Wednesday, December 10, 2025
HomeTech NewsGDP ದಲ್ಲಿ ಭಾರೀ ಜಿಗಿತ! 8.2% ಬೆಳವಣಿಗೆ ಸಾಧಿಸಿದ ಭಾರತ

GDP ದಲ್ಲಿ ಭಾರೀ ಜಿಗಿತ! 8.2% ಬೆಳವಣಿಗೆ ಸಾಧಿಸಿದ ಭಾರತ

ಭಾರತದ ಆರ್ಥಿಕತೆ ಎಲ್ಲರ ಲೆಕ್ಕ ಉಲ್ಟಾ ಮಾಡಿದ ಜಿಡಿಪಿ ಗ್ರೋತ್ ರೇಟ್ ಈ ಯಶಸ್ಸಿಗೆ ಕಾರಣ ಏನು ಜಸ್ಟ್ ಐದಾರು ತಿಂಗಳು ಅಷ್ಟೇ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತದ ಆರ್ಥಿಕತೆಯನ್ನ ಸತ್ತ ಆರ್ಥಿಕತೆ ಅಂತ ಕರೆದಿದ್ರು ಟ್ಯಾರಿಫ್ ಹಾಕಿದ್ರೆ ಭಾರತ ಮತ್ತೆ ಏಳಲ್ಲ ಅಂತೆಲ್ಲ ಟೀಕೆ ಮಾಡಿದ್ರು ಒಂದು ಕಡೆ ಯುದ್ಧ ಮತ್ತೊಂದು ಕಡೆ ನಿರ್ಬಂಧ ಮತ್ತೊಂದು ಕಡೆ ರೂಪಾಯಿ ಕುಸಿತ ಹೀಗೆ ಒಂದರ ಹಿಂದೊಂದು ಸಮಸ್ಯೆಗಳಿಂದ ಭಾರತದ ಆರ್ಥಿಕತೆಗೆ ನೆಗೆಟಿವ್ ಒಪಿನಿಯನ್ ಬರೋಕೆ ಶುರುವಾಗಿತ್ತು ಹಾಗಂತ ಪೂರ್ತಿ ನೆಗೆಟಿವಿಟಿ ಏನ ಇರಲಿಲ್ಲ ಭಾರತ ಆರ್ಥಿಕ ಸುಧಾರಣೆಯ ಪ್ರಯತ್ನಗಳನ್ನ ನಡೆಸ್ತಾ ಇತ್ತು ಆದರೂ ಕೂಡ ಅಡಚಣೆಗಳು ಕೂಡ ಕಾಣಿಸ್ತಾ ಇದ್ವು ಆದರೆ ಈಗ ಎಲ್ಲಾ ಲೆಕ್ಕಾಚಾರಗಳನ್ನ ತಲೆಕೆಳಗು ಮಾಡಿ ಟ್ರಂಪ್ರ ಸತ್ತ ಆರ್ಥಿಕತೆಯ ಒಂದು ಬಾಣ ಏನಿತ್ತು ಅದನ್ನ ಕೂಡ ಬದಿಗೆ ಬಿಸಾಕಿ ಪ್ರತಿಸ್ಪರ್ಧಿಗಳು ಕುಂಡುತಾ ತೆವಳ್ತಾ ಓಡುತ್ತಿರು ಟೈಮ್ನಲ್ಲಿ ಭಾರತ ಶರವೇಗದ ಆರ್ಥಿಕ ಪ್ರಗತಿಯನ್ನ ದಾಖಲಿಸಿದೆ ಟ್ಯಾರಿಫ್ ಅಮೆರಿಕ ಜೊತೆಗಿನ ಮುನಿಸು ಎಲ್ಲದರ ನಡುವೆ ನಮ್ಮ ಎಕಾನಮಿ 8.2% ವೇಗದಲ್ಲಿ ಗ್ರೋ ಆಗಿದೆ. 2025 26 ಎರಡನೇ ತ್ರೈಮಾಸಿಕದಲ್ಲಿ ಈ ಬೆಳವಣಿಗೆಯಾಗಿತ್ತು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳಿತಾ ಇರೋ ದೊಡ್ಡ ಆರ್ಥಿಕತೆಗಳಲ್ಲಿ ಮುಂಚೂಣಿಗೆ ಭಾರತ ಬಂದಿದೆ ಉಳಿಸಿಕೊಂಡಿದೆ ಅದನ್ನ ಅಷ್ಟೇ ಅಲ್ಲ ಮ್ಯಾನುಫ್ಯಾಕ್ಚರಿಂಗ್ ಸರ್ವಿಸ್ ಸೆಕ್ಟರ್ ಡಬಲ್ ಡಿಜಿಟ್ ಗ್ರೋಥ್ ಹತ್ತಿರಕ್ಕೆ ಬರ್ತಿವೆ. ಹಾಗಿರೋದಕ್ಕೆ ಏನು ಕಾರಣ ಸತ್ತ ಆರ್ಥಿಕತೆ ಟ್ರಂಪ್ ಪ್ರಕಾರ ಎದ್ದು ಕುಣಿದಿದ್ದು ಹೇಗೆ.

ಭಾರತದ ಆರ್ಥಿಕ ಓಟಕ್ಕೆ ಇನ್ನಷ್ಟು ಬೇಗ 8.2% ಜಿಡಿಪಿ ಬೆಳವಣಿಗೆ ದಾಖಲು 2025 26ರ ಆರ್ಥಿಕ ವರ್ಷದ ಎರಡನೇ ದ್ರೈಮಾಸಿಕದಲ್ಲಿ ಜುಲೈ ಟು ಸೆಪ್ಟೆಂಬರ್ ಕ್ವಾರ್ಟರ್ ನಲ್ಲಿ ಕ್ಯೂಟ ಕ್ವಾರ್ಟರ್ 2 ನಲ್ಲಿ ಭಾರತದ ರಿಯಲ್ ಜಿಡಿಪಿ ಸದೃಢವಾದ 8.2% 2% ಬೆಳವಣಿಗೆಯನ್ನ ದಾಖಲಿಸಿದೆ ಈ ಮೂಲಕ ಭಾರತ ವಿಶ್ವದಲ್ಲಿ ವೇಗವಾಗಿ ಬೆಳವಣಿಗೆ ಹೊಂತಿರುವ ಸ್ಥಾನವನ್ನ ಹಾಗೆ ಕಂಟಿನ್ಯೂ ಮಾಡಿದೆ ಎಲ್ಲರ ನಿರೀಕ್ಷೆಯನ್ನ ಮೀರಿಸಿದೆ ಆರ್ಬಿಐ ಮತ್ತು ಆರ್ಥಿಕ ತಜ್ಞರು ಭಾರತದ ಆರ್ಥಿಕತೆ 7% ಆಸುಪಾಸಲ್ಲಿ ಗ್ರೋ ಆಗಬಹುದು ಅಂತ ಅಂದಾಜು ಮಾಡಿದ್ರು ಆದರೆ ಜಿಡಿಪಿ ಅದನ್ನ ಮೀರಿ ಬೆಳೆದಿದೆ. ಇನ್ಫ್ಯಾಕ್ಟ್ ಕಳೆದ ಆರು ತ್ರೈಮಾಸಿಕಗಳಿಗೆ ಹೋಲಿಕೆ ಮಾಡಿದ್ರೆ ಇದು ಅತ್ಯಂತ ವೇಗದ ಬೆಳವಣಿಗೆ. ಈ ಹಿಂದಿನ ತ್ರೈಮಾಸಿಕಗಳ ಬಗ್ಗೆ ಚೂರು ನೋಡುವುದಾದರೆ 2025-26 ಫಸ್ಟ್ ಕ್ವಾರ್ಟರ್ ಏಪ್ರಿಲ್ ಟು ಜೂನ್ ಕ್ವಾರ್ಟರ್ ಆಗ ಭಾರತದ ಜಿಡಿಪಿ 7.8% ಬೆಳವಣಿಗೆ ಕಂಡಿತ್ತು ಆವಾಗ್ಲೂ ಕೂಡ ಓ ಸರ್ಪ್ರೈಸ್ ಜಾಸ್ತಿ ಅಂತ ಅನಿಸಿತ್ತು ಈಗ ಅದನ್ನ ಮೀರಿ ಹೋಗಿದೆ ಅದಕ್ಕಿಂತ ಹಿಂದೆ ಅಂದ್ರೆ 2024-25ರ ಆರ್ಥಿಕ ವರ್ಷದ Q4 ನಲ್ಲಿ ಕಡೆ ಕ್ವಾರ್ಟರ್ ನಲ್ಲಿ 7.3 ರ ಗ್ರೋತ್ ರೇಟ್ ಇತ್ತು Q3 ನಲ್ಲಿ ಅದಕ್ಕಿಂತ ಹಿಂದೆ 6.2% % ಬೆಳವಣಿಗೆ ಆಗಿತ್ತು ಈಗ ಮೇಲಕ್ಕೆ ಹೋಗಿ ಹೋಗಿಸಿದ 8% ಕ್ರಾಸ್ ಮಾಡಿ ಶೂಟ್ ಅಪ್ ಆಗಿದೆ 8.2% ಗೆ ನಾಮಿನಲ್ ಜಿಡಿಪಿ ವಿಚಾರಕ್ಕೆ ಬಂದ್ರು ಕೂಡ ಅದು 8.7% ಬೆಳವಣಿಗೆಯಾಗಿದೆ ಸದ್ಯ ಭಾರತ ಎರಡನೇ ತ್ರೈಮಾಸಿಕದ ರಿಯಲ್ ಜಿಡಿಪಿ 48.63 ಲಕ್ಷ ಕೋಟಿ ರೂಪಾಯಿ ಅಂತ ಅಂದಾಜು ಮಾಡಲಾಗಿದೆ. ಹಾಗೆ ನಾಮಿನಲ್ ಜಿಡಿಪಿ ಸುಮಾರು 85.25 ಎಐ ಲಕ್ಷ ಕೋಟಿಯಷ್ಟು ಅಂತ ಅಂದಹಾಗೆ ನಾಮಿನಲ್ ಮತ್ತು ರಿಯಲ್ ಜಿಡಿಪಿಗೆ ಡಿಫರೆನ್ಸ್ ಇದೆ ಅದು ಏನು ಅಂತ ನಿಮಗೆ ಎಕ್ಸ್ಪ್ಲೈನ್ ಮಾಡ್ತೀವಿ ಆಮೇಲೆ ಹೇಳ್ತೀವಿ.

ಹಾಗಿದ್ರೆ ದೇಶದ ಜಿಡಿಪಿ ಬೆಳವಣಿಗೆಗೆ ಯಾವೆಲ್ಲಾ ಕ್ಷೇತ್ರ ಎಷ್ಟಿಷ್ಟು ಕೊಡುಗೆ ಕೊಟ್ಟಿದೆ ಜಿಡಿಪಿ ಜೊತೆಗೆ ಭಾರತದ ಶೇರು ಮಾರುಕಟ್ಟೆ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡಿದೆಯಲ್ಲ ಎಲ್ಲ ನೋಡ್ತಾ ಹೋಗೋಣ ಶೇರು ಮಾರುಕಟ್ಟೆಯಲ್ಲಿ ಸಂಚಲನ 14 ತಿಂಗಳಲ್ಲೇ ಗರಿಷ್ಠ ಏರಿಕೆ ಎಸ್ ಆಲ್ ಟೈಮ್ ಹೈ ಅನ್ನ ಟಚ್ ಮಾಡ್ತು ಭಾರತದ ಶೇರು ಮಾರ್ಕೆಟ್ 14 ತಿಂಗಳ ಬಳಿಕ ಗುರುವಾರದ ವ್ಯವಹಾರದಲ್ಲಿ ಫೈನಾನ್ಸಿಯಲ್ ಸೆಕ್ಟರ್ ಔಟ್ ಪರ್ಫಾರ್ಮ್ ಮಾಡ್ತು ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್ ಬೆಸ್ಟ್ ರಿಟರ್ನ್ಸ್ ಅನ್ನ ಜನರೇಟ್ ಮಾಡಿದ್ವು. ಬಿಎಸ್ಸ ಪಿಎಸ್ಯು ಬ್ಯಾಂಕ್ ಸೆಕ್ಟೋರಲ್ ಇಂಡೆಕ್ಸ್ ಸುಮಾರು 30% ಗೇನ್ ಆಯ್ತು. ಸೇಮ್ ಟೈಮ್ ಬಿಎಸ್ಸಿ ಪ್ರೈವೇಟ್ ಬ್ಯಾಂಕ್ಸ್ ಇಂಡೆಕ್ಸ್ 9% ಜಂಪ್ ಆಯ್ತು. ಐಡಿಬಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಹಾಗೆ ಬ್ಯಾಂಕ್ ಆಫ್ ಇಂಡಿಯಾದಂತ ಸಣ್ಣ ಬ್ಯಾಂಕುಗಳ ಶೇರುಗಳು ಕೂಡ 33 ರಿಂದ 55% ವರೆಗೆ ರೈಸ್ ಆದವು. ಇನ್ಶೂರೆನ್ಸ್ ಮ್ಯೂಚುವಲ್ ಫಂಡ್ಸ್ ಮತ್ತು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ಕೂಡ ಒಳ್ಳೆಯ ರಿಟರ್ನ್ಸ್ ಅನ್ನ ಜನರೇಟ್ ಮಾಡಿದ್ವು. ಶ್ರೀರಾಮ್ ಫೈನಾನ್ಸ್ HDFC ಎಂಸಿಬಾಜ್ ಫೈನಾನ್ಸ್ ಮತ್ತು 26 ರಿಂದ 55% ವರೆಗೆ ರಿಟರ್ನ್ಸ್ ಅನ್ನ ಜನರೇಟ್ ಮಾಡಿದ್ದಾವೆ. ಆದರೆ ವಿದ್ಯುತ್ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಪಟ್ಟ ಕಂಪನಿಗಳು ಸ್ವಲ್ಪ ಕಳಪೆ ಪ್ರದರ್ಶನವನ್ನ ತೋರಿದ್ದಾವೆ. ಅಂದಹಾಗೆ 30% 50% ಗ್ರೋ ಆಯ್ತು ರಿಟರ್ನ್ಸ್ ಜನರೇಟ್ ಮಾಡೋದು ಅಂದ್ರೆ ಯಾವ ಪಿರಿಯಡ್ ಅಲ್ಲಿ ಅಂದ್ರೆ ಪ್ರೀವಿಯಸ್ ಹೈ ಇದ್ದಿದ್ದು 14 ಮಂತ್ಸ್ ಬಿಫೋರ್ ನಂತರ 14 ತಿಂಗಳ ಬಳಿಕ ಮತ್ತೆ ಆಲ್ ಟೈಮ್ ಹೈಗೆ ಮಾರ್ಕೆಟ್ ರೀಚ್ ಆಯ್ತಲ್ಲ ನಡುವಿನ ಪಿರಿಯಡ್ ನಲ್ಲಿ ಈಗ ನಾವು ಮೇಲೆ ಹೇಳಿದಂತಹ ಸ್ಟಾಕ್ಸ್ ಸೆಕ್ಟರ್ಸ್ ಆ ರೀತಿ ರಿಟರ್ನ್ಸ್ ಅನ್ನ ಜನರೇಟ್ ಮಾಡಿರೋದು ಆದರೆ ಒಟ್ಟಾರೆ ನೋಡಿದಾಗ ಭಾರತದ ಶೇರುಪೇಟೆ ಮತ್ತೆ ಚೇತರಿಕೆಯ ಹಾದಿಗೆ ಬಂದಿದೆ ಜಿಡಿಪಿ ಬೆಳವಣಿಗೆಗೆ ಹಲವು ಇಂಜಿನ್ ಇನ್ನು ಜಿಡಿಪಿ ಬೆಳವಣಿಗೆಗೆ ಯಾವೆಲ್ಲಾ ಸೆಕ್ಟರ್ಸ್ ಯಾವೆಲ್ಲಾ ವಲಯಗಳು ಜಿಡಿಪಿಗೆ ಕಾಂಟ್ರಿಬ್ಯೂಟ್ ಮಾಡಿದಾವೆ ಅಂತ ಕೂಡ ನಾವು ನೋಡ್ತಾ ಹೋಗೋಣ.

ಎರಡನೇ ತ್ರೈಮಾಸಿಕದ ಈ ದಾಖಲೆಯ ಜಿಡಿಪಿ ಗ್ರೋತ್ ರೇಟ್ನಲ್ಲಿ ನಾವು ಡಿವೈಡ್ ಮಾಡಿ ನೋಡಿದಾಗ ದ್ವಿತೀಯ ಮತ್ತು ತೃತೀಯ ಸೆಕ್ಟರ್ ಅಂತ ಕನ್ಸಿಡರ್ ಮಾಡುವ ಕ್ಷೇತ್ರದಲ್ಲಿಆಗಿರೋ ಬೆಳವಣಿಗೆ ಜಿಡಿಪಿಗೆ ಜಾಸ್ತಿ ಬೂಸ್ಟ್ ಕೊಟ್ಟಿದ್ದಾವೆ ಭಾರತದ ದ್ವಿತೀಯ ಸೆಕ್ಟರ್ ಅನಿಸಿಕೊಳ್ಳೋ ಕೈಗಾರಿಕೆ ಮತ್ತು ಕನ್ಸ್ಟ್ರಕ್ಷನ್ ಒಟ್ಟಾರೆ 8.1% ಬೆಳವಣಿಗೆ ಕಂಡಿದೆ. ಇಂಡಿವಿಜುವಲ್ ಆಗಿ ಇದರಲ್ಲಿ ಮ್ಯಾನುಫ್ಯಾಕ್ಚರಿಂಗ್ 9.1% % ಮತ್ತು ಕನ್ಸ್ಟ್ರಕ್ಷನ್ 7.2% 2% ಬೆಳವಣಿಗೆ ಆಗಿದೆ ದೇಶದಲ್ಲಿ ಇನ್ಫ್ರಾಸ್ಟ್ರಕ್ಚರ್ ಆಕ್ಟಿವಿಟಿ ಹೌಸಿಂಗ್ ಡಿಮಾಂಡ್ ಮತ್ತು ಆನ್ಗೋಯಿಂಗ್ ಪ್ರಾಜೆಕ್ಟ್ಸ್ ನಲ್ಲಿನ ಡೆವಲಪ್ಮೆಂಟ್ಸ್ ನ ಕನ್ಸ್ಟ್ರಕ್ಷನ್ ಚೆನ್ನಾಗಿ ಆಗ್ತಾ ಇರೋದು ಸರ್ಕಾರ ಕೂಡ ಇನ್ಫ್ರಾ ಮೇಲೆ ಸ್ಪೆಂಡಿಕೆಯನ್ನ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ನ್ನ ಮತ್ತೆ ಈಗ ಚೆನ್ನಾಗಿ ಖರ್ಚು ಮಾಡೋಕೆ ಶುರು ಮಾಡಿರೋದು ಆಫ್ಟರ್ ಎಲೆಕ್ಷನ್ ಸ್ಲೋ ಡೌನ್ ಆದ್ಮೇಲೆ 2024 ರಲ್ಲಿ ಮತ್ತೆ ಈಗ ಪಿಕ್ಪ್ ಆಗಿರೋದು ಸರ್ಕಾರದ ಖರ್ಚುಗಳು ಕೂಡ ಈ ಕ್ಷೇತ್ರದಲ್ಲಿ ಚೆನ್ನಾಗಿ ದೊಡ್ಡ ಬೂಸ್ಟ್ ನಮಗೆ ನೋಡೋಕೆ ಸಿಗತಾ ಇದೆ. ಹಾಗೆ ಭಾರತದಲ್ಲಿ ತೃತೀಯ ಕ್ಷೇತ್ರ ಅಂತ ಕರೆಸಿಕೊಳ್ಳು ಫೈನಾನ್ಸಿಯಲ್ ರಿಯಲ್ ಎಸ್ಟೇಟ್ ಮತ್ತು ಪ್ರೊಫೆಷನಲ್ ಸರ್ವಿಸಸ್ ಈ ಕ್ಷೇತ್ರದ ಬೆಳವಣಿಗೆ ಒಟ್ಟಾರೆಯಾಗಿ 10.2% ಜಂಪ್ ಆಗಿದೆ. ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳು ಎರಡನೇ ತ್ರೈಮಾಸಿಕದಲ್ಲಿ 3.5% ಬೆಳವಣಿಗೆ ಆಗಿವೆ ಹಾಗೆ ಎಲೆಕ್ಟ್ರಿಸಿಟಿ ಗ್ಯಾಸ್ ವಾಟರ್ ಸಪ್ಲೈ ಮತ್ತು ಅದರ್ ಯುಟಿಲಿಟಿ ಸರ್ವಿಸಸ್ ಸೆಕ್ಟರ್ 4.3% ಜಂಪ್ ಆಗಿವೆ ಇನ್ನು ಪ್ರೈವೇಟ್ ಫೈನಲ್ ಕನ್ಸಂಷನ್ ಎಕ್ಸ್ಪೆಂಡಿಚರ್ ಪಿಎಫ್ಸಿ 7.9% 9% ನಷ್ಟು ಬೆಳವಣಿಗೆ ದರವನ್ನ ದಾಖಲು ಮಾಡಿದೆ ಪಿಎಫ್ಸಿ ಅಂದ್ರೆ ಮನೆಬಳಕೆ ವಸ್ತು ಸೇವೆಗಳು ಇವುಗಳ ಮೇಲೆ ಆಗೋ ಖಾಸಗಿ ಖರ್ಚು ವೆಚ್ಚಗಳು ಒಟ್ಟಾರೆಯಾಗಿ ಜಿಡಿಪಿಗೆ ಸರ್ವಿಸ್ ಕ್ಷೇತ್ರ 59% ಕೊಡಗೆ ಇಂಡಸ್ಟ್ರಿ 30% ಕೃಷಿ 11% ಕಾಂಟ್ರಿಬ್ಯೂಟ್ ಮಾಡಿವೆ ನೀವಿಲ್ಲಿ ಚಾರ್ಟ್ ಕೂಡ ಗಮನಿಸ್ತಾ ಇದ್ದೀರಿ ಇದರಲ್ಲಿ ಡೀಟೇಲ್ ಆಗಿ ಡಿವೈಡ್ ಮಾಡಿ ನಾವು ನಿಮಗೆ ತೋರಿಸ್ತಾ ಇದೀವಿ ಜಿಡಿಪಿ ಭವಿಷ್ಯ ಮುಂದೇನು ಭಾರತ ಓವರಾಲ್ ಹಣಕಾಸು ವರ್ಷದ ಉದ್ದಕ್ಕೂ 7% ಗಿಂತ ಹೆಚ್ಚಿನ ಆರ್ಥಿಕ ಬೆಳವಣಿಗೆ ದಾಖಲಿಸುತ್ತೆ ಅನ್ನೋ ಲೆಕ್ಕಾಚಾರ ಇದೆ. 7% ಅಬವ್ ಹೋಗುತ್ತೆ ಅಂತ ಹೇಳಿ. ಇದು Q2 ದ ಆಯ್ತು. ನಾಲಕು ಕ್ವಾರ್ಟರ್ಸ್ ಇರುತ್ತಲ್ಲ Q1, Q2, Q3, Q4 ಎಲ್ಲ ಸೇರಿಸಿದಾಗ ಆವರೇಜ್ 7% ಮೇಲೆ ಹೋಗುತ್ತೆ ಅಂತ. RBI ನೇ 6.8% ಅಂದಾಜು ಮಾಡಿತ್ತು. ಐಎಂಎಫ್ಎ 6.6% ಅಂದಾಜು ಮಾಡಿತ್ತು. ಅದನ್ನ ಮೀರಿ ಹೋಗುತ್ತೆ.

ದೇಶದ ಆರ್ಥಿಕ ಬೆಳವಣಿಗೆ ಎರಡು ಕಡೆ ಔಟ್ಪುಟ್ ಪ್ರೊಡಕ್ಷನ್ ಸೈಡ್ ಕೂಡ ಮತ್ತೆ ಡಿಮಾಂಡ್ ಸೈಡ್ ಕೂಡ ಎರಡು ಕಡೆಗೂನು ಬ್ಯಾಲೆನ್ಸ್ಡ್ ಆಗಿ ಸ್ಪ್ರೆಡ್ ಆಗುತ್ತೆ ಅನ್ನೋದು ತಜ್ಞರ ಅಂದಾಜು ಭಾರತ ತನ್ನ ರಫ್ತನ್ನ ಹೆಚ್ಚೆಚ್ಚು ಡೈವರ್ಸಿಫೈ ಮಾಡ್ಕೋಬೇಕು ಹಾಗೆ ಭಾರತ ಮತ್ತು ಅಮೆರಿಕ ನಡುವಿನ ಟ್ರೇಡ್ ಡೀಲ್ ಅನ್ನ ಏನು ವಿಳಂಬ ಆಗ್ತಿದೆ ಅದನ್ನ ಆದಷ್ಟು ಬೇಗ ಕ್ಲೋಸ್ ಮಾಡ್ಕೊಳ್ಳೋಕ್ಕೆ ನಾವು ಪ್ರಯತ್ನ ಪಡಬೇಕು ಇಲ್ಲಿ ಸ್ನೇಹಿತರೆ ಆರ್ಥಿಕ ತಜ್ಞರು ಇನ್ನೊಂದು ವಿಚಾರವನ್ನ ಹೈಲೈಟ್ ಮಾಡ್ತಿದ್ದಾರೆ ಅದೇ ಭಾರತದ ರಿಯಲ್ ಜಿಡಿಪಿ ಸ್ಟ್ರಾಂಗ್ ಆಗಿದ್ರೂ ಕೂಡ ನಾಮಿನಲ್ ಜಿಡಿಪಿ ಸ್ವಲ್ಪ ಕಮ್ಮಿ ಕಾಣಿಸ್ತಇದೆಯಲ್ಲ ಗ್ರೋತ್ ರೇಟ್ ಯಾಕೆ ಅನ್ನೋ ಪ್ರಶ್ನೆಯನ್ನ ಕೇಳಲಾಗ್ತಿದೆ. ಹಾಗಿದ್ರೆ ಏನು ರಿಯಲ್ ಜಿಡಿಪಿ ಅಂದ್ರೆ ಏನು? ನಾಮಿನಲ್ ಜಿಡಿಪಿ ಅಂದ್ರೆ ಏನು? ನಾಮಿನಲ್ ಜಿಡಿಪಿ ಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶದಲ್ಲಿ ಉತ್ಪಾದಿಸಲಾದ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನ ಪ್ರಸ್ತುತ ಮಾರುಕಟ್ಟೆ ಬೆಲೆ ಬಳಸಿಕೊಂಡು ಕರೆಂಟ್ ಮಾರ್ಕೆಟ್ ಪ್ರೈಸ್ ಬಳಸಿಕೊಂಡು ಅಂದಾಜು ಮಾಡಲಾಗುತ್ತೆ. ಇದರಲ್ಲಿ ಹಣದುಬ್ಬರ ಅಥವಾ ಇನ್ಫ್ಲೇಷನ್ ಅಥವಾ ಹಣದುಬ್ಬರ ವಿಳಿತ ಅಥವಾ ಡಿಫ್ಲೇಷನ್ ಗಣನೆ ತಗೊಳೋದಿಲ್ಲ. ನಾಮಿನಲ್ ಜಿಡಿಪಿ ಯಲ್ಲಿನ ಏರಿಕೆ ಉತ್ಪಾದನೆಯಲ್ಲಿ ಹೆಚ್ಚಳ ಆದರೂ ಆಗುತ್ತೆ ಬೆಲೆಗಳ ಹೆಚ್ಚಳ ಉತ್ಪಾದನೆ ಅಷ್ಟೇ ಇದು ರೇಟ್ ಜಾಸ್ತಿಯಾಗಿ ಎಲ್ಲ ದುಬಾರಿಯಾಗಿ ಇನ್ಫ್ಲೇಷನ್ ಆದರೂ ಕೂಡ ಏರಿಕೆ ಕಾಣುತ್ತೆ ಆದರೆ ರಿಯಲ್ ಜಿಡಿಪಿ ನಲ್ಲಿ ಹಾಗಲ್ಲ ಹಣದುಬ್ಬರವನ್ನ ಕಳೆಯಲಾಗುತ್ತೆ ಹಣದುಬ್ಬರ ಅಡ್ಜಸ್ಟ್ ಮಾಡಿ ಕ್ಯಾಲ್ಕುಲೇಟ್ ಮಾಡಲಾಗುತ್ತೆ ಅದಕ್ಕೆ ರಿಯಲ್ ಜಿಡಿಪಿ ಅಂತ ಹೇಳೋದು ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಾಮಿನಲ್ ಜಿಡಿಪಿ ಜಾಸ್ತಿನೇ ಕಾಣುತ್ತೆ ಭಾರತದಲ್ಲೂ ರಿಯಲ್ ಜಿಡಿಪಿ ಗಿಂತ ನಾಮಿನಲ್ ಜಿಡಿಪಿ ಹೆಚ್ಚಿದೆ ಆದರೆ ಜಸ್ಟ್ 5% ಡಿಫರೆನ್ಸ್ ಅಷ್ಟೇ ಇದೆ ಈ ಸಲ ಯಾಕೆ ತುಂಬಾ ಅಂತರ ಇರ್ತಿತ್ತಲ್ಲ ಇವಾಗ ಯಾಕೆ ಇಷ್ಟೊಂದು ಸಣ್ಣ ಅಂತರ ಇದೆ ಅದಕ್ಕೆ ಮುಖ್ಯ ಕಾರಣ ಹಣದುಬ್ಬರ ತುಂಬಾ ಕಮ್ಮಿ ಇರೋದು ಈಗ ನಮ್ಮ ದೇಶದಲ್ಲಿ 2025ರ ಮೊದಲಾರ್ಧದಲ್ಲಿ ಫಸ್ಟ್ ಹಾಫ್ ನಲ್ಲಿ ಹಣದುಬ್ಬರ 0.8% 8% ನಷ್ಟು ಬಂದಿತ್ತು ಡಬಲ್ ಡಿಜಿಟ್ ಹಣದುಬ್ಬರವನ್ನ ನಾವು 10 ವರ್ಷಗಳ ಹಿಂದೆ ನೋಡಿದೀವಿ ಡಬಲ್ ಡಿಜಿಟ್ ಇನ್ಫ್ಲೇಷನ್ ಅಂದ್ರೆ ಈ ವರ್ಷ ಇರೋ 100 ರೂಪಾಯಿ ನೆಕ್ಸ್ಟ್ ಇಯರ್ 90 ರೂಪ ಅಷ್ಟೇ ಬೆಲೆ ಕಳೆಕೊಳ್ಳೋದು ಆದರೆ ಸ್ನೇಹಿತರೆ ರಿಪೀಟ್ ಮಾಡ್ತೀವಿ 2025ರ ಮೊದಲಾರ್ಧದಲ್ಲಿ ಫಸ್ಟ್ ಹಾಫ್ ನಲ್ಲಿ ಹಣದುಬ್ಬರ 0.8% 8%ಗೆ ಇಳಿದಿದೆ.

ಇದು ನಾಮಿನಲ್ ಮತ್ತು ರಿಯಲ್ ಜಿಡಿಪಿ ನಡುವಿನ ವ್ಯತ್ಯಾಸವನ್ನ ಕಮ್ಮಿ ಮಾಡಿದೆ ಈಗ ಟ್ರಂಪ್ ಆರ್ಭಟಕ್ಕೆ ಬಗ್ಗದ ಭಾರತ ಏನಿದರ ಹಿಂದಿನ ರಹಸ್ಯ ಮೊದಲನೆದು ದೇಶಿ ಬೇಡಿಕೆ ಹೆಚ್ಚಾಗಿದೆ ಆಗಲೇ ಹೇಳಿದ ಹಾಗೆ ಪ್ರೈವೇಟ್ ಕನ್ಸಂಷನ್ ಕ್ವಾರ್ಟರ್ ಟ ನಲ್ಲಿ ವರ್ಷದಿಂದ ವರ್ಷಕ್ಕೆ 7.9% 9 % ನಷ್ಟು ಜಂಪ್ ಆಗಿದೆ ಇದು ಕೂಡ ಎಕ್ಸ್ಪೋರ್ಟ್ ಮೇಲಿನ ಡಿಪೆಂಡೆನ್ಸಿಯನ್ನ ಕಮ್ಮಿ ಮಾಡಿದೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಕ್ಯಾಪಿಟಲ್ ಗೂಡ್ಸ್ ಮೆಟಲ್ಸ್ ಎಲೆಕ್ಟ್ರಾನಿಕ್ಸ್ ಕನ್ಸ್ಯೂಮರ್ ಗೂಡ್ಸ್ ಇವು ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡಿದೆ ಕೆಲ ಕಂಪನಿಗಳು ಟ್ಯಾರಿಫ್ ಅಪ್ಲೈ ಆಗೋಕ್ಕು ಮೊದಲೇ ಹೆಚ್ಚಿನ ಸರಕುಗಳನ್ನ ರಫ್ತು ಮಾಡಿಬಿಟ್ಟಿದ್ರು ಟ್ರಂಪ್ ಈ ತರ ಹುಚ್ಚಾಟ ಮಾಡೋಕೆ ಶುರು ಮಾಡೋಕ್ಕಿಂತ ಮುಂಚೆನೆ ಇವಾಗಲೇ ತಗೊಂಡಗೆ ಇಟ್ಟುಬಿಡೋಣ ಅಂತ ಹೇಳಿ apple ಕಂಪನಿ ಸೇರಿದ ಹಾಗೆ ಫ್ಲೈಟ್ ಅಲ್ಲಿ ಹಡಗಲ್ಲಿ ತುಂಬಿ ತಗೊಂಡಂಗೆ ಮುಂಚೆನೆಲ್ಲಿ ಸ್ಟಾಕ್ ಮಾಡ್ಕೊಂಡುಬಿಟ್ಟಿದ್ರು ಅಂದ್ರೆ ಅಲ್ಲಿರೋ ಡಿಮಯಾಂಡ್ ಗಿಂತ ಹೆಚ್ಚಾಗಿ ಮುಂಚೆನೆ ತಗೊಂಡಗಲ್ಲಿ ಇಟ್ಟಿದ್ರು ಆಮೇಲೆ ಮಾರದ್ರೆ ಆಯ್ತು ಅಂತ ಹೇಳಿ ಒಂದ್ಸಲಿ ಬಾರ್ಡರ್ ದಾಟ್ಬಿಡ್ಲಿ ಅಂತ ಹೇಳಿ ಅದು ಕೂಡ ಈ ತ್ರೈಮಾಸಿಕದಲ್ಲಿ ಜಿಡಿಪಿ ರೈಸ್ ಆಗೋದಕ್ಕೆ ಕೊಡುಗೆ ಕೊಟ್ಟಿದೆ ಜೊತೆಗೆ ಕಂಪನಿಗಳು ಅಮೆರಿಕ ಬಿಟ್ಟು ಬೇರೆ ಮಾರ್ಕೆಟ್ನ್ನ ಕೂಡ ಹುಡುಕ್ತಾ ಇದ್ದಾರೆ ಅದು ಕೂಡ ಒಂದು ಫ್ಯಾಕ್ಟರ್ ಜೊತೆಗೆ ಟ್ರಂಪರ ಟ್ಯಾರಿಫ್ ಈ ಕ್ವಾರ್ಟರ್ ನಲ್ಲಿ ಫುಲ್ ಅಪ್ಲೈ ಆಗಲಿಲ್ಲ.

ಒಂದು ತಿಂಗಳಿಗೆ ಮಾತ್ರ ಅಪ್ಲೈ ಆಗಿದೆ Q2 ಅಂತ ಹೇಳಿದ್ರೆ Q1 ಒನ್ ಅಂದ್ರೆ ಏನು ಏಪ್ರಿಲ್ ಜೂನ್ Q2 ಅಂದ್ರೆ ಜುಲೈ ಆಗಸ್ಟ್ ಸೆಪ್ಟೆಂಬರ್ ಕ್ವಾರ್ಟರ್ ಟ ಅಲ್ಲಿ ಸೆಪ್ಟೆಂಬರ್ ತಿಂಗಳಿಗೆ ಮಾತ್ರ ಟ್ರಂಪ್ ಟ್ಯಾರಿಫ್ ಅಪ್ಲೈ ಆಗಿದೆ ಸೋ ಸೊ ಇಡೀ ಕ್ವಾರ್ಟರ್ ಗೆ ಟ್ಯಾರಿಫ್ ಹೊಡ್ತಾ ಬಿದ್ದಿಲ್ಲ ಅನ್ನೋದು ಕೂಡ ಮೈಂಡ್ ಅಲ್ಲಿ ಇಟ್ಕೋಬೇಕು ಆದರೆ ಮುಂದಿನ ಕ್ವಾರ್ಟರ್ ನಲ್ಲಿ ಡೆಫಿನೆಟ್ಲಿ ಪೂರ್ತಿಯಾಗಿ ಟ್ರಂಪರ್ನ ಟ್ಯಾರಿಫ್ ನಮಗೆ ಹೊಡ್ತಾ ಕೊಡುತ್ತೆ ಅಮೆರಿಕಾಗೆ ನಾವು ಮಾಡ್ತಾ ಇದ್ದ ಎಕ್ಸ್ಪೋರ್ಟ್ 30 37% ಬಿದ್ದು ಹೋಗಿದೆಯಲ್ಲ ಪರಿಣಾಮ ಆಗುತ್ತೆ ಆದರೆ Q3 ನಲ್ಲಿ ಆನ್ ಗೋಯಿಂಗ್ ಕ್ವಾರ್ಟರ್ ನಲ್ಲಿ ಇನ್ನೊಂದು ಇಂಪಾರ್ಟೆಂಟ್ ವಿಚಾರ ಕೂಡ ಪರಿಣಾಮ ಬೀರುತ್ತೆ ಅದೇನು ಅಂತ ಹೇಳ್ತೀವಿ ನಿಮಗೆ ಈಗ ಜಿಎಸ್ಟಿ ರೇಟನ್ನ ಕಮ್ಮಿ ಮಾಡಲಾಗಿದೆಯಲ್ಲ ಅದರ ಪರಿಣಾಮ ದೇಶದ ಒಳಗಡೆ ಕನ್ಸಂಪ್ಷನ್ ಸಿಕ್ಕಾಪಟ್ಟೆ ಭೂಮ್ಮಾಗಿದೆ ಹಬ್ಬದ ಸೀಸನ್ ಬೇರೆ ಇತ್ತು ಹೀಗಾಗಿ ಟ್ಯಾರಿಫ್ ಹೊಡತಾ ಕೊಟ್ಟರು ಕೂಡ ಜಿಎಸ್ಟಿ ಯನ್ನ ಕಮ್ಮಿ ಮಾಡಿರೋದರಿಂದ ದೇಶದಲ್ಲಿ ಡೊಮೆಸ್ಟಿಕ್ ಕನ್ಸಂಷನ್ ತುಂಬಾ ಪಿಕ್ಪ್ ಆಗಿ ಒಳ್ಳೆ ಸೇಲ್ಸ್ ಎಲ್ಲ ಆಗಿರೋದ್ರಿಂದ ಎಲ್ಲಾ ರೀತಿಯ ಶಾಪಿಂಗ್ ವೆಹಿಕಲ್ ಇಂದ ಹಿಡಿದು ಎಲ್ಲವೂ ದಾಖಲೆ ಮಟ್ಟದಲ್ಲಿ ಸೇಲ್ ಆಗಿರೋದ್ರಿಂದ ಅಗೈನ್ ಅದನ್ನಲ್ಲಿಗೆ ಬ್ಯಾಲೆನ್ಸ್ ಮಾಡೋಕೆ ಸಾಧ್ಯ ಆಗುತ್ತೆ ಅನ್ನೋ ವಿಶ್ವಾಸ ಇದೆ ಜೊತೆಗೆ ನಿಯರ್ ಫ್ಯೂಚರ್ ನಲ್ಲಿ ಎಕಾನಮಿ ಚೆನ್ನಾಗಿ ಪರ್ಫಾರ್ಮ್ ಮಾಡೋ ಎಲ್ಲಾ ಲಕ್ಷಣಗಳು ಇದಾವೆ ಸದ್ಯಕ್ಕೆ ಯಾಕೆ ಅಂತ ಹೇಳಿದ್ರೆ ಜಾಗತಿಕವಾಗಿ ಎಐ ಬಬಲ್ ಏನೇ ಹೇಳಿದ್ರು ಕೂಡ ಅದರ ನೇರ ನೇರ ಇಂಪ್ಯಾಕ್ಟ್ ಭಾರತದ ಮೇಲೆ ಅಷ್ಟೊಂದು ಆಗಲಿಕ್ಕೆ ಈ ಕ್ಷಣಕ್ಕೆ ಲಕ್ಷಣ ಇಲ್ಲ ಯಾಕಂದ್ರೆ ಅಂತ ಎಐ ಕಂಪನಿ ಯಾವುದು ಇಲ್ಲ ಎನ್ವಿಡಿಯ ಅದು ಇದು ಅಂತ ನಾವು ಸಿಕ್ಕಾಪಟ್ಟೆ ಬಬಲ್ ಕ್ರಿಯೇಟ್ ಮಾಡಿ ಹೂಡಿಕೆನು ಮಾಡಿಲ್ಲ ಇಲ್ಲಿ ಇವಾಗ ನಮ್ಮಲ್ಲಿ ಎಐ ಇದೆಲ್ಲ ಕಂಡುಬಿಡ್ತಾ ಇದೆ ಅದು ಒಂತರ ಅವಮಾನಕಾರಿ ಸಂಗತಿ ಕೂಡ ಹೌದು ಒಂತರದಲ್ಲಿ ಈ ಕ್ಷಣಕ್ಕೆ ನೋಡಿದಾಗ ಆತರದ ಬಬ್ಬಲ್ ನಮಗೆ ಆ ಬಸ್ಟ್ ಆದ್ರೆ ಹೊಡತ ಅಷ್ಟು ಬೀಳಲ್ಲ ಜಾಗತಿಕವಾಗಿ ಬಿದ್ದಷ್ಟು ನಮಗೆ ಬೀಳದೆ ಇರಬಹುದು ಅಂತ ಜೊತೆಗೆ ಇನ್ನು ಮುಖ್ಯವಾಗಿ ಏನು ಅಂದ್ರೆ ಎಕನಾಮಿಕ್ ರಿಫಾರ್ಮ್ಸ್ ಶುರುವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments