ಭಾರತದ ಸಿಲಿಕಾನ್ ವ್ಯಾಲಿ ಐಟಿ ರಾಜಧಾನಿ ಅಂತಲೇ ಖ್ಯಾತಿ ಪಡೆದ ನಗರ ನಮ್ಮ ಬೆಂಗಳೂರು ಆದರೆ ಇದೀಗ ಇದೆ ಬೆಂಗಳೂರು ಒಂದು ಸುವರ್ಣಅವಕಾಶವನ್ನ ಕಳೆದುಕೊಂಡಿದ್ದೀಯಾ ಹೀಗೊಂದು ಪ್ರಶ್ನೆಯನ್ನ ಹುಟ್ಟು ಹಾಕಿದೆ ಗೂಗಲ್ ನ ಬೃಹತ್ ಹೂಡಿಕೆ ಯೋಜನೆ ಹೌದು ಟೆಕ್ ದೈತ್ಯಗೂಗಲ್ ನ ಬರೊಬ್ಬರಿ 1.3 3 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಬೃಹತ್ ಯೋಜನೆ ನೆರೆಯ ಆಂಧ್ರಪ್ರದೇಶದ ಪಾಲಾಗಿದೆ. ನಮ್ಮ ರಾಜ್ಯದ ಕೈತಪ್ಪಿ ಹೋಗಿದೆ. ಅಮೆರಿಕಾ ಮೂಲದ ಕಂಪನಿ ತನ್ನ ಬೃಹತ್ ಯೋಜನೆ ಸ್ಥಾಪಿಸಲು ಆಂಧ್ರಪ್ರದೇಶವನ್ನೇ ಆಯ್ದುಕೊಂಡಿದ್ಯಾ ಯಾಕೆ? ಅಷ್ಟಕ್ಕೂ ಏನಿದು ಯೋಜನೆ? ಈ ಇನ್ವೆಸ್ಟ್ಮೆಂಟ್ ಕರ್ನಾಟಕದ ಕೈ ತಪ್ಪಿದ್ದು ಯಾಕೆ?
ಗೂಗಲ್ ಅಮೆರಿಕ ಮೂಲದ ದೈತ್ಯ ಕಂಪನಿ ಸದ್ಯ ಟೆಕ್ ಜಗತ್ತನ್ನ ಆಳುತ್ತಿರೋ ಸಂಸ್ಥೆ ಇದೆಗೂಗಲ್ ಇದೀಗ ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣಂನಲ್ಲಿ ಬರುಬರಿ 15 ಬಿಲಿಯನ್ ಡಾಲರ್ ಅಂದ್ರೆ ಸುಮಾರು 1.3 3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇಲ್ಲಿ ಅತ್ಯಾಧುನಿಕ ಎಐ ಡೇಟಾ ಹಬ್ ಸ್ಥಾಪಿಸಲು ಕಂಪನಿ ಮುಂದಾಗಿದೆ. ಇದು ಅಮೆರಿಕಾದ ಹೊರಗೆ ಗೂಗಲ್ ಸ್ಥಾಪಿಸ್ತಾ ಇರುವ ಅತಿ ದೊಡ್ಡ ಎಐ ಹಬ್ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಹೂಡಿಕೆಯನ್ನ ಮಾಡಲಾಗುತ್ತೆ ಅಂತಗೂ ಕ್ಲೌಡ್ ಸಿಇಓ ಥಾಮಸ್ ಕುರಿಯನ್ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ. ಈ ಬೃಹತ್ ಯೋಜನೆಯಲ್ಲಿ ಅದಾನಿ ಗ್ರೂಪ್ ಮತ್ತು ಏರ್ಟೆಲ್ ಕೂಡ ಗೂಗಲ್ ಜೊತೆಗೆ ಕೈಜೋಡಿಸಿವೆ ಡೇಟಾ ಸೆಂಟರ್ ಅಂದ್ರೆ ನಮ್ಮೆಲ್ಲರ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಿ ಸಂಸ್ಕರಿಸಿ ವಿತರಿಸುವ ಒಂದು ಬೃಹತ್ ತಾಣ ಈ ಎಐ ಹಬ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಬೆಳವಣಿಗೆಗೆ ಬೆನ್ನೆಲುಬಾಗಲಿದೆ. ಈ ಯೋಜನೆಯಿಂದ ಆಂಧ್ರಪ್ರದೇಶಕ್ಕೆ ಆಗುವ ಲಾಭ ಅಷ್ಟಿಷ್ಟ ಅಲ್ಲ. ಮೊದಲನೆಯದಾಗಿ ನೇರ ಮತ್ತು ಪರೋಕ್ಷವಾಗಿ ಸುಮಾರು 30ಸಾ ಉದ್ಯೋಗಗಳು ಸೃಷ್ಟಿಯಾಗಲಿದೆ. ಎರಡನೆಯದಾಗಿ ರಾಜ್ಯಕ್ಕೆ ವಾರ್ಷಿಕವಾಗಿ ಸುಮಾರು 10ಸಾ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ.
ಮೂರನೆಯದಾಗಿ ಅಂತರಾಷ್ಟ್ರೀಯ ಸಬ್ಮರಿನ್ ಕೇಬಲ್ ಗೇಟ್ವೇ ಸ್ಥಾಪನೆಯಿಂದ ಆಂಧ್ರವು ಡಿಜಿಟಲ್ ಜಗತ್ತಿನಲ್ಲಿ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಈಗಾಗಲೇ ಆಂಧ್ರಪ್ರದೇಶ ಸರ್ಕಾರ ಹೂಡಿಕೆದಾರರನ್ನು ಆಕರ್ಷಿಸಲು ಸಬ್ಸಿಡಿ ದರದಲ್ಲಿ ಭೂಮಿ ಮತ್ತು ವಿದ್ಯುತ್ ನೀಡ್ತಾ ಇದೆ. ಈ ಒಪ್ಪಂದದಿಂದ ಆಂಧ್ರದ ಡಿಜಿಟಲ್ ಭವಿಷ್ಯವೇ ಬದಲಾಗಲಿದೆ ಅಂತ ಅಲ್ಲಿನ ಟೆಕ್ ಸಚಿವ ನಾರಾ ಲೋಕೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ದೊಡ್ಡ ಯೋಜನೆ ನಮ್ಮ ಪಕ್ಕದ ರಾಜ್ಯಕ್ಕೆ ಹೋಗ್ತಾ ಇರೋದು ಕರ್ನಾಟಕದ ಐಟಿ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣ ಆಗಿದೆ. ಬ್ರಾಂಡ್ ಬೆಂಗಳೂರು ಹೆಸರಿಗೆ ಮಸಿ ಬಳೆಯುವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಜೆಡಿಎಸ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಲಿಕಾನ್ ಸಿಟಿಗೆ ಗ್ರಹಣ ಹಿಡಿದಿದೆ. ಬೆಂಗಳೂರಿನ ಗುಂಡೆಗಳು ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಲಕ್ಷದಿಂದ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಯೋಜನೆ ರಾಜ್ಯದ ಕೈತಪ್ಪಿದೆ. ಇದರಿಂದ ರಾಜ್ಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಅಂತ ಜೆಡಿಎಸ್ ಆರೋಪಿಸಿದೆ.
ಉದ್ಯಮಿಗಳು ಬೆಂಗಳೂರು ಬಿಟ್ಟು ಹೋದ್ರೆ ಹೋಗಲಿ ಅಂತ ಧಮಕಿ ಹಾಕುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮತ್ತು ನಿಷ್ಪ್ರಯೋಜಕ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಇದಕ್ಕೆ ಕಾರಣ ಅಂತ ಜೆಡಿಎಸ್ ತನ್ನ ಟ್ವೀಟ್ ನಲ್ಲಿ ಕಿಡಿಕಾರಿದೆ ಹಾಗಾದರೆ ನಿಜವಾಗಿಯೂ ಈ ಯೋಜನೆ ಕರ್ನಾಟಕದ ಕೈತಪ್ಪೋದಕ್ಕೆ ಸರ್ಕಾರದ ನಿರ್ಲಕ್ಷವೇ ಕಾರಣವಾ ಅಥವಾ ಬೇರೆ ಪ್ರಮುಖ ಕಾರಣಗಳಿದೆಯಾ ಗೂಗಲ್ನ ಆಯ್ಕೆಯನ್ನ ವಿಶ್ಲೇಷಿಸಿದಾಗ ಆಂಧ್ರಪ್ರದೇಶ ದೇಶ ಹಲವು ಕಾರ್ಯತಂತ್ರದ ಅನುಕೂಲಗಳನ್ನು ಕಂಪನಿಗೆ ಒದಗಿಸಿರುವುದು ಸ್ಪಷ್ಟವಾಗುತ್ತಿದೆ. ಮೊದಲನೆಯದಾಗಿ ವಿಶಾಖಪಟ್ಟಣಂನ ಕರಾವಳಿ ಸಮುದ್ರದೊಳಗಿನ ಕೇಬಲ್ಗಳನ್ನ ಸ್ಥಾಪಿಸಲು ಸೂಕ್ತವಾಗಿದೆ. ಇದು ಮುಂಬೈ ಮತ್ತು ಚೆನ್ನೈನಂತ ಅಸ್ತಿತ್ವದಲ್ಲಿರುವ ಹಬ್ಗಳ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಲಿದೆ. ಎರಡನೆಯದಾಗಿ ಆಂಧ್ರ ಸರ್ಕಾರವು ಈ ಯೋಜನೆಯನ್ನ ಪಡೆಯಲು ಅತೀವ ಆಸಕ್ತಿ ತೋರಿಸಿ ತ್ವರಿತವಾಗಿ ಭೂಮಿ ಹಂಚಿಕೆ ತೆರಿಗೆ ವಿನಾಯಿತಿಗಳಂತ ಪೂರಕ ನೀತಿಗಳನ್ನ ರೂಪಿಸಿತ್ತು. ಜೊತೆಗೆ ಎಐ ಡೇಟಾ ಹಬ್ ಗಳಿಗೆ ಯತೇಚ್ಛವಾಗಿ ನೀರು ವಿದ್ಯುತ್ ಬೇಕು. ಇದು ಕೂಡ ಸಿಗತಾ ಇರೋದ್ರಿಂದ ಸಹಜವಾಗಿಯೇಗೂಗಲ್ ವಿಶಾಖಪಟ್ಟಣಂನತ್ತ ಮುಖ ಮಾಡಿದೆ. ಇದಕ್ಕೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಹದಗೆಟ್ಟ ರಸ್ತೆಗಳು ಅಧಿಕ ರಿಯಲ್ ಎಸ್ಟೇಟ್ ವೆಚ್ಚ ಮತ್ತು ಬೃಹತ್ ಯೋಜನೆಗಳಿಗೆ ಬೇಕಾದ ಭೂಮಿ ಸ್ವಾಧೀನದ ತೊಡಕುಗಳು ಹೂಡಿಕೆದಾರರನ್ನ ಹಿಮ್ಮೆಟ್ಟಿಸಿರಬಹುದು ಜೊತೆಗೆ ಬೆಂಗಳೂರಿನ ಸಮೀಪದಲ್ಲಿ ಸಮುದ್ರವು ಇಲ್ಲ ನೀರಿನ ಲಭ್ಯತೆಯು ಕಷ್ಟ ಒಟ್ಟಿನಲ್ಲಿ ಒಂದು ಬೃಹತ್ ಯೋಜನೆ ನೆರೆ ರಾಜ್ಯದ ಪಾಲಾಗಿದ್ದು ಕರ್ನಾಟಕದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣ ಆಗಿದೆ.
ಗೂಗಲ್ ಆಂಧ್ರಪ್ರದೇಶಕ್ಕೆ ಹೋಗೋಕೆ ಇಲ್ಲಿನ ಸರ್ಕಾರದ ನಿರ್ಲಕ್ಷಕ್ಕಿಂತ ಹೆಚ್ಚಾಗಿ ವಿಶಾಖಪಟ್ಟಣಂನಲ್ಲಿರುವ ಸಮುದ್ರವೇ ಪ್ರಮುಖ ಕಾರಣ. ಆದರೆ ಬೆಂಗಳೂರು ಈಗ ಕಂಪನಿಗಳ ಮೊದಲ ಆಯ್ಕೆಯಾಗಿ ಉಳಿದಿಲ್ಲ ಅನ್ನೋದು ಅಷ್ಟೇ ಸತ್ಯ ಹೀಗಾಗಿ ಇನ್ನಾದರೂ ಸರ್ಕಾರ ಹೆಚ್ಚೆತ್ತುಕೊಂಡು ಸಿಲಿಕಾನ್ ಸಿಟಿಯ ಕಿರೀಟವನ್ನ ಉಳಿಸಿಕೊಳ್ಳಲು ಕೇವಲ ಹೆಸರಿಗಷ್ಟೇ ಅಲ್ಲ ನಿಜವಾಗಿಯೂ ವಿಶ್ವ ದರ್ಜೆಯ ಸೌಲಭ್ಯಗಳನ್ನ ಒದಗಿಸುವತ್ತ ಗಮನ ಹರಿಸಬೇಕಿದೆ. ಐಟಿ ಪರಿಸರವು ಹಳೆಯ ಶಕ್ತಿ ಮತ್ತು ರೆಪ್ಯುಟೇಶನ್ ಹೊಂದಿದೆ, ಆದರೆ ಸ್ಪರ್ಧಾತ್ಮಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಹೊಸ ನಿರ್ಧಾರಗಳು ಮತ್ತು ಸೌಲಭ್ಯಗಳು ತ್ವರಿತವಾಗಿ ಬೇಕಾಗಿವೆ. ಉದ್ಯೋಗಿಗಳ ಪ್ರೋತ್ಸಾಹ, ಇನ್ಫ್ರಾಸ್ಟ್ರಕ್ಚರ್ ವಿಸ್ತರಣೆ ಮತ್ತು ವೈಶಿಷ್ಟ್ಯಪೂರ್ಣ ಆಧುನಿಕ ಸೌಲಭ್ಯಗಳನ್ನು ನೀಡದೇ ಇದ್ದರೆ, ಕಂಪನಿಗಳು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಸರ್ಕಾರ, ಉದ್ಯಮಗಳು ಮತ್ತು ಸ್ಥಳೀಯ ಸಮುದಾಯಗಳು ಒಟ್ಟಿಗೆ ಕಾರ್ಯನಿರ್ವಹಿಸಬೇಕು, ಬೆಂಗಳೂರು ಮತ್ತೆ ಜಾಗತಿಕ ತಂತ್ರಜ್ಞಾನ ಕೇಂದ್ರ ಆಗಿ ತನ್ನ ಸ್ಥಾನವನ್ನು ಮರಳಿ ಪಡೆಯಲು. ಇನ್ನೊಂದು ಪ್ರಮುಖ ಅಂಶವೆಂದರೆ, ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಬೇಕು, ಇದರಿಂದಲೇ ಉದ್ಯೋಗ ಅವಕಾಶಗಳು ಮತ್ತು ನವೀನತೆ ಎರಡೂ ಬೆಳೆಯುತ್ತವೆ. ಕೊನೆಗೆ, ಬೆಂಗಳೂರು ಕೇವಲ ಆಕರ್ಷಕ ಸ್ಥಳವಲ್ಲ, ತಂತ್ರಜ್ಞಾನ ಪ್ರಗತಿಯ ಕೇಂದ್ರವೂ ಆಗಬೇಕು, ಮತ್ತು ಅದಕ್ಕೆ ಸರ್ಕಾರದ ದಿಟ್ಟ ನಿರ್ಧಾರಗಳು ಮತ್ತು ನೈಜ ಸೌಲಭ್ಯಗಳು ಅವಶ್ಯಕ.


