ನೀವು ನಿಮ್ಮ ಮನೆಗಳಲ್ಲಿ ಅಡಿಗೆ ಕೆಲಸಕ್ಕೆ ಅಥವಾ ಮನೆಯನ್ನ ಸ್ವಚ್ಛವಾಗಿ ಇಟ್ಕೊಳ್ಳೋ ಕೆಲಸಕ್ಕೆ ಅಥವಾ ಯಾವುದೇ ಮನೆ ಕೆಲಸಕ್ಕೆ ನೀವು ಯಾರನ್ನಾದ್ರೂ ಡೊಮೆಸ್ಟಿಕ್ ಹೆಲ್ಪ್ ಅಥವಾ ಬೆಂಗಳೂರಿನಲ್ಲಿ ಕಾಮನ್ ಆಗಿ ಮೇಡ್ ಅಂತ ಕರೀತಾರೆ ಆ ರೀತಿ ನೇಮಕ ಮಾಡಿಕೊಳ್ತಾ ಇದ್ರೆ ಸಹಾಯಕ್ಕೆ ಯಾರನ್ನಾದರೂ ನೇಮಕ ಮಾಡಿಕೊಂಡಿದ್ರೆ ಮನೆ ಕೆಲಸಕ್ಕೆ ನಿಮಗೆ ಈ ಮಾಹಿತಿ ತುಂಬಾ ತುಂಬಾ ಇಂಪಾರ್ಟೆಂಟ್ ಆಗುತ್ತೆ ನೀವು ಗಮನ ಕೊಟ್ಟು ನೋಡ್ಲೇಬೇಕು ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ 2025 ಇದರ ಸಂಪೂರ್ಣ ಕಾರ್ಡನ್ನ ಗೆಸೆಟ್ ನೋಟಿಫಿಕೇಶನ್ ಮೂಲಕ ಸರ್ಕಾರ ಪಬ್ಲಿಕ್ ಮಾಡಿದೆ ಇದರಲ್ಲಿ ಮುಖ್ಯವಾಗಿ ಗೃಹ ಕಾರ್ಮಿಕರನ್ನ ನೇಮಿಸಿಕೊಳ್ಳುವರಿಗೆ ಅಂದ್ರೆ ಕೆಲಸ ಕೊಡೋರಿಗೆ ನೀವು ಮನೆಲ್ಲಿ ನೇಮಕ ಮಾಡಿಕೊಳ್ತಾ ಇದ್ರೆ ನಿಮಗೆ ಸಾಕಷ್ಟು ಜವಾಬ್ದಾರಿ ಹಾಗೂ ರೂಲ್ಸ್ ಹಾಕಲಾಗ್ತಾ ಇದೆ. ಈ ರೂಲ್ಸ್ ನ ಮನೆಯ ಓನರ್ಸ್ ಬ್ರೇಕ್ ಮಾಡಿದ್ರೆ 50ಸಾವ ರೂಪಾಯವರೆಗೆ ದಂಡ ಕಟ್ಟು ಸಂದರ್ಭ ಬರಬಹುದು ಹಾಗೆ ಗೃಹ ಕಾರ್ಮಿಕರಿಗೆ ಆರೋಗ್ಯ ಶಿಕ್ಷಣಕ್ಕೆ ಹಣಕಾಸಿನ ಬೆಂಬಲದಿಂದ ಹಿಡಿದು ಪೆನ್ಶನ್ ಸ್ಕೀಮ್ ವರೆಗೆ ಸಾಕಷ್ಟು ಸವಲತ್ತುಗಳನ್ನ ತರಲಾಗ್ತಾ ಇದೆ.
ಒಂದು ರೀತಿ ಇನ್ಶೂರೆನ್ಸ್ ಸ್ಕೀಮ್ ತರ ಬೆನಿಫಿಟ್ಸ್ ಕೊಡೋ ರೀತಿ ಪ್ರೊಪೋಸಲ್ ಇದೆ. ರಾಜ್ಯಾದ್ಯಂತ ಮನೆ, ಕಚೇರಿ, ಸಂಸ್ಥೆಗಳು ಹೀಗೆ ಬೇರೆ ಬೇರೆ ಕಡೆ ಕೆಲಸ ಮಾಡ್ತಿರೋ ಲಕ್ಷಾಂತರ ಗೃಹ ಕಾರ್ಮಿಕರ ಕೆಲಸಕ್ಕೆ ಅನುಕೂಲ ಮಾಡಿಕೊಡು ಉದ್ದೇಶದಿಂದ ಹಾಗೆ ಅವರಿಗೆ ಉತ್ತಮ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಈ ಮಸೂದೆ ರೆಡಿ ಮಾಡಲಾಗಿದೆ. ಇದರಲ್ಲಿರೋ ರೂಲ್ಸ್ ಗೃಹ ಕಾರ್ಮಿಕರ ಜೊತೆಗೆ ಅವರಿಗೆ ಕೆಲಸ ಕೊಡುವ ಎಂಪ್ಲಾಯರ್ಸ್ ಅವರನ್ನ ರಿಕ್ರೂಟ್ ಮಾಡೋ ಏಜೆನ್ಸಿಗಳು ಸರ್ವಿಸ್ ಪ್ರೊವೈಡರ್ ಗಳು ಎಲ್ಲರಿಗೂ ಅನ್ವಯ ಆಗುತ್ತೆ ಆದರೆ ಇತ್ತೀಚಿಗೆ ಮನೆ ಕೆಲಸದವರನ್ನ ಒದಗಿಸೋ ಆನ್ಲೈನ್ ಪ್ಲಾಟ್ಫಾರ್ಮ್ಸ್ ಕೂಡ ಬಂದಿವೆ ಅವರಿಗೂ ಈ ಮಸೂದೆಯಲ್ಲಿರೋ ರೂಲ್ಸ್ ಅಪ್ಲೈ ಆಗುತ್ತೆ.
ಈ ಮಸೂದೆಯಲ್ಲಿ ಏನೇನಿದೆ ಅಂತ ನಾವೀಗ ಕ್ವಿಕ್ ಆಗಿ ನೋಡ್ತಾ ಹೋಗೋಣ ಕಾರ್ಮಿಕರ ರಿಜಿಸ್ಟ್ರೇಷನ್ ಕಡ್ಡಾಯ ಎಸ್ ಈ ಮಸೂದೆ ಪ್ರಕಾರ ಇನ್ಮುಂದೆ ಎಲ್ಲಾ ಗೃಹ ಕಾರ್ಮಿಕರು ರಿಜಿಸ್ಟರ್ ಆಗಿರಬೇಕು ಅಂದ್ರೆ ನೊಂದಣಿ ಆಗಿರಬೇಕು ರಿಜಿಸ್ಟ್ರೇಷನ್ ಜವಾಬ್ದಾರಿ ಎಂಪ್ಲಾಯರ್ಸ್ ಹಾಗೂ ಸರ್ವಿಸ್ ಪ್ರೊವೈಡರ್ ಗಳ ಮೇಲಇರುತ್ತೆ ಯಾಕಂದ್ರೆ ಸಾಮಾನ್ಯವಾಗಿ ಗೃಹ ಕಾರ್ಮಿಕರು ಹೆಚ್ಚು ಓದಿರೋದಿಲ್ಲ ಅನಕ್ಷರಸ್ತರು ಆಗಿರಬಹುದು ಹಾಗಾಗಿ ರಿಜಿಸ್ಟ್ರೇಷನ್ ಜವಾಬ್ದಾರಿಯನ್ನ ಎಂಪ್ಲಾಯರ್ಸ್ ಗೆ ನೀವು ಕೆಲಸ ಕೊಡ್ತಾ ಇದ್ದರೆ ನಿಮ್ಮಲ್ಲಿ ಯಾರಿಗಾದ್ರೂ ನಿಮಗೆ ಆ ಜವಾಬ್ದಾರಿ ಬರುತ್ತೆ ಅಲ್ದೆ ಈ ಮಸೂದೆಯಲ್ಲಿ ಗೃಹ ಕಾರ್ಮಿಕರನ್ನ ಹಲವು ರೀತಿ ಕ್ಯಾಟಗರೈಸ್ ಮಾಡಲಾಗಿದೆ ಈ ಪೈಕಿ ಲಿವ್ ಇನ್ ಡೊಮೆಸ್ಟಿಕ್ ವರ್ಕರ್ ಅಂದ್ರೆ ನಿಮ್ಮದೇ ಮನೆಯಲ್ಲಿ ಪರ್ಮನೆಂಟ್ ಆಗಿ ಅಲ್ಲೇ ಇದ್ದುಕೊಂಡು ಅಲ್ಲೇ ಕೆಲಸ ಮಾಡಕೊಂಡು ಅಲ್ಲೇ ಊಟ ತಿಂಡಿ ಮಾಡ್ಕೊಂಡು ಅಲ್ಲೇ ವಾಸ ಮಾಡೋರು ತುಂಬಾ ಜನಗಳ ಮನೆಯಲ್ಲಿ ಆ ರೀತಿ ಕೂಡ ಇಟ್ಕೊಂಡಿರ್ತಾರೆ ಅದು ಬಿಟ್ರೆ ಪಾರ್ಟ್ ಟೈಮ್ ಕೆಲಸ ಮಾಡೋದು ತಾತ್ಕಾಲಿಕ ಕಾರ್ಮಿಕರು ಬೇರೆ ಕಾರ್ಮಿಕರ ರಿಪ್ಲೇಸ್ಮೆಂಟ್ ಗೆ ಬರೋ ಹೊಸ ಕಾರ್ಮಿಕರು ಕ್ಯಾಜುವಲ್ ಕಾರ್ಮಿಕರು ಹಾಗೂ ಮೈಗ್ರೆಂಟ್ ವರ್ಕರ್ಸ್ ಅಂದ್ರೆ ಹೊಲಸೆ ಕಾರ್ಮಿಕರು ಅಂತ ಕ್ಯಾಟಗರೈಸ್ ಮಾಡಿದ್ದಾರೆ ಎಲ್ಲಾ ಕ್ಯಾಟಗರಿಗಳಿಗೂ ರಿಜಿಸ್ಟ್ರೇಷನ್ ಕಡ್ಡಾಯ ಬೇರೆ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಕೆಲಸ ಮಾಡ್ತಿರೋರು ಕೂಡ ರಿಜಿಸ್ಟರ್ ಆಗಿರಬೇಕು ಇಲ್ಲದೆ ಹೋದ್ರೆ ಕೆಲಸ ಕೊಟ್ಟವರಿಗೆ ದಂಡ ಬೀಳುತ್ತೆ 50ಸಾವ ರೂಪಾಯವರೆಗೆ ದಂಡ ಜೈಲು ಕಾರ್ಮಿಕರ ಹೆಸರನ್ನ ಒಂದು ವೇಳೆ ರಿಜಿಸ್ಟರ್ ಮಾಡಿಸಲಿಲ್ಲ ಅಂದ್ರೆ ಅದರ ಜೊತೆಗೆ ಸರಿಯಾಗಿ ಪೇಮೆಂಟ್ ಮಾಡದೆ ಹೋದ್ರೆ ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸಿದ್ರೆ ಎಂಪ್ಲಾಯರ್ ಗಳಿಗೆ ಕೆಲಸ ಕೊಡ್ತೀರಲ್ಲ ಅವರಿಗೆ ಶಿಕ್ಷೆ ಕೊಡ್ತೀವಿ ಅಂತ ಹೇಳಿ ಸರ್ಕಾರ ಹೊರಟಿದೆ ದಂಡ ಕೂಡ ಹಾಕ್ತಾರಂತೆ ಇದರಲ್ಲಿ ಕೆಲವೊಂದಕ್ಕೆ ರಕ್ಷಣೆ ಬೇಕೇ ಬೇಕು ಯಾವುದು ಉದಾಹರಣೆಗೆ ಲೈಂಗಿಕ ಕಿರುಕುಳ ಕೊಟ್ಟರೆ 18 ವರ್ಷದೊಳಗಿನ ಮಕ್ಕಳನ್ನ ಕೆಲಸಕ್ಕೆ ಇಟ್ಕೊಂಡ್ರೆ ಅವಾಗ ಜೈಲ್ ಶಿಕ್ಷೆ ಹಾಗೂ 50,000 ರೂಪಾಯ ವರೆಗೂ ಕೂಡ ದಂಡ ಈ ತರದೆಲ್ಲ ಇದೆ ದಟ್ ಇಸ್ ಫೈನ್ ಫೇರ್ ಅಷ್ಟು ರಕ್ಷಣೆ ಬೇಕೇ ಬೇಕು ಆದರೆ ರಿಜಿಸ್ಟರ್ ಮಾಡಿಸೋ ಜವಾಬ್ದಾರಿ ಕೂಡ ನಿಮ್ಮದೆ ಇಲ್ಲದರೆ ನಿಮ್ಮ ಮೇಲೆ ಆಕ್ಷನ್ ತಗೊಳ್ತೀವಿ ಅಂತ ಹೇಳಿದ್ರೆ ತುಂಬಾ ಜನ ಕೆಲಸಕ್ಕೆ ತಗೊಳೋಕೆನೆ ಹಿಂದೆಟ್ಟು ಹಾಕಬಹುದು.
ನಾನೇ ಮಾಡ್ತೀನಯ್ಯ ಅಂತ ಹೇಳಿ ಅಥವಾ ರೋಬೋಗಳನ್ನ ಯೂಸ್ ಮಾಡ್ತೀವಿ ಅಂತ ಹೇಳಿ ಕ್ಲೀನ್ ಮಾಡಕೆಲ್ಲ ಬಂದಿದ್ದಾವೆಲ್ಲ ಈಗ ಅವುಗಳ ಮರೆ ಹೋಗಬಹುದು. ಇದರಿಂದ ಉದ್ಯೋಗದ ಲಭ್ಯತೆನೇ ಕಮ್ಮಿಯಾಗುವ ಆತಂಕ ಕೂಡ ಇರುತ್ತೆ. ಹಾಗಾಗಿ ಸ್ವಲ್ಪ ಹುಷಾರಾಗಿರಬೇಕು ಸರ್ಕಾರ ಇದನ್ನ ಫೈನಲ್ ಆಗಿ ಜಾರಿ ಮಾಡೋಕ್ಕಿಂತ ಮುಂಚೆ ಸದ್ಯಕ್ಕೆ ಇದು ಕರಡು ನಿಯಮ ಅಥವಾ ಡ್ರಾಫ್ಟ್ ಬಿಲ್ ಇದು ಇನ್ನು ಜಾರಿಯಾಗಿಲ್ಲ ತರಕ್ಕೆ ಹೊರಟಿದೀವಿ ಅಂತ ಹೇಳಿ ಪಬ್ಲಿಕ್ ಮಾಡಿದ್ದಾರೆ ಈ ರೀತಿ ಡ್ರಾಫ್ಟ್ ರೆಡಿ ಆಗಿರೋದನ್ನ ಅಷ್ಟು ಮಾತ್ರ ಅಲ್ಲ ಗೃಹ ಕಾರ್ಮಿಕರು ಕನಿಷ್ಠ ವೇತನಕ್ಕೆ ಅರ್ಹರ ಆಗಿರ್ತಾರೆ. ಓವರ್ ಟೈಮ್ ಕೆಲಸ ಮಾಡಿದ್ರೆ ಎಕ್ಸ್ಟ್ರಾ ಪೇಮೆಂಟ್ ಕೊಡಬೇಕಾಗುತ್ತೆ ಅಲ್ದೆ ಅವರು ಕೆಲಸ ಮಾಡೋ ಟೈಮಿಂಗ್ಸ್ ಕೂಡ ರೀಸನಬಲ್ ಆಗಿರಬೇಕು ನಿರಂತರವಾಗಿ ಕೆಲಸ ಮಾಡಿಸಬಾರದು ಹಾಗೆ ಅವರಿಗೆ ರೆಸ್ಟ್ ಟೈಮ್ ಕೂಡ ಕೊಡಬೇಕು ವಾರ್ಷಿಕ ರಜಗಳನ್ನ ಕೊಡಬೇಕು ಮೆಟರ್ನಿಟಿ ಬೆನಿಫಿಟ್ಸ್ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಕೂಡ ಅವಕಾಶ ಅವರಿಗೆ ಇರುತ್ತೆ ಅಥವಾ ಅರ್ಹತೆ ಇರುತ್ತೆ ಅದೇ ರೀತಿ ಕೆಲಸ ಮಾಡೋ ಮನೆಯಲ್ಲಿ ಅಥವಾ ಆಫೀಸ್ಗಳಲ್ಲಿ ಸಂಸ್ಥೆಗಳಲ್ಲಿ ಅವರ ಸಮಸ್ಯೆಗಳನ್ನ ಬಗೆಹರಿಸೋಕು ಕೂಡ ಸಿಸ್ಟಮ್ ಇರಬೇಕು ಹಾಗೆ ಕೆಲಸ ಕೊಡಬೇಕಾದ್ರೆನೆ ಅವರ ಜೊತೆ ರಿಟನ್ ಅಗ್ರಿಮೆಂಟ್ ಕೂಡ ಮಾಡ್ಕೋಬೇಕು ಇಲ್ಲದೆ ಹೋದರೆ ಅಂತವರ ವಿರುದ್ಧವು ಕ್ರಮ ತಗೊಳ್ಬಹುದು ಅಂತ ಈ ಡ್ರಾಫ್ಟ್ ಬಿಲ್ ಹೇಳ್ತಾ ಇದೆ ಅಂದ್ರೆ ಅಗ್ರಿಮೆಂಟ್ ಮಾಡಿಸ್ಕೊಬೇಕು ಇನ್ನು ಮುಂದೆ ನೀವು ಮನೆ ಕೆಲಸಕ್ಕೆ ಯಾರನಾದ್ರೂ ತಗೊಳೋ ಟೈಮ್ ನಲ್ಲಿ ಅವರೊಟ್ಟಿಗೆ ಅಗ್ರಿಮೆಂಟ್ ಮಾಡಿಸ್ಕೊಂಡೆ ತಗೋಬೇಕು ಇಲ್ಲ ಅಂದ್ರೆ ಆಕ್ಷನ್ ತಗೊಳ್ತೀವಿ ಅಂತ ಹೇಳಿ ಸರ್ಕಾರ ಕಾನೂನ್ ರೆಡಿ ಮಾಡಿದೆ ಇಲ್ಲಿ ಅಷ್ಟು ಮಾತ್ರ ಅಲ್ಲ ಗೃಹ ಕಾರ್ಮಿಕರಿಗೆ ಕೆಲಸ ನೀವು ಕೊಟ್ಟಾಗ ಅವರಿಗೆ ಕೆಲಸ ಕೊಟ್ಟು ಆ ಸಂಬಳದ ಹೊರತು ಪಡಿಸಿ ಕೂಡ 5% ವೆಲ್ನೆಸ್ ಫೀಸ್ ಕೊಡಬೇಕು ಅಂತಲೂ ಸರ್ಕಾರ ನಿಯಮ ತರತಾ ಇದೆ.
ಗೃಹ ಕಾರ್ಮಿಕರಿಗೆ ಕಲ್ಯಾಣ ನಿಧಿ ಸೃಷ್ಟಿ ಎಸ್ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಯನ್ನ ಸೃಷ್ಟಿಸುವ ಪ್ರಪೋಸಲ್ ಇದೆ ಈ ಫಂಡನ್ನ ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಬೋರ್ಡ್ ನಿರ್ವಹಣೆ ಮಾಡುತ್ತೆ ಸರ್ಕಾರದೊಂದಿಗೆ ರಿಜಿಸ್ಟರ್ ಆಗಿರೋ ಪ್ರತಿ ಗೃಹ ಕಾರ್ಮಿಕರಿಗೆ ಈ ಬೋರ್ಡ್ ಒಂದು ಗುರುತಿನ ಸಂಖ್ಯೆ ಕೊಡುತ್ತೆ ಆದಿದ್ದರೆ ಈಸಿಯಾಗಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಆಗಬಹುದು. ಈ ನಿಧಿಗೆ ಹಲವು ಮೂಲಗಳಿಂದ ಹಣ ಬರುತ್ತೆ. ಅದರಲ್ಲಿ ಇಂಪಾರ್ಟೆಂಟ್ ಮೂಲ ಅಂದ್ರೆ ಕೆಲಸ ಕೊಡುವಂತಹ ಮನೆ ಓನರ್ಸ್ ಅಥವಾ ಎಂಪ್ಲಾಯರ್ಸ್ ಕಂಪನಿಗಳು ಸರ್ವಿಸ್ ಪ್ರೊವೈಡರ್ ಗಳಿಂದ 5% ವರೆಗೆ ವೆಲ್ಫೇರ್ ಫೀಸ್ ವೆಲ್ನೆಸ್ ಫೀಸ್ ಅಂತ ಏನು ಕಲೆಕ್ಟ್ ಮಾಡ್ತಾರಲ್ಲ ಅಂದ್ರೆ ಸಂಬಳ ಕೊಡೋದರ ಜೊತೆಗೆ 5% ವೆಲ್ಫೇರ್ ಫೀಸ್ ಏನು ಕಟ್ಟಬೇಕಲ್ವಾ ಅದರ ಜೊತೆಗೆ ಈ ಮಸೂದೆ ಅಡಿಯಲ್ಲಿ ಎಂಪ್ಲಾಯರ್ ಗಳಿಗೆ ಕೆಲಸ ಕೊಡೋರಿಗೆ ತಪ್ಪು ಮಾಡಿದಾಗ ವಿಧಿಸುವ ದಂಡದ ಹಣ ಫೈನ್ ಕಟ್ಟಿರೋ ದುಡ್ಡು ಬೇರೆ ಬೇರೆ ತರದ್ದು ಹಾಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರೋ ಅನುದಾನ ಅದೆಲ್ಲವೂ ಕೂಡ ಈ ಫಂಡ್ನಲ್ಲಿ ಇರುತ್ತೆ ಅಲ್ದೆ ಈ ಫಂಡ್ ನಲ್ಲಿರೋ ಹಣವನ್ನ ಹೂಡಿಕೆ ಮಾಡಿ ಬಡ್ಡಿ ಸಂಪಾದಿಸುವುದಕ್ಕೂ ಬೋರ್ಡ್ಗೆ ಅವಕಾಶ ಕೊಡಲಾಗುತ್ತೆ. ಅಷ್ಟು ಮಾತ್ರ ಅಲ್ಲ ಈ ನಿಧಿಗೆ ಬರೋ ಅನುದಾನಗಳ ಬಗ್ಗೆ ಜನರಿಗೆ ಮಾಹಿತಿ ಕೊಡೋಕೆ ಪ್ರತ್ಯೇಕ ಡಿಜಿಟಲ್ ಪೋರ್ಟಲ್ನ ತರೋ ಪ್ರಪೋಸಲ್ ಕೂಡ ಇದೆ. ಹಾಗೆ ಬೋರ್ಡ್ನ ಎಲ್ಲಾ ಬ್ಯಾಂಕ್ ಅಕೌಂಟ್ ಗಳನ್ನ ನೇರವಾಗಿ ರಾಜ್ಯದ ಸಿಎಜಿ ಅಥವಾ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಡಿಟ್ ಮಾಡ್ತಾರೆ. ಸೋ ಸರ್ಕಾರ ಇಲ್ಲಿ ಟ್ರಾನ್ಸಾಕ್ಷನ್ ಗಳನ್ನ ಟ್ರಾನ್ಸ್ಪರೆಂಟ್ ಮಾಡೋದಕ್ಕೂ ಪ್ಲಾನ್ ಹಾಕಿದೆ. ಹಾಗಾದ್ರೆ ಈ ಫಂಡ್ ಇಂದ ಕಾರ್ಮಿಕರಿಗಾಗೋ ಉಪಯೋಗ ಏನು? ಶಿಕ್ಷಣ ಆರೋಗ್ಯ ಪಿಂಚಣಿಗೆ ಬಳಕೆ.
ಗೃಹ ಕಾರ್ಮಿಕರಿಗೂ ರಾಜ್ಯ ಸರ್ಕಾರದಿಂದ ಪಿಂಚಣಿ ಕೊಡೋ ಯೋಜನೆ ಬಗ್ಗೆ ಮಸೂದೆಯಲ್ಲಿ ಹೇಳಲಾಗಿದೆ. ಅವರಿಗೆ ಏಜ್ ಆದಮೇಲೆ ಏನು ಮಾಡ್ತಾರೆ ಅವರು ಜೀವನಕ್ಕೆ ಅಲ್ಲಿ ತಂಕ ಮನೆ ಕೆಲಸ ಮಾಡ್ತಾರೆ ಪಾಪ ಆದ್ರೆ ವಯಸ್ಸಾದಮೇಲೆ ಏನು ಮಾಡ್ತಾರೆ ಜೀವನಕ್ಕೆ ಅನ್ನೋ ಪ್ರಶ್ನೆ ಬರುತ್ತಲ್ವಾ ಹಾಗಾಗಿ 60 ವರ್ಷ ದಾಟಿದಮೇಲೆ ಅಥವಾ ವಿಶೇಷ ಚೇತನ ಗೃಹ ಕಾರ್ಮಿಕರಿಗೆ ಪಿಂಚಣಿ ಅಥವಾ ಪೆನ್ಶನ್ ಕೊಡೋ ಪ್ರೊಪೋಸಲ್ ಇದೆ ಅಥವಾ ಆ ರೀತಿ ಒಂದು ಲೆಕ್ಕಾಚಾರ ಇದೆ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಯಿಂದಲೇ ಪೆನ್ಶನ್ ಕೊಡೋಕೆ ಲೆಕ್ಕಾಚಾರ ಇದೆ ಅಷ್ಟೇ ಅಲ್ಲ ಕಾರ್ಮಿಕರಿಗೆ ಇನ್ಶೂರೆನ್ಸ್ ರೀತಿ ಹೆಲ್ತ್ ಕವರೇಜ್ ಅಪಘಾತ ಆದರೆ ಪರಿಹಾರ ಮೆಟರ್ನಿಟಿ ಹಾಗೂ ಪ್ಯಾಟರ್ನಿಟಿ ಬೆನಿಫಿಟ್ಸ್ ಅಂದ್ರೆ ಮಗುವನ್ನ ಹೇರೋ ತಾಯಿ ಹಾಗೂ ತಂದೆಗೂ ಹಣಕಾಸಿನ ಬೆಂಬಲ ಮಕ್ಕಳ ಶಿಕ್ಷಣಕ್ಕೂ ಬೆಂಬಲ ಈ ಫಂಡ್ ಮೂಲಕ ಕೊಡಲಾಗುತ್ತೆ ಅಂತ ರಾಜ್ಯ ಸರ್ಕಾರ ಪ್ಲಾನ್ ಹಾಕಿದೆ ಅಲ್ಲೇ ಒಂದು ವೇಳೆ ಗೃಹ ಕಾರ್ಮಿಕರು ಮೃತಪಟ್ಟರೆ ಅವರ ಅಂತಿಮ ಸಂಸ್ಕಾರಕ್ಕೂ ಸಹಾಯ ಸಿಗುತ್ತೆ ಅನ್ನೋ ಪ್ರಪೋಸಲ್ ಇದೆ ಇದಕ್ಕೆಲ್ಲ ಬೋರ್ಡ್ ವಾರ್ಷಿಕ ಬಜೆಟ್ ರೆಡಿ ಮಾಡಿ ಪ್ರತಿವರ್ಷ ಸರ್ಕಾರದ ಅಪ್ರೂವಲ್ ಅನ್ನ ಪಡ್ಕೊಬೇಕು ವಾರಕ್ಕೆ 48 ಗಂಟೆ ಮಾತ್ರ ಕೆಲಸ ಇದು ಇಂಪಾರ್ಟೆಂಟ್ ವಿಚಾರ ಗೃಹ ಕಾರ್ಮಿಕರಿಗೆ ಕೆಲಸದ ಅವಧಿಯನ್ನ ಫಿಕ್ಸ್ ಮಾಡಲಾಗ್ತಿದೆ. ಅವರ ವರ್ಕಿಂಗ್ ಅವರ್ಸ್ ಒಂದು ವಾರಕ್ಕೆ 48 ಗಂಟೆ ಮೀರೋ ಹಾಗಿಲ್ಲ ಅಂತ. ಜೊತೆಗೆ ವಾರದಲ್ಲಿ ಒಂದು ದಿನ ರಜೆ ಕೊಡಬೇಕು. ಅಥವಾ ಅರ್ಧರ್ಧ ದಿನ ಎರಡು ಸಲ ರಜೆ ಕೊಡಬಹುದು. ಇನ್ನು ಕೊನೆದಾಗಿ ಈ ಮಸೂದೆ ಕರ್ನಾಟಕದಲ್ಲಿ ಕೆಲಸ ಮಾಡೋರಿಗೆ ಮಾತ್ರ ಅಪ್ಲೈ ಆಗುತ್ತೆ. ಬೇರೆ ರಾಜ್ಯಗಳಿಗೆ ಅಥವಾ ಬೇರೆ ರಾಷ್ಟ್ರಗಳಿಗೆ ಹೋಗಿ ಕೆಲಸ ಮಾಡ್ತಿರೋರಿಗೆ ಅನ್ವಯ ಆಗಲ್ಲ.
ಕನ್ನಡದವರೇ ಆದ್ರೂ ಕೂಡ ಬೇರೆ ರಾಜ್ಯಗಳಲ್ಲಿ ಇವ್ರು ಕರ್ನಾಟಕ ಸರ್ಕಾರ ಜಾರಿ ಮಾಡಕ್ ಬರಲ್ವಲ್ಲ ಹಾಗಾಗಿ. ಆದರೆ ಕರ್ನಾಟಕದಲ್ಲಿ ಹೊರಗಿನಿಂದ ಬಂದು ಕೆಲಸ ಮಾಡ್ತಿರೋರಿಗೂ ಕೂಡ ಇದರ ಬೆನಿಫಿಟ್ಸ್ ಸಿಗುತ್ತೆ. ಹಾಗಿದ್ರೆ ಈ ಮಸೂದೆ ಕಾಯ್ದೆಯಾಗಿ ಜಾರಿ ಆಗೋದು ಯಾವಾಗ ಕೇಳಿದ್ರೆ ಸದ್ಯ ಈ ಮಸೂದೆ ಬಗ್ಗೆ ಸರ್ಕಾರ ಜನರ ಫೀಡ್ಬ್ಯಾಕ್ ಕೇಳಿದೆ ಅಕ್ಟೋಬರ್ 15 ರಿಂದ ನವೆಂಬರ್ 15ರವರೆಗೆ ಮಸೂದೆ ಕನ್ಸಲ್ಟೇಶನ್ ಪಿರಿಯಡ್ ನಲ್ಲಿ ಇರುತ್ತೆ. ಈ ಅವಧಿಯಲ್ಲಿ ಗೃಹ ಕಾರ್ಮಿಕರು ಕೆಲಸ ಕೊಡೋರು ಸರ್ಕಾರಕ್ಕೆ ಫೀಡ್ಬ್ಯಾಕ್ ಕೊಡಬಹುದು. ಏನಾದರೂ ಆಕ್ಷೇಪಣೆ ಸಲಹೆ ಕೊಡೋದಿದ್ರೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಕೊಡಬಹುದು. ಬೆಂಗಳೂರಿನ ವಿಕಾಸ ಸೌದದಲ್ಲಿ ಇವರ ಕಚೇರಿ ಇದೆ ಇವರು ಅಂದಕೊಂಡಿದ್ದಾರೆ ಈಗ ತಲೆ ಕೆಡಿಸಿಕೊಂಡು ಎಲ್ಲ ವಿಕಾಸ ಸೌದಕ್ಕೆ ಹೋಗಿ ಲೆಟರ್ ಕೊಡ್ತಾರೆ ಅಂತ ಆನ್ಲೈನ್ ವ್ಯವಸ್ಥೆ ಮಾಡಿದ್ರೆ ತುಂಬಾ ಜನ ಇದಕ್ಕೆ ಫೀಡ್ಬ್ಯಾಕ್ ಕೊಡ್ತಾ ಇದ್ರು ಅನುಕೂಲ ಆಗ್ತಾ ಇತ್ತು ಆ ರೀತಿದೇನು ಸದ್ಯಕ್ಕೆ ಕಾಣಿಸ್ತಾ ಇಲ್ಲ ಯಾಕಂದ್ರೆ ಸ್ನೇಹಿತರೆ ಜನರಿಂದ ಬಂದ ಫೀಡ್ಬ್ಯಾಕ್ ಪ್ರಕಾರ ಮಸೂದೆಯಲ್ಲಿ ಬದಲಾವಣೆ ಮಾಡಿ ಫೈನಲ್ ಮಾಡ್ತೀವಿ ಅಂತ ಹೇಳಿದ್ದಾರೆ ಯಾರು ವಿಕಾಸದಕ್ಕೆ ಹೋಗಿ ಈಗ ಫೀಡ್ಬ್ಯಾಕ್ ಕೊಡೋದು ಮನೆ ಕೆಲಸ ಮಾಡುವಂತವರು ಈ ಗೃಹ ಕಾರ್ಮಿಕರು ಅವರು ಹೋಗಿ ಕೊಡ್ತಾರೆ ವಿಕಾಸದಕ್ಕೆ ಏನ್ ಲೆಕ್ಕಾಚಾರ ಅಂತ ನೋಡಬೇಕು ಸೋ ಸದ್ಯಕ್ಕೆ ಫೀಡ್ಬ್ಯಾಕ್ಗೆ ಅಂತ ಹೇಳಿ ಈಗ ಅವಧಿ ಕೊಟ್ಟಿದ್ದಾರೆ ಆ ಫೀಡ್ಬ್ಯಾಕ್ ಎಲ್ಲ ಬಂದಮೇಲೆ ಸರ್ಕಾರ ಫೈನಲ್ ಮಾಡಿ ಅದನ್ನ ವಿಧಾನಸಭೆ ವಿಧಾನ ಪರಿಷತ್ನಲ್ಲಿ ಮಂಡಿಸಿ ಅಲ್ಲಿ ಪಾಸ್ ಆದಮೇಲೆ ರಾಷ್ಟ್ರಪತಿ ಅಂಕಿತ ಬಿದ್ದಮೇಲೆ ಕಾನೂನಾಗಿ ಜಾರಿಗೆ ಬರುತ್ತೆ.


