್ನೊಂದು ಡೇಟಾ ಸೆಂಟರ್ ಗೆ ಸಮುದ್ರದಾಳದಲ್ಲಿ ಆಪ್ಟಿಕ್ ಕೇಬಲ್ಸ್ ಮುಖಾಂತರ ಒಂದಕ್ಕೊಂದು ಕನೆಕ್ಟ್ ಮಾಡ್ತಾರೆ ಈ ಆಪ್ಟಿಕಲ್ ಕೇಬಲ್ಗಳ ಮುಖಾಂತರನೇ ಡೇಟಾ ಕಾಂತಿ ವೇಗದಲ್ಲಿ ಪ್ರಯಾಣಿಸುತ್ತೆ ಇದರಿಂದಲೇ ಡೇಟಾ ಫಾಸ್ಟ್ ಮತ್ತು ಸೆಕ್ಯೂರ್ ಆಗಿ ನಮ್ಮವರೆಗೂ ಸೇರುತ್ತೆಗೂಗಲ್ ನ ಡೇಟಾ ಸೆಂಟರ್ ನಲ್ಲಿ ನಮ್ಮ ಡೇಟಾಗೂಗಲ್ ನ ಡೇಟಾ ಸೆಂಟರ್ ನಲ್ಲಿ ಪ್ರತಿಯೊಂದು ಡೇಟಾನು ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಆಗಿರುತ್ತೆ.


