Thursday, November 20, 2025
HomeTech Tips and Tricksಗೂಗಲ್–ಇನ್‌ಸ್ಟಾಗ್ರಾಂ ನಿಷೇಧದ ಪರಿಣಾಮ?

ಗೂಗಲ್–ಇನ್‌ಸ್ಟಾಗ್ರಾಂ ನಿಷೇಧದ ಪರಿಣಾಮ?

ಅಮೆರಿಕ ಹಾಗೂ ಭಾರತದ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಜಗತ್ತಿಗೆ ಗೊತ್ತಿದೆ ಅಮೆರಿಕಾ ಭಾರತದ ಮೇಲೆ ನಿರ್ಬಂಧಗಳ ಮೇಲೆ ನಿರ್ಬಂಧಗಳನ್ನ ವಿಧಿಸುತ್ತಾ ಇದೆ ಆದರೆ ಭಾರತ ಮಾತ್ರ ಯಾವುದಕ್ಕೂ ಜಗ್ಗದೆ ಮುನ್ನುತಾ ಇದೆ ಅಮೆರಿಕ ಮಾಡ್ತಾ ಇರುವ ಕುತಂತ್ರಗಳು ಒಂದು ರೀತಿಯಲ್ಲಿ ಭಾರತಕ್ಕೆ ನೆಗೆಟಿವ್ ಆಗೋದರ ಬದಲು ಪಾಸಿಟಿವ್ ಆಗ್ತಾ ಇದೆ ಭಾರತ ಅಮೆರಿಕಾದ ಅವಲಂಬನೆಯಿಂದ ನಿಧಾನವಾಗಿ ಹೊರಬರ್ತಾ ಇದೆ ಹೀಗಿರುವಾಗ ಹುಚ್ಚು ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಏನು ಬೇಕಾದರೂ ಮಾಡುವ ಸಾಧ್ಯತೆ ಇರುತ್ತೆ ಜಸ್ಟ್ ಊಹೆ ಮಾಡಿಕೊಳ್ಳಿ ಟ್ರಂಪ್ ಏಕಾಏಕಿ ಬಂದು ನಮ್ಮ ಒಡತನದಲ್ಲಿರುವ ನಾವು ಭಾರತದಲ್ಲಿ ನಿಲ್ಲಿಸಿಬಿಡುತ್ತೇವೆ ಇನ್ನು ಮುಂದೆ ನಮ್ಮ ದೇಶದ ಒಡತನದಲ್ಲಿರುವ ಅಥವಾ ನಮ್ಮ ದೇಶದ ಕಂಪನಿಗಳ ಅಂಡರ್ನಲ್ಲಿ ಬರುವ ಸೋಶಿಯಲ್ ಮೀಡಿಯಾಗಳು ಭಾರತದಲ್ಲಿ ತಮ್ಮ ನಮ್ಮ ಕಾರ್ಯವನ್ನ ಸ್ಥಗಿತಗೊಳಿಸಲಿವೆ ಅಂತ ಹೇಳಿಕೆ ಕೊಟ್ಟುಬಿಟ್ರೆ ಆಗ ಭಾರತದ ಸಿಚುವೇಶನ್ ಹೇಗಿರಬೇಡ ಹೇಳಿ ನಾವು ದಿನ ಬೆಳಗ್ಗೆ ಎದ್ದು ಗುಡ್ ಮಾರ್ನಿಂಗ್ ಅಂತ ಸಂದೇಶ ಕಳಿಸುವ ವರ್ಕ್ ಆಗೋದಿಲ್ಲ Facebook ವರ್ಕ್ ಆಗೋದಿಲ್ಲ YouTube ನಲ್ಲಿ ವಿಡಿಯೋ ಮಾಡೋದಕ್ಕೆ ಆಗೋದಿಲ್ಲ Instagram ನಲ್ಲಿ ರೀಲ್ಸ್ ನೋಡೋದಕ್ಕೆ ಆಗೋದಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಗೂಗಲ್ ಅನ್ನೇ ಬಳಕೆ ಮಾಡೋದಕ್ಕೆ ಸಾಧ್ಯವಿಲ್ಲ ಕಾರಣ ಇದೆಲ್ಲ ಅಮೆರಿಕಾದ ಒಡತನದಲ್ಲಿ ಬರುವ ಕಂಪನಿಗಳು ನಾವೆಲ್ಲ ಸಧ್ಯದ ಮಟ್ಟಿಗೆ ಈ ಆಪ್ ಗಳಿಗೆ ಅಡಿಕ್ಟ್ ಆಗಿ ಹೋಗಿ ಿದ್ದೇವೆ ಹೀಗಾಗಿ ಏಕಾ ಏಕಿ ಇದನ್ನ ನಮ್ಮಲ್ಲಿ ಸ್ಥಗಿತ ಮಾಡಿಬಿಟ್ಟರೆ ನಮ್ಮ ನಿಮ್ಮ ಪರಿಸ್ಥಿತಿ ಹೇಗಾಗಬಹುದು ಅನ್ನೋದನ್ನ ಊಹೆ ಮಾಡಿಕೊಳ್ಳುವದಕ್ಕೆ ಕೂಡ ಸಾಧ್ಯವಿಲ್ಲ.

ನಮ್ಮ ದೇಶದಲ್ಲಿ ಈಗ ಈ ವಿಚಾರದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗೋದಕ್ಕೆ ಶುರುವಾಗಿದೆ ಅಮೆರಿಕಾದ ಒಡತನದಲ್ಲಿರುವ ಗೂಗಲ್ ಹಾಗೂ ಸೋಶಿಯಲ್ ಮೀಡಿಯಾಗಳು ಬ್ಯಾನ್ ಆದರೆ ಮಾಡೋದು ಅನ್ನುವ ಚರ್ಚೆಗಳು ನಡೀತಾ ಇದೆ. ಈ ಚರ್ಚೆಗಳಿಗೆ ಜೋಹೋದ ಸಂಸ್ಥಾಪಕ ಕೊಟ್ಟಿರುವ ಉತ್ತರಗಳು ಈಗ ಬಾರಿ ಸದ್ದು ಮಾಡ್ತಾ ಇದೆ. ಭಾರತ Facebook, YouTube, Instagram ಗೆ ಪರ್ಯಾಯವಾದ ಆಪ್ ಗಳು ರೆಡಿ ಮಾಡಬೇಕು ಅನ್ನುವ ಮಾತುಗಳು ಕೇಳಿ ಬಂದಿದೆ. ಅಷ್ಟಕ್ಕೂ ಭಾರತದಿಂದ Facebook, YouTube, Instagram ಗೆ ಪರ್ಯಾಯವಾದ ಆಪ್ ಗಳನ್ನ ಸೃಷ್ಟಿ ಮಾಡೋದಕ್ಕೆ ಸಾಧ್ಯನ ಜೋಹೋ ಸಂಸ್ಥಾಪಕರು ಈ ಬಗ್ಗೆ ಏನು ಹೇಳಿದ್ದಾರೆ ಭಾರತ ಸೋಶಿಯಲ್ ಮೀಡಿಯಾದ ವಿಚಾರದಲ್ಲಿ ಕೂಡ ಸ್ವಾವಲಂಬಿಯಾಗಿ ಬಿಡುತ್ತಾ ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ ಸ್ನೇಹಿತರೆ ಅಮೆರಿಕಾ ಭಾರತದ ಮೇಲೆ ತೆರಿಗೆ ಅಸ್ತ್ರ ಪ್ರಯೋಗ ಮಾಡುತಾ ಇದ್ದಂತೆ ಭಾರತ ಹೆಚ್ಚಿತ್ತುಕೊಂಡಿದೆ ಅಮೆರಿಕಾದ ಎದುರು ತಲೆಬಾಗುವ ಬದಲು ಅಮೆರಿಕಾದ ಅವಲಂಬನೆಯಿಂದ ದೂರವಾಗುವ ದಾರಿಯನ್ನ ಹೊಡಚಿಕೊಳ್ಳುತ್ತಾ ಇದೆ ಎಲ್ಲದಕ್ಕಿಂತ ಹೆಚ್ಚಾಗಿ ಭಾರತ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿದೆ ಅದರಲ್ಲೂ ಅಮೆರಿಕಾದ ಗೂಗಲ್ ಗೆ ಪರ್ಯಾಯವಾಗಿ ಜೋಹೋ ಅನ್ನುವ ಸಂಸ್ಥೆ ಸೆಡ್ಡು ಹೊಡೆದು ನಿಂತಿದೆ ಜೋಹೋ ಯಾವ ರೀತಿ ಕ್ರಾಂತಿ ಮಾಡಿದೆ ಅನ್ನುವ ಬಗ್ಗೆ ನಾವು ಈ ಹಿಂದೆಯೇ ಹಲವು ವಿಡಿಯೋಗಳಲ್ಲಿ ಹೇಳಿದ್ದೇವೆ.ಗೂಗಲ್ ಗೆ ಪರ್ಯಾಯವಾಗಿ ಹಲವು ವಿಚಾರಗಳನ್ನ ಜೋಹೋ ಈಗಾಗಲೇ ಮುನ್ನೆಲಿಗೆ ತಂದಿದೆ.

ಜಿಮೇಲ್ ಗೆ ಬದಲಾಗಿ ಜೋಹೋ ಮೇಲಿದೆವ ಗೆ ಬದಲಾಗಿ ಅರಟೈ ಆಪ್ ಇದೆ ಹೀಗೆಗೂಗಲ್ ನ ಬಹುತೇಕ ಕ್ಷೇತ್ರಗಳನ್ನ ಜೋಹೋ ನಿಧಾನವಾಗಿ ಆವರಿಸಿಕೊಳ್ಳುತ್ತಾ ಇದೆ. ಆದರೆ ಸೋಶಿಯಲ್ ಮೀಡಿಯಾಗಳಾದ YouTube, Instagram ಹಾಗೂ Facebook ನಂತಹ ಆಪ್ ಗಳಿಗೆ ಇಲ್ಲಿವರೆಗೆ ಯಾವುದೇ ಪರ್ಯಾಯ ಆಪ್ ಗಳು ಭಾರತದಲ್ಲಿ ಇಲ್ಲ. ಹೀಗಾಗಿ ಹುಚ್ಚು ಅಧ್ಯಕ್ಷ ಟ್ರಂಪ್ ಒಂದುವೇಳೆ ಈ ಸೋಶಿಯಲ್ ಮೀಡಿಯಾಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದ್ರೆ ಏನ್ು ಕಥೆ ಅನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೀತಾ ಇದೆ. ನಾವು ಪ್ಲಾನ್ ಬಿ ಯನ್ನ ಈಗಾಗಲೇ ರೆಡಿ ಮಾಡಿ ಇಟ್ಟುಕೊಳ್ಳಬೇಕು ಅಂತ ತುಂಬಾ ಜನ ಹೇಳ್ತಾ ಇದ್ದಾರೆ. ಈ ಚರ್ಚೆಗಳಿಗೆ ಜೋಹೋ ಸಂಸ್ಥಾಪಕ ಕೂಡ ರಿಪ್ಲೈ ಮಾಡಿದ್ದಾರೆ. ನಾವು ಟೆಕ್ ವಿಚಾರದಲ್ಲಿ ಬೇರೆ ದೇಶಗಳನ್ನೇ ಅವಲಂಬಿಸಿಕೊಂಡಿದ್ದೇವೆ. ಸೋಶಿಯಲ್ ಮೀಡಿಯಾದ ವಿಚಾರ ಒಂದು ಕಡೆ ಆದರೆ ಸಾಫ್ಟ್ವೇರ್ ಗಳು ಕೂಡ ಬೇರೆ ದೇಶಗಳದ್ದೇ ಇರೋದು. ಉದಾಹರಣೆಗೆ ನಾವು ಮೊಬೈಲ್ ಹಾಗೂ ಲ್ಯಾಪ್ಟಾಪ್ ಗಳಲ್ಲಿ ಬಳಕೆ ಮಾಡುವ ಸಾಫ್ಟ್ವೇರ್ ಗಳು ಕೂಡ ವಿದೇಶಗಳದ್ದೇ ಒಂದ apple ನ ಸಾಫ್ಟ್ವೇರ್ ಗಳನ್ನ ನಾವು ಬಳಕೆ ಮಾಡ್ತ್ತೇವೆ ಇಲ್ಲ ಅಂದ್ರೆ ಮೈಕ್ರೋಸಾಫ್ಟ್ ನ ಸಾಫ್ಟ್ವೇರ್ ಅನ್ನ ಬಳಕೆ ಮಾಡುತ್ತೇವೆ ಆಂಡ್ರಾಯ್ಡ್ ಸಾಫ್ಟ್ವೇರ್ ಕೂಡ ನಮ್ಮದಲ್ಲ ಈ ಮೊಬೈಲ್ ಗಳಲ್ಲಿ ಬಳಕೆ ಮಾಡುವ ಚಿಪ್ಗಳು ಕೂಡ ನಮ್ಮದಲ್ಲ ಹೀಗಾಗಿ ಈ ವಿಚಾರಗಳಲ್ಲಿ ನಾವು ಸ್ವಾವಲಂಬಿಗಳಾಗಬೇಕು ಮುಂದಿನ 10 ವರ್ಷಗಳಲ್ಲಿ ನಾವು ಪ್ಲಾನ್ ಮಾಡಿಕೊಂಡು ಟೆಕ್ ಅವಲಂಬನೆಯಿಂದ ಸಂಪೂರ್ಣವಾಗಿ ಹೊರಬರಬೇಕು ಅಂತ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಹೇಳಿಕೆ ನೀಡಿದ್ದಾರೆ. ಇವರು ಹೇಳೋದು ಕೂಡ ಸರಿಯಾಗಿ ಇದೆ.

ನಾವು ಟೆಕ್ ವಿಚಾರದಲ್ಲಿ ಬೇರೆ ದೇಶಗಳನ್ನ ಅವಲಂಬಿಸುವುದು ತುಂಬಾನೇ ಡೇಂಜರ್ ಒಂದುವೇಳೆ ಅವರು ನಮ್ಮ ವಿರುದ್ಧ ಯಾವುದಾದರೂ ಕ್ರಮ ಕೈಗೊಂಡರೆ ಅಥವಾ ನಿಷೇಧ ಹೇರಿಬಿಟ್ಟರೆ ನಮಗೆ ಬೇರೆ ಯಾವುದೇ ಪರ್ಯಾಯ ಮಾರ್ಗಗಳು ಇರೋದೇ ಇಲ್ಲ. ನಮ್ಮ ದೇಶ ಏಕಾಏಕಿ ನಿಂತು ಹೋಗಿ ಬಿಡುತ್ತೆ. ಇದು ಆರ್ಥಿಕತೆ ಮೇಲೆ ಕೂಡ ದೊಡ್ಡ ಪರಿಣಾಮ ಬೀರುತ್ತೆ. ಹೀಗಾಗಿ ಪರ್ಯಾಯ ಮಾರ್ಗಗಳನ್ನ ಹುಡುಕಲೇಬೇಕು ಅಂತ ಟೆಕ್ ದಿಗ್ಗಜರು ಹೇಳಿಕೆ ಕೊಡ್ತಾ ಇದ್ದಾರೆ. ಭಾರತ ಟೆಕ್ ವಿಚಾರದಲ್ಲಿ ಹೂಡಿಕೆ ಮಾಡುವುದನ್ನ ಶುರು ಮಾಡಬೇಕು ಮುಂದಿನ 10 ವರ್ಷಗಳಲ್ಲಿ ಸಂಪೂರ್ಣವಾಗಿ ನಮ್ಮದೇ ಆದ ಆಪ್ಗಳು ನಮ್ಮದೇ ಆದ ಸೋಶಿಯಲ್ ಮೀಡಿಯಾಗಳು ರೆಡಿ ಇರಬೇಕು ಅನ್ನೋದು ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರ ಸಜೆಶನ್ ನಮ್ಮವರು ಎಲ್ಲವನ್ನ ಬೇಗನೇ ಮರೆತುಬಿಡುತ್ತಾರೆ. ಅಮೆರಿಕಾ ಭಾರತದ ವಿರುದ್ಧ ತಿರುಗಿಬಿದ್ದ ಸಂದರ್ಭದಲ್ಲಿ ಅರಟೈ ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. WhatsApp ಗೆ ಪರ್ಯಾಯವಾಗಿರುವ ಭಾರತದ ಅರಟೈ ಡೌನ್ಲೋಡ್ ಆಗಿದ್ದಕ್ಕೆ ಲೆಕ್ಕವೇ ಇಲ್ಲ. ತುಂಬಾ ಜನ ಬಳಕೆ ಮಾಡೋದಕ್ಕೆ ಕೂಡ ಶುರು ಮಾಡಿದ್ರು ಆದರೆ ಈಗ ಮತ್ತೆ ಅದೇ WhatsAppಟ್ ಅನ್ನ ಬಳಕೆ ಮಾಡ್ತಾ ಇದ್ದಾರೆ. ಡೌನ್ಲೋಡ್ ಮಾಡಿ ಇಟ್ಟ ಅರಟೈ ಆಪ್ ಈಗ ಹಾಗೆ ಇದೆ. ನಮಗೆ WhatsApp ಟ್ ನ ಮೋಹ ಇನ್ನು ಕೂಡ ಕಡಿಮೆಯಾಗಿಲ್ಲ. ನಮ್ಮ ಜೋಶ್ ಏನಿದ್ರೂ ನಾಲ್ಕೈದು ದಿನಗಳು ಮಾತ್ರ ಭಾರತೀಯರಿಗೆ ಸ್ವಾಭಿಮಾನ ಅನ್ನೋದು ಇಲ್ಲವೇ ಇಲ್ಲ. ಇದ್ರೂ ಅದಕ್ಕೆ ಹೆಚ್ಚು ದಿನದ ವ್ಯಾಲಿಡಿಟಿ ಇಲ್ಲ. ಇದನ್ನ ನಾವು ಚೀನಿಯರ್ ಇಂದ ಕಲಿಬೇಕು. ಅಲ್ಲಿ ನಮ್ಮಲ್ಲಿ ಇರುವ ಹಾಗೆ WhatsApp, YouTube, Facebook, Instagram ಇದುಯಾವುದು ಇಲ್ಲ. ಇದಕ್ಕೆ ಪರ್ಯಾಯವಾದ ಆಪ್ ಗಳನ್ನ ಅವರು 10 ವರ್ಷದ ಹಿಂದೆಯೇ ಮಾಡಿ ಇಟ್ಟಿದ್ದಾರೆ.

ನಮ್ಮಲ್ಲಿ ಮಾಡಿದ್ರೆ ಅದಕ್ಕೆ ಸಪೋರ್ಟ್ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ ಹೀಗಾಗಿ ರಿಸ್ಕ್ ತೆಗೆದುಕೊಳ್ಳುದಕ್ಕೆ ಹೋಗೋದಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಆಗ್ತಾ ಇರುವ ಬದಲಾವಣೆಗಳನ್ನ ನೋಡಿದರೆ ನಾವು ಕೂಡ ಪ್ಲಾನ್ ಬಿ ಯನ್ನ ರೂಪಿಸಬೇಕಾದ ಅನಿವಾರ್ಯತೆ ಇದೆ ಹಾಗಂತ ನಾವು ಅಮೆರಿಕಾದ ವಿರುದ್ಧ ಇದ್ದೇವೆ ಅಂತಲ್ಲ ಆದರೆ ಅವಲಂಬಿಸಿಕೊಂಡಿರೋದು ತಪ್ಪು ಎಲ್ಲಾ ವ್ಯವಸ್ಥೆಗಳು ನಮ್ಮಲ್ಲಿಯೇ ಇದ್ದರೆ ಅಮೆರಿಕಾ ಅಲ್ಲ ಅಮೆರಿಕದ ಅಪ್ಪನಂತಹ ದೇಶಗಳು ನಮ್ಮ ವಿರುದ್ಧ ತಿರುಗಿಬಿದ್ದರು ನಾವು ಭಯಪಡಬೇಕಾದ ಅಗತ್ಯ ಇರೋದಿಲ್ಲ ಇದನ್ನೆಲ್ಲ ಪಕ್ಕಕ್ಕಿಟ್ಟು ಈಗ ಒಂದು ವಿಚಾರದ ಬಗ್ಗೆ ಮಾತನಾಡೋಣ ಅಸಲಿಗೆ ಟ್ರಂಪ್ ಭಾರತದಲ್ಲಿ ತಮ್ಮದೇಶ ದೇಶಕ್ಕೆ ಸೇರಿದ ಸೋಶಿಯಲ್ ಮೀಡಿಯಾ ಅಥವಾಗೂಗಲ್ ನಂತಹ ಆಪ್ ಗಳನ್ನ ಬ್ಯಾನ್ ಮಾಡೋದಕ್ಕೆ ಸಾಧ್ಯನ ಹಾಗೊಂದು ವೇಳೆ ಮಾಡಿದ್ರೆ ಅದರಿಂದ ಭಾರತಕ್ಕಿಂತ ಹೆಚ್ಚಾಗಿ ಅಮೆರಿಕಾಗೆ ಲಾಸ್ ಆಗೋದಿಲ್ವಾ ಈ ಆಂಗಲ್ ನಲ್ಲಿ ಕೂಡ ನಾವು ಚರ್ಚೆ ಮಾಡಬೇಕು. ಸ್ನೇಹಿತರೆ ಅಸಲಿ ವಿಚಾರಗಳನ್ನ ಹೇಳಿಬಿಡ್ತೀವಿ ಕೇಳಿ ಅಮೆರಿಕಾದ ಟೆಕ್ ಕಂಪನಿಗಳಾದಗೂಗಲ್ ಮೈಕ್ರೋಸಾಫ್ಟ್ ಮೆಟಾದಂತಹ ಸಂಸ್ಥೆಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆ ನಮ್ಮ ಮಾರ್ಕೆಟ್ನಿಂದಲೇ ವಾರ್ಷಿಕವಾಗಿ 40 ಬಿಲಿಯನ್ ಡಾಲರ್ ಹಣವನ್ನ ಇವುಗಳು ಸಂಪಾದನೆ ಮಾಡ್ತಾವೆ.

ಭಾರತದಿಂದ ಅಮೆರಿಕಾದ ಟೆಕ್ ಕಂಪನಿಗಳಿಗೆ ದೊಡ್ಡ ಪ್ರಮಾಣದ ಲಾಭ ಇದೆ. ಹೀಗೆ ಲಾಭ ಇರುವಾಗ ಯಾರು ಕೂಡ ಭಾರತದಲ್ಲಿ ತಮ್ಮ ಆಪ್ ಗಳನ್ನ ಬ್ಯಾನ್ ಮಾಡೋದಕ್ಕೆ ಹೋಗೋದಿಲ್ಲ. ಆದರೆ ಆಪ್ಗಳು ಖಾಸಗಿ ಕಂಪನಿಗಳದ್ದಾದರೂ ಕೂಡ ಅಮೆರಿಕಾ ಸರ್ಕಾರ ಈಗ ಒಂದು ರೀತಿ ಹುಚ್ಚನಂತೆ ವರ್ತನೆ ಮಾಡ್ತಾ ಇದೆ. ಅದಕ್ಕೆ ಇತ್ತೀಚಿಗೆ ಟ್ರಂಪ್ ತೆಗೆದುಕೊಂಡಿರುವ ಕೆಲವು ನಿರ್ಧಾರಗಳೇ ಸಾಕ್ಷಿ. ಟ್ರಂಪ್ಗೆ ತಲೆಕೆಟ್ಟುಬಿಟ್ಟರೆ ಲಾಸ್ ಆಗುತ್ತೆ ಅನ್ನೋದನ್ನ ಕೂಡ ನೋಡದೆ ಭಾರತದ ಮೇಲಿನ ಜಿದ್ದಿನಿಂದ ಇಂತದ್ದೊಂದು ಮೂರ್ಖತನದ ನಿರ್ಧಾರ ತೆಗೆದುಕೊಂಡರು ಅಚ್ಚರಿ ಇಲ್ಲ ಯಾರನ್ನ ನಂಬಿದ್ರು ಈ ಟ್ರಂಪ್ ಅನ್ನ ನಂಬುದಕ್ಕೆ ಸಾಧ್ಯವೇ ಇಲ್ಲ ಅಮೆರಿಕ ಇಲ್ಲಿವರೆಗೆ ಇಂತದ್ದೊಂದು ನಿರ್ಧಾರ ತೆಗೆದುಕೊಂಡಿಲ್ಲ ಸೋಶಿಯಲ್ ಮೀಡಿಯಾದ ವಿಚಾರದಲ್ಲಿ ಇಲ್ಲಿವರೆಗೆ ಎಲ್ಲೂ ಅಮೆರಿಕಾವೇ ಬ್ಯಾನ್ ಮಾಡಿದ ಇತಿಹಾಸವಿಲ್ಲ ಹಾಗಂತ ಮುಂದೆ ಮಾಡೋದಿಲ್ಲ ಅಂತ ಹೇಳೋದಕ್ಕೆ ಸಾಧ್ಯವಿಲ್ಲ ಹೀಗಾಗಿ ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು ಅವರು ಮಾಡಲಿ ಬಿಡಲಿ ನಾವು ನಮ್ಮ ದಾರಿ ನೋಡಿಕೊಳ್ಳೋಣ ಅಂತ ತುಂಬಾ ಜನ ಹೇಳ್ತಾ ಇದ್ದಾರೆ. ನಾವೇ ಎಲ್ಲವನ್ನ ರೆಡಿ ಮಾಡಿಕೊಂಡರೆ ನಮಗೆ ಒಳ್ಳೆಯದು ಆಗ ಯಾರಿಂದಲೂ ನಮ್ಮ ಮೇಲೆ ಬ್ಲಾಕ್ ಮೇಲ್ ಮಾಡೋದಕ್ಕೆ ಆಗೋದಿಲ್ಲ. ಇವತ್ತು ಚೀನಾ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಪ್ರಮುಖ ಕಾರಣಗಳಲ್ಲಿ ಪರ್ಯಾಯ ಮಾರ್ಗಗಳು ಕೂಡ ಒಂದು ಅವರು ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆ ರೂಪಿಸಿದ್ದಾರೆ. ಹೀಗಾಗಿ ನಾವು ಅಮೆರಿಕಾದ ಅವಲಂಬನೆಯಿಂದ ಹೊರಬಂದು ನಮ್ಮದೇ ಆದ ವ್ಯವಸ್ಥೆಗಳನ್ನ ರೂಪಿಸಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments