ವಿಶ್ವದ ಆರ್ಥಿಕತೆಯಲ್ಲಿ ಭಾರತ ಗರ್ಜನೆ ಜಪಾನ್ ಹಿಂದಿಕ್ಕೆ ನಾಲ್ಕನೇ ಸ್ಥಾನಕ್ಕೆ ಜಿಗಿತ 30ಕ್ಕೆ ಜರ್ಮನಿಗೂ ಕೊಡುತ್ತಾ ಟಕ್ಕರ್ ಹೊಸ ವರ್ಷಕ್ಕೂ ಮುನ್ನವೇ ಭಾರತೀಯರಿಗೆ ಅತಿ ದೊಡ್ಡ ಸಂತೋಷದ ಸುದ್ದಿಯೊಂದು ಲಭಿಸಿದೆ ವಿಶ್ವ ಆರ್ಥಿಕ ವಲಯದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿ ಜಾಗತಿಕ ಆರ್ಥಿಕತೆಯ ಸಿಂಹಾಸನವನ್ನ ಏರ್ತಾ ಇದೆ. ಶತಕೋಟಿ ಭಾರತೀಯರ ಕನಸು ಇಂದು ನನಸಾಗ್ತಾ ಇದೆ. ಹೌದು ಭಾರತ ಎಂದು ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ಮೂಲಕ ಜಪಾನ್ ಅಂತಹ ಬಲಿಷ್ಠ ದೇಶವನ್ನೇ ಹಿಂದಿಕ್ಕಿದೆ. ಇದರೊಂದಿಗೆ ಭಾರತ ಈಗ ವಿಶ್ವದ ಮೂರನೇ ಅತಿ ದೊಡ್ಡ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಇದು ಕೇವಲ ಅಂಕಿ ಅಂಶಗಳ ಏರಿಕೆಯಲ್ಲ.
ಇದು ನವಭಾರತದ ಅಪ್ರತಿಮಾ ಶಕ್ತಿಯ ಪ್ರದರ್ಶನ. ಕರೋನಾ ನಂತರದ ಜಾಗತಿಕ ಬಿಕ್ಕಟ್ಟು ಯುದ್ಧದ ಭೀತಿ ಮತ್ತು ಆರ್ಥಿಕ ಅಸ್ಥಿರತೆಯ ನಡುವೆಯು ಭಾರತ ಹೇಗೆ ವಿಶ್ವದ ಆರ್ಥಿಕ ಎಂಜಿನ್ ಆಗಿ ಕೆಲಸ ಮಾಡ್ತಾ ಇದೆ ಎಂಬುದರ ಕಥೆ ಇಲ್ಲಿದೆ ಹಾಗಾದ್ರೆ ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು ಹೇಗೆ ಮುಂದಿರುವ ಸವಾಲುಗಳು ಏನು ಡೀಟೇಲ್ ಆಗಿ ನೋಡ್ಕೊಂಡು ಬರೋಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ ಭಾರತದ ಆರ್ಥಿಕತೆಯ ಗಾತ್ರವು ಈಗ 4.18 ಟ್ರಿಲಿಯನ್ ಯುಎಸ್ ಡಾಲರ್ ತಲುಪಿದೆ. ಇದರೊಂದಿಗೆ ಜಪಾನನ್ನ ಆರ್ಥಿಕ ರೇಸ್ನಲ್ಲಿ ಭಾರತ ಹಿಂದಿಕ್ಕಿದೆ. ಪ್ರಸ್ತುತ ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೆ ಚೀನಾ ಎರಡನೇ ಸ್ಥಾನದಲ್ಲಿದೆ. ಈಗ ಜಪಾನನ್ನ ಐದನೇ ಸ್ಥಾನಕ್ಕೆ ತಳ್ಳಿರುವ ಭಾರತ ಜರ್ಮನಿಯ ಬೆನ್ನ ಹಿಂದೆ ನಿಂತಿದೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತರಮಾಸಿಕದಲ್ಲಿ ಶೇಕಡ 7.4 ರಷ್ಟಿದ್ದ ಜಿಟಿಪಿ ಬೆಳವಣಿಕೆ ಈ ವರ್ಷದ ಮೊದಲ ತರೈಮಾಸಿಕದಲ್ಲಿ ಶೇಕಡ 7.8 8ಕ್ಕೆ ಏರಿತ್ತು ಆದರೆ ಈಗ 202526ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದಾಖಲೆಯ ಶೇಕಡ 8.2 ಎರಷ್ಟು ಬೆಳವಣಿಗೆ ಕಂಡಿದೆ ಇದು ಜಾಗತಿಕ ಮಟ್ಟದ ಯಾವುದೇ ಪ್ರಮುಖ ಆರ್ಥಿಕತೆಗಿಂತ ಅತಿವೇಗವಾದ ಬೆಳವಣಿಗೆಯಾಗಿದೆ ಭಾರತದ ಬೆಳವಣಿಗೆ ಹಿಂದಿರುವ ಗುಟ್ಟೇನು ಇಲ್ಲಿ ಪ್ರಶ್ನೆ ಏನಂದ್ರೆ ಇಡೀ ವಿಶ್ವ ಆರ್ಥಿಕ ಹಿಂಜರತದ ಭೀತಿಯಲ್ಲಿರುವಾಗ ಭಾರತ ಮಾತ್ರ ಹೇಗೆ ಇಷ್ಟು ವೇಗವಾಗಿ ಬೆಳಿತಾ ಇದೆ ಎಂಬುದು ಎಲ್ಲರ ಕುತುಹಲವಾಗಿರಬಹುದು ಅದಕ್ಕೂ ಕಾರಣವಿದೆ ಮೊದಲನೆಯದಾಗಿ ಖಾಸಗಿ ಬಳಕೆ ಭಾರತದ ಜನಸಂಖ್ಯೆಯೇ ನಮ್ಮ ಶಕ್ತಿ ದೇಶದ ಒಳಗಿನ ಗ್ರಾಹಕರ ಬೇಡಿಕೆ ಹೆಚ್ಚಾಗುತಿದೆ ಇದು ಮಾರುಕಟ್ಟೆಯಲ್ಲಿ ಹಣದ ಹರಿವನ್ನ ಹೆಚ್ಚಿಸಿದೆ.
ಇನ್ನು ಎರಡನೆಯದು ರಚನಾತ್ಮಕ ಸುಧಾರಣೆಗಳು ಸರ್ಕಾರದ ಡಿಜಿಟಲ್ ಇಂಡಿಯಾ ಜಿಎಸ್ಟಿ ಸುಧಾರಣೆ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳು ಉದ್ಯಮಗಳಿಗೆ ಹೊಸ ಚೈತನ್ಯವನ್ನ ನೀಡಿವೆ. ಇನ್ನು ಮೂರನೆಯದಾಗಿ ಮೂಲ ಸೌಕರ್ಯ ಹೂಡಿಕೆ ರಸ್ತೆ ರೈಲ್ವೆ ಮತ್ತು ಬಂದರುಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಆಧ್ಯತೆ ಆರ್ಥಿಕತೆಗೆ ದೊಡ್ಡ ಬಲವನ್ನು ನೀಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಇದ್ದರೂ ಕೂಡ ಭಾರತ ತನ್ನ ದೇಶೀಯ ಮಾರುಕಟ್ಟೆಯ ಬಲದಿಂದಲೇ ಜಾಗತಿಕ ಶಕ್ತಿಯಾಗಿ ಮೆರೆಯುತ್ತಿದೆ. ಭಾರತದ ಬಗ್ಗೆ ಜಾಗತಿಕ ಸಂಸ್ಥೆಗಳ ಭವಿಷ್ಯವಾಣಿ. ಭಾರತದ ಈ ನಾಗಾಲೋಟವನ್ನ ನೋಡಿ ವಿಶ್ವದ ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳು ಅಚ್ಚರಿಗೊಂಡಿವೆ. ಕೇವಲ ಭಾರತ ಸರ್ಕಾರವಷ್ಟೇ ಅಲ್ಲ, ಅಂತರಾಷ್ಟ್ರೀಯ ಏಜೆನ್ಸಿಗಳು ಕೂಡ ಭಾರತದ ಪರವಾಗಿ ಬ್ಯಾಟ್ ಬೀಸುತ್ತಿವೆ. ವಿಶ್ವ ಬ್ಯಾಂಕ್ ಪ್ರಕಾರ 2026 ರಲ್ಲಿ ಭಾರತ ಶೇಕಡ 6.5 5 ರಷ್ಟು ಬೆಳೆಯಲಿದೆ ಅಂತ ಭವಿಷ್ಯವನ್ನ ನುಡಿದಿದೆ ಇನ್ನು ಮೂಡಿಸ್ g20 ದೇಶಗಳಲ್ಲಿ ಭಾರತವೇ ಅತಿವೇಕದ ಆರ್ಥಿಕತೆಯಾಗಿ ಮುಂದುವರೆಯಲಿದೆ ಅಂತ ಹೇಳಿದೆ ಇನ್ನು ಐಎಂಎಫ್ ಮತ್ತು ಓಈಸಿಡಿ ಕೂಡ ಭಾರತದ ಜಿಡಿಪಿ ಮುನ್ಸೂಚಿಯನ್ನ ಹೆಚ್ಚಿಸಿವೆ ಫಿಚ್ ಕೂಡ ಗ್ರಾಹಕರ ಬೇಡಿಕೆ ಹೆಚ್ಚಾಗಿರುವುದರಿಂದ 2026ರ ಬೆಳವಣಿಗೆಯನ್ನ ಶೇಕಡ 7.4ಕ್ಕೆ 4ಕ್ಕೆ ಏರಿಸಿವೆ ಇದರರ್ಥ ಭಾರತದ ಆರ್ಥಿಕತೆಯು ಕೇವಲ ಒಂದು ಸಣ್ಣ ಬುಗುರಿಯಂತೆ ಸುತ್ತುತ್ತಿಲ್ಲ ಬದಲಿಗೆ ಸುನಾಮಿಯಂತೆ ಮುನ್ನುಗುತ್ತಿದೆ.
2030ಕ್ಕೆ ಮೂರನೇ ಸ್ಥಾನಕ್ಕೆ ಜಿಗಿಯುವ ಗುರಿ ಈಗಿನ ಲೆಕ್ಕಾಚಾರದ ಪ್ರಕಾರ ಭಾರತ ಕೇವಲ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ದೇಶವಲ್ಲ ಮುಂದಿನ ಎರಡುವರೆ ವರ್ಷದಿಂದ ಮೂರು ವರ್ಷಗಳಲ್ಲಿ ಭಾರತ ಜರ್ಮನಿಯನ್ನ ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಅಂತ ಹೇಳಲಾಗುತ್ತಿದೆ. 2030ರ ವೇಳೆಗೆ ಭಾರತದ ಜಿಡಿಪಿ 7.3 ಟ್ರಿಲಿಯನ್ ಡಾಲರ್ ತಲುಪುವ ಅಂದಾಜಿದೆ. ಕೇವಲ ಜಿಡಿಪಿ ಮಾತ್ರವಲ್ಲ ದೇಶದ ಒಳಗೂ ಸಕಾರಾತ್ಮಕ ಬದಲಾವಣೆಗಳು ಆಗ್ತಿವೆ. ಹಣದುಬ್ಬರ ನಿಯಂತ್ರಣದಲ್ಲಿದೆ ರಪ್ತು ವಲಯದಲ್ಲಿ ಭಾರತ ಹೊಸ ದಾಖಲೆಯನ್ನ ಬರೆತಾ ಇದೆ ಬ್ಯಾಂಕಿಂಗ್ ಕ್ಷೇತ್ರವು ಸದೃಢವಾಗಿದ್ದು ಉದ್ಯಮಿಗಳಿಗೆ ಸಾಲದ ಹರಿವು ಸುಲಲಿತವಾಗಿ ನಡೀತಾ ಇದೆ ಅಂತ ಹೇಳಲಾಗುತಿದೆ. 2047ರ ವಿಕಸಿತ ಭಾರತದ ಕನಸು ಭಾರತದ ಗುರಿ ಇಲ್ಲಿಗೆ ಮುಗಿಯುವುದಿಲ್ಲ. 2047 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬಲಿದೆ. ಅಷ್ಟರೊಳಗೆ ಭಾರತವನ್ನ ವಿಕಸಿತ ಭಾರತ ಅಂದ್ರೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಮತ್ತು ಉನ್ನತ ಮಧ್ಯಮ ಆದಾಯದ ದೇಶವನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ.
ಈ ದಾರಿಯಲ್ಲಿ ಸವಾಲುಗಳಿಲ್ಲ ಅಂತ ಹೇಳಲಾಗಲ್ಲ. ಆದರೆ ಭಾರತವು ನಿರ್ಮಿಸಿರುವ ಬಲವಾದ ಆರ್ಥಿಕ ಅಡಿಪಾಯವು ಯಾವುದೇ ಬಿರುಗಾಳಿಯನ್ನ ಎದುರಿಸಲು ಸಿದ್ಧವಾಗಿದೆ. ಇಂದು ಜಪಾನ್ ಸೋತಿದೆ ನಾಳೆ ಜರ್ಮನಿ ಸರದಿ. ಅಂತಿಮವಾಗಿ ವಿಶ್ವದ ಶ್ರೇಷ್ಠ ಆರ್ಥಿಕತೆಯಾಗಿ ಭಾರತ ಮಿನುಗಬೇಕು ಎಂಬುದು ಕೋಟ್ಯಾಂತರ ಭಾರತೀಯರ ಕನಸು. ಟ್ರಂಪ್ ಟ್ಯಾರಿಫ್ ನಡುವೆಯು ಭಾರತದ ಆರ್ಭಟ. ಅಮೆರಿಕದೊಂದಿಗೆ ವ್ಯಾಪಾರ ಯುದ್ಧ ಜೊತೆಗೆ ಜಾಗತಿಕ ವ್ಯಾಪಾರ ಅನಿಶ್ಚಿತತೆಗಳು ಭಾರತದ ಆರ್ಥಿಕತೆಯ ಮೇಲೆ ಒತ್ತಡವನ್ನ ಸೃಷ್ಟಿಸಿವೆ. ಅದರಲ್ಲೂ ವಿಶೇಷವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಲಾಗಿರುವ ಸುಂಕಗಳು ದೇಶದ ರಪ್ತುಗಳ ಮೇಲೆ ಸಾಕಷ್ಟು ಪರಿಣಾಮವನ್ನ ಬೇರಿವೆ. ಇದರ ಪರಿಣಾಮವಾಗಿ ರೂಪಾಯಿ ಡಾಲರ್ ಎದುರು ದಾಖಲೆ ಮಟ್ಟಕ್ಕೆ ಅಪಮೌಲ್ಯಗೊಂಡಿದೆ.
ಆದರೂ ಈ ಎಲ್ಲಾ ಸವಾಲುಗಳ ನಡುವೆಯು ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತವಾಗಿಲ್ಲ ಎಂಬುದು ಗಮನರವಾಗಿದೆ. ಒಟ್ಟು ಜಿಡಿಪಿಯಲ್ಲಿ ದೊಡ್ಡ ಸಾಧನೆ ಕಂಡಿದ್ದರೂ ಕೂಡ ಸಾಮಾನ್ಯ ಭಾರತೀಯರ ಆದಾಯದ ಚಿತ್ರಣ ಇನ್ನು ಸವಾಲಿನಲ್ಲಿದೆ ವಿಶ್ವ ಬ್ಯಾಂಕ್ ದತ್ತಾಂಶದ ಪ್ರಕಾರ 4ರಲ್ಲಿ ಭಾರತದ ತಲ ಆದಾಯ ಕೇವಲ 2694 ಡಾಲರ್ ಆಗಿದೆ ಇದು ಜಪಾನನ ತಲ ಆದಾಯಕ್ಕಿಂತ ಸುಮಾರು 12 ಪಟ್ಟು ಕಡಿಮೆ ಮತ್ತು ಜರ್ಮನಿಯ ತಲ ಆದಾಯಕ್ಕಿಂತ ಸುಮಾರು 20 ಪಟ್ಟು ಕಡಿಮೆ ಇದೆ. 2022 ರಲ್ಲಿ ಬ್ರಿಟನ್ನ್ನ ಹಿಂದಿಕ್ಕಿ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿತ್ತು. ಈಗ ನಾಲ್ಕನೇ ಸ್ಥಾನಕ್ಕೆ ಏರಿರುವುದು ದೇಶದ ಆರ್ಥಿಕತೆಯ ಮತ್ತೊಂದು ಮಹತ್ವದ ಹಂತವಾಗಿದೆ. ಹಾಗಾಗಿ ಮುಂಬರುವ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ತಲ ಆದಾಯ ಹೆಚ್ಚಿಸುವತ್ತ ಗಮನಹರಿಸಿದರೆ ಭಾರತದ ಆರ್ಥಿಕ ಶಕ್ತಿ ಇನ್ನಷ್ಟು ಬಲವಾಗಲಿದೆ. ಒಟ್ಟಾರೆಯಾಗಿ ಭಾರತವು ಜಪಾನನ್ನ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಕೇವಲ ಅಂಕಿ ಅಂಶಗಳ ಜಯವಲ್ಲ. ಇದು ನವಭಾರತದ ಆತ್ಮವಿಶ್ವಾಸ ಮತ್ತು ಸದೃಢ ಸಂಕಲ್ಪದ ಪ್ರತೀಕ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಯುದ್ಧದಂತಹ ಅಸ್ಥಿರತೆಯ ನಡುವೆಯು ಭಾರತ ಸಾಧಿಸಿರುವ ಈ 4.18 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಜಿಗಿತವು ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ.
2030ರ ಬೇಳಿಕೆ ಜರ್ಮನಿಯನ್ನ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಇರುವ ಹಾದಿಯಲ್ಲಿರುವ ಭಾರತಕ್ಕೆ ಈಗಿನ ಯಶಸ್ಸು ಬೂಸ್ಟ್ ಸಿಕ್ಕಂತಾಗಿದೆ. ಆದರೆ ಈ ಪಯಣ ಇಲ್ಲಿಗೆ ಮುಗಿಯುವುದಿಲ್ಲ. 2047ರ ಬೇಡಿಗೆ ವಿಕಸಿತ ಭಾರತದ ಕನಸನ್ನ ಸಹಕಾರಗೊಳಿಸುವುದು ಭಾರತದ ಮುಂದಿರುವ ಸವಾಲು ಬೃಹತ್ ಗುರಿ. ಇದೇ ರೀತಿ ಮುಂದುವರೆದರೆ ಭಾರತವು ವಿಶ್ವದ ಆರ್ಥಿಕತೆಯ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದು ಜಪಾನ್ ಸೋತಿದೆ ನಾಳೆ ಜರ್ಮನಿಯ ಸರದಿದೆ.


