Friday, January 16, 2026
HomeTech Newsಮಳೆ, ಬಿಸಿಲು, ಚಂಡಮಾರುತ—ಎಲ್ಲವೂ ಮೊಬೈಲ್‌ನಲ್ಲಿ! ‘ಮಿಷನ್ ಮೌಸಮ್’ ಏನು ವಿಶೇಷ?

ಮಳೆ, ಬಿಸಿಲು, ಚಂಡಮಾರುತ—ಎಲ್ಲವೂ ಮೊಬೈಲ್‌ನಲ್ಲಿ! ‘ಮಿಷನ್ ಮೌಸಮ್’ ಏನು ವಿಶೇಷ?

ಇತ್ತೀಚಿಗೆ ಹವಮಾನ ವೈಪರಿತ್ಯಗಳು ಸಾಕಷ್ಟು ಸಂಭವಿಸುತ್ತಿವೆ ವಾತಾವರಣದಲ್ಲಿ ಲ ಏರುಪೇರು ಒಂದೇ ನಗರದ ಒಂದು ಭಾಗದಲ್ಲಿ ಅಬ್ಬರದ ಮಳೆ ಸುರಿತಿದ್ದರೆ ಇನ್ನೊಂದು ಭಾಗದಲ್ಲಿ ಬಿಸಿಲು ಸುರಿತಿರುತ್ತೆ ರಸ್ತೆಯ ಒಂದು ಬದಿಯಲ್ಲಿ ಕೊಡೆಹಿಡಿದು ಜನ ಓಡಾಡುತ್ತಿದ್ದರೆ ಮತ್ತೊಂದು ಬದಿಯಲ್ಲಿ ಹನಿ ಮಳೆಯು ಇರುವುದಿಲ್ಲ ಹವಮಾನದಲ್ಲಿ ಏನಾಗುತ್ತಿದೆ ಅನ್ನೋದೇ ಗೊತ್ತಾಗಲ್ಲ ಅದರ ಅಂತರಾಳ ಅಳೆಯೋದು ಬಹಳ ಕಷ್ಟ ಹವಮಾನ ಇಲಾಖೆ ನಮಗೆಲ್ಲ ಮುಂಸೂಚನೆ ಕೊಟ್ಟಾಗಲೇ ಮಳೆ ಚಳಿ ಬಿಸಿಲು ಎಂದು ಗೊತ್ತಾಗುದು ಹವಮಾನ ಈವಿ ಈ ವಿಚಿತ್ರ ಆಟಕ್ಕೆ ಕಡಿವಾಣ ಹಾಕಲು ಈಗ ಭಾರತ ಸಜ್ಜಾಗಿದೆ ಹವಮಾನ ವರದಿ ಎಂದರೆ ಕೇವಲ ಅಂದಾಜ ಅಲ್ಲ ಅದು ಇನ್ನು ಮುಂದೆ ಪಕ್ಕ ಗಣಿತವಾಗಲಿದೆ ಹೌದು ಕೇಂದ್ರ ಸರ್ಕಾರವು ಹವಮಾನ ಸೂಚನೆಯಲ್ಲಿ ಹೊಸ ಮೈಲುಗಳನ್ನು ಸ್ಥಾಪಿಸಲು ಮಿಷನ್ ಮೌಸಂ ಫೇಸ್ ಟು ಘೋಷಿಸಿದೆ ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಹವಮಾನದ ನಿಕರ ಮಾಹಿತಿ ನೀಡಲು ಬರಲಿವೆ.

200 ಹೈಟೆಕ್ ಸ್ವಯಂಚಾಲಿತ ಹವಮಾನ ಕೇಂದ್ರಗಳು ಹಾಗಾದರೆ ಏನಿದು ಮಿಷನ್ ಮೋಸ ಇದು ದೈನಂದಿನ ಜೀವನವನ್ನ ಹೇಗೆ ಬದಲಿಸುತ್ತೆ ಹವಮಾನ ವೈಪರಿತ್ಯ ಜಾಸ್ತಿ ಎಫೆಕ್ಟ್ ಕೊಡೋದು ರೈತರಿಗೆ ಯಾವ ಟೈಮ್ನಲ್ಲಿ ಮಳೆ ಬರುತ್ತೆ ಚಳಿ ಇರುತ್ತೆ ತಿಳಿಯಲ್ಲ ಇದರಿಂದ ರೈತರು ಬೆಳೆದ ಫಸಲಿನ ಮೇಲೆ ಸಾಕಷ್ಟು ಪರಿಣಾಮ ಬೇರುತ್ತೆ ಈಗ ಅದೆಲ್ಲದಕ್ಕೂ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸ ಪ್ಲಾನ್ ಮಾಡಿದೆ ಇನ್ಮೇಲೆ ರೈತರು ಜನಸಾಮಾನ್ಯರು ಕುಳಿತಲ್ಲೇ ಹವಮಾನ ವರದಿಯನ್ನ ತಿಳಿದುಕೊಳ್ಳಬಹುದು ಭಾರತ ಸರ್ಕಾರವು ಹವಮಾನ ಮುಂಸೂಚನೆಯನ್ನ ಅತಿ ಸೂಕ್ಷ್ಮ ಮಟ್ಟಕ್ಕೆ ಅಂದರೆ ಪ್ರತಿ ಹಳ್ಳಿ ಹಳ್ಳಿಗೂ ಕೊಂಡುಹೋಯ್ಯಲು ನಿರ್ಧರಿಸಿದೆ ಇದರ ಭಾಗವಾಗಿ 2026ರ ವಳಿಗೆ ದೆಹಲಿ ಮುಂಬೈ ಚೆನ್ನೈ ಮತ್ತು ಪುಣೆ ನಗರಗಳಲ್ಲಿ ತಲ 50ರಂತೆ ಒಟ್ಟು 200 ಸ್ವಯಂಚಾಲಿತ ಹವಮಾನ ಕೇಂದ್ರಗಳನ್ನ ಸ್ಥಾಪಿಸಲಾಗುತ್ತಿದೆ.

ಪ್ರಸ್ತುತ ಭಾರತದಲ್ಲಿ ಒಟ್ಟು ಸಾವಿರ ಎಡಬಲ್ಎಸ್ ಕೇಂದ್ರಗಳಿವೆ ಆದರೆ ವೇಗವಾಗಿ ಬೆಳೆಯುತ್ತಿರುವ ನಗರಗಳ ಹವಮಾನ ವೈಪರಿತ್ಯವನ್ನ ಅಳೆಯಲು ಇದು ಸಾಲದು ಎಂಬುದು ಸರ್ಕಾರದ ಅಭಿಪ್ರಾಯ. ಈ ಹೊಸ ಕೇಂದ್ರಗಳ ಸ್ಥಾಪನೆಯಿಂದಾಗಿ ನಗರದ ಪ್ರತಿಯೊಂದು ವಾರ್ಡ್ ಅಥವಾ ಪ್ರತಿಯೊಂದು ಪ್ರದೇಶದ ಹವಮಾನ ಮಾಹಿತಿಯನ್ನ ನಿಖರವಾಗಿ ಪಡೆಯಲು ಸಾಧ್ಯವಾಗುತ್ತದೆ ಇದರಿಂದ ಮಳೆ ತಾಪಮಾನ ಮತ್ತು ಗಾಳಿಯ ವೇಗದ ಬಗ್ಗೆ ಕ್ಷಣಕ್ಷಣದ ಮಾಹಿತಿ ಲಭ್ಯವಾಗುತ್ತದೆ ದೆಹಲಿ ವಾತಾವರಣವೇ ಸರ್ಕಾರಕ್ಕೆ ಸವಾಲು ದೆಹಲಿಯಲ್ಲಿ ಬರೋಬರಿ 50 ಕೇಂದ್ರ ಸ್ಥಾಪನೆ ದೇಶದ ರಾಜಧಾನಿ ದೆಹಲಿಯ ವಿಷಯಕ್ಕೆ ಬಂದರೆ ಅಲ್ಲಿನ ಭೌಗೋಳಿಕ ವಿಸ್ತಾರಕ್ಕೆ ಹೋಲಿಸಿದರೆ ಪ್ರಸ್ತುತ ಇರುವ ಹವಮಾನ ಕೇಂದ್ರಗಳ ಸಂಖ್ಯೆ ತೀರಾ ಕಡಿಮೆ ಈಗ ದೆಹಲಿಯಲ್ಲಿ ಕೇವಲ 18 ಕಾರ್ಯಾಚರಣ ಎಡಬ್ಲ್ಯೂಎಸ್ ಕೇಂದ್ರಗಳಿವೆ ದೆಹಲಿಯಂತಹ ದಟ್ಟ ಜನಸಂಖ್ಯೆಯ ನಗರಗಳಲ್ಲಿ ಇಷ್ಟು ಕಡಿಮೆ ಕೇಂದ್ರಗಳಿಂದ ನಿಖರ ಮಾಹಿತಿ ಪಡೆಯುವುದು ಸವಾಲಿನ ಕೆಲಸವಾಗಿತ್ತು. ಈ ಕೊರತಿಯನ್ನ ನೀಗಿಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ರವರು ಮಹತ್ವದ ಘೋಷಣೆ ಮಾಡಿದ್ದಾರೆ.

2026ರ ವೆಳಿಗೆ ದೆಹಲಿಯಲ್ಲೇ ಹೆಚ್ಚುವರಿಯಾಗಿ 50 ಹೊಸ ಎಡಬ್ಲ್ಯೂಎಸ್ ಕೇಂದ್ರಗಳು ಬರಲಿವೆ. ವಿಶೇಷವೆಂದರೆ ಈ ತಿಂಗಳ ಅಂತ್ಯದ ಬೆಳಿಗ್ಗೆ ಮೊದಲ ಹಂತದ 20 ಕೇಂದ್ರಗಳು ಈಗಾಗಲೇ ಕಾರ್ಯಚರಣೆಗೆ ಸಜ್ಜಾಗಲಿವೆ. ಇದು ದೆಹಲಿ ಜನತೆಗೆ ಹವಮಾನ ವೈಪರಿತ್ಯಗಳಿಂದ ಎದುರಾಗುವ ಸಂಕಷ್ಟಗಳನ್ನ ಎದುರಿಸಲು ದೊಡ್ಡ ಬಲ ನೀಡಲಿದೆ ದತ್ತಾಂಶ ವೀಕ್ಷಣೆಗೆ ಅಮೆರಿಕ ಮೇಲೆ ಅವಲಂಬನೆ ಸ್ವತಂತ್ರ ದತ್ತಾಂಶ ಸಂಗ್ರಹಕ್ಕೆ ಮುಂದಾದ ಭಾರತ ಅವಮಾನ ಎನ್ನುವುದು ಕೇವಲ ಭೂಮಿಯ ಮೇಲಿನ ಬದಲಾವಣೆಯಲ್ಲ ಅದು ಸಾಗರದ ಆಳದಲ್ಲಿ ನಡೆಯುವ ಪ್ರಕ್ರಿಯೆಗಳ ಪ್ರತಿಫಲನ ಈ ಬಗ್ಗೆ ಮಾತನಾಡಿರುವ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿರವರು ಒಂದು ಪ್ರಮುಖ ಅಂಶವನ್ನ ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಭಾರತವು ಸಾಗರ ವೀಕ್ಷಣ ದತ್ತಾಂಶಕ್ಕಾಗಿ ಶೇಕಡ 50ರಷ್ಟು ಅಮೆರಿಕದ ಮೇಲೆ ಅವಲಂಬಿತವಾಗಿದೆ. ನಾವು ಇತರ ದೇಶಗಳಿಗೂ ನಮ್ಮ ಸಾಗರ ವೀಕ್ಷಣ ವ್ಯವಸ್ಥೆಯನ್ನ ಸುಧಾರಿಸಲು ಒತ್ತಾಯಿಸುತ್ತಿದ್ದೇವೆ.

ಕೇವಲ ಒಂದು ದೇಶದ ಮೇಲೆ ಅವಲಂಬಿತವಾಗುವ ಬದಲು ಜಗತ್ತಿನ ಅದ್ಯಂತ ವಿವಿಧ ಮೂಲಗಳಿಂದ ದತ್ತಾಂಶ ಸಿಕ್ಕರೆ ಮುಂಸೂಚನೆ ಇನ್ನು ನಿಖರವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಭಾರತವು ಈಗ ತನ್ನದೆಯಾದ ಸ್ವಾತಂತ್ರ ದತ್ತಾಂಶ ಸಂಗ್ರಹಣ ಜಾಲವನ್ನ ಬಲಪಡಿಸಲು ಮುಂದಾಗಿದೆ ಇದು ಜಾಗತಿಕ ಮಟ್ಟದಲ್ಲಿ ಭಾರತದ ಹವಮಾನ ಶಕ್ತಿಯನ್ನ ಹೆಚ್ಚಿಸಲಿದೆ 151 ವರ್ಷ ಪೂರೈಸಿದ ಹವಮಾನ ಇಲಾಖೆ ಐಎಂಡಿ ಸಾಧನೆ ಬಿಚ್ಚಿಟ್ಟ ಮಹಾನಿರ್ದೇಶಕ ಭಾರತೀಯ ಹವಮಾನ ಇಲಾಖೆ ಅಂದ್ರೆ ಐಎಂಡಿ ಈಗ 151ನೇ ವರ್ಷಕ್ಕೆ ಕಾಲಿಡುತ್ತಿದೆ ಈ ಸಂದರ್ಭದಲ್ಲಿ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರರವರು ಕಳೆದ ಒಂದು ದಶಕದಲ್ಲಿ ಭಾರತ ಸಾಧಿಸಿದ ಪ್ರಗತಿಯನ್ನ ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ ಕಳೆದ 10 ವರ್ಷಗಳಲ್ಲಿ ಹವಮಾನ ಮುಂಸೂಚನೆಯ ನಿಖರತೆಯು ಶೇಕಡ 40ರಿಂದ 50ರಷ್ಟು ಸುಧಾರಿಸಿದೆ ಈ ಹಿಂದೆ ಚಂಡ ಮಾರುತಗಳು ಎಲ್ಲಿ ಅಪ್ಪಳಿಸುತ್ತೇವೆ ಎಂದು ತಿಳಿಯುವುದು ಕಷ್ಟವಿತ್ತು.

ಆದರೆ ಈಗ ಚಂಡಮಾರುತದ ಪತವನ್ನ ಪತ್ತೆ ಹಚ್ಚುವಲ್ಲಿ ನಾವು ಶೇಕಡ 35ರಿಂದ 40ರಷ್ಟು ಹೆಚ್ಚು ನಿಖರತೆ ಸಾಧಿಸಿದ್ದೇವೆ ಇದರಿಂದ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯ ಸಾಧ್ಯವಾಗಿದೆ ಮಾಸಿಕ ಮತ್ತು ಕಾಲೋಚಿತ ಮುಂಸೂಚನೆಗಳಲ್ಲಿನ ತಪ್ಪುಗಳ ಪ್ರಮಾಣವು ಶೇಕಡ 7.5ರಿಂದ ಕೇವಲ 2.5ಕ್ಕೆ ಇಳಿದಿದೆ ಇದು ಜಾಗತಿಕ ಮಟ್ಟದ ಸಾಧನೆಯಾಗಿದೆ ಎಂದು ಹೇಳಿದ್ದಾರೆ ಸಾಮಾನ್ಯ ಜನರ ಮೇಲೆ ಏನು ಪರಿಣಾಮ ಜನರಿಗೆ ಹೇಗೆ ಸಹಾಯ ಮಾಡುತ್ತೆ ಈ ಎಲ್ಲಾ ಆಧುನಿಕ ತಾಂತ್ರಿಕ ಬದಲಾವಣೆಗಳು ಒಬ್ಬ ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಮೇಲೆ ಹೇಗೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಇಂದಿನ ವೇಗದ ಬದುಕಿನಲ್ಲಿ ಇದರ ಉಪಯೋಗಗಳು ಅಪಾರ.

ಮೊದಲನೆದಾಗಿ ನಗರವಾಸಿಗಳು ಕಚೇರಿಗೆ ಅಥವಾ ಅನಿವಾರ್ಯ ಕೆಲಸಗಳಿಗೆ ಹೊರಡುವ ಬದಲು ತಮ್ಮ ನಿರ್ದಿಷ್ಟ ಏರಿಯಾದಲ್ಲಿ ಮುಂದಿನ ಒಂದು ಗಂಟೆಯಲ್ಲಿ ಮಳೆ ಬರುತ್ತದೆಯೇ ಎಂಬುದನ್ನ ತಮ್ಮ ಮೊಬೈಲ್ನಲ್ಲಿ ಅತ್ಯಂತ ನಿಖರವಾಗಿ ತಿಳಿಯಬಹುದು. ಇದರಿಂದ ಟ್ರಾಫಿಕ್ ಜಾಮ್ ಮತ್ತು ಹಟಾತು ಪ್ರವಾಹದಂತಹ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಹಾಗೂ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲು ಸಾಧ್ಯವಾಗುತ್ತದೆ. ಇನ್ನು ರೈತರ ವಿಷಯಕ್ಕೆ ಬಂದರೆ ಹವಮಾನ ವೈಪರಿತ್ಯಂದಾಗಿ ಬೆಳೆ ಹಾನಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಆದರೆ ಹೈಪರ್ ಲೋಕಲ್ ಡೇಟಾ ಮೂಲಕ ಸಿಗುವ ನಿಖರ ಮಾಹಿತಿಯು ಅಕಾಲಿಕ ಮಳೆಯಿಂದ ಬೆಳೆಗಳನ್ನ ರಕ್ಷಿಸಲು ರೈತರಿಗೆ ಸಂಜೀವನಿಯಂತೆ ಕೆಲಸ ಮಾಡುತ್ತದೆ ವಿಪತ್ತು ನಿರ್ವಹಣೆಯಲ್ಲೂ ಈ ತಂತ್ರಜ್ಞಾನದ ಪಾತ್ರ ಬಹಳ ಮುಖ್ಯವಾಗಿದೆ ನಗರಗಳಲ್ಲಿ ಹಠತ್ತು ಪ್ರವಾಹ ಅಥವಾ ಚಂಡಮಾರತದ ಮುಂಸೂಚನೆ ದೊರೆತಾಗ ಜನರನ್ನ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸರ್ಕಾರ ಈ ದತ್ತಾಂಶವು ಸಹಕಾರಿಯಾಗಲಿದೆ ಒಟ್ಟಾರಿಯಾಗಿ ಹೇಳುವುದಾದರೆ ಈ ಸುಧಾರಿತ ಡೇಟಾ ವ್ಯವಸ್ಥೆಯ ಕೇವಲ ಮುಂಸೂಚನೆಯಲ್ಲಿದೆ ಭವಿಷ್ಯದಲ್ಲಿ ಆಗಬಹುದಾದ.

ದೊಡ್ಡ ಮಟ್ಟದ ಜೀವ ಮತ್ತು ಆಸ್ತಿ ಹಾನಿಯನ್ನ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಐಎಂಡಿ ಭವಿಷ್ಯದ ಹಾದಿ ಹೇಗಿರಲಿದೆ ಭಾರತವು ಇಂದು ಸಾಂಪ್ರದಾಯಿಕ ಹವಮಾನ ಮುನ್ಸೂಚನಾ ಪದ್ಧತಿಗಳನ್ನ ಮೀರಿ ಬೆಳೆಯುತ್ತಿದೆ ಪ್ರಸ್ತುತ ಹವಮಾನ ಮುಂಸೂಚನೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನ ವ್ಯಾಪಕ ವಾಗಿ ಬಳಸಲಾಗುತ್ತಿದೆ ಮಿಷನ್ ಮೌಸಂ ಅಡಿಯಲ್ಲಿ ದೇಶವು ತನ್ನದೆಯಾದ ಸ್ವದೇಶಿ ಹವಮಾನ ಉಪಗ್ರಹಗಳು ಮತ್ತು ಶಕ್ತಿಯುತ ಸೂಪರ್ ಕಂಪ್ಯೂಟರ್ಗಳ ಸಾಮರ್ಥ್ಯವನ್ನ ಗಣನೀಯವಾಗಿ ಹೆಚ್ಚಿಸುತ್ತಿದೆ ಈ ತಾಂತ್ರಿಕ ಕ್ರಾಂತಿಯಿಂದಾಗಿ ಅತ್ಯಂತ ನಿಖರವಾದ ಹವಮಾನ ವರದಿ ಮತ್ತು ನೈಸರ್ಗಿಕ ವಿಕೋಪಗಳ ಮುನ್ನೆಚ್ಚರಿಕೆ ನೀಡಲು ಸಾಧ್ಯವಾಗುತ್ತಿದೆ ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಹವಮಾನ ಮುಂಸೂಚನೆಯ ಪ್ರಧಾನ ಕೇಂದ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಇದು ದೇಶದ ಕೃಷಿ ಮತ್ತು ವಿಪತ್ತು ನಿರ್ವಹಣ ಕ್ಷೇತ್ರಗಳಿಗೆ ಹೊಸ ಬಲ ನೀಡಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಸರ್ಕಾರದ ಮಿಷನ್ ಮೌಸಂ ಫೇಸ್ ಟು ಕೇವಲ ಒಂದು ಯೋಜನೆ ಅಲ್ಲ ಇದು ಹವಮಾನದ ಅನಿಶ್ಚಿತ್ತೆಯ ವಿರುದ್ಧ ಭಾರತ ಹೂಡಿರುವ ಬಲಿಷ್ಠ ತಾಂತ್ರಿಕ ಸಮರವಾಗಿದೆ ಬದಲಾಗುತ್ತಿರುವ ಜಾಗತಿಕ ಹವಮಾನ ಪರಿಸ್ಥಿತಿಯಲ್ಲಿ ಪ್ರಕೃತಿಯ ಮುನಿಸನ್ನ ತಡೆಯಲು ಸಾಧ್ಯವಾಗದಿದ್ದರು ಅದರ ಬಗ್ಗೆ ನಿಖರವಾದ ಮುಂಸೂಚನೆ ಪಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ ದೇಶದ ಪ್ರಮುಖ ನಗರಗಳಲ್ಲಿ ಸ್ಥಾಪನೆಯಾಗಲಿರುವ 200 ಹೈಟೆಕ್ ಸ್ವಯಂಚಾಲಿತ ಹವಮಾನ ಕೇಂದ್ರಗಳು ಎಡಬ್ಲ್ಯೂಎಸ್ ಮತ್ತು ಎಐ ತಂತ್ರಜ್ಞಾನದ ಬಳಕೆ ಸಾಮಾನ್ಯ ಜನರ ಜೀವನ ಮಟ್ಟವನ್ನ ಸುಧಾರಿಸುವಲ್ಲಿ ಸಂಶಯವಿಲ್ಲ ಬೆಳಿಗ್ಗೆ ಮನೆಯಿಂದ ಹೊರಡುವ ಉದ್ಯೋಗಿಯಿಂದ ಹಿಡಿದು ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕಾಯುವ ರೈತನವರೆಗೆ ಎಲ್ಲರಿಗೂ ಈ ಹೈಪರ್ಲೋಕಲ್ ಮಾಹಿತಿ ಒಂದು ರಕ್ಷಣಾ ಕವಚವಾಗಲಿದೆ.

ಸಾಗರ ವೀಕ್ಷಣೆಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗುವುದನ್ನ ಕಡಿಮೆ ಮಾಡಿ ಸ್ವದೇಶಿ ದತ್ತಾಂಶಜಾಲವನ್ನ ಬಲಪಡಿಸುತ್ತಿರುವುದು ಭಾರತದ ಆತ್ಮನಿರ್ಭರ ಸಾಧನೆ ನಗೆ ಸಾಕ್ಷಿಯಾಗಲಿದೆ ವಿಜ್ಞಾನ ಮತ್ತು ತಂತ್ರಜ್ಞಾನದ ಈ ಕ್ರಾಂತಿಕಾರಿ ಹೆಜ್ಜೆಯು ನೈಸರ್ಗಿಕ ವಿಕೋಪಗಳಿಂದಾಗುವ ಹಾನಿಯನ್ನ ತಗ್ಗಿಸಿ ದೇಶದ ಆರ್ಥಿಕ ಭದ್ರತೆ ಮತ್ತು ಪ್ರಜೆಗಳ ಸುರಕ್ಷತೆಯನ್ನ ಖಚ್ಚಿತಪಡಿಸಲಿದೆ ಹವಮಾನ ವರದಿ ಇನ್ನು ಮುಂದೆ ಕೇವಲ ಒಂದು ಅಂದಾಜಾಗಿ ಉಳಿಯದೆ ಸಾಮಾನ್ಯ ಜನರ ಬದುಕಿಗೆ ಭರವಸೆ ನೀಡುವ ನಿಖರ ದಿಕ್ಸೂಚಿಯಾಗಲಿದೆ ಇದಾಗಿತ್ತು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments