Tuesday, December 9, 2025
HomeTech NewsMobile Phonesನಿಮಗೆ ಗೊತ್ತಿರದ ಸ್ಮಾರ್ಟ್‌ಫೋನ್‌ನ 10 ಆಸಕ್ತಿಕರ ಫೀಚರ್ಸ್!

ನಿಮಗೆ ಗೊತ್ತಿರದ ಸ್ಮಾರ್ಟ್‌ಫೋನ್‌ನ 10 ಆಸಕ್ತಿಕರ ಫೀಚರ್ಸ್!

ನಿಮ್ಮ ಫೋನಲ್ಲಿ ಹಿಂದೆ ಟ್ಯಾಪ್ ಮಾಡಿದ್ರೆ ಸ್ಕ್ರೀನ್ ತೆಗೆಯುತ್ತಾ ಸ್ಪ್ಲಿಟ್ ಸ್ಕ್ರೀನ್ ಅಲ್ಲಿ ನೀವು ಇಷ್ಟ ಬಂದಂತೆ ಆಪ್ ವಿಂಡೋ ಹಿಗ್ಗಿಸಬಹುದಾ ಅಚಾನಕ್ಕಾಗಿ ನೋಟಿಫಿಕೇಶನ್ ಡಿಲೀಟ್ ಆದ್ರೆ ನೋಡೋದೆಲ್ಲಿ ಎಸ್ ಸ್ನೇಹಿತರೆ ನಿಮ್ಮ ಸ್ಮಾರ್ಟ್ ಫೋನ್ಗಳಲ್ಲಿ ಇದೆಲ್ಲ ಮಾಡಬಹುದು ಆದರೆ ಇದೆಲ್ಲ ಹಿಡನ್ ಫೀಚರ್ಸ್ ಬಟ್ 90% ಜನ ಸ್ಮಾರ್ಟ್ ಫೋನ್ ನ ಈ ಅದೃಶ್ಯ ಫೀಚರ್ ಗಳನ್ನ ಯಾವತ್ತೂ ನೋಡೆ ಇರಲ್ಲ ಫೋನನ್ನ ಕೇವಲ ಬೇಸಿಕ್ ಕೆಲಸಗಳಿಗೆ ಬಳಸ್ತಿರ್ತಾರೆ ಹೀಗಾಗಿ ಇವತ್ತಿನ ವಿಡಿಯೋದಲ್ಲಿ ಫೋನ್ನಲ್ಲಿ ಹೆಚ್ಚು ಬಳಸದೆ ಇರುವ ಇಂತಹ 10 ಹಿಡನ್ ಫೀಚರ್ಗಳ ಬಗ್ಗೆ ಎಕ್ಸ್ಪ್ಲೈನ್ ಮಾಡ್ತೀವಿ ಫೋರ್ಸ್ ಆಕ್ಟಿವಿಟೀಸ್ ಇದು ಡೆವಲಪರ್ ಆಪ್ಷನ್ ಅಲ್ಲಿ ಹೋಗಿ ಆನ್ ಮಾಡಬೇಕಾಗುತ್ತೆ ಸಾಮಾನ್ಯವಾಗಿ ಮಲ್ಟಿ ಟಾಸ್ಕಿಂಗ್ ಅಂದ್ರೆ ಒಂದೇ ಬಾರಿಗೆ ಎರಡೆರಡು ಆಪ್ ಗಳನ್ನ ಬಳಸಬೇಕಾದರೆ ನಾವು ಸ್ಪ್ಲಿಟ್ ಸ್ಕ್ರೀನ್ ಫೀಚರ್ ಆಯ್ಕೆ ಮಾಡ್ಕೊತೀವಿ. ಆದರೆ ಸಮಸ್ಯೆ ಅಂದ್ರೆ ಇದರಲ್ಲಿ ಎರಡು ಆಪ್ ಗಳು ನಮ್ಮ ಸ್ಕ್ರೀನ್ ನ ಅರ್ಧರ್ಧ ಭಾಗವನ್ನ ಆವರಿಸಿಕೊಳ್ಳುತ್ತವೆ. 50% ಮೇಲಿನ ಆಪ್, 50% ಕೆಳಗಿನ ಆಪ್, ಈ ಸೆಟ್ಟಿಂಗ್ಸ್ ನ ಚೇಂಜ್ ಮಾಡೋಕೆ ಆಗಲ್ಲ. ಆದ್ರೆ ಅನೇಕ ಸಲ ನಮಗೆ ಒಂದು ಆಪ್ ಅಷ್ಟೇ ದೊಡ್ಡ ಸ್ಕ್ರೀನ್ ಅಲ್ಲಿ ಬೇಕಾಗಿರುತ್ತೆ. ಉದಾಹರಣೆಗೆ ಕ್ರಿಕೆಟ್ ನೋಡ್ತಿರೋವಾಗ ಹಾಟ್ ಸ್ಟಾರ್ ಆಪ್ ದೊಡ್ಡದಾಗಿ ಕಾಣಬೇಕಾಗಿರುತ್ತೆ.

ಮೆಸೇಜ್ ಮಾಡೋಕೆ WhatsApp ಚಿಕ್ಕದಿದ್ರು ಸಾಕು. 75, 25 ಇದ್ರೂ ನಡೆಯುತ್ತೆ. ಬಟ್ ರೆಗ್ಯುಲರ್ ಸ್ಪ್ಲಿಟ್ ಸ್ಕ್ರೀನ್ ಫೀಚರ್ ನಲ್ಲಿ ಇದನ್ನ ಬದಲಾಯಿಸೋಕೆ ಆಗಲ್ಲ ಆದರೆ ಅದೇ ಒಂದು ವೇಳೆ ನಾವು ಈ ಫೋರ್ಸ್ ಆಕ್ಟಿವಿಟೀಸ್ ನ ಆನ್ ಮಾಡ್ಕೊಂಡ್ರೆ ಸ್ಕ್ರೀನ್ ನ ಹೇಗೆ ಬೇಕಾದ್ರು ಹಾಗೆ ಬದಲಾಯಿಸ್ಕೊಬಹುದು. ಆಸ್ಪೆಕ್ಟ್ ರೇಶಿಯೋ ನ ಎಷ್ಟು ಬೇಕಾದ್ರು ಇಟ್ಕೊಬಹುದು. ಆದರೆ ಸ್ನೇಹಿತರೆ ನೆನಪಿರಲಿ ಇದು ಡೆವೆಲಪರ್ ಆಪ್ಷನ್. ಇಲ್ಲಿ ಕೆಲವೊಮ್ಮೆ ನಮಗೆ ಗೊತ್ತೇ ಇಲ್ಲದ ಫೀಚರ್ಸ್ ತೆಗೆದುಕೊಂಡು ಅವಾಂತರ ಸೃಷ್ಟಿಸೋ ಸಾಧ್ಯತೆ ಇರುತ್ತೆ. ಹೀಗಾಗಿ ಒಂದು ವೇಳೆ ನೀವು ಸ್ಪ್ಲಿಟ್ ಸ್ಕ್ರೀನ್ ಫೀಚರ್ ನ ಹೆಚ್ಚು ಬಳಸೋರು ಆಗಿದ್ರೆ ಈ ಫೋರ್ಸ್ ಆಕ್ಟಿವಿಟೀಸ್ ನ ಆನ್ ಮಾಡ್ಕೋಬಹುದು. ನಿಮ್ಮ ಸೆಟ್ಟಿಂಗ್ಸ್ ನಲ್ಲಿ ಅಬೌಟ್ ಫೋನ್ ಆಯ್ಕೆಗೆ ಹೋಗಿ ಸಾಫ್ಟ್ವೇರ್ ಇನ್ಫಾರ್ಮೇಷನ್ ವಿಭಾಗದಲ್ಲಿ ಬಿಲ್ಡ್ ನಂಬರ್ ಮೇಲೆ ಏಳು ಬಾರಿ ಟ್ಯಾಪ್ ಮಾಡಿದ್ರೆ ಡೆವೆಲಪರ್ ಆಪ್ಷನ್ ಎನೇಬಲ್ ಆಗುತ್ತೆ. ಅದರಲ್ಲಿ ನೀವು ಈ ಫೋರ್ಸ್ ಆಕ್ಟಿವಿಟೀಸ್ ರಿಸೈಜೇಬಲ್ ಆಪ್ಷನ್ ನ ಆನ್ ಮಾಡ್ಕೋಬಹುದು. ಆಪ್ ಪಿನ್ನಿಂಗ್, ಕೆಲವೊಂದು ಸಲ ಅನಿರೀಕ್ಷಿತವಾಗಿ ನಮ್ಮ ಫೋನ್ ನ ಬೇರೆಯವರಿಗೆ ಕೊಡಬೇಕಾಗುತ್ತೆ, ಆದ್ರೆ ಅವಾಗೆಲ್ಲ ನಮಗೆ ಒಂದೇ ಭಯ. ಫೋನ್ ಇಸ್ಕೊಂಡವರು ಬೇರೆ ಏನಾದ್ರು ಓಪನ್ ಮಾಡ್ಬಿಟ್ರೆ ನಮ್ಮ ಪ್ರೈವೇಟ್ ಮೆಸೇಜ್ ನ ನೋಡ್ಬಿಟ್ರೆ ಈ ಭಯ ದೂರ ಮಾಡಲಿಕ್ಕೆ ಅಂತಾನೆ ಆಪ್ ಪೆನ್ನಿಂಗ್ ಆಯ್ಕೆ ಇರೋದು. ಇದರಲ್ಲಿ ನೀವು ಯಾವ ಆಪ್ ನ ಓಪನ್ ಮಾಡಿರ್ತೀರೋ ಅದನ್ನಷ್ಟೇ ಸ್ಕ್ರೀನ್ ಗೆ ಪಿನ್ ಮಾಡಬಹುದು ಇದರಿಂದ ನಿಮ್ಮ ಫೋನ್ ನ ತೆಗೆದುಕೊಂಡ ವ್ಯಕ್ತಿಗೆ ಬೇರೆ ಅಪ್ ಗೆ ಆಕ್ಸೆಸ್ ಇರಲ್ಲ.

YouTube ಪಿನ್ ಮಾಡಿದ್ರೆ YouTube ಒಂದನ್ನೇ ನೋಡಬಹುದು. ಗ್ಯಾಲರಿ WhatsApp ತೆಗೆದು ನೋಡಕೆ ಆಗಲ್ಲ. ಹಾಗೇನಾದ್ರು ಮಾಡಬೇಕಾದರೆ ಮತ್ತೆ ಈ ಫೀಚರ್ ನ ಆಫ್ ಮಾಡ್ಬೇಕಾಗುತ್ತೆ. ಸಾಮಾನ್ಯವಾಗಿ ಎಲ್ಲಾ ಫೋನ್ ನಲ್ಲೂ ಈ ಆಪ್ಷನ್ ಇರಲ್ಲ. ಇತ್ತೀಚಿನ ಹೊಸ ಫೋನ್ ಗಳಲ್ಲಿ ಇದೆ. ರೀಸೆಂಟ್ಲಿ ಓಪನ್ಡ್ ಆಪ್ಸ್ ಪಟ್ಟಿಯಲ್ಲಿ ಪರ್ಟಿಕ್ಯುಲರ್ ಆಪ್ ಐಕಾನ್ ಮೇಲೆ ಕ್ಲಿಕ್ ಮಾಡಿದ್ರೆ ಈ ಫೀಚರ್ ಸಿಗುತ್ತೆ. ಬ್ಯಾಕ್ ಟ್ಯಾಪ್ ಇದು ಕೂಡ ತುಂಬಾ ಇಂಟರೆಸ್ಟಿಂಗ್ ಫೀಚರ್ ಇಷ್ಟು ದಿನ ನೀವು ಫೋನ್ ನ ಮುಂಭಾಗ ಸ್ವೈಪ್ ಮಾಡೋದು ಟ್ಯಾಬ್ ಮಾಡೋದು ನೋಡಿರ್ತೀರಾ ಆದ್ರೆ ಫೋನ್ ನ ಹಿಂಭಾಗ ಕೂಡ ಟ್ಯಾಪ್ ಮಾಡಿ ಬಳಸಬಹುದು. ಎಸ್ ಬ್ಯಾಕ್ ಟ್ಯಾಬ್ ಅನ್ನೋ ಈ ವಿಶಿಷ್ಟ ಫೀಚರ್ ನಲ್ಲಿ ಫೋನ್ ನ ಹಿಂಬದಿಯಲ್ಲಿ ಟ್ಯಾಬ್ ಮಾಡೋ ಆಕೆ ಇದೆ. ಇದೊಂತರ ಮೋಷನ್ ಗೆಸ್ಚರ್ ಇದ್ದ ಹಾಗೆ. ಈ ಫೀಚರ್ ನ ನೀವು ಫ್ಲಾಶ್ ಲೈಟ್ ಆನ್ ಮಾಡೋಕೆ ಸ್ಕ್ರೀನ್ಶಾಟ್ ತೆಗೆಯೋಕೆ ಅಥವಾ ಯಾವುದಾದರೂ ಪರ್ಟಿಕ್ಯುಲರ್ ಆಪ್ ನ ಓಪನ್ ಮಾಡೋಕೆ ಅಸೈನ್ ಮಾಡಬಹುದು. ಫೋನ್ ನ ಹಿಂಬದಿನ ಟ್ಯಾಬ್ ಮಾಡಿದ ತಕ್ಷಣ ನಿಮ್ಮ ಫೋನ್ ಈ ಕೆಲಸಗಳನ್ನ ಮಾಡುತ್ತೆ. ಆದ್ರೆ ಈ ಫೀಚರ್ ಕೂಡ ಎಲ್ಲಾ ಫೋನ್ ಗಳಲ್ಲಿ ಲಭ್ಯ ಇಲ್ಲ. ಐಫೋನ್ 8 ನಂತರದ ios ಎಸ್ ಆಪಲ್ ಫೋನ್ ಗಳು ಗೂಗಲ್ ನ ಪಿಕ್ಸೆಲ್ Xiaomi ಕೆಲ ಫೋನ್ ಗಳಲ್ಲಿ ಮಾತ್ರ ಲಭ್ಯವಿದೆ. ಸ್ಯಾಮ್ಸಂಗ್ ನಲ್ಲಿ ಕೂಡ ಬ್ಯಾಕ್ ಟ್ಯಾಪ್ ಬಳಸಬಹುದು ಆದ್ರೆ ಇದು ಡಿಫಾಲ್ಟ್ ಆಗಿ ಆಗಿ ಸಿಗಲ್ಲ. ಇದಕ್ಕಾಗಿ ನೀವು ಗುಡ್ ಲಾಕ್ ಎನ್ನುವ ಸ್ಯಾಮ್ಸಂಗ್ ನ ಮತ್ತೊಂದು ಆಪ್ ನ ಡೌನ್ಲೋಡ್ ಮಾಡ್ಬೇಕಾಗುತ್ತೆ. ಇದರಲ್ಲಿ ಬ್ಯಾಕ್ ಟ್ಯಾಪ್ ಸೇರಿದಂತೆ ಅನೇಕ ವಿಶಿಷ್ಟ ಫೀಚರ್ ಗಳು ಸ್ಯಾಮ್ಸಂಗ್ ಗ್ರಾಹಕರಿಗೆ ಸಿಗತ್ತೆ.

ಪಾಮ್ ಸ್ವೈಪ್ ಇದು ಬಹುಶಃ ಬಹಳ ಜನರಿಗೆ ಗೊತ್ತಿರುತ್ತೆ. ಸಾಮಾನ್ಯವಾಗಿ ಮೂರು ಬೆರಳಿಂದ ಸ್ಕ್ರೀನ್ ನ ಸ್ವೈಪ್ ಮಾಡಿ ಸ್ಕ್ರೀನ್ ತೆಗೆಯೋದನ್ನ ನೀವು ನೋಡಿರಬಹುದು. ಅದೇ ರೀತಿ ಪೂರ್ತಿ ಕೈಯಿಂದ ಸ್ವೈಪ್ ಮಾಡಿ ಸ್ಕ್ರೀನ್ಶಾಟ್ ತೆಗಿಯೋ ಫೀಚರ್ ಇದು ಸಾಮಾನ್ಯವಾಗಿ ಸ್ಯಾಮ್ಸಂಗ್ ಫೋನ್ ಗಳಲ್ಲಿ ಈ ಆಯ್ಕೆ ಇರುತ್ತೆ ಕೆಲ ವಿವೋ ಸ್ಮಾರ್ಟ್ ಫೋನ್ ಗಳಲ್ಲಿ ಕೂಡ ಇದೇ ತರಹದ ಹ್ಯಾಂಡ್ ಗೆಸ್ಟಚರ್ ಇದೆ. ಸೆಟ್ಟಿಂಗ್ಸ್ ನಲ್ಲಿ ಅಡ್ವಾನ್ಸ್ಡ್ ಫೀಚರ್ಸ್ ಆಯ್ಕೆಯಲ್ಲಿ ನೀವು ಈ ಪಾಮ್ ಸ್ವೈಪ್ ನ ಆನ್ ಮಾಡ್ಕೋಬಹುದು. ಕ್ವಿಕ್ ಶೇರ್ ಸ್ನೇಹಿತರೆ ನಿಮ್ಮ ಫೋನ್ ಗಳಲ್ಲಿರೋ ಮೋಸ್ಟ್ ಯೂಸ್ಫುಲ್ ಫೀಚರ್ ಗಳಲ್ಲಿ ಈ ಕ್ವಿಕ್ ಶೇರ್ ಸಹ ಒಂದು ಫೋನಿಂದ ಇನ್ನೊಂದು ಫೋನ್ಗೆ ಫೈಲ್ಸ್ ಫೋಟೋಸ್ ಅಥವಾ ವಿಡಿಯೋ ಶೇರ್ ಮಾಡೋದಕ್ಕೆ ಇದನ್ನ ಯೂಸ್ ಮಾಡ್ಕೊಳ್ಬಹುದು ಇದಕ್ಕಾಗಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಮತ್ತು ಇಂಟರ್ನೆಟ್ ಅವಶ್ಯಕತೆ ಇರಲ್ಲ ಈ ಫೀಚರ್ ನಿಮ್ಮ ಫೋನ್ ನಲ್ಲಿರೋ ಬ್ಲೂಟೂತ್ ಮತ್ತು ವೈಫೈ ಯನ್ನೇ ಬಳಸಿಕೊಂಡು ವರ್ಕ್ ಆಗುತ್ತೆ ಮ್ಯಾಕ್ಸಿಮಮ್ 10 GB ವರೆಗೆ ಈ ರೀತಿ ಟ್ರಾನ್ಸ್ಫರ್ ಮಾಡಬಹುದು ಇದು ಹೇಗೆ ವರ್ಕ್ ಆಗುತ್ತೆ ಅಂದ್ರೆ ಮೊದಲಿಗೆ ಬ್ಲೂಟೂತ್ ಸಹಾಯದಿಂದ ನಿಮ್ಮ ಹತ್ತಿರದಲ್ಲಿರೋ ಡಿವೈಸ್ ನ ಸ್ಕ್ಯಾನ್ ಮಾಡುತ್ತೆ ನಂತರ ವೈಫೈ ಮೂಲಕ ಡೈರೆಕ್ಟ್ ಕನೆಕ್ಟ್ ಆಗಿ ನೀವು ಸೆಲೆಕ್ಟ್ ಮಾಡೋ ಫೋನ್ಗೆ ಫೈಲ್ಸ್ ಫೋಟೋನ ಶೇರ್ ಮಾಡುತ್ತೆ.

ಈ ಕ್ವಿಕ್ ಶೇರ್ ನಲ್ಲಿ ಇನ್ನೊಂದು ಇಂಟರೆಸ್ಟಿಂಗ್ ಫೀಚರ್ ಸಹ ಇದೆ. ನೀವು ನಿಮ್ಮ ಫ್ರೆಂಡ್ಗೆ ಯಾವುದೋ ಒಂದು ಫೈಲ್ ನ ಕಳಿಸಬೇಕಾಗುತ್ತೆ ಅನ್ಕೊಳ್ಳಿ ಆದರೆ ಅವರು ತುಂಬಾ ದೂರದಲ್ಲಿದ್ದಾರೆ. ಹೀಗಿದ್ದಾಗ ಕೂಡ ನೀವು ಕ್ವಿಕ್ ಶೇರ್ ಬಳಸಿ ಫೈಲ್ಸ್ ಕಳಿಸಬಹುದು. ಕ್ವಿಕ್ ಶೇರ್ ಗೆ ಹೋಗಿ ನೀವು ಕಳಿಸಬೇಕಾದ ಫೈಲ್ ಲಿಂಕ್ ಜನರೇಟ್ ಮಾಡಿ ಕಳಿಸಿದ್ರೆ ಸಾಕು. ಆ ಕಡೆ ಇರೋ ವ್ಯಕ್ತಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡ್ಕೋಬಹುದು. ಆದ್ರೆ ಹೀಗೆ ಮಾಡಿದ್ರೆ ಸೆಂಡ್ ಮತ್ತು ರಿಸೀವ್ ಮಾಡ್ಕೊಳ್ಳೋ ಇಬ್ಬರಿಗೂ ಇಂಟರ್ನೆಟ್ ಬೇಕು. ಅಲ್ದೆ ನೀವು ಫೈಲ್ ನ Samsung Cloud ಅಥವಾ Google Cloud ಗೆ ಅಪ್ಲೋಡ್ ಮಾಡಿರಬೇಕಾಗುತ್ತೆ. ಅಂದಹಾಗೆ ಕ್ವಿಕ್ ಶೇರ್ ಅಲ್ಮೋಸ್ಟ್ ಎಲ್ಲಾ ಆಂಡ್ರಾಯ್ಡ್ ಫೋನ್ಸ್ ಆಂಡ್ರಾಯ್ಡ್ ಸಿಕ್ಸ್ ನಂತರ ಬಂದ ಎಲ್ಲಾ ಆಪರೇಟಿಂಗ್ ಸಿಸ್ಟಮ್ ನಲ್ಲಿ ಲಭ್ಯ ಇದೆ. ಇನ್ನು ನೀವೇನಾದ್ರು ಐ ಫೋನ್ ಯೂಸ್ ಮಾಡ್ತಿದ್ರೆ ಅದರಲ್ಲಿ ಏರ್ ಡ್ರಾಪ್ಸ್ ಇದೆ. ಮಿರರ್ ಸೆಲ್ಫಿ, ನಿಮಗೇನಾದ್ರೂ ಫೋನ್ ನಲ್ಲಿ ಡಿಫ್ರೆಂಟ್ ಮತ್ತು ಸ್ಟೈಲಿಶ್ ಆಗಿ ಸೆಲ್ಫಿ ತಗೊಳ್ಬೇಕು ಅಂದ್ರೆ ಈ ಫೀಚರ್ಸ್ ತುಂಬಾ ಯೂಸ್ಫುಲ್. ಈ ಫೀಚರ್ ನ ಆನ್ ಮಾಡಿಕೊಂಡು ಸೆಲ್ಫಿ ತಗೊಂಡ್ರೆ ನೀವು ಕನ್ನಡಿಯಲ್ಲಿನ ಪ್ರತಿಬಿಂಬ ನೋಡ್ಕೊಂಡು ಫೋಟೋ ತಗೊಂಡಿರೋ ಹಾಗೆ ಇರುತ್ತೆ. ಸಾಮಾನ್ಯವಾಗಿ ಈ ಫೀಚರ್ ಆಫ್ ಇರುತ್ತೆ. ಕ್ಯಾಮೆರಾ ಸೆಟ್ಟಿಂಗ್ಸ್ ಗೆ ಹೋಗಿ ಆನ್ ಮಾಡ್ಕೋಬೇಕು.

ಕೆಲವರಿಗೆ ಈ ರೀತಿ ಮಿರರ್ ವ್ಯೂವ್ ನಲ್ಲಿ ಕಾಣೋದನ್ನ ಇಷ್ಟ ಪಡ್ತಾರೆ. ಅಲ್ದೆ ನಿಮ್ಮ ಹೇರ್ ಸ್ಟೈಲ್ ಮತ್ತು ಮೇಕಪ್ ಡೈಲಿ ರಿಫ್ಲೆಕ್ಷನ್ ರೀತಿನೇ ಕಾಣುತ್ತೆ. ಸ್ನೂಸ್ ನೋಟಿಫಿಕೇಶನ್ಸ್ ಅಲಾರಂ ಬಡೆದುಕೊಳ್ಳುವಾಗ ಸ್ನೂಸ್ ಮಾಡೋದನ್ನ ನೀವು ನೋಡಿರಬಹುದು. ಅದೇ ತರ ನೀವು ನೋಟಿಫಿಕೇಶನ್ ಗಳನ್ನ ಸಹ ಸ್ನೂಸ್ ಮಾಡಬಹುದು. ಇದನ್ನ ಬಳಸೋದ್ರಿಂದ ನೋಟಿಫಿಕೇಶನ್ ಪರ್ಮನೆಂಟ್ ಆಗಿ ಆಫ್ ಮಾಡೋ ಅವಶ್ಯಕತೆ ಇರಲ್ಲ. ನಿಮಗೆ ಎಷ್ಟು ಟೈಮ್ಗೆ ಬೇಕೋ ಅಷ್ಟೊತ್ತು ಮಾತ್ರ ನೋಟಿಫಿಕೇಶನ್ ಹೈಡ್ ಅಥವಾ ಪಾಸ್ ಮಾಡೋಕೆ ಸಾಧ್ಯವಾಗುತ್ತೆ. ಆ ಟೈಮ್ ಮುಗಿದ ಮೇಲೆ ಮತ್ತೆ ನಾರ್ಮಲ್ ಆಗಿ ನೋಟಿಫಿಕೇಶನ್ ಬರೋದಕ್ಕೆ ಶುರುವಾಗುತ್ತೆ. ಇದನ್ನ ಬಳಸುವುದು ಹೇಗೆ? ಮೊದಲಿಗೆ ನೋಟಿಫಿಕೇಶನ್ ಸೆಟ್ಟಿಂಗ್ಸ್ ಗೆ ಹೋಗಿ, ಅಲೋ ನೋಟಿಫಿಕೇಶನ್ ಸ್ನೋಸಿಂಗ್ ಆಪ್ಷನ್ ನ ಆನ್ ಮಾಡ್ಕೋಬೇಕು. ನಂತರ ನಿಮಗೆ ನೋಟಿಫಿಕೇಶನ್ ಪ್ಯಾನಲ್ ನಲ್ಲಿ ಟೈಮ್ ಸ್ನೋಸಿಂಗ್ ಆಪ್ಷನ್ ಕಾಣುತ್ತೆ. ಇನ್ನು ಕೆಲವು ಫೋನ್ ಗಳನ್ನ ನೋಟಿಫಿಕೇಶನ್ ಮೇಲೆ ಲಾಂಗ್ ಪ್ರೆಸ್ ಮಾಡಿದ್ರೆ ಸ್ನೋಸಿಂಗ್ ಆಪ್ಷನ್ ಸಿಗುತ್ತೆ. ಅಲ್ಲಿ ನಿಮಗೆ ಎಷ್ಟು ಟೈಮ್ಗೆ ಬೇಕೋ ಅಷ್ಟು ಟೈಮ್ ನೋಟಿಫಿಕೇಶನ್ ಹೈಡ್ ಅಥವಾ ಪಾಸ್ ಮಾಡಬಹುದು. ನೋಟಿಫಿಕೇಶನ್ ಹಿಸ್ಟರಿ ಫಾರ್ ಡಿಲೀಟೆಡ್ ಮೆಸೇಜಸ್ WhatsApp,gmail ಅಂತ ಹೇಳಿ ದಿನಕ್ಕೆ ನೂರಾರು ನೋಟಿಫಿಕೇಶನ್ ಬರ್ತಿರ್ತವೆ. ಇವುಗಳನ್ನ ದೂರ ಮಾಡೋ ಭರದಲ್ಲಿ ಕೆಲವೊಮ್ಮೆ ಇಂಪಾರ್ಟೆಂಟ್ ನೋಟಿಫಿಕೇಶನ್ ಕ್ಲಿಯರ್ ಮಾಡಿರ್ತೀವಿ. ಅದರಲ್ಲಿ ಏನಿತ್ತು ಅನ್ನೋದನ್ನು ನೋಡಿರಲ್ಲ. ಆದರೆ ಹೊಸ ಫೋನ್ಗಳಲ್ಲಿ ಈತರ ಡಿಲೀಟ್ ಆದ ನೋಟಿಫಿಕೇಶನ್ ಕೂಡ ನೋಡಬಹುದು. ನೋಟಿಫಿಕೇಶನ್ ಹಿಸ್ಟರಿ ಫೀಚರ್ ಇಂದ ಇದು ಸಾಧ್ಯವಾಗುತ್ತೆ ಆದರೆ ಈ ಫೀಚರ್ ಲೇಟೆಸ್ಟ್ ಫೋನ್ಗಳಲ್ಲಿ ಮಾತ್ರ ಸಿಗುತ್ತೆ. ಸಾಮಾನ್ಯವಾಗಿ ಈ ಫೀಚರ್ ಆಫ್ ಆಗಿರುತ್ತೆ. ನಾವೇ ಆನ್ ಮಾಡಿಕೊಳ್ಳಬೇಕು. ಸೆಟ್ಟಿಂಗ್ಸ್ ನಲ್ಲಿ ಆಪ್ಸ್ ಅಂಡ್ ನೋಟಿಫಿಕೇಶನ್ಸ್ ಗೆ ಹೋಗಿ ನೋಟಿಫಿಕೇಶನ್ ಹಿಸ್ಟರಿ ಆಪ್ಷನ್ ನ ಆನ್ ಮಾಡಬೇಕು ನಂತರ ನಿಮ್ಮ ಫೋನ್ಗೆ ಬರೋ ಎಲ್ಲಾ ನೋಟಿಫಿಕೇಶನ್ ನ ಟ್ರ್ಯಾಕ್ ಮಾಡುತ್ತೆ ನಿಮಗೆ ಅವಶ್ಯಕತೆ ಇದ್ದಾಗ ನೋಟಿಫಿಕೇಶನ್ ಹಿಸ್ಟರಿ ಚೆಕ್ ಮಾಡಬಹುದು ಈ ಫೀಚರ್ ನ ಬಳಸೋದ್ರಿಂದ ಆಲ್ಮೋಸ್ಟ್ ಎಲ್ಲಾ ಆಪ್ಸ್ ಇಂದ ಬಂದ ನೋಟಿಫಿಕೇಶನ್ ನ ಸಹ ನೋಡೋಕೆ ಸಾಧ್ಯವಾಗುತ್ತೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments