Thursday, November 20, 2025
HomeStartups and Businessಸರ್ಕಾರದ ತಂತ್ರಜ್ಞಾನ ಬದಲಾವಣೆ: ಗೂಗಲ್ ಬದಿಗೆ Zoho ಆಯ್ಕೆ

ಸರ್ಕಾರದ ತಂತ್ರಜ್ಞಾನ ಬದಲಾವಣೆ: ಗೂಗಲ್ ಬದಿಗೆ Zoho ಆಯ್ಕೆ

ಯಾವುದೇ ಒಂದು ಕ್ಷೇತ್ರದಲ್ಲಿ ಬದಲಾವಣೆ ಅಥವಾ ಪರಿವರ್ತನೆ ಆಗಬೇಕು ಅಂದ್ರೆ ಅದಕ್ಕೆ ಸಮಯ ಹಿಡಿಯುತ್ತೆ ರಾತ್ರೋರಾತ್ರಿ ಎಲ್ಲವನ್ನ ಬದಲಾವಣೆ ಮಾಡೋದಕ್ಕೆ ಆಗೋದಿಲ್ಲ ಈಗ ಡಿಜಿಟಲ್ ಸೇವೆಗಳ ವಿಚಾರವನ್ನೇ ತೆಗೆದುಕೊಳ್ಳೋಣ ಯುಪಿಐ ಬಳಕೆ ಆರಂಭವಾದಾಗ ಇದ್ದಕ್ಕಿದ್ದ ಹಾಗೆ ಜನ ಅದನ್ನ ಬಳಕೆ ಮಾಡೋದಕ್ಕೆ ಶುರು ಮಾಡಲಿಲ್ಲ ಎಲ್ಲವೂ ಹಂತಹಂತವಾಗಿ ಆಗಿ ಆಗಿದ್ದು ಈಗ ಬೀದಿಬದಿ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲ್ಗಳವರೆಗೆ ಎಲ್ಲರೂ ಯುಪಿಐ ಸಿಸ್ಟಮ್ಗೆ ಬದಲಾಗಿದ್ದಾರೆ ಕ್ಯಾಶ್ ಕೊಟ್ರು ಬೇಡ ಪೇ ಮಾಡಿ ಅಂತ ಹೇಳ್ತಾರೆ ಇಂತದೊಂದು ಬದಲಾವಣೆ ಆಗೋದಕ್ಕೆ ನಾಲ್ಕೈದು ವರ್ಷಗಳೇ ಬೇಕಾಯಿತು ಅನ್ನೋದು ಇಲ್ಲಿ ತುಂಬಾನೇ ಇಂಪಾರ್ಟೆಂಟ್ ನಾವೀಗ ಈ ಬದಲಾವಣೆಗಳ ಬಗ್ಗೆ ಹೇಳೋದಕ್ಕೆ ಕಾರಣ ಜೋಹೋ ಜೋಹೋದ ಬಗ್ಗೆ ನಾವು ಈಗಾಗಲೇ ತುಂಬಾ ವಿಡಿಯೋಗಳನ್ನ ಮಾಡಿದ್ದೇವೆ ಗೂಗಲ್ ಗೆ ಪರ್ಯಾಯವಾಗಿ ಜೋಹೋ ಯಾವ ಮಟ್ಟಿಗೆ ಬೆಳಿತಾ ಇದೆ ಅನ್ನುವ ಬಗ್ಗೆ ಸರಣಿ ವಿಡಿಯೋಗಳ ಳನ್ನ ಮಾಡಿದ್ದೇವೆ ಆದರೆ ಜನ ಇದ್ದಕ್ಕಿದ್ದ ಹಾಗೆ ಗೂಗಲ್ ನಿಂದ ಜೋಹೋಗೆ ಶಿಫ್ಟ್ ಆಗೋದು ಅಷ್ಟೊಂದು ಸುಲಭ ಅಲ್ಲವಟ್ ಬಳಕೆ ಮಾಡ್ತಾ ಇದ್ದವರು ಅರಟೈ ಬಳಕೆ ಮಾಡೋದಕ್ಕೆ ಸ್ವಲ್ಪ ಟೈಮ್ ಹಿಡಿಯುತ್ತೆಜಿಮೇಲ್ ಬಳಕೆ ಮಾಡ್ತಾ ಇದ್ದವರು ಜೋಹೋ ಮೇಲ್ ಬಳಕೆ ಮಾಡೋದಕ್ಕೆ ಸ್ವಲ್ಪ ಟೈಮ್ ಹಿಡಿಯುತ್ತೆ ಇದು ಸಹಜ ಆದರೆ ಈ ಸಹಜ ಪ್ರಕ್ರಿಯೆಯನ್ನೇ ಮೀರಿ ಭಾರತದಲ್ಲಿ ದೊಡ್ಡದೊಂದು ಬದಲಾವಣೆಯಾಗಿದೆ.

ಕೇವಲ ಮೂರೇ ಮೂರು ವಾರದ ಅಂತರದಲ್ಲಿ ಬರೊಬ್ಬರಿ 12 ಲಕ್ಷ ಸರ್ಕಾರಿ ನೌಕರರುಗೂಗಲ್ ನಿಂದ ಜೋಹೋಗೆ ಶಿಫ್ಟ್ ಆಗಿಬಿಟ್ಟಿದ್ದಾರೆ ಇದು ಜಗತ್ತಿನ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ಡಿಜಿಟಲ್ ಶಿಫ್ಟಿಂಗ್ ಅಲ್ಲಿಗೆ ಗೂಗಲ್ ಬುಡಕ್ಕೆ ಬೆಂಕಿ ಬಿದ್ದಿದೆ ಜಗತ್ತಿನಲ್ಲಿ ಹಲವು ಯುದ್ಧಗಳನ್ನ ನಿಲ್ಲಿಸಿದ್ದ ಟ್ರಂಪ್ ವಿರುದ್ಧ ಭಾರತ ಡಿಜಿಟಲ್ ಸಮರ ಸಾರಿದ್ದು ಗೊತ್ತೇ ಆಗಲಿಲ್ಲ ಜೋಹೋ ಗೂಗಲ್ ವಿರುದ್ಧ ಜೇಂಕಾರ ಹಾಕಿದೆ ಸರ್ಕಾರವಂತು ತನ್ನ ಸರ್ಕಾರಿ ಇಲಾಖೆಗಳಲ್ಲಿ ಗೂಗಲ್ ನಿಂದ ಸಂಪೂರ್ಣವಾಗಿ ಜೋಹೋಗೆ ರಿಪ್ಲೇಸ್ ಮಾಡೋದಕ್ಕೆ ಶುರು ಮಾಡಿದೆ ಅಲ್ಲಿಗೆ ಭಾರತದಲ್ಲಿಗೂಗಲ್ ನ ಅಂತ್ಯದ ಆರಂಭವಾಗಿದೆ ಗೂಗಲ್ ಗುಲಾಮಗಿರಿಯಿಂದ ಭಾರತಕ್ಕೆ ಮುಕ್ತಿ ಸಿಗುವ ಕಾಲ ಹತ್ತಿರವಾಗಿದೆ ಅಷ್ಟಕ್ಕೂ ಇಂತದೊಂದು ಬದಲಾವಣೆ ಆಗಿದ್ದು ಹೇಗೆ ಸರ್ಕಾರಿ ಇಲಾಖೆಗಳು ಸಂಪೂರ್ಣವಾಗಿ ಜೋಹೋಗೆ ಶಿಫ್ಟ್ ಆಗ್ತಾವ ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ ಭಾರತದಲ್ಲಿ ಅಕ್ಷರಶಹ ಜೋಹೋ ಬಿರುಗಾಳಿ ಎದ್ದಿದೆ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಡಿಜಿಟಲ್ ಶಿಫ್ಟಿಂಗ್ ಆಗ್ತಾ ಇದೆ. WhatsApp ಬಳಕೆ ಮಾಡ್ತಾ ಇದ್ದ ಜನ ಈಗ ಅರಟೈಗೆ ಶಿಫ್ಟ್ ಆಗಿದ್ದಾರೆ. ಅದೇ ರೀತಿಗೂಗಲ್ ಬಳಕೆ ಮಾಡ್ತಾ ಇದ್ದ ಜನ ಜೋಹೋಗೆ ಕಂಪ್ಲೀಟ್ ಆಗಿ ಶಿಫ್ಟ್ ಆಗ್ತಾ ಇದ್ದಾರೆ.ಗೂಗಲ್ ಯಾವೆಲ್ಲ ಸೇವೆಗಳನ್ನ ನೀಡುತ್ತೋ ಅದೆಲ್ಲ ಸೇವೆಗಳನ್ನ ಜೋಹೋ ಕೂಡ ನೀಡುತ್ತೆ.

ಹೀಗಾಗಿ ನಮಗೆ ಗೂಗಲ್ ಸಹವಾಸವೇ ಬೇಡವೇ ಬೇಡ ಅಂತ ನಮ್ಮದೇ ದೇಶದ ಜೋಹೋ ಸಾಕು ಅಂತ ಜನ ಜೋಹೋ ಬಳಕೆ ಮಾಡೋದನ್ನು ಶುರು ಮಾಡಿದ್ದಾರೆ ಈಗ ಸರ್ಕಾರ ಕೂಡ ಈ ಬದಲಾವಣೆಗೆ ಎಂಟ್ರಿ ಕೊಟ್ಟಿದೆ ಆರಂಭದಲ್ಲಿ ಮಂತ್ರಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ಗಳನ್ನ ಮಾಡಿದ್ದನ್ನ ನೀವು ನೋಡಿರಬಹುದು ಅದರಲ್ಲೂ ಗೃಹ ಸಚಿವ ಅಮಿತ್ ಶಾ ತನ್ನ ಅಧಿಕೃತ ಮೇಲ್ ಖಾತೆಯನ್ನ ಜಿಮೇಲ್ ನಿಂದ ಜೋಹೋ ಮೇಲ್ಗೆ ಬದಲಾವಣೆ ಮಾಡಿದ್ರು ಈಗ ವಯಕ್ತಿಕವಾಗಿ ಮಾತ್ರವಲ್ಲ ಸರ್ಕಾರಿ ನೌಕರರು ಹಾಗೂ ಇಲಾಖೆಗಳಲ್ಲಿ ಕೂಡ ಈ ಬದಲಾವಣೆಗಳು ಶುರುವಾಗಿದೆ ಅದಕ್ಕೆ ಸಾಕ್ಷಿ ಅನ್ನುವಂತೆ ಬರೊಬ್ಬರಿ 12 ಲಕ್ಷ ಸರ್ಕಾರಿ ನೌಕರರು ತಮ್ಮ ಮೇಲ್ ಖಾತೆಯನ್ನ ಜಿಮೇಲ್ ನಿಂದ ಜೋಹೋ ಮೇಲ್ಗೆ ಶಿಫ್ಟ್ ಮಾಡಿದ್ದಾರೆ ನೀವು ಈ ವಿಡಿಯೋ ನೋಡ್ತಾ ಇರುವ ಸಂದರ್ಭದಲ್ಲಿ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿರಬಹುದು ಇದು ಮೊದಲ ಹಂತದ ಶಿಫ್ಟಿಂಗ್ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ಕೇಂದ್ರ ಸರ್ಕಾರಿ ನೌಕರರು ಜೋಹಗೆ ಶಿಫ್ಟ್ ಆಗಲಿದ್ದಾರೆ ಅನ್ನುವ ಮಾಹಿತಿ ಇದೆ ಯಾಕೆ ಈ ರೀತಿಯ ಬದಲಾವಣೆ ಆಗ್ತಾ ಇದೆ ಭಾರತವನ್ನ ಈ ವಿಚಾರದಲ್ಲಿ ಕೆಣಕಿದ್ದು ಯಾರು ಅನ್ನೋದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಾದ ಅಗತ್ಯ ಇಲ್ಲ ಅನ್ಸುತ್ತೆ ಯಾವಾಗ ಅಮೆರಿಕ ಭಾರತದ ಮೇಲೆ ತೆರಿಗೆ ಸಮರ ಸಾರ್ಥೋ ಅಲ್ಲಿಂದ ಈ ಬದಲಾವಣೆ ಆಗೋದಕ್ಕೆ ಶುರುವಾಗಿದೆ ಯಾವುದೇ ವಿಚಾರದಲ್ಲಿ ನಾವು ಬೇರೆ ದೇಶಗಳನ್ನ ಅವಲಂಬಿಸಿಕೊಂಡು ಇರಬಾರದು ಅನ್ನೋದು ಇದರ ಮೂಲ ಉದ್ದೇಶ ಅದರಲ್ಲೂ ಅಮೆರಿಕಾದ ವಿಚಾರದಲ್ಲಿ ಸಂಪೂರ್ಣವಾಗಿ ದೂರ ಆಗಬೇಕು ಅನ್ನುವ ನಿಟ್ಟಿನಲ್ಲಿ ಅಮೆರಿಕಾ ನಿರ್ಮಿತ ಆಪ್ ಗಳಿಂದ ಭಾರತ ದೂರ ಸರಿಯೋದಕ್ಕೆ ನಿರ್ಧಾರ ಮಾಡಿದೆ ಎಲ್ಲದಕ್ಕಿಂತ ಹೆಚ್ಚಾಗಿ ಜನರ ಮನಸ್ಸಿನಲ್ಲಿ ಕೂಡ ಅಮೆರಿಕಾಗೆ ಹೇಗಾದರೂ ಮಾಡಿ ತಿರುಗೇಟು ಕೊಡಲೇಬೇಕು ಅನ್ನುವ ಕೆಚ್ಚು ಇದೆ ಇದೆ ಕಿಚ್ಚು ಈಗ ದೊಡ್ಡದೊಂದು ಬದಲಾವಣೆಗೆ ಕಾರಣವಾಗಿರೋದು ಆತ್ಮನಿರ್ಭರ ಭಾರತಕ್ಕೆ ಈ ಬದಲಾವಣೆ ದೊಡ್ಡ ಮಟ್ಟದ ಬೂಸ್ಟ್ ಕೊಟ್ಟುಬಿಟ್ಟಿದೆ.

ನಾವು ಆರಂಭದಲ್ಲೇ ಹೇಳಿದಂತೆ ದೇಶದ ಗೃಹ ಸಚಿವ ಅಮಿತ್ ಶಾ ಇತ್ತೀಚಿಗಷ್ಟೇ ತಮ್ಮ ಮೇಲ್ ಅಡ್ರೆಸ್ ಅನ್ನ ಜೋಹೋ ಮೇಲ್ಗೆ ಬದಲಾವಣೆ ಮಾಡಿ ಇನ್ಮುಂದೆ ಏನೇ ಮೇಲ್ ಮಾಡಬೇಕು ಅಂದ್ರು ಜೋಹೋ ಮೇಲ್ಗೆ ಮಾಡಿ ಇದು ಇನ್ನ ಮುಂದೆ ನನ್ನ ಅಧಿಕೃತ ಮೇಲ್ ಐಡಿ ಅನ್ನುವ ಹೇಳಿಕೆ ಕೊಟ್ಟು ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು ಈಗ ನೀವೆಲ್ಲ ಕೇಳಬಹುದು ಅರೆ ನಾವುಗೂಗಲ್ ನಿಂದ ಜೋಹೋಗೆ ಶಿಫ್ಟ್ ಆದರೆ ನಮಗೆ ಏನೆಲ್ಲ ಲಾಭ ಇದೆ ಲಾಭ ತುಂಬಾನೇ ಇದೆ ಮೊದಲನೇ ಲಾಭ ಆತ್ಮನಿರ್ಭರತೆ ಸ್ವಾವಲಂಬಿಗಳಾಗುತ್ತೇವೆ ಅಮೆರಿಕಾದ ಮೇಲೆ ಡಿಪೆಂಡ್ ಆಗಬೇಕಾದ ಅಗತ್ಯವಿಲ್ಲ ಮುಂದಿನ ದಿನಗಳಲ್ಲಿ ಅಮೆರಿಕಾ ಗೋಗಲ್ ಅನ್ನ ಕೂಡ ಅಸ್ತ್ರವನ್ನಾಗಿ ಬಳಕೆ ಮಾಡುವ ಸಂದರ್ಭ ಬರಬಹುದು ಅಂತಹ ಸಂದರ್ಭದಲ್ಲಿ ನಾವು ಇದ್ದಕ್ಕಿದ್ದಂತೆ ಗಲಿಬಿಲಿ ಆಗಬೇಕಾದ ಅಗತ್ಯ ಇರೋದಿಲ್ಲ ಇನ್ನು ಎರಡನೇ ಲಾಭ ಡೇಟಾ ಸೆಕ್ಯೂರಿಟಿ ಸ್ನೇಹಿತರೆ ನಿಮಗೆಲ್ಲ ಒಂದು ಪ್ರಶ್ನೆ ಮೂಡಿರಬಹುದುಗೂಗಲ್ವ ಗಳು ನಮ್ಮಿಂದ ಹೇಗೆ ಲಾಭ ಮಾಡಿಕೊಳ್ಳುತ್ತಾವೆ ಇದಕ್ಕೆ ಉತ್ತರ ತುಂಬಾನೇ ಸುಲಭ ಡೇಟಾ ಹೌದು ನಾವು WhatsApp ನಲ್ಲಿ ಏನೆಲ್ಲ ಚಾಟ್ ಮಾಡ್ತೀವೋ ಅದನ್ನ WhatsAppಟ್ ಡೇಟಾದ ರೂಪದಲ್ಲಿ ಮಾರಾಟ ಮಾಡುತ್ತೆ ನಮ್ಮ ಡೇಟಾವೇ ಅವರಿಗೆ ಬಂಡವಾಳ ನಾವು ಇವತ್ತು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡಿದ್ರೆ ಕ್ಷಣದಲ್ಲೇ ಆ ವಿಷಯಕ್ಕೆ ಸಂಬಂಧಪಟ್ಟ ಜಾಹಿರಾತುಗಳು ನಮ್ಮ ಮೊಬೈಲ್ಗೆ ಬರೋದಕ್ಕೆ ಶುರುವಾಗುತ್ತೆ ಇದನ್ನೇ ಡೇಟಾ ಅಂತ ಕರೆಯುವುದು ನಮ್ಮ ಡೇಟಾವನ್ನೇ ಇಟ್ಕೊಂಡು ಜಾಹಿರಾತು ಸಂಸ್ಥೆಗಳು ನಮಗೆ ಜಾಹಿರಾತನ್ನ ಪ್ರದರ್ಶನ ಮಾಡುತ್ತಾವೆ ಕೇವಲ ವಯಕ್ತಿಕ ಡೇಟಾಗಳು ಮಾತ್ರವಲ್ಲ ಸರ್ಕಾರದ ಮಟ್ಟದ ಡೇಟಾಗಳು ಕೂಡ ಮಾರಾಟವಾಗುವ ಸಾಧ್ಯತೆ ಇರುತ್ತೆ.

ಅದರಲ್ಲೂ ಕೆಲವೊಂದು ಸೀಕ್ರೆಟ್ ವಿಚಾರಗಳು ಅಮೆರಿಕಾದಂತಹ ದೇಶಕ್ಕೆ ಸುಲಭದಲ್ಲೇ ಸಿಕ್ಕಿಬಿಡಬಹುದು ಇಂತಹ ಸಂದರ್ಭದಲ್ಲಿ ಭಾರತಕ್ಕೆ ತುಂಬಾ ದೊಡ್ಡ ಅಪಾಯ ಇರುತ್ತೆಗೂಗಲ್ ನಂತಹ ಸಂಸ್ಥೆ ಕೂಡ ಆ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬಾರದೆ ಇರಬಹುದು ಇನ್ನು ಮೂರನೇ ಕಾರಣ ಹಚ್ಚು ಅಧ್ಯಕ್ಷ ಟ್ರಂಪ್ ನಾವು ಮೊದಲೇ ಹೇಳಿದಂತೆ ಅಮೆರಿಕಾ ಯಾವಾಗ ಬೇಕಾದರೂ ಉಸರವಳ್ಳಿಯಂತೆ ಬದಲಾಗುವ ದೇಶ ಮುಂದೆ ನಮ್ಮ ಆಪ್ ಅನ್ನ ನೀವು ಯಾವುದೇ ಕಾರಣಕ್ಕೂ ಬಳಕೆ ಮಾಡಲೇಬಾರದು ಅನ್ನುವ ಘೋಷಣೆ ಟ್ರಂಪ್ರಿಂದ ಬಂದರು ಬರಬಹುದು ಆಗ ಕೈ ಕಾಲು ಬಿಡೋದಕ್ಕಿಂತ ಈಗಲೇ ಎಲ್ಲದಕ್ಕೂ ರೆಡಿ ಇದ್ದರೆ ಒಳ್ಳೆದಲ್ವಾ ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ಹಣವನ್ನ ಭಾರತದಲ್ಲೇ ಉಳಿಸಬಹುದು ನಾವು ಸುಖಾಸುಮ್ಮನೆ ಗೂಗಲ್ ಅನ್ನ ಬಳಕೆ ಮಾಡಿ ಅವರ ಆದಾಯ ಹೆಚ್ಚು ಮಾಡ್ತಾ ಹೋಗ್ತ್ತೇವೆ ಇದರಿಂದ ಅಮೆರಿಕಾಗೆ ಲಾಭ ಆಗುತ್ತೆ ಹೊರತು ಭಾರತಕ್ಕೆ ಇದರಿಂದ ಲಾಭ ಇಲ್ಲ ಆದರೆ ಜೋಹೋವನ್ನ ಬಳಕೆ ಮಾಡಿದರೆ ಭಾರತಕ್ಕೆ ಲಾಭ ಭಾರತದ ಕಂಪನಿಯೊಂದು ದೊಡ್ಡ ಮಟ್ಟಿಗೆ ಬೆಳಿ ತಿಳಿಯುವ ಸಾಧ್ಯತೆ ಇರುತ್ತೆ ಅದರ ಜೊತೆಗೆ ಭಾರತದ ಕಂಪನಿಗೆ ಆದಾಯ ಕೂಡ ಹರಿದು ಬರುತ್ತೆ ಈ ಎಲ್ಲಾ ಕಾರಣದಿಂದ ಸರ್ಕಾರ ಕೂಡಗೂಗಲ್ ಬದಲಿಗೆ ಜೋಹೋ ಬಳಕೆ ಮಾಡುವಂತೆ ಮನವಿ ಮಾಡ್ತಾ ಇರೋದು ಹಾಗಂತ ಇದ್ದಕ್ಕಿದ್ದ ಹಾಗೆ ಗೂಗಲ್ ನಿಂದ ಜೋಹೋಗೆ ಶಿಫ್ಟ್ ಆಗೋದು ಅಷ್ಟು ಸುಲಭವಂತು ಖಂಡಿತವಾಗಿಯೂ ಅಲ್ಲ ಇದೇ ಕಾರಣಕ್ಕಾಗಿ ಸರ್ಕಾರ ಮೊದಲು ತಮ್ಮ ಇಲಾಖೆಗಳಲ್ಲಿ ಜೋಹೋವನ್ನ ಇಂಪ್ಲಿಕೇಶನ್ ಮಾಡ್ತಾ ಇದೆ ಸರ್ಕಾರವೇ ಬದಲಾವಣೆ ಮಾಡಿದರೆ ಕೊನೆಗೆ ನಾಗರಿಕರು ಅನಿವಾರ್ಯವಾಗಿ ಆದರೂ ಜೋಹೋಗೆಶಿ ಶಿಫ್ಟ್ ಆಗಬೇಕಾಗಿ ಬರುತ್ತೆ.

ಇದು ಆರಂಭ ಅಷ್ಟೇ ಮುಂದಿನ ದಿನಗಳಲ್ಲಿ ಸರ್ಕಾರದ ಪ್ರತಿ ಇಲಾಖೆಯಲ್ಲಿ ಕೂಡ ಗೂಗಲ್ ಬದಲಿಗೆ ಜೋಹೋ ಬಳಕೆ ಮಾಡೋದಕ್ಕೆ ಶುರು ಮಾಡಿದ್ರೆ ಜನ ಕೂಡ ವೇಗದಲ್ಲಿ ಪರಿವರ್ತನೆ ಆಗ್ತಾರೆ ಇನ್ನು ಜೋಹೋದಲ್ಲಿ ಸೆಕ್ಯೂರಿಟಿ ಸಿಸ್ಟಮ್ ಗೂಗಲ್ ಗಿಂತಲೂ ಸ್ಟ್ರಾಂಗ್ ಆಗಿದೆ ಗೂಗಲ್ ನಲ್ಲಿ ಕೇವಲ ಟೂ ಫ್ಯಾಕ್ಟರ್ ಆಥೆಂಟಿಫಿಕೇಶನ್ ಇರೋದು ಆದರೆ ಜೋಹೋದಲ್ಲಿ ಮಲ್ಟಿ ಫ್ಯಾಕ್ಟರ್ ಆಥೆಂಟಿಫಿಕೇಶನ್ ಇದೆ ಇನ್ನು ನಮ್ಮ ಕೆಲಸದ ಬ್ಯಾಕಪ್ ಕೂಡ ಅಷ್ಟೇ ಚೆನ್ನಾಗಿದೆ ಕೆಲವೊಮ್ಮೆ ನಾವು ಮಾಡಿರುವ ಫೈಲ್ ಕರೆಪ್ಟ್ ಆಗುವಂತಹ ಸನ್ನಿವೇಶಗಳು ಬಂದಾಗ ನಾವು ಮಾಡಿರುವ ಎಲ್ಲಾ ಕೆಲಸ ನೀರಿನಲ್ಲಿ ಮಾಡಿದ ಹೋಮದ ರೀತಿಯಾಗುತ್ತೆ. ಆದರೆ ಜೋಹೋದಲ್ಲಿ ಹಾಗಾಗೋದಿಲ್ಲ. ಇಲ್ಲಿ ತುಂಬಾನೇ ಚೆನ್ನಾಗಿಯೇ ಬ್ಯಾಕಪ್ ಸಿಸ್ಟಮ್ ಇದೆ ಹಾಗಂತ ಕೇವಲ ಒಳ್ಳೆ ವಿಚಾರಗಳು ಮಾತ್ರ ಇರೋದ ಯಾವುದೇ ರಿಸ್ಕ್ ಇಲ್ವಾ ಅಂತ ನೀವು ಕೇಳಬಹುದು ಖಂಡಿತವಾಗಿಯೂ ರಿಸ್ಕ್ ಇದೆ. ಒಂದುವೇಳೆ ಜೋಹೋದ ಮೇಲೆ ಸೈಬರ್ ಅಟ್ಯಾಕ್ ಆದರೆ ಸ್ವಲ್ಪ ರಿಸ್ಕ್ ಇರುತ್ತೆ ಈ ವಿಚಾರದಲ್ಲಿ ಜೋಹೋ ಗೂಗಲ್ ನಷ್ಟು ಬೆಳೆದಿಲ್ಲ. ಇನ್ನು ಜೋಹೋವನ್ನ ಬಳಕೆ ಮಾಡಿ ಜನರಿಗೆ ಗೊತ್ತಿಲ್ಲ. ಗೂಗಲ್ ವಿಚಾರದಲ್ಲಿ ಜನರಿಗೆ ಬಹುತೇಕ ಎಲ್ಲವೂ ಗೊತ್ತಿದೆ ಆದರೆ ಜೋಹೋದ ಬಗ್ಗೆ ನಮ್ಮ ಜನರಿಗೆ ಗೊತ್ತಿಲ್ಲ ಹೀಗಾಗಿ ಬಳಕೆ ಮಾಡೋದಕ್ಕೆ ಸ್ವಲ್ಪ ಕಷ್ಟವಾಗಬಹುದು ಇನ್ನು ಜೋಹೋದ ಅರಟೈನಲ್ಲಿವಟ್ ರೀತಿ ಎಂಡ್ ಟು ಎಂಡ್ ಇನ್ಸ್ಕ್ರಿಪ್ಷನ್ ಇಲ್ಲ ಹೀಗೆ ಕೆಲವೊಂದು ವಿಚಾರದಲ್ಲಿ ಬದಲಾವಣೆಗಳು ಕೂಡ ಆಗಬೇಕಾಗಿದೆ ಅದೇನೇ ಇರಲಿ ಜೋಹೋ ಏನ್ ಮಾಡುತ್ತೆ ನೋಡೋಣ ಅಂತ ಹೇಳ್ತಾ ಇದ್ದ ಗೂಗಲ್ ಗೆ ಈಗ ನಡುಕ ಶುರುವಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments