ಬಾಂಗ್ಲಾದೇಶದ ಸಮಸ್ಯೆಯ ಬಗ್ಗೆ ಇದುವರೆಗೆ ಮೌನವಾಗಿದ್ದ ಭಾರತ ಸರ್ಕಾರವು ಈಗ ಒಂದು ಮಾಸ್ಟರ್ ಪ್ಲಾನ್ ರೂಪಿಸಿದೆ. ಅದು ಡಾಕಾದ ಅಡಿಪಾಯವನ್ನೇ ಅಲುಗಾಡಿಸಿದೆ. ಮುಂಬರುವ ವರ್ಷಗಳಲ್ಲಿ ಬಾಂಗ್ಲಾದೇಶವು ತನ್ನ ಸ್ಥಾನವನ್ನ ಉಳಿಸಿಕೊಳ್ಳುತ್ತಾ ಇಲ್ಲವಾ ಅಂತ ಹೇಳೋಕಾಗುತ್ತಿಲ್ಲ. ಒಂದು ದೊಡ್ಡ ಆಘಾತವು ಬಾಂಗ್ಲಾದೇಶಕ್ಕೆ ಆರಂಭವಾಗಿದೆ. ಅದು ಎಲ್ಲಿಂದ ಅಂದರೆ ಭಾರತವು ಬಾಂಗ್ಲಾದೇಶಕ್ಕೆ ನೀಡಿದ ರೈಲ್ವೆ ಟ್ರ್ಾಕ್ ಗಳನ್ನ ಒಂದೊಂದಾಗಿ ತೆಗೆಯಲು ಪ್ರಾರಂಭಿಸಿದೆ. ಆದರೆ ಕಥೆ ಇಲ್ಲಿಗೆ ಮುಗಿಯೋದಿಲ್ಲ. ಬಾಂಗ್ಲಾದೇಶವು ಭಾರತದ ವಿರುದ್ಧ ಮಾಡಿದ ಚಿಕನ್ ನೆಕ್ ದೂರುಗಳಿಗೂ ಈಗ ಸರ್ಕಾರವು ಉತ್ತರ ನೀಡಲು ನಿರ್ಧರಿಸಿದೆ. ಭಾರತವು ಈಶಾನ್ಯ ರಾಜ್ಯಗಳನ್ನ ಸಂಪರ್ಕಿಸಲು ಹೊಸ ಮಾರ್ಗಗಳನ್ನ ಸೃಷ್ಟಿಸುತ್ತಿದೆ. ಇದರ ಅರ್ಥವೇನೆಂದರೆ ಸಿಲುಗುರಿ ಕಾರಿಡಾರ್ ಇನ್ನು ಕೇವಲ ರಸ್ತೆಯಾಗಿರೋದಿಲ್ಲ. ಅದನ್ನ ಮಿಲಿಟರಿ ಬೇಸ್ ರೀತಿ ಬಳಸಲಾಗ್ತದೆ. ಭವಿಷ್ಯದಲ್ಲಿ ಬಾಂಗ್ಲಾದೇಶವು ಚೀನಾದಿಂದ ಶಸ್ತ್ರಾಸ್ತ್ರಗಳನ್ನ ಖರೀದಿಸಿದರೆ ಅಥವಾ ಪಾಕಿಸ್ತಾನ ಟರ್ಕಿಯೊಂದಿಗೆ ಯಾವುದೇ ಆಟವಾಡಿದರು ಸಹ ಅದು ಭಾರತದ ಮುಂದೆ ನಿಲ್ಲಲಾರದು. ವಿಶ್ವಾಸಾರ್ಹ ಮಾಹಿತಿಯ ಪ್ರಕಾರ ಭಾರತವು ಸುಮಾರು 5000 ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಯೋಜನೆಯ ಮೂಲಕ ಭಾರತವು ತನ್ನ ಈಶಾನ್ಯ ರಾಜ್ಯಗಳಿಗೆ ಸುಲಭವಾಗಿ ತಲುಪುವ ಮಾರ್ಗವನ್ನ ಸೃಷ್ಟಿಸಲಿದೆ ಎಂದು ತಿಳಿದು ಬಂದಿದೆ. ಇದರಿಂದ ಚಿಕನ್ ನೆಕ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಭಾವಿಸಲಾಗಿದೆ. ಆದರೆ ಈಗ ಪ್ರಶ್ನೆ ಏನೆಂದರೆ ಭಾರತ ಸರ್ಕಾರವು ಈ ರೀತಿಯ ದೊಡ್ಡ ನಿರ್ಧಾರವನ್ನ ಏಕೆ ತೆಗೆದುಕೊಂಡಿದೆ ಈ ನಿರ್ಧಾರದ ಹಿಂದಿನ ನಿಜವಾದ ಕಥೆ ಏನು?.
ಈ ರೈಲು ಯೋಜನೆ ಎಡಿಯಲ್ಲಿ ಮೂರು ದೊಡ್ಡ ಕಾರಿಡಾರ್ ಯೋಜನೆಗಳನ್ನ ರೂಪಿಸಲಾಗಿದೆ. ಇವು ಭಾರತದಿಂದ ಬಾಂಗ್ಲಾದೇಶದ ಮೂಲಕ ನಮ್ಮ ಈಶಾನ್ಯ ರಾಜ್ಯಗಳನ್ನ ಸಂಪರ್ಕಿಸುತ್ತವೆ. ಈ ಯೋಜನೆಗಳು ಕೇವಲ ಭಾರತಕ್ಕೆ ಮಾತ್ರವಲ್ಲ ಬಾಂಗ್ಲಾದೇಶಕ್ಕೂ ಸಹ ತುಂಬಾ ಲಾಭದಾಯಕವಾಗಿದ್ದವು. ಯಾಕಂದ್ರೆ ಕೋಟ್ಯಾಂತರ ಡಾಲರ್ಗಳ ವ್ಯಾಪಾರವು ಎರಡು ದೇಶಗಳ ನಡುವೆ ನಡೆಯುತ್ತದೆ. ಮತ್ತೆ ಜವಳಿ ಕೇಂದ್ರವಾಗಿರುವ ಬಾಂಗ್ಲಾದೇಶಕ್ಕೆ ಭಾರತವೇ ದೊಡ್ಡ ಬೆಂಬಲವಾಗಿದೆ. ವಾಸ್ತವವಾಗಿ ಬಾಂಗ್ಲಾದೇಶದಲ್ಲಿ ಉತ್ಪಾದನೆಯಾಗುವ ಹೆಚ್ಚಿನ ಜವಳಿಗಳು ವಿಶ್ವದ ವಿವಿಧ ದೇಶಗಳಿಗೆ ತಲುಪುತ್ತವೆ. ಇದುವರೆಗೆ ಡಾಕಾವು ಈ ಜವಳಿಗಳನ್ನ ಟ್ರಕ್ಗಳ ಮೂಲಕ ಭಾರತಕ್ಕೆ ತಂದು ನಮ್ಮ ಬಂದರುಗಳು ಮತ್ತೆ ವಿಮಾನ ನಿಲ್ದಾಣಗಳ ಮೂಲಕ ರಫ್ತು ಮಾಡ್ತಿತ್ತು ಮತ್ತೆ ಭಾರತದಲ್ಲಿರುವ ಆಧುನಿಕ ರೈಲು ಸಂಪರ್ಕದಿಂದಾಗಿ ಈ ಕೆಲಸವು ಇನ್ನಷ್ಟು ಸುಲಭವಾಗ್ತಿತ್ತು. ರೈಲು ಮಾರ್ಗದ ಮೂಲಕ ಬಾಂಗ್ಲಾದೇಶದ ಸರಕುಗಳು ನೇರವಾಗಿ ಭಾರತದ ಬಂದರುಗಳಿಗೆ ತಲುಪುತ್ತವೆ. ಹಾಗೇನೇ ಒಂದು ಸರಕು ವಿಶ್ವಕ್ಕೆ ತಲುಪಲು ಮೂರು ನಾಲ್ಕು ವಾರಗಳು ತೆಗೆದುಕೊಳ್ಳುತ್ತಿದ್ದ ಸಮಯ ಈಗ ಕೇವಲ ಎಂಟರಿಂದ 10 ದಿನಗಳಲ್ಲಿ ಸಾಧ್ಯವಾಗ್ತದೆ ಅಂದರೆ ಇದು ಎರಡು ದೇಶಗಳಿಗೆ ಲಾಭದಾಯಕವೇ ಆಗಿರುತ್ತೆ ಆದರೆ ಮೊಹಮ್ಮದ್ ಯುನಿಸ್ ತನ್ನ ಕಾಲಿಗೆ ತಾನೇ ಬಾಂಬ್ ಇಟ್ಟುಕೊಂಡಿದ್ದಾನೆ ಭಾರತ ವಿರೋಧಿ ಹೇಳಿಕೆಗಳ ನಂತರ ಭಾರತದಿಂದ ಪ್ರತಿಕ್ರಿಯೆ ಬರುವುದು ಅನಿವಾರ್ಯವಾಗಿತ್ತು ಈಗ ಅದೇ ಆಗ್ತಿದೆ ಭಾರತವು ಹತ್ತಿಯ ಎಲ್ಲಾ ಸರ್ವರಾಜುಗಳನ್ನ ಸ್ಥಗಿತಗೊಳಿಸಿ ಡಾಕಾದ ಆರ್ಥಿಕ ವ್ಯವಸ್ಥೆಯನ್ನ ಬಲಪಡಿಸಬಹುದಾದ ಎಲ್ಲಾ ಯೋಜನೆಗಳನ್ನ ಸ್ಥಗಿತಗೊಳಿಸಿದೆ. ಅಂತಹ ಮೊದಲ ಯೋಜನೆ ಎಂದರೆ ಅಕೌರ ಅಗರ್ತಲ ಕ್ರಾಸ್ ಬಾರ್ಡರ್ ರೈಲು ಸಂಪರ್ಕ. ಸುಮಾರು 12.5 kಮ ಉದ್ದದ ಈ ಯೋಜನೆಯು ಭಾರತ ಮತ್ತು ಬಾಂಗ್ಲಾದೇಶಕ್ಕೆ ತುಂಬಾ ಮುಖ್ಯವಾಗಿರುತ್ತೆ. ಇದರಲ್ಲಿ 6.78 ಕಿಲೋಮೀಟ ಬಾಂಗ್ಲಾದೇಶದಲ್ಲಿದ್ದರೆ ಉಳಿದ 5.5 5 ಕಿಲೋಮೀಟ ಭಾರತದ ತ್ರಿಪುರದಲ್ಲಿದೆ ಈ ಯೋಜನೆಗಾಗಿ ಭಾರತವು ಸುಮಾರು 400 ಕೋಟಿ ರೂಪಾಯಿಗಳನ್ನ ಖರ್ಚು ಮಾಡಲಿದೆ ಇದರ ಮೂಲಕ ಈಶಾನ್ಯ ಪ್ರದೇಶದ ಸಂಪರ್ಕಕ್ಕೆ ಹೊಸ ಚಾಲನೆ ಸಿಗಲಿದೆ ಆದರೆ ಈ ಹೆಜ್ಜೆಯನ್ನ ಇಡುತ್ತಿರುವಾಗ ಪ್ರದೇಶವು ತನ್ನ ದೊಡ್ಡ ಸರಬರಾಜು ಸರಪಳಿಯನ್ನ ತಾನೇ ಕಿತ್ತುಕೊಳ್ಳುತ್ತಿದೆಯಾ ಎಂಬ ಪ್ರಶ್ನೆ ಮೂಡುತಿದೆ ಎರಡನೇ ದೊಡ್ಡ ಮಾರ್ಗವೆಂದರೆ ಕುಲ್ನ ಮೋಂಗಲ ಬಂದರು ರೈಲು ಮಾರ್ಗ ಈ ಯೋಜನೆಯನ್ನ 3300 ಕೋಟಿ ರೂಪಾಯಿ ವೆಚ್ಚ ದಲ್ಲಿ ನಿರ್ಮಿಸಲಾಗ್ತಿತ್ತು ಇದರಲ್ಲಿ 65 ಕಿಲೋಮೀಟ ಉದ್ದದ ಬ್ರಾಡ್ಗೇಜ್ ರೈಲು ಮಾರ್ಗವಿದೆ ಇದರ ಮುಖ್ಯ ಉದ್ದೇಶವೇನೆಂದರೆ ಮೋಂಗಲಾ ಬಂದರನ್ನ ನೇರವಾಗಿ ರೈಲು ನೆಟ್ವರ್ಕ್ಗೆ ಸಂಪರ್ಕಿಸೋದು ಯಾಕಂದ್ರೆ ಬಾಂಗ್ಲಾದೇಶದ ಅತ್ಯಂತ ಶಕ್ತಿಶಾಲಿ ಸಮುದ್ರ ಮಾರ್ಗವು ಮೊದಲಿಗಿಂತಲೂ ಹೆಚ್ಚು ಬಲವಾಗಿದೆ ಆದರೆ ಕಥೆ ಇಲ್ಲಿಗೆ ಮುಗಿಯೋದಿಲ್ಲ ಮೂರನೇ ಯೋಜನೆ ಏನೆಂದರೆ ಕಾಕಾ ತುಂಗಾಯಿ ದೇವಪುರ ರೈಲು ವಿಸ್ತರಣೆ ಇದು ಜೂನ್ 2027ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು ಮೊದಲಿಗೆ ಈ ಯೋಜನೆ ವೇಗವಾಗಿ ಮುಂದುವರೆಯಿತ್ತು. ಆದರೆ ಕಳೆದ ವರ್ಷ ಇದರ ವೇಗವು ಇದಕ್ಕಿಂತ ಕಡಿಮೆಯಾಗುತ್ತೆ. ಸುಮಾರು 50% ಕೆಲಸ ಮುಗಿದ ನಂತರ ಈ ಯೋಜನೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಈ ಯೋಜನೆಗಾಗಿ ಭಾರತವು ಸುಮಾರು 1400 ಕೋಟಿ ರೂಪಾಯಿಗಳ ಸಹಾಯವನ್ನ ನೀಡಿತ್ತು. ಇದರಲ್ಲಿ ಆಕ್ಸಿಸ್ ಬ್ಯಾಂಕ್ ಆಫ್ ಇಂಡಿಯಾವು ಭಾಗಿಯಾಗಿತ್ತು. ಇದನ್ನ ದೊಡ್ಡ ಮಟ್ಟದಲ್ಲಿ ನಿರ್ಮಿಸಿ ಈಶಾನ್ಯ ರಾಜ್ಯಗಳಿಗೆ ಕನೆಕ್ಷನ್ ಕಲ್ಪಿಸಬೇಕಾಗಿತ್ತು. ಆದರೆ ಇಲ್ಲೇ ದೊಡ್ಡ ಆಘಾತ ನೀಡುವ ವಿಷಯ ಬರುತ್ತೆ. ಈ ಮೂರು ಮೆಗಾ ಪ್ರಾಜೆಕ್ಟ್ಸ್ ಬಿಟ್ಟು ಇನ್ನು ಐದು ಮಾರ್ಗಗಳ ಪ್ರಸ್ತಾಪವಾಗುತ್ತೆ. ಅವುಗಳ ಸರ್ವೆ ಡಿಪಿಆರ್ ಎಲ್ಲಾ ಸಾಂಕೇತಿಕ ತನಿಕೆಗಳು ಪೂರ್ತಿಯಾಗಿದ್ದವು ಆದರೆ ಇನ್ನೇನು ಕೆಲಸ ಕಾರ್ಯ ಶುರುವಾಗಲು ಸ್ವಲ್ಪ ಸಮಯ ಇರುವಾಗಲೇ ಭಾರತ ಆ ಎಂಟು ಪ್ರಾಜೆಕ್ಟ್ಗಳನ್ನ ಸಸ್ಪೆಂಡ್ ಮಾಡುತ್ತೆ ಅಂದ್ರೆ ಮೊದಲೇ ಕಾರ್ಯದಲ್ಲಿದ್ದ ಮೂರು ಪ್ರಾಜೆಕ್ಟ್ಗಳನ್ನ ಮತ್ತು ಪ್ರಾರಂಭವಾಗಬೇಕಾಗಿದ್ದ ಐದು ಪ್ರಾಜೆಕ್ಟ್ಗಳನ್ನ ಎಲ್ಲವನ್ನು ನಿಲ್ಲಿಸುತ್ತೆ ಇದಲ್ಲದೆ ಈ ಯೋಜನೆಗಳ ಜೊತೆಗೆ ಭಾರತವು ಈಶಾನ್ಯ ರಾಜ್ಯಗಳನ್ನ ಸಂಪರ್ಕಿಸಲು ಹೊಸ ಗೇಮ್ ಪ್ಲಾನ್ ರೂಪಿಸಿದೆ ಮುಂಬರುವ ಕಾಲದಲ್ಲಿ ಮೂರರಿಂದ ನಾಲ್ಕು ಹೊಸ ರೈಲು ರಸ್ತೆ ಕಾರಿಡಾರ್ಗಳನ್ನ ಸ್ಥಾಪಿಸಲಾಗುವುದು ಇವು ನೇಪಾಳದ ಮೂಲಕ ಸಿಕ್ಕಿಂಗೆ ನಂತರ ಭೂತಾನ್ಗೆ ಹೋಗಿ ನೇರವಾಗಿ ಈಶಾನ್ಯಕ್ಕೆ ತಲುಪುತ್ತವೆ ಈ ನಿರ್ಧಾರದ ನಂತರ ಭಾರತದ ಪ್ರಸಿದ್ಧ ಚಿಕನ್ ನೆಕ್ ಈಗ ಕೇವಲ ಸೈನಿಕ ಕಾರ್ಯಾಚರಣೆಗಾಗಿ ಮಾತ್ರ ಬಳಸಲ್ಪಡುತ್ತದೆ ಈ ಹೊಸ ಯೋಜನೆಯಲ್ಲಿ ಭೂತಾನ್ ನೊಂದಿಗೆ ಯಾವುದೇ ಸಮಸ್ಯೆ ಇರೋದಿಲ್ಲ ಅಲ್ಲದೆ ಅಲ್ಲಿನ ಉತ್ಪಾದನೆ ಮತ್ತೆ ಪ್ರವಾಸೋದ್ಯಮ ಉದ್ಯಮವು ಭಾರತದ ಮೂಲಕ ವಿಶ್ವ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಬಹುದು ಭೂತಾನ್ ಗೆ ಇದು ಒಂದು ಚೀನಾದ ಅವಕಾಶ ಆದರೆ ಚೀನಾವು ಈ ಯೋಜನೆಯ ಬಗ್ಗೆ ಖಂಡಿತವಾಗಿಯೂ ಆಕ್ಷೇಪ ವ್ಯಕ್ತಪಡಿಸುತ್ತದೆ ಮತ್ತೆ ದೊಡ್ಡ ಸಮಸ್ಯೆಯು ನೇಪಾಳದಲ್ಲಿ ಉದ್ಭವಿಸಬಹುದು ಯಾಕಂದ್ರೆ ಅಲ್ಲಿನ ರಾಜಕೀಯ ಅಸ್ಥಿರತೆಯು ಭಾರತದ ಈ ಮಾಸ್ಟರ್ ಪ್ಲಾನ್ನ ವೇಗವನ್ನ ಕಡಿಮೆ ಮಾಡಬಹುದು ಆದರೂ ಸಹ ಆಶ್ಚರ್ಯಕರ ಸಂಗತಿ ಏನೆಂದರೆ ನೇಪಾಳಕ್ಕೂ ಈ ರೈಲು ಯೋಜನೆಯಿಂದ ನೇರ ಲಾಭವಿದೆ ಆದ್ದರಿಂದ ತಡವಾದರೂ ಸಹ ಈ ಮಹತ್ವಾಕಾಂಕ್ಷಿ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕೆ ಸಿಗುತ್ತೆ ಈಗ ಈಗ ಭಾರತವು ಬಾಂಗ್ಲಾದೇಶದೊಂದಿಗೆ ಇಂತಹ ದೊಡ್ಡ ಯೋಜನೆಯನ್ನ ಯಾಕೆ ಸ್ಥಗಿತಗೊಳಿಸಿದೆ ಎಂಬುವುದರ ಬಗ್ಗೆ ಮಾತನಾಡಿಕೊಳ್ಳುವುದಾದರೆ ಅದರಲ್ಲಿ ಒಂದು ಕಾರಣವೇನೆಂದರೆ ಜಿಯೋಪೊಲಿಟಿಕಲ್ ಪರಿಸ್ಥಿತಿ ಅಂದರೆ ಬಾಂಗ್ಲಾದೇಶವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದಕ್ಕೆ ಭಾರತಕ್ಕೂ ಉತ್ತರ ನೀಡಬೇಕಾಗಿತ್ತು ಅದರ ಜೊತೆಗೆ ಇನ್ನು ಕೆಲವು ಕಾರಣಗಳನ್ನು ಉಲ್ಲೇಖಿಸಲಾಗಿದೆ ಅವುಗಳಲ್ಲಿ ಬಾಂಗ್ಲಾದೇಶದ ಶೇಖ್ ಹಸಿನ ಸರ್ಕಾರದ ಉರುಳುವಿಕೆ ಹೊಸ ಸರ್ಕಾರದಲ್ಲಿ ಮೊಹಮ್ಮದ್ ಯುನಿಸ್ಗೆ ಬಾಂಗ್ಲಾದೇಶದ ಅಧಿಕಾರವನ್ನು ಹಸ್ತಾಂತರಿಸುವುದು ಸೇರಿವೆ ಮೊಹಮ್ಮದ್ ಯುನಿಸ್ ಭಾರತದ ವಿರುದ್ಧ ತನ್ನ ದೃಷ್ಟಿಕೋನವನ್ನ ಬದಲಾಯಿಸುತ್ತಾರೆ.
ನಂತರ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ಸಮಯದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನ ಗುರಿಯಾಗಿಸಲಾಗುತ್ತೆ ಆದರೆ ಇದನ್ನ ಮೊಹಮ್ಮದ್ ಯುನಿಸ್ ತಡೆಯೋದಿಲ್ಲ ಹೇಳಬೇಕಂದ್ರೆ ಬಾಂಗ್ಲಾದೇಶದ ಜನತಾ ಇಸ್ಲಾಮಿ ಪಕ್ಷವನ್ನ ಸಂತೋಷ ಪಡಿಸಲು ಈ ದಾಳಿಗಳನ್ನ ತಡೆಯೋದಿಲ್ಲ ಈ ಕಾರಣಗಳಿಂದ ಭಾರತವು ಬಾಂಗ್ಲಾದೇಶದ ಮುಂದೆ ಕಠಿಣವಾಗಿ ವ್ಯವಹರಿಸಿತು ಕ್ರಮೇಣ ಬಾಂಗ್ಲಾದೇಶದ ಹಲವಾರು ಯೋಜನೆಗಳನ್ನ ಸ್ಥಗಿತಗೊಳಿಸಲಾಯಿತು ಮೊದಲಿಗೆ ಭಾರತವು ಬಾಂಗ್ಲಾದೇಶಕ್ಕೆ ಅಗತ್ಯವಾದ ವಸ್ತುಗಳ ಪೂರೈಕೆಯನ್ನ ಬ್ಲಾಕ್ ಲಿಸ್ಟ್ಗೆ ಹಾಕುತ್ತೆ ನಂತರ ವಿದ್ಯುತ್ ಸರಬರಾಜು ಟ್ರಾನ್ಶಿಪ್ ಕೂಡ ಸ್ಥಗಿತಗೊಳಿಸುತ್ತೆ ಆನಂತರ ಈ ರೈಲು ಯೋಜನೆಯನ್ನ ಸ್ಥಗಿತಗೊಳಿಸಿ ಬಾಂಗ್ಲಾದೇಶಕ್ಕೆ ಮೂಗಿನ ಮೇಲೆ ಗುದ್ದುತ್ತೆ ಭಾರತದಲ್ಲಿ ಸಿಲುಗುರಿ ಕಾರಿಡಾರ್ ಅನ್ನ ಚಿಕನ್ ಎಂದು ಕರೆಯಲಾಗುತ್ತದೆ ಅಲ್ಲಿ ರೈಲ್ವೆ ಮೂಲ ಸೌಕರ್ಯವನ್ನ ಇನ್ನಷ್ಟು ಸುಧಾರಿಸಲು ಉತ್ತರಪ್ರದೇಶ ಮತ್ತೆ ಬಿಹಾರದಲ್ಲಿರುವ ರೈಲು ಮಾರ್ಗಗಳನ್ನ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ಸರ್ವೆ ಆರಂಭಿಸಲಾಗಿದೆ ಇಲ್ಲಿಂದ ರೈಲು ಫ್ರೀಕ್ವೆನ್ಸಿ ಹೆಚ್ಚಿಸಿ ಸೀಮಿತ ಮಾರ್ಗಗಳನ್ನ ಬಳಸಿಕೊಂಡು ಹೆಚ್ಚಿನ ರೈಲುಗಳನ್ನ ಓಡಿಸಲು ಪ್ರಯತ್ನಿಸಲಾಗುತಿದೆ ಆದ್ದರಿಂದ ಇದು ಖಂಡಿತವಾಗಿಯೂ ಭಾರತಕ್ಕೆ ಉಪಯುಕ್ತವಾಗಲಿದೆ ಈಗ ಕೊನೆಯದಾಗಿ ನಾವು ನಿಮ್ಮ ಅಭಿಪ್ರಾಯವನ್ನ ತಿಳಿದುಕೊಳ್ಳಲು ಬಯಸುತ್ತೇವೆ ಭಾರತವು ತನ್ನ ಈಶಾನ್ಯ ರಾಜ್ಯಗಳನ್ನ ಸಂಪರ್ಕಿಸಲು ನೇಪಾಳ ಮತ್ತೆ ಭೂತನ್ನ ಸಹಾಯವನ್ನ ಕೋರುತಿದೆ ಹಾಗಾದರೆ ನಿಮ್ಮ ಪ್ರಕಾರ ಭಾರತ ಸರ್ಕಾರವು ತೆಗೆದುಕೊಂಡ ಈ ನಿರ್ಧಾರ ಸರಿಯಾಗಿದೆಯೇ ತಪ್ಪಾಗಿದೆಯೇ ಅದೇ ರೀತಿ ಭಾರತವು ತನ್ನ ಚಿಕನ್ ನೆಕ್ ಪ್ರದೇಶವನ್ನ ವಿಸ್ತರಿಸಿ ಸಿಲುಗುರಿ ಕಾರಿಡಾರ್ ಮೂಲಕ ಸುಧಾರಿತ ತಂತ್ರಜ್ಞಾನವನ್ನ ಬಳಸಿಕೊಂಡು ಈಶಾನ್ಯವನ್ನ ಸಂಪರ್ಕಿಸಲು ಬಯಸಿದರೆ ಈ ಎರಡು ಆಯ್ಕೆಗಳಲ್ಲಿ ಯಾವುದು ಉತ್ತಮವಾಗಲಿದೆ ಸಿಲುಗುರಿ ಕಾರಿಡಾರ್ ಅನ್ನ ವಿಸ್ತರಿಸುವುದ ಅಥವಾ ಇತರ ದೇಶಗಳ ಮೂಲಕ ಈಶಾನ್ಯವನ್ನ ಸಂಪರ್ಕಿಸುವುದ.