ಉದ್ಯೋಗಾಸಕ್ತರಿಗೆ ಭಾರಿ ಅವಕಾಶ ರಾಜ್ಯದಲ್ಲಿ ಲಕ್ಷ ಸರ್ಕಾರಿ ಹುದ್ದೆ ಖಾಲಿ ಶೀಘ್ರದಲ್ಲೇ ನೇಮಕಾತಿ ಶುರು ಎಸ್ಸಿ ಒಳಮಿಸಲಾತಿ ಜಾರಿ ಸೇರಿ ಸಾಕಷ್ಟು ಕಾರಣಗಳಿಂದ ರಾಜ್ಯದಲ್ಲಿ ನಿಂತುಹೋಗಿದ್ದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕ್ಷಣಗಣನೆ ಆರಂಭವಾಗಿದೆ ಸರ್ಕಾರಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತಿರು ಅಭ್ಯರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ ಹಲವು ಇಲಾಖೆ ಸಂಸ್ಥೆಗಳು ನಿಗಮಗಳ ಲ್ಲಿ ಖಾಲಿ ಇರೋ ಹುದ್ದೆಗಳಿಗೆ ನೇಮಕಾತಿ ನಡೆಸಲು ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಮಾಹಿತಿ ಪ್ರಕಾರ ವಿವಿಧ ಇಲಾಖೆಗಳಲ್ಲಿ ಬರೋಬರಿ 270000 ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಮುಂದಿನ 12 ತಿಂಗಳಲ್ಲಿ ಈ ಸ್ಥಾನಗಳಿಗೆ ನೇಮಕಾತಿ ಆಗಬಹುದು ಅಂತ ಹೇಳಲಾಗ್ತಿದೆ. ಹಾಗಿದ್ರೆ ಯಾವ ಯಾವ ಇಲಾಖೆಗಳಲ್ಲಿ ಹುದ್ದೆ ಖಾಲಿ ಇವೆ ನೇಮಕಾತಿಗಳು ಸದ್ಯ ಯಾವ ಹಂತದಲ್ಲಿವೆ ಯಾವಾಗ ಅರ್ಜಿ ಸಲ್ಲಿಸಬಹುದು ಎಲ್ಲವನ್ನ ನೋಡ್ತಾ ಹೋಗೋಣ ಕಡೆತನಕ ಮಿಸ್ ಮಾಡದೆ ನೋಡಿ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ತುದಿಗಾಲಲ್ಲಿ ನಿಂತು ಕಾಯುತಿರೋ ಪೊಲೀಸ್ ಹುದ್ದೆಗೆ ನೇಮಕಾತಿ ನಡೆಸಲು ಸರ್ಕಾರ ತಯಾರಿ ಶುರು ಮಾಡಿದೆ 1650 ಸಿವಿಲ್ ಕಾನ್ಸ್ಟೇಬಲ್ ಸೇರಿದಂತೆ 4636 ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಆರಂಭಿಸಲು ಸಿದ್ಧತೆ ನಡೆದಿದೆ. ಇದರ ಜೊತೆಗೆ 20 ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ ಡಿಎಸ್ಐ ನೇಮಕಾತಿ ತಯಾರಿ ನಡೆದಿದೆ.
