ಕರ್ನಾಟಕದಲ್ಲಿನ 11 ರೈಲುಗಳು ರದ್ದು ರಾಜ್ಯದ 21 ರೈಲು ಸೇವೆಯಲ್ಲಿ ವ್ಯತ್ಯಯ ಡಿಸೆಂಬರ್ ತಿಂಗಳಿನಲ್ಲಿ ಅದರಲ್ಲೂ ವಿಶೇಷವಾಗಿ ಡಿಸೆಂಬರ್ 17 20 21 ಮತ್ತು 24ರ ಸುಮಾರಿಗೆ ಬೆಂಗಳೂರಿನಿಂದ ತುಮಕೂರು ಹುಬ್ಬಳ್ಳಿ ಶಿವಮೊಗ್ಗ ಅಥವಾ ಮೈಸೂರು ಕಡೆಗೆ ರೈಲಿನಲ್ಲಿ ಪ್ರಯಾಣಿಸಲು ಯೋಜನೆ ಹಾಕಿಕೊಂಡಿದ್ದೀರಾ ಹಾಗಿದ್ದರೆ ಈ ಸುದ್ದಿ ನಿಮಗೆ ಅತ್ಯಂತ ಮುಖ್ಯವಾಗಿದೆ ನಿಮ್ಮ ಪ್ರಯಾಣದ ಪ್ಲಾನ್ ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಹೌದು ನೈರುತ್ಯ ರೈಲ್ವೆ ಇಲಾಖೆಯು ತುಮಕೂರು ಭಾಗದಲ್ಲಿ ನಡೆಯುತ್ತಿರುವ ಕೆಲವು ಅನಿವಾರ್ಯ ಹಾಗೂ ತುರ್ತು ಇಂಜಿನಿಯರಿಂಗ್ ಕಾಮಗಾರಿಗಳ ಹಿನ್ನಲೆ ಲೆಯಲ್ಲಿ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಕೆಲವು ರೈಲುಗಳನ್ನ ಸಂಪೂರ್ಣವಾಗಿ ರದ್ದುಗೊಳಿಸಿದರೆ ಇನ್ನು ಕೆಲವನ್ನ ಅರ್ಧದಾರಿಯಲ್ಲೇ ಮೊಟಕುಗೊಳಿಸಲಾಗಿದೆ ಅಷ್ಟೇ ಅಲ್ಲ ಹಲವು ಎಕ್ಸ್ಪ್ರೆಸ್ ರೈಲುಗಳ ಮಾರ್ಗವನ್ನೇ ಬದಲಾವಣೆ ಮಾಡಲಾಗಿದೆ ಯಾವ ಯಾವ ರೈಲುಗಳು ರದ್ದಾಗಿದೆ ಯಾವ ಯಾವ ದಿನಾಂಕದಂದು ಈ ಸಮಸ್ಯೆ ಇರಲಿದೆ ಪರ್ಯಾಯ ಮಾರ್ಗಗಳು ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೈರುತ್ಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ ತುಮಕೂರು ಮತ್ತು ಮಲ್ಲಸಂದ್ರ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಗತ್ಯವಾದ ಇಂಜಿನಿಯರಿಂಗ್ ಕಾಮಗಾರಿಗಳನ್ನ ಹಮ್ಮಿಕೊಳ್ಳಲಾಗಿದೆ ಪ್ರಮುಖವಾಗಿ ಮೂರು ಕೆಲಸಗಳು ನಡೆಯಲಿವೆ ಅವುಗಳನ್ನ ನೋಡೋದಾದರೆ ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್ವೆ ಇಲ್ಲಿ ಹಳೆಯ ಗರ್ಡರ್ಗಳನ್ನ ಬದಲಾಯಿಸಿ.
ಹೊಸ ಹೊಸ ಗಾರ್ಡನ್ಗಳನ್ನ ಅಳವಡಿಸುವ ಕಾಮಗಾರಿ ನಡೆಯಲಿದೆ ಇನ್ನು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಪಾದಚಾರಿ ಮೇಲ್ಸತ್ತಿವೆ ನಿರ್ಮಾಣ ಮಾಡಲಾಗುತ್ತಿದೆ ನಂತರ ಲೆವೆಲ್ ಕ್ರಾಸಿಂಗ್ ಕಾಮಗಾರಿ ನಿಡುವಂದ ಮತ್ತು ಹೀರೆಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 28ರಲ್ಲಿ ನಿರ್ವಹಣ ಕಾರ್ಯ ನಡೆಯಲಿದೆ ಸುರಕ್ಷತೆಯ ದೃಷ್ಟಿಯಿಂದ ಈ ಕಾಮಗಾರಿಗಳು ಅನಿವಾರ್ಯವಾಗಿರುವುದರಿಂದ ರೈಲು ಸಂಚಾರ ಚಾರವನ್ನ ನಿಯಂತ್ರಿಸುವುದು ರೈಲ್ವೆ ಇಲಾಖೆಗೆ ಅನಿವಾರ್ಯವಾಗಿದೆ ಸಂಪೂರ್ಣ ರದ್ದಾದ ರೈಲುಗಳು ಯಾವ್ಯಾವು ಈಗ ಮೊದಲಿಗೆ ಸಂಪೂರ್ಣವಾಗಿ ರದ್ದುಗೊಂಡಿರುವ ರೈಲುಗಳ ಬಗ್ಗೆ ನೋಡೋಣ ನೀವು ಡಿಸೆಂಬರ್ 17 ಹಾಗೂ ಡಿಸೆಂಬರ್ 24ರಂದು ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದರೆ ಈ ಕೆಳಗಿನ ರೈಲುಗಳು ಆ ದಿನದಲ್ಲಿ ಓಡುವುದಿಲ್ಲ ಚಿಕ್ಕಮಗಳೂರು ಯಶವಂತಪುರ ಎಕ್ಸ್ಪ್ರೆಸ್ ರೈಲು ಸಂಖ್ಯೆ 16239 ಇದು ದೈನಂದಿನ ಎಕ್ಸ್ಪ್ರೆಸ್ ರೈಲ್ ಆಗಿದ್ದು ಡಿಸೆಂಬರ್ 17 ಮತ್ತು 24 ರಂದು ಸಂಚರಿಸುವುದಿಲ್ಲ. ಯಶವಂತಪುರ ಚಿಕ್ಕಮಗಳೂರು ಎಕ್ಸ್ಪ್ರೆಸ್ ರೈಲು ಸಂಖ್ಯೆ 16240 ಇದು ಕೂಡ ಡಿಸೆಂಬರ್ 17 ಮತ್ತು 24ರಂದು ರದ್ದಾಗಿದೆ. ಕೆಎಸ್ಆರ್ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ರೈಲು ಸಂಖ್ಯೆ 12614 ಡಿಸೆಂಬರ್ 17 ಮತ್ತು 24ರಂದು ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಈ ರೈಲು ಸೇವೆ ಲಭ್ಯವಿರುವುದಿಲ್ಲ ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿಸಿದ ಪ್ರಯಾಣಿಕರಿಗೆ ರೈಲ್ವೆ ನಿಯಮಾನುಸಾರ ಹಣ ಮರುಪಾವತಿಯಾಗಲಿದೆ ಭಾಗಶಹ ರದ್ದಾದ ರೈಲುಗಳು ಯಾವ್ಯಾವು ಇನ್ನು ಕೆಲವು ರೈಲುಗಳು ಪೂರ್ತಿಯಾಗಿರತ್ತಾಗಿಲ್ಲ ಆದರೆ ತಮ್ಮ ಗಮ್ಯ ಸ್ಥಾನವನ್ನ ತಲುಪುವ ಮೊದಲೇ ಅಂತ್ಯಗೊಳ್ಳಲಿವೆ ಅಥವಾ ನಿಗದಿತ ನಿಲ್ದಾಣದ ಬದಲಾಗಿ ಬೇರೆ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿವೆ ಅವುಗಳನ್ನು ನೋಡೋದಾದರೆ ಡಿಸೆಂಬರ್ 17 20 21 ಮತ್ತು 24ರಂದು ಅನ್ವಯವಾಗುವಂತೆ ರೈಲು ಸಂಖ್ಯೆ 665676567 ಕೆಎಸ್ಆರ್ ಬೆಂಗಳೂರು ತುಮಕೂರು ಈ ರೈಲು ತುಮಕೂರುವ ವರೆಗೆ ಹೋಗುವುದಿಲ್ಲ ಇದು ದೊಡ್ಡ ಬೆಲೆ ನಿಲ್ದಾಣದಿಂದ ತನ್ನ ಪ್ರಯಾಣವನ್ನ ಅಂತ್ಯಗೊಳಿಸಲಿದೆ. ಅಂದರೆ ದೊಡ್ಡಬೆಲೆ ಮತ್ತು ತುಮಕೂರು ನಡುವೆ ಈ ರೈಲು ಇರುವುದಿಲ್ಲ.
ರೈಲು ಸಂಖ್ಯೆ 66572 ತುಮಕೂರು ಕೆಆರ್ಎಸ್ ಬೆಂಗಳೂರು ತುಮಕೂರಿನಿಂದ ಹೊರಡಬೇಕಿದ್ದ ಈ ರೈಲು ತುಮಕೂರಿನ ಬದಲು ದೊಡ್ಡಬೆಲೆ ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಿದೆ. ತಾಳಗುಪ್ಪ ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ 20652 ಶಿವಮೊಗ್ಗದ ಸಾಗರ ಕಡೆಯಿಂದ ಬರುವ ಈ ರೈಲು ಅರಸಿಕೆರೆ ನಿಲ್ದಾಣದಲ್ಲೇ ಅಂತ್ಯಗೊಳ್ಳಲಿದೆ. ಅಂದರೆ ಅರಸಿಕೆರೆಯಿಂದ ಬೆಂಗಳೂರಿಗೆ ಈ ರೈಲು ಬರುವುದಿಲ್ಲ. ಪ್ರಯಾಣಿಕರು ಅರಸಿಕೆರೆಯಿಂದ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಕೆಎಸ್ಆರ್ ಬೆಂಗಳೂರು ಧಾರವಾಡ ಎಕ್ಸ್ಪ್ರೆಸ್ 12725 ಬೆಂಗಳೂರಿನಿಂದ ಹೊರಡಬೇಕಿದ್ದ ಸಿದ್ದಗಂಗಾ ಇಂಟರ್ಸಿಟಿ ಎಕ್ಸ್ಪ್ರೆಸ್ ಬೆಂಗಳೂರಿನಿಂದ ರದ್ದಾಗಿದ್ದು ಇದು ಅರಸಿಕೆರೆ ನಿಲ್ದಾಣದಿಂದ ತನ್ನ ಪ್ರಯಾಣ ಆರಂಭಿಸಿ ಧಾರವಾಡಕ್ಕೆ ಹೋಗಲಿದೆ ಇನ್ನು ಡಿಸೆಂಬರ್ 17 ಮತ್ತು 24ರಂದು ಮಾತ್ರ ಅನ್ವಯವಾಗುವಂತೆ ಧಾರವಾಡ ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ 12726 ಧಾರವಾಡದಿಂದ ಬರುವ ಈ ರೈಲು ಅರಸಿಕೆರೆಗೆ ಬಂದು ನಿಲ್ಲಲಿದೆ. ಅರಸಿಕೆರೆ ಮತ್ತು ಬೆಂಗಳೂರು ನಡುವೆ ಸಂಚಾರ ಇರುವುದಿಲ್ಲ. ಚಾಮರಾಜನಗರ ತುಮಕೂರು ಪ್ಯಾಸೆಂಜರ್ 56281 ಈ ರೈಲು ತುಮಕೂರಿಗೆ ಬರುವ ಬದಲಾಗಿ ಚಿಕ್ಕಬಾಣವರ ನಿಲ್ದಾಣದಲ್ಲೇ ಪ್ರಯಾಣ ಮುಗಿಸಲಿದೆ ರೈಲುಗಳ ಮಾರ್ಗ ಬದಲಾವಣೆ ತುಮಕೂರು ಮಾರ್ಗದಲ್ಲಿ ಕಾಮಗಾರಿ ಇರುವುದರಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿ ಕಡೆಗೆ ಹೋಗುವ ಹಲವು ರೈಲುಗಳನ್ನ ಹಾಸನ ಮಾರ್ಗವಾಗಿ ತಿರುಗಿಸಲಾಗಿದೆ ಈ ರೈಲುಗಳು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಿಗೆ ಬರುವುದಿಲ್ಲ ಎಂಬುದು ಅತಿ ಮುಖ್ಯವಾದ ಸಂಗತಿ ವಾಸ್ಕೋಡಿಗಾಮ ಯಶವಂತಪುರ ಎಕ್ಸ್ಪ್ರೆಸ್ 17310 ಡಿಸೆಂಬರ್ 16 ಮತ್ತು 23ರಂದು ಗೋವಾದಿಂದ ಹೊರಡುವ ಈ ರೈಲು ಅರಸಿಕೆರೆ ತಲುಪಿದ ನಂತರ ತುಮಕೂರು ಕಡೆ ಬಾರದೆ ಹಾಸನ ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ ಹಾಗಾಗಿ ತಿಪಟೂರು ಮತ್ತು ತುಮಕೂರಿನಲ್ಲಿ ಇಳಿಯುವ ಪ್ರಯಾಣಿಕರು ಗಮನಿಸಬೇಕು ವೇಲಂಕಣಿ ವಾಸ್ಕೋಡ್ಗಾಮ ಎಕ್ಸ್ಪ್ರೆಸ್ 17316 ಡಿಸೆಂಬರ್ 16 23ರಂದು ಹೊರಡುವ ಈ ರೈಲು ಚಿಕ್ಕಬಾಣವರದಿಂದ ನೆಲಮಂಗಲ ಹಾಸನ ಮಾರ್ಗವಾಗಿ ಅರಸಿಕೆರೆ ಸೇರಲಿದೆ ಇದು ಕೂಡ ತುಮಕೂರು ತಿಪಟೂರು ಮುಟ್ಟುವುದಿಲ್ಲ
ಮೈಸೂರು ಬೆಳಗಾವಿ ಎಕ್ಸ್ಪ್ರೆಸ್ 17326 ಡಿಸೆಂಬರ್ 17 20 21 ಮತ್ತು 24 ರಂದು ಮೈಸೂರಿನಿಂದ ಹೊರಡುವ ಈ ಎಕ್ಸ್ಪ್ರೆಸ್ ಮೈಸೂರಿನಿಂದ ನೇರವಾಗಿ ಹೊಳೆನರಸಿಪುರ ಹಾಸನ ಮೂಲಕ ಅರಸಿಕೆರೆಗೆ ಹೋಗಲಿದೆ ಮಂಡ್ಯ ಮದ್ದೂರು ಬೆಂಗಳೂರು ತುಮಕೂರು ಮಾರ್ಗದಲ್ಲಿ ಈ ರೈಲು ಬರುವುದಿಲ್ಲ ಪಾಂಡವಪುರದಿಂದ ತಿಪಟೂರಿನವರೆಗಿನ ನಿಲುಗಡೆಗಳು ರದ್ದಾಗಿವೆ ಯಶವಂತಪುರ ಶಿವಮೊಗ್ಗ ಟೌನ್ 16579 ಡಿಸೆಂಬರ್ 17 20 21 ಮತ್ತು 24ರಂದು ಯಶವಂತಪುರದಿಂದ ಹೊರಡುವ ಈ ರೈಲು ಚಿಕ್ಕಬಾಣವರ ನೆಲಮಂಗಲ ಹಾಸನ ಮಾರ್ಗವಾಗಿ ಅರಸಿಕೆರೆ ತಲುಪಿ ಅಲ್ಲಿಂದ ಶಿವಮೊಗ್ಗಕ್ಕೆ ಹೋಗಲಿದೆ ತುಮಕೂರು ಮತ್ತು ತಿಪಟೂರು ಪ್ರಯಾಣಿಕರಿಗೆ ಈ ರೈಲು ಸಿಗುವುದಿಲ್ಲ ತಡವಾಗಿ ಸಂಚರಿಸುವ ರೈಲುಗಳು ರೈಲುಗಳ ರದ್ದತಿ ಮತ್ತು ಮಾರ್ಗ ಬದಲಾವಣೆ ಒಂದಡಿಯಾದರೆ ಇನ್ನು ಕೆಲವು ರೈಲುಗಳ ವೇಳಾಪಟ್ಟಿಯನ್ನ ಮರುನಿಗದಿ ಮಾಡಲಾಗಿದೆ ಅಂದರೆ ಈ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ ತಡವಾಗಿ ಹೊರಡಲಿವೆ ವೇಳಾಪಟ್ಟಿ ಮರುನಿಗದಿ ಉದಯಪುರ ಸಿಟಿ ಮೈಸೂರು ಹಂಸಫರ್ ಎಕ್ಸ್ಪ್ರೆಸ್ 19667 ಡಿಸೆಂಬರ್ 15 ಮತ್ತು 22ರಂದು ಉದಯಪುರದಿಂದ ಹೊರಡುವ ಈ ರೈಲು ಮೂರು ಗಂಟೆ ತಡವಾಗಿ ಹೊರಡಲಿದೆ ಶ್ರೀಗಂಗನಗರ ತಿರುಚಿರಾಪಳ್ಳಿ ಹಂಸಫರ್ ಎಕ್ಸ್ಪ್ರೆಸ್ 22497 ಶ್ರೀಗಂಗಾನಗರದಿಂದಎರಡು ಗಂಟೆ ತಡವಾಗಿ ಹೊರಡಲಿದ್ದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ ಯಶವಂತಪುರ ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ 12649 ಡಿಸೆಂಬರ್ 17 ಮತ್ತು 24ರಂದು ಯಶವಂತಪುರದಿಂದ ನಿಗದಿತ ಸಮಯಕ್ಕಿಂತಎಡು ಗಂಟೆ ತಡವಾಗಿ ಆಗಿ ಹೊರಡಲಿದೆ ತುಮಕೂರು ಚಾಮರಾಜನಗರ ಪ್ಯಾಸೆಂಜರ್ 56282 ಹುಬ್ಬಳ್ಳಿ ತಿರುವನಂತಪುರಂ ಎಕ್ಸ್ಪ್ರೆಸ್ 127 ಡಿಸೆಂಬರ್ 17 ಮತ್ತು 24 ರಂದು ಈ ರೈಲುಗಳು ಕೂಡ ತಮ್ಮ ಆರಂಭಿಕ ನಿಲ್ದಾಣದಿಂದಎರಡು ಗಂಟೆ ತಡವಾಗಿ ಪ್ರಯಾಣ ಬೆಳೆಸಲಿವೆ.
ಮಾರ್ಗ ಮಧ್ಯೆ ತಡವಾಗುವ ರೈಲುಗಳು ಡಿಸೆಂಬರ್ 17 ಮತ್ತು 24ರಂದು ಯಶವಂತಪುರ ಚಂಡಿಗಡ ಎಕ್ಸ್ಪ್ರೆಸ್ 22685 ಯಶವಂತಪುರ ವಾಸ್ಕೋ ಎಕ್ಸ್ಪ್ರೆಸ್ 17309 ಮತ್ತು ಕೆಎಸ್ಆರ್ ಬೆಂಗಳೂರು ತಾಳೆಗುಪ್ಪ ಎಕ್ಸ್ಪ್ರೆಸ್ 20651 ರೈಲುಗಳು 15 ನಿಮಿಷ ತಡವಾಗಲಿವೆ ಡಿಸೆಂಬರ್ 19 ಮತ್ತು 20ರಂದು ವಾಸ್ಕೋ ಯಶವಂತಪುರ ರೈಲ್ 1731030 ನಿಮಿಷ ತಡವಾಗಿ ಚಲಿಸಲಿದೆ ವೀಕ್ಷಕರೇ ರೈಲ್ವೆ ಇಲಾಖೆಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಈ ಕ್ರಮಗಳನ್ನ ಕೈಗೊಂಡಿದೆ ಹಾಗಾಗಿ ನೀವು ಮೇಲೆ ತಿಳಿಸಿದ ದಿನಾಂಕಗಳನ್ನು ಅಂದರೆ ಪ್ರಮುಖವಾಗಿ ಡಿಸೆಂಬರ್ 17 20 21 ಮತ್ತು 24 ರಂದು ಪ್ರಯಾಣ ಮಾಡುತ್ತಿದ್ದರೆ ಒಮ್ಮೆ ಎನ್ಟಿಎಸ್ ಆಪ್ ಅಥವಾ ರೈಲ್ವೆ ವಿಚಾರಣ ಸಂಖ್ಯೆಗೆ ಕರೆ ಮಾಡಿ ನಿಮ್ಮ ರೈಲಿನ ಪ್ರಸ್ತುತ ಸ್ಥಿತಿಯನ್ನ ಖಚಿತಪಡಿಸಿಕೊಳ್ಳಿ ವಿಶೇಷವಾಗಿ ತುಮಕೂರು ಮತ್ತು ತಿಪಟೂರು ಭಾಗದ ಪ್ರಯಾಣಿಕರು ಮಾರ್ಗ ಬದಲಾವಣೆ ಗಿರುವ ರೈಲುಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಭಾಗಶಹ ರದ್ದಾಗಿರುವ ರೈಲುಗಳಲ್ಲಿ ಪ್ರಯಾಣಿಸುವವರು ಅರಸಿಕೆರೆ ಅಥವಾ ದೊಡ್ಡ ಬೆಲೆಯಿಂದ ಮುಂದಿನ ಊರುಗಳಿಗೆ ಕೆಎಸ್ಆರ್ಟಿಸಿ ಬಸ್ ಅಥವಾ ಪರ್ಯಾಯ ವ್ಯವಸ್ಥೆಯನ್ನ ಮಾಡಿಕೊಳ್ಳುವುದು ಉತ್ತಮ ರೈಲ್ವೆ ಇಲಾಖೆಗೆ ಉಂಟಾಗಿರುವ ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿದೆ


