ಭಾರತದಲ್ಲಿ ಯಾವ ರೀತಿ ಡಿಜಿಟಲ್ ಕ್ರಾಂತಿ ಆಯ್ತು ಅನ್ನೋದು ನಿಮಗೆಲ್ಲ ಗೊತ್ತಿದೆ ಒಂದು ಜಿಬಿ ಗೆ 200 300 ರೂಪಾಯಿ ರೀಚಾರ್ಜ್ ಇದ್ದ ಸಂದರ್ಭದಲ್ಲಿ ಜಿಯೋ ಬಿರುಗಾಳಿಯೊಂದು ಬೀಸುತ್ತೆ ಜಿಯೋ ಯಾರು ಕೂಡ ಊಹೆ ಮಾಡಲಾಗದ ಆಫರ್ ಅನ್ನ ಟೆಲಿಫೋನ್ ಗ್ರಾಹಕರಿಗೆ ನೀಡಿಬಿಡುತ್ತೆ ವಾಯ್ಸ್ ಕರೆಗಳನ್ನ ಫ್ರೀಯಾಗಿ ನೀಡುತ್ತೆ ಇಂಟರ್ನೆಟ್ ಅನ್ನ ಕೂಡ ಲಿಮಿಟೆಡ್ ಆಗಿ ಕೊಟ್ಟುಬಿಡುತ್ತೆ ಮುಂದೆ ನಡೆದಿದ್ದು ಡಿಜಿಟಲ್ ಇಂಡಿಯಾ ಕ್ರಾಂತಿ ಜಿಯೋ ಇಂಥದೊಂದು ಆಫರ್ ಗಳನ್ನ ಕೊಟ್ಟಾಗ ಉಳಿದ ಎಲ್ಲಾ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಅನ್ನ ಬದಲಾವಣೆ ಮಾಡಿಕೊಳ್ಳುತ್ತವೆ ಅಲ್ಲಿಗೆ ಕೈಗೆಟಕುವ ದರದಲ್ಲಿ ಇಂಟರ್ನೆಟ್ ಸೇವೆ ಭಾರತೀಯರಿಗೆ ಸಿಗೋದಕ್ಕೆ ಶುರುವಾಯಿತು ಈಗ ಬೆಲೆ ಏರಿಕೆ ಮಾಡಿದ್ರು ಜನ ಅದನ್ನ ಬಳಕೆ ಮಾಡಿಯೇ ಮಾಡ್ತಾರೆ ಅನ್ನುವ ನಂಬಿಕೆ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗಿದೆ ಜನರ ಇದೇ ಅನಿವಾರ್ಯತೆಯನ್ನು ಬಳಸಿಕೊಂಡು ಈಗ ಎಲ್ಲಾ ಕಂಪನಿಗಳು ಸೇರಿಕೊಂಡು ಯಾವ ರೀತಿ ದರ ಏರಿಕೆ ಮಾಡಿವೆ ಅನ್ನೋದು ನಿಮಗೆಲ್ಲ ಗೊತ್ತಿರಬಹುದು ಅವರು ಮಾಡಿದ್ದೆ ರಿಚಾರ್ಜ್ ಪ್ಲಾನ್ ಅನ್ನುವ ರೀತಿ ಆಗಿದೆ ಇದೆಲ್ಲ ಇಂಟರ್ನೆಟ್ ಸೇವೆಗಳನ್ನ ಬಳಸುವವರ ವ್ಯತೆಯಾದರೆ ಕೀಪ್ಯಾಡ್ ಮೊಬೈಲ್ ಗಳನ್ನ ಬಳಸುವವರು ಕೂಡ ಅನಿವಾರ್ಯವಾಗಿ ಇಂಟರ್ನೆಟ್ ಸೇವೆಗಳ ರಿಚಾರ್ಜ್ ಅನ್ನೇ ಮಾಡಬೇಕಾಗುತ್ತೆ ಅದರಿಂದ ಅವರಿಗೆ ಉಪಯೋಗ ಇಲ್ಲದೆ ಇದ್ದರೂ ಟೆಲಿಕಾಂ ಕಂಪನಿಗಳು ಅವರಿಗೆ ಬೇರೆ ಆಯ್ಕೆಗಳನ್ನು ಕೊಡ್ತಾ ಇಲ್ಲ ಇದರಿಂದ ಬಡ ಕುಟುಂಬಗಳಿಗೆ ಕೇವಲ ಕೀಪ್ಯಾಡ್ ಮೊಬೈಲ್ಗಳನ್ನ ಬಳಸುವವರಿಗೆ ಇಂಟರ್ನೆಟ್ ಬಳಕೆ ಮಾಡದೆ ಇರುವವರಿಗೆ ದೊಡ್ಡ ಮಟ್ಟ ಹೊರೆಯಾಗ್ತಾ ಇದೆ ತಮಗೆ ಅಗತ್ಯ ಇಲ್ಲದೆ ಇದ್ದರೂ ಸ್ಮಾರ್ಟ್ ಫೋನ್ ಗಳ ರಿಚಾರ್ಜ್ ಗಳ ಮೊತ್ತದಲ್ಲೇ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದರಿಂದ ತುಂಬಾ ಜನರಿಗೆ ತೊಂದರೆ ಆಗ್ತಾ ಇದೆ ಅನ್ನೋದು ಟ್ರಾಯ್ ಅಂದರೆ ಟೆಲಿಕಾಂ ರೆಗುಲೇಟರಿ ಆಫ್ ಇಂಡಿಯಾಗೆ ಅರಿವಾಗಿದೆ ಹೀಗಾಗಿ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಅದೊಂದು ಖಡಕ್ ಸೂಚನೆಯನ್ನ ಕೊಟ್ಟುಬಿಟ್ಟಿದೆ ಇಂಟರ್ನೆಟ್ ಬಳಕೆ ಮಾಡದ ಗ್ರಾಹಕರಿಗೆ ಬೇರೆಯದ್ದೇ ರಿಚಾರ್ಜ್ ಪ್ಲಾನ್ ಅನ್ನ ಕೊಡಬೇಕು ಅಂತ ಎಚ್ಚರಿಕೆ ನೀಡಿದೆ ಟ್ರಾಯ್ ನೀಡಿದ ಈ ಎಚ್ಚರಿಕೆ ಟೆಲಿಕಾಂ ಕಂಪನಿಗಳನ್ನ ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಟ್ಟಿದೆ ಅಷ್ಟಕ್ಕೂ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಯಾವ ರೀತಿಯ ಸೂಚನೆಗಳನ್ನ ಕೊಟ್ಟಿದೆ ಟ್ರಾಯ್ ನ ಆದೇಶದ ಬಳಿಕ ರಿಚಾರ್ಜ್ ಪ್ಲಾನ್ ಗಳಲ್ಲಿ ಬದಲಾವಣೆ ಆಗುತ್ತಾ ಕೀಪ್ಯಾಡ್ ಮೊಬೈಲ್ ಗಳಿಗೆ ಅಥವಾ ಇಂಟರ್ನೆಟ್ ಬಳಸದ ಗ್ರಾಹಕರಿಗೆ ಯಾವೆಲ್ಲಾ ಸೌಲಭ್ಯಗಳು ದೊರಕಬಹುದು ಎಲ್ಲವನ್ನು ಡೀಟೇಲ್ ಆಗಿ ತೋರಿಸ್ತೀವಿ ನೋಡಿ ನಮ್ಮ ದೇಶದಲ್ಲಿ ದರೋಡೆ ಅನ್ನೋದು ಚೆನ್ನಾಗಿಯೇ ನಡೆಯುತ್ತೆ ನಮಗೆ ಗೊತ್ತಿಲ್ಲದೆ ನಮ್ಮನ್ನು ಯಾವ ರೀತಿ ಲೂಟಿ ಮಾಡ್ತಾರೆ ಅನ್ನೋದು ಗೊತ್ತೇ ಆಗೋದಿಲ್ಲ ಎಲ್ಲಾ ಗೊತ್ತಾದಾಗ ನಾವು ದಿವಾಳಿಯಾಗಿರ್ತೀವಿ ಅಷ್ಟೇ ಈ ಹಗಲು ದರೋಡೆ ಅನ್ನೋದು ಎಲ್ಲಾ ಕ್ಷೇತ್ರದಲ್ಲೂ ಇದೆ ಇದೇ ರೀತಿ ಟೆಲಿಕಾಂ ಕಂಪನಿಗಳು ಕೂಡ ಹಗಲು ದರೋಡೆ ಮಾಡ್ತಾ ಇವೆ ಅರೇ ಇವರದ್ದು ಯಾವ ರೀತಿಯ ಹಗಲು ದರೋಡೆ ಅಂತ ಕನ್ಫ್ಯೂಸ್ ಮಾಡಿಕೊಳ್ಳಬೇಡಿ ಮುಂದೆ ಹೋಗ್ತಾ ಹೋಗ್ತಾ ನಿಮಗೆ ಅರ್ಥವಾಗುತ್ತೆ ನಿಮಗೆಲ್ಲ ಗೊತ್ತಿರುವ ಹಾಗೆ ಈಗ ಸ್ಮಾರ್ಟ್ ಫೋನ್ ಯುಗ ಬಹುತೇಕ ಜನರು ಸ್ಮಾರ್ಟ್ ಫೋನ್ ಗಳನ್ನ ಬಳಕೆ ಮಾಡ್ತಾ ಇದ್ದಾರೆ ಹಾಗಂತ ಎಲ್ಲರೂ ಸ್ಮಾರ್ಟ್ ಫೋನ್ ಗಳನ್ನೇ ಬಳಕೆ ಮಾಡ್ತಾರಾ ಅಂತ ಕೇಳಿದರೆ ಖಂಡಿತವಾಗಿಯೂ ಇಲ್ಲ ನಿಮ್ಮ ಮನೆಯಲ್ಲೇ ತೆಗೆದುಕೊಂಡರೆ ಹಿರಿಯರು ಈಗಲೂ ಕೂಡ ಕೀಪ್ಯಾಡ್ ಮೊಬೈಲ್ ಗಳನ್ನೇ ಬಳಕೆ ಮಾಡ್ತಾರೆ.
ಸ್ಮಾರ್ಟ್ ಫೋನ್ ನ ಸಹವಾಸ ಬೇಡ ಅನ್ನುವವರು ಕೂಡ ಕೀಪ್ಯಾಡ್ ಮೊಬೈಲ್ ಗಳನ್ನ ಬಳಕೆ ಮಾಡ್ತಾರೆ ಇನ್ನು ಕೆಲವು ಹಳ್ಳಿ ಪ್ರದೇಶಗಳಲ್ಲಿ ಇಂಟರ್ನೆಟ್ ಗೆ ಬೇಕಾಗುವಷ್ಟು ನೆಟ್ವರ್ಕ್ ಇರೋದಿಲ್ಲ ಇಲ್ಲಿ ಕೂಡ ಸ್ಮಾರ್ಟ್ ಫೋನ್ ಗಳ ಬಳಕೆ ಕಡಿಮೆ ಇರುತ್ತೆ ಇಲ್ಲೇ ಹಗಲು ದರೋಡೆಯಾಗುವುದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಬೇಕಾಗುತ್ತೆ ಹೀಗಾಗಿ ಅವರು ಇಂಟರ್ನೆಟ್ ಪ್ಯಾಕ್ ಗಳನ್ನೇ ರಿಚಾರ್ಜ್ ಮಾಡ್ತಾರೆ ಆದರೆ ಕೀಪ್ಯಾಡ್ ಮೊಬೈಲ್ ಬಳಸುವವರಿಗೆ ಇಂಟರ್ನೆಟ್ ನಿಂದ ಏನೇನು ಪ್ರಯೋಜನವಿಲ್ಲ ಆದರೂ ರಿಚಾರ್ಜ್ ಮಾಡುವಾಗ ಮಾತ್ರ ಇಂಟರ್ನೆಟ್ ಪ್ಯಾಕ್ ಗಳನ್ನೇ ರಿಚಾರ್ಜ್ ಮಾಡಬೇಕು ಕೇವಲ ಕರೆ ಮತ್ತು ಎಸ್ಎಂಎಸ್ ಗೆ ಯಾವುದೇ ರೀತಿಯ ರಿಚಾರ್ಜ್ ಪ್ಲಾನ್ ಸದ್ಯಕ್ಕೆ ಇಲ್ಲವೇ ಇಲ್ಲ ಇದರಿಂದ ಕೀಪ್ಯಾಡ್ ಬಳಕೆದಾರರಿಗೆ ಅಥವಾ ಇಂಟರ್ನೆಟ್ ಅನ್ನ ಬಳಕೆ ಮಾಡದೆ ಇದ್ದವರಿಗೆ ಅವರಿಗೆ ಗೊತ್ತಿಲ್ಲದ ಹಾಗೆ ದೊಡ್ಡ ಮಟ್ಟದಲ್ಲಿ ನಷ್ಟವಂತು ಖಂಡಿತವಾಗಿಯೂ ಆಗಿದೆ ಅದು ನಮಗೆ ಇಲ್ಲಿವರೆಗೆ ಅರ್ಥವಾಗಲಿಲ್ಲ ಅಷ್ಟೇ ಇದರಿಂದ ದುಡ್ಡು ಮಾಡಿದ್ದು ಟೆಲಿಕಾಂ ಕಂಪನಿಗಳು ಮಾತ್ರ ಇದೊಂದು ರೀತಿ ಟೆಲಿಕಾಂ ಕಂಪನಿಗಳು ಮಾಡ್ತಾ ಇರುವ ಸರ್ವಾಧಿಕಾರ ಅಂದ್ರು ತಪ್ಪಾಗುವುದಿಲ್ಲ ಬೇರೆ ಆಯ್ಕೆಯನ್ನೇ ಕೊಡದೆ ಇದನ್ನೇ ಮಾಡಬೇಕು ಅನ್ನುವ ನೀತಿಯನ್ನ ಸರ್ವಾಧಿಕಾರ ಅಂತಾನೆ ಕರಿಬೇಕು ಈಗ ರಿಚಾರ್ಜ್ ಮಾಡಬೇಕಿದ್ದರೂ ಡೇಟಾ ಪ್ಯಾಕ್ ಗಳನ್ನೇ ರೀಚಾರ್ಜ್ ಮಾಡಬೇಕು ಇದರಿಂದ ನಿಮಗೆ ಉಪಯೋಗ ಇದೆಯೋ ಇಲ್ವೋ ಅನ್ನೋದನ್ನ ಟೆಲಿಕಾಂ ಕಂಪನಿಗಳು ನೋಡೋದೇ ಇಲ್ಲ ಹೀಗಾಗಿ ಗ್ರಾಹಕರು ಅನಿವಾರ್ಯವಾಗಿ ಬೇರೆ ದಾರಿ ಇಲ್ಲದೆ ಇರುವ ರಿಚಾರ್ಜ್ ಗಳನ್ನೇ ಮಾಡ್ತಾ ಬರ್ತಾ ಇದ್ದಾರೆ ನಾಲ್ಕೈದು ವರ್ಷದ ಹಿಂದಿನ ರಿಚಾರ್ಜ್ ಪ್ಲಾನ್ ಗೂ ಈಗಿನ ರಿಚಾರ್ಜ್ ಪ್ಲಾನ್ ಗೂ ತುಂಬಾನೇ ವ್ಯತ್ಯಾಸ ಇದೆ.
ಹಿಂದೆಲ್ಲ ಹೆಚ್ಚು ಅಂದ್ರೆ 90 ದಿನದ ರಿಚಾರ್ಜ್ ಪ್ಲಾನ್ ಇರ್ತಾ ಇತ್ತು ಈಗ ಒಂದು ವರ್ಷದವರೆಗೆ ರಿಚಾರ್ಜ್ ಪ್ಲಾನ್ ಇದೆ ಆದರೆ ಒಂದು ತಿಂಗಳ ರಿಚಾರ್ಜ್ ಪ್ಲಾನ್ ಇಲ್ಲ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ ಅರೆ ಏನ್ ಹೇಳ್ತಿದ್ದೀರಾ ನಾವು ಪ್ರತಿ ತಿಂಗಳು ರಿಚಾರ್ಜ್ ಮಾಡಿಸ್ತೀವಿ ಅಲ್ವಾ ಅದು ಮಂತ್ಲಿ ಪ್ಯಾಕ್ ತಾನೇ ಅಂತ ನೀವು ಕೇಳಬಹುದು ಖಂಡಿತವಾಗಿಯೂ ಅದು ಮಂತ್ಲಿ ಪ್ಯಾಕ್ ಅಲ್ಲವೇ ಅಲ್ಲ ಅದು 28 ದಿನಗಳ ರೀಚಾರ್ಜ್ ಅಷ್ಟೇ ಇದರಲ್ಲೂ ಕೂಡ ನಾವು ಮೋಸ ಹೋಗಿದ್ದು ನಮಗೆ ಗೊತ್ತೇ ಆಗೋದಿಲ್ಲ ಇದೇ ರೀತಿ ಇಂಟರ್ನೆಟ್ ಅಗತ್ಯ ಇಲ್ಲದೆ ಇದ್ದವರಿಗೆ ಕೂಡ ಇಂಟರ್ನೆಟ್ ರೀಚಾರ್ಜ್ ಅನ್ನೇ ಮಾಡಿಸೋದಕ್ಕೆ ಹೇಳಿ ಈಗ ಟೆಲಿಕಾಂ ಕಂಪನಿಗಳು ಲೂಟಿ ಮಾಡ್ತಾ ಇವೆ ಸ್ನೇಹಿತರೆ ನಿಮಗೆ ಗೊತ್ತಿರಲಿ ಈಗಲೂ ನಮ್ಮ ದೇಶದಲ್ಲಿ 15 ಕೋಟಿ ಜನ ಕೀಪ್ಯಾಡ್ ಮೊಬೈಲ್ ಗಳನ್ನ ಬಳಕೆ ಮಾಡ್ತಾ ಇದ್ದಾರೆ ಇವರಿಗೆಲ್ಲ ಇಂಟರ್ನೆಟ್ ನ ಅಗತ್ಯ ಇರೋದಿಲ್ಲ ಆದರೂ ಅವರು ರಿಚಾರ್ಜ್ ಮಾಡಿಸುವಾಗ ಇಂಟರ್ನೆಟ್ ಪ್ಯಾಕ್ ನಲ್ಲೇ ರೀಚಾರ್ಜ್ ಮಾಡಬೇಕಾಗುತ್ತೆ ಟೆಲಿಕಾಂ ಕಂಪನಿಗಳು ಮಾಡ್ತಾ ಇರುವ ಈ ಲೂಟಿಯನ್ನ ಟ್ರಾಯ್ ಸೂಕ್ಷ್ಮವಾಗಿ ಗಮನಿಸಿ ಇದೇ ಕಾರಣಕ್ಕಾಗಿ ಟ್ರಾಯ್ ಕೆಲವೊಂದು ಸೂಚನೆಗಳನ್ನ ಟೆಲಿಕಾಂ ಕಂಪನಿಗಳಿಗೆ ನೀಡಿಬಿಟ್ಟಿದೆ ಹೌದು ಇಂಟರ್ನೆಟ್ ಬಳಸಿದ ಗ್ರಾಹಕರಿಗೆ ಪ್ರತ್ಯೇಕ ಟ್ಯಾರಿಫ್ ಪ್ಲಾನ್ ಗಳನ್ನ ಆರಂಭಿಸುವಂತೆ ಟ್ರಾಯ್ ಆದೇಶ ನೀಡಿದೆ ಕೇವಲ ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಬಳಸುವ ಸಾಮಾನ್ಯ ಗ್ರಾಹಕರನ್ನ ಗಮನದಲ್ಲಿ ಇಟ್ಟುಕೊಂಡು ಈ ಪ್ಲಾನ್ ಗಳನ್ನ ರೂಪಿಸುವಂತೆ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ ದೇಶದ ಸಾವಿರಾರು ಜನರು ಇಂಟರ್ನೆಟ್ ಇಲ್ಲದೆ ಕೇವಲ ಸಾಮಾನ್ಯ ಕರೆಗಳಿಗಾಗಿ ಮೊಬೈಲ್ ಉಪಯೋಗಿಸುತ್ತಿದ್ದಾರೆ ಅದರಲ್ಲೂ ವಯೋಸಹಜ ಹಿರಿಕರೆ ಇದರಲ್ಲಿ ಜಾಸ್ತಿ ಇದ್ದಾರೆ ಹೀಗಾಗಿ ಅವರಿಗಾಗಿ ಪ್ರತ್ಯೇಕ ಟ್ಯಾರಿಫ್ ಪ್ಲಾನ್ ಗಳನ್ನ ಪರಿಚಯಿಸುವಂತೆ ಮೊಬೈಲ್ ಸೇವಾ ಕಂಪನಿಗಳಿಗೆ ಟ್ರಾಯ್ ಆದೇಶ ನೀಡಿದೆ ಈಗ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಈ ಸೌಲಭ್ಯವಿಲ್ಲ ಇಂಟರ್ನೆಟ್ ಬಳಸದ ಸಾವಿರಾರು ಜನ ಈಗಲೂ ಸಾಮಾನ್ಯ ಕೀಪ್ಯಾಡ್ ಹೊಂದಿರುವ ಮೊಬೈಲ್ ಫೋನ್ ಗಳನ್ನು ಬಳಸುತ್ತಾರೆ ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚಾಗಿದೆ ಹೀಗಾಗಿ ಅಂತವರು ಅನಿವಾರ್ಯವಾಗಿ ಹೆಚ್ಚುವರಿ ಶುಲ್ಕ ನೀಡಿ ರಿಚಾರ್ಜ್ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಇದರಿಂದ ಅಂತಹ ಗ್ರಾಹಕರಿಗೆ ನಷ್ಟ ಉಂಟಾಗುತ್ತದೆ ಆಗುತ್ತಿದೆ ಹೀಗಾಗಿ ಸಿಂಪಲ್ ಆಗಿರುವ ಕರೆ ಯೋಜನೆಗಳನ್ನು ನೀಡುವಂತೆ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಸೂಚಿಸಿದೆ.
ಟ್ರಾಯ್ ನ ಈ ಸೂಚನೆಯಿಂದ 15 ಕೋಟಿ ಜನರಿಗೆ ಖಂಡಿತವಾಗಿಯೂ ಲಾಭವಾಗಲಿದೆ ಕೇವಲ 15 ಕೋಟಿ ಜನರಿಗೆ ಮಾತ್ರವಲ್ಲ ತುಂಬಾ ಜನ ಡ್ಯೂಲ್ ಸಿಮ್ ಬಳಕೆ ಮಾಡುವವರಿದ್ದಾರೆ ನೀವು ಕೂಡ ಡ್ಯೂಲ್ ಸಿಮ್ ಅನ್ನ ಬಳಕೆ ಮಾಡ್ತಾ ಇರಬಹುದು ಎರಡು ಸಿಮ್ ಗೆ ಕೂಡ ಇಂಟರ್ನೆಟ್ ರಿಚಾರ್ಜ್ ಮಾಡುವ ಅಗತ್ಯ ಇರೋದಿಲ್ಲ ಹಾಗಂತ ರಿಚಾರ್ಜ್ ಮಾಡದೆ ಇದ್ದರೆ ಇನ್ಕಮಿಂಗ್ ಕಾಲ್ ಕೂಡ ಬರೋದಿಲ್ಲ ಇದು ಟೆಲಿಕಾಂ ಕಂಪನಿಗಳ ಬುದ್ಧಿವಂತಿಕೆ ಈ ಬುದ್ಧಿವಂತಿಕೆಯಿಂದ ತೊಂದರೆ ಆಗ್ತಾ ಇರೋದು ಸಾಮಾನ್ಯ ಜನಕ್ಕೆ ಅಗತ್ಯ ಇಲ್ಲದೆ ಇದ್ದರೂ ಎರಡು ಸಿಮ್ ಗಳಿಗೆ ರಿಚಾರ್ಜ್ ಮಾಡಲೇಬೇಕಾದ ಅನಿವಾರ್ಯತೆ ನಿಮ್ಮಲ್ಲಿ ತುಂಬಾ ಜನಕ್ಕೆ ಆಗಿರಬಹುದು ಈಗ ಟ್ರಾಯ್ ಸೂಚನೆಯಿಂದ ಪ್ರತ್ಯೇಕ ರಿಚಾರ್ಜ್ ವ್ಯವಸ್ಥೆ ಬಂದುಬಿಟ್ಟರೆ ಇದರಿಂದ ತುಂಬಾ ಜನಕ್ಕೆ ಸಹಾಯವಾಗಲಿದೆ ನಮಗೆ ಲಾಭವಾಗುತ್ತೆ ಅಂದ್ರೆ ಟೆಲಿಕಾಂ ಕಂಪನಿಗಳಿಗೆ ಖಂಡಿತವಾಗಿಯೂ ನಷ್ಟವಾಗುತ್ತೆ ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಿ 15 ಕೋಟಿ ಜನ ಬಳಕೆದಾರರಿಂದ ಬರ್ತಾ ಇದ್ದ ಪಕ್ಕಟ್ಟೆ ಹಣ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತೆ ಅಂದ್ರೆ ಟೆಲಿಕಾಂ ಕಂಪನಿಗಳಿಗೆ ಅದೆಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು ಇದೇ ಕಾರಣಕ್ಕಾಗಿ ಟೆಲಿಕಾಂ ಕಂಪನಿಗಳು ಬೊಬ್ಬೆ ಹೊಡೆಯುವುದಕ್ಕೆ ಶುರುಮಾಡಿವೆ ನೀವು ಕೊಟ್ಟಿರುವ ಆದೇಶವನ್ನ ಪಾಲನೆ ಮಾಡಿದ್ರೆ ನಾವು ದಿವಾಳಿ ಆಗಬೇಕಾಗುತ್ತೆ ಅಂತ ಪ್ರಾಧಿಕಾರದ ಆದೇಶಕ್ಕೆ ಟೆಲಿಕಾಂ ಸೇವಾ ಕಂಪನಿಗಳು ಅಸಮಾಧಾನ ಹೊರಹಾಕಿವೆ ಅಷ್ಟೇ ಅಲ್ಲ ಇಂತದೊಂದು ನಿಯಮ ಜಾರಿಯಾಗ್ಬಿಟ್ಟರೆ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಹೊಡೆತ ಬೀಳಲಿದೆ ಅಂತ ಟೆಲಿಕಾಂ ಕಂಪನಿಗಳು ಆಪಾದಿಸಿವೆ ಇಂತಹ ರಿಚಾರ್ಜ್ ಪ್ಲಾನ್ ಜಾರಿಗೆ ಬಂದರೆ ಎಲ್ಲರೂ ಇಂಟರ್ನೆಟ್ ಬಳಕೆ ಮಾಡುವುದನ್ನೇ ಕಡಿಮೆ ಮಾಡಿಕೊಳ್ಳುತ್ತಾರೆ ಅಲ್ಲಿಗೆ ನಿಮ್ಮ ಕನಸಿನ ಡಿಜಿಟಲ್ ಇಂಡಿಯಾ ಕೇವಲ ಕನಸಾಗಿಯೇ ಉಳಿಯುತ್ತೆ ಅಂತ ಟೆಲಿಕಾಂ ಕಂಪನಿಗಳು ಹೇಳುತ್ತಿವೆ ಇದೊಂದು ರೀತಿಯ ಬ್ಲಾಕ್ ಮೈಲ್ ಅಂದ್ರು ತಪ್ಪಾಗುವುದಿಲ್ಲ ಅದೇನೇ ಇರಲಿ ಟ್ರಾಯ್ ಹೊಸ ಬದಲಾವಣೆ ತರೋದಕ್ಕೆ ಮುಂದಾಗಿದೆ ಈ ಆದೇಶವನ್ನ ಮುಂದಿನ ದಿನಗಳಲ್ಲಿ ಟೆಲಿಕಾಂ ಕಂಪನಿಗಳು ಯಾವ ರೀತಿ ಪಾಲನೆ ಮಾಡುತ್ತವೆ.


