ಡೊನಾಲ್ಡ್ ಟ್ರಂಪ್ ಅವರ ವೀಸಾ ಫೀಸ್ ಏರಿಕೆ ಬಗ್ಗೆ ಮಾತಾಡಿದ್ವಿ. ಆದರೆ ಇವತ್ತು ಅಮೆರಿಕಾದಿಂದ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ಅಮೆರಿಕಾದ ಎಚ್ ಒನ್ ಬಿ ವೀಸಾ ಪಡೆಯೋಕೆ ಅದೃಷ್ಟ ಅಥವಾ ಲಾಟರಿ ಇದ್ದರೆ ಸಾಲಲ್ಲ. ಟ್ರಂಪ್ ಸರ್ಕಾರ ಈಗ ಇಡೀ ವೀಸಾ ನೀಡುವ ಪ್ರಕ್ರಿಯೆಯನ್ನೇ ಬದಲಾಯಿಸಿದೆ. ಹೌದು ದಶಕಗಳಿಂದ ಇದ್ದ ಲಾಟರಿ ಸಿಸ್ಟಮ್ ರದ್ದಾಗಿದೆ. ಹಾಗಾದ್ರೆ ಹೊಸ ನಿಯಮ ಏನು ಯಾರ್ಯಾರಿಗೆ ವೀಸಾ ಸಿಗುತ್ತೆ ಭಾರತಕ್ಕೆ ಬಂದಿರೋ ಟೆಕ್ಕಿಗಳಿಗೆ ವಾಪಸ್ ಅಮೆರಿಕಕ್ಕೆ ಹೋಗೋಕೆ ಆಗ್ತಾ ಇಲ್ಲ ಯಾಕೆ ಗೂಗಲ್ ಕಡೆಯಿಂದ ಬಂದಿರೋ ಆ ಗುಡ್ ನ್ಯೂಸ್.
ಎಚ್ ಒನ್ ಬಿ ಲಾಟರಿ ರದ್ದು ಇನ್ಮುಂದೆ ದುಡ್ಡು ಮತ್ತು ದಕ್ಷತೆ ಇದ್ರೆ ಮಾತ್ರ ವೀಸಾ ಇದು ಅಮೆರಿಕಾದ ವಲಸೆ ಇತಿಹಾಸದಲ್ಲೇ ಅತಿ ದೊಡ್ಡ ಬದಲಾವಣೆ ಇಷ್ಟು ದಿನ ಹೆಚ್ಒಬಿ ವೀಸಾ ಅಂದ್ರೆ ಒಂದು ಲಾಟರಿ ತರ ಇತ್ತು ಆದರೆ ಇನ್ಮುಂದೆ ಹಾಗಲ್ಲ ಅಮೆರಿಕಾದ ಹೋಂ್ಲ್ಯಾಂಡ್ ಸೆಕ್ಯೂರಿಟಿ ಹೊಸ ಆದೇಶ ಹೊರಡಿಸಿದೆ ಇದರ ಪ್ರಕಾರ ಇನ್ಮುಂದೆ ಯಾರಿಗೆ ಅತಿ ಹೆಚ್ಚು ಸಂಬಳ ಸಿಗುತ್ತೋ ಮತ್ತು ಯಾರ ಹತ್ತಿರ ಅತಿ ಹೆಚ್ಚು ಸ್ಕಿಲ್ ಅಥವಾ ಕೌಶಲ್ಯ ಇರುತ್ತೋ ಅವರಿಗೆ ಮಾತ್ರ ವೀಸಾ ಸಿಗುತ್ತೆ ಯಾಕೆ ಈ ನಿರ್ಧಾರ ಟ್ರಂಪ್ ಸರ್ಕಾರದ ಪ್ರಕಾರ ಹಳೆ ಹಳೆಯ ಲಾಟರಿ ಪದ್ಧತಿಯಿಂದಾಗಿ ಕಂಪನಿಗಳು ಕಡಿಮೆ ಸಂಬಳಕ್ಕೆ ಕೆಲಸಗಾರರನ್ನು ಕರೆಸಿಕೊಳ್ಳುತ್ತಿದ್ವು ಇದರಿಂದ ಅಮೆರಿಕಾದ ಸ್ಥಳೀಯರಿಗೆ ಕೆಲಸ ಸಿಕ್ತಿರಲಿಲ್ಲ ಹಾಗಾಗಿ ಬೆಸ್ಟ್ ಆಫ್ ದಿ ಬೆಸ್ಟ್ ಟ್ಯಾಲೆಂಟ್ ಗೆ ಮಾತ್ರ ಮನೆ ಹಾಕಲು ಈ ನಿರ್ಧಾರಕ್ಕೆ ಬಂದಿದ್ದಾರೆ ಈ ಹೊಸ ರೂಲ್ಸ್ ಫೆಬ್ರವರಿ 27 2026 ರಿಂದ ಜಾರಿಗೆ ಬರಲಿದೆ ಭಾರತೀಯ ಟೆಕ್ಕಿಗಳು ಐಟಿ ಕಂಪನಿಗಳಿಗೆ ಹೆಚ್ಚಿನ ಸಂಕಷ್ಟ ಈ ನಿರ್ಧಾರದಿಂದ ಅತಿ ಹೆಚ್ಚು ಹೊಡೆತ ಬೀಳೋದು.
ನಮ್ಮ ಭಾರತೀಯರಿಗೆ ಯಾಕಂದ್ರೆ ಹೆಚ್ಒಬಿ ವೀಸಾ ಪಡೆಯೋರಲ್ಲಿ ಭಾರತೀಯರೇ ಹೆಚ್ಚು ವಿಶೇಷವಾಗಿ ಟಿಸಿಎಸ್ ಇನ್ಫೋಸಿಸ್ ವಿಪ್ರೋದಂತ ಕಂಪನಿಗಳು ಎಂಟ್ರಿ ಲೆವೆಲ್ ಅಂದ್ರೆ ಕಡಿಮೆ ಅನುಭವ ಇರೋ ಉದ್ಯೋಗಿಗಳನ್ನ ಅಮೆರಿಕಕ್ಕೆ ಕಳಿಸ್ತಿದ್ವು ಆದರೆ ಈಗ ವೇತನ ಆಧಾರಿತ ಆಯ್ಕೆ ಇರೋದ್ರಿಂದ ಕಡಿಮೆ ಸಂಬಳದ ಉದ್ಯೋಗಿಗಳಿಗೆ ಇನ್ಮುಂದೆ ವೀಸಾ ಸಿಗೋದು ಕಷ್ಟ ಆಗಲಿದೆ ಈ ಸುದ್ದಿ ಹೊರಬೀಳ್ತಾ ಇದ್ದ ಹಾಗೆ ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಐಟಿ ಕಂಪನಿಗಳ ಶೇರುಗಳು ಕುಸಿತ ಕಂಡಿವೆಟೆಕ್ ಮಹ್ರವಪರೋ ಕೋಫೋರ್ಸ್ ಶೇರ್ಗಳು ಡೌನ್ ಆಗಿದೆ ತಜ್ಞರ ಪ್ರಕಾರ ಇನ್ಮುಂದೆ ಭಾರತೀಯ ಐಟಿ ಕಂಪನಿಗಳು ಅಮೆರಿಕಕ್ಕೆ ಜನರನ್ನ ಕಳಿಸು ಬದಲು ಆ ಕೆಲಸವನ್ನು ಭಾರತದಲ್ಲೇ ಮಾಡಿಸೋದು ಹೆಚ್ಚಾಗಬಹುದು ಇನ್ನೊಂದು ಆತಂಕಕಾರಿ ವಿಷಯ ಅಂದ್ರೆ ಡಿಸೆಂಬರ್ ನಲ್ಲಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ರಜೆಗೆ ಅಂತ ಭಾರತಕ್ಕೆ ಬಂದಿರೋ ಎಷ್ಟೋ ಟೆಕ್ಕಿಗಳು ಈಗ ಸಂಕಷ್ಟಕ್ಕೆ ಸೆಲುಕಿದ್ದಾರೆ ವಾಪಸ್ ಅಮೆರಿಕಕ್ಕೆ ಹೋಗೋಕೆ ಆಗ್ತಾ ಇಲ್ಲ.
ಯಾಕಂದ್ರೆ ಅಮೆರಿಕಾದ ರಾಯಭಾರ ಕಚೇರಿ ವೀಸಾ ಇಂಟರ್ವ್ಯೂಗಳನ್ನ ರದ್ದು ಮಾಡ್ತಾ ಇದೆ ಅಥವಾ ಮುಂದೂಡುತಾ ಇದೆ. ಇದಕ್ಕೆ ಕಾರಣ ಸೋಶಿಯಲ್ ಮೀಡಿಯಾ ಸ್ಕ್ಯಾನಿಂಗ್ ಹೌದು ಈಗ ವೀಸಾ ರಿನ್ಯೂವಲ್ ಮಾಡಬೇಕಂದ್ರೆ ನಿಮ್ಮ Facebook, Twitter, Instagram ಎಲ್ಲವನ್ನು ಅಧಿಕಾರಿಗಳು ಚೆಕ್ ಮಾಡ್ತಿದ್ದಾರೆ. ಇದರಿಂದ ಪ್ರೊಸೆಸಿಂಗ್ ಲೇಟ್ ಆಗ್ತಾ ಇದೆ. ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ ಡಿಸೆಂಬರ್ 15 ರಿಂದ 26ರ ನಡುವಿನ ಎಷ್ಟೋ ಇಂಟರ್ವ್ಯೂಗಳು ಕ್ಯಾನ್ಸಲ್ ಆಗಿವೆ. ಹಾಗಾಗಿ app ಪಲ್ಗೂಗಲ್ ಮೈಕ್ರೋಸಾಫ್ಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ದಯವಿಟ್ಟು ಈಗ ಅಮೆರಿಕ ಬಿಟ್ಟು ಹೊರದೇಶಗಳಿಗೆ ಹೋಗಬೇಡಿ ಹೋದರೆ ವಾಪಸ್ ಬರೋದು ಕಷ್ಟ ಅಂತ ಎಚ್ಚರಿಕೆ ನೀಡಿವೆ ಇಷ್ಟೆಲ್ಲ ಬ್ಯಾಡ್ ನ್ಯೂಸ್ ಮಧ್ಯೆ ಒಂದು ಸಣ್ಣ ಗುಡ್ ನ್ಯೂಸ್ ಕೂಡ ಇದೆಗೂಗಲ್ ಕಂಪನಿ 2026ರಲ್ಲಿ ಮತ್ತೆ ಗ್ರೀನ್ ಕಾರ್ಡ್ ಪ್ರೋಸೆಸ್ ಶುರು ಮಾಡುವುದಾಗಿ ಹೇಳಿದೆ ಕಳೆದ ವರ್ಷ ಆಫ್ಗಳ ಕಾರಣದಿಂದಗೂಗಲ್ ಇದನ್ನ ನಿಲ್ಲಿಸಿತ್ತು ಈಗ ಮತ್ತೆ ಶುರು ಮಾಡ್ತಿದೆ ಆದರೆ ಇಲ್ಲೂ ಕಂ ಕಂಡಿಶನ್ ಅಪ್ಲೈ ಒಂದು ಉದ್ಯೋಗಿಗಳು ಆಫೀಸ್ಗೆ ಬಂದು ಕೆಲಸ ಮಾಡಬೇಕು ರಿಮೋಟ್ ವರ್ಕ್ ನಡೆಯಲ್ಲ ಎರಡನೆಯದ್ದು ಪರ್ಫಾರ್ಮೆನ್ಸ್ ಚೆನ್ನಾಗಿರಬೇಕು.
ಮೂರನೆಯದ್ದು ಹೈ ಲೆವೆಲ್ ರೋಲ್ನಲ್ಲಿ ಇರಬೇಕು ಕೆಳಹಂತದ ಸಿಬ್ಬಂದಿ ಆದರೆ ಆಗಲ್ಲ ಇವೆಲ್ಲವೂ ಇದ್ರೆಗೂಗಲ್ ನಿಮ್ಮ ಗ್ರೀನ್ ಕಾರ್ಡ್ ಪ್ರೋಸೆಸ್ ಶುರು ಮಾಡುತ್ತೆ ಇಲ್ಲ ಅಂದ್ರೆ ನಿಮಗೆ ಆ ಭಾಗ್ಯ ಇಲ್ಲ ಅಂತಾನೆ ಅರ್ಥ ಸ್ನೇಹಿತರೆ ಒಟ್ಟಾರೆಯಾಗಿ ನೋಡೋದಾದರೆ ಅಮೆರಿಕದ ಬಾಗಿಲುಗಳು ಭಾರತೀಯರಿಗೆ ಮುಚ್ಚುತ್ತಿಲ್ಲ ಆದರೆ ಒಳಗೆ ಹೋಗೋ ದಾರಿದಿನ ದಿನಕ್ಕೂ ತುಂಬಾನೇ ಕಿರಿದಾಗ್ತಾ ಇದೆ. ಈ ಬಾಗಿಲ ಮೂಲಕ ಅಮೆರಿಕ ಪ್ರವೇಶಿಸುವುದು ಕಷ್ಟ ಆಗ್ತಿದೆ. ಲಾಟರಿ ಅದೃಷ್ಟದ ಬದಲು ಇನ್ಮುಂದೆ ನಿಮ್ಮ ಸ್ಕಿಲ್ ಮತ್ತು ಸಂಬಳವೇ ನಿಮ್ಮ ಭವಿಷ್ಯ ನಿರ್ಧರಿಸಲಿದೆ. ನಿಮ್ಮ ಪ್ರಕಾರ ಈ ಲಾಟರಿ ಸಿಸ್ಟಮ್ ರದ್ದು ಮಾಡಿದ್ದು ಒಳ್ಳೆಯದಾ ಅಥವಾ ಇದರಿಂದ ನಮ್ಮ ದೇಶದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತಾ.


