ಇಂದಿನ ಡಿಜಿಟಲ್ ಯುಗದಲ್ಲಿ ಲ್ಯಾಪ್‌ಟಾಪ್ ಒಂದು ಅಗತ್ಯ ಸಾಧನವಾಗಿದ್ದು, ವಿದ್ಯಾರ್ಥಿಯಿಂದ ಉದ್ಯೋಗಸ್ಥನವರೆಗೆ ಎಲ್ಲರಿಗೂ ಉಪಯೋಗವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಗಳು ಲಭ್ಯವಿರುವ ಕಾರಣ, ಸರಿಯಾದ ಲ್ಯಾಪ್‌ಟಾಪ್ ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಬಜೆಟ್, ಬಳಕೆಯ ಉದ್ದೇಶ, ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಬ್ರ್ಯಾಂಡ್ ನಂಬಿಕೆ — ಇವೆಲ್ಲವನ್ನು ಪರಿಗಣಿಸಿ ಖರೀದಿ ಮಾಡುವುದರಲ್ಲೇ ನಿಮ್ಮ ಹಣಕ್ಕೆ ಪೂರ್ಣ ಮೌಲ್ಯ ಸಿಗುತ್ತದೆ.ವರ್ಕ್ ಫ್ರಮ್ ಹೋಂ ಹಾಗೂ ಡಿಜಿಟಲೈಸೇಶನ್ ಇಂದ ಈಗ ಲ್ಯಾಪ್ಟಾಪ್ ಕೂಡ ಸ್ಮಾರ್ಟ್ ಫೋನ್ ಅಷ್ಟೇ ಕಾಮನ್ ಆಗಿದೆ ಟೆಕ್ ಮೆಡಿಕಲ್ ಬಿಸಿನೆಸ್ ಎಲ್ಲಾ ಕ್ಷೇತ್ರದಲ್ಲೂ ಇವತ್ತಿನ ದಿನ ಲ್ಯಾಪ್ಟಾಪ್ ಬೇಕು ಅದರಲ್ಲೂ ಇಎಂಐ ಆಪ್ಷನ್ ಇರೋದ್ರಿಂದ ತುಂಬಾ ಈಸಿಯಾಗಿನೇ ಲ್ಯಾಪ್ಟಾಪ್ ಸಿಕ್ಕಿಬಿಡುತ್ತೆ ಇಂತಹ ಟೈಮ್ನಲ್ಲಿ ನೂರಾರು ಆಪ್ಷನ್ ಕಾಣೋದ್ರಿಂದ ನಾವು ಸ್ವಲ್ಪ ಯಾಮಾರಿದ್ರುನು ಯಾವ್ಯಾವುದೋ ಲ್ಯಾಪ್ಟಾಪ್ ತಗೊಂಡು ಆಮೇಲೆ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇರುತ್ತೆ ಹಾಗೆ ಇವತ್ತಿನ ವಿಡಿಯೋದಲ್ಲಿ ನಾವು ಒಂದು ಬೆಸ್ಟ್ ಲ್ಯಾಪ್ಟಾಪ್ ನ ನಿಮ್ಮ ಪರ್ಪಸ್ ಗೆ ಹೇಗೆ ಸೆಲೆಕ್ಟ್ ಮಾಡಬೇಕು ಲ್ಯಾಪ್ಟಾಪ್ ಪರ್ಚೇಸ್ ಮಾಡಬೇಕಾದರೆ ಏನೆಲ್ಲಾ ನೋಡ್ಬೇಕು ಆಪರೇಟಿಂಗ್ ಸಿಸ್ಟಮ್ ಪ್ರೊಸೆಸರ್ ಬಿಲ್ಟ್ ಕ್ವಾಲಿಟಿ ಯಾವುದರ ಮೇಲೆ ಎಷ್ಟು ಫೋಕಸ್ ಮಾಡಬೇಕು ಯಾವ ಪ್ರೊಫೆಷನ್ ಗೆ ಯಾವ ಉದ್ದೇಶಕ್ಕೆ ಯಾವ ಕೆಲಸಕ್ಕೆ ಯಾವ ಲ್ಯಾಪ್ಟಾಪ್ ಗಳು ಸೂಕ್ತ ಕ್ವಿಕ್ ಆಗಿ ನೋಡ್ತಾ ಹೋಗೋಣ.
ಪರ್ಪಸ್ ಅಂಡ್ ಯೂಸೇಜ್ ಸ್ನೇಹಿತರೆ ಆನ್ಲೈನ್ ನಲ್ಲಿ ಹತ್ತಾರು ಬಗೆಯ ಲ್ಯಾಪ್ಟಾಪ್ ಇರುತ್ತೆ ಒಂದಕ್ಕಿಂತ ಒಂದು ಚೆನ್ನಾಗಿ ನಿಮಗೆ ನೋಡೋಕೆ ಕಾಣುತ್ತೆ ಅಥವಾ ಅಲ್ಲಿ ಜಾಹಿರಾತು ಆರತಿ ಕೊಟ್ಟಿರುತ್ತಾರೆ ಫೋಲ್ಡಬಲ್ ಟಚ್ ಸ್ಕ್ರೀನ್ ಹೀಗೆ ಸಿಕ್ಕಾಪಟ್ಟೆ ಆಕರ್ಷಕ ಫೀಚರ್ ಗಳು ಕೂಡ ಬಂದಿರುತ್ತವೆ ಲ್ಯಾಪ್ಟಾಪ್ ಗಳನ್ನ ನೋಡ್ತಾ ನೋಡ್ತಾ ನೋಡ್ತಾ ನೋಡ್ತಾ ಒಂದು ಲ್ಯಾಪ್ಟಾಪ್ ತಗೊಳೋ ಇಂಟರೆಸ್ಟ್ ಹೊರಟು ಹೋಗ್ಬಿಡುತ್ತೆ ಅಷ್ಟು ಕನ್ಫ್ಯೂಸ್ ಆಗ್ತೀರಾ ಇಲ್ಲ ನಾವು ಅಂದುಕೊಂಡಿದ್ದಕ್ಕಿಂತ ಹೈಯರ್ ಪ್ರೈಸ್ ನ ಲ್ಯಾಪ್ಟಾಪ್ ನ ಪರ್ಚೇಸ್ ಮಾಡ್ಬಿಡ್ತೀವಿ ನಮ್ಮ ಅಗತ್ಯಕ್ಕಿಂತ ಜಾಸ್ತಿ ಇದನ್ನೇ ತಗೊಂಡು ಬಿಟ್ಟಿರ್ತೀವಿ ಹೀಗಾಗಿ ಮೊದಲೇ ನಾವು ನಮಗೆ ಯಾವ ಲ್ಯಾಪ್ಟಾಪ್ ಬೇಕು ಯಾವ ಕೆಲಸಕ್ಕೆ ಬೇಕು ಎಷ್ಟು ಹೊತ್ತು ಯೂಸ್ ಮಾಡ್ತೀವಿ ಅಂತ ಕ್ಲಾರಿಟಿಯನ್ನ ಹೊಂದಿರಬೇಕು ಜೊತೆಗೆ ನಮ್ಮ ಬಜೆಟ್ ಏನಿದೆ ಅನ್ನೋದನ್ನ ಫಿಕ್ಸ್ ಮಾಡಿಕೊಂಡಿರಬೇಕು ಅದರ ಒಳಗೇನೆ ಆ ಫಿಲ್ಟರ್ ಗಳನ್ನ ಹಾಕೊಂಡೆ ಲ್ಯಾಪ್ಟಾಪ್ ತಗೋಬೇಕು ಆಪರೇಟಿಂಗ್ ಸಿಸ್ಟಮ್ ಎರಡನೇದು ಪ್ಲಾಟ್ಫಾರ್ಮ್ ಅಥವಾ ಆಪರೇಟಿಂಗ್ ಸಿಸ್ಟಮ್ ಓ ಎಸ್ ಮಾರ್ಕೆಟ್ ನಲ್ಲಿ ಹತ್ತಾರು ಓ ಎಸ್ ಗಳಿವೆ ಆದರೆ ಹೆಚ್ಚು ಕಂಡುಬರುವುದು ಹೆಚ್ಚು ಜನ ತಗೊಳ್ಳೋದು ವಿಂಡೋಸ್ ಅಥವಾ ಆಪಲ್ ನ ಮ್ಯಾಕ್ ಓ ಎಸ್ ಮ್ಯಾಕ್ ಓ ಎಸ್ ನ ಯೂಸರ್ ಇಂಟರ್ಫೇಸ್ ಸಿಂಪಲ್ ಆಗಿರುತ್ತೆ ಈಸಿಯಾಗಿರುತ್ತೆ ಜೊತೆಗೆ ಮ್ಯಾಕ್ ಲ್ಯಾಪ್ಟಾಪ್ಸ್ ವಿಂಡೋಸ್ ಗೆ ಕಂಪೇರ್ ಮಾಡಿದ್ರೆ ಸೆಕ್ಯೂರ್ ಕೆಲವೊಂದು ಸಲ ಪಾಸ್ವರ್ಡ್ ಮರೆತು ಹೋದ್ರೆ ನಮಗೆ ಓಪನ್ ಮಾಡೋದು ಕಷ್ಟ ಆಗುತ್ತೆ ಜೊತೆಗೆ ಆಪಲ್ ಹಾರ್ಡ್ವೇರ್ ಗಳೊಂದಿಗೆ ಮಾತ್ರ ಮ್ಯಾಕ್ ಓ ಎಸ್ ವರ್ಕ್ ಆಗುತ್ತೆ ಆದರೆ ಭಾರತದಲ್ಲಿ ಮ್ಯಾಕ್ ಮತ್ತು ಆಪಲ್ ದು ಪ್ರಾಬ್ಲಮ್ ಏನು ಅಂದ್ರೆ ಸಿಕ್ಕಾಪಟ್ಟೆ ದುಬಾರಿ ಒಂದು ಅವುಗಳ ರಿಪೇರ್ ಕೂಡ ತುಂಬಾ ಕಾಸ್ಟ್ಲಿ ತುಂಬಾ ಕಾಸ್ಟ್ಲಿ ಅಂದ್ರೆ ಅದು ನಿಮಗೆ ಕಂಪೇರ್ ಮಾಡಕ್ಕಾಗಲ್ಲ ವಿಂಡೋಸ್ ಲ್ಯಾಪ್ಟಾಪ್ ನ ರಿಪೇರ್ ಕಾಸ್ಟ್ ಗು ಆಪಲ್ ಡಿವೈಸಸ್ ನ ರಿಪೇರ್ ಕಾಸ್ಟ್ ಗು ಕಂಪೇರ್ ಮಾಡಕ್ಕಾಗಲ್ಲ ಅಜಗಜಾಂತರ ವ್ಯತ್ಯಾಸ ಇರುತ್ತೆ ಅದೇ ವಿಂಡೋಸ್ ನೋಡಿದ್ರೆ ಹೇಗೆ ಬೇಕೋ ಹಾಗೆ ಯೂಸ್ ಮಾಡಬಹುದು ಯೂಸರ್ ಫ್ರೆಂಡ್ಲಿ ಅಫೋರ್ಡಬಲ್ ಕಾಸ್ಟ್ ನಲ್ಲಿ ಕೆಲವೊಮ್ಮೆ ಚೀಪ್ ಆಗೇ ಸಿಕ್ಕಿಬಿಡುತ್ತೆ.
ವಿಂಡೋಸ್ ನಲ್ಲಿ ವಿಂಡೋಸ್ 11 ಇರೋದ್ರಲ್ಲೇ ಬೆಸ್ಟ್ ಇವರ ಸ್ಪೆಷಾಲಿಟಿ ಏನು ಅಂತ ಹೇಳಿದ್ರೆ ನೀವು ಯಾವುದೇ ಕಂಪನಿಯ ಮ್ಯಾನುಫ್ಯಾಕ್ಚರ್ ನ ಡಿವೈಸ್ ತಗೊಂಡ್ರು ಕೂಡ ಅದು ಡೆಲ್ ತಗೊಳ್ತೀರಾ hp ತಗೊಳ್ತೀರಾ samsung ತಗೊಳ್ತೀರಾ ಅಥವಾ lenovo ತಗೊಳ್ತೀರಾ ಯಾವುದು ತಗೊಂಡ್ರು ಕೂಡ ಅದರಲ್ಲಿ ವಿಂಡೋಸ್ ಓ ಎಸ್ ಅನ್ನ ನೀವು ಇನ್ಸ್ಟಾಲ್ ಮಾಡಬಹುದು ಫಾರ್ಮ್ ಫ್ಯಾಕ್ಟರ್ ಫಾರ್ಮ್ ಫ್ಯಾಕ್ಟರ್ ಅಂದ್ರೆ ನಿಮ್ಮ ಲ್ಯಾಪ್ಟಾಪ್ ನ ಸೈಜ್ ಶೇಪ್ ಎಷ್ಟು ಪೋರ್ಟಬಲ್ ಇರಬೇಕು ಅನ್ನೋ ಫಿಸಿಕಲ್ ಫ್ಯಾಕ್ಟರ್ಸ್ ಇದೆಲ್ಲ ನಿಮ್ಮ ಡಿಸ್ಪ್ಲೇ ಸೈಜ್ ಮೇಲೆ ಡಿಪೆಂಡ್ ಆಗುತ್ತೆ ಒಂದು ವೇಳೆ ನಿಮಗೆ ಜಾಸ್ತಿ ಏನು ಕೆಲಸ ಇಲ್ಲ ಆಫೀಸ್ ವರ್ಕ್ ಅಷ್ಟೇ ಇರುತ್ತೆ ಅನ್ನೋದಾದ್ರೆ 13 ಅಥವಾ 14 ಇಂಚಿನ ಲ್ಯಾಪ್ಟಾಪ್ ಸಾಕು ಪೋರ್ಟಬಲ್ ಇರುತ್ತೆ ಲೈಟ್ ವೆಯಿಟ್ ಇರುತ್ತೆ ಆರಾಮಾಗಿ ಕ್ಯಾರಿ ಮಾಡಬಹುದು ಲ್ಯಾಪ್ಟಾಪ್ ನ ಉದ್ದೇಶ ಏನು ಎಲ್ಲಿಗೆ ಬೇಕಾದರೂ ತಗೊಂಡು ಹೋಗಬೇಕು ಈಸಿಯಾಗಿ ಅಂತ ಅದೇ ಒಂದು ಹೊರೆ ಹಾಕೊಂಡು ಹೆಗಲ ಮೇಲೆ ಅದೇನೋ ಬೇತಾಳೆ ಇರದಂಗೆ ಇರುತ್ತಲ್ಲ ಆ ರೀತಿ ಕುತ್ತಿಗೆ ಬಗ್ಗಿಸಿಕೊಂಡು ಹೋಗುವಷ್ಟು ವೆಯಿಟ್ ಇದೆ ಅಂತ ಹೇಳಿದ್ರೆ ಎರಡು ಕೆಜಿ ಮೂರು ಕೆಜಿ 4 kg ಎಲ್ಲಾ ತೂಕ ಇದೆ ಅಂತ ಹೇಳಿದ್ರೆ ಲಾಂಗ್ ಟರ್ಮ್ ಅಲ್ಲಿ ನಿಮಗೆ ಸಿಕ್ಕಾಪಟ್ಟೆ ಹಿಂಸೆ ಕೊಡುತ್ತೆ ಅದು ಹಾಗಾಗಿ ಲೈಟ್ ವೆಯಿಟ್ ಇದ್ದಷ್ಟು ಕೂಡ ಲ್ಯಾಪ್ಟಾಪ್ ನ ಪೋರ್ಟಬಿಲಿಟಿ ಜಾಸ್ತಿ ಆಗುತ್ತೆ ಎಲ್ಲಾ ಕಡೆ ನೀವು ಕ್ಯಾರಿ ಮಾಡ್ಕೊಂಡು ಹೋಗೋದು ಈಜಿ ಆಗುತ್ತೆ ಉದಾಹರಣೆಗೆ ನಾನು ವೈಯಕ್ತಿಕವಾಗಿ ಯೂಸ್ ಮಾಡೋದು samsung ನಲಕ್ಸಿ ಬುಕ್ 2 pro ಟು ಇಯರ್ ಆಯ್ತು ಆಲ್ಮೋಸ್ಟ್ ಆ ಲ್ಯಾಪ್ಟಾಪ್ ಗೆ ಎಷ್ಟು ಲೈಟ್ ಇದೆ ಅಂತ ಹೇಳಿದ್ರೆ 1 kg ನು ಇಲ್ಲ ಅದು 800 900 ಗ್ರಾಂ ಇರಬೇಕು ಅಷ್ಟೇ ಆ ರೀತಿ ನಾನಾ ಕಂಪನಿದು ನಾನಾ ರೀತಿಯ ಆಪ್ಷನ್ಸ್ ಇರುತ್ತೆ ನೀವು ಯಾವುದು ಬೇಕಾದರೂ ತಗೋಬಹುದು hp lenovo dell samsung ಅಥವಾ ಮ್ಯಾಕ್ ಬೇಕಾ ಈ ಮ್ಯಾಕ್ ಬುಕ್ ಗಳಿದಾವೆ macbook pro ಅಂತ ಇದೆ macbook air ಅಂತ ಇದೆ. ಯಾವುದಾದರೂ ತಗೊಳ್ಬಹುದು. ಡಿಸ್ಪ್ಲೇ ಡಿಸ್ಪ್ಲೇ ನಲ್ಲಿ ಟಿಎಫ್ ಟಿ ಐಪಿಎಸ್ ಓಲೆಡ್ ಹೀಗೆ ಹಲವಾರು ಡಿಸ್ಪ್ಲೇ ಗಳು ಇರುತ್ತವೆ ಇದರಲ್ಲಿ ಟಿಎಫ್ ಟಿ ಸ್ವಲ್ಪ ಕಣ್ಣುಗಳಿಗೆ ಕಷ್ಟ ಕೊಡುತ್ತೆ ಬ್ಲರ್ ಕಾಣ್ಸುತ್ತೆ ಅದರ ಬದಲು ಐಪಿಎಸ್ ಎಲ್ ಸಿಡಿ ಚೆನ್ನಾಗಿರುತ್ತೆ ತುಂಬಾ ಕಾಮನ್ ಆಗುತ್ತೆ ಕೂಡ ಸಿಗುತ್ತೆ ಇನ್ನು ಡಿಸ್ಪ್ಲೇ ನಲ್ಲಿ 50000 ಗಿಂತ ಕಮ್ಮಿ ತಗೊಳ್ತಾ ಇದ್ರೆ ಬ್ರೈಟ್ನೆಸ್ ಕನಿಷ್ಠ 250 ನಿಟ್ಸ್ ಗಿಂತ ಜಾಸ್ತಿ ಇರಬೇಕು 50000 ಮೇಲಿನ ಲ್ಯಾಪ್ಟಾಪ್ ತಗೊಳ್ತಾ ಇದ್ದೀರಾ ಅಂದ್ರೆ 350 ನಿಟ್ಸ್ ಬ್ರೈಟ್ನೆಸ್ ಇರೋದು ತಗೊಳ್ಳಿ ಇನ್ನು ನೀವು ಡೈಲಿ ಲ್ಯಾಪ್ಟಾಪ್ ಯೂಸ್ ಮಾಡ್ತೀರಾ ಸಾಕಷ್ಟು ಲ್ಯಾಪ್ಟಾಪ್ ಮೇಲೆ ಡಿಪೆಂಡ್ ಆಗಿದ್ದೀರಾ ಅಂದ್ರೆ ಒಲೆಡ್ ಡಿಸ್ಪ್ಲೇ ನಿಮ್ಮ ಕಣ್ಣುಗಳಿಗೆ ಒಳ್ಳೆಯದು ಕಲರ್ಸ್ ಕಾಂಟ್ರಾಸ್ಟ್ ಎಲ್ಲಾ ಚೆನ್ನಾಗಿರುತ್ತೆ ಆದ್ರೆ ರಿಫ್ರೆಶ್ ರೇಟ್ ಫಾಸ್ಟ್ ಆಗಿರಲ್ಲ 60 hz ವರೆಗೂ ಸಿಗುತ್ತೆ ಅದೇ ನೀವು ಎಲ್ ಸಿಡಿ ನೋಡೋದಾದ್ರೆ 120 hz ವರೆಗೂ ರಿಫ್ರೆಶ್ ರೇಟ್ ಇರುತ್ತೆ ನೀವು ಲ್ಯಾಪ್ಟಾಪ್ ನಲ್ಲಿ ಫೋಟೋ ಎಡಿಟಿಂಗ್ ವಿಡಿಯೋ ಎಡಿಟಿಂಗ್ ಅಥವಾ ಇನ್ಯಾವುದಾದರೂ ಗ್ರಾಫಿಕ್ಸ್ ಕೆಲಸ ಇದ್ರೆ ನಿಮಗೆ ಎಸ್ ಆರ್ ಜಿಬಿ ಪರ್ಸೆಂಟೇಜ್ ಇಂಪಾರ್ಟೆಂಟ್ ಆಗುತ್ತೆ 100% ಎಸ್ ಆರ್ ಜಿಬಿ ಇದ್ರೆ ಕಲರ್ಸ್ ತುಂಬಾ ಅಕ್ಯುರೇಟ್ ಆಗಿ ಕಾಣ್ಸುತ್ತೆ ಸ್ಟೋರೇಜ್ ಪ್ರೊಸೆಸರ್ ರಾಮ್ ಅಷ್ಟೇ ಸ್ಟೋರೇಜ್ ಕೂಡ ಇಂಪಾರ್ಟೆಂಟ್ ಯಾಕಂದ್ರೆ ನೀವು ಸಿಕ್ಕಾಪಟ್ಟೆ ಅಪ್ಲಿಕೇಶನ್ ಓಪನ್ ಮಾಡ್ಕೊಳ್ತಾ ಇದ್ರೆ ನಾರ್ಮಲ್ ಎಸ್ ಎಸ್ ಡಿ ಸ್ಟೋರೇಜ್ ಇದ್ದಾಗ ವರ್ಕ್ ತುಂಬಾ ಸ್ಲೋ ಆಗುತ್ತೆ ಆದ್ರೆ ಎನ್ ವಿಎಮ್ ಎಸ್ ಎಸ್ ಡಿ ಇದ್ರೆ ಫಾಸ್ಟ್ ಸ್ಟೋರೇಜ್ ಇರುತ್ತೆ ಎರಡು ಮೂರು ವರ್ಷ ಆದ್ಮೇಲೆ ಸ್ಲೋ ಆಗೋ ಪ್ರಾಬ್ಲಮ್ ಸ್ವಲ್ಪ ರೆಡ್ಯೂಸ್ ಆಗುತ್ತೆ ಪ್ರೊಸೆಸರ್ ಲ್ಯಾಪ್ಟಾಪ್ ನಲ್ಲಿ ಪ್ರೊಸೆಸರ್ ಚೆನ್ನಾಗಿರಬೇಕು ಅಲ್ದೆ ಹೆಚ್ಚು ಹೀಟ್ ಪ್ರೊಡ್ಯೂಸ್ ಮಾಡದೆ ಇರೋ ರೀತಿ ಇರಬೇಕು ಇಲ್ಲಾಂದ್ರೆ ಪ್ರೊಸೆಸರ್ ಪವರ್ಫುಲ್ ಆಗಿದ್ರು ಕೂಡ ಪರ್ಫಾರ್ಮೆನ್ಸ್ ಡೌನ್ ಆಗುತ್ತೆ ಹೀಟ್ ಜಾಸ್ತಿ ಆಗ್ತಾ ಇದ್ರೆ ಇದರಲ್ಲಿ ಮುಖ್ಯವಾಗಿ ಇಂಟೆಲ್ ಹಾಗೂ ಎಂಡಿ ಪ್ರೊಸೆಸರ್ ಗಳು ಸಿಗುತ್ತವೆ ಇಂಟೆಲ್ ತುಂಬಾ ದೀರ್ಘಕಾಲದಿಂದ ಇದೆ ಆದರೆ ಇತ್ತೀಚಿನ ವರ್ಷಗಳಲ್ಲಿ ಎಂಡಿ ಕೂಡ ಜಾಸ್ತಿ ಸೇಲ್ ಆಗ್ತಿದೆ amd ryzen ಸೀರೀಸ್ ನ ಪ್ರೊಸೆಸರ್ ಗಳು ಪವರ್ ಎಫಿಷಿಯೆಂಟ್ ಆಗಿರುತ್ತವೆ ಸ್ವಲ್ಪ ಹೀಟ್ ಆಗ್ತವೆ ಅದೇ ನೀವು apple ನ macbook macbook pro macbook air ಈ ತರ ಡಿವೈಸ್ ಗಳನ್ನ ತಗೊಂಡ್ರೆ ಅದರಲ್ಲಿ apple ಸೀರೀಸ್ ನ ಪ್ರೊಸೆಸರ್ಸ್ ಇರ್ತವೆ ಇವು ಪರ್ಫಾರ್ಮೆನ್ಸ್ ವಿಚಾರದಲ್ಲಿ ಬೆಂಚ್ ಮಾರ್ಕ್ ಅನ್ನ ಸೆಟ್ ಮಾಡಿವೆ ಒನ್ ಆಫ್ ದಿ ಬೆಸ್ಟ್ ಅಂತ ಕರೆಸಿಕೊಳ್ಳುತ್ತವೆ ಬ್ಯಾಟರಿ ಲ್ಯಾಪ್ಟಾಪ್ ನಲ್ಲಿ ಬ್ಯಾಟರಿ ಕೂಡ ತುಂಬಾ ಇಂಪಾರ್ಟೆಂಟ್ ಎಲ್ಲಿ ಬೇಕೋ ಅಲ್ಲಿ ಹೇಗೆ ಬೇಕೋ ಹಾಗೆ ಯೂಸ್ ಮಾಡೋದಕ್ಕಾಗಿನೇ ಲ್ಯಾಪ್ಟಾಪ್ ಅನ್ನ ತಗೊಳೋದು ಅಂತದ್ರಲ್ಲಿ ಚಾರ್ಜ್ ಜಾಸ್ತಿ ಉಳಿತಾ ಇಲ್ಲ ಅಂದ್ರೆ ಪದೇ ಪದೇ ಪವರ್ ಸಾಕೆಟ್ ಗೆ ಚುಚ್ಚಿಕೊಂಡು ಕೂಡಬೇಕು ಅನ್ನೋ ಪರಿಸ್ಥಿತಿ ಇದ್ರೆ ಲ್ಯಾಪ್ಟಾಪ್ ಅಷ್ಟೊಂದು ಎಫಿಷಿಯೆಂಟ್ ಅಂತ ಅನಿಸಿಕೊಳ್ಳಲ್ಲ ಹೀಗಾಗಿ ನಿಮ್ಮ ಲ್ಯಾಪ್ಟಾಪ್ ನ ಬ್ಯಾಟರಿ ನಾಲ್ಕು ಗಂಟೆವರೆಗಾದರೂ ಕೂಡ ಅಟ್ಲೀಸ್ಟ್ ಒಂದು ಫುಲ್ ಚಾರ್ಜ್ ನಲ್ಲಿ ವರ್ಕ್ ಆಗ್ಬೇಕು 75 ವ್ಯಾಟ್ ಆರ್ ಸಾಮರ್ಥ್ಯದ ಬ್ಯಾಟರಿ ಇದ್ರೆ ಚೆನ್ನಾಗಿ ಬರುತ್ತೆ ಇನ್ನು ಕೆಲವು ಒಂದು ಲ್ಯಾಪ್ಟಾಪ್ ಗಳು ಚಾರ್ಜ್ ಮಾಡುವಾಗ ಚೆನ್ನಾಗಿ ವರ್ಕ್ ಆಗ್ತವೆ ಆದರೆ ಚಾರ್ಜಿಂಗ್ ನ ತೆಗೆದಾಗ ಸಡನ್ ಆಗಿ ಲ್ಯಾಗ್ ಆಗೋಕೆ ಶುರು ಮಾಡುತ್ತವೆ ಹೀಗಾಗಿ ಈ ಪಾಯಿಂಟ್ಸ್ ನ ಕೂಡ ನೀವು ಮೈಂಡ್ ಅಲ್ಲಿ ಇಟ್ಕೋಬೇಕು ಇದೆಲ್ಲ ತಿಳ್ಕೊಬೇಕು ಅಂತ ಹೇಳಿದ್ರೆ ಟೆಕ್ ರಿವ್ಯೂವರ್ ಗಳು ಬೇರೆ ಬೇರೆ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಲ್ಯಾಪ್ಟಾಪ್ ಗಳನ್ನ ಯೂಸ್ ಮಾಡಿ ರಿವ್ಯೂ ಕೊಟ್ಟಿರುತ್ತಾರೆ ಅದರಲ್ಲಿ ಪ್ರತಿಷ್ಠಿತ ರಿವ್ಯೂ ಗಳನ್ನ ನೀವು ಚೆಕ್ ಮಾಡಬಹುದು ಜೊತೆಗೆ ಆ ರಿವ್ಯೂಗಳನ್ನ ಚೆಕ್ ಮಾಡ್ಬೇಕಾದ್ರೆ ಆ ವಿಡಿಯೋದಲ್ಲಿ ಅಥವಾ ಆ ಆರ್ಟಿಕಲ್ ನಲ್ಲಿ ಕಾಮೆಂಟ್ಸ್ ಅನ್ನ ಕೂಡ ನೋಡಿ ಅದನ್ನ ಯೂಸ್ ಮಾಡಿರೋ ರಿಯಲ್ ಲೈಫ್ ಯೂಸರ್ಸ್ ಕೂಡ ಅದನ್ನ ಯೂಸ್ ಮಾಡಿ ಅವರಿಗೆ ಏನು ಅನುಭವ ಆಗಿದೆ ಅನ್ನೋದನ್ನ ಕೂಡ ಕಾಮೆಂಟ್ ಮಾಡಿ ಫೀಡ್ಬ್ಯಾಕ್ ಅನ್ನ ಕೊಟ್ಟಿರುತ್ತಾರೆ ಅವುಗಳನ್ನ ಕೂಡ ನೀವು ಚೆಕ್ ಮಾಡಬಹುದು.
ಹಾಗೆ ಬೇರೆ ಬೇರೆ ಟೆಕ್ ಫೋರಂ ಗಳು ಇರುತ್ತವೆ ಅಲ್ಲೂ ಕೂಡ ಹೋಗಿ ನೀವು ಚೆಕ್ ಮಾಡಬಹುದು ಹಾಗೆ ಗೂಗಲ್ ರಿವ್ಯೂಸ್ ನಲ್ಲೂ ಕೂಡ ನೀವು ನೋಡ್ಕೋಬಹುದು ಫೀಡ್ಬ್ಯಾಕ್ ಅನ್ನ ಚೆಕ್ ಮಾಡಬಹುದು ರಾಮ್ ಇವತ್ತಿನ ಕಾಲದಲ್ಲಿ 8 gb ರಾಮ್ ಇರೋದಂತೂ ಕಡ್ಡಾಯ ನೀವು ಗೇಮಿಂಗ್ ಎಡಿಟಿಂಗ್ ನಂತಹ ತುಂಬಾ ಇಂಟೆನ್ಸ್ ಕೆಲಸ ಮಾಡ್ತಾ ಇದ್ರೆ 16 gb ರಾಮ್ ಕೂಡ ಕೆಲವೊಂದು ಸಲ ಸಾಕಾಗಲ್ಲ ಹಾಗಾಗಿ ಬೇಸಿಕ್ ಫೈಲ್ಸ್ ಓಪನ್ ಮಾಡ್ತೀನಿ ವರ್ಡ್ ಎಕ್ಸೆಲ್ ಈ ತರದ ಕೆಲಸ ಮಾತ್ರ ಮಾಡ್ತೀನಿ ಪಿಡಿಎಫ್ ಇಷ್ಟು ಮಾತ್ರ ಅಂತ ಆದ್ರೆ ಮಿನಿಮಮ್ 8 gb ಇಂದ ಸ್ಟಾರ್ಟ್ ಮಾಡಿ ಅಥವಾ ಹೆವಿ ಯೂಸರ್ ಆದ್ರೆ ತುಂಬಾ ಕೆಲಸ ಮಾಡ್ತೀರಾ ತುಂಬಾ ಆಪ್ ಆಪ್ ಗಳನ್ನ ಓಪನ್ ಮಾಡ್ತೀರಾ ತುಂಬಾ ಗೇಮ್ ಮಾಡ್ತೀರಾ ಎಡಿಟಿಂಗ್ ನಂತ ಕೆಲಸಗಳನ್ನ ಮಾಡ್ತೀರಾ ಗ್ರಾಫಿಕ್ಸ್ ಮಾಡ್ತೀರಾ ಫೋಟೋಶಾಪ್ ಎಲ್ಲ ಮಾಡ್ತೀರಾ ಅಂತ ಹೇಳಿದ್ರೆ 16 gb ರಾಮ್ ನ ನೀವು ತಗೊಂಡ್ರೆ ಒಳ್ಳೆಯದು ಸಿಪಿಯು ಅಂಡ್ ಜಿಪಿಯು ಒಂದು ವೇಳೆ ನೀವು ಗೇಮಿಂಗ್ ಮತ್ತು ವಿಡಿಯೋ ಎಡಿಟಿಂಗ್ ಆಗಿ ಲ್ಯಾಪ್ಟಾಪ್ ತಗೊಳ್ತಾ ಇದ್ರೆ ಅವಾಗ ಜಿಪಿಯು ತುಂಬಾ ಇಂಪಾರ್ಟೆಂಟ್ ಆಗುತ್ತೆ ಗ್ರಾಫಿಕ್ಸ್ ಪ್ರೋಸೆಸ್ಸಿಂಗ್ ಗೆ ಅದು ಎಷ್ಟು ಬೆಟರ್ ಇರುತ್ತೋ ಅಷ್ಟು ಒಳ್ಳೆಯದು ಕೂಲಿಂಗ್ ಸೇಮ್ ಇಲ್ಲೂ ಕೂಡ ಅಷ್ಟೇ ಇದು ಗೇಮಿಂಗ್ ಗೆ ಅಥವಾ ಎಡಿಟಿಂಗ್ ಪರ್ಪಸ್ ಗೆ ಗ್ರಾಫಿಕ್ಸ್ ಪ್ರೋಸೆಸ್ಸಿಂಗ್ ಕೆಲಸ ಏನಾದ್ರು ಮಾಡ್ತಾ ಇದ್ರೆ ಆಗ್ಲೂ ಕೂಡ ಕೂಲಿಂಗ್ ತುಂಬಾ ಇಂಪಾರ್ಟೆಂಟ್ ಆಗುತ್ತೆ ಕೂಲಿಂಗ್ ಚೆನ್ನಾಗಿಲ್ಲ ಅಂದ್ರೆ ನೀವು ಎಷ್ಟೇ ಪವರ್ಫುಲ್ ಪ್ರೊಸೆಸರ್ ಗ್ರಾಫಿಕ್ಸ್ ಕಾರ್ಡ್ ಅನ್ನ ಹೊಂದಿರೋ ಲ್ಯಾಪ್ಟಾಪ್ ತಗೊಂಡ್ರು ಕೂಡ ಲ್ಯಾಗ್ ನಿಮಗೆ ಕಂಡುಬಂದೆ ಬರುತ್ತೆ ಬ್ಯಾಟರಿನು ಬೇಗ ಡ್ರೈನ್ ಆಗುತ್ತೆ ಕನೆಕ್ಟಿವಿಟಿ ಮತ್ತು ಪೋರ್ಟ್ ಗಳು ಪೋರ್ಟ್ಸ್ ಅಂತ ಬಂದಾಗ ಎಚ್ ಡಿಎಂಐ ಪೋರ್ಟ್ ಯುಎಸ್ ಬಿ ಪೋರ್ಟ್ ಹೆಡ್ಫೋನ್ ಜಾಕ್ ಇದಿಯಾ ಚೆಕ್ ಮಾಡಿಕೊಳ್ಳಿ ಯುಎಸ್ ಬಿ ಟೈಪ್ ಸಿ ಇದಿಯಾ ನೋಡಿ ಯುಎಸ್ ಬಿ ಟೈಪ್ ಎ ಪೋರ್ಟ್ ಗಳು ಕನಿಷ್ಠ ಮೂರು ಇದ್ರೆ ಬೆಟರ್ ಅದರಲ್ಲೊಂದು ಫಾಸ್ಟ್ ಇರೋದಿದ್ರೆ ಡೇಟಾ ಟ್ರಾನ್ಸ್ಫರ್ ಫಾಸ್ಟ್ ಆಗಿ ಆಗುತ್ತೆ ಯುಎಸ್ ಬಿ ಥಂಡರ್ ಬೋಲ್ಡ್ ಪೋರ್ಟ್ ಸಿಗುತ್ತಾ ನೋಡಿ 70000 ಕ್ಕಿಂತ ಹೆಚ್ಚಿನ ಬೆಲೆಯ ಲ್ಯಾಪ್ಟಾಪ್ ತಗೊಳ್ತಾರೆ ಅಂದ್ರೆ ಈ ಥಂಡರ್ ಬೋಲ್ಟ್ ತ್ರೀ ಅಥವಾ ಥಂಡರ್ ಬೋಲ್ಟ್ ಫೋರ್ ನ ಪೋರ್ಟ್ ಸಿಗುತ್ತೆ ಇದ್ದಿದ್ರೆ ನೀವು ಒಂದು ಎಕ್ಸ್ಟರ್ನಲ್ ಗ್ರಾಫಿಕ್ಸ್ ಕಾರ್ಡ್ ಕನೆಕ್ಟ್ ಕೂಡ ಮಾಡ್ಕೋಬಹುದು ಸ್ಟೋರೇಜ್ ಕಮ್ಮಿ ಇದ್ರೆ ಬೇರೆ ಫಾಸ್ಟರ್ ಹಾರ್ಡ್ ಡ್ರೈವ್ ಅನ್ನ ಕೂಡ ಕನೆಕ್ಟ್ ಮಾಡ್ಕೋಬಹುದು ಫಾಸ್ಟ್ ಆಗಿ ಡೇಟಾ ಟ್ರಾನ್ಸ್ಫರ್ ಮಾಡಬಹುದು ಅದರ ಜೊತೆಗೆ 4k ಮಾನಿಟರ್ ಗೆ ಕನೆಕ್ಟ್ ಮಾಡಬೇಕು ಅಥವಾ ಮಲ್ಟಿ ಮಾನಿಟರ್ ಸೆಟ್ ಅಪ್ ಮಾಡಬೇಕು ಅಂದ್ರು ಕೂಡ ಇದು ಚೆನ್ನಾಗಿ ಫಾಸ್ಟ್ ಆಗಿ ವರ್ಕ್ ಮಾಡುತ್ತೆ.
ಒಂದು ವೇಳೆ ಇಲ್ಲ ಅಂದ್ರೆ ಬಜೆಟ್ ಲ್ಯಾಪ್ಟಾಪ್ ತಗೋತೀವಿ ಅಂದ್ರೆ ಥಂಡರ್ ಬೋಲ್ಟ್ ಇಲ್ಲ ಅಂದ್ರು ಕೂಡ ಕನಿಷ್ಠ usb 32 ನ ಪೋರ್ಟ್ ಇರೋ ಲ್ಯಾಪ್ಟಾಪ್ ತಗೊಳ್ಳಿ ಉಳಿದಂತೆ ಕನೆಕ್ಟಿವಿಟಿ ವಿಚಾರದಲ್ಲಿ ವೈಫೈ 6 ಹಾಗೂ ಕನಿಷ್ಠ ಬ್ಲೂಟೂತ್ 52 ಇದ್ರೆ ಬೆಟರ್ ಕೀಬೋರ್ಡ್ ಡಿಸ್ಪ್ಲೇ ಬಿಟ್ರೆ ನಾವು ಜಾಸ್ತಿ ಇಂಟರ್ಯಾಕ್ಟ್ ಮಾಡೋದು ಕೀಬೋರ್ಡ್ ಜೊತೆಗೆ ಅದರಲ್ಲೂ ನೀವು ಲ್ಯಾಪ್ಟಾಪ್ ಕೀಬೋರ್ಡ್ ನಲ್ಲಿ ಹೆಚ್ಚು ಟೈಪಿಂಗ್ ಮಾಡ್ತೀರಾ ಅಂದ್ರೆ ಕೀ ಟ್ರಾವೆಲಿಂಗ್ ಡಿಸ್ಟೆನ್ಸ್ ಕೀ ಸೈಜ್ ಮತ್ತು ಕೀಗಳ ಮಧ್ಯದ ಡಿಸ್ಟೆನ್ಸ್ ಕಂಫರ್ಟಬಲ್ ಇದಿಯಾ ನೋಡಿ ತುಂಬಾ ಇಕ್ಕಟ್ಟಾಗಿದ್ರೆ ಟೈಪಿಂಗ್ ಮಾಡೋಕೆ ಕಷ್ಟ ಆಗುತ್ತೆ ಬಿಲ್ಡ್ ಕ್ವಾಲಿಟಿ ಇನ್ನು ಲ್ಯಾಪ್ಟಾಪ್ ನ ಬಿಲ್ಡ್ ಕ್ವಾಲಿಟಿ ಕೂಡ ಚೆಕ್ ಮಾಡಬೇಕು ಕೆಲವೊಂದು ಸಲ ಸ್ವಲ್ಪ ನೆಲಕ್ಕೆ ತಾಗಿದ್ರು ಕೂಡ ಅಥವಾ ಗೋಡೆಗೆ ತಾಗಿದ್ರು ಕೂಡ ಮುರಿದೆ ಹೋಗೋದು ಬೆಂಡ್ ಆಗೋದು ಡಿಸ್ಪ್ಲೇ ಹೋಗ್ಬಿಡೋದೆಲ್ಲ ಆಗ್ತಾ ಇರುತ್ತೆ ಹೀಗಾಗಿ ಲ್ಯಾಪ್ಟಾಪ್ ನ ಬಿಲ್ಡ್ ಕ್ವಾಲಿಟಿ ಎಷ್ಟು ಸಾಲಿಡ್ ಆಗಿ ಇದನ್ನ ಬಿಲ್ಡ್ ಮಾಡಿದ್ದಾರೆ ಅನ್ನೋದನ್ನ ಕೂಡ ನೀವು ಚೆಕ್ ಮಾಡಿ ತೀರಾ ಲೈಟ್ ವೆಯಿಟ್ ಬೇಕು ತುಂಬಾ ಹಗುರ ಇರಬೇಕು ಅಂತ ಹೋದ್ರೆ ಬಿಲ್ಡ್ ಕ್ವಾಲಿಟಿ ಅವರು ಎಷ್ಟೇ ಚೆನ್ನಾಗಿ ಮಾಡಬೇಕು ಅಂದ್ರು ಕೂಡ ಕಂಪನಿಗಳಿಗೆ ಹೆವಿ ಎಲ್ಲಾ ಮಾಡಕ್ಕಾಗಲ್ಲ ರೇಟ್ ರೆಡ್ಯೂಸ್ ಮಾಡೋಕೋಸ್ಕರ ಸ್ವಲ್ಪ ಡೆಲಿಕೇಟ್ ಮಾಡಬೇಕಾಗುತ್ತೆ ನಿಮಗೆ ತುಂಬಾ ಗಟ್ಟಿ ಊಟ ಆಗಿರೋದು ಬೇಕು ಅಂದ್ರೆ ಮೆಟಲ್ ಅಲ್ಲಿ ಮಾಡಬೇಕಾಗುತ್ತೆ ಅದು ಸ್ವಲ್ಪ ತೂಕನು ಜಾಸ್ತಿ ಬರುತ್ತೆ ಇದೆಲ್ಲ ಮೈಂಡ್ ಅಲ್ಲಿ ಇಟ್ಕೊಂಡಿರಿ ಸೋ ಫೈನಲಿ ಗೇಮಿಂಗ್ ಅಥವಾ ಎಡಿಟಿಂಗ್ ಗೆ ಲ್ಯಾಪ್ಟಾಪ್ ತಗೊಳ್ತಾ ಇದ್ದೀರಾ ಅಂದ್ರೆ ನಿಮ್ಮ ಪ್ರಿಫರೆನ್ಸ್ ಆರ್ಡರ್ ಈ ರೀತಿಯಾಗಿರಬೇಕು ಜಿಪಿಯು ಫಸ್ಟ್ ಕೂಲಿಂಗ್ ಸಿಪಿಯು ರಾಮ್ ಸ್ಟೋರೇಜ್ ಅದೇ ನೀವು ರೆಗ್ಯುಲರ್ ಕೆಲಸಕ್ಕೆ ಲ್ಯಾಪ್ಟಾಪ್ ತಗೋತಾ ಇದ್ದೀರಾ ಫೈಲ್ ಓಪನ್ ಮಾಡೋದು ಇರುತ್ತೆ ಪಿಡಿಎಫ್ ವರ್ಡ್ ಎಕ್ಸೆಲ್ ಇಂಥವುಗಳಲ್ಲಿ ಜಾಸ್ತಿ ಕೆಲಸ ಇರುತ್ತೆ ಇಮೇಲ್ ಮಾಡೋಕೆ ಇರುತ್ತೆ ಈ ತರ ಅಂತ ಆದ್ರೆ ನಿಮಗೆ ಬೇಸಿಕ್ ಲ್ಯಾಪ್ಟಾಪ್ ಸಾಕಾಗುತ್ತೆ ಬೇಸಿಕ್ ಸ್ಟೋರೇಜ್ ಮತ್ತು ಬೇಸಿಕ್ ರಾಮ್ ನ ಲ್ಯಾಪ್ಟಾಪ್ ಸಾಕಾಗುತ್ತೆ ಒಂದು 250 gb ಸ್ಟೋರೇಜ್ ಹಾಗೂ 8 gb ರಾಮ್ ಇದ್ರೂ ಕೂಡ ನಿಮಗೆ ಈ ಕೆಲಸಗಳು ಆರಾಮಾಗಿ ಆಗ್ಬಿಡುತ್ತವೆ ಅದಾದ್ಮೇಲೆ ನೀವು ಸಿಪಿಯು ಯಾವುದು ಇದೆ ಕೂಲಿಂಗ್ ಹೇಗಿದೆ ಜಿಪಿಯು ಹೇಗಿದೆ ಅಂತ ಥಿಂಕ್ ಮಾಡಬೇಕು ಸಪರೇಟ್ ಡೆಡಿಕೇಟೆಡ್ ಗ್ರಾಫಿಕ್ಸ್ ಕಾರ್ಡ್ ಇರೋದು ಏನು ಬೇಕಾಗಲ್ಲ ಇದಕ್ಕೆ ಇಂಟಿಗ್ರೇಟೆಡ್ ಗ್ರಾಫಿಕ್ಸ್ ಕಾರ್ಡ್ ಇದ್ರೂ ಕೂಡ ಈಸಿಯಾಗಿ ಕೆಲಸ ನಡ್ಕೊಂಡು ಹೋಗುತ್ತೆ ಈ ಎರಡನೇ ಕೆಟಗರಿಯ ಜನಕ್ಕೆ ಎಡಿಟಿಂಗ್ ಫೋಟೋಶಾಪ್ ಗೇಮಿಂಗ್ ಆ ತರದವರಿಗೆ ಮಾತ್ರ ಡೆಡಿಕೇಟೆಡ್ ಗ್ರಾಫಿಕ್ಸ್ ಕಾರ್ಡ್ ಇಂಪಾರ್ಟೆಂಟ್ ಆಗುತ್ತೆ ಸೊ ಫ್ರೆಂಡ್ಸ್ ಇದಾಗಿತ್ತು ಲ್ಯಾಪ್ಟಾಪ್ ಖರೀದಿ ಮಾಡ್ಬೇಕಾದ್ರೆ ಏನೆಲ್ಲಾ ಬೇಸಿಕ್ ಸಂಗತಿಗಳು ಗೊತ್ತಿರಬೇಕು ಅನ್ನೋದನ್ನ ಕ್ವಿಕ್ ಆಗಿ ತಿಳಿಸಿಕೊಡೋ ಪ್ರಯತ್ನ ತುಂಬಾ ಹೇಳಬಹುದು ಆಕ್ಚುವಲಿ ಇದರಲ್ಲಿ ಬಟ್ ತುಂಬಾ ಒಂದೇ ಸಲಿ ಓವರ್ ಲೋಡ್ ಆಗ್ಬಿಡುತ್ತೆ ಇದು ಆಲ್ರೆಡಿ ಎಕ್ಸ್ಪರ್ಟ್ ಗಳು ಇರೋವರಿಗೆ ನಾವು ಮಾಡ್ತಿರೋದು ಅಲ್ಲವೇ ಅಲ್ಲ ಏನು ಗೊತ್ತಿಲ್ಲ ಅಂತಿರೋವರಿಗೆ ಒಂದಷ್ಟು ಬೇಸಿಕ್ ಮಾಹಿತಿ ಕೊಡೋ ಪ್ರಯತ್ನ.