ಇವತ್ತಿಂದ ಜಿಎಸ್ಟಿ ನ ಹೊಸ ರೇಟ್ಗಳು ಜಾರಿಗೆ ಬರ್ತಾ ಇದ್ದಾವೆ. ತುಂಬಾ ವಸ್ತುಗಳ ಮೇಲೆ ತೆರಿಗೆ ಕಮ್ಮಿ ಆಗ್ತಿದೆ. ದೊಡ್ಡ ಪ್ರಮಾಣದಲ್ಲಿ ವಸ್ತುಗಳು ಚೀಪ್ ಆಗ್ತಿದ್ದಾವೆ ಅಂದ್ರೆ ರೇಟ್ ಕಮ್ಮಿ ಆಗ್ತಿದೆ ಹಾಗಿದ್ರೆ ಜನ ಬಳಸುವ ವಸ್ತುಗಳಾಗಿರೋ ಕಾರು ಟಿವಿ ಬೈಕ್ ದಿನಬಳಕೆ ವಸ್ತುಗಳು ಆಹಾರ ವಸ್ತುಗಳು ಕೆಲವೊಂದು ವಸ್ತುಗಳಿಗಂತೂ ಜೀರೋ ಜಿಎಸ್ಟಿ ಜೀರೋ ಟ್ಯಾಕ್ಸೇ ಇಲ್ಲ ಈ ತರದೆಲ್ಲ ಆಗ್ತಾ ಇದೆಯಲ್ಲ ಬನ್ನಿ ಹಾಗಾದ್ರೆ ಯಾವೆಲ್ಲ ವಸ್ತುಗಳ ಬೆಲೆ ಕಮ್ಮಿ ಆಗುತ್ತೆ ಆಲ್ಮೋಸ್ಟ್ ಹೆಚ್ಚಿನ ವಸ್ತುಗಳದ್ದು ಕಮ್ಮಿ ಆಗುತ್ತೆ ಆದರೆ ಕೆಲವೊಂದು ವಸ್ತುಗಳ ರೇಟ್ ಜಾಸ್ತಿ ಕೂಡ ಆಗುತ್ತೆ.
ಈ ವಸ್ತುಗಳಿಗೆ ಟ್ಯಾಕ್ಸೇ ಇಲ್ಲ ಹೊಸ ಜಿಎಸ್ಟಿ ಸುಧಾರಣೆಯಲ್ಲಿ ಸಾಕಷ್ಟು ದಿನಬಳಕೆ ವಸ್ತುಗಳಿಗೆ ಜೀರ ಟ್ಯಾಕ್ಸ್ ಅದರ ಅರ್ಥ ಅದಕ್ಕಿನ ಮೇಲೆ ಬೆಲೆ ಕಮ್ಮಿ ಆಗುತ್ತೆ ಈ ಲಿಸ್ಟ್ ಅಲ್ಲಿ ಅಲ್ಟ್ರಾ ಹೈ ಟೆಂಪರೇಚರ್ ಟ್ರೀಟೆಡ್ ಹಾಲು ಗುಡ್ ಲೈಫ್ ಹಾಲಲ್ಲ ನೋಡಿದೀರಲ್ಲ ಆ ತರದ ಹಾಲುಗಳಿಗೆ ಟ್ಯಾಕ್ಸ್ ಇರೋದಿಲ್ಲ ಜೀರೋ ಆಮೇಲೆ ಪ್ರಿ ಪ್ಯಾಕ್ಡ್ ಮತ್ತು ಲೇಬೆಲ್ಡ್ ಪನ್ನೀರ್ ಪಿಜ್ಜಾ ಬ್ರೆಡ್ ಕಾಕ್ರಾ ಚಪಾತಿ ರೊಟ್ಟಿ ಪರಾಟ ಆಮೇಲೆ ಭಾರತದ ಇತರ ರೋಟಿ ಐಟಂಗಳು ಪ್ಯಾಕೇಜ್ಡ್ ಅದಕ್ಕೆಲ್ಲ ಜಿಎಸ್ಟಿ ಬೀಳಲ್ಲ ಇನ್ಮೇಲೆ ಇನ್ನು ಮಕ್ಕಳು ಮತ್ತು ದೊಡ್ಡವರು ಬಳಸೋ ಸ್ಟೇಷನರಿ ವಸ್ತುಗಳು ಅಂದ್ರೆ ಎರೇಸರ್, ಪೆನ್ಸಿಲ್ ಶಾರ್ಪ್ನರ್, ಎಕ್ಸರ್ಸೈಜ್ ಬುಕ್ ಗೆ ಬಳಸೋ ಅನ್ಕೋಟೆಡ್ ಪೇಪರ್ ಮತ್ತು ಪೇಪರ್ ಬೋರ್ಡ್, ಗ್ರಾಫ್ ಬುಕ್, ಲ್ಯಾಬೊರೇಟರಿ ನೋಟ್ ಬುಕ್ ಮತ್ತು ಇತರ ನೋಟ್ ಬುಕ್ಸ್ ಎಲ್ಲಾ ಟ್ಯಾಕ್ಸ್ ಫ್ರೀ ಆಗುತ್ತೆ. ಹಾಗೆ ಪ್ರಿಂಟ್ ಮಾಡಿರೋ ಮ್ಯಾಪ್ಸ್ ಅಟ್ಲಾಸ್ ಹೈಡ್ರೋಗ್ರಾಫಿಕ್ ನಂತಹ ಬೇರೆ ತರಹದ ಚಾರ್ಟ್ ಗಳು ವಾಲ್ ಮ್ಯಾಪ್ಸ್ ಗ್ಲೋಬ್ ಇದೆಲ್ಲದಕ್ಕೂ ಇನ್ಮೇಲೆ ಕಮ್ಮಿ ಇರುತ್ತೆ ಜಿಎಸ್ಟಿ ಇನ್ಶೂರೆನ್ಸ್ಗೂ ಟ್ಯಾಕ್ಸ್ ಇಲ್ಲ ಇನ್ನು ಎಲ್ಲರೂ ತಮಗಾಗಿ ಮತ್ತು ತಮ್ಮ ಫ್ಯಾಮಿಲಿಗಾಗಿ ಮಾಡಿಸೋ ಹೆಲ್ತ್ ಇನ್ಶೂರೆನ್ಸ್ ಮತ್ತಅದರ ರಿ ಇನ್ಶೂರೆನ್ಸ್ ಹಾಗೆ ಲೈಫ್ ಇನ್ಶೂರೆನ್ಸ್ ಮತ್ತ ಅದರ ರಿ ಇನ್ಶೂರೆನ್ಸ್ಗೂ ಕೂಡ ಜಿಎಸ್ಟಿ ಇಂದ ವಿನಾಯತಿ ಇದೆ. ಇದರ ಬಗ್ಗೆ ನಿಮಗೆ ಈ ಮೊದಲೇ ನಾವು ಡೀಟೇಲ್ ಆಗಿ ಮಾಹಿತಿ ಕೊಟ್ಟಿದ್ವಿ.
ಮುಂಚೆ 18% ಇತ್ತು ಈಗ ಜೀರೋ ಮಾಡಿದ್ದಾರೆ. ಹೀಗೆ ಸಾಕಷ್ಟು ಮೆಡಿಸಿನ್ಗೂ ಕೂಡ ಟ್ಯಾಕ್ಸ್ ಫ್ರೀ ಇದೆ ಅದರಲ್ಲಿ ಕ್ಯಾನ್ಸರ್ ಮೆಡಿಸಿನ್ ಆಮೇಲೆ ರೇರ್ ಜೆನೆಟಿಕ್ ಡಿಸೀಸಸ್ ನ ಮೆಡಿಸಿನ್ ಬ್ಲಡ್ ಕ್ಲಾಟಿಂಗ್ ಪ್ರಾಬ್ಲಮ್ಸ್ ಇಮ್ಯೂನ್ ಸಿಸ್ಟಮ್ ಡಿಸ್ಆರ್ಡರ್ಸ್ ಹಾಗೆ ಹೈ ಕೊಲೆಸ್ಟ್ರಾಲ್ ಇದಕ್ಕೆಲ್ಲ ಬಳಸುವ ಮೆಡಿಸಿನ್ ಗಳಿಗೆ ಟ್ಯಾಕ್ಸ್ ತೆಗೆದು ಹಾಕಿದ್ದಾರೆ ಈ ವಸ್ತುಗಳಿಗೆ 5% ಟ್ಯಾಕ್ಸ್ ಇನ್ನು ಬಡವರ ಮತ್ತು ಮಿಡಲ್ ಕ್ಲಾಸ್ ಜನ ತುಂಬಾ ಬಳಸುವಂತಹ ವಸ್ತುಗಳಿಗೂ ಕೂಡ ರೇಟ್ ಕಮ್ಮಿಯಾಗಿದೆ 5% ಜಿಎಸ್ಟಿ ವ್ಯಾಪ್ತಿಗೆ ಬಂದಿದೆ ಮುಂಚೆ 18 12% ಇದ್ದ ಸುಮಾರು ವಸ್ತುಗಳನ್ನ ಈಗ 5% ಗೆ ತರಲಾಗಿದೆ ಅದರಲ್ಲಿ ಮುಖ್ಯವಾಗಿ ಟೂತ್ ಪೇಸ್ಟ್ ಟೂತ್ ಬ್ರಷಸ್ ಟಾಲ್ಕಮ ಪೌಡರ್ ಶೇವಿಂಗ್ ಕ್ರೀಮ್ ಹೇರ್ ಆಯಿಲ್ ಸೋಪ್ಸ್ ಟಾಯ್ಲೆಟ್ ಬಾರ್ಸ್ ಫೇಸ್ ಪೌಡರ್ಸ್ ಹಾಗೆ ಆಫ್ಟರ್ ಶೇವ್ ಲೋಷನ್ಸ್ ಅಡುಗೆ ಪಾತ್ರೆಗಳು ಛತ್ರಿ ಸೈಕಲ್ ಹಾಗೆ ಬಿದುರಿನಿಂದ ಮಾಡಿದ ವಸ್ತುಗಳು ಈ ಸ್ಲ್ಯಾಬ್ ನಲ್ಲಿ ಬರ್ತವೆ ಇನ್ನು ಯಾವುದೇ ತರಹದ ಕ್ಯಾಂಡಲ್ ಅದು ಮಷೀನ್ ಮೇಡ್ ಆಗಿರಬಹುದು ಅಥವಾ ಹ್ಯಾಂಡ್ ಮೇಡ್ ಆಗಿರಬಹುದು ಎರಡಕ್ಕೂ 5% ಜಿಎಸ್ಟಿ ಬರುತ್ತೆ ವ್ಯತ್ಯಾಸ ಇರಲ್ಲ ಇನ್ನು ಫೀಡಿಂಗ್ ಬಾಟಲ್ಸ್ ಪ್ಲಾಸ್ಟಿಕ್ ಬೀಡ್ಸ್ ಫೀಡಿಂಗ್ ಬಾಟಲ್ಸ್ ನ ನಿಪಲ್ ಗೂ ಕೂಡ ಈಗ ರೇಟ್ ಡೌನ್ ಆಗಿ 5% ಗೆ ಬರುತ್ತೆ ಟ್ಯಾಕ್ಸ್ ರೇಟ್ ಆಹಾರ ಪದಾರ್ಥಗಳು ಇದು ದೊಡ್ಡ ಲಿಸ್ಟ್ ನಿಧಾನಕ್ಕೆ ಗಮನಿಸ್ತಾ ಹೋಗಿ.
ಮೊದಲನೆದಾಗಿ ಹಾಲು ಬೆಣ್ಣೆ ತುಪ್ಪ ಹಾಗೂ ಹಾಲಿನಿಂದ ತಯಾರಿಸಿದ ಈತರ ಪ್ರಾಡಕ್ಟ್ಸ್ ಹಾಗೆ ಡೈರಿ ಸ್ಪ್ರೆಡ್ಸ್ ಅಂದ್ರೆ ನೀವು ಚಪಾತಿ ಬ್ರೆಡ್ ಮೇಲೆ ಚೀಸ್ ಬೆಣ್ಣೆ ಎಲ್ಲ ಸವರಿಕೊಳ್ಳುತ್ತಿದ್ರೆ ಅಂತ ಉತ್ಪನ್ನಗಳು ಅವೆಲ್ಲ 5% ಟ್ಯಾಕ್ಸ್ ವ್ಯಾಪ್ತಿಯಲ್ಲಿ ಇರುತ್ತೆ ಇನ್ನು ಪೇಸ್ಟ್ರಿ ಕೇಕ್ ಬಿಸ್ಕೆಟ್ ಕುಕೀಸ್ ನಂತ ಬೇಕರಿ ಐಟಂ ಹಾಗೆ ವಿವಿಧ ರೀತಿಯ ಧಾನ್ಯಗಳಿಂದ ತಯಾರಿಸಿದ ಹಿಟ್ಟು ಹಾಗೆ ತುಂಬಾ ಜನರ ಪಾಲಿನ ಮಾರ್ನಿಂಗ್ ಬ್ರೇಕ್ಫಾಸ್ಟ್ ಆಗಿರೋ ಕಾರ್ನ್ ಫ್ಲೇಕ್ಸ್ ಪಾಸ್ತಾ ನ್ಯೂಡಲ್ಸ್ ಕುರ್ಕುರೆ ಲೇಸ್ ಇಂತಹ ಸ್ನಾಕ್ಸ್ ಗೆ 5% ಜಿಎಸ್ಟಿ ಬರುತ್ತೆ ಹಾಗೆ ಪಫ್ಡ್ ಕಾರ್ನ್ ಪಫ್ಡ್ ರೈಸ್ ಕೂಡ ಇದರಲ್ಲೇ ಬರುತ್ತೆ ಹಾಗೆ ಕೆಚಪ್ ಸಾಸ್ ಕರಿ ಪೇಸ್ಟ್ ಮ್ಯಾನಿಸ್ ವಿವಿಧ ಬಗೆ ಐಸ್ ಕ್ರೀಮ್ಗಳು ಕುಲ್ಫಿ ಕ್ಯಾಂಡಿ ಕಾರ್ನೇಟೋ ಇವೆಲ್ಲವೂ ಕೂಡ 5% ಸ್ಲ್ಾಬ್ ನಲ್ಲಿ ಬರುತ್ತೆ ಇನ್ನು ಪ್ಲಾಂಟ್ ಬೇಸ್ಡ್ ಐಟಮ್ಸ್ ಆದ ಸೋಯಾ ಚಂಕ್ಸ್ ಸಂಡಿಗೆ ಹಾಗೂ ಇಡ್ಲಿ ದೋಸೆ ಹಿಟ್ಟು ಮಿಕ್ಸ್ಚರ್ ಭುಜಿಯಾದಂತಹ ಪ್ಯಾಕ್ ಮಾಡಿರೋ ಸ್ನಾಕ್ಸ್ ಬೇರೆ ಜಿಎಸ್ಟಿ ಕ್ಯಾಟಗರಿಯಲ್ಲಿ ಬರೆದ ಡಯಾಬಿಟಿಕ್ ಪೇಷಂಟ್ಸ್ಗೆ ತಯಾರಿಸಲಾದ ಆಹಾರ ಹಾಗೆ ಫ್ಲೇವರ್ ಮತ್ತು ಶುಗರ್ ಆಡ್ ಮಾಡದೆ ಇರುವ 20 ಲೀಟರ್ ತನಕದ ವಾಟರ್ ಬಾಟಲ್ಗಳು ಹಸುವಿನ ಹಾಲಿಗೆ ಪರ್ಯಾಯವಾಗಿ ಬಳಸು ಸೋಯಾ ಮಿಲ್ಕ್ ಆಲ್ಮಂಡ್ ಮಿಲ್ಕ್ ಮತ್ತು ಇತರ ಮಾದರಿಯ ಪ್ಲಾಂಟ್ ಬೇಸ್ಡ್ ಹಾಲು ಹಣ್ಣಿನಿಂದ ತಯಾರಿಸಿದ ನಾನ್ ಕಾರ್ಬೊನೇಟೆಡ್ ಡ್ರಿಂಕ್ಸ್ ಹಾಗೆ ಅಸಿಟಿಕ್ ಆಸಿಡ್ ಮತ್ತು ವಿನೆಗರ್ ಮೂಲಕ ತಯಾರಿಸಿದ ಅಥವಾ ಪ್ರಿಸರ್ವ್ ಮಾಡಿದ ತರಕಾರಿಗಳು ಹಣ್ಣುಗಳು ನಟ್ಸ್ ಇದಕ್ಕೂ ಕೂಡ 5% ಇನ್ನು ಬೇಯಿಸಿ ಉಪ್ಪು ಹಾಕಿ ಒಂದು ಕಂಟೇನರ್ ನಲ್ಲಿ ಸ್ಟೋರ್ ಮಾಡಿಟ್ಟ ತರಕಾರಿಗಳು ಸಕ್ಕರೆಯಲ್ಲಿ ಅದ್ದಿ ಸ್ಟೋರ್ ಮಾಡಿಟ್ಟಿರೋ ತರಕಾರಿ ಮತ್ತು ಹಣ್ಣು ಹಾಗೆ ಹಣ್ಣು ಮತ್ತು ಕಾಯಿಗಳನ್ನ ಬೇಯಿಸಿ ತಯಾರಿಸಿದ ಜಾಮ್ ಫ್ರೂಟ್ ಜೆಲ್ಲಿ ಫ್ರೂಟ್ ಪ್ಯೂರಿ ಫ್ರೂಟ್ ಅಂಡ್ ನಟ್ ಪೇಸ್ಟ್ ಹಾಗೆ ಸಕ್ಕರೆ ಮತ್ತು ಸ್ವೀಟ್ನರ್ಸ್ ಇದ್ದರೂ ಪರವಾಗಿಲ್ಲ ಆದರೆ ಆಲ್ಕೋಹಾಲ್ ಕಾಂಟೆಂಟ್ ಇರದ ಫ್ರೂಟ್ ನಟ್ಸ್ ತರಕಾರಿಯ ರಸಗಳು ಹಾಗೆ ಟೀ ಕಾಫಿಯಇಂದ ತಯಾರಿಸಿದ ಎಕ್ಸ್ಟ್ರಾಕ್ಟ್ ಮತ್ತು ಎಸೆನ್ಸ್ ಬೇಕಿಂಗ್ ಮಾಡೋಕೆ ಉಪಯೋಗಿಸೋ ಈಸ್ಟ್ ಇವೆಲ್ಲ 5% ಸ್ಲ್ಯಾಬ್ ನಲ್ಲೆ ಬರುತ್ತೆ
ಫ್ರೂಟ್ಸ್ ಮತ್ತು ಡ್ರೈ ಫ್ರೂಟ್ಸ್ ಇವುಗಳ ಬೆಲೆ ಕೂಡ ಕಮ್ಮಿ ಆಗುತ್ತೆ ವಿವಿಧ ರೀತಿಯ ಕಿತ್ತಳೆ ಹಣ್ಣುಗಳು ದ್ರಾಕ್ಷಿ ಚಕೋತ ನಿಂಬೆಹಣ್ಣು ಇದೇನಾದ್ರು ಡ್ರೈಡ್ ಇದ್ರೆ ಡ್ರೈಡ್ ಫ್ರೂಟ್ ಆಗಿದನ್ನ ಇಟ್ಕೊಂಡಿದ್ರೆ ಅದು ಕೂಡ 5% ಟ್ಯಾಕ್ಸ್ ಗೆ ಬರುತ್ತೆ ತೆಂಗಿನಕಾಯಿ ಬಾದಾಮಿ ಗೋಡಂಬಿ ವಾಲ್ನಟ್ಸ್ ಡ್ರೈ ಮಾಡಿರೋ ಬಾಳೆಹಣ್ಣು ಚಕೋತ ಎಲ್ಲಾ ರೀತಿಯ ಸಿಟ್ರಸ್ ಹಣ್ಣುಗಳು ಒಣ ದ್ರಾಕ್ಷಿಗಳು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಮಿಕ್ಸ್ಚರ್ ರೋಸ್ಟ್ ಮಾಡಿರೋ ಅಥವಾ ಮಾಡದೆ ಇರೋ ಮಾಲ್ಟ್ ಹಾಗೆ ಸಾಫ್ಟ್ ಅಥವಾ ಹಾರ್ ಹಾರ್ಡ್ ಆಗಿರೋ ಖರ್ಜೂರ ಕೆಲವರು ಉತ್ತೆ ಅಂತಾರೆ ಗೊತ್ತಾ ಅದು ಅಥವಾ ರೆಗ್ಯುಲರ್ ಸಾಫ್ಟ್ ಆಗಿರೋ ಖರ್ಜೂರ ಅಂಜೂರ ಪೈನಾಪಲ್ ಅವಕಾಡೋ ಪೇರಳೆ ಡ್ರೈ ಮಾಡಿದ ಪುನರ್ಪುಳಿ ಹಣ್ಣು ಮಾವಿನ ಹಣ್ಣು ಎಲ್ಲ 5% ಟ್ಯಾಕ್ಸ್ ಗೆ ಬರುತ್ತೆ ಈಗ ಆಮೇಲೆ ಡ್ರೈ ಮಾಡಿರೋ ಸಿಪ್ಪೆ ತೆಗೆಯದ ಅಥವಾ ತೆಗೆದ ಬ್ರೆಜಿಲಿಯನ್ ನಟ್ಸ್ ಆಲ್ಮನ್ಡ್ಸ್ ಆಮೇಲೆ ನಟ್ಸ್ ಹಾಗೆ ಫಿಲ್ಬರ್ಟ್ ಚೆಸ್ಟ್ ನಟ್ಸ್ ಪಿಸ್ತಾ ಮ್ಯಾಕಡೆಮಿಯ ನಟ್ಸ್ ಕೋಲಾ ನಟ್ಸ್ ಪೈನ್ ನಟ್ಸ್ ಇವುಗಳ ರೇಟ್ ಕೂಡ ಕಮ್ಮಿ ಕಮ್ಮಿ ಆಗುತ್ತೆ ಎಲ್ಲಾ 5% ಬರುತ್ತೆ ಹಾಗೆ ಜೀವಂತವಿರೋ ಕುದುರೆನ ಯಾರಾದ್ರೂ ಪರ್ಚೇಸ್ ಮಾಡ ಲೆಕ್ಕಾಚಾರ ಇದ್ರೆ ನಿಮಗೂ ಟ್ಯಾಕ್ಸ್ ಕಮ್ಮಿ ಆಗುತ್ತೆ ಬರಿ 5% ಜಿಎಸ್ಟಿ ಇರುತ್ತೆ ಹಣ್ಣುಗಳಿಂದ ತಯಾರಿಸಿದ ಜಾಮ್ನಂತ ಪೇಸ್ಟ್ಗಳು ಕೂಡ 5%ಗೆ ಬರ್ತವೆ ಆಹಾರಗಳನ್ನ ಗಟ್ಟಿಗೊಳಿಸೋಕ್ಕೆ ಬಳಸು ಸಸ್ಯಗಳಿಂದ ತಯಾರಿಸಿದ ಪದಾರ್ಥಗಳು ಕೂಡ ಬರ್ತವೆ ಹಾಗೆ ಬೀಡಿಯಲ್ಲಿ ಬಳಸೋ ಎಲೆ ಬೀಡಿ ಎಲೆ ಅದಕ್ಕೂ ಕೂಡ 5% ಟ್ಯಾಕ್ಸ್ಗೆ ಬರುತ್ತೆ ಮಾಂಸ ಮತ್ತು ಮಾಂಸದ ಉಪ ಉತ್ಪನ್ನಗಳು ಮಾಂಸ ಮೀನು ಏಡಿ ಅಂದ್ರೆ ಈ ಸಿಗಡಿಲ್ಲ ಬರುತ್ತಲ್ಲ.
ಈ ಮಂಗಳೂರು ಕಡೆ ಹೋದ್ರೆ ಇಟ್ಟಿ ಅಂತ ಹೇಳ್ತಾರೆ ಅದು ಇಲ್ಲಿ ಪ್ರಾನ್ಸ್ ಅಂತ ಹೇಳ್ತಾರಲ್ಲ ಅದರಲ್ಲಿ ಬೇರೆ ಬೇರೆ ತಳಿದು ಇರುತ್ತವೆ ಸೋ ಅವುಗಳು ಆಮೇಲೆ ಮಳಿ ಆಯಿಸ್ಟರ್ಸ್ ಸ್ಕ್ವಿಡ್ ಈತರದ ಸಮುದ್ರಿ ಆಹಾರ ಇವುಗಳಿಂದ ಎಕ್ಸ್ಟ್ರಾಕ್ಟ್ ಮಾಡಿದ ರಸ ತಯಾರಿಸಿದ ಅಥವಾ ಸಂರಕ್ಷಿಸಿದ ಮೀನು ಸಂಸ್ಕರಿಸಲಾದ ಮೀನಿನ ಮೊಟ್ಟೆಗಳು ಅಥವಾ ಸಂಸ್ಕರಿಸಿದ ಎಲ್ಲಾ ಜೀವಿಗಳು ಯಾವುದು ಫುಡ್ ಸೀಫುಡ್ ಎಡಿ ಸಿಗಡಿ ಮಳಿ ಸ್ಕ್ವಿಡ್ ಈ ರೀತಿದೆಲ್ಲ ಫುಡ್ ಐಟಮ್ಸ್ ಸಂಸ್ಕರಿಸಿದ್ದು ಸಂಸ್ಕರಿಸದೆ ಇರೋದು ಇದೆಲ್ಲ ಎಲ್ಲದು ಕೂಡ 5% ಸ್ಲ್ಯಾಬ್ ನಲ್ಲಿ ಬರುತ್ತೆ. ಹಾಗೆ ಹಂದಿಯ ಚರ್ಬಿ ಫ್ಯಾಟ್ ಪೌಲ್ಟ್ರಿ ಫ್ಯಾಟ್ ಅದು ಕೂಡ 5% ಜಿಎಸ್ಟಿ ಅದರಲ್ಲಿ ಹಂದಿ ಅಥವಾ ಕೋಳಿ ಮಾಂಸಕ್ಕೆ ಬರೋದಿಲ್ಲ ಅದರದ್ದು ಚರ್ಬಿಗೆ ಮಾತ್ರ ಫ್ಯಾಟ್ ಗೆ ಹಾಗೆ ಪ್ರಾಸೆಸ್ ಮತ್ತು ಪ್ಯೂರಿಫೈ ಮಾಡಿರುವಂತ ಹಂದಿ ಕೊಬ್ಬು ಕೂಡ ಬರೋದಿಲ್ಲ. ಆದರೆ ಧನ ಕುರಿ ಮೇಕೆ ಅಂತ ಪ್ರಾಣಿಗಳ ಪ್ರಾಸೆಸ್ ಮಾಡಿರದ ಫ್ಯಾಟ್ ಬರುತ್ತೆ. ಇನ್ನು ಮೀನು ಮತ್ತು ಇತರ ಸಮುದ್ರ ಜೀವಿಗಳಿಂದ ತೆಗೆದ ಆಯಿಲ್ ಕೂಡ ಬರುತ್ತೆ. ಅದನ್ನ ಪ್ರಾಸೆಸ್ ಮಾಡಿದ್ರು ಮಾಡಿಲ್ಲ ಅಂದ್ರು 5% ಜಿಎಸ್ಟಿ ಬರುತ್ತೆ. ಆದರೆ ಇದಕ್ಕೆ ಯಾವುದೇ ಕೆಮಿಕಲ್ ಆಡ್ ಮಾಡಿ ರಾಸಾಯನಿಕ ಬದಲಾವಣೆ ಮಾಡಂಗಿಲ್ಲ. ಇನ್ನು ಹಂದಿ ಅಥವಾ ಎಮ್ಮೆಯಿಂದ ತೆಗೆದ ಕೊಬ್ಬಿನಿಂದ ತಯಾರಿಸಿದ ಎಣ್ಣೆ ಅಥವಾ ಪದಾರ್ಥಗಳು ಈ ಲಿಸ್ಟ್ ನಲ್ಲಿ ಬರ್ತವೆ. ಆದರೆ ಇದಕ್ಕೆ ಬೇರೆ ಯಾವುದೇ ರೀತಿಯ ಎಣ್ಣೆ ಅಥವಾ ಕೆಮಿಕಲ್ ಮಿಕ್ಸ್ ಮಾಡಿರಬಾರದು. ಹಾಗೆ ಕುರಿಗಳ ಉಣ್ಣೆಯಿಂದ ಸಿಕ್ಕ ನ್ಯಾಚುರಲ್ ಫ್ಯಾಟ್ ಕೂಡ ಇದರಲ್ಲಿ ಸೇರುತ್ತೆ.
ಕೈಗಾರಿಕೆಗಳಲ್ಲಿ ಬಳಸುವ ಪ್ರಾಣಿ ಮತ್ತು ಸೂಕ್ಷ್ಮ ಜೀವಿಗಳಿಂದ ತೆಗೆದ ಕೆಮಿಕಲಿ ಮಾಡಿಫೈ ಮಾಡಿದ ಆಯಿಲ್ ಮತ್ತು ಫ್ಯಾಟ್ಗಳು. ಇನ್ನು ಅಡುಗೆ ಅಥವಾ ಬೇಕಿಂಗ್ ಮಾಡುವಾಗ ಎಣ್ಣೆ ಬದಲಿಗೆ ಬಳಸೋ ಸಸ್ಯ ಮತ್ತು ಪ್ರಾಣಿಗಳ ಫ್ಯಾಟ್ ನಿಂದ ತಯಾರಾದ ಮಾರ್ಜರಿನ್ ಗಳಿಗೂ ಕೂಡ 5% ಟ್ಯಾಕ್ಸ್ ಹಾಗೆ ಪೇಂಟ್ ಗಳಲ್ಲಿ ಬಳಸೋ ಅಗಸೆ ಬೀಜಗಳ ಎಣ್ಣೆಯಿಂದ ತಯಾರಿಸಿದ ಲಿನೋಕ್ಸಿನ್ಗೂ 5% ಹಾಗೆ ಸೋಪ್ ತಯಾರಿಸುವಾಗ ಸಿಗೋ ಬೈ ಪ್ರಾಡಕ್ಟ್ ಗ್ಲೈಸರಾಲ್ ಅದಕ್ಕೂ ಕೂಡ 5% ಕೊಬ್ಬುಗಳನ್ನ ತಯಾರಿಸುವಾಗ ಸಿಗೋ ಡೆಗ್ರಾಸ್ ಅನ್ನೋ ತ್ಯಾಜ್ಯಕ್ಕೆ 5% ಟ್ಯಾಕ್ಸ್ ಸಂಸ್ಕರಿಸಿದ ಹಾಗೂ ಪ್ರಿಸರ್ವ್ ಮಾಡಿಟ್ಟ ಮಾಂಸ ಮತ್ತು ಮಾಂಸಗಳಿಂದ ತಯಾರಿಸಲ ಆದ ಸಾಸೇಜ್ ಮೀಟ್ ರೋಲ್ಸ್ ನಂತಹ ಪದಾರ್ಥಗಳು ಈ ಸ್ಲ್ಯಾಬ್ ಅಲ್ಲೇ ಬರುತ್ತೆ. ಸ್ನೇಹಿತರೆ ಇದರಲ್ಲಿ ತುಂಬಾ ಐಟಮ್ಸ್ ಇದೆ ಏನು ಅಂತನು ನಿಮಗೆ ಗೊತ್ತಾಗದಿರಬಹುದು ನಮಗೂ ಕೂಡ ಗೊತ್ತಾಗಲಿಲ್ಲ ಸುಮಾರು ಐಟಮ್ಸ್ ಇದೆ ಏನು ಅಂತ ಆಯಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿರೋರಿಗೆ ಬಳಕೆ ಮಾಡ್ತಿರೋರಿಗೆ ಅವರವರಿಗೆ ಅರ್ಥ ಆಗುತ್ತೆ ಅಷ್ಟೇ ಸೋ ನಮಗೆ ಬೇಕಾಗಿದ್ದನ್ನ ನಮಗೆ ಸಂಬಂಧ ಪಡದನ್ನ ಓ ಇದು ನಾವು ಬಳಸುವ ವಸ್ತು ಅಂತ ನಾವು ಹೈಲೈಟ್ ಮಾಡ್ಕೊಂಡು ಉಳಿದಿದ್ದು ಜಸ್ಟ್ ಇನ್ಫಾರ್ಮೇಷನ್ಗೆ ನೋಡ್ತಾ ಹೋದ್ರೆ ಬೆಟರ್ ಇಲ್ಲ ಅಂದ್ರೆ ತಲೆ ಚಿತ್ರಣ ಆಗುತ್ತೆ ಸಿಹಿ ತಿನಿಸುಗಳ ಟ್ಯಾಕ್ಸ್ ಇನ್ನು ಚಾಕಲೇಟ್ ಕಡೆಗೆ ಬಂದ್ರೆ ಕೋಕೋ ಬೀನ್ಸ್ ನಿಂದ ತಯಾರಿಸಿದ ಪ್ರಾಡಕ್ಟ್ಸ್ ಅಂದ್ರೆ ಕ್ಯಾಂಡಿ ಟಾಫಿ ಲಾಲಿಪಾಪ್ ಕೋಕೋ ಪೌಡರ್ ಚಾಕಲೇಟ್ ಬಾರ್ ಚಾಕಲೇಟ್ ಸ್ಪ್ರೆಡ್ ಅಥವಾ ಇತರ ಉತ್ಪನ್ನಗಳು ಇಲ್ಲಿ ಕೋಕೋದಿಂದ ತಯಾರಿಸಿದ ಫುಡ್ ಐಟಮ್ಸ್ಗೆ 40% ಗಿಂತ ಕಮ್ಮಿ ಕೋಕೋ ಇದ್ರೆ ಮಾತ್ರ 5% ಜಿಎಸ್ಟಿ ಅದಕ್ಕೂ ಜಾಸ್ತಿ ಪ್ರಮಾಣದ ಕೋಕೋ ಇದ್ರೆ ಅನ್ವಯಿಸಲ್ಲ ಹಾಗೆ ಮೆಡಿಕಲ್ ಮತ್ತು ಕೈಗಾರಿಕೆಗಳಲ್ಲಿ ಬಳಸುವ ಕೆಮಿಕಲ್ ಇನ್ನು ವೈದ್ಯಕೀಯ ಉಪಕರಣಗಳಿಗೂ ಕೂಡ 5% ಜಿಎಸ್ಟಿ ಇದೆ ಅಂದ್ರೆ ಲೈಫ್ ಸೇವಿಂಗ್ ಡ್ರಗ್ಸ್ ಮೆಡಿಕಲ್ ಡಿವೈಸಸ್ ಥರ್ಮಾಮೀಟರ್ಸ್ ಆಕ್ಸಿಜನ್ ಡಯಾಗ್ನೋಸ್ಟಿಕ್ ಕಿಟ್ಸ್ ಗ್ಲುಕೋಮೀಟರ್ಸ್ ಕರೆಕ್ಟಿವ್ ಸ್ಪೆಕ್ಟಕಲ್ಸ್ ಇವೆಲ್ಲ 5% ಟ್ಯಾಕ್ಸಿಗೆ ಬರ್ತವೆ ಇನ್ನು ಗಿಡಗಳು ಚೆನ್ನಾಗಿ ಬೆಳೆಯೋಕೆ ಸಹಾಯ ಮಾಡೋ ಗೆಬರಲಿಕ್ ಆಸಿಡ್ ಮೆಡಿಸಿನ್ಗಳು ಕೂಡ 5% ಜಿಎಸ್ಟಿ ಯಲ್ಲಿ ಬರ್ತವೆ ಟ್ರ್ಾಕ್ಟರ್ನ ಹಿಂಭಾಗದ ಟೈರ್ ಮತ್ತು ಟ್ಯೂಬ್ ಲೆದರ್ ಈ ಲೆದರ್ ನಲ್ಲೂ ಕೂಡ ಒಂದಿಷ್ಟು ಕ್ಯಾಟಗರಿಗಳಿವೆ ಎಲ್ಲಾ ಲೆದರ್ ಟೈಪ್ಗೆ ಅನ್ವಯ ಆಗಲ್ಲ ಬಟ್ ಒಂದಷ್ಟು ಬರ್ತವೆ 5% ಅಲ್ಲಿ ಬರ್ತವೆ ಹಾಗೆ ಲೆದರ್ ಬಳಸಿ ಮಾಡಿದ ಹತ್ತಿ ಸೆಣಬನ್ನ ಬಳಸಿ ಮಾಡಿದ ಹ್ಯಾಂಡ್ ಬ್ಯಾಗ್ಗಳು ಪೌಚ್ ಪರ್ಸ್ ಅಥವಾ ವಾಲೆಟ್ಸ್ ಹಾಗೆ ಜುವೆಲ್ರಿ ಬಾಕ್ಸ್ ಅದು ಕೂಡ 5% ಗೆ ಬರುತ್ತೆ.
ಸ್ಪೋರ್ಟ್ಸ್ ಕ್ಲೌಸ್ ಮರ ಕಲ್ಲು ಮತ್ತು ಲೋಹದಿಂದ ತಯಾರಿಸಿದ ಮೂರ್ತಿಗಳು ಈ 5% ಸ್ಲ್ಯಾಬ್ ನಲ್ಲೇ ಬರ್ತವೆ. ಗಮನಿಸಿದರಲ್ಲಿ ಚಿನ್ನ ಮತ್ತು ಬೆಳ್ಳಿ ಮೂರ್ತಿಗಳು ಇರೋದಿಲ್ಲ. ಅದು ಬಿಟ್ಟು ಉಳಿದಿದ್ದ ವಸ್ತುಗಳದು. ಇನ್ನು ಸಿಮೆಂಟ್ ಹಾಗೂ ಮನೆಗಳಿಗೆ ಬಳಸೋ ಶೀಟ್ಸ್ ಹಾಗೆ ಮರದ ಐಟಂಗು ಕೂಡ ಕಮ್ಮಿಯಾಗುತ್ತೆ. ಇದರಿಂದ ಫರ್ನಿಚರ್ ಗಳ ಬೆಲೆಯಲ್ಲೂ ಕೂಡ ಇಳಿಕೆ ಕಾಣಬಹುದು. ಇನ್ನು ಹ್ಯಾಂಡ್ ಮೇಡ್ ಪೇಪರ್ ಪೇಪರ್ ಬೋರ್ಡ್ ಎಲ್ಲಾ ತರಹದ ಕಾರ್ಪೆಟ್ ಮತ್ತು ಫ್ಲೋರ್ ಕವರಿಂಗ್ಸ್ ಕೂಡ 5% ಸ್ಲ್ಯಾಬ್ ನಲ್ಲೇ ಬರುತ್ತೆ. ದಿ ಮೋಸ್ಟ್ ಇಂಪಾರ್ಟೆಂಟ್ ಎಲ್ಲಾ ಎಲೆಕ್ಟ್ರಿಕಲ್ ವಾಹನಗಳು ಕೂಡ ಈ 5% ಸ್ಲ್ಯಾಬ್ ನಲ್ಲೇ ಬರ್ತವೆ. ಇದು ಮುಂಚೆ ಕೂಡ 5% ಅಲ್ಲೇ ಇತ್ತು ಎಲೆಕ್ಟ್ರಿಕ್ ವಾಹನಗಳು ಈಗಲೂ ಕೂಡ ಅನ್ಚೇಂಜ್ಡ್ ಅಲ್ಲೇ ಇದೆ. ಟಿವಿ ಫ್ರಿಡ್ಜ್ ರೇಟ್ ಕಮ್ಮಿ. ಇನ್ನು ತೆರಿಗೆ ಸುಧಾರಣೆಯಲ್ಲಿ ಪ್ರಮುಖವಾಗಿರೋ ಅಂಶ ಅಂದ್ರೆ ಈ ಗೃಹಬಳಕೆ ವಸ್ತುಗಳು. 28% ನಲ್ಲಿದ್ದ ಟಿವಿ, ಡಿಶ್ ವಾಷರ್, ವಾಷಿಂಗ್ ಮಷಿನ್, ಫ್ರಿಡ್ಜ್, ಏರ್ ಕಂಡಿೀಷನರ್ ಗಳು 18% ಗೆ ಇಳಿತವೆ. ಸೋ ದೀಪಾವಳಿಗೆ ಅಥವಾ ಹಬ್ಬಕ್ಕೆ ಇದನ್ನ ತಗೋಬೇಕು ಅಂತ ಕಾಯುತಿದ್ದವರಿಗೆ ಅಲ್ಲಿ ತುಂಬಾ ರೇಟ್ ಕಮ್ಮಿ ಆಗಬಹುದು. ಟ್ಯಾಕ್ಸ್ 28 ರಿಂದ ಸೀದಾ 18% ಗೆ ಇಳಿಯುವಂತ ಸಂದರ್ಭದಲ್ಲಿ. ಹಾಗೆ ಕಾರ್ ಮತ್ತು ಬೈಕ್ ದು ನಿಮಗೆ ಆಲ್ರೆಡಿ ನಾವು ಈ ಪ್ರತ್ಯೇಕ ವರದಿಯಲ್ಲಿ ಮಾಹಿತಿಯನ್ನ ಕೊಟ್ಟಿದ್ದೇವೆ. ಇನ್ನೊಂದು ಸಲಿ ಹೇಳಬೇಕು ಅಂದ್ರೆ 1200ಸಿಸಿ ತನಕದ ಕೆಪ್ಯಾಸಿಟಿಯ ಸಣ್ಣ ಕಾರು ಅದು ಪೆಟ್ರೋಲ್, ಸಿಎನ್ಜಿ, ಅಥವಾ ಎಲ್ಪಿಜಿ ಯಾವುದೇ ಆಗಿರಬಹುದು. ಹಾಗೆ 1,500 ಸಿಸಿ ತನಕದ ಡೀಸೆಲ್ ಕಾರುಗಳು. ಸಣ್ಣ ಕಾರುಗಳು ಈ 18% ಸ್ಲ್ಯಾಬ್ ನಲ್ಲಿ ಬರ್ತವೆ. ಇನ್ನು ಬೈಕ್ ಗಳ ಕಥೆ ಏನು ಇದರ ಬಗ್ಗೆ ಕೂಡ ನಾವು ನಿಮಗೆ ಪ್ರತ್ಯೇಕವಾಗಿ ಮಾಹಿತಿಯನ್ನ ಕೊಟ್ಟಿದ್ವಿ. ಈ ರಿಪೋರ್ಟ್ ಅಲ್ಲಿ ಇನ್ನೊಂದು ಸಲಿ ಹೇಳ್ಬೇಕು ಅಂತ ಹೇಳಿದ್ರೆ 350ಸಿಸಿ ಗಿಂತ ಕೆಳಗಿನ ಸಾಮರ್ಥ್ಯದ ಇಂಜಿನ್ ಕೆಪ್ಯಾಸಿಟಿಯ ಟೂ ವೀಲರ್ ಗಳು ದ್ವಿಚಕ್ರ ವಾಹನಗಳು ಬೈಕ್ಗಳು ಅವುಗಳ ತೆರಿಗೆ ಕೂಡ ಕಮ್ಮಿ ಆಗ್ತಿದೆ 28% ನಿಂದ ಸೀದ 18% ಗೆ ಡೌನ್ ಆಗ್ತಿದೆ. ಇನ್ನು ಕೆಲವಷ್ಟು ತರದ ಸಿಮೆಂಟ್ ಗಳು ಕೂಡ 18% ವ್ಯಾಪ್ತಿಯಲ್ಲಿ ಬರುತ್ತೆ ಹಾಗೆ ಅಗರಬತ್ತಿ, ಧೂಪದಬತ್ತಿ, ಧೂಪ ಸಾಮ್ರಾಣಿ, ಬಯೋಡೀಸೆಲ್ ಹಾಗೆ ಹೊಸ ಪ್ಯೂನಮೆಟಿಕ್ ಟೈರ್ಗಳು ರಬ್ಬರ್ ಗಳು ಇದರಳಿಯಲ್ಲಿ ಬರ್ತವೆ 18% ಅಡಿಯಲ್ಲಿ.
ಹಾಗೆ 2.ಸಾವ ಸಾವಿರ ರೂಪಾಯಿ ಮೀರೋ ಬಟ್ಟೆಗಳು ಅಂದ್ರೆ ಸ್ವೆಟರ್ಸ್ ಟೊಪ್ಪಿ ಆಮೇಲೆ ಜವಳಿ ಈ ಎಲ್ಲ ವಸ್ತುಗಳು ಕೂಡ ಈ 18% ಸ್ಲ್ಯಾಬ್ ನಲ್ಲೇ ಬರ್ತವೆ ಹಾಗೆ ಪೆಟ್ರೋಲ್ ಬಂಕ್ಗಳಲ್ಲಿ ಮತ್ತು ಗ್ಯಾರೇಜ್ಗಳಲ್ಲಿ ಬಳಸು ನಾಸಲ್ಗಳು ಕೂಡ ಇದೇ ತೆರಿಗೆ ಸ್ಲ್ಯಾಬ್ ನಲ್ಲಿ ಬರ್ತವೆ ಯಾವೆಲ್ಲಾ ವಸ್ತುಗಳು ದುಬಾರಿ ಹಾಗಾದ್ರೆ ಇದೆಲ್ಲವನ್ನ ನಾವು ನೋಡ್ತಾ ಹೋಗೋಣ 40% ಜಿಎಸ್ಟಿ ಸ್ಲ್ಯಾಬ್ ನಲ್ಲಿ ಸಾಕಷ್ಟು ಸರಕುಗಳು ಬರ್ತವೆ ಅದರಲ್ಲಿ ನಶೆ ವಸ್ತುಗಳು ಲಕ್ಷರಿ ಗೂಡ್ಸ್ ಮತ್ತು ಅಷ್ಟೊಂದು ಎಸೆನ್ಶಿಯಲ್ ಅಲ್ಲ ದುಡ್ಡಿದ್ರೆ ತಗೋಬಹುದು ಅನ್ನೋತರದ ವಸ್ತುಗಳು ಇದಾವಲ್ಲ ಅವೆಲ್ಲ 40 30% ಸ್ಲ್ಯಾಬ್ ನಲ್ಲಿ ಬರುತ್ತೆ ಒಂದಷ್ಟು ಪಾನ್ ಮಸಾಲಾ ತಂಬಾಕು ತಂಬಾಕಿನ ವೇಸ್ಟ್ ಸಿಗರೆಟ್ಸ್ ಸಿಗಾರ್ ಸೇರಿದ ಹಾಗೆ ಬೀಡಿಗಳನ್ನ ಹೊರತುಪಡಿಸಿ ಈತರ ಎಲ್ಲ ತಂಬಾಕು ಉತ್ಪನ್ನಗಳ ಮೇಲೂ ಕೂಡ 40% ಅಪ್ಲೈ ಆಗ್ತಿದೆ ತಂಬಾಕು ಮತ್ತು ನಿಕೋಟಿನ್ ಸಬ್ಸ್ಟಿಟ್ಯೂಟ್ ಹೊಂದಿರೋ ಪ್ರಾಡಕ್ಟ್ಸ್ ಅವುಗಳಿಗೂ ಕೂಡ ಅನ್ವಯ ಆಗುತ್ತೆ ಹಾಗೆ ಮಿಲ್ಕ್ ಶೇಕ್ ಸಾಫ್ಟ್ ಡ್ರಿಂಕ್ಸ್ ನಂತಹ ನಾನ್ ಆಲ್ಕೋಹಾಲ್ ಕಾರ್ಬೋನೇಟೆಡ್ ಬರ್ಬರೇಜಸ್ 40% ಜಿಎಸ್ಟಿಗೆ ಬರುತ್ತೆ ಇನ್ನು ಎನರ್ಜಿ ಡ್ರಿಂಕ್ಸ್ ನಂತಹ ಕೆಫಿನ್ ಇರೋ ಪ್ರಾಡಕ್ಟ್ಸ್ ಫ್ರೂಟ್ ಡ್ರಿಂಕ್ ನಂತಹ ಕಾರ್ಬೋನೇಟೆಡ್ ಪಾನೀಯಗಳು ಚಸ್ ಅನ್ಬೇಕು ಕಾರ್ಬೋನೇಷನ್ ಆಗಿರೋದು ಅಂತವು ಅವೆಲ್ಲವೂ ಕೂಡ ಈ ಸ್ಲ್ಯಾಬ್ ನಲ್ಲೇ ಬರ್ತವೆ ಜೊತೆಗೆ ರೇಸಿಂಗ್ ಕಾರ್ ಸೇರಿದ ಹಾಗೆ 1200 ಸಿಸಿ ಗೂ ಅಧಿಕ ಸಾಮರ್ಥ್ಯದ ಎಲ್ಲಾ ಪೆಟ್ರೋಲ್ ವೆಹಿಕಲ್ ಗಳು 1500 ಸಿಸಿ ಗೂ ಜಾಸ್ತಿ ಇರೋ ಎಲ್ಲಾ ಡೀಸೆಲ್ ವೆಹಿಕಲ್ ಗಳು ಕೂಡ 40% ಸ್ಲ್ಯಾಬ್ ನಲ್ಲೇ ಬರ್ತವೆ ಹಾಗೆ 350ಸಿಸಿ ಗಿಂತಲೂ ಅಧಿಕ ಸಾಮರ್ಥ್ಯದ ಎಲ್ಲಾ ದ್ವಿಚಕ್ರ ವಾಹನಗಳು ಕೂಡ 40% ಸ್ಲ್ಯಾಬ್ ನಲ್ಲೇ ಬರುತ್ತೆ ಹಾಗಂತ ಆಟೋಮೊಬೈಲ್ ವಿಚಾರಕ್ಕೆ ಬಂದಾಗ ಇದೆಲ್ಲ ದುಬಾರಿ ಆಗ್ತಿದೆ ಅಂತಲ್ಲ ಯಾಕಂದ್ರೆ ಮುಂಚೆ 28% ಹೈಯೆಸ್ಟ್ ಲ್ಯಾಬ್ ಅಂದ್ರೂ ಕೂಡ ಕಂಪನ್ಸೇಷನ್ ಸೆಸ್ ಅಂತ ಸಪರೇಟ್ ಆಗಿ ಹಾಕ್ತಾ ಇದ್ರು ಅದು ಸೇರಿಬಿಟ್ಟು ಟೋಟಲ್ 45 50% ವರೆಗೂ ಹೋಗ್ತಾ ಇತ್ತು ಮುಂಚೆ 50 51% ಅಲ್ಲಿ ಆಗ್ತಾ ಇತ್ತು ಕಾರು ಮತ್ತೆ ಕೆಲವೊಂದು ದೊಡ್ಡ ದೊಡ್ಡ ಬೈಕ್ಗಳದು ತೆರಿಗೆ ಈ ಜಿಎಸ್ಟಿ ಪ್ಲಸ್ ಸೆಸ್ ಎಲ್ಲ ಸೇರಿ ಈ ಸೆಸ್ ಇರೋದಿಲ್ಲ ಸೋ 28 ರಿಂದ 40 ಗೆ ಬಂದ್ರು ಕೂಡ ಮುಂಚೆಗಿಂತ ರೇಟ್ ಕಮ್ಮಿನೇ ಆಗುತ್ತೆ ಯಾವುದು ಆಟೋಮೊಬೈಲ್ಗೆ ಮಾತ್ರ ಅನ್ವಯ ಆಗ್ತಿದೆ ಅದು 40% ಆದ್ರೂ ಕೂಡ ನಿಮಗೆ ಮುಂಚೆಗಿಂತ ಕಮ್ಮಿ ಆಗ ಆಗ್ತಿದೆ ಅಂತ ನಾವು ಹೇಳ್ತಿರೋದು ಜೊತೆಗೆ ಸ್ನೇಹಿತರೆ ಏರ್ ಕ್ರಾಫ್ಟ್ ಗಳು ಪ್ರೈವೇಟ್ ಯೂಸ್ ಗೆ ಇರುವಂತ ಏರ್ ಕ್ರಾಫ್ಟ್ ಗಳು ಅತಿ ಶ್ರೀಮಂತರು ಇಟ್ಕೊಂಡಿರ್ತಾರಲ್ಲ ಪ್ರೈವೇಟ್ ಜೆಟ್ ಅಂತ ಏರ್ ಕ್ರಾಫ್ಟ್ ಗಳು ಸ್ಪೋರ್ಟ್ಸ್ ಗೆ ಬಳಸೋ ಶಿಪ್ ಗಳು ಜೊತೆಗೆ ಲಕ್ಸರಿಯಾಗಿ ಸಮುದ್ರದಲ್ಲಿ ಒಂದು ವಾರ ಕ್ರೂಸ್ ಹೋಗಿ ಬರಬೇಕು ಇದ್ದು ಬರಬೇಕು ಅಂತ ಹೇಳಿ ಯಾಟ್ ಎಲ್ಲ ಇಟ್ಕೊಂಡಿರ್ತಾರಲ್ಲ ವಿಹಾರ ನೌಕೆಗಳು ಅವುಗಳು ಆಮೇಲೆ ಸ್ಮೋಕಿಂಗ್ ಪೈಪ್ಗಳು ಹಾಗೆ ಡೀಸೆಲ್ ಮತ್ತು ಸೆಮಿ ಡೀಸೆಲ್ ಪಿಸ್ಟನ್ ಇಂಜಿನ್ಗಳು ಪ್ರೊಪಲ್ಷನ್ ಗಾಗಿ ಬಳಸು ಎಲೆಕ್ಟ್ರಿಕ್ ಮೋಟಾರ್ಗಳು ಇವೆಲ್ಲವೂ ಕೂಡ ಈ 40% ಸ್ಲ್ಯಾಬ್ ನಲ್ಲೇ ಬರ್ತವೆ ಏನೋ ಜೂಜಾಡಿ ದುಡ್ಡು ಗಳಿಸಿದ್ರೆ ಆನ್ಲೈನ್ ಗೇಮಿಂಗ್ ಲಾಟರಿಯಇಂದ ಪಡೆದ ಹಣಕ್ಕೂ ಕೂಡ 40% ಸ್ಲ್ಯಾಬ್ ಅನ್ವಯ ಆಗುತ್ತೆ ಆನ್ಲೈನ್ ಮನಿ ಗೇಮಿಂಗ್ ಎಲ್ಲ ಬ್ಯಾನ್ ಮಾಡಿ ಬಿಸಾಕಿದ್ದಾರೆ ಬಟ್ ಇಟ್ಟಿದ್ದಾರಪ್ಪ ಇದನ್ನ ಜಿಎಸ್ಟಿ ನಲ್ಲಿ ಕಾನೂನಲ್ಲಿ ಮೆನ್ಷನ್ ಮಾಡಿದ್ದಾರೆ ಈ ಬದಲಾವಣೆಯಲ್ಲಿ 40% ಜಿಎಸ್ಟಿ ಅನ್ವಯ ಆಗುತ್ತೆ ಈ ತರದ್ದು ಅಂತ ಜೂಜಾಟ ಆನ್ಲೈನ್ ಗೇಮಿಂಗ್ ಲಾಟರಿಯಇಂದ ಪಡೆದ ಹಣ 40% ಅಂತ ಇನ್ನು ಮಧ್ಯ ಎಣ್ಣೆ ಪ್ರಿಯರಿಗೆ ತುಂಬಾ ಇಂಪಾರ್ಟೆಂಟ್ ಆಗಿರೋ ವಿಚಾರ ಅದರ ಕಥೆ ಏನಾಗುತ್ತೆ ಏನು ಚೇಂಜಸ್ ಆಗಲ್ಲ ಯಾಕಂದ್ರೆ ಮಧ್ಯವನ್ನ ಜಿಎಸ್ಟಿ ಇಂದ ಹೊರಗೆ ಇಟ್ಟಿದ್ದಾರೆ ಜೊತೆಗೆ ಇದರ ಮೇಲೆ ತೆರಿಗೆ ಹಾಕು ಅಧಿಕಾರ ಇರೋದು ರಾಜ್ಯಗಳಿಗೆ ಮಾತ್ರ ಹೀಗಾಗಿ ಇದರಲ್ಲಿ ಯಾವುದೇ ಚೇಂಜಸ್ ಸದ್ಯಕ್ಕೆ ಆಗಲ್ಲ.