ಸಾಮಾನ್ಯವಾಗಿ ಇವರನ್ನ ಗಸ್ತು ತಿರುಗುವುದು ಸ್ಟೇಷನ್ ಕೆಲಸದಂತಹ ಸಿವಿಲ್ ವರ್ಕ್ ಗಳಿಗಿಂತ ಹೆಚ್ಚಾಗಿ ತನಿಖಾ ಕೆಲಸಕ್ಕೆ ಬಳಸಿಕೊಳ್ತಾರೆ ಡಿಟೆಕ್ಟಿವ್ ವಿಭಾಗದಲ್ಲಿ ಸಬ್ ಇನ್ಸ್ಪೆಕ್ಟರ್ ಆಗ್ಬೇಕಂದ್ರೆ ಅಭ್ಯರ್ಥಿಗಳು ಯುಜಿಸಿ ಮಾನ್ಯ ಕಾಲೇಜಿನಿಂದ ಕಾನೂನು ಪದವಿ ಹೊಂದಿರಬೇಕು ಇಲ್ಲ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಹೊಂದಿರಬೇಕು ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ರೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ ಈ ಕುರಿತು ಅರ್ಜಿ ಆಹ್ವಾನಿಸಲು ಗೃಹ ಇಲಾಖೆ ಕ್ರಮವಹಿಸ ತಿದೆ ಮುಂದಿನ ತಿಂಗಳ ಮೊದಲ ವಾರದಲ್ಲಿ ನೇಮಕಾತಿ ಅಧಿಸೂಚನೆಗಳು ಹೊರಬೀಳೋ ಸಾಧ್ಯತೆ ಇದೆ ಇದನ್ನ ಗೃಹ ಸಚಿವ ಜಿ ಪರಮೇಶ್ವರ್ ಕೂಡ ಕನ್ಫರ್ಮ್ ಮಾಡಿದ್ದು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರೋ 150000 ಹುದ್ದೆಗಳಲ್ಲಿ 4600 ಕಾನ್ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ ಅಲ್ದೆ 545 ಪಿಎಸ್ಐ ಗಳ ನೇಮಕಾತಿ ಮಾಡಿ ತರಬೇತಿ ನೀಡಲಾಗ್ತಿದೆ ಹೊಸದಾಗಿ 402 ಪಿಎಸ್ಐ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ ಅದರ ಜೊತೆ 600 ಪಿಎಸ್ಐ ಹುದ್ದೆಗೆ ನೇಮಕಾತಿ ಮಾಡ್ಕೊತೀವಿ ಅಂತ ಪರಮೇಶ್ವರ್ ಹೇಳಿದ್ದಾರೆ ಒಳಮೀಸಲಾತಿ ಜಾರಿ ಸಂಬಂಧ ನೇಮಕಾತಿ ನಡೆದಿರಲಿಲ್ಲ ಈಗ ಎಲ್ಲಾ ಇಲಾಖೆಗಳಲ್ಲಿ ನೇಮಕಾತಿ ಆರಂಭಿಸುತ್ತೇವೆ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಅಂತ ಹೇಳಿ ವಯೋಮಿತಿ ಸಡಿಲಿಸಿದ್ದೇವೆ ಮಾರ್ಗಸೂಚಿ ಅನ್ವಯ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತೆ ಅಂದಿದ್ದಾರೆ ಜೊತೆಗೆ ಇನ್ಸ್ಪೆಕ್ಟರ್ಗಳನ್ನ ಎರಡು ವರ್ಷಕ್ಕೆ ಒಮ್ಮೆ ವರ್ಗಾವಣೆ ಮಾಡೋ ನಿಯಮ ಕೂಡ ಜಾರಿಗೆ ತರಲಾಗಿದೆ ಅಂತ ತಿಳಿಸಿದ್ದಾರೆ ಎಸ್ಡಿಎ ಮತ್ತು ಎಫ್ಡಿಎ ನೇಮಕಾತಿ ಇನ್ನು ಸಾವಿರಾರು ಎಸ್ ಡಿ ಎ ಮತ್ತು ಎಫ್ ಡಿ ಎ ಹುದ್ದೆಗಳಿಗೆ ಕೂಡ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳೋ ಸಾಧ್ಯತೆ ಇದೆ.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅರಣ್ಯ ಇಲಾಖೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರೋ ಎಸ್ಡಿಎ ಮತ್ತು ಎಫ್ಡಿಎ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಸೋಕೆ ಕೆಪಿಎಸ್ಸಿ ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಇದೇತರ ಇತರೆ ಇಲಾಖೆಗಳಲ್ಲಿನ ಖಾಲಿ ಹುದ್ದೆ ಬಗ್ಗೆ ಕೆಪಿಎಸ್ಸಿಗೆ ಪ್ರಸ್ತಾವನೆ ಬಂದರೆ ಗರಿಷ್ಠ ಹುದ್ದೆಗಳ ಆಧಾರದ ಮೇಲೆ ಕೆಪಿಎಸ್ಸಿ ನೇಮಕಾತಿ ಅಧಿಸೂಚನೆ ಹೊರಡಿಸಲಿದೆ. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ನೇಮಕಾತಿ ಇನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರೋ 66 ಫೈರ್ ಸ್ಟೇಷನ್ ಆಫೀಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಖಾಲಿ ಇರೋ 1488 ಹುದ್ದೆಗಳ ನೇಮಕಾತಿ ಕೂಡ ಶೀಘ್ರದಲ್ಲೇ ಆರಂಭವಾಗೋ ಸಾಧ್ಯತೆ ಇದೆ ಈ ನೇಮಕಾತಿಗೆ ಮಂಜೂರಾತಿ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಸರ್ಕಾರದ ಅಂತಿಮ ಅನುಮತಿ ನಂತರ ನೇಮಕಾತಿ ಶುರುವಾಗಲಿದೆ ಸಣ್ಣ ನೀರಾವರಿ ಇಲಾಖೆ ನೇಮಕಾತಿ ಇನ್ನು ರಾಜ್ಯ ಸಣ್ಣ ನೀರಾವರಿ ಇಲಾಖೆಯಲ್ಲಿ ಕೂಡ ಶೀಘ್ರದಲ್ಲೇ ದೊಡ್ಡ ನೇಮಕಾತಿ ನಡೆಯಲಿದೆ ಇಲಾಖೆಯಲ್ಲಿ ಖಾಲಿ ಇರೋ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಜೂನಿಯರ್ ಇಂಜಿನಿಯರ್ ದ್ವಿತೀಯ ದರ್ಜೆ ಸಹಾಯಕ ಪ್ರಥಮ ದರ್ಜೆ ಸಹಾಯಕ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಪ್ರಥಮ ದರ್ಜೆ ಲೆಕ್ಕ ಸಹಾಯಕ ಸ್ಟೆನೋಗ್ರಾಫರ್ ಚಾಲಕ ಅಡುಗೆ ಭಟ್ಟ ಗುಮಾಸ್ತ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಶೀಘ್ರದಲ್ಲೇ ಅಧಿಸೂಚನೆ ಹೊರಬೀಳೋ ಸಾಧ್ಯತೆ ಇದೆ. ಎಸ್ಎಸ್ಎಲ್ಸಿ ಪಿಯುಸಿ ಯಾವುದೇ ಡಿಗ್ರಿ ಹಾಗೂ ಆಯಾ ಹುದ್ದೆಗಳಿಗೆ ಅನುಗುಣವಾಗಿ ನಿಗತಿ ಪಡಿಸಲಾಗಿರೋ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಬಕಾರಿ ಇಲಾಖೆ ನೇಮಕಾತಿ. ಇನ್ನು ರಾಜ್ಯದ ಅಬಕಾರಿ ಇಲಾಖೆಯಲ್ಲಿ ಕೂಡ ನೇಮಕಾತಿ ನಡೆಯಲಿದೆ.
ಇಲಾಖೆಯಲ್ಲಿ 865 ಅಬಕಾರಿ ಉಪನಿರೀಕ್ಷಕರು ಮತ್ತು 946 ಅಬಕಾರಿ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ನೇಮಕಾತಿಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸಬಹುದು. ಶಿಕ್ಷಕರ ನೇಮಕಾತಿ. ಇನ್ನು ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವರ್ಷ 18500 ಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಶೀಘ್ರವೇ ನೋಟಿಫಿಕೇಶನ್ ಹೊರಡಿಸಲಾಗುವುದು. ಜಸ್ಟಿಸ್ ನಾಗಮೋಹನ್ ದಾಸ್ ವರದಿ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇನ್ನು ರಾಜ್ಯದ ವಸತಿ ಶಾಲೆಗಳಲ್ಲಿ ಕೂಡ ಅನೇಕ ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಇವೆ. ಭಾಷಾ ಶಿಕ್ಷಕರು ದೈಹಿಕ ಶಿಕ್ಷಕರು ವಿಷಯ ಶಿಕ್ಷಕರು ಕಂಪ್ಯೂಟರ್ ಶಿಕ್ಷಕರು ವಿಶೇಷ ಶಿಕ್ಷಕರು ಸೇರಿ ಹಲವು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೇಮಕಾತಿ ನಡೆಸಿ ಅಂತ ಕೆಪಿಎಸ್ಸಿ ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳೋ ಸಾಧ್ಯತೆ ಇದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ ಇನ್ನು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ನೇಮಕಾತಿ ನಡೆಯಲಿದೆ. ಖಾಲಿ ಇರೋ ಬಿಲ್ ಕಲೆಕ್ಟರ್ ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ವಾಟರ್ ಆಪರೇಟರ್ ಮತ್ತು ಕ್ಲೀನರ್ ಸಹ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಸಿಇಓ ಗಳಿಗೆ ಸೂಚನೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇಮಕಾತಿ. ಇನ್ನು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲೂ ನೇಮಕಾತಿ ನಡೆಯಲಿದೆ. 150 ಹಾಸ್ಟೆಲ್ ವಾರ್ಡನ್ ಸೇರಿದಂತೆ ವಿವಿಧ ವೃಂದದ ಸುಮಾರು 975 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳೋ ಸಾಧ್ಯತೆ ಇದೆ. ಇನ್ನು ಹೀಗೆ ಕೃಷಿ ಇಲಾಖೆಯಲ್ಲಿ 6773 ಹುದ್ದೆ ಪಶು ಸಂಗೋಪನೆ ಇಲಾಖೆಯಲ್ಲಿ 10755, ಸಹಕಾರ ಇಲಾಖೆಯಲ್ಲಿ 4855 ಆರ್ಥಿಕ ಇಲಾಖೆಯಲ್ಲಿ 9 36 ಅರಣ್ಯ ಇಲಾಖೆಯಲ್ಲಿ 6337 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8334 ಉನ್ನತ ಶಿಕ್ಷಣ ಇಲಾಖೆಯಲ್ಲಿ 13227 ಕಾನೂನು ಇಲಾಖೆಯಲ್ಲಿ 7853 ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯಲ್ಲಿ 6191 ಹಾಗೆ ಒಳಾಡಳಿತ ಇಲಾಖೆಯಲ್ಲಿ 26168 ಹುದ್ದೆ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ 9 1980 ತೋಟಗಾರಿಕ ಇಲಾಖೆಯಲ್ಲಿ 2969 ಕಾರ್ಮಿಕ ಇಲಾಖೆಯಲ್ಲಿ 2613 ಅಲ್ಪಸಂಖ್ಯಾತ ಇಲಾಖೆ 4159 ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ 3769 ಕಂದಾಯ ಇಲಾಖೆಯಲ್ಲಿ 11145 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ 10898 ಸೇರಿ ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆಸ್ಸ ಒಳಮಿಸಲಾತಿ ಪರಿಷ್ಕರಣೆಯಾಗಿ ಹಂಚಿಕೆಯಾಗಿರುವುದರಿಂದ ಸರ್ಕಾರಿ ನೇಮಕಾತಿಗೆ ಇದ್ದ ತಡೆ ನಿವಾರಣೆಯಾಗಿದೆ ಈಗಾಗಲೇ ಕೆಲ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ ರಾಜ್ಯ ಸರ್ಕಾರ ಹೊಸ ನೇಮಕಾತಿಗಳಿಗೆ ಹಸಿರು ನಿಷಾನಿ ತೋರಿಸುವುದಷ್ಟೇ ಬಾಕಿ ಇದೆ.


