ಭಾರತ ಸದ್ಯ ವಿಶ್ವದ ಟಾಪ್ ಡಿಜಿಟಲ್ ಪ್ಲೇಯರ್ ಯುಪಿಐ ನಿಂದ ಇಡೀ ವಿಶ್ವವನ್ನೇ ನಿಪ್ಪೆರಗಾಕಿಸಿದೆ ಈಗ ಈ ಸಾಧನೆಗೆ ಮತ್ತೊಂದು ಕ್ರಾಂತಿಕಾರಿ ಪಾವತಿ ವ್ಯವಸ್ಥೆ ಬಂದು ಸೇರ್ತಾ ಇದೆ ಪ್ರಾಕ್ಸಿಕಿ ಅನ್ನೋ ಹೊಸ ಕಂಪನಿಯೊಂದು ತಂಪೆ ಲಾಂಚ್ ಮಾಡಿದೆ ಆಧಾರ್ ಮೂಲಕ ಇದರಿಂದ ಕೇವಲ ಬೆರಳಿನಿಂದ ಲ ಪೇ ಮಾಡಬಹುದು ಅಂತ ಹೇಳಲಾಗ್ತಿದೆ. ಈಗಾಗಲೇ ಇದರ ಟೆಸ್ಟ್ ರನ್ ಕೂಡ ನಡೆದಿದೆ. ಆರ್ಬಿಐ ಕೂಡ ಅಪ್ರೂವ್ ಮಾಡಿದೆ ಹಾಗಿದ್ರೆ ಈ ತಂಪೆ ಹೇಗೆ ಕೆಲಸ ಮಾಡುತ್ತೆ ಕೇವಲ ಬೆರಳಿನಿಂದಲೇ ಪೇ ಮಾಡೋದು ಹೇಗೆ ಯಾವಾಗ ಬರುತ್ತೆ ತಂಪೆನ ಅನುಕೂಲ ಅನಾನುಕೂಲಗಳೇನು ಎಲ್ಲವನ್ನ ಹೇಳ್ತೀವಿ ಮಿಸ್ ಮಾಡದೆ ವಿಡಿಯೋನ ಕಡೆ ತನಕ ನೋಡಿ. ಬೆರಳಿನಿಂದಲೇ ಪೇಮೆಂಟ್. ಬಂತು ತಂಪೆ. ಹೌದು ಸ್ನೇಹಿತರೆ. ಯುಪಿಐ ನ ನಾವು ಎಷ್ಟೇ ಕ್ಯಾಶ್ ಲೆಸ್ ಸೇಮ್ ಲೆಸ್ ಪೇಮೆಂಟ್ ವ್ಯವಸ್ಥೆ ಅಂದ್ರೂನು ಇವತ್ತಿಗೂ ಪೇ ಮಾಡೋಕೆ ಕನಿಷ್ಠ ಪಕ್ಷ ನಮ್ಮ ಹತ್ರ ಒಂದು ಮೊಬೈಲ್ ಆದ್ರೂ ಇರಬೇಕು. ಮೊಬೈಲ್ ನಿಂದ ಕ್ಯೂಆರ್ ಕೋಡ್ ನ ಸ್ಕ್ಯಾನ್ ಮಾಡಿ ನಂತರ ಪಿನ್ ಎಂಟರ್ ಮಾಡಿ ಪೇ ಮಾಡಬೇಕಾಗುತ್ತೆ. ಆದರೆ ಈಗ ಮೊಬೈಲ್ನ ಅವಶ್ಯಕತೆನೇ ಇಲ್ಲದೆ ಕೇವಲ ಹೆಬ್ಬೆರಳಲ್ಲೇ ಪೇ ಮಾಡಬಹುದು ಅಂತ ತಂಪೆ ಹೇಳ್ತಿದೆ. ಗುರುಗಾವ್ ಮೂಲದ ಪ್ರಾಕ್ಸಿಗಿ ಅನ್ನೋ ಸ್ಟಾರ್ಟಪ್ ಕಂಪನಿಯೊಂದು ಈ ಬಯೋಮೆಟ್ರಿಕ್ ಪಾವತಿ ವ್ಯವಸ್ಥೆನ ಪರಿಚಯಿಸುತ್ತಿದೆ. ಈ ಕಂಪನಿ ಆಲ್ರೆಡಿ ಐಓಟಿ ಇಂಟರ್ನೆಟ್ ಆಫ್ ಥಿಂಗ್ಸ್ ಅಂದ್ರೆ ಇಂಟರ್ನೆಟ್ ಬಳಸಿಕೊಂಡು ಕೆಲಸ ಮಾಡೋ ಹಲವು ಉಪಕರಣಗಳನ್ನ ಲಾಂಚ್ ಮಾಡಿತ್ತು. ಕ್ಯಾಮೆರಾ ಮೈಕ್ ಸ್ಪೀಕರ್ ಇರುವಂತಹ ಸ್ಮಾರ್ಟ್ ಹೆಲ್ಮೆಟ್ ಕನ್ನಡಕದಂತೆ ಧರಿಸಬಹುದಾದ ಸ್ಮಾರ್ಟ್ ಐಬ್ರೋ ಸ್ಮಾರ್ಟ್ ಲಾಕ್ ನಂತ ವಸ್ತು ತಯಾರಿಸಿತ್ತು ಅದೇ ರೀತಿ ಈಗ ಪೇಮೆಂಟ್ ಡಿವೈಸ್ ಕ್ಷೇತ್ರಕ್ಕೂ ಕಾಲಿಟ್ಟಿದೆ ತಂಪೆ ಅನ್ನೋ ಅತ್ಯಾಧುನಿಕ ಬಯೋಮೆಟ್ರಿಕ್ ಪೇಮೆಂಟ್ ಉಪಕರಣವನ್ನ ಅಭಿವೃದ್ಧಿ ಪಡಿಸಿದೆ ಇದರಲ್ಲಿ ಮೊಬೈಲ್ ಪಿನ್ ಕೋಡ್ ಯಾವುದರ ತಾಪತ್ರೆಯನು ಇಲ್ದೆ ಕೇವಲ ಅಮೌಂಟ್ ಎಂಟರ್ ಮಾಡಿ ಹೆಬ್ಬೆರಳನ್ನ ಸ್ಕ್ಯಾನ್ ಮಾಡಿದರೆ ಸಾಕು ಪೇಮೆಂಟ್ ಆಗುತ್ತೆ ಅಂತ ಪ್ರಾಕ್ಸಿಸ್ಗಿ ಕಂಪನಿ ಹೇಳಿಕೊಂಡಿದೆ ಇದಕ್ಕಾಗಿ ತಂಪೆ ಆಧಾರ್ ಮತ್ತು ಯುಪಿಐ ವ್ಯವಸ್ಥೆ ಎರಡನ್ನ ಒಟ್ಟಿಗೆ ಲಿಂಕ್ ಮಾಡ್ತಿದೆ ಹೀಗೆ ಕೆಲಸ ಮಾಡುತ್ತೆ ತಂಪೆನ ತುಂಬಾ ಸಿಂಪಲ್ ಆಗಿ ಡಿಸೈನ್ ಮಾಡಲಾಗಿದೆ.
ಇದರಲ್ಲಿ ಕೇವಲ ಒಂದೇ ಡಿವೈಸ್ ಇರುತ್ತೆ ನಿಮಗೆ ಸ್ಕ್ರೀನ್ ಮೇಲೆ ಕಾಣಿಸ್ತಿರಬಹುದು ಸಾಮಾನ್ಯವಾಗಿ ಹೋಟೆಲ್ಗಳಲ್ಲಿ ಬಿಲ್ ಹಾಕೋಕೆ ಬಳಸ್ತಾರಲ್ಲ ಆ ತರದೊಂದು ಯಂತ್ರ ಇರುತ್ತೆ ಅದರಲ್ಲಿ ಮಾಮೂಲಿ ಕ್ಯೂಆರ್ ಕೋಡ್ ಕಾರ್ಡ್ ಇಟ್ಕೊಳ್ಳೋ ಕಾರ್ಡ್ ಹೋಲ್ಡರ್ ಪಕ್ಕದಲ್ಲಿ ಆಫೀಸ್ ಕಾಲೇಜ್ಗಳಲ್ಲಿ ತಮ್ಮ ಮೂಲಕ ಅಟೆಂಡೆನ್ಸ್ ತಗೊಳೋಕೆ ಬಳಸ್ತಾರಲ್ಲ ಆ ತರದೊಂದು ಬಯೋಮೆಟ್ರಿಕ್ ಅಂತ ಹಾಗೆ ಹಿಂಭಾಗದಲ್ಲಿ ನಂಬರ್ನ ಫೀಡ್ ಮಾಡೋಕೆ ಕೀಪ್ಯಾಡ್ ಮತ್ತು ಚಿಕ್ಕದೊಂದು ಸ್ಕ್ರೀನ್ ಇರುತ್ತೆ ಇಲ್ಲಿ ಕ್ಯೂರ್ ಕಾರ್ಡ್ನ ಅಗತ್ಯ ಏನಿಲ್ಲ ತಂಪೆಗೆ ಎಲ್ಲರೂ ಹೊಂದಿಕೊಳ್ಳುವರೆಗೆ ಕೇವಲ ಒಂದು ಆಯ್ಕೆಯಾಗಿ ಮಾತ್ರ ನೀಡಿದ್ದಾರೆ ಪೇ ಮಾಡುವವರು ತಂಪೆ ಅಥವಾ ಯುಪೇ ಎರಡರಲ್ಲಿ ಯಾವುದನ್ನಾದರೂ ಬಳಸಬಹುದು ತಂಪೆನಲ್ಲಿ ಪೇ ಮಾಡಬೇಕು ಅಂದ್ರೆ ಮೊದಲು ಅಂಗಡಿಯವರು ಎಷ್ಟು ಹಣ ಅನ್ನೋದನ್ನ ಕೀಪ್ಯಾಡ್ ನಲ್ಲಿ ಎಂಟರ್ ಮಾಡಬೇಕಾಗುತ್ತೆ ನಂತರ ಗ್ರಾಹಕ ತಮ್ಮ ಬೆರಳನ್ನ ಬಯೋಮೆಟ್ರಿಕ್ ಸೆನ್ಸಾರ್ ಮೇಲೆ ಇಡಬೇಕು ಆಗ ತಂಪೆ ಉಪಕರಣ ಗ್ರಾಹಕನ ಬಯೋಮೆಟ್ರಿಕ್ ಮಾಹಿತಿ ಉಪಕರಣದ ನಂಬರ್ ಮತ್ತು ಟೈಮ್ ಸ್ಟ್ಯಾಂಪ್ ನ ಕಲೆಕ್ಟ್ ಮಾಡುತ್ತೆ ಬಳಿಕ ಆಧಾರನ ಯುಐಡಿಎಐ ಡಾಟಾಬೇಸ್ ನಲ್ಲಿ ಆ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿನ ತಾಳೆ ಹಾಕುತ್ತೆ ಒಂದುವೇಳೆ ಅಲ್ಲಿ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ನಿಮ್ಮ ಐಡೆಂಟಿಟಿ ಕನ್ಫರ್ಮ್ ಆದ್ರೆ ಮುಂದಿನ ಹಂತದ ಪ್ರೊಸೀಜರ್ ನಡೆಯುತ್ತೆ ತಂಪೆ ವ್ಯವಸ್ಥೆ ಆಧಾರ್ ಐಡೆಂಟಿಟಿ ಮೂಲಕ ಯುಪಿ ನಲ್ಲಿ ಟ್ರಾನ್ಸಾಕ್ಷನ್ನ ಇನಿಷಿಯೇಟ್ ಮಾಡುತ್ತೆ.
ನಿಮ್ಮ ಪೇಮೆಂಟ್ ಸಕ್ಸಸ್ಫುಲ್ ಆಗುತ್ತೆ ಈಗಾಗಲೇ ತಂಪೆನ ಪೈಲಟ್ ಟೆಸ್ಟ್ ಅಂದ್ರೆ ಪ್ರಾಯೋಗಿ ಪರೀಕ್ಷೆ ಕೂಡ ನಡೆದಿದ್ದು ಹತ್ತಾರು ಅಂಗಡಿಗಳಲ್ಲಿ ಅಳವಡಿಸಿ ಟ್ರಯಲ್ ಮಾಡಲಾಗಿದೆ ಈ ವೇಳೆ ಯಾವುದೇ ತೊಂದರೆ ಇಲ್ದೆ ತಂಪೆ ಚೆನ್ನಾಗಿ ಕೆಲಸ ಮಾಡ್ತು ಅಂತ ಕಂಪನಿ ಹೇಳಿಕೊಂಡಿದೆ ಅಲ್ದೆ ಈ ಸಾಹಸಕ್ಕೆ ಈಗಾಗಲೇ ದೇಶದ ಹಣಕಾಸಿನ ಬಾಸ್ ಆರ್ಬಿಐ ಅನುಮೋದನೆ ಕೂಡ ಸಿಕ್ಕಿದೆ ಸದ್ಯ ಮುಂದಿನ ಹಂತದ ಚಾಲನೆಗಾಗಿ ಆಧಾರ ಪ್ರಾಧಿಕಾರ ಯುಐಡಿಎಐ ಮತ್ತು ಯುಪಿಐ ನಿಯಂತ್ರಕ ಎನ್ಪಿಸಿಐನ ಅನುಮತಿಗಾಗಿ ಕಾಯುತಿದೆ ಈ ಸಂಬಂಧ ಮಾತನಾಡಿರೋ ಪ್ರಾಕ್ಸಿಗಿ ಸಂಸ್ಥಾಪಕ ಸಿಇಓ ಪುಲ್ಕಿತ ಹೂಜ ಕಳೆದ ದಶ ದಲ್ಲಿ ಭಾರತ ಆಧಾರ್ ಮತ್ತು ಯುಪಿಐ ಕಟ್ಟುವಂತ ಕಠಿಣ ಪರಿಶ್ರಮದ ಕೆಲಸ ಮಾಡ್ತು ತಂಪೆ ಈಗ ಅವೆರಡು ವೇದಿಕೆಗಳನ್ನ ಕ್ರಿಯೇಟಿವ್ ಆಗಿ ಲಿಂಕ್ ಮಾಡ್ತಿದೆ ಭಾರತದ ಡಿಜಿಟಲ್ ಪೇಮೆಂಟ್ ಹಾದಿಯಲ್ಲಿ ತಂಪೆ ನ್ಯಾಚುರಲ್ ಎವಲ್ಯೂಷನ್ ಅಂತ ಹೇಳ್ಕೊಂಡಿದ್ದಾರೆ 2000 ರೂಪಾಯಿಗೆ ಸಿಗುತ್ತೆ ಹೌದು ಸ್ನೇಹಿತರೆ ಯುಪಿ ನಂತೆ ತಂಪೆಯನ್ನ ಕೂಡ ಸಾಮಾನ್ಯ ಜನರ ಜೀವನದ ಭಾಗ ಮಾಡಬೇಕೆನ್ನೋದು ತಮ್ಮ ಗುರಿ ಅಂತ ಪ್ರಾಕ್ಸಿಸ್ ಕಂಪನಿ ಹೇಳ್ಕೊಂಡಿದೆ. ಈಗಾಗಲೇ ಕೇವಲ 2000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಈ ಉಪಕರಣ ಮಾರೋಕೆ ಮುಂದಾಗಿದೆ. ದಿನಸಿ ಅಂಗಡಿ ತರಕಾರಿ ಅಂಗಡಿ ಸೇರಿದಂತೆ ಯಾರು ಬೇಕಾದ್ರೂ ಈ ಡಿವೈಸ್ ನ ಕೊಳ್ಳಬಹುದು ಅಂದಿದೆ. ಇದರಲ್ಲೇ ಇನ್ಬಿಲ್ಟ್ ಬ್ಯಾಟರಿ ಇರುತ್ತೆ ಹೀಗಾಗಿ ನಿರಂತರ ಕರೆಂಟ್ ಪೂರೈಕೆ ಕೂಡ ಅವಶ್ಯಕತೆ ಇಲ್ಲ. ವೈಫೈ ಗೆ ಕನೆಕ್ಟ್ ಮಾಡಿದ್ರೆ ಸಾಕು ಅಲ್ಲದೆ ಗ್ರಾಹಕರು ಯಾವುದೇ ಹೊಸ ಆಪ್ ಕೂಡ ಡೌನ್ಲೋಡ್ ಮಾಡಬೇಕಿಲ್ಲ.
ಅಂಗಡಿಯವರು ಈ ಡಿವೈಸ್ ನ ಪರ್ಚೇಸ್ ಮಾಡಿದ್ರೆ ಮುಗೀತು. ಗ್ರಾಹಕರ ಕಡೆಯಿಂದ ಯಾವುದೇ ಕೆಲಸ ಇರಲ್ಲ. ಹೀಗಾಗಿ ನಮ್ಮ ಬೆರಳೆ ಇಲ್ಲಿ ನಮ್ಮ ವ್ಯಾಲೆಟ್ ಆಗಿರಲಿದೆ. ಇದರಿಂದ ಡಿಜಿಟಲ್ ಪೇಮೆಂಟ್ ಇನ್ನಷ್ಟು ಸ್ಪೀಡ್ ಆಗುತ್ತೆ. ಸ್ಮಾರ್ಟ್ ಫೋನ್ ಇಲ್ಲದೆ ಇರೋರು ಕೂಡ ಪೇಮೆಂಟ್ ಮಾಡಬಹುದು. ಜೊತೆಗೆ ಸ್ಮಾರ್ಟ್ ಫೋನ್ ಪೇಮೆಂಟ್ ಆಪ್ ಗಳನ್ನ ಆಪರೇಟ್ ಮಾಡೋಕೆ ಬರದೇ ಇರೋರು. ತಾತಾ ಅಜ್ಜಂದಿರು ಕೂಡ ತಂಪೆನ ಬಳಸಬಹುದು. ಆಲ್ರೆಡಿ ಭಾರತ ಡಿಜಿಟಲ್ ಪೇಮೆಂಟ್ ನ ಕಿಂಗ್ ಪ್ರತಿ ನಿಮಿಷಕ್ಕೆ ಭಾರತದಲ್ಲಿ ನಾಲ್ಕರಿಂದ ಐದು ಲಕ್ಷ ಆನ್ಲೈನ್ ಟ್ರಾನ್ಸಾಕ್ಷನ್ ನಡೆಯುತ್ತೆ. ವೀಸಾ ಕಾರ್ಡ್ ನ ಕೂಡ ಮೀರಿಸಿ ಯುಪಿಐ ವಿಶ್ವದ ನಂಬರ್ ಒನ್ ರಿಯಲ್ ಟೈಮ್ ಪೇಮೆಂಟ್ ವ್ಯವಸ್ಥೆ ಆಗಿದೆ. ಹೀಗಿರುವಾಗ ಸ್ಮಾರ್ಟ್ ಫೋನ್ ಇಲ್ಲದೆ ಇರೋರು ಕೂಡ ಆನ್ಲೈನ್ ಪೇಮೆಂಟ್ ವ್ಯವಸ್ಥೆಯೊಳಗೆ ಬರ್ತಾರೆ ಅಂದ್ರೆ ದೊಡ್ಡ ಕ್ರಾಂತಿನೇ ಆಗುತ್ತೆ. ಭಾರತದ ಆರ್ಥಿಕತೆ ಚಟುವಟಿಕೆಗಳಿಗೆ ದೊಡ್ಡ ಬೂಸ್ಟ್ ಸಿಗುತ್ತೆ ಅಂತ ಹೇಳಲಾಗುತ್ತೆ. ದುರುಪಯೋಗದ ಆತಂಕ. ಹೌದು ಸ್ನೇಹಿತರೆ ತಂಪೆನಿಂದ ಕ್ರಾಂತಿ ಆಗೋದೇನೋ ನಿಜ. ಆದರೆ ಇದರಿಂದ ಆನ್ಲೈನ್ ಫ್ರಾಡ್ಗಳು ಇಮ್ಮಡಿಯಾಗುವ ಅಪಾಯ ಕೂಡ ಅಷ್ಟೇ ಇದೆ. ಯಾಕಂದ್ರೆ ಬಯೋಮೆಟ್ರಿಕ್ಸ್ ನಲ್ಲಿ ಅತಿ ಹೆಚ್ಚು ಪ್ರೈವಸಿ ರಿಸ್ಕ್ ಇರುತ್ತೆ. ಪಿನ್ ಕೋಡ್ ಎಂಟರ್ ಮಾಡಿ ಸ್ಕ್ಯಾನ್ ಮಾಡಿ ಪೇ ಮಾಡೋದಿದ್ದಾಗ ಸ್ವಲ್ಪನಾದರೂ ವಿವೇಚನೆ ಬಳಸಬೇಕಾಗುತ್ತೆ. ಪೇ ಮಾಡೋಕೆ ಸಾಕಷ್ಟು ಸಮಯ ಇರುತ್ತೆ. ಹೀಗಿದ್ದಾಗ ಕೂಡ ಆಲ್ರೆಡಿ ಎಷ್ಟೊಂದು ಆನ್ಲೈನ್ ಫ್ರಾಡ್ ನಡೀತಿದೆ ಅಂತ ನೀವೇ ನೋಡ್ತಿದ್ದೀರಾ. ಅಂತದ್ರಲ್ಲಿ ಇದ್ಯಾವುದು ಬೇಡ ಕೇವಲ ಬೆರಳು ಹೊಂದಿದ್ರೆ ಸಾಕು ಅಂತಾದ್ರೆ ಎಂತೆಂತ ಅಪರಾಧ ಕೃತ್ಯಗಳು ನಡಿಬಹುದು ಅನ್ನೋದನ್ನ ಇಮ್ಯಾಜಿನ್ ಕೂಡ ಮಾಡೋಕೆ ಆಗಲ್ಲ ಅಲ್ದೆ ಪಾಸ್ವರ್ಡ್ ಕದ್ರೆ ಬೇಕಾದರೆ ಚೇಂಜ್ ಮಾಡಬಹುದು ಆದರೆ ತಂಬ ಪ್ರಿಂಟ್ ಅಂತ ಬಯೋಮೆಟ್ರಿಕ್ ಮಾಹಿತಿ ಕದ್ರೆ ಹೇಗೆ ಚೇಂಜ್ ಮಾಡ್ತೀರಾ ಈ ಮಾಹಿತಿ ಕದಿಯೋಕೆ ಕಳರು ಏನು ಬೇಕಾದರೂ ಮಾಡಬಹುದು ಜೊತೆಗೆ ಬಯೋಮೆಟ್ರಿಕ್ ಮಾಹಿತಿ ಸೋರಿಕೆಯಾಗೋ ಅಪಾಯ ಕೂಡ ಇರುತ್ತೆ ಫಿಂಗರ್ ಪ್ರಿಂಟ್ ಮಾಹಿತಿ ಡೇಟಾಬೇಸ್ ಗಷ್ಟೇ ಹೋಗದೆ ಆ ಡಿವೈಸ್ ನಲ್ಲೂ ಸ್ಟೋರ್ ಆದರೆ ನಂತರ ಅದನ್ನ ಯಾವುದಕ್ಕಾದರೂ ಬಳಸಿಕೊಬಹುದು ಆಸ್ತಿ ಬದಲಾವಣೆಯಂತ ಗಂಭೀರ ಅಪರಾಧಗಳಿಗೂ ಉಪಯೋಗಿಸಬಹುದು ಹೀಗಾಗಿ ಇಷ್ಟೆಲ್ಲ ಇರುವಾಗ ಸರ್ಕಾರ ತಂಪೆ ಗೆ ನಿಜವಾಗಲೂ ಅನುಮತಿ ನೀಡುತ್ತೆ ಅನ್ನೋ ಅನುಮಾನ ಇದೆ ತಂಪೆ ಮುಂದೆ ಸಾಕಷ್ಟು ಸವಾಲುಗಳಿವೆ.
ಯಾವುದೇ ಹೊಸ ಟೆಕ್ನಾಲಜಿ ಡಿಜಿಟಲ್ ಉಪಕರಣ ಬಂದಾಗಲೂ ದುರ್ಬಳಕೆ ಆಗುವ ಚಾನ್ಸಸ್ ಇದ್ದೇ ಇರುತ್ತೆ ಈಗ ಯುಪಿ ಬಂದಾಗಲೇ ಆರಂಭದಲ್ಲಿ ಎಷ್ಟೊಂದು ಚಾಲೆಂಜಸ್ ಇತ್ತು ಆದರೆ ಅದನ್ನೆಲ್ಲ ಮೀರಿ ಇವತ್ತು ವಿಶ್ವವೇ ಮೆಚ್ಚುವ ವ್ಯವಸ್ಥೆ ಆಗಿಲ್ಲ ಹಾಗಾಗಿ ಜಗತ್ತು ತಿರುಗಿ ನೋಡುವಂತಹ ಸಾಧನೆ ಮಾಡಬೇಕು ಅಂತ ಆವಿಷ್ಕಾರಗಳನ್ನ ಮಾಡಬೇಕು ಅಂದ್ರೆ ಈ ಎಲ್ಲಾ ಚಾಲೆಂಜಸ್ ನ ಫೇಸ್ ಮಾಡಲೇಬೇಕು ಕೇವಲ ಸಮಸ್ಯೆ ಇದೆ ಅಂದ ತಕ್ಷಣ ಆ ಪ್ರಯತ್ನವೇ ನಡಬಾರದು ಅಂತ ಹೇಳಬಾರದು ಅದೇ ರೀತಿ ತಂಪೆ ಕೂಡ ಈ ಎಲ್ಲಾ ಸಮಸ್ಯೆನ ಸಾಲ್ವ್ ಮಾಡಿ ಆದಷ್ಟು ಬೇಗ ಜನರ ಬಳಕೆಗೆ ಸಿಗಲಿ ಅನ್ನೋದು ನಮ್ಮ ಆಶಯ.