Thursday, January 15, 2026
HomeTech News10 ನಿಮಿಷ ಡೆಲಿವರಿ ವ್ಯವಸ್ಥೆಗೆ ಸರ್ಕಾರದ ಎಚ್ಚರಿಕೆ | ಡೆಲಿವರಿ ಬಾಯ್ಸ್ ಹೋರಾಟಕ್ಕೆ ಜಯ

10 ನಿಮಿಷ ಡೆಲಿವರಿ ವ್ಯವಸ್ಥೆಗೆ ಸರ್ಕಾರದ ಎಚ್ಚರಿಕೆ | ಡೆಲಿವರಿ ಬಾಯ್ಸ್ ಹೋರಾಟಕ್ಕೆ ಜಯ

ಇನ್ನ ಮುಂದೆ 10 ನಿಮಿಷದಲ್ಲಿ ಡೆಲಿವರಿ ಅನ್ನೋದು ಇತಿಹಾಸ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣ್ತಾ ಇದ್ದ 10 ಮಿನಿಟ್ಸ್ ಅನ್ನೋ ಕಿಲ್ಲರ್ ಟೈಮರ್ ಇನ್ ಮುಂದೆ ಕಾಣಲ್ಲ ಕಳೆದ ಎಷ್ಟು ದಿನಗಳಿಂದ ನಾವು ನೀವು ಮಾತಾಡಿಸಿದ್ವಿ ಒಂದು ಬ್ರೆಡ್ ಪ್ಯಾಕೆಟ್ ಅಥವಾ ಯಾವುದೋ ಒಂದು ಪ್ಯಾಕೆಟ್ ತರಕ್ಕೆ ಪ್ರಾಣ ಪಣಕ್ಕೆ ಇಡಬೇಕಾ ಅಂತ ಆ ಪ್ರಶ್ನೆಗೆ ಈಗ ಕೇಂದ್ರ ಸರ್ಕಾರ ಉತ್ತರವನ್ನ ಕೊಟ್ಟಿದೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವ್ಯ ನೇರವಾಗಿ ಫೀಲ್ಡ್ಗೆ ಇಳಿದಿದ್ದಾರೆ ಬ್ಲಿಂಕಿಟ್ ಸ್ವಿಗ್ಗಿ ಜೆಪ್ಟೋ ಜೊಮೆಟೋ ಕಂಪನಿಗಳ ಬಾಸ್ಗಳನ್ನ ಕರೆಸಿ ಸಾಕು ನಿಲ್ಸಿ ನಿಮ್ಮ ಈ ಸ್ಪೀಡ್ ರೇಸ್ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಬರಿ ವಾರ್ನಿಂಗ್ ಅಲ್ಲ ಅದರ ರಿಸಲ್ಟ್ ಕೂಡ ಆಲ್ರೆಡಿ ಕಾಣಿಸೋಕೆ ಶುರುವಾಗಿದೆ. ಬ್ಲಿಂಕಿಟ್ ರಾತ್ರೋ ರಾತ್ರಿ ತನ್ನ ಆಪ್ ನಲ್ಲಿರೋ ಹೆಸರನ್ನ ಚೇಂಜ್ ಮಾಡಿದೆ.

Jio ಮಾರ್ಟ್ ಕೂಡ ಗ್ರಾಹಕರಿಗೆ 10 ಮಿನಿಟ್ ಡೆಲಿವರಿ ಇನ್ನಿಲ್ಲ ಅಂತ ಹೇಳಿ ಮೆಸೇಜ್ ಕಳಿಸಿದೆ. ಹಾಗಿದ್ರೆ ಏನಿದು ಹೊಸ ರೂಲ್ಸ್? ಇನ್ಮುಂದೆ ನಿಮ್ಮ ಡೆಲಿವರಿ ಲೇಟ್ ಆಗುತ್ತಾ? ಗ್ರಾಹಕರ ಜೇಬಿ ಕತ್ತರಿ ಬೀಳುತ್ತಾ? ನಿಜಕ್ಕೂ 10 ಮಿನಿಟ್ಸ್ ಡೆಲಿವರಿ ಮಾಡೋಕೆ ಸಾಧ್ಯನಾ? ಅಥವಾ ಇದು ಬರೀ ಮಾರ್ಕೆಟಿಂಗ್? ಆದ್ರೆ ಹಿಂದಿರೋ ಕಿಲ್ಲರ್ ಮ್ಯಾಥಮೆಟಿಕ್ಸ್ ಏನು? ವಿದೇಶಗಳಲ್ಲಿ ಫ್ಲಾಪ್ ಆದ ಈ ಮಾಡೆಲ್ ಇಂಡಿಯಾದಲ್ಲಿ ಮಾತ್ರ ಜೋರಾಗಿ ಯಾಕೆ ನಡೀತಾ ಇದೆ. ಎಲ್ಲಾ ಇನ್ಸೈಡ್ ಸ್ಟೋರಿ ಮತ್ತು ಇಂಪ್ಯಾಕ್ಟ್ ಅನಾಲಿಸಿಸ್ ಡೆಡ್ ಲೈನ್ ಗೆ ಬಿತ್ತು ಬ್ರೇಕ್. ಏನಿದು ಕೇಂದ್ರದ ಆದೇಶ? ಜನವರಿ 13, 2026 ಒಂದು ದಿಲ್ಲಿಯಲ್ಲಿ ಹೈ ಪ್ರೊಫೈಲ್ ಮೀಟಿಂಗ್ ನಡೀತು. ಆ ಮೀಟಿಂಗ್ ಕರೆದಿದ್ದು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವ್ಯ ಲೇಬರ್ ಮಿನಿಸ್ಟರ್ ಯಾರ್ಯಾರು ಬಂದಿದ್ರು ಗೊತ್ತಾ ನಮ್ಮ ದೇಶದ ಟಾಪ್ ಕ್ವಿಕ್ ಕಾಮರ್ಸ್ ಕಂಪನಿಗಳಾದ ಬ್ಲಿಂಕೆಟ್ ಜೆಪ್ಟೋ ಸ್ವಿಗ್ಗಿ ಇನ್ಸ್ಟಮರ್ಟ್ ಮತ್ತು ಜೊಮಾಟೋದ ಹಿರಿಯ ಪ್ರತಿನಿಧಿಗಳು ವಿಚಾರ ಒಂದೇ ಅಲ್ಲಿ 10 ಮಿನಿಟ್ಸ್ ಡೆಲಿವರಿ ಸಚಿವರು ನೇರವಾಗಿ ಹೇಳಿದ್ದಾರೆ.

ನೀವು ಬಿಸಿನೆಸ್ ಮಾಡಿ ಆದರೆ 10 ನಿಮಿಷದಲ್ಲಿ ತಲುಪಿಸ್ತೀವಿ ಅನ್ನೋ ಜಾಹಿರಾತು ಕೊಡೋದನ್ನ ಮೊದಲು ಬಂದ್ ಮಾಡಿ ಇದು ರೋಡ್ ಸೇಫ್ಟಿಗೆ ಡೇಂಜರಸ್ ನಿಮ್ಮ ರೈಡರ್ಗಳ ಪ್ರಾಣಕ್ಕೂ ಅಪಾಯಕಾರಿ ಅಂತ ಗಮನಿಸಿ ಸರ್ಕಾರ ಇದನ್ನ ಇನ್ನು ಕಾನೂನು ಮಾಡಿ ಬ್ಯಾನ್ ಮಾಡಿಲ್ಲ ಇದೊಂದು ಪಾರ್ಲಿಮೆಂಟರಿ ಬ್ಯಾನ್ ಅಲ್ಲ ಆದರೆ ಇದೊಂದು ಡೈರೆಕ್ಟಿವ್ ಅಥವಾ ಖಡಕ್ ಸೂಚನೆ ಸ್ಟಾಪ್ ಅಡ್ವರ್ಟೈಸಿಂಗ್ 10 ಮಿನಿಟ್ ಡೆಲಿವರಿ ಅನ್ನೋದು ಸರ್ಕಾರದ ಒನ್ ಲೈನ್ ಆದೇಶ ಅಥವಾ ಸೂಚನೆ ಈ ಕಂಪನಿಗಳಿಗೆ ವೇಗ ಮುಖ್ಯ ಅಲ್ಲ ಸೇಫ್ಟಿ ಮುಖ್ಯ ಅನ್ನೋದನ್ನ ನಿಮ್ಮ ಬ್ರಾಂಡಿಂಗ್ ನಲ್ಲಿ ತನ್ನಿ ಅಂತ ಸರ್ಕಾರ ಹೇಳಿದೆ. ಇದಕ್ಕೆ ಕಂಪನಿಗಳ ರಿಯಾಕ್ಷನ್ ಏನು ಗೊತ್ತಾ ಮೀಟಿಂಗ್ ಆದ ತಕ್ಷಣ ಯಾವುದೇ ಜಾಯಿಂಟ್ ಪ್ರೆಸ್ ರಿಲೀಸ್ ಬಂದಿಲ್ಲ. ಆದರೆ ಎಲ್ಲಾ ಕಂಪನಿಗಳು ಸರ್ಕಾರದ ಮಾತಿಗೆ ತಲೆಬಾಗಿವೆ. ಇದಕ್ಕೆ ಸಾಕ್ಷಿ ಅನ್ನೋ ಹಾಗೆ ಆಲ್ರೆಡಿ ಆಗ್ಲೇ ಹೇಳಿದ ಹಾಗೆ ಬ್ಲಿಂಕಿಟ್ ತನ್ನ ಆಪ್ ನಲ್ಲಿ ಚೇಂಜಸ್ ಮಾಡಿದೆ.

ಜಿಯೋ ಮಾರ್ಟ್ ಕೂಡ ಮೆಸೇಜ್ ಕಳಿಸಿದೆ. 10 ಮಿನಿಟ್ಸ್ ಡೆಲಿವರಿಗೆ ಸಂಬಂಧಪಟ್ಟಂತೆ ದೊಡ್ಡ ಅಪ್ಡೇಟ್ ಇದೆ ನೋಡಿ ಅಂತ ಹೇಳಿ ಈ ತರ ಮೆಸೇಜ್ ಕಳಿಸಿದೆ. ಜನವರಿ 13ಕ್ಕೂ ಮೊದಲು ಬ್ಲಿಂಕಿಟ್ ಆಪ್ ಓಪನ್ ಮಾಡಿದ್ರೆ 10,000 ಪ್ಲಸ್ ಪ್ರಾಡಕ್ಟ್ಸ್ ಇನ್ 10 ಮಿನಿಟ್ಸ್ ಅಂತ ಕಾಣಿಸ್ತಾ ಇತ್ತು. ಆದರೆ ನೀವು ಚೆಕ್ ಮಾಡಿದ್ರೆ ಅಲ್ಲಿ 10 ಮಿನಿಟ್ಸ್ ಅನ್ನೋ ಪದವೇ ಕಾಣಿಸ್ತಿಲ್ಲ. ಅದರ ಬದಲು ಡೆಲಿವರ್ಡ್ ಅಟ್ ಯುವರ್ ಡೋರ್ ಸ್ಟೆಪ್ ನಿಮ್ಮ ಮನೆ ಬಾಗಲಿಗೆ ತಲಪಿಸ್ತೀವಿ ಅಂತ ಚೇಂಜ್ ಮಾಡಿದ್ದಾರೆ. ಜೆಪ್ಟೋ ಕೂಡ ಇದೇ ಹಾದಿಯಲ್ಲಿದೆ. ನಾವು ಟೈಮರ್ ತೆಗೆದು ಹಾಕ್ತೀವಿ ನಮಗೆ ಸೇಫ್ಟಿ ಮುಖ್ಯ ಅಂತ ಒಪ್ಪಿಕೊಂಡಿದ್ದಾರೆ. ಇನ್ನ ಮುಂದೆ ಟಿವಿ ಯಲ್ಲಿ ಆಗಲಿ YouTube ಆಡ್ ಗಳಲ್ಲಿ ಆಗಲಿ 10ತೇ ನಿಮಿಷದಲ್ಲಿ ಬರುತ್ತೆ ಏಟ್ ಮಿನಿಟ್ಸ್ ಅಲ್ಲಿ ಬರುತ್ತೆ ಅನ್ನೋ ಡೈಲಾಗ್ ಕೇಳಿಸಲ್ಲ. ಇದು ಸಣ್ಣ ಬದಲಾವಣೆಯಲ್ಲ ದೊಡ್ಡ ಶಿಫ್ಟ್. ಸರ್ಕಾರದ ಬಿಸಿ ಇವರಿಗೆ ಮುಟ್ಟಿದೆ ಅನ್ನೋದೇ ಇದಕ್ಕೆ ಸಾಕ್ಷಿ. ಯಾಕೆ ಬಂತು ಈ ದಿಡೀರ್ ನಿರ್ಧಾರ? ರಕ್ತ ಸಿಕ್ತ ಹಿನ್ನೆಲೆ.

ಮೊದಲನೇ ಕಾರಣ ಆಕ್ಸಿಡೆಂಟ್ಸ್ ಮತ್ತು ಸಾವುಗಳು. ಕಳೆದ ಒಂದು ವರ್ಷದಲ್ಲಿ ನಡೆದ ಕೆಲ ಘಟನೆಗಳು ಇಡೀ ದೇಶವನ್ನ ವೆಚ್ಚೆ ಬಿಳಿಸಿದ್ವು. ರೀಸೆಂಟ್ ಆಗಿ ಅಂದ್ರೆ ಇದೇ ಜನವರಿ 2026 ರಲ್ಲಿ ಹೈದರಾಬಾದ್ ನಲ್ಲಿ ಏನಾಯ್ತು. 25 ವರ್ಷದ ಡೆಲಿವರಿ ಎಕ್ಸಿಕ್ಯೂಟಿವ್ ಬಸ್ ಗೆ ಡಿಕೆ ಹೊಡೆದು ಸ್ಥಳದಲ್ಲೇ ಪ್ರಾಣ ಕಳೆಕೊಂಡರು. ಆತ ಯಾವ ಕಂಪನಿ ಅನ್ನೋದು ಮುಖ್ಯ ಅಲ್ಲ. ಆದರೆ ಆತ ಹೋಗ್ತಾ ಇದ್ದ ಸ್ಪೀಡ್ ಆತನ ಮೇಲಿದ್ದ ಪ್ರೆಷರ್ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಯಿತು. 2025ರ ಆಗಸ್ಟ್ ನಲ್ಲಿ ದಿಲ್ಲಿಯ ವಸಂತ್ ಕುಂಜ್ ಏರಿಯಾದಲ್ಲಿ ಒಬ್ಬ ಡೆಲಿವರಿ ಎಕ್ಸಿಕ್ಯೂಟಿವ್ ವೇಗವಾಗಿ ಹೋಗೋ ಬರದಲ್ಲಿ ಪ್ರಾಣ ಕಳೆಕೊಂಡ್ರು. ನಮ್ಮ ಬೆಂಗಳೂರಲ್ಲಿ ಅಕ್ಟೋಬರ್ 2025 ರಲ್ಲಿ 24 ವರ್ಷದ ಯುವಕ ರೋಡ್ ರೇಂಜ್ಗೆ ಬಲಿಯಾದ್ರು. ಆ ಸಿಸಿಟಿವಿ ದೃಶ್ಯಗಳು ವೈರಲ್ ಆದವು. ಇದೆಲ್ಲ ಏನಂತ ಸೂಚಿಸುತ್ತೆ? ಒಬ್ಬ ರೈಡರ್ ಟಾರ್ಗೆಟ್ ರೀಚ್ ಮಾಡೋಕೆ ಸಿಗ್ನಲ್ ಜಂಪ್ ಮಾಡೋದು, ಫುಟ್ ಪಾತ್ ಮೇಲೆ ಓಡಿಸೋದು. ಬೆಂಗಳೂರು ಟ್ರಾಫಿಕ್ ಪೊಲೀಸ್ ಡೇಟಾ ಪ್ರಕಾರ 2025ರ ನವೆಂಬರ್ ಒಂದೇ ವಾರದಲ್ಲಿ ಡೆಲಿವರಿ ಏಜೆಂಟ್ ಗಳ ಮೇಲೆ 17,000 ಕೇಸ್ ಹಾಕಲಾಗಿದೆ. 17,000 ಕೇಸ್ ದುಡ್ಡು ಮಾಡೋಕ್ಕೆ ಹೋಗಿ ಅಂದ್ರೆ ಜೀವನೋಪಾಯಕ್ಕಾಗಿ ಅರ್ನಿಂಗ್ ಮಾಡೋಕೆ ಹೋಗಿ ಫೈನ್ ಹಾಕಿಸಿಕೊಳ್ತಿದ್ದಾರೆ. ಬರೋಬರಿ 80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿತ್ತು ಅವರಿಂದ.

ಎರಡನೇ ಮುಖ್ಯ ಕಾರಣ ದ ಗಿಗ್ ವರ್ಕರ್ ಸ್ಟ್ರೈಕ್ ನಿಮಗೆ ನೆನಪಿರಬಹುದು ಡಿಸೆಂಬರ್ 31, 2025 ಹೊಸ ವರ್ಷದ ಹಿಂದಿನ ದಿನ ದೇಶಾದ್ಯಂತ ಡೆಲಿವರಿ ಎಕ್ಸಿಕ್ಯೂಟಿವ್ಸ್ ಮುಷ್ಕಾರವನ್ನ ನಡೆಸಿದರು. ನಮಗೆ 10 ನಿಮಿಷದ ಡೆಲಿವರಿ ಬೇಡ ನಮಗೆ ಬದುಕೋಕೆ ಬಿಡಿ ಅನ್ನೋದು ಅವರ ಕೂಗಾಗಿತ್ತು. ಸಂಸತ್ನಲ್ಲೂ ಚರ್ಚೆ ಆಯ್ತು. 10 ನಿಮಿಷದ ಮ್ಯಾಥಮೆಟಿಕ್ಸ್ ಇದು ಮಿಷನ್ ಇಂಪಾಸಿಬಲ್ ಎಸ್ ಚೆಕ್ ಮಾಡೋಣ ನಿಜಕ್ಕೂ 10 ನಿಮಿಷದಲ್ಲಿ ಡೆಲಿವರಿ ಮಾಡೋಕ್ಕೆ ಸಾಧ್ಯನಾ? ಇದರ ಹಿಂದಿರೋ ಲಾಜಿಕ್ ಏನು ರಿಯಾಲಿಟಿ ಏನು? ಲೆಟ್ಸ್ ಡು ದ ಮ್ಯಾಥ್. ಮೊದಲು ಈ ಕಂಪನಿಗಳು ಹೇಗೆ ಕೆಲಸ ಮಾಡ್ತಾವೆ ಅಂತ ತಿಳ್ಕೊಳ್ಳಿ. ಇವರು ನಿಮ್ಮ ಏರಿಯಾದಲ್ಲೇ ಅಂದ್ರೆ ರೆಸಿಡೆನ್ಶಿಯಲ್ ಏರಿಯಾಗಳ ನಡುವೆ ನಡುವೆನೆ ಸಣ್ಣ ಸಣ್ಣ ಸಣ್ಣ ಸಣ್ಣ ಸಣ್ಣ ಡಾರ್ಕ್ ಸ್ಟೋರ್ಸ್ ಅಂದ್ರೆ ಚಿಕ್ ಚಿಕ್ಕ ಗೋಡೌನ್ ಗಳನ್ನ ಮಾಡಿಟ್ಟಿರ್ತಾರೆ. ಇಲ್ಲಿ ಬರಿ ಹಾಲು, ಬ್ರೆಡ್ ತರಕಾರಿ ಅಂತ ಫಾಸ್ಟ್ ಮೂವಿಂಗ್ ಐಟಮ್ಸ್ ಮಾತ್ರ ಇರುತ್ತೆ. ಒಂದು ಡಾರ್ಕ್ ಸ್ಟೋರ್ ಸಾಮಾನ್ಯವಾಗಿ ಎರಡರಿಂದ 3 ಕಿಲೋಮೀಟ ರೇಡಿಯಸ್ ಮಾತ್ರ ಕವರ್ ಮಾಡುತ್ತೆ. ಈಗ ಲೆಕ್ಕಾಚಾರ ನೀವು ಆರ್ಡರ್ ಮಾಡಿರೋ ಜಾಗ ಸ್ಟೋರ್ ನಿಂದ 2 ಕಿಲೋಮೀಟ ದೂರ ಇದೆ ಅಂತ ಅನ್ಕೊಳ್ಳೋಣ. ಕಂಪನಿ ಪ್ರಾಮಿಸ್ ಮಾಡಿರೋದು 10 ಮಿನಿಟ್ಸ್. ಪೇಪರ್ ಮೇಲೆ ಲೆಕ್ಕ ಹಾಕಿದ್ರೆ 2 ಕಿಲೋಮೀಟ ಹೋಗೋಕೆ 10 ನಿಮಿಷ ಅಂದ್ರೆ ಬೈಕ್ ಸ್ಪೀಡ್ ಗಂಟೆಗೆ ಜಸ್ಟ್ 12 ಕಿಲೋಮೀಟ ಮಾತ್ರ ಸಾಕು ಸಿಂಪಲ್ ಅಂತ ಅನ್ಸುತ್ತೆ ಆದರೆ ರಿಯಾಲಿಟಿ ಬೇರೆನೇ ಇದೆ.

ಆ 10 ನಿಮಿಷದಲ್ಲಿ ರೈಡರ್ ಬರಿ ಬೈಕ್ ಓಡಿಸಲ್ಲ. ಮೊದಲು ನಿಮ್ಮ ಆರ್ಡರ್ ಪ್ಯಾಕ್ ಆಗ್ಬೇಕು. ಅದಕ್ಕೆ ಕನಿಷ್ಠ ಎರಡು ನಿಮಿಷ ಬೇಕು. ರೈಡರ್ ಬೈಕ್ ಪಾರ್ಕ್ ಮಾಡಬೇಕು, ಲಿಫ್ಟ್ ಹತ್ತಬೇಕು, ನಿಮ್ಮ ಫ್ಲಾಟ್ ಹುಡುಕಬೇಕು, ಬೆಲ್ ಮಾಡಬೇಕು ಇದಕ್ಕೆ ಕನಿಷ್ಠ ಎರಡರಿಂದ ಮೂರು ನಿಮಿಷ ಬೇಕೇಬೇಕು. ಸೋ 10 ನಿಮಿಷದಲ್ಲಿ ನಾಲ್ಕೈದು ನಿಮಿಷ ಇಲ್ಲೇ ಹೋಯ್ತು ಉಳಿದಿರೋದು ಎಷ್ಟು ಕೇವಲ ಐದರಿಂದ ಆರು ನಿಮಿಷ ಐದರಿಂದ ಆರು ನಿಮಿಷದಲ್ಲಿ 2 ಕಿಲೋಮೀಟ ತಲುಪಬೇಕು. ಅಂದ್ರೆ ಆತನ ಸ್ಪೀಡ್ ಈಗ 25 ರಿಂದ 30 ಕಿಲೋಮೀಟ ಗೆ ಬರಲೇಬೇಕು. ಭಾರತದ ಟ್ರಾಫಿಕ್ ನಲ್ಲಿ ನಗರಗಳ ಟ್ರಾಫಿಕ್ ನಲ್ಲಿ ಸಿಗ್ನಲ್ ಗಳಲ್ಲಿ ಹಂಪ್ಗಳಲ್ಲಿ ಗುಂಡಿ ಬಿದ್ದ ರಸ್ತೆಗಳಲ್ಲಿ ಸರಾಸರಿ 25 km ಪರ್ ಸ್ಪೀಡ್ ಮೇಂಟೈನ್ ಮಾಡೋದು ಅಷ್ಟು ಈಸಿ ಇಲ್ಲ. ಒಂದು ಸಿಗ್ನಲ್ ಸಿಕ್ಕಿದ್ರು ಕೂಡ ಕಥೆ ಮುಗಿತು ಒಂದು ಒಂದೂವರೆ ನಿಮಿಷ ಸಿಗ್ನಲ್ ಇರುತ್ತೆ ಅವಾಗ ಏನಾಗುತ್ತೆ ಈ ಸ್ಪೀಡ್ 50 60 km ಪರ್ ರಿಕ್ವೈರ್ಮೆಂಟ್ಗೆ ಹೋಗ್ಬಿಡುತ್ತೆ ಸೀದ ಟೈಮ್ ಸೇವ್ ಮಾಡೋಕೆ ಸಿಗ್ನಲ್ ಜಂಪ್ ಮಾಡ್ತಾರೆ ರಾಂಗ್ ಸೈಡ್ ನಲ್ಲಿ ಬೈಕ್ ನುಗ್ಗಿಸ್ತಾರೆ ಫುಟ್ ಪಾತ್ ಮೇಲೆ ಹೋಗ್ತಾರೆ ಜೀವನ ನಡೆಸೋಕೋಸ್ಕರ ಅಡ್ಡ ದಿಡಿ ಓವರ್ಟೇಕ್ ಮಾಡ್ತಾರೆ ಜೀವ ಪಣಕ್ಕೆ ಇಡ್ತಾರೆ ಜೀವನ ನಡೆಸೋಕೋಸ್ಕರ ಕೇವಲ ಒಂದು ಬ್ರೆಡ್ ಪ್ಯಾಕೆಟ್ ತಲುಪಿಸೋಕೆ ಅಥವಾ ಇನ್ನೇನೋ ಒಂದು ಪ್ಯಾಕೆಟ್ ತಲುಪಿಸೋಕೆ ನಡೀತಾ ಇರೋ ಸಾವಿನ ರೇಸ್ ಇದು ಗಿಡ್ ವರ್ಕರ್ಸ್ ಗೋಳು ಆಲ್ಗೋರಿದಮಗೆ ಕರುಣೆ ಇಲ್ಲೇ ಇಲ್ಲಿ ನಾವು ಅರ್ಥ ಮಾಡ್ಕೊಬೇಕಾಗಿರೋದು ಮುಖ್ಯ ವಿಚಾರ ಏನು ಗೊತ್ತಾ.

ಈ ಹುಡುಗರು ಅಥವಾ ಹುಡುಗಿರು ಕೂಡ ಡೆಲಿವರಿ ಮಾಡ್ತಿದ್ದಾರೆ ಮಹಿಳೆಯರು ಕೂಡ ಯಾಕೆ ಇಷ್ಟು ರಿಸ್ಕ್ ತಗೋತಾರೆ ಅಂತ ಅವರ ಜೀವದ ಮೇಲೆ ಅವರಿಗೆ ಆಸೆ ಇರೋದಿಲ್ವಾ ಖಂಡಿತ ಇದೆ ಆದರೆ ಅವರನ್ನ ಕಂಟ್ರೋಲ್ ಮಾಡ್ತಿರೋದು ಮ್ಯಾನೇಜರ್ ಅಲ್ಲ ಅದೊಂದು ಆಲ್ಗೋರಿದಮ್ ನೋಡಿ ಆಗ್ಲಿ ಅಥವಾ ಯಾರೇ ಆಗ್ಲಿ ನೀವು ಲೇಟ್ ಹೋದ್ರೆ ಫೈನ್ ಹಾಕ್ತೀವಿ ಅಂತ ಬಾಯಬಿಟ್ಟು ಹೇಳಲ್ಲ ಆದ್ರೆ ಅಲ್ಲಿರೋ ಸಿಸ್ಟಮ್ ಹೇಗಿದೆ ಅಂದ್ರೆ ಒಂದು ವೇಳೆ ನೀವು ಸ್ಲೋ ಅಂತ ಮಾರ್ಕ್ ಆದ್ರೆ ನೆಕ್ಸ್ಟ್ ನಿಮಗೆ ಆರ್ಡರ್ಸ್ ಬರೋದು ಕಮ್ಮಿ ಆಗುತ್ತೆ ಆರ್ಡರ್ಸ್ ಕಮ್ಮಿ ಆದ್ರೆ ದಿನದ ಸಂಪಾದನೆ ಕಮ್ಮಿ ಆಗುತ್ತೆ ಒಂದು ಆರ್ಡರ್ಗೆ ಸಿಗೋದು ಬರಿ 20 ರಿಂದ 30 ರೂಪಾಯಿ ಹೆಚ್ಚು ದುಡಿಬೇಕು ಅಂದರೆ ಹೆಚ್ಚು ಹೆಚ್ಚು ಆರ್ಡರ್ ಮಾಡಬೇಕು ಹೆಚ್ಚು ಆರ್ಡರ್ ರಿಸೀವ್ ಮಾಡಿ ಸರ್ವ್ ಮಾಡಬೇಕು ಅಂದ್ರೆ ವೇಗವಾಗಿ ಗಾಡಿ ಓಡಿಸಬೇಕು. ಇದೇ ಕಾರಣಕ್ಕೆ ಡಿಸೆಂಬರ್ ನಲ್ಲಿ ದೊಡ್ಡ ಮುಷ್ಕರ ಮಾಡಿತ್ತು. ಬೆಂಗಳೂರು ದಿಲ್ಲಿ ಮುಂಬೈನಲ್ಲಿ ಸಾವಿರಾರು ರೈಡರ್ಸ್ ಸ್ಕೂಟರ್ ಬೈಕ್ ಬಿಟ್ಟು ಪೋಸ್ಟರ್ ಹಿಡಿದು ರೋಡ್ಗೆ ಇಳಿದ್ರು ನಮಗೆ ಸೇಫ್ಟಿ ಕೊಡಿ 10 ನಿಮಿಷದ ಪ್ರೆಷರ್ ಬೇಡ ನಮಗೆ ಇನ್ಶೂರೆನ್ಸ್ ಮಾಡಿಸಿಕೊಡಿ ಅಂತ ಅವರು ಬೆನ್ನ ಮೇಲೆ ಹೊರೋ ಬ್ಯಾಗ್ ಭಾರ ಎಷ್ಟಿರುತ್ತೆ ಗೊತ್ತಾ ಅದರಿಂದ ಬೆನ್ನ ನೋವು ಕುತ್ತಿಗೆ ನೋವು ಕಾಮನ್ ಆಗಿಹೋಗಿದೆ ಮಳೆ ಇರಲಿ ಚಳಿ ಇರಲಿ ರಾತ್ರಿ ಇರಲಿ 10 ನಿಮಿಷ ಅಂದ್ರೆ 10 ನಿಮಿಷ ಈ ಅಮಾನವೀಯ ಟಾರ್ಗೆಟ್ ವಿರುದ್ಧ ಈಗ ಅಸಲಿ ಹೋರಾಟ ಶುರುವಾಗಿದೆ.

ಸರ್ಕಾರ ಕೂಡ ಇಮ್ಮಿಡಿಯೇಟ್ಲಿ ಈಗ ರೆಸ್ಪಾಂಡ್ ಮಾಡಿದೆ ಇಂಡಿಯಾ ಗಿಳಿ ಪಂಜರ ಆಯ್ತಾ ವಿದೇಶಗಳಲ್ಲಿ ಫ್ಲಾಪ್ ಇಲ್ಲಿಯಾಕೆ ಹಿಟ್ ಎಸ್ ಇಂಟರೆಸ್ಟಿಂಗ್ ಈ 10 ಮಿನಿಟ್ಸ್ ಡೆಲಿವರಿ ಕಾನ್ಸೆಪ್ಟ್ ಹುಟ್ಟಿದ್ದು ಭಾರತದಲ್ಲಿ ಅಲ್ಲ ಇದು ಯೂರೋಪ್ ಮತ್ತು ಅಮೆರಿಕಾದಲ್ಲಿ ಟ್ರೈ ಮಾಡಿ ನೋಡಿದ್ರು ಅಲ್ಲಿ ಗೊರಿಲ್ಲಾಸ್ ಗೆರ್ ಗೋಪಫ್ ಈ ರೀತಿ ಕಂಪನಿಗಳು ಈ ರೀತಿ ಶುರು ಮಾಡಿದ್ರು ಆದ್ರೆ ಏನಾಯ್ತು ದಯನೀಯವಾಗಿ ಫೇಲ್ ಆಯ್ತು. ಗೆಟಿರ್ ಎಷ್ಟೋ ರಾಷ್ಟ್ರಗಳಿಂದ ತನ್ನ ಬಿಸಿನೆಸ್ ಮುಚ್ಚಿಕೊಂಡು ಹೋಯ್ತು. ಗೊರಿಲ್ಲಾಸ್ ಕಂಪನಿ ಸೇಲ್ ಆಯ್ತು. ಯಾಕಂದ್ರೆ ಅಲ್ಲಿ ಲೇಬರ್ ಕಾಸ್ಟ್ ಜಾಸ್ತಿ. ಅಲ್ಲಿನ ಸರ್ಕಾರಗಳು ವರ್ಕರ್ ಸೇಫ್ಟಿ ಬಗ್ಗೆ ತುಂಬಾ ಸ್ಟ್ರಿಕ್ಟ್. ಅಲ್ಲಿ ಲಾಭ ಮಾಡೋಕೆ ಸಾಧ್ಯ ಆಗ್ಲಿಲ್ಲ. ಆದರೆ ಭಾರತದಲ್ಲಿ ಇದು ಯಾಕೆ ಭೂಮಿ ಆಗ್ತಿದೆ? ಯಾಕಂದ್ರೆ ನಮ್ಮಲ್ಲಿ ಜನಸಂಖ್ಯೆ ಜಾಸ್ತಿ. ಜನಸಂಖ್ಯೆ ಜಾಸ್ತಿಯಿಂದ ಎರಡು ಲಾಭ ಇವರಿಗೆ ಸಿಕ್ಕಾಪಟ್ಟೆ ನಿರುದ್ಯೋಗ ಇದೆ ಕಮ್ಮಿ ಲೇಬರ್ ಗೆ ಜನ ಸಿಗ್ತಾರೆ. ಇನ್ನೊಂದು ಡೆನ್ಸಿಟಿ ಕೂಡ ಜಾಸ್ತಿ ಚಿಕ್ಕ ಚಿಕ್ಕ ಜಾಗದಲ್ಲಿ ಸಿಕ್ಕಾಪಟ್ಟೆ ಪಾಪುಲೇಷನ್ ಇದೆ. ಒಂದೊಂದು ಸ್ಟೋರ್ಗೂ ಕೂಡ ಸಿಕ್ಕಾಪಟ್ಟೆ ಜನ ಸಿಗ್ತಾರೆ ಸರ್ವ್ ಮಾಡಕ್ಕೆ ಮ್ಯಾಥಮೆಟಿಕ್ ವರ್ಕ್ ಆಗುತ್ತೆ ಬಿಸಿನೆಸ್ ನಲ್ಲಿ ಅಂತ. ಇದೇ ಕಾರಣಗಳಿಗಾಗಿನೇ ವಿದೇಶದಲ್ಲಿ ಫ್ಲಾಪ್ ಆದ ಮಾಡೆಲ್ ಇಲ್ಲಿ ಸೂಪರ್ ಹಿಟ್ ಆಗಿದೆ.

ಜೆಪ್ಟೋ ಕಂಪನಿಯ ವ್ಯಾಲ್ಯುವಯೇಷನ್ ಬರೋಬರಿ 7 ಬಿಲಿಯನ್ ಡಾಲರ್ 586,000 ಕೋಟಿ ರೂಪಾಯಿ. ಬ್ಲಿಂಕೆಟ್ ದು ಮಾರ್ಕೆಟ್ ಶೇರೇ 50% ಇದೆ. ಇವರದು ವ್ಯಾಲ್ಯುವೇಷನ್ ಎಷ್ಟು ಗೊತ್ತಾ 2,74,000 ಕೋಟಿ ರೂಪಾಯಿ ಪ್ಯಾರೆಂಟ್ ಕಂಪನಿ ಎಟರ್ನಲ್ದು ವ್ಯಾಲ್ಯುವೇಷನ್ ಇನ್ವೆಸ್ಟರ್ ಗಳು ಕೋಟಿ ಕೋಟಿ ಸುರಿತಾ ಇದ್ದಾರೆ. ಆದರೆ ಈ ಸಾಮ್ರಾಜ್ಯ ನಿಂತಿರೋದು ಆ 20 ರೂಪಾಯಿಗೆ ದುಡಿಯೋ ರಿಸ್ಕ್ ತಗೊಂಡು ಬೈಕ್ ಸೈಕಲ್ ಎಲೆಕ್ಟ್ರಿಕ್ ಸ್ಕೂಟರ್ ನುಗಿಸೋ ಆ ಯಂಗ್ ಪಾಪುಲೇಷನ್ ಮೇಲೆ ಅದನ್ನ ನಾವು ಮರಿಬಾರದು. ಬಿಸಿನೆಸ್ ಮೇಲೆ ಇಂಪ್ಯಾಕ್ಟ್ ಶೇರು ಪೇಟೆ ಶಾಕ್ ಆಗಿದೆಯಾ ನಿಮಗೆ ಅನ್ಸಿರುತ್ತೆ ಓ ಶೇರ್ ಬೆಲೆ ಬಿದ್ದಿರುತ್ತೆ ಅಂತ. ಇಲ್ಲ ಆಗಿರೋದು ಉಲ್ಟಾ ಸರ್ಕಾರದ ಮೀಟಿಂಗ್ ನ್ಯೂಸ್ ಬಂದ ತಕ್ಷಣ ಜೊಮೆಟೋ ಅದರ ಪೇರೆಂಟ್ ಕಂಪನಿ ಎಟರ್ನಲ್ ಮತ್ತು ಸ್ವಿಗ್ಗಿ ಶೇರ್ಗಳು ಕುಸಿಯೋ ಬದಲು ಏರಿಕೆ ಕಂಡಿವೆ. ಯಾಕೆ ಹೀಗೆ ಇನ್ವೆಸ್ಟರ್ಸ್ ಗೆ ಏನಾಯ್ತು ಇಲ್ಲಿ ಎರಡು ಕಾರಣ ರೆಗಯುಲೇಟರಿ ಸರ್ಟನಿಟಿ ಇನ್ವೆಸ್ಟರ್ಸ್ ಗೆ ಯಾವಾಗ್ಲೂ ಅನಿಶ್ಚಿತತೆ ಇಷ್ಟ ಆಗಲ್ಲ ಚೂರು ಕಾಸ್ಟ್ ಜಾಸ್ತಿ ಆದ್ರೂ ಪರವಾಗಿಲ್ಲ ಕ್ಲಾರಿಟಿ ಬೇಕು ಅಂತ ಬಯಸ್ತಾರೆ. ಸರ್ಕಾರ ಈಗ ಕ್ಲಿಯರ್ ಸ್ಟ್ಯಾಂಡ್ ತಗೊಂಡಿದೆ. ಬ್ಯಾನ್ ಮಾಡಿಲ್ಲ. ಜಸ್ಟ್ ರಿಬ್ರಾಂಡ್ ಮಾಡೋಕೆ ಹೇಳಿದೆ. 10 ಮಿನಿಟ್ಸ್ ಅಂತ ಡೆಡ್ ಲೈನ್ ಕೊಡಬೇಡಿ ಅಂತ.

10 ಮಿನಿಟ್ಸ್ ಅಲ್ಲಿ ಡೆಲಿವರಿ ಮಾಡೋಕ್ಕೆ ಆಯ್ತು ಅಂದ್ರೆ ಪ್ರೆಷರ್ ಇಲ್ಲದೆ ಮಾಡಿದ್ರೆ ಮಾಡ್ಲಿ ಹತ್ತರದಲ್ಲೇ ಇತ್ತು ಎರಡು ಹೆಜ್ಜ ಇತ್ತು ಪಕ್ಕದ ಪಕ್ಕದ ಸ್ಟ್ರೀಟ್ ಅಲ್ಲೇ ಇತ್ತು ಅಂದ್ರೆ ಆಗುತ್ತೆ. ಫೈವ್ ಮಿನಿಟ್ಸ್ ಗೂ ಮಾಡಬಹುದು. ನಿಮ್ಮ ಮನೆ ಪಕ್ಕದ ಸ್ಟ್ರೀಟ್ ಅಲ್ಲಿ ಇತ್ತು ಅಂತ ಹೇಳಿದ್ರೆ ನಡ್ಕೊಂಡು ಬಂದು ಕೊಟ್ಟುಬಿಡಬಹುದು ಐದು ನಿಮಿಷದಲ್ಲಿ. ಸೋ ಬ್ರಾಂಡಿಂಗ್ ಮಾಡಬೇಡಿ ಅಂತ ಅಷ್ಟೇ ಹೇಳಿದೆ. ಡೆಲಿವರಿ ಎಕ್ಸಿಕ್ಯೂಟಿವ್ಸ್ ಮೇಲೆ ಪ್ರೆಷರ್ ಬೇಡ ಅಂತ. ಸೋ ಬಿಸಿನೆಸ್ ನಿಲ್ಲಲ್ಲ ಅನ್ನೋದು ಧೈರ್ಯ ಬಂದಿದೆ. ನೆಕ್ಸ್ಟ್ ಕಾಸ್ಟ್ ಸೇವಿಂಗ್ 10 ನಿಮಿಷದಲ್ಲಿ ಕೊಡ್ಲೇಬೇಕು ಅಂದ್ರೆ ಕಂಪನಿಗಳು ರೈಡರ್ಸ್ ಗೆ ಎಕ್ಸ್ಟ್ರಾ ಇನ್ಸೆಂಟಿವ್ ಕೊಡಬೇಕಾಗಿತ್ತು. ಹೆಚ್ಚು ಸ್ಟೋರ್ಸ್ ತೆಗೆಬೇಕಾಗಿತ್ತು. ಆ ಪ್ರೆಷರ್ ಈಗ ಸ್ವಲ್ಪ ಕಮ್ಮಿ ಆದ್ರೆ ಕಂಪನಿಗಳ ಖರ್ಚು ಉಳಿಬಹುದು ಪ್ರಾಫಿಟಬಿಲಿಟಿ ಇನ್ನಷ್ಟು ಇಂಪ್ರೂವ್ ಆಗಬಹುದು ಕಂಪನಿಗಳದು ಅನ್ನೋ ಲೆಕ್ಕಾಚಾರ. ಸೋ ಕಂಪನಿಗಳಿಗೆ ಹೊಡ್ತಾ ಅಲ್ಲ ಇದೊಂದು ರೀತಿ ಬ್ಲೆಸ್ಸಿಂಗ್ ಇನ್ ಡಿಸ್ಗೈಸ್ ಮಾರು ವೇಷದಲ್ಲಿ ಬಂದ ವರ ಆಗೋ ಸಾಧ್ಯತೆ ಇದೆ. ಇಲ್ಲ ಅಂದ್ರೆ ಹುಚ್ಚು ಬಿದ್ದವರ ತರ ಒಬ್ಬರ ಮೇಲೊಬ್ಬರು ಕಾಂಪಿಟೇಷನ್ ಮಾಡ್ಕೊಂಡು ಅವರು ಅನಾಹುತ ಮಾಡ್ಕೊಂಡು ಸಿಕ್ಕಾಪಟ್ಟೆ ಡಾರ್ಕ್ ಸ್ಟೋರ್ಸ್ ಅನ್ನ ಓಪನ್ ಓಪನ್ ಓಪನ್ ಓಪನ್ ಮಾಡಿ ಅದಕ್ಕೂ ಬಾಡಿಗೆ ಕಟ್ಕೊಂಡು ರೈಡರ್ಸ್ಗೂ ಕೂಡ ಪ್ರೆಷರ್ ಮಾಡಿ ಅವರನ್ನ ಕೂಡ ಬೀಳಿಸಿ ಅವರ ಮೇಲು ಅವರ ಮೇಲು ಜಾಸ್ತಿನು ಖರ್ಚು ಮಾಡಿ ಎಲ್ಲರಿಗೂ ಲಾಸ್ ಲಾಸ್ ಲಾಸ್ ಆದ್ರೆ ಈಗ ಎಲ್ಲರಿಗೂ ವಿನ್ ವಿನ್ ವಿನ್ ವಿನ್ ವಿನ್ ಹೆಚ್ಚು ಸ್ಟೋರ್ಸ್ ಓಪನ್ ಮಾಡಬೇಕು ಅಂತಿಲ್ಲ ಯಾರು ಕಾಂಪಿಟೇಷನ್ ಮಾಡಂಗೆ ಇಲ್ಲ ಟೈಮ್ ವಿಚಾರದಲ್ಲಿ ಆ ಲೆಕ್ಕಾಚಾರ ಗ್ರಾಹಕರ ಕಥೆ ಏನು ನಮಗೆ ಲೇಟ್ ಆಗುತ್ತಾ ಇಲ್ಲ ಸ್ನೇಹಿತರೆ ಕ್ವಿಕ್ ಕಾಮರ್ಸ್ ಕ್ವಿಕ್ ಆಗೇ ಇರುತ್ತೆ.

10 ನಿಮಿಷದ ಡೆಡ್ ಲೈನ್ ಇರಲ್ಲ ಅದು 15 ನಿಮಿಷ ಆಗಬಹುದು 20 ನಿಮಿಷ ಆಗಬಹುದು ಆಗಲೇ ಹೇಳಿದಾಗ ನಿಮ್ಮ ಮನೆ ಪಕ್ಕದಲ್ಲಿ ಡಾರ್ಕ್ ಸ್ಟೋರ್ ಇತ್ತು ಅಂದ್ರೆ ಐದು ನಿಮಿಷದಲ್ಲಿ ಆಗಬಹುದು. ಇತ್ತೀಚಿಗೆ ಫೋಪ್ಸ್ ನಡೆಸಿದ ಒಂದು ಸರ್ವೆ ಪ್ರಕಾರ ಶೇಕಡ 60ಕ್ಕೂ ಅಧಿಕ ಗ್ರಾಹಕರು ಹೇಳ್ತಾರೆ ನಮಗೆ 10 ಮಿನಿಟ್ಸ್ ಡೆಲಿವರಿ ಬೇಕಾಗಿಲ್ಲ 20 30 ನಿಮಿಷ ಆದ್ರೂ ಓಕೆ ಅಂತ ಸೇಫ್ ಆಗಿ ಬರಲಿ ಅಂತ ಸೋ ಇಂಡಿಯನ್ ಕಸ್ಟಮರ್ಸ್ ಕೂಡ ಮೆಚೂರ್ ಆಗಿದ್ದಾರೆ ಹಾಗೆ ಬೆಲೆ ಏರಿಕೆ ಆಗುತ್ತಾ ಸದ್ಯಕ್ಕೆ ಅಂತಹ ಸೂಚನೆ ಇಲ್ಲ ಆದ್ರೆ ಕಮ್ಮಿನೆ ಆಗಬೇಕು ಪ್ರೆಷರ್ ಇಲ್ವಲ್ಲ ಅರ್ಜೆಂಟ್ ಡೆಲಿವರಿ ಮಾಡಬೇಕು ಅಂತ ಹೇಳಿ ಹಾಗಾಗಿ ಆದರೆ ಇದಕ್ಕೆ ಇನ್ನೊಂದು ಆಯಾಮ ಕೂಡ ಇದೆ ರೈಡರ್ ಸೇಫ್ಟಿ ಅದಕ್ಕೆ ಹೆಚ್ಚಿನ ಸೇಫ್ಟಿ ಮೆಜರ್ಸ್ ಮತ್ತು ಇನ್ಶೂರೆನ್ಸ್ ಗೆಲ್ಲ ಖರ್ಚು ಮಾಡೋ ಸನ್ನಿವೇಶ ಬಂತು ಅಂದ್ರೆ ಅವಾಗ ಕಾಸ್ಟ್ ಜಾಸ್ತಿ ಆಗೋ ಸಾಧ್ಯ ಸಾಧ್ಯತೆ ಕೂಡ ಇರುತ್ತೆ ರೈಡರ್ಗಳಿಗೆ ನಿಜವಾದ ಲಾಭ ಇದೆಯಾ ಎಸ್ ಅವರೇ ನಿಜವಾದ ವಿನ್ನರ್ಸ್ ಅವರ ತಲೆ ಮೇಲಿದ್ದ ಆ ಗನ್ ಈಗ ಪಕ್ಕಕ್ಕೆ ಸರದಿದೆ ನೋ ಮೋರ್ ಪೆನಾಲ್ಟಿಸ್ ಲೇಟ್ ಆಯ್ತು ಅಂತ ಅಲ್ಗರಿದಂ ಪೆನಾಲ್ಟಿ ಮಾಡಲ್ಲ ನಿಮಗೆ ಇನ್ಮೇಲೆ ಸೋಶಿಯಲ್ ಸೆಕ್ಯೂರಿಟಿ ಕೂಡ ಬರ್ತಾ ಇದೆ.

ಸೋಶಿಯಲ್ ಸೆಕ್ಯೂರಿಟಿ ಕೋಡ್ 2020 ಕೂಡ ಜಾರಿಗೆ ಬರ್ತಾ ಇದೆ ಕಂಪನಿಗಳು ತಮ್ಮ ಲಾಭದಲ್ಲಿ ಅಥವಾ ಟರ್ನ್ಓವರ್ ನಲ್ಲಿ ಒಂದರಿಂದ 2% ಹಣವನ್ನ ವರ್ಕರ್ಸ್ ಫಂಡ್ಗೆ ಕೊಡಬೇಕಾಗುತ್ತೆ ಇದು ಅವರ ಹೋರಾಟಕ್ಕೆ ಸಿಕ್ಕ ಮೊದಲ ಜಯ ಅಂತಾನೆ ಹೇಳಬಹುದು ಆದರೆ ಇನ್ನು ಸಂಬಳದ ವಿಚಾರದಲ್ಲಿ ಪೇ ಸ್ಟ್ರಕ್ಚರ್ ನಲ್ಲಿ ಸ್ಪಷ್ಟತೆ ಸಿಕ್ಕಿಲ್ಲ ವೇಗಕ್ಕೆ ಕೊಡ್ತಾ ಇದ್ದ ಇನ್ಸೆಂಟಿವ್ ನಿಂತರೆ ಅವರ ಒಟ್ಟು ಆದಾಯ ಕಮ್ಮಿ ಆಗುತ್ತಾ ಅನ್ನೋ ಭಯ ಕೂಡ ಇದೆ. ಇದನ್ನ ಕಂಪನಿಗಳು ಹೇಗೆ ಬ್ಯಾಲೆನ್ಸ್ ಮಾಡ್ತಾವೆ ಅನ್ನೋದನ್ನ ನಾವು ನೋಡಬೇಕು. ಕಡೆಯದಾಗಿ ಸ್ನೇಹಿತರೆ ನಿಮಗೆ ಒಂದೇ ಸಂದೇಶ. ಇನ್ಮುಂದೆ ಬೆಲ್ ರಿಂಗ್ ಆದಾಗ ಬಾಗಿಲಿ ತೆಗೆದು ಯಾಕ್ ಲೇಟು ಅಂತ ಕೇಳೋ ಮುಂಚೆ ಥ್ಯಾಂಕ್ಯು ಹುಷಾರಾಗಿ ಬಂದ್ರಾ ಅಂತ ಕೇಳಿದ್ರೆ ಆ ಆ ನಿಮ್ಮ ಸ್ಮೈಲ್ ಅಥವಾ ನಿಮ್ಮ ಒಳ್ಳೆತನ ಅವರ ದಿನವನ್ನ ಚೇಂಜ್ ಮಾಡಬಹುದು. ಜೊತೆಗೆ ಸಾಧ್ಯ ಆದ್ರೆ ನಿಮಗೆ ಅನುಕೂಲ ಇದ್ರೆ ಐದು ರೂಪಾಯಿನ 10 ರೂಪಾಯಿನೋ 20 ರೂಪಾಯಿನೋ ಅಥವಾ ನಿಮ್ಮ ಶಕ್ತಿಯ ಅನುಸಾರ ನೀವು ತಂದಿರೋ ಐಟಂ ವ್ಯಾಲ್ಯೂಗೆ ಅನುಗುಣವಾಗಿ ನೀವು ಟಿಪ್ ಕೂಡ ಆಡ್ ಮಾಡಿದ್ರೆ ಅವರ ಜೀವನ ಬೆಟರ್ ಕೂಡ ಆಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments