ಅಂತರಿಕ್ಷದಲ್ಲಿ ಭಾರತದ ಅಧಿಪತ್ಯ ಅಂತರಿಕ್ಷದಲ್ಲಿ ಮೊದಲ ಪೆಟ್ರೋಲ್ ಬಂಕ್ ಒಟ್ಟೊಟ್ಟಿಗೆ 16 ಉಪಗ್ರಹಗಳ ಉಡಾವಣೆ 2026ರ ಹೊಸ ವರ್ಷದ ಆರಂಭದಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜಗತ್ತೆ ಬೆರಗಾಗ ಗುವಂತಹ ಸಾಹಸಕ್ಕೆ ಕೈ ಹಾಕಿದೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಎಂದು ಕೇವಲ ಒಂದು ಉಡಾವಣೆಗೆ ಸಾಕ್ಷಿಯಾಗ್ತಾ ಇಲ್ಲ ಬದಲಾಗಿ ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಹೊಸ ಯುಗಕ್ಕೆ ನಾಂದಿ ಹಾಡ್ತಾ ಇದೆ ಹೌದು ಇಸ್ರೋದ ವಿಶ್ವಾಸಹರ ವರ್ಕ್ ಹಾರ್ಸ್ ಪಿಎಸ್ಎಲ್ವಿಸಿ62 ರಾಕೆಟ್ ಇಂದು ಆಕಾಶಕ್ಕೆ ಚಿಮ್ಮಲು ಸಜ್ಜಾಗಿ ನಿಂತಿದೆ ಇದು ಕೇವಲ ಒಂದು ಸಾಮಾನ್ಯ ಉಪಗ್ರಹ ಉಡಾವಣೆಯಲ್ಲ ಇದು ಬಾಹ್ಯಾಕಾಶದಲ್ಲಿ ಭಾರತದ ತಾಂತ್ರಿಕ ಶಕ್ತಿ ಮತ್ತು ವಾಣಿಜ್ಯ ಪ್ರಭುತ್ವವನ್ನ ಸಾರುವ ಐತಿಹಾಸಿಕ ಮೈಲಿಗಲ್ಲು ಡಿ ಆರ್ ಡಿ ಓ ದ ಶಕ್ತಿಯುತ ಅನ್ವೇಷ ಸೇರಿದಂತೆ ಒಟ್ಟು 16 ಉಪಗ್ರಹಗಳನ್ನ ಹೊತ್ತೊಯ್ಯುತ್ತಿರುವ ಈ ಮಿಷನ್ 2026ರ ವರ್ಷಕ್ಕೆ ಇಸ್ರೋ ನೀಡುತ್ತಿರುವ ಅತ್ಯಂತ ಭರ್ಜರಿ ಆರಂಭವಾಗಿದೆ ಈ ಉಡಾವಣೆಯ ವಿಶೇಷತೆಗಳು ಏನು ಬಾಹ್ಯಾಕಾಶದಲ್ಲಿ ಭಾರತ ಸ್ಥಾಪಿಸಲಿರುವ ಪೆಟ್ರೋಲ್ ಬಂಕ್ ಯಾವುದು ಇಸ್ರೋ ಸೃಷ್ಟಿಸುತ್ತಿರುವ ಇತಿಹಾಸವೇನು ಡೀಟೇಲ್ ಆಗಿ ನೋಡ ನೋಡಕೊಂಡು ಬರೋಣ
ಹೊಸ ವರ್ಷದ ಆರಂಭದಲ್ಲೇ ಇಸ್ರೋ ಮಹತ್ವದ ಹೆಜ್ಜೆಯನ್ನ ಇಟ್ಟಿದೆ ಆಕಾಶದಲ್ಲಿ ತನ್ನದೇ ಆದ ಸಾಧನೆ ಮಾಡಲು ಐತಿಹಾಸಿಕ ಹೆಜ್ಜೆಯನ್ನ ಇಟ್ಟಿದ್ದು ಕೋಟ್ಯಾಂತರ ಭಾರತೀಯರು ಇಸ್ರೋ ಅತ್ತ ಕಣ್ಣುನಿಟ್ಟಿದ್ದಾರೆ ಕಳೆದ ಡಿಸೆಂಬರ್ 24 ರಂದು ಇಸ್ರೋದ ಬ್ಲಬರ್ಡ್ ಬ್ಲಾಕ್ ಟು ಕಾರ್ಯಾಚರಣೆ ಯಶಸ್ವಿಯಾಗಿತ್ತು ಇದಾದ ಕೆಲವೇ ದಿನಗಳಲ್ಲಿ ಇಸ್ರೋ ಸುಧಾರಿತ ಭೂವೀಕ್ಷಣ ಉಪಗ್ರಹ ಈಓಎಸ್ಎನ್ ಒಂದನ್ನ ಉಡಾವಣೆ ಮಾಡಲಿದೆ. ಇಸ್ರೋದ ಇಷ್ಟು ಚುರುಕಾದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನ ನೋಡಿ ಜಗತ್ತು ದಂಗಾಗಿದೆ. ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದ ಮೊದಲ ಉಡಾವಣಾ ವೇದಿಕೆಯಿಂದ ಇಸ್ರೋ 2026ರ ಹೊಸ ವರ್ಷದಲ್ಲಿ ತನ್ನ ಮೊದಲ ಪಿಎಸ್ಎಲ್ವಿ ಸಿಟಿ ಮಿಷನ್ ಉಡಾವಣೆಯನ್ನ ಹಮ್ಮಿಕೊಂಡಿದೆ. ಈ ಓಎಸ್ ಎನ್ ಒನ್ ಭಾರತದ ಕಣಗಾವಲು ಶಕ್ತಿಯನ್ನ ಹೆಚ್ಚಿಸುವ ಮತ್ತೊಂದು ಆಧುನಿಕ ಉಪಗ್ರಹ ಎಂಬುದು ಹೆಮ್ಮೆಯ ಸಂಗತಿ ಪ್ರಾಥಮಿಕ ಪೆಲೋಡ್ ಈ ಓಎಸ್ ಎನ್ ಒಂದು ಜೊತೆಗೆ ಪಿಎಸ್ಎಲ್ವಿ ಯುರೋಪಿಯನ್ ಪ್ರದರ್ಶನ ಉಪಗ್ರಹ ಮತ್ತು ಭಾರತೀಯ ಮತ್ತು ವಿದೇಶಿ ಸಂಸ್ಥೆಗಳಿಗೆ ಸೇರಿದ 17 ರಿಂದ 16 ಉಪಗ್ರಹಗಳನ್ನು ಸಹ ನಭಕ್ಕೆ ಹೊತ್ತೊಯ್ಯಲಿದೆ ಈ ಓ ಎಸ್ ಎನ್ ಒನ್ ಎಂಬುದು ಪ್ರಾಥಮಿಕವಾಗಿ ಡಿಆರ್ಡಿ ಓ ಗಾಗಿ ಅಭಿವೃದ್ಧಿಪಡಿಸಲಾದ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹವಾಗಿ ಆಗಿದೆ.
ಇಸ್ರೋದ ಹೊಸ ಗೂಡಾಚಾರಿ ಕಣ್ಣು ಅನ್ವೇಷ ಈ ಮಿಷನ್ನ ಪ್ರಮುಖ ಆಕರ್ಷಣೆ ಅಂದ್ರೆ ಡಿಆರ್ಡಿಓ ಅಭಿವೃದ್ಧಿ ಪಡಿಸಿರುವ ಈಓಎಸ್ಎನ್ ಒಂದು ಉಪಗ್ರಹ ಇದನ್ನ ಪ್ರೀತಿಯಿಂದ ಅನ್ವೇಷ ಅಂತ ಕರೆಯಲಾಗ್ತಾ ಇದೆ ಇದು ಕೇವಲ ಒಂದು ಕ್ಯಾಮೆರಾ ಹೊಂದಿರುವ ಉಪಗ್ರಹವಲ್ಲ ಬದಲಾಗಿ ಇದು ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನವನ್ನ ಹೊಂದಿರುವ ಅತ್ಯಾಧುನಿಕ ಕಣ್ಣು ಸಾಮಾನ್ಯ ಉಪಗ್ರಹಗಳು ಕೇವಲ ಪ್ರಾಥಮಿಕ ಬಣ್ಣಗಳನ್ನು ಮಾತ್ರ ಸೆರೆಹಿಡಿದರೆ ಅನ್ವೇಶ ನೂರಾರು ಬೆಳಕಿನ ಪಟ್ಟಿಗಳನ್ನ ವಿಶ್ಲೇಷಿಸಬಲ್ಲದು ಇದು ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವಿನ ಸ್ಪೆಕ್ಟ್ರಲ್ ಫಿಂಗರ್ ಪ್ರಿಂಟ್ ಅಥವಾ ರಾಸಾಯನಿಕ ಗುರುತನ್ನ ಪತ್ತೆ ಹಚ್ಚುತ್ತೆ ಅಂದ್ರೆ ಮೇಲಿಂದಲೇ ಬೆಳೆಗಳ ಆರೋಗ್ಯ ಹೇಗಿದೆ ಮಣ್ಣಿನಲ್ಲಿ ತೇವಾಂಶ ಎಷ್ಟಿದೆ ಅಷ್ಟೇ ಅಲ್ಲದೆ ಭೂಮಿಯ ಆಳದಲ್ಲಿರುವ ಖನಿಜ ನಿಕ್ಷೇಪಗಳು ಎಲ್ಲಿವೆ ಎಂಬುದನ್ನ ಇದು ಕರಾರುವಕ್ಕಾಗಿ ಹೇಳಬಲ್ಲದು ರಕ್ಷಣಾ ದೃಷ್ಟಿಯಿಂದಲೂ ಇದು ಶತ್ರು ರಾಷ್ಟ್ರಗಳ ಚಲನವಲನಗಳನ್ನ ಪತ್ತೆಹಚ್ಚಲು ಭಾರತಕ್ಕೆ ಬ್ರಹ್ಮಾಸ್ತ್ರ ವಾಗಲಿದೆ ಅಂತರಿಕ್ಷದಲ್ಲಿ ಭಾರತದ ಮೊದಲ ಪೆಟ್ರೋಲ್ ಬಂಕ್ ಈ ಮಿಷನ್ ನಲ್ಲಿ ಇಡೀ ಜಗತ್ತು ಕುತುಹಲದಿಂದ ಕಾಯುತ್ತಿರುವ ಮತ್ತೊಂದು ಪ್ರಯೋಗ ಬಂದರೆ ಆಯುಲ್ ಸೆಟ್ ಬೆಂಗಳೂರು ಹಾಗೂ ಚೆನ್ನೈ ಮೂಲದ ಸ್ಟಾರ್ಟಪ್ ಅರ್ಬಿಟ್ ಏಡ್ ಏರೋಸ್ಪೇಸ್ ಅಭಿವೃದ್ಧಿ ಪಡಿಸಿರುವ ಈ ಉಪಗ್ರಹ ಬಾಹ್ಯಾಕಾಶದಲ್ಲಿ ರಿಫೈಲಿಂಗ್ ಅಥವಾ ಇಂಧನ ಮರುಪೂರ್ಣ ತಂತ್ರಜ್ಞಾನವನ್ನ ಪ್ರದರ್ಶನ ಮಾಡಲಿದೆ ಇದುವರೆಗೆ ಒಮ್ಮೆ ಉಪಗ್ರಹದ ಇಂಧನ ಖಾಲಿಯಾದರೆ ಅದು ಬಾಹ್ಯಾಕಾಶದ ಕಸವಾಗಿ ಬದಲಾಗ್ತಾ ಇತ್ತು ಆದರೆ ಆಯಿಲ್ ಸೆಟ್ ಈ ಸಂಪ್ರದಾಯವನ್ನ ಮುರಿಯಲಿದೆ.
ಪ್ರೊಪೆನ್ ಎಂಬ ಹಸಿರು ಇಂಧನವನ್ನ ಬಳಸಿ ಬಾಹ್ಯಾಕಾಶದಲ್ಲೇ ಒಂದು ಉಪಗ್ರಹದಿಂದ ಮತ್ತೊಂದಕ್ಕೆ ಇಂಧನ ವರ್ಗಾಯಿಸುವ ಪರೀಕ್ಷೆಯನ್ನ ನಡೆಸಲಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಉಪಗ್ರಹಗಳ ಜೀವಿತಾವಧಿಯನ್ನ ಹೆಚ್ಚಿಸಲು ಭಾರತವು ಅಂತರಿಕ್ಷದ ಪೆಟ್ರೋಲ್ ಬಂಕಗಳನ್ನ ಸ್ಥಾಪಿಸುವುದು ಖಚಿತ. ಇದು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತವನ್ನ ಅಗ್ರಸ್ಥಾನಕ್ಕೆ ಕಂಡುಯಲಿದೆ. ವಿಶ್ವದ ಮೊದಲ ಸ್ಪೇಸ್ ಸೈಬರ್ ಕ್ಯಾಫೆ ಮತ್ತು ಮಿರಾದ ಅಚ್ಚೇರಿ ಇಸ್ರೋ ಈ ಬಾರಿ ತಂತ್ರಜ್ಞಾನದ ಜೊತೆಗೆ ವಾಣಿಜ್ಯ ಕ್ಷೇತ್ರದಲ್ಲೂ ಕೂಡ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಹೈದರಾಬಾದ್ ಮೂಲದ ಸ್ಟಾರ್ಟಪ್ ಗಳು ನಿರ್ಮಿಸಿರುವ ಎಂಓಐ ಒಂದು ಉಪಗ್ರಹವು ವಿಶ್ವದ ಮೊದಲ ಆರ್ಬಿಟಲ್ ಎಐ ಇಮೇಜ್ ಲ್ಯಾಬೊರೇಟರಿಯನ್ನ ಹೊಂದಿದೆ. ಇದರ ವಿಶೇಷತೆ ಏನಪ್ಪಾ ಅಂತ ಅಂದ್ರೆ ಎಡ್ಜ್ ಕಂಪ್ಯೂಟಿಂಗ್ ತಂತ್ರಜ್ಞಾನ ಅಂದರೆ ಡೇಟಾವನ್ನ ಭೂಮಿಗೆ ಕಳುಹಿಸಿ ವಿಶ್ಲೇಷಿಸುವ ಬದಲು ಉಪಗ್ರಹವೇ ಬಾಹ್ಯಾಕಾಶದಲ್ಲಿ ಸ್ವತಹ ಡೇಟಾ ವಿಶ್ಲೇಷಣೆಯನ್ನ ಮಾಡುತ್ತೆ. ಇದಕ್ಕಿಂತಲೂ ರೋಚಕ ವಿಷಯವೇನೆಂದರೆ ಸ್ಪೇಸ್ ಸೈಬರ್ ಕೆಫೆ ಪರಿಕಲ್ಪನೆ. ಸಾಮಾನ್ಯ ಜನರು ಅಥವಾ ಸಂಶೋಧಕರು ಕೇವಲ ಎರಡು ಡಾಲರ್ ಪಾವತಿಸಿ ಅಂದ್ರೆ 180 ರೂಪಾಯನ್ನ ಪಾವತಿಸಿ ಒಂದು ನಿಮಿಷದ ಕಾಲ ಈ ಉಪಗ್ರಹದ ಪ್ರೊಸೆಸರ್ ಅನ್ನ ಬಾಡಿಗೆಗೆ ಪಡೆಯಬಹುದು. ಇದೇ ಉಪಗ್ರಹದ ಒಳಗೆ ಮಿರಾ ಎಂಬ ವಿಶ್ವದ ಅತ್ಯಂತ ಹಗುರವಾದ ಟೆಲಿಸ್ಕೋಪ್ ಇದೆ. ಕೇವಲ 502ಗ್ರಾಂ ತೂಕದ ಈ ಟೆಲಿಸ್ಕೋಪ್ ಅನ್ನ ಒಂದೇ ಒಂದು ಘನ ಸಿಲಿಕಾ ಗ್ಲಾಸ್ ನಿಂದ ಕೆತ್ತಲಾಗಿದೆ. ಇದು ಎಷ್ಟೇ ದೊಡ್ಡ ಕಂಪನಗಳಿದ್ದರೂ ಕೂಡ ತನ್ನ ಫೋಕಸ್ ಅನ್ನ ಕಳೆದುಕೊಳ್ಳುವುದಿಲ್ಲ ಮತ್ತು ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನ ನೀಡುತ್ತೆ.
ಜಾಗತಿಕ ಸ್ಯಾಟಲೈಟ್ ಟ್ಯಾಕ್ಸಿಯಾಗಿ ಇಸ್ರೋ ಇಸ್ರೋದ ವಾಣಿಜ್ಯ ಅಂಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಬಾರಿ ಪಿಎಸ್ಎಲ್ವಿ ಯನ್ನ ಅಂತರಾಷ್ಟ್ರೀಯ ಮಟ್ಟದ ಸ್ಯಾಟಲೈಟ್ ಟ್ಯಾಕ್ಸಿಯನ್ನಾಗಿ ಪರಿವರ್ತಿಸಿದೆ. ಈ ರಾಕೆಟ್ನಲ್ಲಿ ನೇಪಾಳದ ಮುನಾಲ್ ಉಪಗ್ರಹವಿದೆ ಇದು ನೇಪಾಳದ ಭೌಗೋಳಿಕ ನಕ್ಷೆ ತಯಾರಿಸಲು ಭಾರತದ ವಿದೇಶಾಂಗ ಇಲಾಖೆಯ ಬೆಂಬಲದೊಂದಿಗೆ ಉಡಾವಣೆಯಾಗ್ತಾ ಇದೆ. ಏನು ಸ್ಪೇನ್ ದೇಶದ ಕೆಸ್ಟ್ರಲ್ ಅಂದ್ರೆ ಕೆಐಡಿ ಎಂಬ ವಿಶೇಷ ಕ್ಯಾಪ್ಸುಲ್ ಇದರಲ್ಲಿ ಹೋಗುತ್ತಿದೆ. ಇದು ಬಾಹ್ಯಾಕಾಶದಲ್ಲಿ ತನ್ನ ಕೆಲಸವನ್ನ ಮುಗಿಸಿದ ನಂತರ ವಾತಾವರಣವನ್ನ ಸೀಳಿಕೊಂಡು ಫೆಸಿಫಿಕ್ ಸಾಗರದಲ್ಲಿ ಬೀಳುವ ಮೂಲಕ ಮರು ಪ್ರವೇಶ ತಂತ್ರಜ್ಞಾನವನ್ನ ಪರೀಕ್ಷಿಸಲಿದೆ. ಜೊತೆಗೆ ಬ್ರೆಜಿಲ್ ನಿಂದ ಎರಡು ಉಪಗ್ರಹಗಳಿವೆ. ಒಂದು ಸಮುದ್ರ ರಕ್ಷಣೆಗಾಗಿ ಅಲ್ಟ್ರಾ ಬರನ್ ಒನ್ ಮತ್ತು ಇನ್ನೊಂದು ಆರ್ಬಿಟಲ್ ಟೆಂಪಲ್. ಈ ಆರ್ಬಿಟಲ್ ಟೆಂಪಲ್ನಲ್ಲಿ 14000 ಜನರ ಹೆಸರುಗಳನ್ನ ಡಿಜಿಟಲ್ ರೂಪದಲ್ಲಿ ಶೇಖರಿಸಿ ಬಾಹ್ಯಾಕಾಶದ ಅನಂತತೆಯಲ್ಲಿ ಶಾಶ್ವತವಾಗಿ ಸಂರಕ್ಷಿಸಲಾಗ್ತಾ ಇದೆ. ಮಾರಿಶಸ್ ದೇಶದ ಜಂಟಿ ಉಪಗ್ರಹವು ಈ ಪಯಣದ ಭಾಗವಾಗಿದೆ. ಭಾರತದ ಬಾಹ್ಯಾಕಾಶ ಆರ್ಥಿಕತೆಯ ಭವಿಷ್ಯ. ಪಿಎಸ್ಎಲ್ವಿಸಿ 62 ಮಿಷನ್ ಕೇವಲ ಸಂಖ್ಯೆಗಳ ಆಟವಲ್ಲ. ಇದು ಭಾರತದ ಬದಲಾಗುತ್ತಿರುವ ಬಾಹ್ಯಾಕಾಶ ನೀತಿಯ ಪ್ರತಿಬಿಂಬ. ಇಲ್ಲಿ ಸರ್ಕಾರಿ ಸಂಸ್ಥೆ ಡಿಆರ್.ಓ ಖಾಸಗಿ ಸ್ಟಾರ್ಟಪ್ ಗಳು ಮತ್ತು ವಿದೇಶಿ ಸಂಸ್ಥೆಗಳು ಒಟ್ಟಾಗಿ ಕೆಲಸವನ್ನ ಮಾಡ್ತಿವೆ. ಬಾಹ್ಯಾಕಾಶದಲ್ಲಿ ಇಂಧನ ತುಂಬುವುದು ಎಡ್ಜ್ ಕಂಪ್ಯೂಟಿಂಗ್ ಬಳಸಿ ಡೇಟಾ ವಿಶ್ಲೇಷಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಅಂತರಾಷ್ಟ್ರೀಯ ಉಪಗ್ರಹಗಳನ್ನ ಕಕ್ಷೆಗೆ ಸೇರಿಸುವುದು ಭಾರತದ ಶಕ್ತಿಯನ್ನ ಜಗತ್ತಿಗೆ ತೋರಿಸ್ತಾ ಇದೆ.
ಹೌದು ಈ ಮಿಷನ್ ನಲ್ಲಿ ಭಾರತೀಯ ಖಾಸಗಿ ಸಂಸ್ಥೆಗಳ ಪಾತ್ರ ಹಿರಿದು ದ್ರುವ ಸ್ಪೇಸ್ ಸಂಸ್ಥೆಯು ಲಾಚಿತ್ ಮತ್ತು ತೈವೋಟ್ ತ್ರೀ ಉಪಗ್ರಹಗಳ ಮೂಲಕ ಸ್ವದೇಶಿ ಸಂಮೋಹನ ವ್ಯವಸ್ಥೆಯನ್ನ ಪರೀಕ್ಷಿಸುತ್ತಾ ಇದೆ ಇದು ಭಾರತದ ನ್ಯೂ ಸ್ಪೇಸ್ ನೀತಿಯ ಯಶಸ್ಸನ್ನ ತೋರಿಸುತ್ತೆ ಒಂದು ಕಾಲದಲ್ಲಿ ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಬಾಹ್ಯಕಾಶ ಇಂದು ಸ್ಟಾರ್ಟಪ್ ಗಳ ಆಟದ ಮೈದಾನವಾಗ್ತಾ ಇದೆ ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುವುದಲ್ಲದೆ ಭಾರತವು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಪಾಲನ್ನ ಹೆಚ್ಚಿಸಿಕೊಳ್ಳಲು ಸಾಧ್ಯ ವಾಗುತ್ತೆ ಕಡಿಮೆ ವೆಚ್ಚದಲ್ಲಿ ಹೆಚ್ಚು ನಿಖರವಾದ ಉಡಾವಣೆಗಳನ್ನ ಮಾಡುವ ಇಸ್ರೋದ ಸಾಮರ್ಥ್ಯವೇ ಇಂದು ಜಗತ್ತಿನ ಶ್ರೀಮಂತ ರಾಷ್ಟ್ರಗಳು ಭಾರತದತ್ತ ಮುಖ ಮಾಡುವಂತೆ ಮಾಡಿದೆ ಒಟ್ಟಾರೆಯಾಗಿ ಪಿಎಸ್ಎಲ್ವಿಸಿ 62 ಮಿಷನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಸಾಕ್ಷಿಯಾಗಿದೆ ಡಿಆರ್ಡಿಓದ ಅನ್ವೇಶದಿಂದ ಹಿಡಿದು ಬಾಹ್ಯಾಕಾಶದ ಪೆಟ್ರೋಲ್ ಬಂಕ್ ಆಯಿಲ್ ಸ್ಾಟ್ ವರೆಗೆ ಈ ಯೋಜನೆಗಳು ತಾಂತ್ರಿಕ ಕ್ರಾಂತಿಯನ್ನೇ ಸೃಷ್ಟಿಸಲಿವೆ. ಸರ್ಕಾರದ ಜೊತೆ ಖಾಸಗಿ ಸ್ಟಾರ್ಟಪ್ ಗಳ ಮಿಲನವು ಕೂಡ ಭಾರತದ ನ್ಯೂ ಸ್ಪೇಸ್ ನೀತಿಯನ್ನ ಬಲಪಡಿಸಿದೆ. ವಾಣಿಜ್ಯಕವಾಗಿ ವಿಶ್ವದ ಸ್ಯಾಟಲೈಟ್ ಟ್ಯಾಕ್ಸಿಯಾಗಿ ಹೊರಹೊಮ್ಮುತ್ತಿರುವ ಹೆಸರು ಕಡಿಮೆ ವೆಚ್ಚದಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಜಗತ್ತಿನ ಗಮನವನ್ನ ಸೆಳೆದಿದೆ. 2026ರ ಈ ಮೊದಲ ಮಿಷನ್ ಯಶಸ್ವಿಯಾಗುವ ಮೂಲಕ ಭಾರತವು ಬಾಹ್ಯಾಕಾಶದ ಸೂಪರ್ ಪವರ್ ಎಂಬ ಹೆಗ್ಗಳಿಕೆಯನ್ನ ಮತ್ತಷ್ಟು ಗಟ್ಟಿಗೊಳಿಸಲಿದೆ. ವಿಜ್ಞಾನ ಮತ್ತು ವಾಣಿಜ್ಯದ ಈ ಅದ್ಭುತ ಸಮ್ಮೇಲನವು ಮುಂದಿನ ದಿನಗಳಲ್ಲಿ ಗಗನ ಯಾನದಂತಹ ಬೃಹತ್ ಯೋಜನೆಗಳಿಗೆ ಭದ್ರ ಬುನಾದಿಯಾಗಲಿದೆ.


