Thursday, November 20, 2025
HomeLatest NewsGoogle Maps ಗೆ ಸ್ಪರ್ಧೆ ನೀಡ್ತಾ ಇದೆ Mappls – ಯಾವದು ಬೆಸ್ಟ್?

Google Maps ಗೆ ಸ್ಪರ್ಧೆ ನೀಡ್ತಾ ಇದೆ Mappls – ಯಾವದು ಬೆಸ್ಟ್?

ಗೂಗಲ್ ಗೂಗಲ್ ಮ್ಯಾಪ್ ಗೆ ಶಾಕ್ ಬಂತು ಸ್ವದೇಶಿ ಆಪ್ ಇನ್ಮೇಲೆ ಎಲ್ಲಾ ಕಾಣುತ್ತೆ ಗೂಗಲ್ ಮ್ಯಾಪ್ ಹಳ್ಳಿಯಿಂದ ದಿಲ್ಲಿವರೆಗೂ ಬೀದರನಿಂದ ಬೆಂಗಳೂರಿನ ತನಕ ಎಲ್ಲಾ ಕಡೆ ಗೂಗಲ್ ಮ್ಯಾಪ್ ಬಳಕೆ ಆಗ್ತಿದೆ. ಯಾವ ಕಡೆ ಯಾವ ಕಡೆ ಅಂತ ವಿಂಡೋ ಹೊರಗೆ ಹಾಕಿ ದಾರಿ ಹೋಗೋವರನ್ನ ಕೇಳದ ರೀತಿ ಸೀದಾ ಮನೆ ಒಳಗೆ ಅಥವಾ ಹೋಗೋ ಜಾಗದ ಗೇಟಿನ ಮುಂದೆ ಕರ್ಕೊಂಡು ಹೋಗಿ ನಿಲ್ಲಿಸೋ ರೀತಿ ಗೂಗಲ್ ಮ್ಯಾಪ್ ಡೆವಲಪ್ ಆಗಿದೆ. ಭಾರತದಲ್ಲಿ ಈ ಗೂಗಲ್ ಮ್ಯಾಪ್ ಗೆ ಅತಿ ದೊಡ್ಡ ಮಾರ್ಕೆಟ್ ಕೂಡ ಇದೆ. ಯಾವ ಲೆವೆಲ್ ಗೆ ಅಂದ್ರೆ ಇಂಟರ್ ಸ್ಟೇಟ್ ಟ್ರಾವೆಲ್ ಮಾಡೋರು ಕೂಡ ಸೀದಾ ಪಕ್ಕದ ರಾಜ್ಯ ಅಥವಾ ಉತ್ತರ ಭಾರತದ ಯಾವುದೋ ರಾಜ್ಯಕ್ಕೆ ಡ್ರೈವ್ ಮಾಡ್ಕೊಂಡು ಹೋಗಬೇಕು ಅನ್ನೋರು ಕೂಡ ತಲೆ ಕೆಡಿಸಿಕೊಳ್ಳಲ್ಲ ಈಗ ರೂಟ್ ಗೊತ್ತಿಲ್ಲ ಅಂತ ಮ್ಯಾಪ್ ಹಾಕೊಂಡು ಸುಮ್ಮನೆ ಮ್ಯಾಪ್ ತೋರಿಸದೆ ಹೋಗ್ತಾರೆ ಅಷ್ಟೇ ಈಗ ಇದೆ ಗೂಗಲ್ ಮ್ಯಾಪ್ ಗೆ ದೊಡ್ಡ ಚಾಲೆಂಜ್ ಎದುರಾಗಿದೆ ಮ್ಯಾಪಲ್ಸ್ ಅನ್ನೋ ಇಂಡಿಯನ್ ಮ್ಯಾಪ್ ಆಪ್ ಸಂಚಲನ ಸೃಷ್ಟಿಸುತ್ತಾ ಇದೆ ಅಷ್ಟೇ ಅಲ್ಲ ಗೂಗಲ್ ಮ್ಯಾಪ್ ನಲ್ಲಿ ಇರ್ತಾ ಇದ್ದ ಕೆಲ ಸಮಸ್ಯೆಗಳನ್ನ ಕೂಡ ಈ ಮ್ಯಾಪ್ ಪರಿಹಾರ ಮಾಡ್ತಿದೆ ಅದ್ಭುತವಾಗಿ ದಾರಿ ತೋರಿಸುತ್ತೆ ಅಂತ ಹೇಳ್ತಿದ್ದಾರೆ ಕೇಂದ್ರ ಸಚಿವರುಗಳು ಇದನ್ನ ಯೂಸ್ ಮಾಡೋಕೆ ಶುರು ಮಾಡಿಬಿಟ್ಟಿದ್ದಾರೆ ಹಾಗಿದ್ರೆ ಏನಿದು ಮ್ಯಾಪಲ್ಸ್ ಭಾರತದ ರಸ್ತೆಗಳಿಗೆ ಈ ಸ್ವದೇಶಿ ಮ್ಯಾಪ್ ಬೆಸ್ಟ್ ಅಂತ ಹೇಳ್ತಿರೋದು ಯಾಕೆ ಇದರಲ್ಲಿ ಏನೆಲ್ಲಾ ಫೀಚರ್ಸ್ ಇವೆ ದೈತ್ಯಗೂಗಲ್ ಮ್ಯಾಪ್ ಗೆ ಕಾಂಪಿಟಿಟರ್ ಆಗಿ ಬೆಳೆಯೋಕೆ ಸಾಧ್ಯ ಆಗುತ್ತಾ ಮ್ಯಾಪಲ್ಸ್ ಗೆ ಇರೋ ಚಾಲೆಂಜಸ್ ಏನು.

ಮ್ಯಾಪಲ್ಸ್ ಮ್ಯಾಪ್ ಅಲ್ಲಿ ಸಿಂಪಲ್ ಆಗಿ ಹೇಳೋದಾದ್ರೆ ಇದೊಂದು ಡಿಜಿಟಲ್ ಮ್ಯಾಪಿಂಗ್ ಅಂಡ್ ನ್ಯಾವಿಗೇಶನ್ ಪ್ಲಾಟ್ಫಾರ್ಮ್ ಸೇಮ್ಗೂಗಲ್ ಮ್ಯಾಪ್ ರೀತಿನೇ ವರ್ಕ್ ಮಾಡುತ್ತೆ. ಮ್ಯಾಪ್ ಮೈ ಇಂಡಿಯಾ ಅನ್ನೋ ಸ್ವದೇಶಿ ಕಂಪನಿ ಇದನ್ನ ಡೆವಲಪ್ ಮಾಡಿದೆ. ಈಗ ಆಲ್ರೆಡಿ ಮ್ಯಾಪಲ್ಸ್ ಅನ್ನೋ ಮೊಬೈಲ್ ಅಪ್ಲಿಕೇಶನ್ ಕೂಡ ರಿಲೀಸ್ ಆಗಿದ್ದು ಆಂಡ್ರಾಯ್ಡ್ ನ ಪ್ಲೇ ಸ್ಟೋರ್ ಮತ್ತು ಆಪಲ್ ನ ಆಪ್ ಸ್ಟೋರ್ ಎರಡು ಕಡೆ ಲಭ್ಯ ಇದೆ ಅವರ ಈ ವೆಬ್ಸೈಟ್ಗೂ ಹೋಗಿ ನೀವು ಮ್ಯಾಪಲ್ಸ್ ನ ಬಳಕೆ ಮಾಡಬಹುದು. ಇಲ್ಲಿ ಕೆಲ ಯೂನಿಕ್ ಫೀಚರ್ಸ್ ನಿಂದ ಸಿಕ್ಕಾಪಟ್ಟೆ ಇದು ಸೌಂಡ್ ಮಾಡ್ತಾ ಇದೆ. ಏನೇನಿದೆ ಮ್ಯಾಪಲ್ಸ್ ನಲ್ಲಿ ಮೊದಲನೆದಾಗಿ ನಿಖರವಾದ ನಕ್ಷೆ ಇರುತ್ತೆ ಪ್ರತಿ ರೋಡ್ ಬಿಲ್ಡಿಂಗ್ ಲ್ಯಾಂಡ್ ಮಾರ್ಕ್ ಗಡಿಗಳ ಮಾಹಿತಿಯನ್ನ ಮಲ್ಟಿಪಲ್ ಡೇಟಾ ಸೋರ್ಸ್ ನಿಂದ ಪಡೆದು ವೆರಿಫೈ ಮಾಡಿ ಇಂಟಿಗ್ರೇಟ್ ಮಾಡಲಾಗಿದೆ. ಇದುವರೆಗೆ ಮ್ಯಾಪಲ್ಸ್ 7ವರೆ ಸಾವಿರಕ್ಕೂ ಹೆಚ್ಚು ನಗರಗಳನ್ನ ಕವರ್ ಮಾಡಿದೆ. ರಸ್ತೆ ಹೆಸರು ಲೇನ್ ಒನ್ ವೇ ರೂಲ್ ಸೇರಿ ನಗರಗಳ ಪ್ರತಿ ಏರಿಯಾ ಮಾಹಿತಿ ಇದರಲ್ಲಿ ಲಭ್ಯ ಇದೆ ಅಂದ್ರೆ ಆಲ್ರೆಡಿ ಒಂದಿಷ್ಟು ಲಭ್ಯ ಇದೆ ಉಳಿದವನ್ನ ಆದಷ್ಟು ಬೇಗ ಅಪ್ಡೇಟ್ ಮಾಡಲಾಗುತ್ತೆ ಹಾಗೆ ಎಂಟು ಲಕ್ಷಕ್ಕೂ ಅಧಿಕ ಹಳ್ಳಿಗಳನ್ನು ಕವರ್ ಮಾಡಲಾಗಿದೆ ಹಳ್ಳಿಗಳ ಕನೆಕ್ಟಿಂಗ್ ರಸ್ತೆಗಳು ಶಾಲೆ ಪಂಚಾಯಿತಿಗಳು ಮತ್ತು ಹೆಲ್ತ್ ಕೇರ್ ಸೆಂಟರ್ ಸೇರಿ ವಸತಿ ಪ್ರದೇಶದ ಮಾಹಿತಿ ಕೂಡ ಲಭ್ಯ ಇದೆ. ಹಾಗೆ ಎಲ್ಲಾ ಬಗೆಯ ಲಕ್ಷಾಂತರ ಕಿಲೋಮೀಟರ್ ರಸ್ತೆಗಳು ಉದಾಹರಣೆಗೆ ನ್ಯಾಷನಲ್ ಹೈವೇ, ಎಕ್ಸ್ಪ್ರೆಸ್ ವೆ, ರಾಜ್ಯ ಹೈವೇ, ಹಳ್ಳಿಗಳ ರಸ್ತೆಗಳು ಸೇರಿವೆ. ಇವುಗಳನ್ನ ಕಾಲಕಾಲಕ್ಕೆ ಅಪ್ಡೇಟ್ ಕೂಡ ಮಾಡ್ತಾ ಇದ್ದಾರೆ. ನಿಖರ ನಕ್ಷೆಯನ್ನು ಒದಗಿಸ್ತಾ ಇದ್ದಾರೆ. ಇನ್ನು ಮ್ಯಾಪಲ್ಸ್ ಕಾಂಪ್ಲೆಕ್ಸ್ ಫ್ಲೈ ಓವರ್ ಜಂಕ್ಷನ್ ಗಳ ಟುಡಿ ವ್ಯೂ ಕೊಡುತ್ತೆ. ಇದರಿಂದ ಚಾಲಕರಿಗೆ ಯಾವುದೇ ಕನ್ಫ್ಯೂಷನ್ ಇಲ್ಲದೆ ಸರಿಯಾದ ಮಾರ್ಗದಲ್ಲಿ ಟರ್ನ್ ತಗೊಳೋಕೆ ಸಾಧ್ಯ ಆಗುತ್ತೆ. ಈಗ ಒಂದು ಜಂಕ್ಷನ್ ಗೆ ಹೋಗಿದ್ದೇವೆ. ಕೆಳಗೊಂದು ರೋಡ್ ಹೋಗಿದೆ, ಮೇಲೆ ಫ್ಲೈ ಓವರ್ ಹೋಗಿದೆ. ಮ್ಯಾಪ್ ನಲ್ಲಿ ಸ್ಟ್ರೆಯಟ್ ಆಗಿ ಕಾಣಿಸ್ತಿದೆ ಹೆಂಗೆ ಹೋಗಲಿ ಅನ್ನೋ ಕನ್ಫ್ಯೂಷನ್ ಇರುತ್ತೆ.

ಮುಂಚೆ ಗೂಗಲ್ ಮ್ಯಾಪ್ಸ್ ನಲ್ಲಿ ತುಂಬಾ ಸಮಸ್ಯೆ ಆಗ್ತಿತ್ತು. ಈಗ ಗೂಗಲ್ ಮ್ಯಾಪ್ ನಲ್ಲಿ ಟೇಕ್ ಫ್ಲೈ ಓವರ್ ಅಂತ ತೋರಿಸೋಕೆ ಶುರು ಮಾಡಿದ್ದಾರೆ. ಆದ್ರೆ ಮ್ಯಾಪಲ್ಸ್ ನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪಕ್ಕದಲ್ಲಿ 2ಡಿ ಇಮೇಜ್ ಅನ್ನ ತೋರಿಸಿ ಯಾವ ರೀತಿ ಮೇಲಕ್ಕೆ ಹತ್ತಬೇಕು ಅದನ್ನ ಕ್ಲಿಯರ್ ಕಟ್ ಆಗಿ ಎಸ್ಟಾಬ್ಲಿಷ್ ಮಾಡೋಕ್ಕೆ ಶುರು ಮಾಡಿದ್ದಾರೆ. ಇದು ಇಂಪಾರ್ಟೆಂಟ್ ಇದು. ಇದೇ ಸಮಸ್ಯೆಯಿಂದ ಕಳೆದ ವರ್ಷ ಏಪ್ರಿಲ್ ನಾಲ್ಕನೇ ತಾರೀಕು ದಿಲ್ಲಿ ಲಕ್ನೋ ಹೈವೇನಲ್ಲಿ ಅಪಘಾತ ಉಂಟಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ರು. ತನಿಕೆ ವೇಳೆಗೂಗಲ್ ಮ್ಯಾಪ್ ತೋರಿಸಿದ ತಪ್ಪಾದ ಮಾಹಿತಿಯಿಂದ ದುರಂತ ಆಗಿದೆ ಅಂತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ರು. ಹಾಗೆ ಉತ್ತರಪ್ರದೇಶದ ಗೋರಕ್ಪುರ್ ಸಮೀಪ ಗೂಗಲ್ ಮ್ಯಾಪ್ ನಂಬಿಕೊಂಡು ಇನ್ನು ರೆಡಿಯೇ ಆಗದ ನ್ಯಾಷನಲ್ ಹೈವೆಗೆ ಕಾರ್ ಹತ್ತಿತ್ತು. ಮುಂಬೈನಲ್ಲಿ ಮಹಿಳೆಯೊಬ್ಬರು ಬ್ಲೈಂಡ್ ಆಗಿ Google ಮ್ಯಾಪ್ ನಂಬಿಕೊಂಡು ಡ್ರೈವ್ ಮಾಡಿದ್ದರಿಂದ ಸೀದಾ ಬ್ರಿಡ್ಜ್ ಕೆಳಗೆ ಹಾರಿ ಕಾರು ನೀರಲ್ಲಿ ಬಿದ್ದು ಹೋಗಿತ್ತು. ವೈಯಕ್ತಿಕ ಅನುಭವ ಕೇಳಿ ನಂದು ಶಿವಮೊಗ್ಗ ಸೈಡ್ನಿಂದ ಬರ್ತಿದ್ದಿ ಟೈಮ್ ನಲ್ಲಿ ಯುಶುವಲ್ಲಿ ನಾವು ಏನು ಮಾಡ್ತಾ ಇದ್ವಿ ಚಿತ್ರದುರ್ಗ ಹತ್ರ ಬಂದು ನ್ಯಾಷನಲ್ ಹೈವೇಗೆ ಕನೆಕ್ಟ್ ಆಗಿ ಅಲ್ಲಿಂದ ಸ್ಟ್ರೈಟ್ ನಾವು ಬೆಂಗಳೂರಿಗೆ ಬರ್ತಾ ಇದ್ವಿ ತುಮಕೂರು ಆಡ್ಕೊಂಡು ಬೆಂಗಳೂರಿಗೆ ಬರ್ತಾ ಇದ್ವಿ. ಆದ್ರೆ ಒಂದು ಸಲ ಏನಾಯ್ತು ಕೆಲ ತಿಂಗಳುಗಳ ಹಿಂದೆ ಆಲ್ಮೋಸ್ಟ್ ಲಾಸ್ಟ್ ಇಯರ್ ಅಂತ ಕಾಣುತ್ತೆ. ಹೊಸ ಹೈವೇ ತೋರಿಸ್ತೀನಿ ಅಂತ ಗೂಗಲ್ ಮ್ಯಾಪ್ ಆ ರೂಟ್ ತೋರಿಸ್ತು. ಅದೇನು ಅಂಡರ್ ಕನ್ಸ್ಟ್ರಕ್ಷನ್ ನನಗೇನು ಗೊತ್ತು ಮ್ಯಾಪ್ ತೋರಿಸ್ತಾ ಇಲ್ಲ ಅಂತ ನಾನು ಹೋದೆ. ನೋಡಿದ್ರೆ ಸೇಮ್ ಇದೆ ರೀತಿ ಹಿಂಗೆ ಮೇಲೆ ಫ್ಲೈ ಓವರ್ ಹತ್ತಿ ಮುಂದಕ್ಕೆ ಹೋದ್ರೆ ಅರ್ಧ ತುಂಡಾಗಿದೆ ಮುಂದೆ ಇಲ್ಲ ಫ್ಲೈ ಓವರ್ ಆ ರೀತಿ ಕೆಲವೊಂದು ಕಡೆ ರೋಡಲ್ಲಿ ಹೋಗ್ಬಿಟ್ಟಿದೀವಿ ನೂರಾರು ಕಿಲೋಮೀಟರ್ ಹೋಗ್ಬಿಟ್ಟಿದೀವಿ. ಆಮೇಲೆ ನೋಡಿದ್ರೆ ಮುಂದೆ ರೋಡ್ ಇಲ್ಲ ಕಲ್ಲು ಹುಲ್ಲೆಲ್ಲಾ ಹಾಕಿಟ್ಟಿದ್ದಾರೆ ಇನ್ನು ಕನ್ಸ್ಟ್ರಕ್ಷನ್ ಆಗ್ತಿದೆ. ವಾಪಸ್ ಹೆಂಗೆ ಬರೋದು ಗೊತ್ತಿಲ್ಲ ಲೇಟ್ ನೈಟ್ ಆಗಿದೆ.

ಬಹಳ ಸಮಸ್ಯೆ ಆಯ್ತು ಆಮೇಲೆ ಎಷ್ಟೋ ಕಿಲೋಮೀಟರ್ ಹಳ್ಳಿ ಗಾಡಿನ ಸಣ್ಣ ಸಣ್ಣ ರೋಡಲ್ಲಿ ಟ್ರಾವೆಲ್ ಮಾಡಿ ಲೇಟ್ ನೈಟ್ ಆಮೇಲೆ ಅದೆಲ್ಲೋ ಸೀದ ಹಾಸನ ಸೈಡ್ ಬಂದು ಕನೆಕ್ಟ್ ಆಗಿ ಹಾಸನ ಬೆಂಗಳೂರು ಹೈವೇ ಮೂಲಕ ಆಮೇಲೆ ಬೆಂಗಳೂರಿಗೆ ಬರಂಗ ಆಯ್ತು ಎಲ್ಲಿಂದ ಶಿವಮೊಗ್ಗದಿಂದ ಹೊರಟಿರೋದು ನಾವು ಎಲ್ಲಿಗೆ ಬರಬೇಕಾಗಿತ್ತು ನಾವು ಆಮೇಲೆ ಹಾಸನ ರೋಡಿಗೆ ಕನೆಕ್ಟ್ ಆಗ್ಬಿಟ್ಟು ಬೆಂಗಳೂರಿಗೆ ಬರುವಂತ ಪರಿಸ್ಥಿತಿ ಬಂತು ಏನೋ ಹೀಗೆಗೂಗಲ್ ಮ್ಯಾಪ್ ಎಷ್ಟೇ ಪರ್ಫೆಕ್ಟ್ ಇದ್ರೂ ಕೂಡ ಎಷ್ಟೇ ಅಡ್ವಾನ್ಸ್ಡ್ ಆಗಿದ್ರೂ ಕೂಡ ಈ ರೀತಿ ಎಡವಟ್ಟುಗಳು ಕೂಡ ಆಗಿವೆ ಹಾಗಂತ ಮ್ಯಾಪ್ ಮೈ ಇಂಡಿಯಾದಲ್ಲಿ ಎಲ್ಲ ಪರ್ಫೆಕ್ಟ್ ಇರುತ್ತೆಗೂಗಲ್ ಗೆ ಸರಿಸಾಟಿ ಅಂತ ಹೇಳಲ್ಲಗೂಗಲ್ ನಷ್ಟು ಲೈವ್ ಅಪ್ಡೇಟ್ ಸಿಗದೆ ಇರಬಹುದು ಟ್ರಾಫಿಕ್ ಅಪ್ಡೇಟ್ ಸಿಗದೆ ಇರಬಹುದುಗೂಗಲ್ ನಷ್ಟು ಫಾಸ್ಟ್ ಆಗಿ ಅಲ್ಲಿ ಎಲ್ಲವೂ ಅಪ್ಡೇಟ್ ಆಗದೆ ಇರಬಹುದು ಡೇಟಾಬೇಸ್ ಚಿಕ್ಕದು ಇರೋದ್ರಿಂದ ಬಟ್ ಒಂದು ಹೊಸ ಇಂಡಿಯನ್ ಕಂಪನಿ ಶುರುವಾಗಿದೆ ಒಂದು ಪ್ರಯತ್ನ ಪಡ್ತಾ ಇದ್ದಾರೆ ಹಾಗಾಗಿ ನಿಮಗೆ ಮಾಹಿತಿ ಕೊಡೋ ಪ್ರಯತ್ನ ಇದರ ಬಗ್ಗೆ ಮ್ಯಾಪಲ್ಸ್ ಇಂದ ನಮಗೆ ಯಾವುದೇ ರೀತಿ ಕಮರ್ಷಿಯಲ್ ಕಲ್ಯಾಬರೇಷನ್ ಇಲ್ಲ ಕಾಂಟ್ಯಾಕ್ಟ್ ಆಗಿಲ್ಲ ನಮಗೂ ಅವರಿಗೂನು ಆದರೆ ಬಿಗ್ ಫಾರಿನ್ ಕಂಪನಿಸ್ ಮುಂದೆ ಜೋಹೋ ಹೇಗೆ ಪ್ರಯತ್ನ ಪಟ್ಟಾಗ ನಾವು ಅದರ ಬಗ್ಗೆ ಮಾಹಿತಿ ಕೊಟ್ಟವೋ ಹಾಗೆ ದೈತ್ಯ ಕಂಪನಿಗಳ ವಿರುದ್ಧ ಸೆಟ ನಿಂತುಕೊಂಡು ನಮ್ದು ಭಾರತದ ಒಂದು ಕಂಪನಿ ಮಾಡ್ಕೊಂಡು ಏನೋ ಒಂದು ಪ್ರಯತ್ನ ಪಡ್ತೀವಿ ಅಂತ ಹೊರಟಿದ್ದಾರಲ್ಲ ಅದರಲ್ಲಿ ಕೆಲವೊಂದಷ್ಟು ಅಟ್ರಾಕ್ಟಿವ್ ಫೀಚರ್ಸ್ ಕೂಡ ಇದೆ ಅದನ್ನ ನಿಮಗೆ ಮಾಹಿತಿ ರೀತಿ ಕೂಡ ಪ್ರಯತ್ನ ಇದು. ಅಷ್ಟು ಮಾತ್ರ ಅಲ್ಲ ಸ್ನೇಹಿತರೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಕಾರಲ್ಲಿ ಮ್ಯಾಪಲ್ಸ್ ಮ್ಯಾಪ್ ನ ಯೂಸ್ ಮಾಡಿ ಅದರ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೊಂದು ಅದ್ಭುತ ಸ್ವದೇಶಿ ಆಪ್ ಅಂತ ಕರೆದಿದ್ದಾರೆ.

ಆಲ್ರೆಡಿ ಇಂಡಿಯನ್ ಕಾರ್ ಮೇಕರ್ಸ್ ಸುಮಾರು ಕಂಪನಿಗಳು ಈ ಮ್ಯಾಪ್ ಅಲ್ಲಿ ಸುಟ್ಟಿಗೆ ಇಂಟಿಗ್ರೇಟ್ ಮಾಡ್ಕೊಂಡಿದ್ದಾರೆ ಆಫ್ಲೈನ್ ಮ್ಯಾಪ್ಸ್ ಗೆಗೂಗಲ್ ಮ್ಯಾಪ್ ಏನು ಅದು ಲೈವ್ ಕೊಡುತ್ತಲ್ವಾ ಲೈವ್ ಮ್ಯಾಪ್ ಅದು ಫೋನ್ಗೆ ಕನೆಕ್ಟ್ ಮಾಡ್ಕೊಂಡು ನೀವು ವೈರ್ಲೆಸ್ ವೈರೋ ಆಂಡ್ರಾಯ್ಡ್ ಆಟೋ ಆಪಲ್ ಕಾರ್ ಪ್ಲೇನ್ ಲೋಕ ಯೂಸ್ ಮಾಡ್ತೀರಿ. ಆದ್ರೆ ನಿಮ್ಮ ಕಾರ್ ನಲ್ಲೂ ಕೂಡ ಇನ್ಬಿಲ್ಟ್ ನ್ಯಾವಿಗೇಶನ್ ಸಿಸ್ಟಮ್ ಇರುತ್ತೆ ಸಾಮಾನ್ಯವಾಗಿ ಎಲ್ಲ ಮಿಡ್ ಇಂದ ಹೈ ರೇಂಜ್ ಕಾರ್ ಗಳಲ್ಲೆಲ್ಲ ಇದ್ದೇ ಇರುತ್ತೆ. ಮಿಡ್ ರೇಂಜ್ ಇಂದ ಶುರುವಾಗಿ ಎಲ್ಲದರಲ್ಲೂ ಇದ್ದೇ ಇರುತ್ತೆ. ಇವಾಗಂತೂ ಎಂಟ್ರಿ ಲೆವೆಲ್ ಕಾರುಗಳಲ್ಲೂ ಕೂಡ ಕೊಡ್ತಾ ಇದ್ದಾರೆ. ಮುಂಚೆ ಎಲ್ಲ ಚಿಪ್ ಹಾಕ್ಬೇಕಾಗಿತ್ತು ನ್ಯಾವಿಗೇಶನ್ ದು ಮ್ಯಾಪ್ ಇರೋ ಮೆಮೊರಿ ಕಾರ್ಡ್ ಹಾಕ್ಬೇಕಾಗಿತ್ತು ಅದನ್ನ ಕದ್ದುಕೊಂಡು ಬಿಡ್ತಿದ್ರು ಕೆಲವರೆಲ್ಲ. ಇವಾಗೆಲ್ಲ ಒಳಗಡೆ ಇಂಟಿಗ್ರೇಟೆಡ್ ಆಗಿ ಬರ್ತಾ ಇದೆ. ಆ ರೀತಿ ಇಂಟಿಗ್ರೇಟೆಡ್ ಆಗಿ ಬರ್ತಿರೋದ್ರಲ್ಲಿ ಬಹುತೇಕ ಕಂಪನಿಗಳಲ್ಲಿ ಈಗ ಭಾರತದ ಮ್ಯಾಪ್ ಮೈ ಇಂಡಿಯಾ ಮ್ಯಾಪ್ ಗಳನ್ನೇ ಇಂಟಿಗ್ರೇಟ್ ಮಾಡಲಾಗ್ತಿದೆ. ನಾನು ಕೂಡ ನನ್ನ ಕಾರಲ್ಲಿ ಗೂಗಲ್ ಮ್ಯಾಪ್ಸ್ ನೇ ಜಾಸ್ತಿ ಯೂಸ್ ಮಾಡೋದು ಲೈವ್ ಟ್ರಾಫಿಕ್ ಅಪ್ಡೇಟ್ ಅನ್ನೋ ದೊಡ್ಡ ವಾರದ ರೀತಿ ಅದರಲ್ಲಿ ಹೆಲ್ಪ್ ಮಾಡುತ್ತೆ. ಲೇಟೆಸ್ಟ್ ರೋಡ್ ಕ್ಲೋಜರ್ ಇದ್ರೆ ಗೊತ್ತಾಗುತ್ತೆ ಅನ್ನೋ ಕಾರಣಕ್ಕೋಸ್ಕರ ನಾನು ಅದನ್ನ ಯೂಸ್ ಮಾಡ್ತೀನಿ. ಕೆಲ ಗಂಟೆಗಳದ್ದು ಕೂಡ ಅಪ್ಡೇಟ್ ಸಿಗುತ್ತೆ ಅಂತ ಹೇಳಿ. ಆದ್ರೆ ಸ್ನೇಹಿತರೆ ನಾನು ಆಗಾಗ ಮ್ಯಾಪ್ ಮೈ ಇಂಡಿಯಾದ ಮ್ಯಾಪಲ್ಸ್ ಮ್ಯಾಪ್ ಏನಿದೆ ಅದು ಕೂಡ ಕಾರಲ್ಲಿ ಏನು ಇನ್ಬಿಲ್ಟ್ ಇದೆ ಅದನ್ನ ಕೂಡ ಯೂಸ್ ಮಾಡಿದ್ದೀನಿ. ಮೇಲೆ ಹೇಳಿದ ವಿಚಾರಗಳು ಸ್ವಲ್ಪ ನಿಜನೆ ಎಸ್ಪೆಷಲಿ ಫ್ಲೈ ಓವರ್ ಹತ್ತಕ್ಕೆ ಇದ್ದಾಗ ಕೆಳಗೆ ಯಾವುದು ಫ್ಲೈ ಓವರ್ ನ ಪಾತ್ ಯಾವುದು ಕರೆಕ್ಟಆಗಿ ಡಿಸ್ಟಿಂಕ್ಟ್ ಮಾಡಿ ಅದನ್ನ ಸಪರೇಟ್ ಮಾಡಿ ತೋರಿಸೋದಾಗಿರಬಹುದು ಸ್ವಲ್ಪ ಒಂತರಡಿ 3ರಡಿ ಸ್ಟೈಲ್ ನಲ್ಲಿ ಗ್ರಾಫಿಕಲಿ ರಿಚ್ ಆಗಿ ತೋರಿಸೋದಾಗಿರಬಹುದು.

ಡೈವರ್ಷನ್ಸ್ ಎಲ್ಲ ಇದ್ದಾಗ ಅದು ಸ್ವಲ್ಪ ಎಫೆಕ್ಟಿವ್ ಆಗಿ ಮಾಡುತ್ತೆ ಈ ಮ್ಯಾಪ್ ಮೈ ಇಂಡಿಯಾದ ಮ್ಯಾಪ್ ಅಷ್ಟು ಮಾತ್ರ ಅಲ್ಲ ಇನ್ನೊಂದು ಅದ್ಭುತವಾಗಿರೋ ಫೀಚರ್ ಏನಿದೆ ಅಂದ್ರೆ ಇದರಲ್ಲಿ ಹೈವೇನಲ್ಲಿ ಹೋಗುವಾಗ ಮುಂದೆ ಎಷ್ಟು ಟೋಲ್ ಇದೆ ಮತ್ತು ಟೋಲ್ಗೆ ಎಷ್ಟು ಅಮೌಂಟ್ ಕಟ್ಟಬೇಕಾಗುತ್ತೆ ಅನ್ನೋದನ್ನ ಕೂಡ ಕ್ಯಾಲ್ಕುಲೇಟ್ ಮಾಡಿ ತೋರಿಸುತ್ತೆ. Google ನಲ್ಲೂ ಬಂದಿದೆ. ಇವರು ಕೂಡ ಅದನ್ನ ತೋರಿಸ್ತಾ ಇದ್ದಾರೆ. ಲೋಕಲ್ ಭಾಷೆ ಗೂಗಲ್ ಮ್ಯಾಪ್ಸ್ ರೀತಿ ಇದರಲ್ಲೂ ಕೂಡ ನ್ಯಾವಿಗೇಶನ್ ಮತ್ತು ರೂಟ್ ಗೈಡೆನ್ಸ್ ಲೋಕಲ್ ಭಾಷೆಯಲ್ಲಿ ಲಭ್ಯ ಇದೆ. ಕನ್ನಡ, ತಮಿಳು ಗುಜರಾತಿ ಸೇರಿ ಒಟ್ಟು ಒಂಬತ್ತು ಸ್ಥಳೀಯ ಭಾಷೆಗಳಲ್ಲಿ ಲಭ್ಯ ಇದೆ. ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಇರುತ್ತೆ. ಜೊತೆಗೆ ಮ್ಯಾಪ್ ಮೈ ಇಂಡಿಯಾದ ಮ್ಯಾಪಲ್ಸ್ ಆಪ್ ಅನ್ನ ಇನ್ಸ್ಟಾಲ್ ಮಾಡ್ಕೊಂಡಾಗ ಅಂದರೆ ಕಾರಲ್ಲಿ ಇನ್ಬಿಲ್ಟ್ ಇರುತ್ತಲ್ಲ ಅದು ಲೈವ್ ಇರೋದಿಲ್ಲ ಅದು ಅದು ಆಫ್ಲೈನ್ ಇರುತ್ತೆ. ಅದು ಲೈವ್ ಅಪ್ಡೇಟ್ ಸಿಗಲ್ಲ ಅದರಲ್ಲಿ. ಆದರೆ ನೀವು ಆಪ್ ಇನ್ಸ್ಟಾಲ್ ಮಾಡ್ಕೊಂಡು ಅದನ್ನ ಯೂಸ್ ಮಾಡ್ಕೊಂಡು ಹೋಗ್ತೀರಿ ಅಂತ ಹೇಳಿದ್ರೆ ನಿಮ್ಮ ಫೋನ್ ನಲ್ಲಿ ಅದರಲ್ಲಿ ಈಗ ರಿಯಲ್ ಟೈಮ್ ಟ್ರಾಫಿಕ್ ಗೈಡೆನ್ಸ್ ಅನ್ನ ಕೂಡ ಇಂಟಿಗ್ರೇಟ್ ಮಾಡೋಕೆ ಶುರು ಮಾಡಿದ್ದಾರೆ. ಇಲ್ಲಿ ಸಿಗ್ನಲ್ಸ್ ಇದೆ ಟ್ರಾಫಿಕ್ ಜಾಮ್ ಆಗಿದೆಯಾ ಯಾವ ರೂಟ್ ನಲ್ಲಿ ಹೋದ್ರೆ ವೇಗವಾಗಿ ಹೋಗಬಹುದು ಆ ಮಾಹಿತಿಯನ್ನ ಕೂಡ ಕೊಡೋಕೆ ಶುರು ಮಾಡಿದ್ದಾರೆ. ಇದಕ್ಕಾಗಿ ಮ್ಯಾಪಲ್ಸ್ ಆನ್ ಗ್ರೌಂಡ್ ಸೆನ್ಸಾರ್ಸ್ ಗವರ್ಮೆಂಟ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ಸ್ ಡೇಟಾವನ್ನ ಬಳಕೆ ಮಾಡ್ಕೊಳ್ತಾ ಇದ್ದಾರೆ. ಜೊತೆಗೆ ಯೂಸರ್ ಮೂವ್ಮೆಂಟ್ ಡೇಟಾ ಅಂದ್ರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಹನಗಳು ಸ್ಲೋ ಆಗಿ ಹೋಗ್ತಿದಾವ, ಫಾಸ್ಟ್ ಆಗಿ ಹೋಗ್ತಿದಾವ ಅನ್ನೋ ಮಾಹಿತಿ ಪಡೆದುಕೊಂಡು ಅದನ್ನ ಬಳಕೆದಾರರಿಗೆ ಕೊಡ್ತಾರೆ. ಹಾಗೆ ಈ ಲಾಕ್ ಅಥವಾ ಎಲೆಕ್ಟ್ರಾನಿಕ್ ಲೊಕೇಶನ್ ಅನ್ನೋ ಅದ್ಭುತ ಫೀಚರ್ ಕೂಡ ಇದೆ. ಇದರ ಸಹಾಯದಿಂದ ಪ್ರತಿ ಪ್ಲೇಸ್ಗೂ ಆರು ಕ್ಯಾರೆಕ್ಟರ್ ನ ಒಂದು ಯುನಿಕ್ ಕೋಡ್ ಸೆಟ್ ಮಾಡ್ಕೋಬಹುದು.

ಹಳ್ಳಿಗಳಲ್ಲೂ ಕೂಡ ವರ್ಕ್ ಆಗುತ್ತೆ. ಇದರಿಂದ ನೀವು ಈ-ಕಾಮರ್ಸ್ ಡೆಲಿವರಿ ಅಥವಾ ಯಾರಿಗಾದ್ರೂ ನಿಮ್ಮ ಲೊಕೇಶನ್ ಕೊಡುವಾಗ ಬಹಳ ಯೂಸ್ಫುಲ್ ಆಗುತ್ತೆ. ನಿಮ್ಮ ಮನೆ ನಂಬರ್ ಊರು ಸ್ಟ್ರೀಟ್ ಇಷ್ಟಿಷ್ಟು ಉದ್ದದ ಅಡ್ರೆಸ್ ಕೊಡೋ ಬದಲಾಗಿ ಜಸ್ಟ್ ಆರು ಡಿಜಿಟ್ನ ಕೋಡ್ ಕೊಟ್ಟರೆ ಸಾಕು ಆ ಮ್ಯಾಪ್ ಅಲ್ಲಿ ಕರ್ಕೊಂಡು ಹೋಗುತ್ತೆ ಆ ಕೋಡ್ ಹಾಕಿದ್ರೆ ಐದನೇದಾಗಿ ಮ್ಯಾಪಲ್ಸ್ ನಲ್ಲಿ ಒಂದಿಷ್ಟು ಸೇಫ್ಟಿ ಫೀಚರ್ಸ್ ನ ಇಂಟಿಗ್ರೇಟ್ ಮಾಡಲಾಗಿದೆ. ಕೆಲ ಸ್ಪೆಸಿಫಿಕ್ ರೋಡ್ಗಳಲ್ಲಿ ಸ್ಪೀಡ್ ಲಿಮಿಟ್ ನ ಅಲರ್ಟ್ ಕೊಡುತ್ತೆ ಹಾಗೆ ಮುಂದೇನಾದ್ರೂ ಅಪಘಾತ ಪೀಡಿತ ವಲಯ ಆಕ್ಸಿಡೆಂಟ್ ಪ್ರೋನ್ ಜೋನ್ ಇದ್ರೆ ಅದರ ಬಗ್ಗೆ ಕೂಡ ಚೆನ್ನಾಗಿ ಮಾಹಿತಿ ಕೊಡುತ್ತೆ. ಇನ್ನು ಈ ಆಪ್ ನಲ್ಲಿ ಡ್ರೈವರ್ ಮಾನಿಟರಿಂಗ್ ಡಿಎಂಎಸ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಎ ಡ್ಯಾಶ್ ಇಂಟಿಗ್ರೇಟ್ ಮಾಡಿದೀವಿ ಅಂತಾನೂ ಹೇಳ್ತಿದ್ದಾರೆ. ಹಾಗೆ ನೀವು ಕಾರ್ನಲ್ಲಿ ಈ ಮ್ಯಾಪ್ಸ್ ನ ಯೂಸ್ ಮಾಡ್ತಿದ್ರೆ ಹೈವೇನಲ್ಲಿರೋ ಪ್ರತಿ ಲೈನ್ ಬಗ್ಗೆ ಕೂಡ ಮಾಹಿತಿ ಕೊಡುತ್ತೆ ಒಂದು ಹೈವೇ ಬಗ್ಗೆ ಮಾತ್ರ ಅಲ್ಲ ಲೈನ್ ಬೈ ಲೈನ್ ನಿಮಗೆ ಮಾಹಿತಿ ಕೊಡುತ್ತೆ. ಸಿಕ್ಸ್ ಲೈನ್ ಹೈವೇ ಆದ್ರೆ ಈ ಕಡೆ ತ್ರೀ ಆಕಡೆ ತ್ರೀ ಕ್ಲಿಯರ್ ಮಾಹಿತಿ ಕೊಡುತ್ತೆ. ಅಷ್ಟು ಮಾತ್ರ ಅಲ್ಲ ಯಾವ ಲೈನ್ ಬಳಸಿ ಹೈವೇನಿಂದ ಎಕ್ಸಿಟ್ ಅಥವಾ ಎಂಟ್ರಿ ಆಗಬೇಕು ಅನ್ನೋದರ ಅಕ್ಯುರೇಟ್ ಆಗಿ ಅದನ್ನ ನಿಮಗೆ ಗ್ರಾಫಿಕಲಿ ತೋರಿಸುತ್ತೆ. ಈಗ ಮುಖ್ಯವಾಗಿರೋ ಪ್ರಶ್ನೆ ಗೂಗಲ್ ವರ್ಸಸ್ ಮ್ಯಾಪಲ್ಸ್ ಯಾವುದು ಬೆಸ್ಟ್? ಸ್ನೇಹಿತರೆ Google ಮ್ಯಾಪ್ಸ್ ಗೆ ಹೋಲಿಸಿದರೆ ಮ್ಯಾಪಲ್ಸ್ ಭಾರತದ ಮಾರ್ಕೆಟ್ ಗೆ ಸೂಕ್ತ ಅಂತ ಹೇಳ್ತಿದ್ದಾರೆ. ಯಾಕಂದ್ರೆ ಮ್ಯಾಪಲ್ಸ್ ನ ಪರ್ಟಿಕ್ಯುಲರ್ ಆಗಿ ಭಾರತವನ್ನ ಮೈಂಡ್ ಅಲ್ಲಿ ಇಟ್ಕೊಂಡು ಡಿಸೈನ್ ಮಾಡಲಾಗಿದೆ. ಇದಕ್ಕೆ ನಮ್ಮ ಇಸ್ರೋ ದ ನಾವಿಕ್ ಮತ್ತು ಇತರ ಸ್ಯಾಟಿಲೈಟ್ ಡೇಟಾಗಳನ್ನ ಕೂಡ ಫೀಡ್ ಮಾಡಲಾಗುತ್ತೆ. ಹೀಗಾಗಿ ಡೀಟೇಲ್ಡ್ ನಕ್ಷೆ ಕೊಡೋಕೆ ಹೆಚ್ಚಿನ ಆಕ್ಸೆಸ್ ಸಿಗುತ್ತೆ ಅಂತ. ಇದರ ಜೊತೆಗೆ ಗೂಗಲ್ ಭಾರತದ ಬಳಕೆದಾರರ ಡೇಟಾನ ಬೇರೆ ದೇಶದಲ್ಲಿ ಸರ್ವರ್ಗಳಲ್ಲಿ ಸ್ಟೋರ್ ಮಾಡ್ತಾರೆ. ಆದರೆ ಮ್ಯಾಪಲ್ಸ್ ತನ್ನ ಡೇಟಾವನ್ನ ಭಾರತದಲ್ಲೇ ಸ್ಟೋರ್ ಮಾಡುತ್ತೆ. ಇದರಿಂದ ನಮ್ಮ ಡೇಟಾ ನಮ್ಮ ದೇಶದಲ್ಲೇ ಇರುತ್ತೆ.

ನಮ್ಮ ದೇಶದ ಕಾನೂನಿನ ಪ್ರೊಟೆಕ್ಷನ್ ಗೆ ಅದು ಒಳಪಡುತ್ತೆ. ಮ್ಯಾಪಲ್ಸ್ ಚಾಲೆಂಜಸ್ ಎಸ್ ಸ್ನೇಹಿತರೆ ಏನೇ ಇದ್ದರೂ ಕೂಡ ಗೂಗಲ್ ನ ಫೇಸ್ ಮಾಡೋದು ಅಷ್ಟು ಈಸೀ ಇಲ್ಲ. ಎಲ್ಲಾ ರೀತಿಯಲ್ಲೂ ಗೂಗಲ್ ನ ಮ್ಯಾಚ್ ಮಾಡೋದು ಅಷ್ಟು ಈಸೀ ಇಲ್ಲ. ಭಾರತದಲ್ಲಿ ಗೂಗಲ್ ಮ್ಯಾಪ್ಸ್ ಗೆ ಸುಮಾರು ಆರು ಕೋಟಿ ಆಕ್ಟಿವ್ ಬಳಕೆದಾರ ಇದ್ದಾರೆ. ಬಹುತೇಕ ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಮ್ಯಾಪ್ ಬೈ ಡಿಫಾಲ್ಟ್ ಇರುತ್ತೆ. ಇವರನ್ನೆಲ್ಲ ಸಡನ್ಆಗಿ ಮ್ಯಾಪ್ ಅಲ್ಸ್ ಗೆ ಸ್ವಿಚ್ ಮಾಡಿಸೋದು ಕಷ್ಟ. ಎರಡನೆಯದಾಗಿ ಮ್ಯಾಪ್ ಡೇಟಾ ಕಲೆಕ್ಷನ್ ಗೆ ಸಿಕ್ಕಾಪಟ್ಟೆ ಖರ್ಚಾಗುತ್ತೆ. ಗೂಗಲ್ ಅದಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಯಾಟಿಲೈಟ್ ಡೇಟಾಗೋಸ್ಕರನೇ ಪಾರ್ಟ್ನರ್ಶಿಪ್ ಮಾಡ್ಕೊಳ್ಳುತ್ತೆ. ಆಫ್ಕೋರ್ಸ್ ಮ್ಯಾಪಲ್ಸ್ ಗೆ ಸರ್ಕಾರ ಮತ್ತು ಇಸ್ರೋದಿಂದ ಸಪೋರ್ಟ್ ಸಿಗಬಹುದು ಆದ್ರೆ ಅದನ್ನೆಲ್ಲ ಸರಿಯಾಗಿ ಇಂಪ್ಲಿಮೆಂಟ್ ಮಾಡಬೇಕಾಗುತ್ತೆ. ಅಲ್ದೆ ಗೂಗಲ್ ಗೆ ಕೋಟ್ಯಾಂತರ ಯೂಸರ್ಸ್ ಇಂದ ಡೇಟಾ ಸಿಗ್ತಿದೆ. ಮ್ಯಾಪಲ್ಸ್ ಈ ವಿಚಾರದಲ್ಲಿ ತುಂಬಾ ಹಿಂದೆ ಇದೆ. ಲೈವ್ ಟ್ರಾಫಿಕ್ ಡೇಟಾ ವಿಚಾರಕ್ಕೆ ಬಂದಾಗ ಗೂಗಲ್ ತುಂಬಾ ಮುಂದಿರೋದು ಯಾಕೆ ಅಂತ ಹೇಳಿದ್ರೆ ಹೆಚ್ಚಿನ ಜನ ಅದನ್ನ ಬಳಸ್ತಿರೋದ್ರಿಂದ. ಮೂರನೆದಾಗಿ ಟೆಕ್ನಾಲಜಿ ಮತ್ತು ಈ ಎಕೋಸಿಸ್ಟಮ್ ಗೂಗಲ್ ತನ್ನದೇ ಆದ ಎಕೋಸಿಸ್ಟಮ್ ನ ಡೆವಲಪ್ ಮಾಡ್ಕೊಂಡಿದೆ. ಗೂಗಲ್ ಬಳಿ ದೊಡ್ಡ ಪ್ರಮಾಣದಲ್ಲಿಎಐ ಮತ್ತು ಕ್ಲೌಡ್ ಎಕೋ ಸಿಸ್ಟಮ್ ಗಳಿವೆ. ಎಲ್ಲಾ ಕಡೆಗೂ ನ ಅಸಿಸ್ಟೆಂಟ್ ಅನ್ನ ಜೆಮಿನೈ ಅಸಿಸ್ಟೆಂಟ್ ಅನ್ನ ಪರ್ಫೆಕ್ಟ್ ಆಗಿ ಇಂಟಿಗ್ರೇಟ್ ಮಾಡಲಾಗಿದೆ. ಆದ್ರೆ ಮ್ಯಾಪಲ್ಸ್ ಇದನ್ನೆಲ್ಲ ಹೊಸದಾಗಿ ಹ್ಯಾಂಡಲ್ ಮಾಡೋದನ್ನ ಕಲಿಬೇಕು. ಅಷ್ಟು ಮಾತ್ರ ಅಲ್ಲ ಆಪ್ ಡೌನ್ಲೋಡ್ ಮಾಡ್ಕೊಂಡು ಯೂಸ್ ಮಾಡೋಕ್ಕೆ ಬೈಕ್ನಲ್ಲಿ ಯೂಸ್ ಮಾಡೋರಿಗೆ ಓಕೆ ಅದನ್ನ ಹೆಂಗೆ ಸಿಕ್ಕಿಸಿಕೊಂಡು ಮುಂದೆ ನೋಡ್ಕೊಂಡು ಹೋಗಬಹುದು ಮ್ಯಾಪಲ್ಸ್ ಆಪ್ ಅನ್ನ.

ಕಾರ್ಗಳಲ್ಲಿ ದೊಡ್ಡ ಡಿಸ್ಪ್ಲೇನಲ್ಲಿ ಮ್ಯಾಪ್ ನೋಡೋಕೆ ಇಷ್ಟ ಪಡ್ತಾರೆ ಜನ ಅಲ್ಲಿ ಇಂಟಿಗ್ರೇಟ್ ಆಗಿರೋದು ಎರಡೇ ಅಲ್ವಾ ಸದ್ಯಕ್ಕೆ ಲೈವ್ ಮ್ಯಾಪ್ ಬೇಕು ಅಂದ್ರೆ ಎರಡೇ ಇಂಟಿಗ್ರೇಟ್ ಆಗಿರೋದು ಯಾವುದು ಆಂಡ್ರಾಯ್ಡ್ ಆಟೋ ಮತ್ತು apple ಕಾರ್ಪ್ಲೇ ಫೋನ್ ನಲ್ಲಿರುವಂತ ಮ್ಯಾಪ್ ನಿಮ್ಮ ಕಾರ್ ನ ಸ್ಕ್ರೀನ್ ಮೇಲೆ ಪ್ರೊಜೆಕ್ಟ್ ಆಗೋಕೆ ದೊಡ್ಡದಾಗಿ ನಿಮ್ಮ ಫೋನ್ ಆರಾಮಾಗಿ ಡಿಸ್ಪ್ಲೇ ಆಫ್ ಮಾಡಿ ಕೆಳಗೆ ಇಟ್ರು ಕೂಡ ಚಾರ್ಜ್ ಆಗ್ತಾ ಇರುತ್ತೆ ಆದ್ರೆ ಫೋನ್ ನ ಶಕ್ತಿಯನ್ನ ಬಳಸಿಕೊಂಡು ನಿಮ್ಮ ಕಾರ್ ನಿಮಗೆ ಮ್ಯಾಪ್ ಅಲ್ಲಿ ತೋರಿಸ್ತಿರುತ್ತೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ವೈರ್ಡ್ ಇದೆ ವೈರ್ಲೆಸ್ ಕೂಡ ಕೂಡ ಇದೆ ಮುಂಚೆ ಎಲ್ಲ ಫೋನಿಗೆ ಕೇಬಲ್ ಕನೆಕ್ಟ್ ಮಾಡಿದ್ರೆ ಅಲ್ಲಿ ಸ್ಕ್ರೀನ್ ಅಲ್ಲಿ ತೋರಿಸ್ತಾ ಇತ್ತು ಕಾರಲ್ಲಿ ಈಗ ವೈರ್ಲೆಸ್ ಕೂಡ ಬಂದ್ಬಿಟ್ಟಿದೆ ಆಲ್ ಲೆವೆಲ್ನ ಇಂಟಿಗ್ರೇಷನ್ ಆಗಿಹೋಗಿದೆ ಕಾರ್ಗಳಲ್ಲಿ ಮತ್ತು ಫೋನ್ಗಳಲ್ಲಿ ಆಂಡ್ರಾಯ್ಡ್ ಆಟೋ ಮತ್ತು appಪಲ್ ಕಾರ್ ಪ್ಲೇ ಆ ಕನ್ವೀನಿಯನ್ಸ್ ಇದೆ ಅಲ್ಲಿ ಜಸ್ಟ್ ವಾಯ್ಸ್ ಕಮಾಂಡ್ ಮೂಲಕ YouTube ಮ್ಯೂಸಿಕ್ ಅಲ್ಲಿ YouTube ಮ್ಯೂಸಿಕ್ ಪ್ಲೇ ಮಾಡಬೇಕಾ ಅಥವಾ ಯಾರಿಗಾದ್ರೂ ಕಾಲ್ ಮಾಡು ಅಂತ ಹೇಳ್ಬೇಕಾ ಬಂದಿರೋ ಮೆಸೇಜ್ನ ಜೋರಾಗಿ ಓದಿ ಹೇಳು ಅಂತ ಹೇಳ್ಬೇಕಾ ಒಂದು ಸ್ಟಾಪ್ ಆಡ್ ಮಾಡು ಅಂತ ಹೇಳ್ಬೇಕಾ ಅಥವಾ ನನ್ನನ್ನ ನಿಯರ್ ಬೈ ಫ್ಯೂಲ್ ಸ್ಟೇಷನ್ ಗೆ ಡ್ರೈವ್ ಮಾಡ್ಕೊಂಡು ಹೋಗು ಅಂತ ಹೇಳ್ಬೇಕಾ ಎಲ್ಲವೂ ಕೂಡ ಆಂಡ್ರಾಯ್ಡ್ ಆಟೋ ನಲ್ಲಿ ಅದ್ಭುತವಾಗಿ ಇಂಟಿಗ್ರೇಟ್ ಆಗಿದೆ. ಹಾಗಿರಬೇಕಾದ್ರೆ ಒಂದು ಮೌಂಟ್ ಇಟ್ಕೊಂಡು ಮೊಬೈಲ್ ಫೋನ್ನ್ನ ಹಿಂಗೆ ಇಟ್ಕೊಂಡು ಅದರಲ್ಲಿ ಮ್ಯಾಪ್ ನೋಡ್ತಾ ಹೋಗೋದು ಕಾರ್ ಯೂಸರ್ಸ್ ಗೆ ಅಷ್ಟು ಕನ್ವಿನಿಯಂಟ್ ಆಗದೆ ಇರಬಹುದು ಈಗ ಮತ್ತೆ ಆರಂಭದಲ್ಲೇ ಕಾರಲ್ಲಿ ಯೂಸ್ ಮಾಡಿದೀನಿ ಅಂತ ಹೇಳಿದ್ರಲ್ಲ ನೀವು ಕೇಳಬಹುದು. ಅದು ಆಫ್ಲೈನ್ ಮ್ಯಾಪ್ಸ್ ಕಾರಲ್ಲಿ ಇಂಟಿಗ್ರೇಟ್ ಆಗಿದೆ. ಕಾರ್ನ ಸಿಸ್ಟಮ್ ನಲ್ಲೇ ಇದೆ ಫೋನ್ ಕನೆಕ್ಟ್ ಮಾಡೋದು ಬೇಡ. ಕಾರ್ನ ನ್ಯಾವಿಗೇಶನ್ ಸಿಸ್ಟಮ್ ಅನ್ನ ಯೂಸ್ ಮಾಡ್ಕೊಂಡು ಅದರಲ್ಲಿ ಹೋದಾಗ ಸುಮಾರು ಕಾರುಗಳಲ್ಲಿ ಈಗ ಮ್ಯಾಪ್ ಮೈ ಇಂಡಿಯಾದ ಮ್ಯಾಪ್ ಅಲ್ಲಿ ಇದೆ. ಇನ್ಬಿಲ್ಟ್ ಅದು. ಅದು ಲೈವ್ ಅಲ್ಲ. ಅದು ಎಮರ್ಜೆನ್ಸಿಗಳಲ್ಲಿ ಯೂಸ್ ಆಗಬಹುದು. ಆದ್ರೆ ಹೆಚ್ಚಿನ ಜನ ಲೈವ್ ಮ್ಯಾಪ್ ಅನ್ನೇ ಪ್ರಿಫರ್ ಮಾಡೋದ್ರಿಂದ ಸದ್ಯಕ್ಕೆ ಕಾರ್ಗಳಲ್ಲಿ ಮ್ಯಾಪ್ ಮೈ ಇಂಡಿಯಾದ ಮ್ಯಾಪಲ್ಸ್ ಆಂಡ್ರಾಯ್ಡ್ ಆಟೋವನ್ನ ಅಥವಾ appಪಲ್ ಕಾರ್ ಪ್ಲೇ ನ ರಿಪ್ಲೇಸ್ ಮಾಡೋದು ಸ್ವಲ್ಪ ದೂರದಲ್ಲೇ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments