ಸೈಬರ್ ಕ್ರೈಮ್ ವಿರುದ್ಧ ರಣಾಸ್ತ್ರ ಬಂತು ಸಂಚಾರ್ ಸಾಥಿ ಆಪ್ ಒಂದೇ ಆಪ್ ನಲ್ಲಿ ಎಲ್ಲಾ ಸಮಸ್ಯೆಗೆ ಸೊಲ್ಯೂಷನ್ ನಿಮ್ಮ ಫೋನ್ನಲ್ಲಿ ಕೇಂದ್ರ ಸರ್ಕಾರ ಹೇಳಿರೋ ಈ ಆಪ್ ಇನ್ಮೇಲೆ ಕಡ್ಡಾಯ ಅಂತ ಸರ್ಕಾರ ಹೆಜ್ಜೆ ಇಟ್ಟಿದೆ ಪ್ರತಿಯೊಬ್ಬರ ಫೋನ್ ಹೊಸ ಫೋನ್ ತಂಡಾಗಲೂ ಇನ್ಸ್ಟಾಲ್ ಆಗಿನೆ ಬರುತ್ತೆ ನೆಕ್ಸ್ಟ್ ಇರೋ ಫೋನ್ಗಳಿಗೂ ಕೂಡ ಕಡ್ಡಾಯವಾಗಿ ಇನ್ಸ್ಟಾಲ್ ಆಗುತ್ತೆ ಅನ್ನೋದು ಈಗ ದೊಡ್ಡ ಕೋಲಾಹಲಕ್ಕೆ ಕಾರಣ ಆಗಿದೆ ಸರ್ಕಾರ ಸೈಬರ್ ಸೆಕ್ಯೂರಿಟಿಗೆ ಇರಿ ಅಂತ ಹೇಳ್ತಾ ಇದ್ರೆ ಅಪೋಸಿಷನ್ ಅವರು ವಿರೋಧ ಪಕ್ಷದವರು ಕಣ್ಣಗಾವಲಿ ಇಡೋಕೆ ಸರ್ವೆಲೆನ್ಸ್ ಮಾಡೋಕೆ ಗೂಡಚರ್ಯ ಮಾಡೋಕೆ ಮೋದಿ ನಿಮ್ಮ ಮೇಲೆ ಕಳ್ಳಗಣ್ಣು ಇಡ್ತಾರೆ ಫೋನ್ ಮೂಲಕ ಅಂತ ಹೇಳಿ ಆರೋಪಗಳನ್ನ ಮಾಡ್ತಿದ್ದಾರೆ ಸರ್ವಾಧಿಕಾರ ಇದು ಅಂತ ಹೇಳ್ತಿದ್ದಾರೆ ಹಾಗಿದ್ರೆ ಡೀಟೇಲ್ ಆಗಿ ನೋಡ್ತಾ ಹೋಗೋಣ ಎಲ್ಲಾ ಸ್ಮಾರ್ಟ್ ಫೋನ್ ತಯಾರಕರು ಕಂಪಲ್ಸರಿ ಈ ಆಪ್ ಅನ್ನ ಹಾಕಿನೆ ಗವರ್ನಮೆಂಟ್ನ ಆಪ್ ಅನ್ನ ಫೋನ್ಲ್ಲಿ ಹಾಕಿನೆ ಕೊಡಬೇಕು ಅಂತ ಸರ್ಕಾರ ಹೇಳ್ತಿರೋದು ಯಾಕೆ ಅದರಲ್ಲೂ ಕೂಡ ಫೋನ್ ಆನ್ ಆದ ತಕ್ಷಣ ಈ ಸಂಚಾರ ಸಾತಿ ಆಪ್ ಅದರಲ್ಲಿ ಇರಬೇಕು ಅಂತ ಹೇಳಿದೆ ಕಾಣಬೇಕು ಅಂತ ಹೇಳಿದೆ ಹೊಸ ಫೋನ್ ಮ್ಯಾನುಫ್ಯಾಕ್ಚರ್ ಮಾಡಬೇಕಾದ್ರೆ ಹಾಕಿನೇ ಕಳಿಸಬೇಕು ಆಲ್ರೆಡಿ ಇರೋ ಫೋನ್ಗಳಿಗೆ ಅಪ್ಡೇಟ್ ಮೂಲಕ ನೀವೇ ಪುಶ್ ಮಾಡಿ ಇನ್ಸ್ಟಾಲ್ ಮಾಡಿಸಬೇಕು ಅಂತ ಹೇಳಿದೆ ಕೇಂದ್ರ ಸರ್ಕಾರ ಹೇಳ್ತಿರೋ ಪ್ರಕಾರ ಸೈಬರ್ ಕ್ರೈಮ್ ತುಂಬಾ ಜಾಸ್ತಿ ಆಗ್ತಿರೋ ಟೈಮ್ನಲ್ಲಿ ಇದು ಅನಿವಾರ್ಯ ಯುದ್ಧೋಪಾದಿಯಲ್ಲಿ ಕೆಲಸ ನಾವು ಮಾಡಬೇಕು ಅಂತ ಜನ ಕೋಟ್ಯಾಂತರ ರೂಪಾಯಿ ದುಡ್ಡನ್ನ ಕಳೆಕೊಳ್ತಿದ್ದಾರೆ.
ಸಾವಿರಾರು ಕೋಟಿಗಳಲ್ಲಿ ಲಾಸ್ ಆಗ್ತಿದೆ ಮೋಸ ಹೋಗ್ತಿದ್ದಾರೆ ಇದು ಮಾಡ್ಲೇಬೇಕು ಅನ್ನೋದು ಸರ್ಕಾರದ ವಾದ ಇದರಲ್ಲಿ ಸೈಬರ್ ಕ್ರೈಮ್ ರಿಪೋರ್ಟ್ ಮಾಡೋದ್ರಿಂದ ಹಿಡಿದು ಕಳೆದು ಹೋಗಿರೋ ನಿಮ್ಮ ಮೊಬೈಲ್ ಟ್ರಾಕ್ ಮಾಡೋದು ಬ್ಲಾಕ್ ಮಾಡೋದು ನಿಮ್ಮ ಹೆಸರು ಲ್ಲಿ ಬೇರೆ ಯಾರಾದ್ರೂ ಮೊಬೈಲ್ ಕನೆಕ್ಷನ್ ತಗೊಂಡಿದ್ದಾರಾ ಅಂತ ಚೆಕ್ ಮಾಡೋದು ಈಗ ಸಾಕಷ್ಟು ಪರ್ಸನಲ್ ಹಾಗೂ ಹಣಕಾಸಿನ ವ್ಯವಹಾರಗಳಿಗೆ ಈ ಆಪ್ ಭದ್ರತೆ ಕೊಟ್ಟು ಸೇಫ್ ಮಾಡುತ್ತೆ ಅಂತ ಸರ್ಕಾರ ಹೇಳಿದೆ. ಹಾಗಾದ್ರೆ ಅಪೋಸಿಷನ್ನ ವಿರೋಧ ಯಾಕೆ ಏನಿದು ಆಪ್ ಇದನ್ನ ಬಳಸಿ ಸೈಬರ್ ಕ್ರೈಮ್ ಸಂಚಾರ್ ಸಾಥಿ ಆಪ್ ಕೇಂದ್ರ ಸಂಪರ್ಕ ಸಚಿವಾಲಯ ಅಥವಾ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ಸಂಚಾರ್ ಸಾಥಿ ಆಪ್ ಅನ್ನ ಲಾಂಚ್ ಮಾಡಿದೆ ಟೆಲಿಕಾಂ ಭದ್ರತೆ ಬಿಗಿ ಮಾಡೋದಕ್ಕೆ ಅಂತಲೇ ಡಿಸೈನ್ ಆಗಿರೋ ಯೂಸರ್ ಫ್ರೆಂಡ್ಲಿ ಪ್ಲಾಟ್ಫಾರ್ಮ್ ಇದು ಆಂಡ್ರಾಯ್ಡ್ ಹಾಗೂ ಐಓಎಸ್ ಗಳಲ್ಲಿ ಇದನ್ನ ಇನ್ಸ್ಟಾಲ್ ಮಾಡ್ಕೊಬಹುದು ನಿಮಗೆ ಗೊತ್ತಿರಲಿ ಭಾರತದಲ್ಲಿ ಪ್ರತಿದಿನ ಸರಾಸರಿ 7000ಕ್ಕೂ ಅಧಿಕ ಸೈಬರ್ ಕ್ರೈಮ್ ರೆಕಾರ್ಡ್ ಆಗ್ತಿವೆ ಎಸ್ ಒಂದು ದಿನಕ್ಕೂ 7000ಕ್ಕೂ ಅಧಿಕ ಕೇಸಸ್ 2024ರ ಮೊದಲ ನಾಲ್ಕು ತಿಂಗಳಲ್ಲೇ ಬರೋಬರಿ 7 ಲಕ್ಷ 40957 ಕೇಸುಗಳು ದಾಖಲಾಗಿದ್ವು ಇವುಗಳಲ್ಲಿ ಜನ ಬರೋಬರಿ 1133 ಕೋಟಿ ರೂಪಾಯಿ ಕಳೆಕೊಂಡಿದ್ದನ್ನ ಕುದ್ದು ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಡೇಟಾನೇ ಹೇಳುತ್ತೆ ಸ್ಟಾಕ್ ಟ್ರೇಡಿಂಗ್ಗೆ ಸಂಬಂಧಪಟ್ಟ ಸ್ಕ್ಯಾಮ್ ಗಳಾಗ್ತಿವೆ ಬೇರೆ ಬೇರೆ ಇನ್ವೆಸ್ಟ್ಮೆಂಟ್ ಗೆ ಸಂಬಂಧಪಟ್ಟಂತೆ ಸ್ಕ್ಯಾಮ್ಸ್ ಆಗ್ತಿವೆ ಡಿಜಿಟಲ್ ಅರೆಸ್ಟ್ ಫ್ರಾಡ್ ನಡೀತಾ ಇವೆ ಅಂದ್ರೆ ನಾವು ಇಡಿ ಆಫೀಸರ್ಸ್ ನಾವು ಪೊಲೀಸ್ನವರು ಅಂತೆಲ್ಲ ಹೇಳ್ಕೊಂಡು ಸುಳ್ಳು ಹೇಳಿ ಸುಲಿಗೆ ಮಾಡ್ತಿದ್ದಾರೆ ಫೇಕ್ ಇಮೇಲ್ ಫೇಕ್ ವೆಬ್ಸೈಟ್ ಬಳಸಿ ಸ್ಕ್ಯಾಮ್ ಮಾಡಲಾಗ್ತಿದೆ ಫೋನ್ಗಳಲ್ಲಿ ರಾನ್ಸಮ್ ವೇರ್ ಇನ್ಸ್ಟಾಲ್ ಆಗೋ ಲಿಂಕ್ ಅನ್ನ ಕಳಿಸಿ ಡೇಟಾ ಕಳುವು ಮಾಡಿ ಬ್ಲಾಕ್ ಮೈಲ್ ಮಾಡ್ತಾ ಇದ್ದಾರೆ ಗೇಮಿಂಗ್ ಆಪ್ ಲೋನ್ ಆಪ್ ಫ್ರಾಡ್ ಜಾಬ್ ಆಫರ್ ಫ್ರಾಡ್ ಓಟಿಪಿ ಸ್ಕ್ಯಾಮ್ ಗಳು ಹೀಗೆ ಬೇಕಾದಷ್ಟು ರೀತಿ ಸೈಬರ್ ಕ್ರೈಮ್ಸ್ ನಡೀತಾ ಇವೆ ಫ್ರಾಡ್ ನಡೀತಾ ಇದೆ ಹೊಸ ಹೊಸ ವಿಧಾನಗಳು ಹುಡ್ಕೊಳ್ತಾ ಇವೆ ಸ್ಕ್ಯಾಮರ್ಗಳು ಎಐ ಬಳಸಿ ಡೀಪ್ ಫೇಕ್ ವಿಡಿಯೋಸ್ ಬಳಸಿ ಕೂಡ ವಂಚನೆ ಮಾಡೋಕೆ ಶುರು ಮಾಡಿದ್ದಾರೆ.
ಸರ್ಕಾರ ಕೂಡ ಸೈಬರ್ ಕ್ರೈಮ್ ಕಂಟ್ರೋಲ್ ಗೆ ಸಾಕಷ್ಟು ದಾರಿಗಳನ್ನ ಹುಡುಕ್ತಾ ಇದೆ ಅದರಲ್ಲಿ ಈ ಸಂಚಾರ ಸಾತಿ ಆಪ್ ಕೂಡ ಒಂದು ಇದರಲ್ಲಿ ಏನೇನು ಫೀಚರ್ ಿದೆ ಅಂತ ನಾವಈಗ ಕ್ವಿಕ್ ಆಗಿ ಒನ್ ಬೈ ಒನ್ ನೋಡ್ತಾ ಹೋಗೋಣ ಚಕ್ಷು ಚಕ್ಷು ಅಂದ್ರೆ ಫ್ರಾಡ್ ಕಮ್ಯುನಿಕೇಶನ್ ರಿಪೋರ್ಟ್ ಮಾಡೋ ಫೀಚರ್ ಆಗಲೇ ಹೇಳಿದ ಹಾಗೆ ಕೆಲವರು ಇಡಿ ಇನ್ಕಮ್ ಟ್ಯಾಕ್ಸ್ ಪೊಲೀಸ್ ಬ್ಯಾಂಕ್ ಆಫೀಸರ್ ಅಂತ ಹೇಳ್ಕೊಂಡು ಕಾಲ್ ಮಾಡ್ತಿರ್ತಾರೆ ಕೆಲವೊಮ್ಮೆ ಎಸ್ಎಂಎಸ್ ಮತ್ತು WhatsApp ಮೂಲಕ ಕಾಂಟ್ಯಾಕ್ಟ್ ಮಾಡ್ತಾರೆ ಇವರು ಹಣ ಕೇಳೋ ಉದ್ದೇಶಕ್ಕೂ ಕಾಲ್ ಮಾಡಿರಬಹುದು ಅಥವಾ ಪರ್ಸನಲ್ ಡೇಟಾ ಕಲೆಕ್ಟ್ ಮಾಡೋಕು ಕಾಲ್ ಮಾಡಿರಬಹುದು ಇವುಗಳನ್ನೆಲ್ಲ ಚಕ್ಷು ಫೀಚರ್ ಮೂಲಕ ರಿಪೋರ್ಟ್ ಮಾಡಬಹುದು ನಿಮ್ಮ ಕಾಲ್ ಹಿಸ್ಟರಿನೇ ಸಂಚಾರ ಸಾತಿ ಆಪ್ ನಲ್ಲಿ ಡಿಸ್ಪ್ಲೇ ಆಗುತ್ತೆ ರೀಸೆಂಟ್ ಕಾಲ್ ನಲ್ಲಿ ಯಾವ ಕಾಲ್ ಬಗ್ಗೆ ನಿಮಗೆ ಡೌಟ್ ಇದೆ ಆ ನಂಬರ್ ಆಯ್ಕೆ ಮಾಡಿ ಡೀಟೇಲ್ಸ್ ಟೈಪ್ ಮಾಡಿದ್ರೆ ಸಾಕು ಕ್ರೈಮ್ ರಿಪೋರ್ಟ್ ಆಗುತ್ತೆ. ಯಾವುದೇ ರೀತಿಯ ಆನ್ಲೈನ್ ಸೈಬರ್ ಕ್ರೈಮ್ ಗೆ ಒಳಗಾದ್ರೆ ಆದಷ್ಟು ಬೇಗ ರಿಪೋರ್ಟ್ ಮಾಡೋದು ಇಂಪಾರ್ಟೆಂಟ್. ಒಬ್ಬ ವ್ಯಕ್ತಿಗೆ ಆಕ್ಸಿಡೆಂಟ್ ಆದ್ರೆ ಮೊದಲ ಒಂದೆರಡು ಗಂಟೆಗಳನ್ನ ಗೋಲ್ಡನ್ ಅವರ್ ಅಂತಾರಲ್ಲ ಹಾಗೆ ಸೈಬರ್ ಕ್ರೈಮ್ ರಿಪೋರ್ಟ್ ಮಾಡೋಕ್ಕು ಕೂಡ ಗೋಲ್ಡನ್ ಅವರ್ ಇರುತ್ತೆ. ಇಮ್ಮಿಡಿಯೇಟ್ ಆಗಿ ಕ್ರೈಮ್ ರಿಪೋರ್ಟ್ ಮಾಡಿದ್ರೆ ಟ್ರ್ಯಾಕ್ ಮಾಡೋದು ಸುಲಭ. ದುಡ್ಡು ಕಳ್ಕೊಂಡಿದ್ರೆ ಒಂದು ವೇಳೆ ಯಾವ ಅಕೌಂಟ್ಗೆ ಕಳಿಸಿರ್ತೀರೋ ಆ ಅಕೌಂಟ್ ನ್ನ ಫ್ರೀಸ್ ಮಾಡಿಸೋದು ಕೂಡ ಸುಲಭ. ನೀವು ಕಳಿಸಿರ್ತೀರಿ ಅವರ ಅಕೌಂಟ್ ಇಂದನು ಎತ್ಕೊಂಡು ಬಿಟ್ಟಿರ್ತಾರೆ. ಏನು ಮಾಡಕ್ಕಾಗೋದಿಲ್ಲ ಅವಾಗ ಕಳೆದು ಹೋದ ಮೊಬೈಲ್ ಟ್ರ್ಯಾಕಿಂಗ್ ಈ ಆಪ್ ನಲ್ಲಿ ಬ್ಲಾಕ್ ಯುವರ್ ಲಾಸ್ಟ್ ಸ್ಟೋಲನ್ ಮೊಬೈಲ್ ಹ್ಯಾಂಡ್ ಸೆಟ್ ಅನ್ನೋ ಆಪ್ಷನ್ ಇದೆ ಇದನ್ನೆಲ್ಲ ಬಳಸಿ ನಿಮ್ಮ ಮೊಬೈಲ್ ಎಲ್ಲಿದೆ ಅಂತ ಟ್ರ್ಯಾಕ್ ಮಾಡಿ ಅದು ವರ್ಕ್ ಆಗದೆ ಇರೋತರ ಬ್ಲಾಕ್ ಕೂಡ ಮಾಡಬಹುದು ಯಾರಾದ್ರೂ ಆ ಮೊಬೈಲ್ ನ ಬಳಸೋಕೆ ಶುರು ಮಾಡಿದ್ರೆ ಅಲರ್ಟ್ ಹಾಗೂ ಲೊಕೇಶನ್ ಸಿಕ್ಬಿಡುತ್ತೆ.
ಭಾರತದ ಯಾವುದೇ ಮೂಲೆಯಲ್ಲಿ ಯಾವುದೇ ಸಿಮ್ ಹಾಕೊಂಡ್ರು ಕೂಡ ಗೊತ್ತಾಗಿಬಿಡುತ್ತೆ ಮೊಬೈಲ್ ಕನೆಕ್ಷನ್ ಡೀಟೇಲ್ಸ್ ಈ ಹಿಂದೆ ಬೇರೆಯವರ ಐಡಿ ಪ್ರೂಫ್ ತಗೊಂಡು ಸಿಮ್ ಕಾರ್ಡ್ ತಗೊಳೋ ಕೇಸ್ಗಳು ಬೇಕಾದಷ್ಟು ನಡೀತಾ ಇದ್ವು ಈಗ ಸ್ವಲ್ಪ ಕಮ್ಮಿಯಾಗಿದೆ ನೋ ಯುವ ಮೊಬೈಲ್ ಕನೆಕ್ಷನ್ಸ್ ಇನ್ ಯುವರ್ ನೇಮ್ ಅನ್ನೋ ಫೀಚರ್ ಇದೆ ಅದರ ಮೂಲಕ ನಿಮ್ಮ ಹೆಸರಲ್ಲಿ ಎಷ್ಟು ಮೊಬೈಲ್ ಕನೆಕ್ಷನ್ ಇವೆ ಅಂದ್ರೆ ಎಷ್ಟು ಸಿಮ್ ಕಾರ್ಡ್ ನಿಮ್ಮ ಹೆಸರಲ್ಲಿ ಆಕ್ಟಿವ್ ಇವೆ ಅನ್ನೋದನ್ನ ಚೆಕ್ ಮಾಡಬಹುದು ಒಂದು ವೇಳೆ ನಿಮಗೆ ಗೊತ್ತಿಲ್ದೆ ಇರೋ ನಂಬರ್ ನಿಮ್ಮ ಹೆಸರಲ್ಲಿ ರಿಜಿಸ್ಟರ್ ಆಗಿದ್ರೆ ಅಥವಾ ನಿಮ್ಮದೇ ಯಾವುದೋ ಹಳೆ ನಂಬರ್ ಈಗ ಬಳಸದೆ ಇರೋ ನಂಬರ್ ಇದ್ರೆ ಅದನ್ನ ಕೂಡ ರಿಪೋರ್ಟ್ ಮಾಡಿ ಡಿ ಆಕ್ಟಿವೇಟ್ ಮಾಡಿಸಬಹುದು ಒಂದೊಂದು ನಂಬರ್ಗೂ ನಾಟ್ ಮೈ ನಂಬರ್ ರಿಕ್ವೈರ್ಡ್ ನಾಟ್ ರಿಕ್ವೈರ್ಡ್ ಅನ್ನೋ ಆಪ್ಷನ್ ಬರುತ್ತೆ ಅವುಗಳ ಮೇಲೆ ಕ್ಲಿಕ್ ಮಾಡಿ ಮ್ಯಾನೇಜ್ ಮಾಡಬಹುದು ನಮ್ಮ ಮೊಬೈಲ್ ಎಷ್ಟು ಸೇಫ್ ನಿಮ್ಮ ಮೊಬೈಲ್ ನಲ್ಲಿ ಯಾವುದಾದರೂ ಡೇಂಜರಸ್ ಸಾಫ್ಟ್ವೇರ್ ಇದೆಯಾ ಎಷ್ಟು ಜೆನ್ಯೂನ್ ಆಗಿದೆ ನಿಮ್ಮ ಮೊಬೈಲ್ ಅಂತ ಚೆಕ್ ಮಾಡೋ ಫೀಚರ್ ಈ ಆಪ್ ನಲ್ಲಿದೆ. ಮೊಬೈಲ್ನ ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ನಂಬರ್ ಅಥವಾ ಐಎಂಈಐ ನಂಬರ್ ಬಳಸಿ ನೀವೇ ನಿಮ್ಮ ಮೊಬೈಲ್ ಅನ್ನ ಸ್ಕ್ಯಾನ್ ಮಾಡಬಹುದು ನಂಬರ್ ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ್ರೆ ಡೀಟೇಲ್ಸ್ ಬಂದ್ಬಿಡುತ್ತೆ ಐಎಂಈಐ ನಂಬರ್ ನಿಮ್ಮ ಸೆಟ್ಟಿಂಗ್ಸ್ ನಲ್ಲೂ ಸಿಗುತ್ತೆ ಅಥವಾ ಹಯಾಶ್ ಡಯಲ್ ಮಾಡಿದ್ರು ಕೂಡ ಸ್ಕ್ರೀನ್ ಮೇಲೆ ಅಪಿಯರ್ ಆಗುತ್ತೆ ವಿದೇಶಿ ಕಾಲ್ಗಳ ಬಲೆ ಕೆಲವೊಮ್ಮೆ ಇಂಟರ್ನ್ಯಾಷನಲ್ ಕಾಲ್ಗಳು ಬಂದಿರುತ್ತವೆ ಆದರೆ ನಂಬರ್ ನೋಡಿದ್ರೆ ಆರಂಭದಲ್ಲಿ +91 ಇರುತ್ತೆ ಅಂದ್ರೆ ಭಾರತದ ಕೋಡೆ ಇರುತ್ತೆ ಅಂತ ಅಂತ ಕಾಲ್ಗಳನ್ನ ರಿಪೋರ್ಟ್ ಮಾಡೋಕ್ಕು ಈ ಆಪ್ ನಲ್ಲಿ ಸಪರೇಟ್ ಆಪ್ಷನ್ ಇದೆ.
ಸದ್ಯಕ್ಕೆ ಈ ಐದು ಫೀಚರ್ ಮುಖ್ಯವಾಗಿ ಸಂಚಾರ್ ಸಾತಿ ಆಪ್ ನಲ್ಲಿವೆ ಮೊದಲುಗೂಗಲ್ಪ್ಲೇ ಸ್ಟೋರ್ ಅಥವಾ apple ಪ್ಲೇ ಸ್ಟೋರ್ ನಿಂದ ಈ ಆಪ್ ಡೌನ್ಲೋಡ್ ಮಾಡ್ಕೋಬೇಕು ನೋಡ್ಕೊಳ್ಳಿ ಈ ತರದ ಗವರ್ನಮೆಂಟ್ದ ಒಂದು ಆಪ್ ಬಂದ ತಕ್ಷಣ 10 ಫೇಕ್ ಇದೆ ಹೆಸರಲ್ಲಿ ಬಂದುಬಿಡುತ್ತೆ ಚುಚೂರು ಸ್ಪೆಲ್ಲಿಂಗ್ ಆ ಕಡೆ ಕಡೆ ಮಾಡ್ಕೊಂಡು ಕರೆಕ್ಟಾಗಿ ನೋಡ್ಕೊಳ್ಳಿ ಸ್ಕ್ರೀನ್ ಮೇಲೆ ಈ ರೀತಿ ಲೋಗೋ ಇರುತ್ತೆ ಅದನ್ನ ಪಬ್ಲಿಶ್ ಮಾಡಿರೋದು ಡೀಟೇಲ್ಸ್ ಯಾರು ಅಂತ ಹೇಳಿ ನೋಡಿ ಈ ರೀತಿ ಇರುತ್ತೆ ಅದರ ಕೆಳಗಡೆ ಇದೆರಡನ್ನ ವೆರಿಫೈ ಮಾಡ್ಕೊಳ್ಳಿ ಆಪ್ ಅದರ ಹೆಸರು ಅದರ ಸ್ಪೆಲ್ಲಿಂಗ್ ಮತ್ತೆ ಅದನ್ನ ಯಾರು ಹಾಕಿದ್ದಾರೆ ಪ್ಲೇ ಸ್ಟೋರ್ ಗೆ ಅದನ್ನ ಪಬ್ಲಿಷ್ ಮಾಡಿರೋದು ಯಾರು ಅವರ ಹೆಸರು ಕನ್ಫರ್ಮ್ ಮಾಡ್ಕೊಳ್ಳಿ ಸ್ಕ್ರೀನ್ ಮೇಲೆ ಇದೆಯಲ್ಲ ಈ ತರ ಇರ್ಬೇಕು. ಡೌನ್ಲೋಡ್ ಮಾಡುವಾಗ ಜೆನ್ಯೂನ್ ಆಪ್ ಅನ್ನೇ ಡೌನ್ಲೋಡ್ ಮಾಡ್ಕೋಬೇಕು. ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ಗವರ್ನಮೆಂಟ್ ಆಫ್ ಇಂಡಿಯಾ ಅಂತಲೇ ಡೆವಲಪರ್ ಹೆಸರು ಇರುತ್ತೆ ಅದನ್ನ ಪಬ್ಲಿಷ್ ಮಾಡ್ತಾ ಹೋಗೋದು. ಆ ಆಪ್ ಅನ್ನೇ ಡೌನ್ಲೋಡ್ ಮಾಡಿ. ಅಪ್ಪಿ ತಪ್ಪಿ ನೀವು ಬೇರೆ ಏನಾದ್ರೂ ಆಪ್ ಓಪನ್ ಮಾಡಿದ್ರಿ ಅಂತ ಅನ್ಕೊಳ್ಳಿ ನೀವು ರಿಪೋರ್ಟ್ ಮಾಡೋದರ ಬದಲಿಗೆ ಅಲ್ಲಿರೋ ಡೀಟೇಲ್ಸ್ ಎಲ್ಲ ಕೊಟ್ಟು ಇನ್ನಷ್ಟು ನಿಮಗೆ ಪೂರ್ತಿ ಬೋಳಿಸಿಕೊಂಡು ಹೋಗ್ಬಿಡ್ತಾರೆ ಆಮೇಲೆ. ಹಾಗಾಗಿ ಹುಷಾರಾಗಿರಿ ಸ್ನೇಹಿತರೆ ನೋಡ್ಕೊಂಡು ಸರಿಯಾದ ಆಪ್ ಅನ್ನೇ ಡೌನ್ಲೋಡ್ ಮಾಡಿ ನಾವು ಬೇಕಾದ್ರೆ ನಿಮಗೆ ಡಿಸ್ಕ್ರಿಪ್ಷನ್ ಅಲ್ಲಿ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಗವರ್ನಮೆಂಟ್ ಆಫ್ ಇಂಡಿಯಾದ ಈ ಆಪ್ ನ ಲಿಂಕ್ ಅನ್ನ ಕೂಡ ಕೊಟ್ಟಿರ್ತೀವಿ. ಒಂದು ವೇಳೆ ನೀವು ಮಾಡ್ದೆ ಇದ್ರೂ ಕೂಡ ಈಗ ಮೊಬೈಲ್ ಕಂಪನಿಗಳೇ ಆಟೋಮೆಟಿಕ್ ಆಗಿ ಆಪ್ ನ ಇನ್ಸ್ಟಾಲ್ ಮಾಡ್ತಾರೆ. ಈ ಆಪ್ ಓಪನ್ ಮಾಡ್ತಿದ್ದಂತೆ ಈ ಐದು ಫೀಚರ್ ಗಳು ಡಿಸ್ಪ್ಲೇ ಆಗ್ತವೆ. ಆಮೇಲೆ ಇಲ್ಲಿ ಎಕ್ಸ್ಪ್ಲೋರ್ ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಒಂದು ಹೊಸ ಪೇಜ್ ಬಂದು ರಿಜಿಸ್ಟರ್ ಆಗಿ ಅಂತ ಕೇಳಿಕೊಳ್ಳುತ್ತೆ. ರಿಜಿಸ್ಟರ್ ಆಗುವಾಗ ಆಪ್ ಒಂದಷ್ಟು ಪರ್ಮಿಷನ್ಸ್ ಕೇಳುತ್ತೆ. ಆಗ ಅಲೋ ಮೇಲೆ ಕ್ಲಿಕ್ ಮಾಡಿ ಪರ್ಮಿಷನ್ ಕೊಡಿ. ನಂತರ ನಿಮ್ಮ ಹೆಸರು ಕೇಳುತ್ತೆ. ಹೆಸರು ಹಾಕಿದ್ಮೇಲೆ 1442 ಗೆ ಆಪ್ ಒಂದು ಮೆಸೇಜ್ ಕಳಿಸುತ್ತೆ. ಆ ಮೆಸೇಜ್ ಕಳಿಸೋಕೆ ನಿಮ್ಮತ್ರ ಬ್ಯಾಲೆನ್ಸ್ ಇರ್ಬೇಕು. ಮೆಸೇಜ್ ಸೆಂಡ್ ಆಗ್ತಿದ್ದಂತೆ ರಿಜಿಸ್ಟ್ರೇಷನ್ ಕೆಲಸ ಮುಗಿಯುತ್ತೆ.
ಆ ಐದು ಫೀಚರ್ ಗಳನ್ನ ಬಳಸೋಕೆ ಶುರು ಮಾಡಬಹುದು. ಸೋ ಇಂತ ಆಪ್ ನ ಆಗಲೇ ಹೇಳಿದ ಹಾಗೆ ಡಿಫಾಲ್ಟ್ ಎಲ್ಲಾ ಫೋನ್ ನಲ್ಲೂ ಹೊಸದಾಗಿ ಇರೋದ್ರಲ್ಲಿ ಬರಬೇಕು ಇರೋ ಫೋನ್ ಗಳಲ್ಲಿ ಅಪ್ಡೇಟ್ ಕೊಡಬೇಕು ಇರೋ ಹಾಗೆ ಮಾಡಬೇಕು ಅಂತ ಅಲ್ದೆ 90 ದಿನಗಳ ಒಳಗೆ ಕಡ್ಡಾಯವಾಗಿ ಎಲ್ಲಾ ಕಂಪನಿಗಳು ಈ ರೂಲ್ ನ ಫಾಲೋ ಮಾಡಬೇಕು ಅಂತ ಆದೇಶ ಹೊರಡಿಸಲಾಗಿದೆ. ಹೊಸ ಪೆಗಾಸಸ್ ಎಸ್ ವಿಪಕ್ಷಗಳು ಗಲಾಟೆ ಶುರು ಮಾಡಿದ್ದಾರೆ ಇದು ಹೊಸ ಪೆಗಾಸಸ್ ಜನರ ಮೇಲೆ ವಿಪಕ್ಷ ನಾಯಕರ ಮೇಲೆ ಕಳ್ಳ ಗಣ್ಣು ಇಡೋಕೆ ಗೂಢಚರ್ಯ ಮಾಡೋಕೆ ಸರ್ವೆಲೆನ್ಸ್ ಮಾಡೋಕೆ ಕೇಂದ್ರ ಸರ್ಕಾರ ಮಾಡ್ತಿರುವ ಪಿತೂರಿ ಅಂತ ಆರೋಪಿಸಿವೆ. ಕಾಂಗ್ರೆಸ್ ಸಂಸದ ಕಾರ್ತಿಕ್ ಚಿದಂಬರಂ ಪಿ ಚಿದಂಬರಂ ಅವರ ಮಗ ಬಿಗ್ ಬಾಸ್ ಗೆ ಪ್ರೇರಣೆಯಾದ ಬಿಗ್ ಬ್ರದರ್ ಪುಸ್ತಕವನ್ನ ಉಲ್ಲೇಖ ಮಾಡ್ತಾ ಬಿಗ್ ಬ್ರದರ್ ಇನ್ಮೇಲೆ ನಿಮ್ಮ ಫೋನ್ ಮತ್ತು ಖಾಸಗಿ ಜೀವನವನ್ನ ಟೇಕ್ ಓವರ್ ಮಾಡ್ತಾರೆ ಇದು ಪೆಗಾಸಸ್ ಅಂತ ಟೀಕೆ ಮಾಡಿದ್ದಾರೆ. ರಾಜ್ಯಸಭಾ ಸಂಸದೆ ಪ್ರಿಯಾಂಕ ಚತುರ್ವೇದಿ ಕೂಡ ಸರ್ಕಾರದ ಆದೇಶ ಬಿಗ್ ಬಾಸ್ ಕಣ್ಗಾವಲು ಯತ್ನ ಅಂತ ಕರೆದಿದ್ದಾರೆ. ಎಕ್ಸ್ ನಲ್ಲೂ ಕೂಡ ಅನೇಕ ಜನ ಸಂಚಾರ ಸಾತಿ ಕಡ್ಡಾಯ ಅಳವಡಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕ ವಾದ್ರಾ ಗಾಂಧಿ ಕೂಡ ಇದು ಡಿಕ್ಟೇಟರ್ಶಿಪ್ ಅನ್ನೋ ಟೀಕಾ ಪ್ರಹಾರ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಇದ್ದ ಸೈಬರ್ ಸೆಕ್ಯೂರಿಟಿಗೆ ಅಂತ ಹೇಳಿ ಪ್ರತಿಕ್ರಿಯೆ ಕೊಟ್ಟಿದೆ ಕಿರಣ್ ರಿಜಿಜು ಅವರು ಪ್ರತಿಪಕ್ಷಗಳನ್ನ ಭೇಟಿ ಮಾಡಿ ಎಲ್ಲ ಎಕ್ಸ್ಪ್ಲೈನ್ ಮಾಡ್ತೀವಿ ಅಂತದ್ದು ಏನು ಇದರಲ್ಲಿ ಇಲ್ಲ ಸೈಬರ್ ಸೆಕ್ಯೂರಿಟಿಗೆ ಜನರ ಸೇಫ್ಟಿ ಮುಖ್ಯ ಎಲ್ಲಾ ಆನ್ಲೈನ್ಗೆ ಮೂವ್ ಆಗ್ತಿರೋ ಟೈಮ್ನಲ್ಲಿ ಸೈಬರ್ ಸೇಫ್ಟಿಗೆ ಮೂವ್ ಆಗ್ತಿರೋ ಟೈಮ್ನಲ್ಲಿ ಅಲ್ಲೂ ಕೂಡ ರಕ್ಷಣೆ ಅನಿವಾರ್ಯ ಅದರ ಕ್ರಮ ಅಷ್ಟೇ ಇದು ಅಂತ ಹೇಳಿದೆ ಹಾಗೆ ಸ್ನೇಹಿತರೆ ಕೇಂದ್ರ ಟೆಲಿಕಾಂ ಮಂತ್ರಿನೇ ಆಗಿರುವಂತಹ ಜ್ಯೋತಿರಾಜ್ಯ ಸಿಂಧ್ಯಾ ಅವರು ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ ಇದು ಟೆಲಿಕಾಂ ಕಂಪನಿಗಳಿಗೆ ಫೋನ್ ನಲ್ಲಿ ಇನ್ಸ್ಟಾಲ್ ಮಾಡೋದು ಮ್ಯಾಂಡೇಟರಿ ಸೈಬರ್ ಸೆಕ್ಯೂರಿಟಿಗೋಸ್ಕರ ಅದು ಇರಬೇಕು ಜನರ ಕಣ್ಣಿಗೆ ಕಾಣಬೇಕು ಅಂತ ಹೇಳಿ ಹೇಳಿ ಆದರೆ ಅದನ್ನ ಬಳಸೋದು ಯೂಸ್ ಮಾಡ್ಲೇಬೇಕು ಅನ್ನೋ ಮ್ಯಾಂಡೇಟರಿ ಜನರಿಗೆ ಮ್ಯಾಂಡೇಟರಿ ಅಲ್ಲ ಅದು ಜನ ಬೇಡ ಅಂದ್ರೆ ಅದನ್ನ ಅನ್ ಇನ್ಸ್ಟಾಲ್ ಮಾಡಕೊಳ್ಳಬಹುದು ಆದ್ರೆ ಹೆಚ್ಚು ರೀಚ್ ಆಗಲಿ ಅನ್ನೋ ಕಾರಣಕ್ಕೋಸ್ಕರ ಫೋನ್ ಕಂಪನಿಗಳು ಹಾಕಿನೇ ಕೊಡಬೇಕು ಅದನ್ನ ಜನರಿಗೆ ಅಂತ ಜನ ಬೇಡ ಅಂತ ಹೇಳಿದ್ರೆ ಅವರಿಗೆ ಅದು ಆ ಫೀಚರ್ ಅಸೌಲಭ್ಯ ಬೇಡ ಅಂದ್ರೆ ಅನ್ ಇನ್ಸ್ಟಾಲ್ ಮಾಡ್ಕೊಳ್ಳಬಹುದು ಅನ್ನೋ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ ಹತ್ತಾರು ಪೋರ್ಟಲ್ಸ್ ಎಲ್ಲರಿಗೂ ರಕ್ಷಣೆ ಸಿಗುತ್ತಾ.
ಸೈಬರ್ ಕ್ರೈಮ್ ರಿಪೋರ್ಟ್ ಮಾಡೋಕೆ ಹಿಂದೆ ಕೂಡ ಸಾಕಷ್ಟು ಪೋರ್ಟಲ್ ಗಳು ಇದ್ವು ಆಪ್ಸ್ ಇದ್ವು ಇನ್ಫ್ಯಾಕ್ಟ್ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಸುಮಾರು 10 ಲಕ್ಷ ಕಂಪ್ಲೈಂಟ್ಸ್ ಅನ್ನ ಸಾಲ್ವ್ ಮಾಡಿದೆ. ಬರೋಬರಿ 3431 ಕೋಟಿ ರೂಪಾಯಿ ಹಣವನ್ನ ಉಳಿಸಿದೆ. 24/7 ಎಲ್ಲಾ ಭಾಷೆಗಳಲ್ಲೂ ಈ ಪೋರ್ಟಲ್ ಸರ್ವಿಸ್ ಅನ್ನ ಪಡೀಬಹುದು. ಅಗೈನ್ ಈ ಪೋರ್ಟಲ್ ನ ಲಿಂಕ್ ನ ಕೂಡ ನಾವು ಡಿಸ್ಕ್ರಿಪ್ಶನ್ ಅಲ್ಲಿ ಪಿನ್ ಕಾಮೆಂಟ್ ಅಲ್ಲಿ ಕೊಟ್ಟಿರ್ತೀವಿ. ಅದೇ ರೀತಿ ಈ ಲಾಸ್ಟ್ ರಿಪೋರ್ಟ್ ಪೋರ್ಟಲ್ ಇದೆ. ಮೊಬೈಲ್, ಲ್ಯಾಪ್ಟಾಪ್ ಮುಂತಾದ ಕಳೆದು ಹೋದ ಡಿವೈಸ್ ಗಳ ಬಗ್ಗೆ ರಿಪೋರ್ಟ್ ಮಾಡೋ ಪೋರ್ಟಲ್. ಇದರಿಂದಲೂ ಡಿವೈಸ್ ಗಳನ್ನ ಟ್ರ್ಯಾಕ್ ಮಾಡೋದು. ಕಳೆದು ಹೋದಾಗ ನೀವು ಅದಕ್ಕೊಂದಷ್ಟು ಆ ರಿಪೋರ್ಟ್ ಮಾಡಿ ಆ ಒಂದು ಪೊಲೀಸರಿಗೆ ಅದನ್ನ ಮಾಹಿತಿ ತಲುಪಿಸೋದು ಈ ಆಪ್ ಮೂಲಕ ನೀವು ಮಾಡಬಹುದು. ಇದರ ಲಿಂಕ್ ಅನ್ನು ಕೂಡ ನಾವು ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಕೊಟ್ಟಿರ್ತೀವಿ. ಅಷ್ಟೇ ಅಲ್ಲದೆ ಸೈಬರ್ ಕ್ರೈಂ ಹೆಲ್ಪ್ ಲೈನ್ ಇದೆ 1930 ಗೆ ಕಾಲ್ ಮಾಡಿದ್ರೆ ಇಮ್ಮಿಡಿಯೇಟ್ ಆಗಿ ಹಣಕಾಸಿನ ವಂಚನೆ ರಿಪೋರ್ಟ್ ಮಾಡಬಹುದು ಬೇಗ ರಿಪೋರ್ಟ್ ಮಾಡಿದಷ್ಟು ಹಣ ರಿಕವರ್ ಆಗೋ ಸಾಧ್ಯತೆ ಹೆಚ್ಚಿರುತ್ತೆ ಆಗ್ಲೇ ಹೇಳಿದ ಹಾಗೆ ಪೊಲೀಸ್ ನವರು ವಂಚನೆ ಮಾಡಿರೋ ಅಕೌಂಟ್ ಅನ್ನ ಫ್ರೀಜ್ ಮಾಡಿ ಹಣ ರಿಕವರ್ ಮಾಡ್ಕೊಳ್ಳೋಕೆ ಆಮೇಲೆ ಕ್ರಮ ತಗೋಬಹುದು ಅಲ್ದೇ ದೇಶದಲ್ಲಿ ಅತಿ ಹೆಚ್ಚು ಸೈಬರ್ ಕ್ರೈಂ ರಿಪೋರ್ಟ್ ಆಗೋ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಕ್ರೈಂ ರಿಪೋರ್ಟಿಂಗ್ ಸಿಸ್ಟಮ್ ಇದೆ ಪ್ರತ್ಯೇಕ ಸೈಬರ್ ಕ್ರೈಮ್ ಸ್ಟೇಷನ್ಸ್ ಇದಾವೆ 24/7 ಸರ್ವಿಸಸ್ ಸಿಗುತ್ತೆ ಸೈಬರ್ ಕ್ರೈಮ್ ರಿಪೋರ್ಟ್ ಮಾಡೋಕ್ಕೆ ಇನ್ನು ಬೇಕಾದಷ್ಟು ದಾರಿ ಇದೆ ಆದರೆ ಜನರಿಗೆ ಇವುಗಳ ಬಗ್ಗೆ ಹೆಚ್ಚಿನ ಅವೇರ್ನೆಸ್ ಇಲ್ಲ ಹೇಗೆ ರಿಪೋರ್ಟ್ ಮಾಡ್ಬೇಕು ಅನ್ನೋದು ಗೊತ್ತಿರೋದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕೇಸುಗಳು ರಿಪೋರ್ಟ್ ಆಗಲ್ಲ. ಆ ನಿಟ್ಟಿನಲ್ಲಿ ಸಂಚಾರ್ ಸಾತಿ ಆಪ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಅನ್ನ ಇನ್ನಷ್ಟು ಸ್ಟ್ರೀಮ್ ಲೈನ್ ಮಾಡ್ತಾ ಇದೆ.
ಒಂದು ರೀತಿ ಎಲ್ಲಾ ರೀತಿ ಸಮಸ್ಯೆಗಳಿಗೂ ಒಂದು ಕಡೆನೇ ಸೊಲ್ಯೂಷನ್ ಸಿಗೋ ರೀತಿಯಲ್ಲಿ ಪ್ರಯತ್ನ ನಡೀತಾ ಇದೆ. ಆದರೆ ಏನೇ ಹೊಸ ಸಿಸ್ಟಮ್ ಬಂದ್ರು ಕೂಡ ಕಳ್ಳರು ಅವರು ಕೂಡ ಅಪ್ಡೇಟ್ ಆಗ್ತಾ ಇರ್ತಾರೆ. ಹೊಸ ಹೊಸ ರೀತಿಯಲ್ಲಿ ಮೋಸ ಮಾಡ್ತಾ ಇರ್ತಾರೆ. ಸೈಬರ್ ಕ್ರೈಂ ಟ್ಯಾಕಲ್ ಮಾಡೋಕೆ ನಮ್ಮ ಸಿಬ್ಬಂದಿಗೂ ಕೂಡ ಅತ್ಯದ್ಭುತವಾದ ಟ್ರೈನಿಂಗ್ ಏನು ಆಗಿರುವುದಿಲ್ಲ. ಒಂದಷ್ಟು ಬೇಸಿಕ್ ಟ್ರೈನಿಂಗ್ ಅಷ್ಟೇ ಕೊಟ್ಟಿರುತ್ತಾರೆ. ಎಲ್ಲರೂ ಕೂಡ ಅದರಲ್ಲಿ ನುರಿತವರಾಗಿರೋದಿಲ್ಲ ಕಂಪ್ಲೇಂಟ್ ಕೊಡೋಕ್ಕೆ ಹೋದಾಗಲೂ ಕೂಡ ಕಂಪ್ಲೇಂಟ್ ಕೊಡೋವರು ಏನು ಹೇಳ್ತಿದ್ದಾರೆ ಅನ್ನೋದು ಕೂಡ ಕೆಲವೊಂದು ಸಲಿ ಅರ್ಥ ಆಗ್ತಿರೋದಿಲ್ಲ ಯಾಕಂದ್ರೆ ಅಲ್ಲಿರೋ ಎಲ್ಲಾ ಸಿಬ್ಬಂದಿಗೆ ಇದರ ಬಗ್ಗೆ ಎಲ್ಲಾ ವಿಚಾರಗಳಲ್ಲೂ ನಾಲೆಡ್ಜ್ ಇರೋದಿಲ್ಲ ಹಾಗಾಗಿ ಟ್ರೈನಿಂಗ್ ಕೂಡ ಚೆನ್ನಾಗಿ ಆಗಬೇಕು ಸುಮ್ನೆ ಸ್ಟೇಷನ್ ಮಾಡ್ಬಿಟ್ಟು ನೀವು ಮಾಡಿ ಅಂತ ಹೇಳಿದ ತಕ್ಷಣ ಅವರು ಮಾಡೋಕೆ ಆಗೋದಿಲ್ಲ ಹಾಕಿರ್ತಾರೆ ಒಂದಷ್ಟು ಸೀನಿಯರ್ಸ್ ನ ಒಂದಷ್ಟು ಆ ಕ್ಷೇತ್ರಗಳಲ್ಲಿ ಓದಿರೋರನ್ನ ಸಾಫ್ಟ್ವೇರ್ ಇಂಜಿನಿಯರ್ಸ್ ಓದಿ ಆಮೇಲೆ ಪೊಲೀಸ್ ಆಗಿರೋರನ್ನ ಒಂದೇ ಒಂದಇಬ್ಬರನ್ನು ಹಾಕಿರಬಹುದು ಸ್ಟೇಷನ್ ಅಲ್ಲಿ ಉಳಿದಂತಹ ಸಿಬ್ಬಂದಿಯನ್ನ ಅವರನ್ನ ರೆಗ್ಯುಲರ್ ಪೊಲೀಸರನ್ನೇ ಹಾಕಲಾಗಿರುತ್ತೆ ಒಂದಷ್ಟು ಬೇಸಿಕ್ ಟ್ರೈನಿಂಗ್ ಅಷ್ಟೇ ಆಗಿರುತ್ತೆ ಈ ವಿಚಾರದಲ್ಲಿ ನಾವು ಸುಧಾರಿಸಬೇಕು ಜೊತೆಗೆ ಸೈಬರ್ ಕ್ರೈಮ್ ಅನ್ನ ಹ್ಯಾಂಡಲ್ ಮಾಡೋ ವಿಭಾಗಗಳಲ್ಲಿ ಪೊಲೀಸ್ ವಿಭಾಗಗಳಲ್ಲಿ ಇನ್ಫ್ರಾಸ್ಟ್ರಕ್ಚರ್ ಕೂಡ ತುಂಬಾ ಡೆವಲಪ್ ಆಗಬೇಕು ಸಣ್ಣ ನಗರಗಳ ಪೊಲೀಸ್ ಸ್ಟೇಷನ್ಗಳಲ್ಲಿ ಸೈಬರ್ ಕ್ರೈಮ್ ಯೂನಿಟ್ಗಳು ಇರೋದಿಲ್ಲ ಅಲ್ದೆ ಆಲ್ಮೋಸ್ಟ್ ಅರ್ಧಕ್ಕರ್ಧ ಸೈಬರ್ ಫ್ರಾಡ್ಗಳನ್ನ ಮಾಡೋ ಜನ ಕಂಬೋಡಿಯಾ ಮಯನ್ಮಾರ್ ಲಾವೋಸ್ ಈ ರೀತಿ ಯಾವುದಾದರೂ ಆಗ್ನೆ ಏಷ್ಯಾ ರಾಫ್ಟರ್ ಗಳೆಲ್ಲ ಹೋಗಿ ಕೂತ್ಕೊಂಡಿರ್ತಾರೆ ಹಾಗಾಗಿ ಇವುಗಳ ತನಿಕೆಯಲ್ಲಿ ಸಾಕಷ್ಟು ಅಡೆತಡೆಗಳ ಆಗ್ತವೆ ಆಕ್ಷನ್ ತಗೊಳೋದಾಗಲಿ ಹಣ ರಿಕವರ್ ಮಾಡೋದಾಗಲಿ ಬಹಳ ಡಿಲೇ ಆಗುತ್ತೆ ಸೋ ಇಷ್ಟೆಲ್ಲಾ ಮೈನಸ್ ಪಾಯಿಂಟ್ಸ್ ಇದ್ದರೂ ಕೂಡ ಒಂದಷ್ಟು ಹೊಸ ಹೊಸ ಹೆಜ್ಜೆ ಇಟ್ಟಾಗ ಪ್ರಯತ್ನ ಅಂತೂ ನಡೀತಾ ಇದೆ ಅಂತ ಹೇಳಿ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ .


