ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿ ಉಂಟಾಗಿಬಿಟ್ಟಿದೆ ಇದು ವಿದ್ಯಾರ್ಥಿಗಳ ಪಾಲಿಗೆ ಡಬಲ್ ಧಮಾಕ ಆಫರ್ ನಂತೆ ಬಾಸವಾಗಿದೆ ಈ ಒಂದು ಪದ್ಧತಿಯಿಂದಾಗಿ ಭಾರತದ ಶಿಕ್ಷಣ ವ್ಯವಸ್ಥೆ ಸುಧಾರಣೆಯ ಶಕೆಯತ್ತ ಹೊರಳಲಿದೆ ಎಐಸಿಟಿಇ ಯುಜಿಸಿ ಮೊದಲಾದವುಗಳ ಜೊತೆಗೆ ಈ ಹೊಸದಾದ ಯೋಜನೆಯನ್ನ ಸರ್ಕಾರ ಸಿದ್ಧಗೊಳಿಸಿದೆಇದರ ಫಲವಾಗಿ ಎನ್ಸಿಆರ್ಎಫ್ ಡೀಮ್ಡ್ ಯೂನಿವರ್ಸಿಟಿ ಅನ್ನುವ ಹೊಸ ಪ್ಲಾನ್ ಅನುಷ್ಠಾನಗೊಂಡಿದೆ ಸಾವಿರಾರು ಪ್ರಯೋಜನಗಳನ್ನ ಹೊತ್ತಕೊಂಡಿರುವ ಈ ಯೋಜನೆ ದೇಶದ ಅಭಿವೃದ್ಧಿಯ ಸೂಚಕವಾಗಿಬಿಟ್ಟಿದೆ ಎನ್ಸಿಆರ್ಎಫ್ ಡೀಮಡ್ ಯೂನಿವರ್ಸಿಟಿ ಅಂದರೆ ಏನು ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಇದರ ಅನುಕೂಲಗಳೇನು ವಿದ್ಯಾರ್ಥಿಗಳಿಗೆ ಲಭಿಸುವ ಅವಕಾಶಗಳು ಯಾವುವು ಎಲ್ಲವನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ ನೋಡಿ ಬ್ರಿಟಿಷರ ಕಾಲದಿಂದ ಇಂದಿನವರೆಗೆ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಯಾವತ್ತಿಗೂ ನಿಂತ ನೀರಾಗಿರಲಿಲ್ಲ ವರ್ಷದಿಂದ ವರ್ಷಕ್ಕೆ ಮಹತ್ತರವಾದ ಬದಲಾವಣೆಗಳನ್ನ ಕಂಡುಕೊಳ್ಳುತ್ತಲೆ ಬಂದಿದೆ ಬ್ರಿಟಿಷರ ಆಳ್ವಿಕೆಯಲ್ಲಿ ಶಿಕ್ಷಣದ ಮುಖ್ಯ ಉದ್ದೇಶ ಆಡಲ್ತಕ್ಕೆ ಬೇಕಾದ ನೌಕರರನ್ನ ತಯಾರಿಸುವುದಾಗಿತ್ತು 1835ರ ಮೆಕಾಲೆಯ ಮಿನಿಟ್ಸ್ ಮೂಲಕ ಇಂಗ್ಲೀಷ್ ಭಾಷಾ ಶಿಕ್ಷಣಕ್ಕೆ ಆಧ್ಯತೆ ನೀಡಲಾಯಿತು ಭಾರತೀಯ ಸಂಸ್ಕೃತಿ ಸ್ಥಳೀಯ ಜ್ಞಾನ ಮತ್ತು ಕೌಶಲ್ಯಗಳನ್ನ ಕಡೆಗಣಿಸಲಾಯಿತು ಸ್ವತಂತ್ರ್ಯ ನಂತರ ಪ್ರಾಥಮಿಕ ಶಿಕ್ಷಣಕ್ಕೆ ಒತ್ತನ್ನ ನೀಡಲಾಯಿತು ಸಾಕ್ಷರತಾ ಅಭಿಯಾನಗಳು ಮತ್ತು ಮಹಿಳಾ ಶಿಕ್ಷಣಕ್ಕೆ ಆಧ್ಯತೆ ನೀಡಲಾಯಿತು.
2020ರ ರಾಷ್ಟ್ರೀಯ ಶಿಕ್ಷಣ ನೀತಿ ಅಂದರೆ ಎನ್ಇಪಿ ಭಾರಿ ಸದ್ದನ್ನ ಮಾಡಿತು ಅದು ಶಿಕ್ಷಣದಲ್ಲಿ ಮೂಲಭೂತ ಪರಿವರ್ತನೆಯನ್ನ ತಂದಿತು ಕೌಶಲ್ಯ ಅಭಿವೃದ್ಧಿ ಮಾತೃಭಾಷೆಯಲ್ಲಿ ಶಿಕ್ಷಣ ಪ್ರಾಯೋಗಿಕ ಜ್ಞಾನ ಬಹುಶಾಖ ಅಧ್ಯಯನ ಮೊದಲಾದವುಗಳಿಗೆ ಆಧ್ಯತೆ ನೀಡಿತು ಆದರೆ ಈ ಶಿಕ್ಷಣ ವ್ಯವಸ್ಥೆಗಳು ಆರ್ಥಿಕ ಚಟುವಟಿಕೆಗಳಿಗೆ ಬೇಕಾದ ಉದ್ಯೋಗಿಗಳನ್ನ ಬೆಳೆಸುವಲ್ಲಿ ಹಿಂದೆಯೇ ಉಳಿದುಬಿಟ್ಟಿದ್ದವು ಭಾರತದಲ್ಲಿ ನೀಡಲಾಗ್ತಾ ಇದ್ದ ಶಿಕ್ಷಣ ಯಾವ ಲಾಭನು ಇಲ್ಲ ಎನ್ನುವ ಟೀಕೆಗಳು ಕೇಳಿಸಿಕೊಳ್ಳುದಕ್ಕೆ ಶುರುವಾದವು ಅದು ವಾಸ್ತವವು ಕೂಡ ಹೌದು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸಾನ್ಯಾಲ್ ಭಾರತದ ನಿಜವಾದ ಸಮಸ್ಯೆ ವಿದ್ಯಾವಂತ ನಿರುದ್ಯೋಗಿಗಳು ಇವತ್ತು ಎಲ್ಲರ ಜೊತೆಗೆ ಸರ್ಟಿಫಿಕೇಟ್ ಇದೆ ಆದರೆ ಅದರಿಂದ ನಯ ದಯಾಪೈಸೆ ಉಪಯೋಗ ಇಲ್ಲ ವಿದ್ಯಾರ್ಥಿಗಳು ಕಾಲೇಜಲ್ಲಿ ಕಲಿತ ಜ್ಞಾನವನ್ನ ಎಲ್ಲಿಯೂ ಬಳಸಿಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ ಅವರ ಮಾತುಗಳು ಭಾರತದಲ್ಲಿರುವ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳು ಅನ್ನೋದನ್ನ ಸೂಚಿಸುತ್ತವೆ.
ದೇಶದ ಆರ್ಥಿಕತೆಯ ಪಿಲ್ಲರ್ ಅಂದರೆ ಇಂಡಸ್ಟ್ರಿ ಈ ಕ್ಷೇತ್ರದಲ್ಲೂ ಕೂಡ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಹಿಂದೆ ಉಳಿದಿದ್ದಾರೆ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಭಾರತದಲ್ಲಿ ಡಿಗ್ರಿ ಹೋಲ್ಡರ್ಗಳು ಬೇಕಾದಷ್ಟು ಜನ ಇದ್ದಾರೆ ಆದರೆ ನಮ್ಮ ಕ್ಷೇತ್ರಗಳು ಪ್ರಾಬ್ಲಮ್ಗೆ ಉತ್ತರ ಕಂಡುಹಿಡಿದು ಬಗೆಹರಿಸು ನೈಪುಣ್ಯತೆ ಹೊಂದಿರುವವರನ್ನ ಬಯಸುತ್ತವೆ ನನಗೆ ಡಿಗ್ರಿ ಆಗಿದೆ ಅಂತ ಸರ್ಟಿಫಿಕೇಟ್ ಹಿಡಿದುಕೊಂಡು ಬಂದರೆ ಯಾವ ಪ್ರಯೋಜನನು ಇಲ್ಲ ಲಾಜಿಕ್ ಇಂಪಾರ್ಟೆಂಟ್ ಆಗಿರುತ್ತೆ ಅವರಲ್ಲಿ ಯಾವ ಕೌಶಲ್ಯ ಇದೆ ಅನ್ನೋದು ಇಂಡಸ್ಟ್ರಿಗೆ ಮುಖ್ಯ ಅಂತ ಹೇಳಿದ್ದಾರೆ ಸ್ನೇಹಿತರೆ ಈ ಎಲ್ಲಾ ಟೀಕೆಗಳನ್ನ ಸಮತೂಗಿಸುವುದಕ್ಕೆ ಶಿಕ್ಷಣದಲ್ಲಿ ಬದಲಾವಣೆ ತರೋದೊಂದೇ ಕೊನೆಯ ಅಸ್ತ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಮುಂದಿನ ಶಿಕ್ಷಣ ಯೋಜನೆಗಳು ಡಿಗ್ರಿ ಕೊಡುದರ ಮೇಲೆ ಮಾತ್ರ ಗಮನಹರಿಸುವುದಿಲ್ಲ ವಿದ್ಯಾರ್ಥಿ ಳಲ್ಲಿ ಕೌಶಲ್ಯವನ್ನ ಬೆಳೆಸಲು ಪ್ರಾಮುಖ್ಯತೆ ನೀಡಲಾಗುತ್ತೆ ಅಂತ ಹೇಳಿದ್ದಾರೆ ಈ ಹೇಳಿಕೆ ಸರ್ಕಾರದ ಮಾತ್ತರ ಯೋಜನೆಯ ಬಗ್ಗೆ ರಿವೀಲ್ ಮಾಡುತ್ತೆ.
ವ್ಯಕ್ತಿಯೊಬ್ಬ ಉದ್ಯೋಗಿ ಆಗಬೇಕು ಅಂದ್ರೆ ಅದಕ್ಕೆ ಒಂದಷ್ಟು ಕೌಶಲ್ಯಗಳು ಬೇಕು ಅದನ್ನ ಎನ್ಸಿಆರ್ಎಫ್ ಡೀಮ್ಡ್ ಯೂನಿವರ್ಸಿಟಿ ಯೋಜನೆಯು ಸಹಕಾರಗೊಳಿಸುತ್ತೆ ಸ್ನೇಹಿತರೆ ನಿಮಗೆಲ್ಲ ಈ ಎನ್ಸಿಆರ್ಎಫ್ ಡೀಮ್ಡ್ ಯೂನಿವರ್ಸಿಟಿ ಅಂದ್ರೇನು ಅನ್ನುವ ಪ್ರಶ್ನೆ ಬಂದಿರಬಹುದು ನ್ಯಾಷನಲ್ ಕ್ರೆಡಿಟ್ ಫ್ರೇಮ್ವರ್ಕ್ ಮತ್ತು ಡೀಮ್ ಟು ಬಿ ಯೂನಿವರ್ಸಿಟಿ ಇವೆರಡು ಸೇರಿ ರೂಪಗೊಳ್ಳುತ್ತಿರುವ ಹೊಸ ಶಿಕ್ಷಣ ವ್ಯವಸ್ಥೆಯನ್ನೇ ಎನ್ಸಿಆರ್ಎಫ್ ಡೀಮ್ಡ್ ಯೂನಿವರ್ಸಿಟಿ ಅಂತ ಹೇಳಲಾಗ್ತಾ ಇದೆ ಎನ್ಸಿಆರ್ಎಫ್ ಅಂದ್ರೆ ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು ಇಲ್ಲಿ ವಿದ್ಯಾರ್ಥಿ ಕಲಿಯುವ ಪ್ರತಿಯೊಂದು ಹಂತಕ್ಕೂ ಕ್ರೆಡಿಟ್ ನೀಡಲಾಗುತ್ತೆ ವಿದ್ಯಾರ್ಥಿಯೊಬ್ಬ ಶಾಲೆ ಕಾಲೇಜು ಐಟಿಐ ಪಾಲಿಟೆಕ್ನಿಕ್ ಸ್ಕಿಲ್ ತರಬೇತಿ ಅಥವಾ ಆನ್ಲೈನ್ ಕೋರ್ಸ್ಗಳಲ್ಲಿ ಕಲಿತ ಜ್ಞಾನವನ್ನ ಕ್ರೆಡಿಟ್ಗಳಾಗಿ ಪರಿಗಣಿಸಲಾಗುತ್ತೆ ಈ ಕ್ರೆಡಿಟ್ಗಳನ್ನ ಅಕಾಡಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ ಅರ್ಥಾತ್ ಎಬಿಸಿಯಲ್ಲಿ ಸಂಗ್ರಹಿಸಲಾಗುತ್ತೆ ಒಂದುವೇಳೆ ಯಾವುದಾದರೂ ಕಾರಣಗಳಿಗಾಗಿ ಮಧ್ಯದಲ್ಲಿ ಕಾಲೇಜು ಸ್ಕಿಪ್ ಮಾಡಿದ್ರು ಕೂಡ ನಂತರ ಮತ್ತೆ ಜಾಯಿನ್ ಆದಾಗ ಹಿಂದಿನ ಕ್ರೆಡಿಟ್ಗಳು ವ್ಯರ್ಥ ಆಗೋದಿಲ್ಲ ಇದು ವಿದ್ಯಾರ್ಥಿಗೆ ಮಲ್ಟಿ ಎಂಟ್ರಿ ಮಲ್ಟಿ ಎಕ್ಸಿಟ್ ಅವಕಾಶವನ್ನ ನೀಡುತ್ತೆ ಇನ್ನೊಂದು ಕಡೆಗೆ ಡೀಮ್ಡ್ ಟು ಬಿ ಯೂನಿವರ್ಸಿಟಿ ಅನ್ನೋದು ಯುಜಿಸಿ ಮತ್ತು ಕೇಂದ್ರ ಸರ್ಕಾರದಿಂದ ಯೂನಿವರ್ಸಿಟಿಗೆ ಸಮಾನ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಇಂತಹ ಸಂಸ್ಥೆಗಳು ಸ್ವಂತವಾಗಿ ಪಠ್ಯಕ್ರಮಗಳನ್ನ ರಚನೆ ಮಾಡುತ್ತವೆ.
ಹೊಸ ಕೋರ್ಸುಗಳನ್ನ ಪ್ರಾರಂಭ ಮಾಡುತ್ತವೆ ಮತ್ತು ಇಂಡಸ್ಟ್ರಿಯ ಅವಶ್ಯಕತೆಗೆ ತಕ್ಕಂತೆ ಶಿಕ್ಷಣ ನೀಡ್ತಾವೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಇವು ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ ಈ ಎರಡನ್ನ ಒಟ್ಟಿಗೆ ಜಾರಿಗೆ ತಂದಾಗ ಎನ್ಸಿಆರ್ಎಫ್ ಡೀಮ್ಡ್ ಯೂನಿವರ್ಸಿಟಿ ವ್ಯವಸ್ಥೆ ಆಗುತ್ತೆ ಇದರ ಮೂಲಕ ವಿದ್ಯಾರ್ಥಿಗೆ ಕೇವಲ ಡಿಗ್ರಿ ನೀಡೋದಲ್ಲ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನ ಬೆಳೆಸಲಾಗುತ್ತೆ ಇಂಡಸ್ಟ್ರಿ ಆಧಾರಿತ ತರಬೇತಿ ಪ್ರಾಯೋಗಿಕ ಅಧ್ಯಯನ ಇಂಟರ್ನ್ಶಿಪ್ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತೆ ಭಾರತ ನಿಜವಾಗಿಯೂ ಶೈಕ್ಷಣಿಕವಾಗಿ ತುಂಬಾನೇ ತಳಮಟ್ಟದಲ್ಲಿದೆ. ಶೈಕ್ಷಣಿಕವಾಗಿ ಯಾವ ಹಂತ ಅನುಸರಿಸುತ್ತೆ ಅನ್ನೋದನ್ನ ನೋಡೋಣ. ಭಾರತದಲ್ಲಿ ಶಾಲಾ ಕಾಲೇಜುಗಳು ಇನ್ಪುಟ್ ಆಗಿ ಪಾಠ ಮಾಡುತ್ತವೆ. ಪರೀಕ್ಷೆ ಮಾಡುತ್ತವೆ ನಂತರ ಫಲಿತಾಂಶವನ್ನ ಪ್ರಕಟ ಮಾಡುತ್ತವೆ. ಕೊನೆಗೆ ಔಟ್ಪುಟ್ ಆಗಿ ಸರ್ಟಿಫಿಕೇಟ್ ಹಂಚಿಬಿಡುತ್ತಾವೆ. ಇಷ್ಟಾದ್ರೆ ಡಿಗ್ರಿ ಕಂಪ್ಲೀಟ್ ಆಯ್ತು ಆದರೆ ಪ್ರಾಯೋಗಿಕ ಜ್ಞಾನ ಸಿಗಲ್ಲ. ಕ್ರಿಟಿಕಲ್ ಆಗಿ ಯೋಚನೆ ಮಾಡುವ ಸಾಮರ್ಥ್ಯ ಇರೋದೇ ಇಲ್ಲ.
ಜ್ಞಾನ ಇಲ್ಲದ ಸರ್ಟಿಫಿಕೇಟ್ ಮಾತ್ರ ಕೈಯಲ್ಲಿರುತ್ತೆ ಇದರ ಫಲವಾಗಿಯೇ ಕಂಪನಿಗೆ ಸೇರಿದ ಕೂಡಲೇ ರಿಲರ್ನ್ ಅಂದ್ರೆ ಪುನಃ ಅಧ್ಯಯನ ಮಾಡಬೇಕಾಗುತ್ತೆ ಕಂಪನಿಗೆ ಬೇಕಾದ ಕೌಶಲ್ಯಗಳನ್ನ ಕಲಿಯುವ ಅವಶ್ಯಕತೆ ಉಂಟಾಗುತ್ತೆ ಇದನ್ನೇ ಭಾರತದ ಶಿಕ್ಷಣದಲ್ಲಿರುವ ದೋಷಗಳು ಅನ್ನುವುದು ನಮ್ಮ ದೇಶದಲ್ಲಿ ತುಂಬಾನೇ ಸುಲಭವಾಗಿ ಡಿಗ್ರಿ ಸರ್ಟಿಫಿಕೇಟ್ ಸಿಗುತ್ತೆ ಆದರೆ ವಿದ್ಯಾರ್ಥಿಯಲ್ಲಿ ಉದ್ಯೋಗ ಪಡೆದುಕೊಳ್ಳುವ ಅರ್ಹತೆ ಇರೋದಿಲ್ಲ ವಿದ್ಯಾರ್ಥಿಗಳ ತಲೆಯಲ್ಲಿ ಡಿಗ್ರಿನೇ ಫೈನಲ್ ಆ ಸರ್ಟಿಫಿಕೇಟ್ ಇದ್ದರೆ ಸಾಕು ಜಾಬ್ ಗ್ಯಾರಂಟಿ ಅನ್ನುವ ಪ್ಲಾನ್ ಇರಬಹುದು ಆದರೆ ಅದೇ ಫೈನಲ್ ಅಲ್ಲ ಅದು ಜಸ್ಟ್ ಎಂಟ್ರಿ ಅಷ್ಟೇ ಈ ತರಹದ ಸಮಸ್ಯೆಯನ್ನ ಹೋಗಲಾಡಿಸುದಕ್ಕೆ ಅಂತಾನೆ ಎನ್ಸಿಆರ್ಎಫ್ ಅನ್ನ ಬಳಸಲಾಗ್ತಾ ಇದೆ ಇದು ತುಂಬಾನೇ ಕ್ರಾಂತಿಯನ್ನ ಹುಟ್ಟಿಸಿಬಿಟ್ಟಿದೆ ಕಾಲೇಜ್ಗೆ ಹೋದರೆ ಡಿಗ್ರಿ ಸರ್ಟಿಫಿಕೇಟ್ ಮಾತ್ರ ಸಿಗೋದು ಅಂತ ಇರುವ ಟೀಕೆಯನ್ನ ಅಲ್ಲ ಗಳಿಯೋದಕ್ಕೆ ಈ ವ್ಯವಸ್ಥೆ ಸಜ್ಜಾಗಿದೆ ಸಾಂಪ್ರದಾಯಿಕ ವಿಧಾನವಾಗಿದ್ದ ಶಾಲೆಗೆ ಹೋಗೋದು ಕಲಿಯೋದು ಎಕ್ಸಾಮ್ ಬರೆಯೋದು ಇದಿಷ್ಟೇ ಶಿಕ್ಷಣ ಅಲ್ಲ ಸರಿಯಾದ ಟೈಮ್ನಲ್ಲಿ ಎಲ್ಲಾ ಕೌಶಲ್ಯಗಳನ್ನ ಕಲಿತ ಇರಬೇಕು ಅದು ಕ್ರೆಡಿಟ್ ಆಗಬೇಕು ಅನ್ನುವ ಉದ್ದೇಶ ಹೊಂದಿದೆ. ಟೆಕ್ನಿಕಲ್ ಆಗಿ ಡಿಗ್ರಿಯನ್ನ ಡೆಪ್ತ್ ಆಗಿ ಅಧ್ಯಯನ ಮಾಡಬೇಕು.
ಎನ್ಸಿಆರ್ಎಫ್ ಶಿಕ್ಷಣ ಅಂದ್ರೆ ಕಾಂಪಿಟೆನ್ಸಿ ಇರುವ ಶಿಕ್ಷಣ ನಾವೆಲ್ಲರೂ ಬಾಲ್ಯದಲ್ಲಿ ಕೆಲವೊಂದು ಕೌಶಲ್ಯಾಭಿವೃದ್ಧಿ ಕಾರ್ಯಗಾರಗಳಲ್ಲಿ ಭಾಗವಹಿಸಿರುತ್ತೇವೆ ಆವಾಗ ಅದೆಲ್ಲ ಎಕ್ಸ್ಟ್ರಾ ಕರಿಕ್ಯುಲರ್ ಚಟುವಟಿಕೆ ಆಗಿ ಪರಿಗಣನೆ ಆಗ್ತಾ ಇತ್ತು ಈಗ ಮೇನ್ ಸ್ಟ್ರೀಮ್ ಅಂದ್ರೆ ಮುಖ್ಯವಾಗಿ ಕೌಶಲ್ಯಗಳನ್ನೇ ಕಲಿಸಲಾಗ್ತಾ ಇದೆ ಜೀವನದಲ್ಲಿ ಉದ್ಯೋಗ ಹುಡುಕೋದಕ್ಕೆ ಕೌಶಲ್ಯಗಳು ತುಂಬಾನೇ ಮುಖ್ಯ ಅನ್ನೋದು ಭಾಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಅದನ್ನೇ ಶಿಕ್ಷಣದಲ್ಲಿ ಕೂಡ ಅಳವಡಿಸಿಕೊಳ್ಳಲಾಗ್ತಾ ಇದೆ ಕೋಡಿಂಗ್ ಕಮ್ಯುನಿಕೇಶನ್ ಪ್ರಾಬ್ಲಮ್ ಸಾಲ್ವಿಂಗ್ ಮುಂತಾದವುಗಳನ್ನ ಹೇಳಿಕೊಡಲಾಗ್ತಾ ಇದೆ. ಮೊದಲೆಲ್ಲ ಇವುಗಳನ್ನ ಕೌಶಲ್ಯ ಅಂತ ಕರೆಯಲಾಗ್ತಾ ಇತ್ತು. ಆದರೆ ಈಗ ಅದು ಸರ್ವೈವಲ್ ಆಗೋದಕ್ಕಇರುವ ತಂತ್ರಗಳು ಅವುಗಳನ್ನ ಯಾರು ಸರಿಯಾಗಿ ನಿಭಾಯಿಸುತ್ತಾರೆ ಅವರು ಈ ತಂತ್ರಜ್ಞಾನ ಯುಗದಲ್ಲಿ ಸಮರ್ಥವಾಗಿ ಎದ್ದು ನಿಲ್ಲುವ ಸಾಮರ್ಥ್ಯವನ್ನ ಹೊಂದಿರುತ್ತಾರೆ.
ಈ ಒಂದು ವ್ಯವಸ್ಥೆ ಡಿಗ್ರಿ ಮುಖ್ಯ ಅನ್ನೋದರಿಂದ ಔಟ್ಕಮ್ ಮುಖ್ಯ ಅನ್ನೋದನ್ನ ಸೂಚಿಸುತ್ತೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಪರ್ವವೇ ಶುರುವಾಗಿದೆ ವಾಟ್ ಯು ನೋ ಅನ್ನೋದಕ್ಕಿಂತ ವಾಟ್ ಯು ಡು ಹೌ ಯು ಥಿಂಕ್ ಹೌ ಯುವ ಅನ್ನೋದಕ್ಕೆ ಮಹತ್ವವನ್ನ ನೀಡಲಾಗ್ತಾ ಇದೆ ಎನ್ಸಿಆರ್ಎಫ್ ಹಂತಹಂತವಾಗಿ ಭಾರತದ ಶಿಕ್ಷಣ ವ್ಯವಸ್ಥೆಯನ್ನ ಆವರಿಸಿಕೊಳ್ಳುತ್ತಾ ಇದೆ ಈ ಒಂದು ಬದಲಾವಣೆಯಿಂದಾಗಿ ಭಾರತ ಇನ್ನಷ್ಟು ಅಭಿವೃದ್ಧಿಯನ್ನ ಕಾಣುವುದರಲ್ಲಿ ಸಂಶಯವಿಲ್ಲ ಮೊದಲನೆದಾಗಿ ನಿರುದ್ಯೋಗದ ಸಮಸ್ಯೆ ಕಡಿಮೆಯಾಗಬಹುದು ವಿದ್ಯಾರ್ಥಿಗಳು ಕೇವಲ ಡಿಗ್ರಿ ಪಡೆದುಕೊಳ್ಳದೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನ ಹೊಂದಿರುವುದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎರಡನೆದಾಗಿ ಉದ್ಯಮ ಮತ್ತು ಶಿಕ್ಷಣದ ನಡುವಿನ ಅಂತರ ಕಡಿಮೆಯಾಗುತ್ತೆ ಇಂಡಸ್ಟ್ರಿ ಆಧಾರಿತ ತರವೇತಿ ಇಂಟರ್ನ್ಶಿಪ್ ಮತ್ತು ಪ್ರಾಯೋಗಿಕ ಅಧ್ಯಯನಗಳಿಂದ ಉದ್ಯಮಗಳಿಗೆ ತಕ್ಷಣ ಕೆಲಸಕ್ಕೆ ತಕ್ತ ಮಾನವvಸಂಪನ್ಮೂಲ ಲಭ್ಯವಾಗುತ್ತದೆ ಮೂರನೆದಾಗಿ ಜೀವನಪೂರ್ತಿ ಕಲಿಕೆ ಅನ್ನುವ ಕಾನ್ಸೆಪ್ಟ್ ಬೆಳೆದು ಬರುತ್ತದೆ ಉದ್ಯೋಗದಲ್ಲಿರುವವರು ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಕೌಶಲ್ಯಗಳನ್ನ ಅಪ್ಡೇಟ್ ಮಾಡಬಹುದು ಜನರಲ್ಲಿ ಕಲಿಯುವ ತುಡಿತ ಹೆಚ್ಚಾಗಲು ಇದು ಕಾರಣವಾಗುತ್ತೆ.
ಸಮಯದ ಸದುಪಯೋಗ ಆಗುತ್ತೆ ಇದಲ್ಲದೆ ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನ ಪಡೆದುಕೊಳ್ಳುದಕ್ಕೆ ಸುಲಭವಾಗುತ್ತೆ ಆನ್ಲೈನ್ ಹಾಗೂ ಕ್ರೆಡಿಟ್ ವರ್ಗಾವಣೆ ವ್ಯವಸ್ಥೆಯಿಂದ ಶಿಕ್ಷಣದ ಸಮಾನ ಅವಕಾಶ ಸಾಧ್ಯವಾಗುತ್ತೆ. ಎನ್ಸಿಆರ್ಎಫ್ ನಿಂದಾಗಿ ಭಾರತ ಡಿಗ್ರಿ ಕೇಂದ್ರಿತ ಸಮಾಜವಾಗಿರದೆ ಕೌಶಲ್ಯ ಮತ್ತು ಸಾಮರ್ಥ್ಯ ಕೇಂದ್ರಿತ ಸಮಾಜವಾಗಿ ಬೆಳೆಯುತ್ತದೆ. ಭಾರತ ಮತ್ತೊಮ್ಮೆ ವಿಶ್ವ ಗುರುವಾಗುವ ಎಲ್ಲಾ ಸಾಧ್ಯತೆಗಳನ್ನ ಈ ವ್ಯವಸ್ಥೆ ಕಲ್ಪಿಸಿಕೊಡುತ್ತದೆ. ಬದಲಾವಣೆಯ ಪರ್ವ ಇನ್ನೇನೋ ಶುರುವಾಗಿಬಿಟ್ಟಿದೆ. ಫಲಿತಾಂಶಕ್ಕಾಗಿ ಕೆಲವೇ ಕೆಲವು ವರ್ಷ ಕಾಯೋಣ.


