ಭಾರತೀಯ ಸೇನೆಗೆ ಕನ್ನಡಿಗರ ಬ್ರಹ್ಮಾಸ್ತ್ರ ಸೇನೆಗೆ ಸಿಕ್ತು ಎಐ ಪವರ್ ಏನಿದರ ವಿಶೇಷ ಯುದ್ಧಗಳು ಇನ್ಮುಂದೆ ಕೇವಲ ಬಂದೂಕು ತೋಪು ಮಿಸೈಲ್ ಅಥವಾ ಕ್ಷಿಪಣಿಗಳಿಂದ ಮಾತ್ರ ನಡೆಯಲ್ಲ ಮುಂದಿನ ಜಗತ್ತಿನ ಯುದ್ಧಗಳು ನಡೆಯುವದು ಡೇಟಾ ಮತ್ತು ತಂತ್ರಜ್ಞಾನದ ಮೇಲೆ ಅದರಲ್ಲೂ ಮುಖ್ಯವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿ ಮತ್ತೆ ರಕ್ಷಣಾ ವಲಯದ ಭವಿಷ್ಯವನ್ನೇ ಬದಲಾಯಿಸತ್ತಾ ಇದೆ ಇಂತಹ ಮಹತ್ತರ ಬದಲಾವಣೆಯ ಹಾದಿಯಲ್ಲಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತಹ ಕೆಲಸ ಒಂದು ನಡೆದಿದೆ.
ವಿಶೇಷ ಅಂದ್ರೆ ಈ ಸಾಧನೆಯ ಹಿಂದೆ ಇರೋದು ಕರ್ನಾಟಕದ ಪ್ರತಿಭೆಗಳು ಹೌದು ಭಾರತದ ರಕ್ಷಣಾವಲಯಕ್ಕೆ ಅಗತ್ಯವಿರುವ ದೇಶದ ಮೊಟ್ಟಮೊದಲ ಸಂಪೂರ್ಣ ಸ್ವದೇಶಿ ನಿರ್ಮಿತ ಡಿಫೆನ್ಸ್ ಎಐ ತಂತ್ರಜ್ಞಾನವನ್ನ ಕರ್ನಾಟಕ ಮೂಲದ ಸ್ಟಾರ್ಟಪ್ ಕಂಪನಿಯೊಂದು ಅಭಿವೃದ್ಧಿ ಪಡಿಸಿದೆ ಇದು ಕೇವಲ ತಂತ್ರಜ್ಞಾನದ ಸುದ್ದಿ ಅಲ್ಲ ಇದು ಆತ್ಮನಿರ್ಭರ ಭಾರತದ ಕನಸಿಗೆ ಕನ್ನಡಿಗರು ಹಿಡಿ ನೀಡಿದಂತಹ ಅತಿ ದೊಡ್ಡ ಕೋಳಿಗೆ ಹಾಗಾದರೆ ಏನಿದು ತಂತ್ರಜ್ಞಾನ ಇದು ಸೈನ್ಯಕ್ಕೆ ಹೇಗೆ ನೆರವಾಗಲಿದೆ ಡೀಟೇಲ್ ಆಗಿ ನೋಡೋಣ ಇತೀಚಿಗೆ ದೆಹಲಿಯ ಮಾಣಿಕ್ಶಾ ಸೆಂಟರ್ನಲ್ಲಿ ಆಯೋಜಿಸಲಾಗಿದ ಪ್ರತಿಷ್ಠಿತ ಚಾಣಕ್ಯ ಡಿಫೆನ್ಸ್ ಡೈಲಾಗ್ ಕಾರ್ಯಕ್ರಮದಲ್ಲಿ ಒಂದು ಐತಿಹಾಸಿಕ ಕ್ಷಣ ದಾಖಲಾಗಿದೆ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಮೊದಲ ಸಂಪೂರ್ಣ ಸ್ವದೇಶಿ ಡಿಫೆನ್ಸ್ ಎಐ ಆಸ್ಎ ಸರ್ವಿಸ್ ಅನ್ನ ಲೋಕಾರ್ಪಣೆ ಮಾಡಿದರು ಇದನ್ನ ಅಭಿವೃದ್ಧಿ ಪಡಿಸಿರುವುದು ಕರ್ನಾಟಕ ಮೂಲದ ಡೀಪ್ ಟೆಕ್ ಸ್ಟಾರ್ಟಪ್ ಕಂಪನಿಯಾದ ನ್ಯೂರಲಿಕ್ಸ್ಎಐ ರಕ್ಷಣಾ ಸಚಿವಾಲಯದ ಮಹತ್ವಾಕಾಂಕ್ಷೆಯ ಐಡೆಕ್ಸ್ ಅದಿತಿ 2.2ಓ ಯೋಜನೆಯ ಅಡಿಯಲ್ಲಿ ಭಾರತೀಯ ಸೇನೆಗಾಗಿ ಈ ವಿಶೇಷ ತಂತ್ರಜ್ಞಾನವನ್ನ ರೂಪಿಸಲಾಗಿದೆ.
ನ್ಯೂರಾಲಿಕ್ಸ್ ಎಐ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಇಷ್ಟು ದಿನ ರಕ್ಷಣಾ ವಲಯದಲ್ಲಿ ಬಳಸುತ್ತಿದ್ದ ಎಷ್ಟೋ ಸಾಫ್ಟ್ವೇರ್ಗಳು ಅಥವಾ ಕ್ಲೌಡ್ ಸೇವೆಗಳು ವಿದೇಶಿ ಕಂಪನಿಗಳು ಆಗಿರತಾ ಇದ್ವು ಯುದ್ಧದ ಸನ್ನಿವೇಶದಲ್ಲಿ ಅಥವಾ ಆಯಕಟ್ಟಿನ ಕಾರ್ಯಾಚರಣೆಯ ಸಮಯದಲ್ಲಿ ವಿದೇಶಿ ಸರ್ವರ್ಗಳ ಮೇಲೆ ಅವಲಂಬಿತವಾಗುವುದು ದೇಶದ ಭದ್ರತೆಗೆ ಅಪಾಯಕಾರಿ ಆದರೆ ನ್ಯೂರಾಲಿಕ್ಸ್ಎಐ ಅಭಿವೃದ್ಧಿ ಪಡಿಸಿರುವ ಈ ತಂತ್ರಜ್ಞಾನ ಸಂಪೂರ್ಣ ಸ್ವದೇಶಿ ನ್ಯೂರಾಲಿಕ್ಸ್ ಎಐ ಸಂಸ್ಥಾಪಕರಲ್ಲಿ ಒಬ್ಬರಾದ ವಿಕ್ರಂ ಜಯರಾಮ್ ಅವರು ಹೆಮ್ಮೆಯಿಂದ ಹೇಳುವಂತೆ ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಯಾಕಂದ್ರೆ ಈ ತಂತ್ರಜ್ಞಾನವು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಅನ್ನ ಆಧರಿಸಿದೆ ಸರಳವಾಗಿ ಹೇಳಬೇಕಂದ್ರೆ ಇದು ಸೇನೆಗಾಗಿಯೇ ತಯಾರಿಸಲಾದ ಒಂದು ಅತ್ಯಾಧುನಿಕ ಚಾರ್ಜ್ ಚಿಪಿಟಿಯಂತಹ ವ್ಯವಸ್ಥೆ ಆದರೆ ಇದು ಸಂಪೂರ್ಣವಾಗಿ ಸುರಕ್ಷಿತ ಮತ್ತು ಸೇನೆಯ ಹತೋಟಿಯಲ್ಲಿ ಇರುತ್ತೆ ಇದು ಸೇನೆಗೆ ಹೇಗೆ ಸಹಕಾರಿ ಈಎಐ ತಂತ್ರಜ್ಞಾನ ಸೈನ್ಯಕ್ಕೆ ಹೇಗೆ ಸಹಕಾರಿ ಆಗಲಿದೆ ಎಂಬುದನ್ನ ಗಮನಿಸಿದರೆ.
ಭಾಷಾಂತರ ಮತ್ತು ಸ್ಪೀಚ್ ಇಂಟರ್ಫೇಸ್ ಯುದ್ಧ ಭೂಮಿಯಲ್ಲಿ ಕ್ಷಣಾರ್ಥದಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ ಸಾವಿರಾರು ಪುಟಗಳ ಮಾಹಿತಿಯನ್ನ ಗುಪ್ತಚರ ವರದಿಗಳನ್ನ ಈಎಐ ಕ್ಷಣಮಾತ್ರದಲ್ಲಿ ವಿಶ್ಲೇಷಿಸಿ ಸೇನಾ ಕಮಾಂಡರ್ಗಳಿಗೆ ನಿಖರವಾದ ಮಾಹಿತಿಯನ್ನ ನೀಡುತ್ತೆ ಭಾಷಾಂತರ ಮತ್ತು ಸ್ಪೀಚ್ ಇಂಟರ್ಫೇಸ್ ನಮ್ಮ ಸೈನಿಕರು ದೇಶದ ಮೂಲೆ ಮೂಲೆಗಳಿಂದ ಬಂದಿರುತ್ತಾರೆ ಅಥವಾ ಗಡಿಭಾಗದಲ್ಲಿ ಬೇರೆ ಬೇರೆ ಭಾಷೆಯ ಸಂಹನಗಳನ್ನ ಭೇದಿಸಬೇಕಾಗಿರುತ್ತೆ ಅಂದರೆ ಮಾತ ಮಾತನಾಡಬೇಕಾಗಿರುತ್ತೆ ಈ ಎಐ ತಂತ್ರಜ್ಞಾನವು ಭಾಷೆಯ ಅಡೆತಡೆ ಇಲ್ಲದೆ ಮಾಹಿತಿಯನ್ನ ಸೈನಿಕರಿಗೆ ಭಾಷಾಂತರಿಸಿ ನೀಡುತ್ತೆ ಸುರಕ್ಷತೆ ಮತ್ತು ಡೇಟಾ ಪ್ರೈವಸಿ ಎಲ್ಲಕ್ಕಿಂತ ಮುಖ್ಯವಾಗಿ ಈ ತಂತ್ರಜ್ಞಾನಕ್ಕೆ ವಿದೇಶಿ ಕ್ಲೌಡ್ ಸೇವೆ ಅಥವಾ ನಿರಂತರ ಇಂಟರ್ನೆಟ್ ಸಂಪರ್ಕದ ಹಂಗಿರಲ್ಲ ಇನ್ನ ಮುಂದೆ ಇದು ನಮ್ಮದೇ ಆದ ಡೇಟಾ ಇಂಟಿಗ್ರೇಷನ್ ಮೂಲಕ ಕೆಲಸವನ್ನ ಮಾಡುತ್ತೆ ಇದರಿಂದ ಸೇನೆಯ ಅತ್ಯಂತ ಗೋಪ್ಯ ಮಾಹಿತಿಗಳು ದೇಶದ ಒಳಗೆ ಸುರಕ್ಷಿತವಾಗಿರುತ್ತೆ ಇದು ಆಪರೇಷನಲ್ ರೆಡಿನೆಸ್ ಅಂದರೆ ಕಾರ್ಯಾಚರಣೆಯ ಸನ್ನದ್ಧತೆಯನ್ನ ಹೆಚ್ಚಿಸುತ್ತೆ ರಕ್ಷಣಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಬಲ ನ್ಯೂರಾಲಿಕ್ಸ್ ಎಐನ ಸಹಸಂಸ್ಥಾಪಕರಾದ ಕನ್ನಡಿಗ ವಿಕ್ರಂ ಜಯರಾಮ್ ಅವರು ಹೇಳುವಂತೆ ರಕ್ಷಣಾ ಸಚಿವಾಲಯದ ಐಡೆಕ್ಸ್ ಅದಿತಿ 2.0 ಉಪಕ್ರಮವು ದೇಶದ ಸ್ಟಾರ್ಟಪ್ ಗಳಿಗೆ ರಕ್ಷಣಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮಾಡಲು ದೊಡ್ಡ ಅವಕಾಶವನ್ನ ನೀಡಿದೆ.
ಈ ಅವಕಾಶವನ್ನ ಬಳಸಿಕೊಂಡು ನಾವು ಈ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸಿದ್ದೇವೆ. ಭಾರತದ ಆಯಕಟ್ಟಿನ ವಲಯಗಳಲ್ಲಿ ಸ್ವದೇಶಿ ಎಐ ಅವಿಷ್ಕಾರವನ್ನ ಮುನ್ನಡೆಸುವಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸಿರುವುದು ಕನ್ನಡಿಗಾರಗೆ ನಮಗೆ ಹೆಮ್ಮೆಯ ಸಂಗತಿ ಅಂತ ಹೇಳಿದ್ರು. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಇದೇ ಮಾತನ್ನ ಪುನರುಚ್ಚರಿಸಿದ್ದಾರೆ. ಸ್ವದೇಶಿ ರಕ್ಷಣಾ ಎಐ ಅಭಿವೃದ್ಧಿಯು ದೇಶದ ಸೇನಾ ಸಾಮರ್ಥ್ಯವನ್ನ ಬಲಪಡಿಸಿದೆ ಮತ್ತು ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಇದು ದೊಡ್ಡ ಶಕ್ತಿ ತುಂಬಿದೆ ಅಂತ ಅವರು ಶ್ಲಾಗಿಸಿದರು. ಒಟ್ಟನಲ್ಲಿ ಇಂದಿನ ಡಿಜಿಟಲ್ ಯುಗದಲ್ಲಿ ಡೇಟಾ ಹೊಸ ತೈಲವಿದ್ದಂತೆ ಅಂತಹದರಲ್ಲಿ ರಕ್ಷಣಾ ವಲೆಯದಂತಹ ಸೂಕ್ಷ್ಮ ಕ್ಷೇತ್ರದಲ್ಲಿ ಪರವಾಲಂಬನೆಯನ್ನ ತಪ್ಪಿಸಿ ಸ್ವಾವಲಂಬನೆಯತ್ತ ಹೆಜ್ಜೆ ಇಡುವುದು ಅನಿವಾರ್ಯವಾಗಿತ್ತು. ಕರ್ನಾಟಕದ ಮಣ್ಣಿನ ಪ್ರತಿಭೆಗಳು ನ್ಯೂರಾಲಿಕ್ಸ್ ಎಐ ಮೂಲಕ ಆ ಕೊರತೆಯನ್ನ ನೀಕಿಸಿದ್ದಾರೆ. ಆಮದು ಮಾಡಿಕೊಂಡ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಿ ಭವಿಷ್ಯಕ್ಕೆ ಸಿದ್ಧವಿರುವ ಡಿಜಿಟಲ್ ಸೇನೆಯನ್ನ ನಿರ್ಮಿಸಲು ಈ ಕನ್ನಡಿಗರ ಅವಿಷ್ಕಾರ ಬುನಾದಿ ಹಾಕಿದೆ.
ಬೆಂಗಳೂರು ಕೇವಲ ಐಟಿ ಹಬ್ಬು ಮಾತ್ರವಲ್ಲ, ದೇಶದ ರಕ್ಷಣಾ ಕೋಟೆಯ ಡಿಜಿಟಲ್ ಕಾವಲುಗಾರನಾಗಿ ಕೂಡ ಬೆಳೆಯುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ. ದೇಶದ ರಕ್ಷಣೆಗೆ ಕನ್ನಡಿಗರ ಈ ಕಾಣಿಕೆ ನಿಜಕ್ಕೂ ಅನನ್ಯವಾಗಿದೆ. ಮುಂದಿನ ದಿನಗಳಲ್ಲಿ ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೃತಕ ಬುದ್ಧಿಮತ್ತೆಯ ಬಳಕೆ ಸೈನ್ಯದ ನಿರ್ಧಾರಗಳನ್ನು ತ್ವರಿತಗೊಳಿಸಲಿದೆ. ಡ್ರೋನ್‌ಗಳ ನಿಗಾವ್ಯವಸ್ಥೆ ಮತ್ತಷ್ಟು ಚುರುಕಾಗಿ ಗಡಿಗಳನ್ನು ರಕ್ಷಿಸಲಿದೆ. ಸೈಬರ್ ದಾಳಿಗಳನ್ನು ತಡೆಯಲು ಬಲವಾದ AI ಆಧಾರಿತ ಶೀಲ್ಡ್ ದೇಶ ಅಭಿವೃದ್ಧಿಪಡಿಸುತ್ತಿದೆ. ಯುದ್ಧಭೂಮಿಯಲ್ಲಿ ರಿಯಲ್-ಟೈಮ್ ಡೇಟಾ ವಿಶ್ಲೇಷಣೆ ಮೂಲಕ ಸೈನ್ಯಕ್ಕೆ ತ್ವರಿತ ಮಾಹಿತಿ ದೊರೆಯಲಿದೆ. ಸ್ವಯಂಚಾಲಿತ ರೋಬೋಟ್ ಘಟಕಗಳು ಭವಿಷ್ಯದಲ್ಲಿ ಸೈನಿಕರಿಗೆ ನೆರವಾಗಲಿವೆ. ಹಾಗೆಯೇ, AI ಆಧಾರಿತ ತರಬೇತಿ ಕೇಂದ್ರಗಳು ಮುಂದಿನ ಪೀಳಿಗೆಯ ರಕ್ಷಣಾ ತಜ್ಞರನ್ನು ರೂಪಿಸುತ್ತವೆ.


