Thursday, November 20, 2025
HomeStartups and Businessಗೂಗಲ್ ಡೇಟಾ ಸೆಂಟರ್‌ಗಳ ಹೊಸ ಅಧ್ಯಾಯ: ಸನ್‌ಕ್ಯಾಚರ್

ಗೂಗಲ್ ಡೇಟಾ ಸೆಂಟರ್‌ಗಳ ಹೊಸ ಅಧ್ಯಾಯ: ಸನ್‌ಕ್ಯಾಚರ್

ನೀವು Space ಹೋಗೋಕೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ ನಿಮ್ಮಜಿಮೇಲ್ ಐಡಿ ನಿಮ್ಮ ಇಮೇಲ್ ಗಳುಗೂಗಲ್ ಫೋಟೋಸ್ ಅಲ್ಲಿರೋ ನಿಮ್ಮ ಫೋಟೋಸ್ ಹಾಗೂ ನೀವು ಮಾಡಿರೋ ಸರ್ಚ್ ಡೇಟಾ ಎಲ್ಲವೂ ಸ್ಪೇಸ್ಗೆ ಹೋಗ್ತಾ ಇದಾವೆ ಸ್ಪೇಸ್ಗೆ ಹೊರಟು ನಿಂತುಕೊಂಡಿದ್ದಾವೆ ಇನ್ಮೇಲೆ ಸ್ಪೇಸ್ ನಲ್ಲಿ ನಿಂತುಕೊಂಡು ಕೆಳಗೆ ನಿಮ್ಮನ್ನ ನೋಡಲಿದೆ ಅಂತ ಒಂದು ದೊಡ್ಡ ಸಾಹಸಕ್ಕೆ ಗೂಗಲ್ ಈಗ ರೆಡಿಯಾಗಿದೆ ಇಲ್ಲಿವರೆಗೂ ಭೂಮಿ ಮೇಲೆ ಡೇಟಾ ಸೆಂಟರ್ಗಳನ್ನ ಇಟ್ಟಿದ್ದ ಗೂಗಲ್ ಈಗ ನಿಮ್ಮ ಎಲ್ಲಾ ಡೇಟಾವನ್ನ ಸ್ಪೇಸ್ ಗೆ ಕಳಿಸ್ತೀನಿ ಅಂತ ಹೊರಟಿದೆ ನಮ್ಮ ನಿಮ್ಮ ಡೇಟಾಗೆ ಸ್ಪೇಸ್ ಸ್ಟೂರ್ ಭಾಗ್ಯ ಪ್ರಾಜೆಕ್ಟ್ ಸನ್ ಕ್ಯಾಚರ್ ಹೆಸರಲ್ಲಿ ಇಂತ ಮಹಾ ದೈತ್ಯ ಸಾಹಸಕ್ಕೆಗೂಗಲ್ ಮುಂದಾಗಿದೆ. ಹಾಗಿದ್ರೆ ಹೇಗೆ ಆಕಾಶದಲ್ಲಿ ಡೇಟಾ ಸೆಂಟರ್ ಹೇಗೆ ಸ್ಪೇಸ್ ಅಲ್ಲಿ? ಇವುಗಳನ್ನ ಕಂಟ್ರೋಲ್ ಮಾಡೋದು ಹೇಗೆ? ಭಯಾನಕ ರೇಡಿಯೇಷನ್ ಅನ್ನ ನಮ್ಮ ನಿಮ್ಮ ಡೇಟಾ ಅಲ್ಲಿ ಹೇಗೆ ತಡೆಕೊಳ್ಳುತ್ತವೆ? ಅಷ್ಟಕ್ಕೂ Google ಭೂಮಿ ಬಿಟ್ಟು ಸ್ಪೇಸ್ ಕಡೆಗೆ ಮುಖ ಮಾಡಿರೋದು ಯಾಕೆ? ಯಾವ ಭಯಂಕರ ಲಾಭದ ಲೆಕ್ಕಾಚಾರವನ್ನ Google ಅಲ್ಲಿ ಹಾಕೊಂಡಿದೆ. ಯಾವೆಲ್ಲಾ ಚಾಲೆಂಜಸ್ ಇದೆ ಎಲ್ಲವನ್ನ ಅರ್ಥ ಮಾಡ್ಕೊಳ್ತಾ ಹೋಗೋಣ.

ಟೆಕ್ ದೈತ್ಯನ ಬಿಗ್ ಪ್ಲಾನ್ ಬಾಹ್ಯಕಾಶಕ್ಕೆ ಡೇಟಾ ಸೆಂಟರ್ ಒಂದು ಡೇಟಾ ಸೆಂಟರ್ ಭೂಮಿ ಮೇಲೆ ಮಾಡಬೇಕಂದ್ರೆ ಏನು ಚಾಲೆಂಜ್ ಇದೆ 106 ಎಕರೆ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟಿ ಆಮೇಲೆ ಸಾವಿರ ಲಕ್ಷಗಳ ಸಂಖ್ಯೆನಲ್ಲಿ ಅಲ್ಲಿ ಪ್ರಾಸೆಸರ್ಸ್ ನ ಸ್ಟೋರೇಜ್ ಡಿವೈಸಸ್ ನ ಜೋಡಿಸಿ ಇಟ್ಟಿರ್ತಾರೆ ಭೂಮಿಯ ಹಲವು ಭಾಗದಲ್ಲಿ ದೈತ್ಯ ಟೆಕ್ ಕಂಪನಿಗಳು ತಮ್ಮ ಡೇಟಾ ಸೆಂಟರ್ ನ ತೆರೆದಿರ್ತಾರೆ ಒಂದೇ ಕಡೆ ಇರಬಾರದು ಡೈವರ್ಸಿಫೈ ಮಾಡಬೇಕು ಒಂದು ಜಾಗದಲ್ಲಿ ಆದ್ರೆ ಇನ್ನೊಂದು ಜಾಗದಲ್ಲಿ ಸೇಫ್ ಆಗಿರಬೇಕು ಅನ್ನೋ ಕಾರಣಕ್ಕೋಸ್ಕರ ಜಿಯೋಗ್ರಾಫಿಕಲ್ ಡೈವರ್ಸಿಫಿಕೇಶನ್ ಕೂಡ ಮಾಡಿರ್ತಾರೆ ಇದಕ್ಕೆ ಏನು ಬೇಕು ಹೇಳಿ ಅಪಾರ ಪ್ರಮಾಣದ ಲ್ಯಾಂಡ್ ಬೇಕು ಈ ದುಬಾರಿ ವರ್ಲ್ಡ್ ನಲ್ಲಿ ರಿಯಲ್ ಎಸ್ಟೇಟ್ ಎಷ್ಟು ಕಾಸ್ಟ್ಲಿ ಅಂತ ನಿಮಗೆ ಗೊತ್ತು ಅಂತದ್ರಲ್ಲಿ 106 ಎಕರೆ ಜಾಗ ಬೇಕು ಆಮೇಲೆ ಅಪಾರ ಪ್ರಮಾಣದ ಕರೆಂಟ್ ಎಲೆಕ್ಟ್ರಿಸಿಟಿ ಬೇಕು ಅದನ್ನ ರನ್ ಮಾಡೋಕೆ ಅಲ್ವಾ ಆ ಪ್ರಾಸೆಸರ್ಸ್ ಆ ಮೆಮೊರಿ ಡಿವೈಸಸ್ ರನ್ ಆಗ್ಬೇಕು ಆಮೇಲೆ ಕೂಲ್ ಆಗಿಡಬೇಕಲ್ಲ ಅದನ್ನ ಅದಕ್ಕೆ ಎಸಿ ಓಡಿಸಬೇಕು ಆಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ಬೇಕು ಕೂಲಿಂಗ್ ಸಿಸ್ಟಮ ನ್ನ ರನ್ ಮಾಡೋಕೆ ಡೇಟಾ ಸೆಂಟರ್ ನಲ್ಲಿ ವರದಿಲ್ಲ ಎಕ್ಸ್ಪ್ಲೈನ್ ಮಾಡಿದ್ವಿ ನಾವು ಆದ್ರೆ ಅದೆಲ್ಲದರಿಂದ ತಪ್ಪಿಸಿಕೊಳ್ಳಕೆ ಈಗ ಆಕಾಶಕ್ಕೆ ತಗೊಂಡು ಹೋಗ್ತೀವಿ ನಮ್ಮ ನಿಮ್ಮ ಡೇಟಾವನ್ನ ಅಂತ ಗೂಗಲ್ ಹೇಳ್ತಾ ಇದೆ. ಅಫಿಷಿಯಲ್ ಆಗಿ ಮಾಹಿತಿಯನ್ನ ಶೇರ್ ಮಾಡಿದೆ ಪ್ರಾಜೆಕ್ಟ್ ಸನ್ ಕ್ಯಾಚರ್ ಸೂರ್ಯನನ್ನ ಹಿಡಿಯೋ ಯೋಜನೆ ಅಂತ ಹೆಸರು ಇಟ್ಕೊಂಡಿದ್ದಾರೆ. ಇದರ ಭಾಗವಾಗಿಗೂಗಲ್ 2027 ಕ್ಕೆ ಎರಡು ಸ್ಯಾಟಿಲೈಟ್ ಗಳನ್ನ ಲಾಂಚ್ ಮಾಡ್ತಾ ಇದೆ.

ಗೂಗಲ್ ಪ್ಲಾನೆಟ್ ಲ್ಯಾಬ್ ಅನ್ನೋ ಸಂಸ್ಥೆಯೊಂದಿಗೆ ಪಾರ್ಟ್ನರ್ಶಿಪ್ ನಲ್ಲಿ ಈ ಮಿಷನ್ ಅನ್ನ ಲಾಂಚ್ ಮಾಡ್ತಾ ಇದೆ. ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಿ ಕುದ್ದು ಸುಂದರ್ ಪಿಚ ಇದರ ಬಗ್ಗೆ ಆಫಿಷಿಯಲ್ ಆಗಿ ಪೋಸ್ಟ್ ಮಾಡಿ ಮಾಹಿತಿಯನ್ನ ಶೇರ್ ಮಾಡಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತೆ ಇದು ಹೇಗೆ ಕೆಲಸ ಮಾಡುತ್ತೆ ಅಂತ ಅರ್ಥ ಮಾಡ್ಕೋಬೇಕು ಅಂದ್ರೆ ಭೂಮಿಲಿ ಡೇಟಾ ಸೆಂಟರ್ ಗಳ ಕೆಲಸವನ್ನ ಅರ್ಥ ಮಾಡ್ಕೋಬೇಕು. ಡೇಟಾ ಸೆಂಟರ್ ನ ಬ್ರೈನ್ ರೀತಿ ಕೆಲಸ ಮಾಡೋ ಭಾಗ ಅಂದ್ರೆ ಅದು ಸರ್ವರ್ ಇಲ್ಲಿ ಪವರ್ಫುಲ್ ಕಂಪ್ಯೂಟರ್ ಗಳ ಇರ್ತವೆ. ಇವು ನೀವು ಕಳಿಸಿದ ಡೇಟಾವನ್ನ ಸ್ಟೋರ್ ಮಾಡೋದು ಮತ್ತು ಪ್ರೋಸೆಸ್ ಮಾಡೋ ಕೆಲಸ ಮಾಡ್ತವೆ. ಇದರ ಜೊತೆಗೆ ಹೆಚ್ಚಿನ ಡೇಟಾ ಸ್ಟೋರ್ ಮಾಡೋಕೆ ದೊಡ್ಡ ದೊಡ್ಡ ಸ್ಟೋರೇಜ್ ಡಿವೈಸ್ ಗಳ ಇರುತ್ತವೆ. ಮೂರನೆದಾಗಿ ರೋಟರ್ಸ್ ಫೈರ್ ವಾಲ್ ಅಂತ ನೆಟ್ವರ್ಕಿಂಗ್ ಸಿಸ್ಟಮ್ ಇದರ ಜೊತೆಗೆ ಸರ್ವರ್ ನಲ್ಲಿ ಪ್ರೊಡ್ಯೂಸ್ ಆಗೋ ಹೆಚ್ಚಿನ ಶಾಖವನ್ನ ತಡೆಯೋಕೆ ತೆಗೆದು ಹಾಕೋಕೆ ಕೂಲಿಂಗ್ ಸಿಸ್ಟಮ್ ಇದೆಲ್ಲವನ್ನ ರನ್ ಮಾಡೋಕೆ ಹೆವಿ ಎಲೆಕ್ಟ್ರಿಸಿಟಿ ಇದೆಲ್ಲ ಒಂದೇ ಕಡೆ ಸೆಟ್ ಮಾಡಿಟ್ಟಿರೋ ಫೆಸಿಲಿಟಿಗೆ ಡೇಟಾ ಸೆಂಟರ್ ಅಂತ ಹೇಳಲಾಗುತ್ತೆ ಈಗ ನೀವು ನೋಡ್ತಿರೋ ಈ ವಿಡಿಯೋ ಕೂಡ ಅಪ್ಲೋಡ್ ಆದ ತಕ್ಷಣ ಯಾವುದೋ ಒಂದು ಡೇಟಾ ಸೆಂಟರ್ ನಲ್ಲಿ ಹೋಗಿ ಕೂತಿರುತ್ತೆ ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡೇಟಾ ಸೆಂಟರ್ ನಿಂದ ಇಂಟರ್ನೆಟ್ ಮೂಲಕ ನಿಮ್ಮ ಸ್ಕ್ರೀನ್ ಮೇಲೆ ಡಿಸ್ಪ್ಲೇ ಆಗೋಕೆ ಶುರುವಾಗುತ್ತೆ ಇದೆಲ್ಲ ಮಿಲ್ಲಿ ಸೆಕೆಂಡ್ ನಲ್ಲಿ ಆಗ್ತಾ ಇರುತ್ತೆ.

ಇದೇ ರೀತಿಯ ಡೇಟಾ ಸೆಂಟರ್ ನ ಈಗ ಗೂಗಲ್ ತಯಾರಿಸೋಕೆ ನೋಡ್ತಾ ಇದೆ ಆದರೆ ಇಲ್ಲಿ ಡೇಟಾ ಸೆಂಟರ್ ಭೂಮಿ ಮೇಲೆ ಇರುವ ಬದಲು ಸ್ಪೇಸ್ ನಲ್ಲಿ ತೇಲ್ತಾ ಇರುತ್ತೆ ಸೋ ಈ ಸನ್ ಕ್ಯಾಚರ್ ಹೇಗೆ ವರ್ಕ್ ಆಗುತ್ತೆ ಅಂತ ನಾವಈಗ ಅರ್ಥ ಮಾಡಿಕೊಳ್ಳೋಣ ಒಂದಿಷ್ಟು ಸ್ಯಾಟಿಲೈಟ್ ಗಳನ್ನ ಹಾರಿಬಿಡಲಾಗುತ್ತೆ ಈ ಸ್ಯಾಟಿಲೈಟ್ಸ್ ಭೂಮಿಯಿಂದ 650 ಕಿಲೋಮೀಟ ಎತ್ತರದ ಸನ್ ಸಿಂಕ್ರನಸ್ ಆರ್ಬಿಟ್ ನಲ್ಲಿ ಸುತ್ತುತ್ತಾ ಇರ್ತವೆ ಈ ಸ್ಯಾಟಿಲೈಟ್ಗಳು ತೇಲುವ ಡೇಟಾ ಸೆಂಟರ್ನ ಬಿಲ್ಡಿಂಗ್ ನಂತೆ ಕೆಲಸ ಮಾಡ್ತವೆ ಹೀಗೆ ತೇಲ್ತಾ ಇರೋ ಸ್ಯಾಟಿಲೈಟ್ಸ್ ಅಲ್ಲಿ ಮಷೀನ್ ಲರ್ನಿಂಗ್ ಅಥವಾ ಎಐ ಆಕ್ಸಲರೇಟ್ ಜೊತೆಗೆ ಮೆಮರಿ ಹೈ ಬ್ಯಾಂಡ್ವಿಡ್ ಸಿಸ್ಟಮ್ ಸಿಪಿಯು ಎಲ್ಲ ಇರಲಿವೆ ಭೂಮಿಯಲ್ಲಿರೋ ಡೇಟಾ ಸೆಂಟರ್ ಒಂದಕ್ಕೊಂದು ಕಮ್ಯುನಿಕೇಟ್ ಮಾಡ್ಕೊಳ್ತಾವಲ್ಲ ಅದೇ ರೀತಿ ಸ್ಯಾಟಿಲೈಟ್ ಗಳು ಕೂಡ ತಮ್ಮ ನಡುವೆ ಕಮ್ಯುನಿಕೇಶನ್ ಮಾಡ್ಕೊಳ್ತಾವೆ ಸ್ಯಾಟಿಲೈಟ್ಸ್ ಮಧ್ಯೆ ಫಾಸ್ಟ್ ಮತ್ತು ಎಫೆಕ್ಟಿವ್ ಕಮ್ಯುನಿಕೇಶನ್ ಗೆ ಲೇಸರ್ ಲೈಟ್ ನ ಯೂಸ್ ಮಾಡಲಾಗುತ್ತೆ ಟೆರಾಬೈಟ್ ಲೆಕ್ಕದಲ್ಲಿ ಸ್ಪೀಡ್ ನ ಅಚೀವ್ ಮಾಡ್ತೀವಿ ಅಂತ ಗೂಗಲ್ ಹೇಳ್ತಾ ಇದೆ ಸೋಲಾರ್ ಪವರ್ ನ ಬಳಸಿಕೊಂಡು ಈ ಬಾಹ್ಯಾಕಾಶದ ಸಿಸ್ಟಮ್ ನ ರನ್ ಮಾಡಲಾಗುತ್ತೆ ಇನ್ನು ಭೂಮಿ ಜೊತೆಗೆ ಕಮ್ಯುನಿಕೇಶನ್ ಗೆ ಹೈ ಬ್ಯಾಂಡ್ ವಿಡ್ತ್ ಫ್ರಿಕ್ವೆನ್ಸಿ ನ್ನ ಬಳಸಿಕೊಳ್ಳುತೀವಿ ಅಂತಗೂಗಲ್ ಹೇಳ್ತಾ ಇದೆ.

ರೇಡಿಯೇಶನ್ ಗೆ ಗೂಗಲ್ ಪರಿಹಾರ. ಬಾಹ್ಯಕಾಶದಲ್ಲಿನ ದೊಡ್ಡ ಪ್ರಾಬ್ಲಮ್ ಅಂದ್ರೆ ಅದು ರೇಡಿಯೇಷನ್ ಯಾವುದೇ ಎಲೆಕ್ಟ್ರಾನಿಕ್ ಎಕ್ವಿಪ್ಮೆಂಟ್ ಈ ವಿಕಿರಣಗಳಿಗೆ ಸ್ಪೇಸ್ ನಲ್ಲಿನ ವಿಕಿರಣಗಳಿಗೆ ಎಕ್ಸ್ಪೋಸ್ ಆದ್ರೆ ಹಾನಿಗೊಳಗಾಗುತ್ತೆ. ಇದಕ್ಕಾಗಿ ಗೂಗಲ್ ತನ್ನ ವಿಶೇಷ v6 ಅನ್ನೋ ಕ್ಲೌಡ್ ಟಿಪಿಯು ಟೆನ್ಸರ್ ಪ್ರಾಸೆಸಿಂಗ್ ಯೂನಿಟ್ ಗಳನ್ನ ಚಿಪ್ ಗಳನ್ನ ಡೆವಲಪ್ ಮಾಡಿದೆ. ಇದನ್ನ 67 ಮೆಗಾ ಎಲೆಕ್ಟ್ರಾನ್ ವೋಲ್ಟ್ ಪ್ರೋಟಾನ್ ಕಿರಣಗಳನ್ನ ಬಳಸಿ ಗೂಗಲ್ ಟೆಸ್ಟ್ ಮಾಡಿದೆ. ಇದರಲ್ಲಿ ಪಾಸಿಟಿವ್ ರಿಸಲ್ಟ್ ಕೂಡ ಬಂದಿದೆ. v6 ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಈ ಚಿಪ್ ಸ್ಪೇಸ್ ನಲ್ಲಿ ರೇಡಿಯೇಶನ್ ಇದ್ರೂ ಕೂಡ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತೆ ಅಂತ ಗೂಗಲ್ ಹೇಳ್ಕೊಂಡಿದೆ. ಇದರ ಉಪಯೋಗ ಏನು? ಇದರ ಬಗ್ಗೆ ಆವಾಗ್ಲೇ ಸ್ವಲ್ಪ ಹಿಂಟ್ ಕೊಟ್ಟಿವಿ ನಿಮಗೆ ಡೀಟೇಲ್ ಆಗಿ ಹೇಳ್ತೀವಿ. ಮೊದಲನೇದು ಎನರ್ಜಿ 2024ರ ವೇಳೆಗೆ ಒಂದೇ ವರ್ಷ ಜಾಗತಿಕವಾಗಿ ಡೇಟಾ ಸೆಂಟರ್ ಗಳಿಗೇನೇ ಸುಮಾರು 415 ಟೆರಾವ್ಯಾಟ್ ಎಲೆಕ್ಟ್ರಿಸಿಟಿ ಖಾಲಿಯಾಗಿದೆ. ರಾಕ್ಷಸರಿವರು ಎಲೆಕ್ಟ್ರಿಸಿಟಿ ನುಂಗಿ ಹಾಕುದ್ರಲ್ಲಿ. ಇಡೀ ಪಾಕಿಸ್ತಾನ ಆಲ್ಮೋಸ್ಟ್ ಎರಡು ವರ್ಷ ಬಳಸೋ ವಿದ್ಯುತ್ನ ಬರೀ ಜಗತ್ತಿನ ಡೇಟಾ ಸೆಂಟರ್ಗಳೇ ನುಂಗಿ ಕೊಡ್ತಿವೆ. ಇದಕ್ಕೆ ಪರಿಹಾರ ಸ್ಪೇಸ್ ನಲ್ಲಿದೆ. ನಾವು ಉತ್ಪಾದಿಸುವದಕ್ಕಿಂತ 100 ಟ್ರಿಲಿಯನ್ ಪಟ್ಟು ಹೆಚ್ಚು ಪವರ್ ಸೂರ್ಯ ಉತ್ಪಾದಿಸುತ್ತಾನೆ. ಅಲ್ದೇ ಸ್ಪೇಸ್ ನಲ್ಲಿ ಸೋಲಾರ್ ಪ್ಯಾನೆಲ್ ಭೂಮಿಗಿಂತ ಎಂಟು ಪಟ್ಟು ಹೆಚ್ಚು ಎಫೆಕ್ಟಿವ್ ಆಗಿ ಕೆಲಸ ಮಾಡ್ತವೆ.

ಮೋಡ ವಾತಾವರಣ ಯಾವುದು ಡೈಲ್ಯೂಟ್ ಮಾಡಲ್ಲ ಸೂರ್ಯನ ಕಿರಣಗಳನ್ನ ಹೀಗಾಗಿ ಸೋಲಾರ್ ಎನರ್ಜಿಯಿಂದ ಡೇಟಾ ಸೆಂಟರ್ ನ ಕಂಟಿನ್ಯೂಸ್ಲಿ ರನ್ ಮಾಡಬಹುದು ಸ್ಪೇಸ್ ನಲ್ಲಿ ಕಾನ್ಸ್ಟೆಂಟ್ ಎನರ್ಜಿ ಸಿಗುತ್ತೆ ಅನ್ನೋದು ತಡರಹಿತವಾಗಿ ಸಿಗುತ್ತೆ ಅನ್ನೋದು ಗೂಗಲ್ ನ ಲೆಕ್ಕಾಚಾರ ಭೂಮಿಲಾದ್ರೆ ಸ್ವಂತ ಪವರ್ ಸ್ಟೇಷನ್ ಚಿಕ್ಕ ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನೆಲ್ಲ ಸೆಟ್ಪ್ ಮಾಡ್ಕೋಬೇಕಾಗುತ್ತೆ ಆದರೆ ಸ್ಪೇಸ್ನಲ್ಲಿ ಒಂದು ಸಲ ಸೋಲಾರ್ ಪ್ಯಾನೆಲ್ಸ್ ಇನ್ಸ್ಟಾಲ್ ಆದ್ರೆ 247 ಎನರ್ಜಿ ಸಿಗುತ್ತೆ ಎರಡನೆದು ಕೂಲಿಂಗ್ ಡೇಟಾ ಸೆಂಟರ್ಗಳು ಕೆಲಸ ಮಾಡುವಾಗ ಸಿಕ್ಕಪಟ್ಟೆ ಶಾಖವನ್ನ ಪ್ರೊಡ್ಯೂಸ್ ಮಾಡ್ತವೆ ಇದನ್ನ ನಿರಂತರವಾಗಿ ಕೂಲ್ ಮಾಡ್ತಾಇರಬೇಕು ಇದಕ್ಕೆ ಹೆಚ್ಚಾಗಿ ನೀರನ್ನ ಬಳಸಲಾಗುತ್ತೆ. ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿರೋ ಎಲ್ಲಾ ಡೇಟಾ ಸೆಂಟರ್ ಸೇರಿ ವರ್ಷಕ್ಕೆ 560 ಬಿಲಿಯನ್ ಲೀಟರ್ ನೀರನ್ನ ಯೂಸ್ ಮಾಡ್ತಿವೆ ಆದರೆ ಸ್ಪೇಸ್ನಲ್ಲಿ ಯಾವುದೇ ನೀರನ್ನ ಬಳಸು ಅಗತ್ಯ ಇಲ್ಲ. ಅಡ್ವಾನ್ಸ್ ಟೆಕ್ನಾಲಜಿ ಬಳಸಿಕೊಂಡು ಹೀಟ್ ರೇಡಿಯೇಶನ್ ಡೈರೆಕ್ಟಆಗಿ ಬಾಹ್ಯಾಕಾಶಕ್ಕೆ ಡಂಪ್ ಮಾಡಿ ಸಿಸ್ಟಮ್ ನ ಕೂಲ್ ಆಗಿ ಇಟ್ಕೊಳ್ಳೋಕೆ ಪ್ಲಾನ್ ಮಾಡ್ತಿದ್ದಾರೆ. ಭೂಮಿಯಲ್ಲಿ ವಾತಾವರಣ ಇರೋದ್ರಿಂದ ಇದೆಲ್ಲ ಮಾಡೋದು ಕಷ್ಟ. ಮೂರನೆದಾಗಿ ಸ್ಪೇಸ್ ನಲ್ಲಿ ಡೇಟಾ ಸೆಂಟರ್ ಇರೋದ್ರಿಂದ ಸ್ಪೇಸ್ ಮಿಷನ್ ಗಳಿಗೂ ಕೂಡ ಹೆಲ್ಪ್ ಆಗುತ್ತೆ.

ಬಾಹ್ಯಾಕಾಶದಲ್ಲಿನ ಡೇಟಾನ ಅಲ್ಲೇ ಪ್ರಾಸೆಸ್ ಮಾಡೋಕೆ ಸಾಧ್ಯ ಆಗುತ್ತೆ. ಜೊತೆಗೆ ಎಐ ಗಳು ವೇಗವಾಗಿ ಡೆವಲಪ್ ಆಗ್ತಿವೆ. ಹಲವಾರು ರೀತಿ ಎಐ ಗಳನ್ನ ಅಬ್ಸರ್ವಿಂಗ್ ಸ್ಯಾಟಿಲೈಟ್ ಕ್ಲೈಮೇಟ್ ಮಾನಿಟರಿಂಗ್ ಸ್ಯಾಟಿಲೈಟ್ ಗಳಲ್ಲಿ ಬಳಸಲಾಗ್ತಿದೆ. ಈ ಡೇಟಾವನ್ನ ಭೂಮಿಗೆ ತಂದು ಪ್ರಾಸೆಸ್ ಮಾಡೋದು ಸ್ವಲ್ಪ ಲೇಟ್ ಕಷ್ಟ. ಇದರ ಬದಲು ಸ್ಪೇಸ್ ನಲ್ಲೇ ಒಂದು ಡೇಟಾ ಸೆಂಟರ್ ಇದ್ರೆ ಅಲ್ಲೇ ಪ್ರಾಸೆಸ್ ಮಾಡಿ ಆಮೇಲೆ ಭೂಮಿಗೆ ತರಿಸ್ಕೊಬಹುದು. ಚಾಲೆಂಜಸ್ ಏನು? ಸ್ನೇಹಿತರೆ ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ ನಿರ್ಮಿಸೋಕೆ ಸದ್ಯಕ್ಕೆ ಒಂದಿಷ್ಟು ಚಾಲೆಂಜಸ್ ಕೂಡ ಇವೆ. ಅದರಲ್ಲಿ ಮುಖ್ಯವಾಗಿ ಉಡಾವಣ ವೆಚ್ಚ. ಸದ್ಯ ಉಪಗ್ರಹ ಉಡಾವಣ ಕಾಸ್ಟ್ ಜಾಸ್ತಿ ಇದೆ. ಇನ್ನೊಂದು ಎಕ್ಸ್ಟ್ರೀಮ್ ಟೆಂಪರೇಚರ್ ಸ್ಪೇಸ್ ನಲ್ಲಿ ಟೆಂಪರೇಚರ್ ದೊಡ್ಡ ಪ್ರಮಾಣದಲ್ಲಿ ವೇರಿ ಆಗ್ತಾ ಇರುತ್ತೆ. ಇದನ್ನ ತಡೆಕೊಳ್ಳುವಂತಹ ಸಿಸ್ಟಮ್ ನ ನಿರ್ಮಾಣ ಮಾಡೋದು ಇಂಪಾರ್ಟೆಂಟ್. ಹಾಗೆ ಮೇಂಟೆನೆನ್ಸ್ ಕೂಡ ಚಾಲೆಂಜ್ ಭೂಮಿಯಲ್ಲಿಆದ್ರೆ ಡೇಟಾ ಸೆಂಟರ್ ಒಳಗಡೆ ಹೋಗಿ ಪ್ರಾಬ್ಲಮ್ ನ ಫಿಕ್ಸ್ ಮಾಡಬಹುದು. ಆದರೆ ಸ್ಪೇಸ್ ನಲ್ಲಿ ಎಲ್ಲವನ್ನು ಕೂಡ ಆಟೋಮ್ಯಾಟಿಕಲಿ ರಿಮೋಟ್ಲಿ ಹ್ಯಾಂಡಲ್ ಮಾಡಬೇಕಾಗುತ್ತೆ. ಇನ್ನು ಇತ್ತೀಚಿಗೆ ಬಾಹ್ಯಾಕಾಶದಲ್ಲಿ ಕಸ ಸ್ಪೇಸ್ ಡೆಬ್ರೀಸ್ ಹೆಚ್ಚಾಗಿವೆ. ಇವು ಡಿಕ್ಕಿ ಹೊಡೆಯುವ ಅಪಾಯ ಕೂಡ ಇರುತ್ತೆ.

ಈ ಸ್ಪೇಸ್ ಡೆಬ್ರೀಸ್ ಇಂದ ಇವುಗಳಿಗೆ ಮಾತ್ರ ಅಲ್ಲ ಎಲ್ಲಾ ಸ್ಯಾಟಿಲೈಟ್ ಗಳಿಗೂ ಕೂಡ ಅಪಾಯ ಇದೆ. ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ಗೂ ಕೂಡ ಅಪಾಯ ಇದೆ. ಇನ್ನು ರೇಡಿಯೇಶನ್ ಇದಕ್ಕೆ ಗೂಗಲ್ ತನ್ನ ವಿಶೇಷ ಟಿಪಿಯು ನ ಡೆವಲಪ್ ಮಾಡಿದೆ ಟೆನ್ಸರ್ ಪ್ರಾಸೆಸಿಂಗ್ ಯೂನಿಟ್ ಅನ್ನ ಆದರೂ ರೇಡಿಯೇಶನ್ ಇಂದ ರಚಿಸಿಕೊಳ್ಳೋಕೆ ತುಂಬಾ ಕಷ್ಟ ಪಡಬೇಕಾಗುತ್ತೆ. ಸೌರ ಮಾರುತಗಳೆಲ್ಲ ಎದ್ದಾಗ ಇಮ್ಯಾಜಿನ್ ಮಾಡದಷ್ಟು ವಿಕಿರಣಗಳು ಒಟ್ಟಿಗೆ ನುಗ್ಗಿ ಬಂದುಬಿಡುತ್ತವೆ. ಇವು ಸದ್ಯಕ್ಕಿರೋ ಸಮಸ್ಯೆಗಳು. ಮುಂದೆ ಟೆಕ್ನಾಲಜಿ ಇಂಪ್ರೂವ್ ಆದಂತೆ ಇದನ್ನ ಸರಿಪಡಿಸಿಕೊಳ್ಳೋ ಅವಕಾಶ ಅಂತೂ ಇದ್ದೇ ಇರುತ್ತೆ ಅದನ್ನ ಮಾಡ್ತಾ ಹೋಗ್ತಾರೆ ವಿಜ್ಞಾನಿಗಳು ಸುಮ್ನೆ ಕೂರೋದಿಲ್ಲ. ಸೋ ಫ್ರೆಂಡ್ಸ್ ಇದಾಗಿತ್ತು ಹೇಗೆ ನಮ್ಮ ನಿಮ್ಮ ಡೇಟಾವನ್ನ ಸ್ಪೇಸ್ಗೆ ಕಳಿಸೋಕ್ಕೆ ಗೂಗಲ್ ಪ್ಲಾನ್ ಮಾಡಿದೆ ಅನ್ನೋದನ್ನ ಎಕ್ಸ್ಪ್ಲೈನ್ ಮಾಡೋ ಪ್ರಯತ್ನ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments