Thursday, November 20, 2025
HomeUncategorizedಭಾರತದ ಹಣದ ತಯಾರಿ & RBI ನೋಟು ಮುದ್ರಣ ರಹಸ್ಯ

ಭಾರತದ ಹಣದ ತಯಾರಿ & RBI ನೋಟು ಮುದ್ರಣ ರಹಸ್ಯ

ಪ್ರಪಂಚದಲ್ಲಿ ಪ್ರತಿಯೊಬ್ಬರು ಸಂಪಾದನೆಗಾಗಿ ದುಡಿಯುತ್ತಾರೆ ಹಣ ಸಂಪಾದನೆಗಾಗಿ ಎಲ್ಲರೂ ಜೀವನದಲ್ಲಿ ಓಡುತ್ತಾ ಇರುತ್ತಾರೆ ಇನ್ನು ಹಣವನ್ನು ಕಷ್ಟಪಟ್ಟು ಸಂಪಾದನೆ ಮಾಡಬೇಕೆ ಹೊರತು ನಾವು ಸ್ವಯಂ ತಯಾರು ಮಾಡಲು ಸಾಧ್ಯವಿಲ್ಲ ಒಂದು ವೇಳೆ ನಾವೇ ಹಣ ತಯಾರು ಮಾಡುತ್ತೇವೆ ಅಂದುಕೊಳ್ಳಿ ಆಗ ಹಣದ ಅತಿ ಆಸೆಯಿಂದ ನೀವು ಜೈಲು ಪಾಲಾಗುತ್ತೀರಿ ಆದರೆ ನಿಮಗೆ ಯಾವಾಗಲಾದರೂ ಅನಿಸಿದ್ಯಾ ಈ ಹಣವನ್ನು ಹೇಗೆ ತಯಾರು ಮಾಡುತ್ತಾರೆ ಯಾವ ಕಾಗದವನ್ನ ಬಳಸುತ್ತಾರೆ ಯಾವ ಕೆಮಿಕಲ್ಸ್ ಉಪಯೋಗಿಸುತ್ತಾರೆ ಎಲ್ಲಿ ತಯಾರು ಮಾಡುತ್ತಾರೆ ಹಣವನ್ನು ಮುದ್ರಣ ಮಾಡೋದು ಸರ್ಕಾರವೇ ಆದ್ದರಿಂದ ಹೆಚ್ಚು ಹಣವನ್ನು ಮುದ್ರಣ ಮಾಡಿ ಜನರಿಗೆಲ್ಲರಿಗೂ ಹಂಚಿದರೆ ದೇಶದಲ್ಲಿ ಬಡತನವೇ ಇರೋದಿಲ್ಲ ಅಂತ ನಿಮಗೆ ಅನಿಸಬಹುದು ಒಂದು ವೇಳೆ ಸರ್ಕಾರ ಹೆಚ್ಚು ಹಣವನ್ನು ಮುದ್ರಿಸಿದರೆ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಮತ್ತು ಹೀಗೆ ಮಾಡಿದ್ದರಿಂದ ಜಿಂಬಾಬ್ವೆ ದೇಶದ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಕರೆನ್ಸಿ ನೋಟುಗಳನ್ನ ಹೇಗೆ ಮುದ್ರಣ ಮಾಡುತ್ತಾರೆ ಹೆಚ್ಚು ಹಣವನ್ನು ಮುದ್ರಿಸಿ ಜನರಿಗೆ ಹಂಚಿದ್ರೆ ಆಗುವ ಪರಿಣಾಮಗಳೇನು ಬನ್ನಿ ಇವತ್ತಿನ ಈ ಸಂಚಿಕೆಯಲ್ಲಿ ಇದೆಲ್ಲದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ನಮ್ಮ ದೇಶದಲ್ಲಿ ತಯಾರಾಗುವ 10 ರೂಪಾಯಿ 20 ರೂಪಾಯಿ 50 ರೂಪಾಯಿ ಹೀಗೆ ತಯಾರಾಗುವ ಎಲ್ಲಾ ನೋಟುಗಳ ಹಿಂದೆ ಎಂತಹ ಕಥೆ ಇದೆ ಎಂದು ನಿಮಗೆ ಗೊತ್ತಾ ನೋಟುಗಳನ್ನು ನಾವು ಅಂದುಕೊಳ್ಳುವ ರೀತಿ ಸುಲಭವಾಗಿ ತಯಾರು ಮಾಡಲು ಆಗೋದಿಲ್ಲ ನಾವು ಉಪಯೋಗಿಸುವ ನಾಣ್ಯಗಳನ್ನ ಡೆಲ್ಲಿ ಸುಲ್ತಾನನಾದ ಶೇರ್ಷಾ ಸುರಿ ಚಾಲನೆಗೆ ತಂದರು ಎಂದು ಹೇಳ್ತಾರೆ ಅದರ ಜೊತೆಗೆ 1861 ರಲ್ಲಿ ರೂಪಾಯಿ ನೋಟುಗಳ ಮೇಲೆ ವಾಟರ್ ಮಾರ್ಕ್ ಅನ್ನ ಕೂಡ ತಯಾರಿಸುತ್ತಾರೆ ನಾವು ನೋಟುಗಳನ್ನು ತಯಾರು ಮಾಡುವ ಕಾಗದಗಳನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತೆ ಯಾಕಂದ್ರೆ ಆ ಕಾಗದಗಳು ತುಂಬಾ ಭಿನ್ನವಾಗಿರುತ್ತೆ ನಮ್ಮ ದೇಶದಲ್ಲಿ ಅಂತಹ ಕಾಗದಗಳನ್ನ ಉತ್ಪಾದನೆ ಮಾಡುವುದಿಲ್ಲ ಸರಿ ಇನ್ನು ವಿಷಯಕ್ಕೆ ಬರೋಣ ಭಾರತ ದೇಶದಲ್ಲಿ ಹಣವನ್ನು ಮುದ್ರಣ ಮಾಡುವ ಅಧಿಕಾರ ಕೇವಲ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮಾತ್ರ ಇದೆ ದೇಶದಲ್ಲಿ ಇರುವ ಪ್ರತಿಯೊಂದು ಬ್ಯಾಂಕುಗಳು ಆರ್ ಬಿಐ ನ ಸೂಚನೆ ಮತ್ತು ನಿಯಂತ್ರಣದಲ್ಲಿ ಇರುತ್ತವೆ ಒಂದು ರೀತಿ ಹೇಳಬೇಕಾದರೆ ಆರ್ ಬಿಐ ಬ್ಯಾಂಕುಗಳಿಗೆ ಬ್ಯಾಂಕ್ ಎಂದು ಹೇಳಬಹುದು ಎಲ್ಲಾ ಬ್ಯಾಂಕುಗಳಲ್ಲಿ ಆರ್ ಬಿಐ ಮುದ್ರೆ ಖಚಿತವಾಗಿ ಇರುತ್ತದೆ.

ಕರೆನ್ಸಿ ನೋಟುಗಳನ್ನು ಯಾವ ರೀತಿ ತಯಾರು ಮಾಡುತ್ತಾರೆ ಎಂದು ಅವುಗಳ ವಿಧಾನವನ್ನು ತಿಳಿದುಕೊಳ್ಳೋಣ ನಂಬರ್ ಒನ್ ಪ್ರೊಡಕ್ಷನ್ ಪ್ರೋಸೆಸ್ ಉತ್ಪಾದನೆ ಮಾಡುವ ವಿಧಾನ ರೂಪಾಯಿ ನೋಟುಗಳನ್ನು ತಯಾರು ಮಾಡುವ ಕಾಗದಗಳು ನಾವು ಉಪಯೋಗಿಸುವ ಪೇಪರ್ ನ್ಯೂಸ್ ಮ್ಯಾಗಸಿನ್ ಗಳಲ್ಲಿ ಬರುವ ಕಾಗದವಲ್ಲ ಬದಲಿಗೆ ಈ ನೋಟುಗಳಲ್ಲಿ ಶೇಕಡ 70% ಹತ್ತಿ 30% ಲೈನನ್ ಇರುತ್ತದೆ ಹತ್ತಿ ಮತ್ತು ಲೈನಿನ್ ಅನ್ನ ದೊಡ್ಡ ದೊಡ್ಡ ಕಂತೆಗಳ ರೀತಿಯಲ್ಲಿ ರೂಪಾಯಿ ಕಾಗದಗಳನ್ನು ಉತ್ಪಾದಿಸುವ ಕಂಪನಿಗಳಿಗೆ ತೆಗೆದುಕೊಂಡು ಬರ್ತಾರೆ ಎರಡು ವಸ್ತುಗಳನ್ನು ಅಂದರೆ ಈ ಲೈನೈನ್ ಹಾಗೂ ಹತ್ತಿಯನ್ನ ಒಂದು ಯಂತ್ರದ ಒಳಗೆ ಹಾಕಿ ತುಂಬಾ ಚೆನ್ನಾಗಿ ಮಿಕ್ಸ್ ಮಾಡುತ್ತಾರೆ ಅದು ಒದ್ದೆಯಾಗುವವರೆಗೆ ಇನ್ನೊಂದು ಯಂತ್ರದಲ್ಲಿ ಇರಿಸುತ್ತಾರೆ ನಂತರ ಅದನ್ನ ಪೂರ್ತಿಯಾಗಿ ಒಣಗಿಸುತ್ತಾರೆ ಆನಂತರ ಅದನ್ನ ಪುಡಿಪುಡಿಯಾಗಿ ಮಾಡಿ ರೂಪಾಯಿ ನೋಟುಗಳನ್ನು ತಯಾರು ಮಾಡುವ ಪೇಪರ್ ಗಳನ್ನಾಗಿ ಮಾಡ್ತಾರೆ ನಂಬರ್ ಟು ದಿ ಡಿಸೈನ್ ಸ್ಟೇಜ್ ಸ್ನೇಹಿತರೆ ತಯಾರಾದ ಕಾಗದಗಳನ್ನ ನಮ್ಮ ಭಾರತೀಯ ರೂಪಾಯಿ ನೋಟುಗಳನ್ನಾಗಿ ಬದಲಾಯಿಸಬೇಕು ಅಂದ್ರೆ ಇನ್ನು ಅನೇಕ ಕ್ರಮಗಳಿವೆ ಗ್ರಾಫಿಕ್ ಡಿಸೈನ್ ಸೆಕ್ಯೂರಿಟಿ ಇವೆಲ್ಲವನ್ನ ತಲೆಯಲ್ಲಿ ಇಟ್ಕೊಂಡು ತುಂಬಾ ಜಾಗ್ರತೆಯಿಂದ ಕಾಗದಗಳನ್ನು ತಯಾರು ಮಾಡುತ್ತಾರೆ ನಮ್ಮ ರೂಪಾಯಿ ನೋಟುಗಳ ಮೇಲೆ ಒಂದು ಸಣ್ಣದಾದ ಹೊಳೆಯುವ ಗೆರೆಯು ಕಾಣಿಸುತ್ತದೆಯೇ ಅಲ್ಲವೇ ನಿಜವಾಗಿ ಹೇಳುವುದಾದರೆ ಆ ಗೆರೆಗಳು ಇಲ್ಲವಾದರೆ ಆ ನೋಟುಗಳು ಚಲಾವಣೆ ಆಗುವುದಿಲ್ಲ ಆ ರೇಖೆಯೇ ಹೇಳುತ್ತದೆ.

ಆ ನೋಟು ಅಸಲಿಯೇ ಅಥವಾ ನಕಲಿಯೇ ಎಂದು ಅದರಿಂದ ಕಾಗದ ತಯಾರಾದ ತಕ್ಷಣವೇ ಈ ರೇಖೆಯನ್ನು ಮುದ್ರಿಸುತ್ತಾರೆ ಕಾಗದಗಳನ್ನ ಯಂತ್ರಗಳಲ್ಲಿ ಹಾಕಿ ಕಾಗದಗಳಲ್ಲಿ ಒಂದು ರೀತಿ ರೇಖೆಗಳು ಬರುವಂತೆ ಮುದ್ರಣ ಮಾಡ್ತಾರೆ ಹಾಗೆ ತಯಾರಾದ ಎಲ್ಲಾ ನೋಟುಗಳ ಮೇಲೆ ಗಾಂಧಿ ಚಿತ್ರವಿರುವ ವಾಟರ್ ಮಾರ್ಕ್ ಅನ್ನ ಎಲ್ಲಾ ನೋಟುಗಳ ಮೇಲೆ ಮುದ್ರಿಸುತ್ತಾರೆ ಎಲ್ಲಾ ನೋಟುಗಳು ಒಂದೇ ರೀತಿ ತಯಾರಾಗಲು ಯಂತ್ರಗಳಲ್ಲಿ ಉಪಯೋಗಿಸುವ ಪರಿಕರಗಳನ್ನ ಸಮಾನವಾಗಿ ಇರುವಂತೆ ನೋಡಿಕೊಳ್ಳುತ್ತಾರೆ ನೋಟಿನ ಮೇಲೆ ನೀವು ನಂಬರ್ ಗಳನ್ನ ನೋಡೇ ಇರ್ತೀರಿ ಪ್ರತಿಯೊಂದು ನೋಟಿನ ಮೇಲೆ ಒಂದೊಂದು ನಂಬರ್ ಇರುತ್ತದೆ ಅವುಗಳನ್ನ ಸೀರಿಯಲ್ ನಂಬರ್ ಎಂದು ಹೇಳುತ್ತಾರೆ ತುಂಬಾ ಜಾಗ್ರತೆಯಿಂದ ನೋಟುಗಳ ಮೇಲೆ ಆ ನಂಬರ್ಗಳು ಸೀರಿಯಲ್ ಆಗಿ ನೋಟಿನ ಮೇಲೆ ಬರುವಂತೆ ನೋಡಿಕೊಳ್ಳುತ್ತಾರೆ ಹಾಗೆ ತಯಾರಾದ ನೋಟುಗಳನ್ನು ಕ್ವಾಲಿಟಿ ಇನ್ಸ್ಪೆಕ್ಟರ್ ಪರಿಶೀಲನೆ ಮಾಡುತ್ತಾರೆ ಕಂಪ್ಯೂಟರ್ ಮೂಲಕ ಪರಿಶೀಲಿಸಿ ಅವುಗಳು ಸರಿಯಾಗಿ ಇದೆಯೇ ಇಲ್ಲವೇ ಎಂದು ನೋಡಿ ಇರಬೇಕಾದ ಎಲ್ಲಾ ಮಾರ್ಕ್ಗಳು ಸರಿಯಾಗಿ ಇದೆಯೇ ಎಂದು ಜಾಗೃತಿಯಿಂದ ಪರಿಶೀಲಿಸುತ್ತಾರೆ ನಂಬರ್ ಮೂರು ಕರೆನ್ಸಿ ಕಲರಿಂಗ್ ಸ್ಟೇಜ್ ಇದು ತುಂಬಾ ಮುಖ್ಯವಾದ ಘಟ್ಟ ತಯಾರಾದ ನೋಟುಗಳಿಗೆ ಅವುಗಳ ಬೆಲೆಯ ಆಧಾರದ ಮೇಲೆ ಬಣ್ಣವನ್ನು ಹಾಕ್ತಾರೆ ಯಾವ ಬಣ್ಣವನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂದು ಖಚಿತವಾಗಿ ತಿಳಿದುಕೊಂಡಿರುತ್ತಾರೆ.

ಬಣ್ಣವನ್ನು ಹಾಕುವಾಗ ಇಲ್ಲವೇ ಅದನ್ನ ಕಲಿಸುವಾಗ ಇಲ್ಲವೇ ಉಪಯೋಗಿಸುವಾಗ ಯಾವುದೇ ರೀತಿಯ ವ್ಯತ್ಯಾಸವಾದರೆ ಪೇಪರ್ ನೋಟಿನ ಮೇಲೆ ಪರಿಣಾಮ ಬೀಳುತ್ತದೆ ಆದ್ದರಿಂದಲೇ ತುಂಬಾ ಜಾಗ್ರತೆಯಿಂದ ಎಷ್ಟು ಪ್ರಮಾಣದಲ್ಲಿ ಬಣ್ಣವನ್ನು ಹಾಕಬೇಕು ಎಂದು ಶ್ರದ್ದೆ ವಹಿಸುತ್ತಾರೆ ಈ ಬಣ್ಣವು ಕೂಡ ಎಲ್ಲಾ ನೋಟಿನ ಮೇಲೆ ಒಂದೇ ರೀತಿ ಬರಲು ಒಂದು ಯಂತ್ರವನ್ನು ಉಪಯೋಗಿಸುತ್ತಾರೆ ಈ ನೋಟುಗಳು ಆ ಯಂತ್ರದಿಂದ ಹೊರಗೆ ಬಂದಮೇಲೆ ನೋಡಿದರೆ ಪೂರ್ತಿಯಾಗಿ ನೋಟೊಂದು ತಯಾರಾದ ರೀತಿ ಇರುತ್ತೆ ಆದರೆ ಅಸಲಿಗೆ ಆಗಿ ಇರುವುದಿಲ್ಲ ಇನ್ನು ತುಂಬಾ ವಿಷಯಗಳು ಆ ನೋಟಿನ ಮೇಲೆ ಬರಬೇಕಾಗುತ್ತೆ ನಂಬರ್ ನಾಲ್ಕು ಫಿನಿಶಿಂಗ್ ಅಂಡ್ ಚೆಕ್ಕಿಂಗ್ ಹೀಗೆ ತಯಾರಾದ ನೋಟಿನ ಮೇಲೆ ಅಕ್ಷರಗಳು ಹೊಳೆಯುವ ರೀತಿ ಕಾಣಲು ಬಣ್ಣದ ದ್ರವ್ಯಗಳನ್ನು ಉಪಯೋಗಿಸುತ್ತಾರೆ ನೀವು ಒಮ್ಮೆ 500 ನೋಟಿಗೂ 2000 ನೋಟಿಗೂ ಇರುವ ವ್ಯತ್ಯಾಸವನ್ನು ನೋಡಿ ಅವುಗಳ ಮೇಲೆ ಸಂಖ್ಯೆಗಳು ಹೊಳೆಯುತ್ತಾ ಒಂದು ರೀತಿಯ ಬಣ್ಣದಲ್ಲಿ ಕಾಣಿಸುತ್ತವೆ ಅವುಗಳು ಕತ್ತಲಲ್ಲಿಯೂ ಕಾಣಬೇಕು ಎಂಬ ಕಾರಣಕ್ಕಾಗಿ ಈ ವಿಧಾನವನ್ನು ಉಪಯೋಗಿಸುತ್ತಾರೆ ಆನಂತರ ತಯಾರಾದ ನೋಟುಗಳು ಯಾವ ವಿಷಯದಲ್ಲೂ ಕಡಿಮೆ ಇಲ್ಲ ಎಂಬ ನಿರ್ಧಾರಕ್ಕೆ ಬರಲು ಸೀರಿಯಲ್ ನಂಬರ್ ಗಾಂಧಿ ಚಿತ್ರ ಮತ್ತು ವಿವಿಧ ವಾಟರ್ ಮಾರ್ಕ್ ಎಲ್ಲವನ್ನು ಒಂದಕ್ಕೆ ಹತ್ತು ಬಾರಿ ಚೆಕ್ ಮಾಡ್ತಾರೆ ಹಾಗೆ ಪರಿಶೀಲನೆ ಮಾಡಿದ ನಂತರ ಯಾವುದಾದರೂ ತಪ್ಪು ನಡೆದಿದ್ದರೆ ಅಂತಹ ಪೇಪರ್ ಶೀಟ್ಗಳನ್ನು ಪಕ್ಕಕ್ಕೆ ಇಡುತ್ತಾರೆ ಸರಿಯಾಗಿ ಇರುವ ನೋಟುಗಳು ಮುಂದಿನ ಪ್ರೊಸೀಜರ್ ಗೆ ತಲುಪುತ್ತವೆ.

ನಂಬರ್ ಐದು ಕಟಿಂಗ್ ತಯಾರಾದ ನೋಟುಗಳ ಶೀಟುಗಳನ್ನು ಒಂದು ಒಂದೇ ವಿಧಾನದಲ್ಲಿ ಒಂದೇ ಆಕಾರದಲ್ಲಿ ಕಟ್ ಮಾಡಬೇಕು ಇದಕ್ಕಾಗಿ ಈ ಶೀಟ್ಗಳನ್ನು ಒಂದು ಯಂತ್ರಕ್ಕೆ ಹಾಕ್ತಾರೆ ಯಾವುದೇ ಕಾರಣಕ್ಕೂ ಸ್ವಲ್ಪ ವ್ಯತ್ಯಾಸವಾದರೂ ನೋಟುಗಳ ಬೆಲೆ ಮತ್ತು ಉಪಯೋಗದಲ್ಲಿ ಪರಿಣಾಮ ಬೀಳುತ್ತದೆ ಆದ್ದರಿಂದಲೇ ತುಂಬಾ ಜಾಗ್ರತೆಯಿಂದ ನೋಟುಗಳು ಒಂದೇ ಆಕಾರದಲ್ಲಿ ಬರುವಂತೆ ಕಟ್ ಮಾಡ್ತಾರೆ ನಂತರ ಅವುಗಳನ್ನು ಒಂದು ಯಂತ್ರದಲ್ಲಿ ಹಾಕಿ ಗಟ್ಟಿಯಾಗಿ ಒತ್ತುತ್ತಾರೆ ಹಾಗೆ ಮಾಡಿದರೆ ನೋಟುಗಳು ದೃಢವಾಗಿ ತಯಾರಾಗುತ್ತವೆ ನಂಬರ್ ಆರು ಪ್ಯಾಕಿಂಗ್ ತಯಾರಾದ ನೋಟುಗಳನ್ನು ಒಂದು ಪಾರದರ್ಶಕವಾದ ಕವರ್ ನಲ್ಲಿ ಹಾಕಿ ಒಂದು ಯಂತ್ರದ ಸಹಾಯದಿಂದ ಪ್ಯಾಕಿಂಗ್ ಮಾಡ್ತಾರೆ ಹೀಗೆ ಪ್ಯಾಕಿಂಗ್ ಮಾಡಿದ ನೋಟುಗಳನ್ನ ವಿವಿಧ ರೀತಿಯ ಬಾಕ್ಸ್ ನಲ್ಲಿ ಹಾಕಿ ಅವುಗಳನ್ನ ತುಂಬಾ ಭದ್ರತೆಯಿಂದ ಬ್ಯಾಂಕುಗಳಿಗೆ ಕಳಿಸುತ್ತಾರೆ ಹೀಗೆ ಬ್ಯಾಂಕುಗಳಿಗೆ ಕಳುಹಿಸಿದ ನೋಟುಗಳು ಬ್ಯಾಂಕಿನಿಂದ ನಮ್ಮ ಕೈಗಳಿಗೆ ಬರುತ್ತದೆ ನಮ್ಮ ದೇಶದಲ್ಲಿ ಹೀಗೆ ನೋಟುಗಳನ್ನು ತಯಾರು ಮಾಡಲು ನಾಲ್ಕು ಬ್ಯಾಂಕ್ ನೋಟ್ ಪ್ರೆಸ್ ನಾಲ್ಕು ನಾಣ್ಯಗಳ ಪ್ರೆಸ್ ನಾಲ್ಕು ಪೇಪರ್ ಮಿಲ್ ಗಳಿವೆ ನೋಟ್ ಪ್ರೆಸ್ ಗಳು ಮಧ್ಯಪ್ರದೇಶದ ದೇವಾಸ್ ಮಹಾರಾಷ್ಟ್ರದ ನಾಸಿಕ್ ಸಲ್ಬೋನಿ ನಮ್ಮ ಮೈಸೂರಿನಲ್ಲಿ ಕೂಡ ಇದೆ ನೇವಸ್ ನಲ್ಲಿ ವರ್ಷಕ್ಕೆ 265 ಕೋಟಿ ರೂಪಾಯಿ ನೋಟುಗಳು ತಯಾರಾಗುತ್ತವೆ ಇಲ್ಲಿಯೇ ನಾವು ಹೆಚ್ಚಾಗಿ ಉಪಯೋಗಿಸುವ 10 ರೂಪಾಯಿಗಳು 50 ರೂಪಾಯಿ ಮತ್ತು 200 ರೂಪಾಯಿಗಳ ಮುಖಬೆಲೆಯ ನೋಟುಗಳು ತಯಾರಾಗುತ್ತವೆ ಮಧ್ಯಪ್ರದೇಶದ ಪೋಷಾಂಗಾಬಾದ್ ನಲ್ಲಿ ಕಾಗದ ತಯಾರು ಮಾಡುವ ಮಿಲ್ದೆ ಇದನ್ನ ಸಿ ಎನ್ ಪಿ ಕರೆನ್ಸಿ ನೋಟ್ ಪ್ರೆಸ್ ಎನ್ನುತ್ತಾರೆ ಕರೆನ್ಸಿ ನೋಟುಗಳನ್ನು ತಯಾರು ಮಾಡಲು ಇಲ್ಲಿಗೆ ವಿದೇಶಗಳಿಂದ ಪೇಪರ್ ಬರುತ್ತದೆ ನಾಣ್ಯಗಳನ್ನು ಮುದ್ರಿಸುವ ಯಂತ್ರಗಳು ಹೈದರಾಬಾದ್ ನೋಯಿಡಾ ಕೊಲ್ಕತ್ತಾ ಮತ್ತು ಮುಂಬೈಗಳಲ್ಲಿವೆ ಒಂದು ನೋಟನ್ನ ತಯಾರು ಮಾಡಲು ಎಷ್ಟು ಶ್ರಮವಹಿಸುತ್ತಾರೆ.

ಒಂದು ವೇಳೆ ಸರ್ಕಾರ ಹಣವನ್ನು ಮುದ್ರಣ ಮಾಡಿ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಹಣವನ್ನು ಹಂಚಿತು ಎಂದು ಇಟ್ಟುಕೊಳ್ಳಿ ಆಗ ಎಲ್ಲರೂ ಶ್ರೀಮಂತರಾಗುತ್ತಾರೆ ನಂತರ ಎಲ್ಲರೂ ತಮ್ಮ ಬಳಿ ಇರುವ ಹಣದಿಂದ ಅವಶ್ಯಕತೆ ಇರುವ ವಸ್ತುಗಳನ್ನು ಕೊಂಡುಕೊಳ್ಳಬೇಕು ಎಂದುಕೊಳ್ಳುತ್ತಾರೆ ಉದಾಹರಣೆಗೆ ಪ್ರತಿಯೊಬ್ಬರು ಕಾರನ್ನ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ ಪ್ರತಿಯೊಬ್ಬರು ಕಾರನ್ನ ಒಂದೇ ಬಾರಿ ಕೊಂಡುಕೊಳ್ಳಬೇಕು ಎಂದುಕೊಂಡಾಗ ಎಲ್ಲರಿಗೂ ಮಾರಾಟ ಮಾಡುವಷ್ಟು ಕಾರು ಇರೋದಿಲ್ಲ ಆ ಸಮಯದಲ್ಲಿ ಕಾರಿನ ಬೆಲೆಯನ್ನ ಹೆಚ್ಚು ಮಾಡುತ್ತಾರೆ ಆದ್ದರಿಂದ ಐದು ಲಕ್ಷ ಇದ್ದ ಕಾರಿನ ಬೆಲೆಯನ್ನ 10 ಲಕ್ಷ ಮಾಡ್ತಾರೆ ಎಂದುಕೊಳ್ಳಿ ಅಂದ್ರೆ ಹಣವನ್ನು ಮುದ್ರಣ ಮಾಡಿ ಹಂಚುವ ಮೊದಲು ಐದು ಲಕ್ಷಕ್ಕೆ ಒಂದು ಕಾರು ಬಂದರೆ ಹಣ ಮುದ್ರಣ ಮಾಡಿ ಹಂಚಿದ ಮೇಲೆ 10 ಲಕ್ಷಕ್ಕೆ ಒಂದು ಕಾರು ಬರುತ್ತದೆ ಅಂದರೆ ಇಲ್ಲಿ ಕಾರಿನ ಬೆಲೆ ಹೆಚ್ಚಾಗಿದೆ ಎಂದಲ್ಲ ಬದಲಿಗೆ ಹಣದ ಮೌಲ್ಯ ಕಡಿಮೆಯಾಗಿದೆ ಎಂದರ್ಥ ಹೀಗೆ ದೇಶದಲ್ಲಿರುವ ಪ್ರತಿಯೊಂದು ವಸ್ತುಗಳ ಬೆಲೆ ಹೆಚ್ಚಾಗಿ ಹೋಗುತ್ತದೆ ಇದನ್ನೇ ಹಣದುಬ್ಬರ ಎಂದು ಕರೆಯುತ್ತಾರೆ ಉದಾಹರಣೆಗೆ ಮೊದಲು ನಿಮ್ಮ ಬಳಿ 100 ರೂಪಾಯಿ ಇದೆ ಎಂದುಕೊಳ್ಳಿ ಆಗ ಒಂದು ಸಾಬೂನಿನ ಬೆಲೆ 10 ರೂಪಾಯಿ ಅಂದ್ರೆ ನಿಮಗೆ 100 ರೂಪಾಯಿಗೆ 10 ಸಾಬೂನುಗಳು ಬರುತ್ತವೆ ಸರ್ಕಾರ ಹಣವನ್ನು ಪ್ರಿಂಟ್ ಮಾಡಿ ಹಂಚಿದ ನಂತರ ನಿಮ್ಮ ಬಳಿ 1000 ರೂಪಾಯಿ ಇದೆ ಎಂದುಕೊಳ್ಳಿ ಅತಿಯಾದ ಹಣದುಬ್ಬರದಿಂದ ಸಾಬೂನಿನ ಬೆಲೆ 100 ರೂಪಾಯಿ ಆಗಿದೆ ಅಂದುಕೊಳ್ಳೋಣ ಈಗಲೂ ಕೂಡ 10 ಸಾಬೂನುಗಳೇ ಬರುತ್ತವೆ ಇದರಿಂದಾಗಿ ಏನಾದರೂ ಬದಲಾವಣೆ ಆಗಿದೆಯೇ ಇಲ್ಲವೇ ಏನಾದರೂ ಉಪಯೋಗವಿದೆಯೇ ಹೆಚ್ಚು ಹಣವನ್ನು ಪ್ರಿಂಟ್ ಮಾಡಿ ಹಂಚುವ ಮೊದಲು ಇದ್ದ ಪರಿಸ್ಥಿತಿಯೇ ಮತ್ತೆ ಅದೇ ಪರಿಸ್ಥಿತಿ ಬರುತ್ತೆ ಈಗ ಹಣದುಬ್ಬರ ಹೆಚ್ಚಾದರೆ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳೋಣ

2008-9ರಲ್ಲಿ ಜಿಂಬಾಬ್ವೆ ದೇಶದ ಪ್ರಭುತ್ವ ಖರ್ಚಿಗಾಗಿ ಮತ್ತು ಸಾಲವನ್ನು ತೀರಿಸಲು ಹೆಚ್ಚು ಹಣವನ್ನು ಪ್ರಿಂಟ್ ಮಾಡುತ್ತೆ ಆದ್ದರಿಂದಾಗಿ ಆ ದೇಶದಲ್ಲಿ ಹಣದುಬ್ಬರ ಹೇಗೆ ಹೆಚ್ಚಾಯಿತು ಎಂದು ನೋಡೋಣ ಉದಾಹರಣೆಗೆ 2015 ರಲ್ಲಿ ನಮ್ಮ ದೇಶದ ಹಣದುಬ್ಬರ 5.8% ಇದ್ದರೆ 2016 ರಲ್ಲಿ 4.9% ಇತ್ತು ಹೀಗೆ ಒಂದು ಅಥವಾ 2% ನಲ್ಲಿ ಬದಲಾವಣೆ ಇದ್ದರೆ ಹಣದುಬ್ಬರ ನಿಯಂತ್ರಣದಲ್ಲಿ ಇದೆ ಎಂದರ್ಥ ಅದೇ ಒಂದೇ ಬಾರಿ 30 ರಿಂದ 40% ಬದಲಾವಣೆ ಬಂದರೆ ಅದನ್ನ ಅಧಿಕ ಹಣ ಎಂದು ಕರೆಯುತ್ತಾರೆ ಜಿಂಬಾಬ್ವೆ ಸರ್ಕಾರ ಹೆಚ್ಚಾಗಿ ಹಣವನ್ನು ಪ್ರಿಂಟ್ ಮಾಡಿದ್ದರಿಂದ 2009ನೇ ವರ್ಷದಲ್ಲಿ ಆ ದೇಶದಲ್ಲಿ ಹಣದುಬ್ಬರ ಎಷ್ಟು ಪ್ರಮಾಣದಲ್ಲಿ ಹೆಚ್ಚಾಯಿತು ಗೊತ್ತಾ 10 ಅಲ್ಲ 20 ಅಲ್ಲ 656 ಪರ್ಸೆಂಟ್ ಇದರಿಂದಾಗಿ ಆ ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಪ್ರತಿ 24 ಗಂಟೆಗಳಿಗೆ ಒಮ್ಮೆ ಎರಡು ಪಟ್ಟು ಹೆಚ್ಚಾಯಿತು ಅಂದರೆ ಈ ದಿನ 5000 ಇದ್ದ ಫೋನಿನ ಬೆಲೆ ಮರುದಿನ 10000 ಏರ್ತಾ ಇತ್ತು ಮರುದಿನಕ್ಕೆ 20000 ಆಗ್ತಾ ಇತ್ತು ಈ ರೀತಿಯಾಗಿ ಪ್ರತಿಯೊಂದು ವಸ್ತುವಿನ ಬೆಲೆ ಅಧಿಕವಾಗಿ ಹೆಚ್ಚಾಗುತ್ತೆ ಒಂದು ಸಮಯ ಜಿಂಬಾಬ್ವೆ ದೇಶದಲ್ಲಿ ಒಂದು ಮೊಟ್ಟೆಯನ್ನು ತೆಗೆದುಕೊಳ್ಳಬೇಕಾದರೆ ಒಂದು ಬಿಲಿಯನ್ ಜಿಂಬಾಬ್ವೆ ಡಾಲರ್ ಕೊಡಬೇಕಾಗಿತ್ತು ಅಂದ್ರೆ ಅಂಗಡಿಗೆ ಹೋಗಿ ಒಂದು ಮೊಟ್ಟೆಯನ್ನು ತೆಗೆದುಕೊಳ್ಳಬೇಕಾದರೆ ಮೊಟ್ಟೆಯ ಬೆಲೆ ಒಂದು ಬಿಲಿಯನ್ ಡಾಲರ್ ಆದ್ದರಿಂದ ಒಂದು ಚೀಲದ ತುಂಬಾ ಹಣವನ್ನು ತೆಗೆದುಕೊಂಡು ಹೋಗಬೇಕಾಗಿತ್ತು ಈ ಪರಿಸ್ಥಿತಿಯನ್ನ ತಪ್ಪಿಸಲು ಅಲ್ಲಿನ ಸರ್ಕಾರ 100 ಟ್ರಿಲಿಯನ್ ನೋಟನ್ನ ಕೂಡ ಮುದ್ರಿಸಿತು ಈ ದೇಶದ ಪ್ರತಿಯೊಬ್ಬ ನಾಗರಿಕನ ಬಳಿ ಬಿಲಿಯನ್ ಟ್ರಿಲಿಯನ್ ಹಣವಿತ್ತು ಅಂದ್ರೆ ಎಲ್ಲರೂ ಬಿಲಿಯನ್ ಟ್ರಿಲಿಯನೇರ್ ಆಗುತ್ತಾರೆ ಇದರಿಂದಾಗಿ ಅವರಿಗೆ ಯಾವುದೇ ಲಾಭವಾಗುವುದಿಲ್ಲ ಅವರ ಬಳಿ ಇರುವ ಹಣಕ್ಕೆ ಚಾಕ್ಲೇಟ್ ಕೂಡ ಬರ್ತಾ ಇರಲಿಲ್ಲ ಇದರಿಂದಾಗಿ ಆ ದೇಶದ ಪರಿಸ್ಥಿತಿ ಹೇಗೆ ಬದಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments