ಸಂಚಾರ ಸಾತಿ ಆಪ್ ಆಯ್ತು ಇದೀಗ ಮತ್ತೊಂದು ವಿವಾದಾತ್ಮಕ ನಿರ್ಧಾರ ಸದ್ದು ಮಾಡಲು ಅಣಿಯಾಗಿದೆ ಕೇಂದ್ರ ಸರ್ಕಾರ ಸದ್ದಿಲ್ಲದೆ ನಿಮ್ಮ ಮೊಬೈಲ್ ಲೊಕೇಶನ್ ಮೇಲೆ ಕಣ್ಗಾವಲು ಇಡಲು ಸಜ್ಜಾಗಿದೆ ಕೇಂದ್ರ ಸರ್ಕಾರ ಎಲ್ಲಾ ಸ್ಮಾರ್ಟ್ ಫೋನ್ಗಳಿಗೆ ಆಲ್ವೇಸ್ ಲೊಕೇಶನ್ ಆನ್ ಇರಿಸುವಂತಹ ಪ್ರಸ್ತಾವನೆ ಇಟ್ಟಿದೆ ಅಂದರೆ ಬಳಕೆದಾರರ ಸ್ಥಳ ಟ್ರಾಕಿಂಗ್ ಅನ್ನ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಸಲ್ಲಿಸಿದೆ ಆ ಮೂಲಕ ಬಳಕೆದಾರರು ದಿನದ 24 ಗಂಟೆಯೂ ಎಲ್ಲಿರ್ತಾರೆ ಏನ್ ಮಾಡ್ತಾರೆ ಅನ್ನೋದರ ಕುರಿತು ನಿಮ್ಮ ಚಲನ ವಲನಗಳನ್ನ ದಾಖಲಿಸಲಿದೆ ಸದ್ಯ ಪ್ರಾಥಮಿಕವಾಗಿ ಸಲ್ಲಿಸಲಾಗಿರುವ ಈ ಪ್ರಪೋಸಲ್ಗೆ ವಿರೋಧ ವ್ಯಕ್ತವಾಗಿದೆ apple ಪಲ್ಗೂಗಲ್ ಮತ್ತುಸ್ಸ ನಂತಹ ಪ್ರಮುಖ ಟೆಕ್ ಕಂಪನಿಗಳು ಇದನ್ನ ಶತಾಯ ಗತಾಯ ವಿರೋಧಿಸುತ್ತಾ ಇವೆ ಇದರಿಂದ ಬಳಕೆದಾರರ ಗೋಪ್ಯತೆ ಕಾಪಾಡುವ ನಿಯಮಗಳಿಗೆ ದಕ್ಕೆ ಬರಲಿದೆ ಅನ್ನೋದು ಕಂಪನಿಗಳ ವಾದವಾಗಿದೆ ಹಾಗಾದರೆ ಏನಿದು ಲೊಕೇಶನ್ ಟ್ರಾಕಿಂಗ್ ವಿವಾದ ಪ್ರಸ್ತಾವನೆಯಲ್ಲಿ ನಿಜವಾಗಿ ಇರೋದೇನು ಇದನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದವರು ಯಾರು ಇದರ ಹಿಂದೆ ಬೇರೆ ಏನಾದರೂ ಅಜೆಂಡಾ ಇದೆಯಾ.
ಮೊಬೈಲ್ ಬಳಕೆದಾರರಿಗೆ ಸಂಬಂಧಿಸಿದಂತೆ ಇಲ್ಲಿವರೆಗೆ ಹಲವು ವಿವಾದಗಳು ಸದ್ದು ಮಾಡಿವೆ ಇದೀಗ ಆ ಪಟ್ಟಿ ಗೆ ಮತ್ತೊಂದು ನಿರ್ಧಾರ ಸೇರುವ ಸಾಧ್ಯತೆ ಇದೆ ಅಂದಹಾಗೆ ಲೊಕೇಶನ್ ಟ್ರ್ಾಕ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವನೆಯೊಂದನ್ನ ಸ್ವೀಕರಿಸಿದೆ ಇದರ ಪ್ರಕಾರ ದೇಶದ ಎಲ್ಲಾ ಸ್ಮಾರ್ಟ್ ಫೋನ್ಗಳಲ್ಲಿ ಕಡ್ಡಾಯವಾಗಿ ಲೊಕೇಶನ್ ಆನ್ ಇರಿಸುವಂತಹ ಸ್ಯಾಟಿಲೈಟ್ ಬೇಸ್ಡ್ ಲೊಕೇಶನ್ ಟ್ರಾಕಿಂಗ್ ಸಿಸ್ಟಮ ಅನ್ನ ತರುವಂತೆ ಪ್ರಸ್ತಾವನೆ ಇರಿಸಲಾಗಿದೆ ತಮಗೆ ತಿಳಿದಿರುವ ಹಾಗೆ ಇಂದು ದೇಶದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳಿವೆ ಮನೆಯಲ್ಲಿ ತಿನ್ನಲು ಉಡಲು ಇರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಜನರ ಬಳಿ ಸ್ಮಾರ್ಟ್ ಫೋನ್ಗಳಂತೂ ಇದ್ದೆ ಇವೆ ಇವತ್ತು ಸ್ಮಾರ್ಟ್ ಫೋನ್ಗಳು ಇಲ್ಲದ ಮನೆಗಳನ್ನ ಹುಡುಕುವುದು ಮರುಭೂಮಿಯಲ್ಲಿ ಓಯಾಸಿಸ್ ಹುಡುಕಿದಂತೆ ಅಷ್ಟರ ಮಟ್ಟಿಗೆ ಈ ಸ್ಮಾರ್ಟ್ ಫೋನ್ಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗಗಳಾಗಿ ಬದಲಾಗಿವೆ ಹಾಗಂತ ಇವೇನು ಈಗ ಐಶರಾಮಿ ಉತ್ಪನ್ನಗಳಾಗಿ ಉಳಿದಿಲ್ಲ ಬದಲಾಗಿ ಅಗತ್ಯ ವಸ್ತು ಸೇವೆಯಾಗಿ ಗುರುತಿಸಿಕೊಂಡಿವೆ ಸದ್ಯದ ಮಾಹಿತಿ ಪ್ರಕಾರ ದೇಶದ ಸ್ಮಾರ್ಟ್ಫೋನ್ ವ್ಯವಸ್ಥೆಯಲ್ಲಿ ಜಿಪಿಎಸ್ ಆಧಾರಿತ ಕಡ್ಡಾಯ ಟ್ರಯಾಕಿಂಗ್ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗಿದೆ ಅಂದರೆ ಮೊಬೈಲ್ಗಳಲ್ಲಿ ಕಡ್ಡಾಯ ಲೊಕೇಶನ್ ಕಣಗಾವಲು ಇಡುವ ಪ್ರಸ್ತಾವನೆಯನ್ನ ಸರ್ಕಾರದ ಮುಂದಿಡಲಾಗಿದೆ ಅಂದಹಾಗೆ ಸದ್ಯ ಎಲ್ಲರ ಮೊಬೈಲ್ಗಳಲ್ಲೂ ಈ ಸ್ಥಳ ಮಾಹಿತಿ ಅಂದರೆ ಲೊಕೇಶನ್ ತಿಳಿಸುವ ಟ್ರಾಕಿಂಗ್ ವ್ಯವಸ್ಥೆ ಇದೆ ಜಿಪಿಎಸ್ ಆಧಾರಿತ ಈ ವ್ಯವಸ್ಥೆಯನ್ನ ಬಳಕೆದಾರರ ಆಯ್ಕೆಗೆ ಬಿಡಲಾಗಿದೆ ನೀವು ಇಚ್ಛೆಪಟ್ಟರೆ ಲೊಕೇಶನ್ ಆನ್ ಮಾಡಬಹುದು ಇಲ್ಲವೇ ಆಫ್ ಮಾಡಬಹುದು.
ನಿಮ್ಮದೇ ನಿರ್ಧಾರವಾಗಿದೆ ಆದರೆ ಸಧ್ಯ ಕೇಂದ್ರ ಸರ್ಕಾರ ಸಲ್ಲಿಸಿರುವ ರುವ ಪ್ರಸ್ತಾವನೆಯಲ್ಲಿ ಬಳಕೆದಾರರಿಗೆ ಈ ಆಯ್ಕೆ ಇರೋದಿಲ್ಲ ನೀವು ಆಫ್ ಮಾಡಿ ಅಥವಾ ಆನ್ ಮಾಡಿರಿ ಅದು ನಿಮ್ಮ ಸ್ಮಾರ್ಟ್ ಫೋನ್ಗಳಲ್ಲಿ ಕಡ್ಡಾಯವಾಗಿ ತನ್ನ ಪಾಡಿಗೆ ತಾನು ಆನ್ ನಲ್ಲೇ ಇರುತ್ತೆ ಸ್ಮಾರ್ಟ್ ಫೋನ್ಗಳ ನಿರ್ಮಾಣದಲ್ಲೇ ಈ ಸ್ಯಾಟಿಲೈಟ್ ಆಧಾರಿತ ಸ್ಥಳ ಟ್ರಾಕಿಂಗ್ ವ್ಯವಸ್ಥೆಯನ್ನ ಕಡ್ಡಾಯಗೊಳಿಸಲಾಗಿರುತ್ತದೆ ಇದರಿಂದ ಬಳಕೆದಾರರ ಸಂಪೂರ್ಣ ಲೊಕೇಶನ್ ಮಾಹಿತಿ ಈ ಜಿಪಿಎಸ್ ಮೂಲಕ ರೆಕಾರ್ಡ್ ಆಗ್ತಾನೆ ಇರುತ್ತೆ ನೀವು ದಿನದ 24 ಗಂಟೆಯಲ್ಲಿ ಎಲ್ಲಿದ್ದೀರಿ ಯಾವ ಸ್ಥಳ ಯಾವ ಜಿಲ್ಲೆ ಯಾವ ರಾಜ್ಯ ಹೀಗೆ ನೀವು ಚಲಿಸುವ ಪ್ರತಿಕ್ಷಣದ ಸ್ಥಳದ ಮಾಹಿತಿ ದಾಖಲ ಆಗಿರುತ್ತೆ ಆದರ ಪ್ರಾಥಮಿಕ ಹಂತದಲ್ಲಿರುವ ಈ ಉದ್ದೇಶಿತ ಪ್ರಸ್ತಾವನೆಗೆ ಬಲವಾದ ವಿರೋಧ ಕೇಳಿ ಬರ್ತಾ ಇದೆ ಜಾಗತಿಕ ಮೊಬೈಲ್ ಉತ್ಪಾದಕರಾದ ಆಪಲ್ ಗೂಗಲ್ ಹಾಗೂಸಂಗ್ ನಂತಹ ದೈತ್ಯ ಕಂಪನಿಗಳು ಇದನ್ನ ವಿರೋಧಿಸುತ್ತಾ ಇದೆ. ಇದು ಬಳಕೆದಾರರ ಗೌಪ್ಯತೆ ಭದ್ರತೆಯನ್ನ ಕಾಪಾಡುವ ತಮ್ಮ ನಿಯಮಗಳಿಗೆ ದೊಡ್ಡ ಮಟ್ಟದ ಹಿನ್ನಡೆ ತರಲಿವೆ. ಇದು ನ್ಯಾಯೋಚಿತವಲ್ಲದ ಏಕಪಕ್ಷಿಯ ನಿರ್ಧಾರದಂತೆ ಕಾಣುತ್ತಿದೆ ಅಂತ ಕಂಪನಿಗಳು ಆರೋಪಿಸ್ತಾ ಇದ್ದಾವೆ. ಅಂದಹಾಗೆ ಬಳಕೆದಾರರ ಗೌಪ್ಯತೆಗೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿ ಏನು ಈ ಪ್ರಶ್ನೆ ಉದ್ಭವಿಸಿಲ್ಲ.
ಗ್ರಾಹಕರ ಗೌಪ್ಯತೆ ಕುರಿತು ಆಗಾಗ ವಿಷಯಗಳು ಸದ್ದು ಮಾಡ್ತಾನೆ ಇರುತ್ತಾವೆ. ಇತ್ತಜಿಗೆ ಕೇಂದ್ರ ಸರ್ಕಾರ ಸಂಚಾರ ಸಾತಿ ಅನ್ನುವ ಆಪ್ ಅನ್ನ ಕಡ್ಡಾಯಗೊಳಿಸಿತ್ತು ಡಿಜಿಟಲ್ ಸ್ಕ್ಯಾಮ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಇದನ್ನ ಕಡ್ಡಾಯವಾಗಿ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಹೇಳಿತ್ತು ಆದರೆ ಅದು ಸಾಕಷ್ಟು ವಿವಾದ ಚರ್ಚೆಗಳಿಗೆ ಕಾರಣವಾಗಿತ್ತು ಕೆಲವರು ಇದು ಹಣಕಾಸಿನ ಮೋಸಗಳನ್ನ ತಪ್ಪಿಸಲಿದೆ ಅಂತ ಪರವಾಗಿ ಮಾತನಾಡಿದ್ರೆ ಇನ್ನು ಕೆಲವರು ಇದು ವಯಕ್ತಿಕ ಮಾಹಿತಿ ಸೋರಿಕೆಗೆ ಖಾಸಗಿ ತನಕ್ಕೆ ದಕ್ಕೆ ತರಲಿದೆ ಅಂತಾನೆ ವಾದಿಸಿದ್ರು ಅಂತಿಮವಾಗಿ ಕೇಂದ್ರ ಸರ್ಕಾರ ತನ್ನ ಕಡ್ಡಾಯ ನೀತಿಯನ್ನ ಹಿಂತೆಗೆದುಕೊಂಡಿತ್ತು ಅಲ್ಲದೆ ಅಗತ್ಯ ಇದ್ದರು ಸಂಚಾರ ಸಾರಥಿ ಇನ್ಸ್ಟಾಲ್ ಮಾಡಿಕೊಳ್ಳುವ ಅವಕಾಶ ನೀಡಿದೆ ಅಲ್ಲದೆ ಅಗತ್ಯ ಇದ್ದವರು ಸಂಚಾರ ಸಾತಿಯನ್ನ ಇನ್ಸ್ಟಾಲ್ ಮಾಡಿಕೊಳ್ಳುವ ಅವಕಾಶ ನೀಡಿದೆ ತೇಟ್ ಅದೇ ರೀತಿ ಇದೀಗ ಕಡ್ಡಾಯ ಲೊಕೇಶನ್ ಟ್ರಾಕಿಂಗ್ ಕಣಗಾವಲು ವ್ಯವಸ್ಥೆ ವಿವಾದ ವೆಬ್ಬಿಸಿದೆ ಇದು ಬಳಕೆದಾರರನ್ನ ನಿರಂತರವಾಗಿ ಕಣಗಾವಲು ಮಾಡಲಿದೆ ಅನ್ನೋದು ಖಾಸಗಿತನದ ದಕ್ಕೆಯಲ್ಲದೆ ಇದು ಕಲವು ರೀತಿಯ ದುರುಪಯೋಗಕ್ಕೆ ಕಾರಣವಾಗಲಿದೆ ಅನ್ನುವ ಆರೋಪಗಳು ಕೂಡ ಕೇಳಿ ಬಂದಿವೆ ಸ್ನೇಹಿತರೆ ಹಾಗಾದರೆ ಈ ವಿವಾದಾತ್ಮಕ ಪ್ರಸ್ತಾವನೆಯನ್ನ ಸರ್ಕಾರವೇ ನೇರವಾಗಿ ಪ್ರಸ್ತಾಪಿಸಿದ್ದೀಯ ಅಥವಾ ಇದರ ಹಿಂದೆ ಇರೋದು ಯಾರು ಇದರಲ್ಲಿ ಸಹಕಾರದ ಪಾತ್ರವೇನು ಅನ್ನೋದನ್ನ ಕೂಡ ನೋಡಬೇಕಾಗುತ್ತೆ. ಅಂದಹಾಗೆ ನಮ್ಮ ದೇಶದಲ್ಲಿ ಟೆಲಿಫೋನ್ ವ್ಯವಸ್ಥೆಗೆ ಸಂಬಂಧಿಸಿದಂತೆ ಟ್ರಾಯ್ ಇದೆ.
ಸಂಪೂರ್ಣವಾಗಿ ಸೆಲ್ಯುಲರ್ಗೆ ಸಂಬಂಧಿಸಿದ ವ್ಯವಹಾರ ಕಾರ್ಯಾಚರಣೆಯನ್ನ ನೋಡಿಕೊಳ್ಳುತ್ತೆ ಆದರೆ ಈ ಟ್ರಾಕಿಂಗ್ ಐಡಿಯಾವನ್ನ ಟೆಲಿಕಾಂ ಸರ್ವಿಸ್ ಇಂಡಸ್ಟ್ರಿಗಳು ನೀಡಿವೆ. ನಮ್ಮ ದೇಶದಲ್ಲಿ ಟೆಲಿಕಾಂ ವ್ಯವಸ್ಥೆಯ ಸೇವಾ ಸಂಸ್ಥೆಗಳ ಒಕ್ಕೂಟವಾದ ಸೆಲ್ಯುಲರ್ ಆಪರೇಷನ್ ಅಸೋಸಿಯೇಶನ್ ಆಫ್ ಇಂಡಿಯಾ ಈ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಅಂದಹಾಗೆ ಈ ಅಸೋಸಿಯೇಷನ್ ಸಹಜವಾಗಿಯೇ ಟೆಲಿಕಾಂ ಸೇವಾ ಸಂಸ್ಥೆಗಳಾದ ಪ್ರತಿನಿಧಿಸುತ್ತೆ. ಈ ಅಸೋಸಿಯೇಶನ್ ಅಸಿಸ್ಟೆಡ್ ಜಿಪಿಎಸ್ ತಂತ್ರಜ್ಞಾನವನ್ನ ಶಾಶ್ವತವಾಗಿ ಸಕ್ರಿಯಗೊಳಿಸಲು ಮತ್ತು ಬಳಕೆದಾರರಿಂದ ನಿಷ್ಕ್ರಿಯಗೊಳಿಸುವಂತೆ ಸ್ಮಾರ್ಟ್ ಫೋನ್ ತಯಾರಿಕರಿಗೆ ಕಡ್ಡಾಯಗೊಳಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿದೆ ಅಂದರೆ ಭಾರತದಲ್ಲಿ ಮಾರಾಟವಾಗುವ ಯಾವುದೇ ಸ್ಮಾರ್ಟ್ ಫೋನ್ ಇರಲಿ ಅದುಶಯಮಿ ಉತ್ಪಾದಿಸಲಿ ಅಥವಾಗೂಗಲ್ apple ಇನ್ಯಾವುದೇ ಸಂಸ್ಥೆ ಇರಲಿ ಇಲ್ಲಿ ಬಿಕರಿಯಾಗುವ ಮೊಬೈಲ್ಗಳಲ್ಲಿ ಎಜಿಪಿಎಸ್ ತಂತ್ರಜ್ಞಾನವನ್ನ ಕಡ್ಡಾಯಗೊಳಿಸುವಂತೆ ಹೇಳಿದೆ ಇದರಿಂದ ಬಳಕೆದಾರರು ಯಾವುದೇ ಕಾರಣಕ್ಕೂ ಲೊಕೇಶನ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಬಳಕೆದಾರರ ಸಂಪೂರ್ಣ ಚಲನ ವಲನ ಅವರ ರಿಯಲ್ ಟೈಮ್ ಸ್ಥಳದ ಮಾಹಿತಿ ಸಿಗಲಿದೆ ಅನ್ನೋದು ಈ ಅಸೋಸಿಯೇಶನ್ ವಾದವಾಗಿದೆ ಮೊಬೈಲ್ ಕಳ್ಳತನ ಸಿಮ್ ಬದಲಾವಣೆ ಮುಂತಾದ ಸಂದರ್ಭಗಳಲ್ಲಿ ಇದು ಅಕ್ಯುರೆಸಿ ಜೊತೆ ಲಭ್ಯವಾಗಲಿದೆ ಅಂತ ನೆಟ್ವರ್ಕ್ ಸೇವಾ ಕಂಪನಿಗಳು ಹೇಳುತ್ತಿವೆ ಸ್ನೇಹಿತರೆ ಲೊಕೇಶನ್ ವಿಚಾರದಲ್ಲಿ ಹಲವು ತಂತ್ರಜ್ಞಾನಗಳಿವೆ ಅವುಗಳಲ್ಲಿ ಜಿಎನ್ಎಸ್ಎಸ್ ಗೆಲಿಯೋ ಬಿಓಡಿಯೋ ಮುಖ್ಯವಾ ವಾಗಿವೆ ಈ ಯಾವುದೇ ತಂತ್ರಜ್ಞಾನವನ್ನ ಅಳವಡಿಸಿದ ಮೊಬೈಲ್ಗಳಲ್ಲಿ ಪರ್ಮನೆಂಟ್ ಆಗಿ ಲೊಕೇಶನ್ ಅನ್ನ ಎನೇಬಲ್ ಮಾಡುವಂತೆ ಮೊಬೈಲ್ ನೆಟ್ವರ್ಕ್ ಸೇವಾ ಕಂಪನಿಗಳು ಕೇಳಿಕೊಳ್ಳುತ್ತಾ ಇವೆ ಇದನ್ನ ಬಳಕೆದಾರರು ಆಫ್ ಮಾಡದ ವ್ಯವಸ್ಥೆ ರೂಪಿಸಲು ಮೊಬೈಲ್ ಕಂಪನಿಗಳಿಗೆ ಸೂಚಿಸುವಂತೆ ಈ ಅಸೋಸಿಯೇಶನ್ ಹೇಳ್ತಾ ಇದೆ ಇದರಿಂದ ಎಜಿಪಿಎಸ್ ವ್ಯವಸ್ಥೆಯಲ್ಲಿ ನಿಮಗೆ ಬಳಕೆದಾರರ ನಿಕರ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದು.
ಈಗಿರುವ ವ್ಯವಸ್ಥೆಯಲ್ಲಿ ಸೆಲ್ಯುಲಾರ್ ಕಂಪನಿಗಳಿಗೆ ಯಾವುದಾದರೂ ಮೊಬೈಲ್ ಸ್ಥಳದ ಮಾಹಿತಿ ನೀಡುವಂತೆ ಕೋರಿದ್ರೆ ಅದು ಸೆಲ್ ಟ್ರಯಾಂಗುಲೇಷನ್ ಆಧಾರದಲ್ಲಿ ನಿಮಗೆ ಬಳಕೆದಾರರ ಸ್ಥಳದ ಮಾಹಿತಿ ನೀಡುತ್ತದೆ. ಆದರೆ ಇದು ಸಂಪೂರ್ಣ ನಿಖರ ಮಾಹಿತಿ ಇರೋದಿಲ್ಲ. ಸುಮಾರು 50ಮೀಟರ್ ನಿಂದ ಹಿಡಿದು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಇರುವ ಬಗ್ಗೆ ಅದು ಟವರ್ ಆಧರಿಸಿ ಮಾಹಿತಿ ನೀಡುತ್ತೆ. ಹೀಗಾಗಿ ಇದರಲ್ಲಿ ನಿಖರತೆ ಅನ್ನೋದು ಕಷ್ಟ. ಆದರೆ ಎಜಿಪಿಎಸ್ ನಲ್ಲಿ ಹಂಗಲ್ಲ. ಅದು ನೇರವಾಗಿ ಸ್ಯಾಟಿಲೈಟ್ ಆಧಾರಿತ ವ್ಯವಸ್ಥೆ ಅಂದರೆ ಸೆಲ್ ಟ್ರಯಾಂಗುಲೇಷನ್ ನಲ್ಲಿ ಟವರ್ ಇದ್ದರೆ ಮಾತ್ರ ಲೊಕೇಶನ್ ಪತ್ತೆ ಹಚ್ಚೋದು ಸಾಧ್ಯ ಆದರೆ ಎಜಿಪಿಎಸ್ ನಲ್ಲಿ ನೀವು ಟವರ್ ಇಲ್ಲದ ಅರಣ್ಯದಲ್ಲಿದ್ದರೂ ಲೊಕೇಶನ್ ಪತ್ತೆ ಹಚ್ಚಬಹುದು ಇನ್ನು ಇದರ ನಿಖರತೆಯು ಕೂಡ ತೀರ ಖಚಿತವಾಗಿರುತ್ತೆ ಅಂದ್ರೆ ಕೇವಲ ಒಂದರಿಂದ ಐದು ಮೀಟರ್ ಅಂತರದ ಲೊಕೇಶನ್ ಇರುವಿಕೆಯನ್ನ ಇದು ಸೂಚಿಸುತ್ತೆ ಹೀಗಾಗಿ ಅಕ್ಯುರೆಸಿಯಲ್ಲಿ ಇದು ಸೂಪರ್ ಅನ್ನುವ ಮಟ್ಟಕ್ಕಿದೆ ಹೀಗಾಗಿ ಸೆಲ್ಯುಲರ್ ಕಂಪನಿಗಳು ಇದನ್ನ ಕಡ್ಡಾಯಗೊಳಿಸಲು ಸರ್ಕಾರದ ಮುಂದೆ ಪ್ರಸ್ತಾವ ಇಟ್ಟಿದ ಇದರಿಂದ ತನಿಕೆಯ ವೇಳೆ ಲಾ ಎನ್ಫೋರ್ಸ್ಮೆಂಟ್ಗೆ ಸಾಕಷ್ಟು ಸಹಾಯವಾಗಲಿದೆ ವಿಶೇಷವಾಗಿ ಅಪಹರಣ ಭಯೋತ್ಪಾದಕರ ಅಡಗುವಿಕೆ ವಲಸಿಗರ ಅಕ್ರಮಗಳನ್ನ ಪತ್ತೆ ಹಚ್ಚಲು ವಿಪತ್ತುಗಳ ಸಂದರ್ಭದಲ್ಲಿ ಅತ್ಯಂತ ಸೂಕ್ತವಾಗಿದೆ ಇನ್ನು ಮೊಬೈಲ್ ಕಳ್ಳತನ ಕಳೆದು ಹೋದ ಸಂದರ್ಭದಲ್ಲಿ ಪತ್ತೆ ಹಚ್ಚುವುದು ತೀರ ಸುಲಭ ಕಾರಣ ಈ ಎಜಿಪಿಎಸ್ ತಂತ್ರಜ್ಞಾನದಲ್ಲಿ ಸ್ಥಳ ಹುಡುಕಾಟ ತೀರ ನಿಖರವಾಗಿರುವುದರಿಂದ ಕೆಲಸ ಬಲು ಸುಲಭ ಇನ್ನು ಈ ವ್ಯವಸ್ಥೆಗೆ ವಿರೋಧ ಯಾಕೆ ಅಂತ ನೋಡಿದ್ರೆ ಸಹಜವಾಗಿ ಇದು ಬಳಕೆದಾರರ ಖಾಸಗಿತನಕ್ಕೆ ದಕ್ಕೆ ತರುವ ಆತ ಆತಂಕವಿದೆ ಮೊಬೈಲ್ ತಯಾರಿಕ ಕಂಪನಿಗಳು ಈ ವಿಷಯದಲ್ಲಿ ಬಳಕೆದಾರರ ಗೌಪ್ಯತೆಯ ನಿಯಮಗಳಿಗೆ ಇದು ವಿರುದ್ಧವಾಗಿದೆ ಅನ್ನುವ ಆಕ್ಷೇಪ ಎತ್ತಿವೆ ಬಳಕೆದಾರರ ಜಿಪಿಎಸ್ ನಿರಂತರವಾಗಿ ಕಣ್ಗಾವಲು ವ್ಯವಸ್ಥೆಗೆ ಒಳಪಡುವುದು ಗೌಪ್ಯತಾ ನಿಯಮಗಳನ್ನ ಉಲ್ಲಂಘಿಸಿದಂತೆ ಎಂದು ಅದು ವಾದಿಸುತ್ತಾ ಇದೆ ಅಲ್ಲದೆ ಇದು ನೇರವಾಗಿ ಸರ್ಕಾರಕ್ಕೆ ಪ್ರತಿ ವ್ಯಕ್ತಿಯ ಚಲನವಲನಗಳ ಬಗ್ಗೆ ನಿಗಾ ಹಕ್ಕನ್ನ ನೀಡಿದಂತಆಗುತ್ತೆ ಇದರಲ್ಲಿ ರಾಜಕೀಯ ಪಕ್ಷಗಳ ನೇತಾರರು ಅಧಿಕಾರಿಗಳು ಕಾರ್ಯಕರ್ತರು ಪದಾಧಿಕಾರಿಗಳು ಪತ್ರಕರ್ತರು ನ್ಯಾಯಾಧೀಶರು ಹೀಗೆ ಯಾರು ಬೇಕು ಅವರ ಮೇಲೆ ಒಂದು ರೀತಿಯ ಕಣ್ಗಾವಲು ವ್ಯವಸ್ಥೆಯನ್ನ ಇದು ಸುಲಭವಾಗಿ ನೀಡಿದಂತ ಆಗುತ್ತದೆ.
ಹೀಗಾಗಿ ಇದು ಭವಿಷ್ಯದಲ್ಲಿ ರಾಜಕೀಯವಾಗಿ ದುರುಪಯೋಗಕ್ಕೆ ದಾರಿ ಮಾಡಿಕೊಡಲಿದೆ ಅನ್ನುವ ಆತಂಕವನ್ನ ಮೊಬೈಲ್ ತಯಾರಿಕ ಕಂಪನಿಗಳು ವ್ಯಕ್ತಪಡಿಸತ್ತಾ ಇದ್ದಾವೆ. ಇನ್ನು ಜಾಗತಿಕವಾಗಿ ಇಲ್ಲಿವರೆಗೆ ಯಾವುದೇ ದೇಶ ಇದನ್ನ ಅನುಷ್ಠಾನಕ್ಕೆ ತಂದಿಲ್ಲ. ಒಂದುವೇಳೆ ಇದನ್ನ ಜಾರಿಗೆ ತಂದರೆ ವಿಶ್ವದ ಮೊದಲ ದೇಶವಾಗಿ ಭಾರತ ಗುರುತಿಸಿಕೊಳ್ಳಲಿದೆ. ಆದರೆ ಇದು ಖಾಸಗಿ ಹಕ್ಕು ವಯಕ್ತಿಕ ಹಕ್ಕಿನ ಮೇಲೆ ದಾಳಿ ಎನ್ನುವಂತೆ ಸಾರ್ವರ್ಥಿಕವಾಗಿ ಬಿಂಬಿಸುವ ಸಾಧ್ಯತೆ ಇದೆ. ಇದಲ್ಲದೆ ಒಂದು ಮೊಬೈಲ್ ಅನ್ನ ನಿರಂತರವಾಗಿ ಜಿಪಿಎಸ್ ನಿಗಾ ವ್ಯವಸ್ಥೆಗೆ ಒಳಪಡಿಸುವುದು ಹ್ಯಾಕರ್ಗಳ ಪಾಲಿಗೆ ಮತ್ತಷ್ಟು ಸುಲಭವಾಗಲಿದೆ. ಇನ್ನು ಇದೆಲ್ಲ ಬಳಕೆದಾರರ ಬಗೆಗಿನ ಆತಂಕವಾದರೆ ಇನ್ನು ತಾಂತ್ರಿಕವಾಗಿಯೂ ಇದು ಮೊಬೈಲ್ಗಳ ಮೇಲೆ ಏನು ಪರಿಣಾಮ ಬೀರಲಿದೆ ಅನ್ನೋದನ್ನ ಸಹ ನೋಡೋಣ. ಎಜಿಪಿಎಸ್ ಅನ್ನ ನಿರಂತರವಾಗಿ ಚಾಲು ಇಡುವುದು ಮೊಬೈಲ್ಗಳ ತಾಂತ್ರಿಕತೆಯ ಮೇಲು ಪ್ರಭಾವ ಬೀರಲಿದೆ ಇದು ಮೊಬೈಲ್ ಬ್ಯಾಟರಿ ಬಳಕೆ ಮೇಲೆ ಗಂಭೀರ ಪರಿಣಾಮ ಬೀರುತ್ತೆ ಅಂದ್ರೆ ಬ್ಯಾಟರಿ ಚಾರ್ಜ್ ಬೇಗ ಖಾಲಿಯಾಗುತ್ತೆ ಇದರಿಂದ ಮೊಬೈಲ್ನ ಪರಿಪೂರ್ಣ ಕಾರ್ಯಾಚರಣೆ ಮೇಲೆ ಪ್ರಭಾವ ಬೀರುತ್ತೆ ಜೊತೆಗೆ ಬಳಕೆದಾರರಿಗೆ ಮೊಬೈಲ್ ಮೇಲಿನ ಕಂಟ್ರೋಲ್ ಅಂಡ್ ಕಾನ್ಸೆಂಟ್ ಎರಡು ತಪ್ಪಿ ಹೋಗುತ್ತೆ ಇದು ಸಹಜವಾಗಿಯೇ ಖಾಸಗಿ ಹಕ್ಕಿನ ನಿಯಮಗಳನ್ನ ಉಲ್ಲಂಘಿಸಿದಂತ ಆಗುತ್ತದೆ ಇನ್ನು ಡಿವೈಸ್ ಗಳ ಪಾಲಿಸಿ ಮೇಕಿಂಗ್ ವಿಚಾರದಲ್ಲೂ ಇದು ಸಮಸ್ಯೆಯನ್ನ ತಂದೊಡ್ಡುತ್ತೆ ಕಾರಣ ಮೊಬೈಲ್ ತಯಾರಕರು ಟೆಕ್ ಕಂಪನಿಗಳು ಇದನ್ನ ಒಪ್ಪುವ ಸಾಧ್ಯತೆ ಕಡಿಮೆ ಹೀಗಾಗಿ ಇದು ಭವಿಷ್ಯದಲ್ಲಿ ನಿಯಮಗಳ ಸಂಕೀರ್ಣತೆಗೆ ದಾರಿ ಮಾಡಿಕೊಡುವ ಆತಂಕವಿದೆ ಹೀಗಾಗಿ ಇದು ಪರೋಕ್ಷವಾಗಿ ವಿದೇಶಿ ತಾಂತ್ರಿಕ ಹೂಡಿಕೆಯ ಮೇಲು ಇನ್ನು ಮೊದಲೇ ಹೇಳಿದ ಹಾಗೆ ಇದು ವ್ಯಕ್ತಿಗತ ಖಾಸಗಿ ಹಕ್ಕನ್ನೇ ಕಸಿಯುವ ರೂಪುರೇಷೆ ಹೊಂದಿದೆ.


